Home Blog Page 1809

ಮೊಹಮ್ಮದ್ ಶಮಿ ಹುಟ್ಟೂರಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

ಲಕ್ನೋ,ನ.18-ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ತವರೂರು ಅಮ್ರೋಹಾ ಜಿಲ್ಲೆಯ ಸಹಸ್ಪುರ್ ಅಲಿನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದುವರೆಗೂ 2023ರ ವಿಶ್ವಕಪ್‍ನಲ್ಲಿ ಶಮಿ 23 ವಿಕೆಟ್‍ಗಳನ್ನು ಪಡೆದು, ಒಟ್ಟಾರೆ 51 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಎದುರಾಳಿಗಳ ವಿಕೆಟ್ ಉರುಳಿಸುತ್ತಾ ಭಾರತ ತಂಡ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ.

ಟೀಂ ಇಂಡಿಯಾ ಸಂಕಷ್ಟದಲ್ಲಿ ಸಿಲುಕಿದ ಸಮಯದಲ್ಲಿ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇದಕ್ಕೆ ತಾಜಾ ಉದಾಹಣೆ ಎಂದರೆ ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕಿವೀಸ್ ವಿರುದ್ಧದ ಸೆಮೀಫೈನಲ್‍ನಲ್ಲಿ ಬರೋಬ್ಬರಿ 7 ವಿಕೆಟ್ ಉರುಳಿಸಿದ್ದಾರೆ.

ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಹೆಸರು: ಸಿಎಂ ವಿರುದ್ಧ ಎಚ್‍ಡಿಕೆ ವಾಗ್ದಾಳಿ

ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಶಮಿಗೆ ಬಂಪರ್ ಗಿಫ್ಟ್ ನೀಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿದ್ಧತೆ ನಡೆಸಿದ್ದು, ಶಮಿಯವರ ಸ್ವಗ್ರಾಮದಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

ಈಗಾಗಲೇ ಇದಕ್ಕಾಗಿ ಆ ಗ್ರಾಮದಲ್ಲಿ ಭೂಮಿಯನ್ನು ಗುರುತಿಸಿದ್ದಾರೆ. ಈ ಸಂಬಂಧ ಡೆವಲಫ್‍ಮೆಂಟ್ ಆಫೀಸರ್ ಒಬ್ಬರನ್ನು ಸಹ ಸರ್ಕಾರ ನೇಮಕ ಮಾಡಿದೆ. ಗ್ರಾಮದಲ್ಲಿರುವ ಜನರ ಸಮಸ್ಯೆಗಳನ್ನು ನಿವಾಸಿರುವ ಕೂಡಲೇ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಿಎಂ ಆದೇಶ ನೀಡಿದ್ದಾರೆ.

ಅಧಿಕಾರಿಗಳು ಶಮಿ ಅವರ ಗ್ರಾಮದಲ್ಲಿರುವ ಜೋಯಾ ಡೆವಲಪ್‍ಮೆಂಟ್ ಬ್ಲಾಕ್‍ಗೆ ಭೇಟಿ ನೀಡಿದ್ದಾರೆ. ಶಮಿ ಅವರ ಕುಟುಂಬವು ಗ್ರಾಮದಲ್ಲಿಯೇ ನೆಲೆಸಿದೆ. ಮಿನಿ ಸ್ಟೇಡಿಯಂ ಮತ್ತು ಓಪನ್ ಜಿಮ್ ನಿರ್ಮಾಣಕ್ಕೆ ಸಂಬಂಧಿಸಿದ ಕಡತವನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಇದಕ್ಕೂ ಮುನ್ನ ಡಿ.ಎಂ.ರಾಜೇಶ್ ತ್ಯಾಗಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಸಾಹಸಪುರ ಅಲಿನಗರಕ್ಕೆ ಆಗಮಿಸಿ ಮಿನಿ ಕ್ರೀಡಾಂಗಣ ಮತ್ತು ಓಪನ್ ಜಿಮ್ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ

ಅಹಮದಾಬಾದ್, ನ.18- ಪ್ರಸಕ್ತ ಸಾಲಿನ ವಿಶ್ವಕಪ್ ಕ್ರಿಕೆಟ್‍ನ ಫೈನಲ್ ಪಂದ್ಯ ನಾಳೆ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಹಣಾಹಣಿ ಕ್ರೀಡಾ ರಸಿಕರಿಗೆ ರಸದೌತಣ ಉಣಬಡಿಸಲಿದೆ.

ಈ ಬಾರಿ ಫೈನಲ್ ಪಂದ್ಯಕ್ಕೆ ಘಟಾನುಘಟಿಗಳು ಫೈನಲ್ ಪಂದ್ಯಕ್ಕೆ ಸಾಕ್ಷಿ ಯಾಗುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸೂಪರ್ ಸ್ಟಾರ್‍ಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್, ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸಚಿನ್, ಧೋನಿ ಸೇರಿದಂತೆ ಅತಿಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಪಂದ್ಯ ವೀಕ್ಷಣೆಗೆ ಆಸ್ಟ್ರೇಲಿಯಾ ಪ್ರಧಾನಿಗಳಿಗೂ ಮೋದಿ ಆಹ್ವಾನ ನೀಡಿದ್ದು ಅವರು ಪಂದ್ಯ ವೀಕ್ಷಣೆಗೆ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರ ಫಾರ್ಮ್ ನೋಡಿದಾಗ ನಿಶ್ಚಿತವಾಗಿ ಭಾರತ ಈ ಫೈನಲ್ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಆದರೆ ಆಸ್ಟ್ರೇಲಿಯಾ ತಡ ಈಗಾಗಲೇ ಐದು ಬಾರಿ ವಿಶ್ವಕಪ್ ಟ್ರೋಫಿನ್ನು ಎತ್ತಿಹಿಡಿದಿರುವ ತಂಡವಾಗಿದ್ದು ಯಾವ ಕಾರಣಕ್ಕೂ ಆಸಿಸ್ ಪಡೆಯನ್ನು ಹಗುರವಾಗಿ ಪಡಿಗಣಿಸುವಂತಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ.
ಇನ್ನು ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳ ಮಧ್ಯೆ ಕಠಿಣ ಪೈಪೋಟಿ ನಡೆಯುವುದು ನಿಶ್ಚಿತ. ಈಗಾಗಲೇ ಲೀಗ್ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಸುಲಭವಾಗಿ ಮಣಿಸಿತ್ತು.

