Thursday, November 6, 2025
Home Blog Page 1816

ವಿಜಯೇಂದ್ರಗೆ ಬೆಂಗಾವಲಾಗಿ ಕೆಲಸ ಮಾಡುತ್ತೇನೆ : ಕಟೀಲ್

ಬೆಂಗಳೂರು,ನ.15- ಬಿಜೆಪಿ ಪಕ್ಷವನ್ನು ನಾಲ್ಕು ವರ್ಷ ಮೂರು ತಿಂಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ ಸಮಾಧಾನ ನನಗಿದೆಯೆಂದು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದ ನಂತರ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಪಕ್ಷದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಿತ್ತು, ಇದನ್ನು ನಿಸ್ವಾರ್ಥವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆಂಬ ತೃಪ್ತಿಯಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ನಾವು ಸೇವಾ ಕಾರ್ಯದ ರೂಪದಲ್ಲಿ ಜನತೆಗೆ ಸ್ಪಂದಿಸುವಂತಹ ಕಾರ್ಯ ಮಾಡಿದ್ದೇವೆ, ಕೇಂದ್ರ ನಾಯಕರು ನಮಗೆ ನೀಡಿದ ನಿರ್ದೇಶನದಂತೆ ಈ ಮಹಾಮಾರಿ ವಿರುದ್ಧ ಹೋರಾಟದಲ್ಲಿ ನಮ್ಮ ಕಾರ್ಯಕರ್ತರು ಹಗಲಿರುಳು ದುಡಿದಿದ್ದಾರೆ ಎಂದರು.
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಎಲ್ಲರ ಜೊತೆಗೆ ಸೇರಿ ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸುತ್ತಾರೆಂಬ ವಿಶ್ವಾಸ ಇದೆ. ಅವರ ಬೆಂಗಾವಲಾಗಿ ಅವರ ಜೊತೆ ಸದಾ ನಾವು ಕೆಲಸ ಮಾಡುತ್ತೇವೆ ಎಂದರು.

ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ನನಗೆ ಸಹಕಾರ ನೀಡಿದ ಎಲ್ಲಾ ಹಿರಿಯರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ನೀಡಿದ ಸಹಕಾರವನ್ನು ವಿಜಯೇಂದ್ರ ಅವರಿಗೂ ನೀಡುತ್ತೀರೆಂಬ ವಿಶ್ವಾಸವಿದೆ. ಎಲ್ಲರೂ ಜೊತೆಗೂಡಿ ವಿಜಯೇಂದ್ರ ಅವರಿಗೆ ಶಕ್ತಿ ತುಂಬಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ಹಾಸನ, ನ.15- ಕಳೆದ 12 ದಿನಗಳಿಂದ ಭಕ್ತರಿಗೆ ದರ್ಶನ ನೀಡಿದ್ದ ನಗರದ ಅದೇವತೆ ಹಾಸನಾಂಬಾ ದೇವಾಲದ ಗರ್ಭಗುಡಿಯ ಬಾಗಿಲನ್ನು ಇಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ದರ್ಶನೋತ್ಸವಕ್ಕೆ ತೆರೆ ಎಳೆಯಲಾಯಿತು.

ನ.2ರಿಂದ ಆರಂಭವಾಗಿದ್ದ ಹಾಸನಾಂಬ ದರ್ಶನೋತ್ಸವಕ್ಕೆ ಇಂದು ತೆರೆ ಬಿದ್ದಿದ್ದು, ಮತ್ತೆ ದರ್ಶನಕ್ಕೆ ಒಂದು ವರ್ಷ ಕಾಯಬೇಕಾಗಿದೆ. ಈ ಬಾರಿ 13. 5 ಲಕ್ಷ ಭಕ್ತರು ದರ್ಶನ ಪಡೆದು ಪುನೀತರಾಗಿರುವುದು ದಾಖಲೆಯಾಗಿದೆ. ನಿನ್ನೆ ಬೆಳಗ್ಗೆ 6 ಗಂಟೆವರೆಗೂ ವಿಶೇಷ ದರ್ಶನ ಸಾವಿರ ರೂ. ಹಾಗೂ 300 ರೂ. ಮತ್ತು ಲಾಡು ಪ್ರಸಾದ ಮಾರಾಟದಿಂದ 5,79,56,460 ರೂ. ಹಣ ಸಂಗ್ರಹವಾಗಿದ್ದು ದಾಖಲೆಯಾಗಿದೆ.