ರಾಜ್ಯಪಾಲರು ತಿರಸ್ಕರಿಸಿದ ಮಸೂದೆ ಮರು ಮಂಡನೆ ಮಾಡಿದ ಸ್ಟಾಲಿನ್

ಹಾಗಾಗಿ ಭಾರತ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಿರಲಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾದ ಈ ನಾಲ್ವರು ಆಟಗಾರರು ಸವಾಲಾಗಲಿದ್ದಾರೆ. ಈ ನಾಲ್ಕು ಆಟಗಾರರನ್ನು ಭಾರತಕ್ಕೆ ಕಟ್ಟಿ ಹಾಕಲು ಸಾಧ್ಯವಾದರೆ ಟೀಮ್ ಇಂಡಿಯಾ ಗೆಲುವು ನಿಶ್ಚಿತ. ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಸ್ಮಿತ್, ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಆಡಂ ಜಂಪ ಅವರನ್ನು ಕಟ್ಟಿ ಹಾಕುವಲ್ಲಿ ಭಾರತೀಯ ಬೌಲರ್‍ಗಳು ಯಶಸ್ವಿಯಾದರೆ ಭಾರತ ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಐದು ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯ ಮೊದಲ ಎರಡು ಪಂದ್ಯಗಳನ್ನು ಸೋಲುವ ಮೂಲಕ ಸೇಮಿಫೈನಲ್ ಪ್ರವೇಶಿಸುವುದೇ ಕಷ್ಟ ಸಾಧ್ಯ ಎನ್ನುವಂತಿದ್ದ ಪರಿಸ್ಥಿತಿಯಲ್ಲಿ ಆ ತಂಡ ಪುಟಿದೆದ್ದು ಬಂದು ಫೈನಲ್ ತಲುಪಿರುವುದು ಸಾಮಾನ್ಯದ ವಿಷಯವೇನಲ್ಲ.

ಆದರೂ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಎಂತಹ ಸಂದರ್ಭದಲ್ಲೂ ಮಿಂಚಬಲ್ಲ ಸಾಮಥ್ರ್ಯ ಹೊಂದಿರುವುದರಿಂದ ಎರಡು ತಂಡಗಳ ನಡುವೆ ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ.

ರೋಹಿತ್ ಶರ್ಮ, ಶುಭಮನ್‍ಗಿಲ್, ಕೋಹ್ಲಿ, ರಾಹುಲ್, ಶ್ರೇಯಸ್ ಅಯ್ಯರ್ ಬ್ಯಾಟಿಂಗ್‍ನಲ್ಲಿ ಮಿಂಚು ಹರಿಸುತ್ತಿದ್ದರೆ, ಬೌಲಿಂಗ್ ವಿಭಾಗದಲ್ಲಿ ಶಮಿ, ಬೂಮ್ರಾ, ಕುಲದಿಪ್, ರವೀಂದ್ರ ಜಡೆಜಾ ಚಮತ್ಕಾರ ಮಾಡುತ್ತಿರುವುದರಿಂದ ಈ ಬಾರಿ ವಿಶ್ವಕಪ್ ನಮ್ಮದೇ ಎಂಬ ವಿಶ್ವಾಸ ಮೂಡಿಸಿದೆ.

ಕಾಂಗ್ರೆಸ್ 60% ಕಮಿಷನ್ ಸರ್ಕಾರ: ಅಶೋಕ್

ಬೆಂಗಳೂರು,ನ.18- ವರ್ಗಾವಣೆ ದಂಧೆ ಈಗಲೂ ಎಗ್ಗಿಲ್ಲದೆ ನಡೆಯುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ 60% ಕಮಿಷನ್ ಸರ್ಕಾರ ಎಂಬುದು ಜಗಜ್ಜಾಹಿರವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಇದೇ ಕಾಂಗ್ರೆಸ್‍ನಾಯಕರು ಆರೋಪಿಸಿದ್ದರು. ಅಂದು ಯಾವುದೇ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಿರಲಿಲ್ಲ. ಈಗ ಇವರ ವರ್ಗಾವಣೆ ದಂಧೆಗೆ ದಾಖಲೆಗಳೇ ಬಹಿರಂಗಗೊಂಡಿವೆ. ನನ್ನ ಪ್ರಕಾರ ಇದು60% ಕಮಿಷನ್ ಸರ್ಕಾರ ಎಂದು ಆಪಾದಿಸಿದರು.

ಪಕ್ಷದೊಳಗೆ ಏನೇ ಅಸಮಾಧಾನ ಇದ್ದರೂ ಅಸಮಾಧಾನವಿದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ವಿರೋಧ ಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂದರು. ಒಂದು ರಾಜಕೀಯ ಪಕ್ಷವೆಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಒಬ್ಬರಿಗೆ ಒಂದು ಸ್ಥಾನ ಸಿಕ್ಕಾಗ ಕೈ ತಪ್ಪಿದವರು ಅಸಮಾಧಾನಗೊಳ್ಳುವುದು ಸಹಜ. ಆದರೆ ನಮ್ಮ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಇರಲಿದ್ದಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‍ನಿಂದ ಕೊಲಿಜಿಯಂ ಶಿಫಾರಸು ವಿಳಂಬ ವಿಚಾರಣೆ

ಅಸಮಾಧಾನಗೊಂಡವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಯಾರು ಬೇಸರಪಟ್ಟುಕೊಂಡಿದ್ದಾರೋ ಅವರ ಜೊತೆ ನಾನೇ ಖುದ್ದು ಮಾತನಾಡುತ್ತೇನೆ. ಯಾರೂ ಕೂಡ ಪಕ್ಷದ ತೀರ್ಮಾನವನ್ನು ವಿರೋಧಿಸಬಾರದು. ಕೆಲವು ಸಂದರ್ಭಗಳಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯ ಎಂದು ತಿಳಿಸಿದರು.

ಬಿಜೆಪಿ ಎಲ್ಲ ಸಂದರ್ಭಗಳಲ್ಲೂ ಸರ್ಕಾರಕ್ಕೆ ಅಗತ್ಯವಾದ ಸಲಹೆಸೂಚನೆಗಳನ್ನು ಕೊಟ್ಟು ಸಹಕಾರವನ್ನೂ ನೀಡಲಿದ್ದೇವೆ. ಸದನದ ಒಳಗೆ, ಹೊರಗೆ ಒಂದು ರಚನಾತ್ಮಕ ರಾಜಕೀಯ ಪಕ್ಷವಾಗಿ ನಾವು ಕೆಲಸ ಮಾಡಲಿದ್ದೇವೆ. ಅದನ್ನು ತಪ್ಪು ಎಂದು ಹೇಳಲು ಹಿಂದೆಮುಂದೆ ನೋಡುವುದಿಲ್ಲ. ಸರ್ಕಾರದ ಕಿವಿ ಹಿಂಡುವುದನ್ನು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ವಿರೋಧ ಪಕ್ಷವಾಗಿ ನಾವು ಎಲ್ಲವನ್ನು ವಿರೋಧ ಮಾಡುವುದೇ ನಮ್ಮ ಕೆಲಸವಲ್ಲ. ನಾಡಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಜನರ ದನಿಯಾಗಿ ಸದನದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡುತ್ತೇವೆ. ಅದಕ್ಕೂ ಬಗ್ಗದಿದ್ದಾಗ ಸರ್ಕಾರವನ್ನೇ ಕಿತ್ತೆಸೆಯಲು ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದರು.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಎಂದೂ ಕೂಡ ಯಾವುದೇ ಹುದ್ದೆಗೆ ಲಾಬಿ ಮಾಡಿದವನಲ್ಲ. ವರಿಷ್ಠರು ನನ್ನ ಮೇಲೆ ಯಾವ ವಿಶ್ವಾಸ ಇಟ್ಟುಕೊಂಡು ಉನ್ನತ ಸ್ಥಾನ ನೀಡಿದ್ದಾರೋ ಅವರ ಗೌರವಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ.

ಹಿಮಾಚಲದಲ್ಲಿ ಪತ್ತೆಯಾಯ್ತು ರಷ್ಯಾ ದಂಪತಿ ಬೆತ್ತಲೆ ಶವಗಳು

ಬೆಳಗಾವಿ ಅವೇಶನದಿಂದಲೇ ಸರ್ಕಾರದ ವಿರುದ್ಧ ನಮ್ಮ ಹೋರಾಟ ಆರಂಭವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವುದೇ ನಮ್ಮ ಮುಂದಿರುವ ಸವಾಲು. ಅದನ್ನು ನಾವು ಮೆಟ್ಟಿ ನಿಲ್ಲುತ್ತೇವೆ ಎಂಬ ವಿಶ್ವಾಸವಿದೆ. ಈ ಬಾರಿ ಕಾಂಗ್ರೆಸ್ ಅಕಾರದಲ್ಲಿದ್ದರೂ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಅಶೋಕ್ ವ್ಯಕ್ತಪಡಿಸಿದರು.

ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಹೆಸರು: ಸಿಎಂ ವಿರುದ್ಧ ಎಚ್‍ಡಿಕೆ ವಾಗ್ದಾಳಿ

ಬೆಂಗಳೂರು, ನ.18- ರಾಜ್ಯ ಸರ್ಕಾರದ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ ಎಂಬ ಆರೋಪ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಬಾಯಿ ತೆರೆದರೆ ಭಗವದ್ಗೀತೆ, ನಾಲಿಗೆ ಮೇಲೆ ನೈತಿಕತೆಯ ನಾಟ್ಯ, ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ. ಕೊನೆಗೆ, ಝಣ ಝಣ ಕಾಂಚಾಣ. ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ ಎಂದು ಆರೋಪಸಿದ್ದಾರೆ.

ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ? ಒಂದು ಸರ್ಕಾರ, ವಿಸ್ಮಯಗಳ ಆಗರ ಎಂದು ವ್ಯಂಗ್ಯವಾಡಿದ್ದಾರೆ.
ಡೂಪ್ಲಿಕೇಟ್ ಸಿಎಂ-ಡಿಸಿಎಂ ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ ಸಿಎಸ್‍ಆರ್ ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ. ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್ ಪಡೆದಿದ್ದು ಹೇಗೆ? ಬರ್ಮುಡಾ ಟ್ರ್ಯಾಂಗಲ್ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಬೇಕು. ಅದು ನಿಮ್ಮ ದುರ್ವಿಧಿ. ಉತ್ತರಿಸಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‍ನಿಂದ ಕೊಲಿಜಿಯಂ ಶಿಫಾರಸು ವಿಳಂಬ ವಿಚಾರಣೆ

ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ, 71 ಪೊಲೀಸ್ ಇನಸ್ಪೆಕ್ಟರ್‍ಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲೆ ನಿಮ್ಮ ಸುಲಿಗೆಪುತ್ರನ ಕೆಚ್ಚು. ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ ಎಂದು ಅವರು ಆರೋಪಿಸಿದ್ದಾರೆ.

ಈ ಪಾಪದ ಕಾಸಿನ ದುರ್ನಾತ ಅಸಹ್ಯಕರ. ವರ್ಗಾವರ್ಗಿ ಬಜೆಟ್‍ನಲ್ಲಿ ನಿಮ್ಮ ಪಟಾಲಂದು ಶಿಖರ ಸಾಧನೆ. 6 ತಿಂಗಳ ಭರ್ಜರಿ ಅತೀಂದ್ರೀಯ ಅಟ್ಟಹಾಸ. ಕಾಸಿಗಾಗಿ ಹುದ್ದೆ ಕಾಂಗ್ರೆಸ್ ಹುಂಡಿ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-ಟಿಸಿಎಂ ನಿರ್ಮಾಪಕ, ಡೂಪ್ಲಿಕೇಟ್ ಸಿಎಂ-ಡಿಸಿಎಂ ನಿರ್ದೇಶಕ ಎಂದು ಟೀಕಿಸಿದ್ದಾರೆ.

ಸತ್ಯ ಹೇಳಿದರೆ ಗುಂಪು ಗುಂಪಾಗಿ ಮೇಲೆ ಬೀಳುತ್ತೀರಿ. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್ ರನ್ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಪಾಲರು ತಿರಸ್ಕರಿಸಿದ ಮಸೂದೆ ಮರು ಮಂಡನೆ ಮಾಡಿದ ಸ್ಟಾಲಿನ್

ಚೆನ್ನೈ, ನ.18 (ಪಿಟಿಐ) – ರಾಜ್ಯಪಾಲ ಆರ್ ಎನ್ ರವಿ ಅವರು ಹಿಂತಿರುಗಿಸಿದ್ದ 10 ಮಸೂದೆಗಳನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಇಂದು ಮತ್ತೆ ವಿಧಾನಸಭೆಯಲ್ಲಿ ಮರುಪರಿಶೀಲನೆಗೆ ನಿರ್ಣಯವನ್ನು ಮಂಡಿಸಿದ್ದಾರೆ.

ನಿರ್ಣಯವನ್ನು ಮಂಡಿಸಿದ ಸ್ಟಾಲಿನ್, ಯಾವುದೇ ಕಾರಣಗಳನ್ನು ನೀಡದೆ, ರವಿ ಅವರು ಬಿಲ್‍ಗಳಿಗೆ ನಾನು ಒಪ್ಪಿಗೆಯನ್ನು ತಡೆಹಿಡಿಯುತ್ತೇನೆ ಎಂದು ನಮೂದಿಸಿ ಹಿಂದಿರುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2020 ಮತ್ತು 2023ರಲ್ಲಿ ತಲಾ 2 ಮಸೂದೆಗಳನ್ನು ಸದನವು ಅಂಗೀಕರಿಸಿದ್ದರೆ, ಇತರ ಆರು ಮಸೂದೆಗಳನ್ನು ಕಳೆದ ವರ್ಷ ಅಂಗೀಕರಿಸಲಾಗಿತ್ತು.

ಭಾರತದ ಸಂವಿಧಾನದ 200 ನೇ ವಿಧಿಯ ನಿಬಂಧನೆಯ ಅಡಿಯಲ್ಲಿ, ಮೇಲಿನ ಮಸೂದೆಗಳನ್ನು ಮತ್ತೊಮ್ಮೆ ಅಂಗೀಕರಿಸಿದರೆ ಮತ್ತು ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಸಲ್ಲಿಸಿದರೆ, ಅವರು ಅದರಿಂದ ಒಪ್ಪಿಗೆಯನ್ನು ತಡೆಹಿಡಿಯುವುದಿಲ್ಲ ಎಂದು ಸದನವು ಗಮನಿಸುತ್ತದೆ ಎಂದು ಅವರು ಹೇಳಿದರು.

ಹಿಮಾಚಲದಲ್ಲಿ ಪತ್ತೆಯಾಯ್ತು ರಷ್ಯಾ ದಂಪತಿ ಬೆತ್ತಲೆ ಶವಗಳು

ತಮಿಳುನಾಡು ವಿಧಾನಸಭೆಯ ನಿಯಮ 143 ರ ಅಡಿಯಲ್ಲಿ ಈ ಕೆಳಗಿನ ಮಸೂದೆಗಳನ್ನು ಈ ಸಭೆಯು ಮರುಪರಿಶೀಲಿಸಬಹುದು ಎಂದು ಈ ಸದನವು ನಿರ್ಧರಿಸುತ್ತದೆ ಎಂದು ಸ್ಟಾಲಿನ್ ಮಂಡಿಸಿದ ನಿರ್ಣಯವು ತಿಳಿಸಿದೆ. ರವಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಸರ್ಕಾರದ ಉಪಕ್ರಮಗಳನ್ನು ತಡೆಯಲು ರಾಜ್ಯಪಾಲರು ಉತ್ಸುಕರಾಗಿದ್ದಾರೆ ಎಂದು ಆರೋಪಿಸಿದರು.

ಅವರು ತಮ್ಮ ವೈಯಕ್ತಿಕ ಆಸೆ ಮತ್ತು ಅಭಿಮಾನದ ಕಾರಣದಿಂದ ಮಸೂದೆಗಳನ್ನು ಹಿಂದಿರುಗಿಸಿದ್ದಾರೆ…ಸಮ್ಮತಿ ನೀಡದಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನವಿರೋಯಾಗಿದೆ ಎಂದು ಸಿಎಂ ಹೇಳಿದರು.
ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳನ್ನು ರಾಜ್ಯಪಾಲರ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸುಪ್ರೀಂ ಕೋರ್ಟ್‍ನಿಂದ ಕೊಲಿಜಿಯಂ ಶಿಫಾರಸು ವಿಳಂಬ ವಿಚಾರಣೆ

ನವದೆಹಲಿ, ನ.18 (ಪಿಟಿಐ) – ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರುಗಳನ್ನು ಇತ್ಯರ್ಥಗೊಳಿಸುವಲ್ಲಿ ಕೇಂದ್ರದ ಕಡೆಯಿಂದ ವಿಳಂಬವಾಗಿದೆ ಎಂಬ ಆರೋಪ ಸೇರಿದಂತೆ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ, ಸುಧಾಂಶು ಧುಲಿಯಾ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಸೋಮವಾರ ವಿಚಾರಣೆ ನಡೆಸಲಿದೆ ನ. 7 ರಂದು ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಉನ್ನತ ನ್ಯಾಯಾಂಗಕ್ಕೆ ನೇಮಕ ಮಾಡಲು ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳನ್ನು ಕೇಂದ್ರವು ಆಯ್ದು ಆಯ್ಕೆ ಮತ್ತು ನೇಮಕ ಮಾಡುತ್ತಿರುವುದು ತೊಂದರೆ ಎಂದು ಹೇಳಿದೆ.

ಭಾರತದಿಂದ 20 ಶತಕೋಟಿ ಮೌಲ್ಯದ ಸರಕು ರಫ್ತು ಗುರಿ: ಅಮೆಜಾನ್

ಒಂದು ಹೈಕೋರ್ಟ್‍ನಿಂದ ಇನ್ನೊಂದು ಹೈಕೋರ್ಟ್‍ಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾದ ಹೆಸರುಗಳ ಬಾಕಿ ಇರುವ ಬಗ್ಗೆಯೂ ಅದು ಕಳವಳ ವ್ಯಕ್ತಪಡಿಸಿದೆ.

ಒಮ್ಮೆ ಈ ಜನರು ಈಗಾಗಲೇ ನ್ಯಾಯಾೀಶರಾಗಿ ನೇಮಕಗೊಂಡರೆ, ಅವರು ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುವ ವಿಷಯವು ನಿಜವಾಗಿಯೂ ಸರ್ಕಾರಕ್ಕೆ ಕಾಳಜಿಯ ವಿಷಯವಾಗಬಾರದು ಮತ್ತು ಈ ನ್ಯಾಯಾಲಯ ಅಥವಾ ಕೊಲಿಜಿಯಂ ಸಂಭವಿಸುವ ಪರಿಸ್ಥಿತಿ ಬರುವುದಿಲ್ಲ ಎಂದು ನಾವು ಅವರಿಗೆ ಮತ್ತೊಮ್ಮೆ ಒತ್ತಿಹೇಳಿದ್ದೇವೆ. ರುಚಿಕರವಲ್ಲದ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದು ಅದು ಹೇಳಿದೆ.

ದೆಹಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ಗವರ್ನರ್‌ಗೆ ದೂರು

ನವದೆಹಲಿ,ನ.18- ತಮ್ಮ ಮಗ ಪಾಲುದಾರರಾಗಿರುವ ಕಂಪನಿ ಮತ್ತು ಐಎಲ್‍ಬಿಎಸ್ ನಡುವೆ ಲಾಭದಾಯಕ ಸಹಯೋಗವನ್ನು ಸಕ್ರಿಯಗೊಳಿಸಲು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ತಮ್ಮ ಸ್ಥಾನವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ವಿಜಿಲೆನ್ಸ್ ಸಚಿವ ಅತಿಶಿ ನೀಡಿರು ವರದಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್‍ಗೆ ಕಳುಹಿಸಿದ್ದಾರೆ.

ಕಂಪನಿ ಮತ್ತು ಐಎಲ್‍ಬಿಎಸ್ ನಡುವಿನ ಯಾವುದೇ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಅವರ ಮಗ ಸಹಿ ಹಾಕಿಲ್ಲ ಎಂದು ಮುಖ್ಯ ಕಾರ್ಯದರ್ಶಿಯ ಆಪ್ತ ಮೂಲಗಳು ಹೇಳಿಕೊಂಡಿವೆ. ಅವರು ಷೇರುದಾರ ಅಥವಾ ನಿರ್ದೇಶಕ ಅಥವಾ ಪಾಲುದಾರ ಅಥವಾ ಉದ್ಯೋಗಿಯಾಗಿ ಪ್ರಶ್ನೆಯಲ್ಲಿರುವ ಕಂಪನಿಯೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಇನ್‍ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಪಿಲಿಯರಿ ಸೈನ್ಸಸ್ (ಐಎಲ್‍ಬಿಎಸ) ಗುರುವಾರ ಹೇಳಿಕೆಯಲ್ಲಿ ಸಂಪೂರ್ಣವಾಗಿ ಆಧಾರರಹಿತ ಮತ್ತು ಅರ್ಹತೆಯಿಲ್ಲದ ಆರೋಪಗಳನ್ನು ನಿರಾಕರಿಸಿದೆ.
ಐಎಲ್‍ಬಿಎಸ್ ಯಾವುದೇ ಖರೀದಿ ಆದೇಶವನ್ನು ನೀಡಿಲ್ಲ ಅಥವಾ ಯಾವುದೇ ಅಲ್ ಸಾಫ್ಟ್‍ವೇರ್ ಡೆವಲಪರ್ ಅಥವಾ ಕಂಪನಿಗೆ ಯಾವುದೇ ಪಾವತಿ ಮಾಡಿಲ್ಲ ಎಂದು ಖಚಿತಪಡಿಸುತ್ತದೆ ಎಂದು ಐಎಲ್‍ಬಿಎಸ್ ಹೇಳಿಕೆ ತಿಳಿಸಿದೆ.

ಜನವರಿ 24, 2023 ರಂದು ಐಎಲ್‍ಬಿಎಸ್ ಮತ್ತು ಮುಖ್ಯ ಕಾರ್ಯದರ್ಶಿಯವರ ಮಗನ ಕಂಪನಿಯ ನಡುವೆ ಎಂಒಯುಗೆ ಸಹಿ ಹಾಕಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ, ಇದು ಅಭಿವೃದ್ಧಿ ಹೊಂದಿದ ಯಾವುದೇ ಬೌದ್ಧಿಕ ಆಸ್ತಿಗೆ ಜಂಟಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಒದಗಿಸುವ ಮೂಲಕ ಕಂಪನಿಗೆ ಲಾಭದಾಯಕವಾಗಲು ದೊಡ್ಡ ಅವಕಾಶವನ್ನು ಒದಗಿಸಿದೆ. ಯೋಜನೆಯ ಮೂಲಕ ಮತ್ತು ಯಾವುದೇ ಭವಿಷ್ಯದ ವಾಣಿಜ್ಯೀಕರಣಕ್ಕಾಗಿ ಎರಡೂ ಪಕ್ಷಗಳಿಂದ ಲಾಭದ ಶೇಕಡಾ 50 ರಷ್ಟು ಪಾಲು ಇರುತ್ತದೆ.

ರಾಹುಲ್ ವಿರುದ್ಧ ಮಾನನಷ್ಟ ದಾಖಲಿಸಿದ್ದ ಪೂರ್ಣೇಶ್ ಮೋದಿಗೆ ಖುಲಾಯಿಸಿದ ಲಕ್

ನರೇಶ್ ಕುಮಾರ್ ಅವರು ಅಖಿಲ ಭಾರತ ಸೇವೆಗಳ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಸಾರ್ವಜನಿಕ ಖಜಾನೆಗೆ ನಷ್ಟವನ್ನುಂಟುಮಾಡುವ ಮೂಲಕ ತಮ್ಮ ಮಗನ ಕಂಪನಿಗೆ ಲಾಭದಾಯಕ ಸಹಯೋಗವನ್ನು ಸಕ್ರಿಯಗೊಳಿಸಲು ತಮ್ಮ ಸ್ಥಾನವನ್ನು ಬಳಸಿಕೊಂಡಿದ್ದಾರೆ ಎಂದು ಪ್ರಾಥಮಿಕವಾಗಿ ತೋರುತ್ತಿದೆ ಎಂದು ವರದಿ ಆರೋಪಿಸಿದ್ದು, ಅವರನ್ನು ಅಮಾನತುಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಲಾಗಿದೆ.

ಹಿಮಾಚಲದಲ್ಲಿ ಪತ್ತೆಯಾಯ್ತು ರಷ್ಯಾ ದಂಪತಿ ಬೆತ್ತಲೆ ಶವಗಳು

ಶಿಮ್ಲಾ,ನ.18- ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪವಿತ್ರ ಪಟ್ಟಣ ಮಣಿಕರಣ್ ಬಳಿಯ ಸಣ್ಣ ಕೊಳದಲ್ಲಿ ರಷ್ಯಾದಿಂದ ಬಂದವರು ಎಂದು ನಂಬಲಾದ ದಂಪತಿಗಳ ಬೆತ್ತಲೆ ಶವಗಳು ಪತ್ತೆಯಾಗಿವೆ. ಶವಗಳಲ್ಲಿ ಕೆಲವು ಗಾಯದ ಗುರುತುಗಳಿವೆ. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಕೊಲೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಪ್ಪತ್ತರ ಹರೆಯದ ಪುರುಷ ಮತ್ತು ಮಹಿಳೆಯನ್ನು ತಕ್ಷಣ ಗುರುತಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸಮೀಪದಲ್ಲಿ ದೊರೆತ ಕೆಲವು ವಸ್ತುಗಳ ಆಧಾರದ ಮೇಲೆ, ಬಲಿಪಶುಗಳು ರಷ್ಯಾದವರಾಗಿರಬಹುದು ಎಂದು ನಂಬಲಾಗಿದೆ.

ಮಣಿಕರಣ್‍ನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಪಾರ್ವತಿ ನದಿಯ ದಡದಲ್ಲಿರುವ ಟ್ಯಾಗ್ರಿಯಲ್ಲಿ ಕ್ರಮವಾಗಿ ಕುಂಡ್ (ಹಾಟ್ ಸ್ಪ್ರಿಂಗ್ ಪೂಲ) ಮತ್ತು ಕೊಳದ ಹೊರಗೆ ಮಹಿಳೆ ಮತ್ತು ಪುರುಷನ ಬೆತ್ತಲೆ ದೇಹಗಳು ಪತ್ತೆಯಾಗಿವೆ.

ಕ್ರಿಕೆಟ್, ಮೆಟ್ರೋ ಸೇರಿ ಎಲ್ಲವನ್ನೂ ಬಿಜೆಪಿ ಕೇಸರಿಮಯಗೊಳಿಸುತ್ತಿದೆ: ದೀದಿ

ಎಎಸ್ಪಿ ಸಂಜೀವ್ ಚೌಹಾಣ್ ಪಿಟಿಐಗೆ ಪುರುಷನ ಕೈ ಮತ್ತು ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತುಗಳಿವೆ, ಆದರೆ ಮಹಿಳೆಯ ಕೈಯಲ್ಲಿ ಗಾಯದ ಗುರುತುಗಳಿವೆ. ಅವರ ಗಾಯಗಳು ಮಾರಣಾಂತಿಕವಾಗಿಲ್ಲ ಮತ್ತು ಸಾವಿಗೆ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿದೆ ಎಂದು ಅವರು ಹೇಳಿದರು.

ಸ್ಥಳದಿಂದ ಒಂದು ಬ್ಲೇಡ್, ಮೊಬೈಲ್ ಫೋನ್, ಇತರ ವಸ್ತುಗಳು ಮತ್ತು ಡ್ರಗ್ಸ್ (ಚರಸ್) ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ವಿಷಯ ತಿಳಿಯಲಿದೆ ಎಂದರು.

ಮೃತದೇಹಗಳನ್ನು ಕುಲುವಿನ ಪ್ರಾದೇಶಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅದನ್ನು ಮಂಡಿಯ ವೈದ್ಯಕೀಯ ಕಾಲೇಜಿಗೆ ಉಲ್ಲೇಖಿಸಲಾಗಿದೆ. ಅವರ ಮುಖಗಳು ಊದಿಕೊಂಡಿವೆ ಮತ್ತು ಗುರುತಿಸಲಾಗಲಿಲ್ಲ ಮತ್ತು ಬಲಿಪಶುಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದಿಂದ 20 ಶತಕೋಟಿ ಮೌಲ್ಯದ ಸರಕು ರಫ್ತು ಗುರಿ: ಅಮೆಜಾನ್

ನವದೆಹಲಿ,ನ.18- ಅಮೆಜಾನ್ ತನ್ನ ಇ-ಕಾಮರ್ಸ್ ಪ್ಲಾಟ್‍ಫಾರ್ಮ್‍ಗೆ ಸಾವಿರಾರು ಸಣ್ಣ ಮಾರಾಟಗಾರರನ್ನು ಸೇರಿಸುವ ಮೂಲಕ 2025 ರ ವೇಳೆಗೆ ಭಾರತದಿಂದ 20 ಶತಕೋಟಿ ಮೌಲ್ಯದ ಸರಕು ರಫ್ತು ಮಾಡುವ ಗುರಿಯನ್ನು ಹೊಂದಿದೆ.

ಈ ವರ್ಷ ಸಹಿ ಮಾಡಿದ ಉದ್ಯಮಿಗಳ ಸಂಖ್ಯೆಯಿಂದ ನಾವು ತುಂಬಾ ಉತ್ತೇಜಿತರಾಗಿದ್ದೇವೆ ಎಂದು ಅಮೆಜಾನ್ ಜಾಗತಿಕ ವ್ಯಾಪಾರದ ನಿರ್ದೇಶಕ ಭೂಪೇನ್ ವಾಕಂಕರ್ ರಫ್ತು ಯೋಜನೆಗಳನ್ನು ಉಲ್ಲೇಖಿಸಿ ಉದ್ಯಮದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ರಾಹುಲ್ ವಿರುದ್ಧ ಮಾನನಷ್ಟ ದಾಖಲಿಸಿದ್ದ ಪೂರ್ಣೇಶ್ ಮೋದಿಗೆ ಖುಲಾಯಿಸಿದ ಲಕ್

ಶುಕ್ರವಾರದಿಂದ 11 ದಿನಗಳ ಶಾಪಿಂಗ್ ಅವಯ ಕಪ್ಪು ಶುಕ್ರವಾರದ ಸೈಬರ್ ಸೋಮವಾರ ಮಾರಾಟದ ಮೊದಲು ಭಾರತದಲ್ಲಿ ತಯಾರಿಸಿದ ಸಾವಯವ ಆರೋಗ್ಯ ಪೂರಕಗಳು, ಸ್ನಾನದ ಟವೆಲ್‍ಗಳು, ಸೆಣಬಿನ ರಗ್ಗುಗಳು ಮತ್ತು ಮಕ್ಕಳಿಗಾಗಿ ರೋಬೋಟಿಕ್ ಆಟಗಳಂತಹ ಹೋಮ್‍ವೇರ್‍ಗಳಿಗೆ ಭಾರಿ ಬೇಡಿಕೆಯಿದೆ ಎಂದು ಭೂಪೇನ್ ವಾಕಂಕರ್ ಹೇಳಿದರು.

2015 ರಲ್ಲಿ ಬೆರಳೆಣಿಕೆಯ ಮಾರಾಟಗಾರರೊಂದಿಗೆ ಪ್ರಾರಂಭವಾದ ಅಮೆಜಾನ್ ಗ್ಲೋಬಲ್ ಟ್ರೇಡ್, ಇ-ಕಾಮರ್ಸ್ ದೈತ್ಯದ ಗ್ರಾಹಕರಿಗೆ ವ್ಯಾಪಾರ ರಫ್ತು ವೇದಿಕೆಯಾಗುವ ಮೂಲಕ ಭಾರತದಲ್ಲಿ ಗಮನ ಸೆಳೆದಿದೆ.
ಕಂಪನಿಯು ಸಾಗರೋತ್ತರ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಮಾರಾಟ ಮಾಡಲು 100,000 ಕ್ಕೂ ಹೆಚ್ಚು ಸಣ್ಣ ತಯಾರಕರನ್ನು ಸೇರಿಸಿದೆ ಎಂದು ಅವರು ಹೇಳಿದರು.

ಇ-ಕಾಮರ್ಸ್ ರಫ್ತುಗಳನ್ನು ಪ್ರಾರಂಭಿಸಲು ತಮ್ಮ ಕಾಪೆರ್ರೇ ಟ್ ಉದ್ಯೋಗಗಳನ್ನು ತೊರೆದವರು ಸೇರಿದಂತೆ ಕೆಲವು ಮಾರಾಟಗಾರರು ಮೊದಲ ಬಾರಿಗೆ ರಫ್ತುದಾರರಾಗಿದ್ದಾರೆ ಎಂದು ಅವರು ಹೇಳಿದರು.

ಈ ಹಿಂದೆ ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ಹೊಂದಿರದ ಸಾವಿರಾರು ಸಣ್ಣ ರಫ್ತುದಾರರು ಇ-ಕಾಮರ್ಸ್ ಪ್ಲಾಟ್‍ಫಾರ್ಮ್ ಮೂಲಕ ವಾರ್ಷಿಕವಾಗಿ ಶೇ.70 ವ್ಯಾಪಾರ ಬೆಳವಣಿಗೆಯನ್ನು ಕಂಡಿದ್ದಾರೆ, ಇದು ಜಾಗತಿಕವಾಗಿ 200 ಮಿಲಿಯನ್‍ಗಿಂತಲೂ ಹೆಚ್ಚು ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಾಜಿಸ್ಟಿಕ್ಸ್ ಬೆಂಬಲ ಮತ್ತು ಪ್ರವೇಶವನ್ನು ಒದಗಿಸಿದೆ ಎಂದು ಅವರು ಹೇಳಿದರು.

ಗಾಜಾದ ಶಿಫಾ ಆಸ್ಪತ್ರೆಯಲ್ಲಿ ಔಷದೋಪಚಾರ ಸಿಗದೆ 24 ರೋಗಿಗಳ ಸಾವು

ಗಾಜಾಪಟ್ಟಿ,ನ.18- ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಯಿಂದಾಗಿ ಗಾಜಾಪಟ್ಟಿ ಆಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ. ಹಮಾಸ್ ಅನ್ನು ನಾಶಮಾಡುವ ಪ್ರಯತ್ನದಲ್ಲಿ ಇಸ್ರೇಲಿ ಪಡೆಗಳು ಗಾಜಾ ಮೇಲಿನ ದಾಳಿ ತೀವ್ರಗೊಳಿಸಿರುವುದರಿಂದ ಅಲ್ಲಿನ ಅಲ್ ಶಿಫಾ ಆಸ್ಪತ್ರೆಯು ಯುದ್ಧ ವಲಯವಾಗಿ ಪರಿವರ್ತನೆಯಾಗಿದೆ.

ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮೂರು ನವಜಾತ ಶಿಶುಗಳು ಸೇರಿದಂತೆ 24 ರೋಗಿಗಳಿಗೆ ಸಕಾಲಕ್ಕೆ ಅಗತ್ಯ ಔಷದೋಪಚಾರ ದೊರಕದೆ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೇನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿದ್ಯುತ್ ಕಡಿತದಿಂದಾಗಿ ಪ್ರಮುಖ ವೈದ್ಯಕೀಯ ಉಪಕರಣಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಕಳೆದ 48 ಗಂಟೆಗಳಲ್ಲಿ ವಿವಿಧ ವಿಭಾಗಗಳಲ್ಲಿ 24 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯದ ವಕ್ತಾರ ಅಶ್ರಫ್ ಅಲ -ಕುದ್ರಾ ಹೇಳಿದ್ದಾರೆ.

ಇಸ್ರೇಲಿ ಪಡೆಗಳು ಇಂದು ಆಸ್ಪತ್ರೆಯಲ್ಲಿ ಮೂರನೇ ದಿನದ ಶೋಧವನ್ನು ನಡೆಸಿದ್ದು, ಇದನ್ನು ಹಮಾಸ್ ಕಮಾಂಡ್ ಸೆಂಟರ್ ಆಗಿ ಬಳಸುತ್ತಿದೆ ಎಂದು ಅವರು ಹೇಳಿದ್ದಾರೆ. ಇಸ್ರೇಲಿ ರಕ್ಷಣಾ ಪಡೆಗಳು ಹಮಾಸ್ ಸುರಂಗಗಳ ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಆಸ್ಪತ್ರೆಯ ಕಾಂಪೌಂಡ್‍ನಲ್ಲಿ ಕಂಡುಬಂದಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ ಶಿಫಾದಲ್ಲಿ ಒತ್ತೆಯಾಳು ಶವವನ್ನು ಕಂಡುಕೊಂಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.

ರಾಹುಲ್ ವಿರುದ್ಧ ಮಾನನಷ್ಟ ದಾಖಲಿಸಿದ್ದ ಪೂರ್ಣೇಶ್ ಮೋದಿಗೆ ಖುಲಾಯಿಸಿದ ಲಕ್

ಎರಡು ದಿನಗಳ ಕಾಲ ನೆರವಿನ ಬೆಂಗಾವಲುಗಳನ್ನು ಸ್ಥಗಿತಗೊಳಿಸಿದ ಸಂವಹನ ಬ್ಲ್ಯಾಕೌಟ್ ಅನ್ನು ಕೊನೆಗೊಳಿಸಲು ಸೀಮಿತ ವಿತರಣೆಗಳನ್ನು ಅನುಮತಿಸುವ ಅಮೆರಿಕ ವಿನಂತಿಯನ್ನು ಇಸ್ರೇಲ್ ಒಪ್ಪಿಕೊಂಡ ನಂತರ ಈಜಿಪ್ಟ್‍ನಿಂದ ಇಂಧನದ ಮೊದಲ ರವಾನೆ ಗಾಜಾವನ್ನು ಪ್ರವೇಶಿಸಿತು. ಉತ್ತರ ಗಾಜಾಕ್ಕೆ ಅಪ್ಪಳಿಸಿದ ನಂತರ, ಇಸ್ರೇಲ್ ದಕ್ಷಿಣದ ನಾಗರಿಕರನ್ನು ಸ್ಥಳಾಂತರಿಸಲು ಮತ್ತು ಬೆಂಕಿಯ ಸಾಲಿನಲ್ಲಿ ಸಿಲುಕುವುದನ್ನು ತಪ್ಪಿಸಲು ಹೊಸ ಎಚ್ಚರಿಕೆಯನ್ನು ನೀಡಿದೆ.

ನಾವು ಜನರನ್ನು ಸ್ಥಳಾಂತರಿಸಲು ಕೇಳುತ್ತಿದ್ದೇವೆ. ಅವರಲ್ಲಿ ಅನೇಕರಿಗೆ ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ, ಆದರೆ ಕ್ರಾಸ್‍ಫೈರ್‍ನಲ್ಲಿ ಸಿಲುಕಿರುವ ನಾಗರಿಕರನ್ನು ನಾವು ನೋಡಲು ಬಯಸುವುದಿಲ್ಲ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹಾಯಕ ಮಾರ್ಕ್ ರೆಗೆವ್ ತಿಳಿಸಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಡೇನಿಯಲ್ ಹಗಾರಿ ಮಾತನಾಡಿ, ಹಮಾಸ್ ಇರುವಲ್ಲೆ ಪಡೆಗಳು ಮುನ್ನಡೆಯುತ್ತವೆ. ನಮ್ಮ ಕಾರ್ಯಾಚರಣೆಯನ್ನು ಮುಂದುವರಿಸಲು ನಾವು ನಿರ್ಧರಿಸಿದ್ದೇವೆ. ಹಮಾಸ್ ಗಾಜಾ ಪಟ್ಟಿಯ ದಕ್ಷಿಣ ಭಾಗ ಸೇರಿದಂತೆ ಎಲ್ಲೆಲ್ಲಿ ಅಸ್ತಿತ್ವದಲ್ಲಿದೆ ಎಂದು ಅವರು ಹೇಳಿದರು.