ಹೂವಿನ ಹಾಸಿಗೆಯಲ್ಲ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾದಿ

ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ದೇವಿಗೆ ಅಲಂಕಾರ ಮಾಡಲಾಗಿದ್ದ ಆಭರಣಗಳನ್ನು ತೆಗೆದು ಪೂಜೆ ಸಲ್ಲಿಸಿ ದೀಪ ಹಚ್ಚಿ ಹೂ ನೈವೇದ್ಯವಿಟ್ಟು ವಿವಿಧ ಗಣ್ಯರು ಅಕಾರಿಗಳ ಸಮ್ಮುಖದಲ್ಲಿ ವಿಶ್ವರೂಪ ದರ್ಶನದ ಬಳಿಕ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.

ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಈ ಬಾರಿ ರಾಜ್ಯದ ವಿವಿಧ ಮೂಲೆಗಳಿಂದ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಪ್ರಾರಂಭದಲ್ಲಿ ಕೆಲ ಗೊಂದಲಗಳಾಗಿದ್ದು, ನೂಕುನುಗ್ಗುಲು ಉಂಟಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಕೊನೆಗೆ ಜಿಲ್ಲಾಧಿಕಾರಿಗಳೇ ದೇವಾಲಯದ ಆವರಣದಲ್ಲಿ ನಿಂತು ಭಕ್ತರಿಗೆ ಮಾರ್ಗದರ್ಶನ ನೀಡುತ್ತ ದೇವಿಯ ಸುಗಮ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು.

ಹಾಸನಾಂಬೆ ದರ್ಶನೋತ್ಸವಕ್ಕೆ ವಿದ್ಯುಕ್ತ ತೆರೆ: 14.20 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನಾಂಬ ದರ್ಶನಕ್ಕೆ ಇಂದು ವಿದ್ಯುಕ್ತ ತೆರೆ ಎಳೆಯಲಾಯಿತು. ಇಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಗರ್ಭಗುಡಿ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಅಕಾರಿಗಳ ಸಮ್ಮುಖದಲ್ಲಿ ಮುಚ್ಚಲಾಯಿತು.ಹಾಸನಾಂಬಾ ಜಾತ್ರಾ ಮಹೋತ್ಸವದ ಕಡೇ ದಿನದ ಹಿನ್ನೆಲೆಯಲ್ಲಿ ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೇದ್ಯ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಅರ್ಚಕರು ಇಟ್ಟ ಹೂವು ಬಾಡುವುದಿಲ್ಲ, ದೀಪ ಆರುವುದಿಲ್ಲ ಎಂಬ ಪ್ರತೀತಿ ಇದೆ.

ಗರ್ಭಗುಡಿ ಬಾಗಿಲನ್ನು ನ.2 ರಿಂದ 15ರ ವರೆಗೆ ತೆರೆದಿದ್ದು, 14 ದಿನಗಳಲ್ಲಿ 12 ದಿನ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದುವರೆಗೆ ಸುಮಾರು 14.20 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. 1000, 300ರೂ. ವಿಶೇಷ ಟಿಕೆಟï, ಲಾಡು ಮಾರಾಟದಿಂದ ದಾಖಲೆಯೆ 6 ಕೋಟಿಗೂ ಅಕ ಆದಾಯ ಬರಲಿದೆ ಎಂದು ಅಂದಾಜಿಸಲಾಗಿದ್ದು , ಹುಂಡಿ ಕಾಣಿಕೆಯಿಂದ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ.

ಧಾರ್ಮಿಕ ವಿ-ವಿಧಾನಗಳೊಂದಿಗೆ ಹಾಸನಾಂಬ ದೇವಿ ಬಾಗಿಲು ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಹಾಸನಾಂಬೆ ದರ್ಶನೋತ್ಸವ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಜಿಲ್ಲಾಡಳಿತ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಸಹಕಾರದಿಂದ ಯಶಸ್ವಿ ಕಂಡಿದೆ. 12 ದಿನಗಳ ಸಾರ್ವಜನಿಕ ದರ್ಶನದಲ್ಲಿ ಪ್ರತಿಯೊಬ್ಬ ಭಕ್ತರಿಗೂ ದರ್ಶನ ಪಡೆಯಲು ಉತ್ತಮ ರೀತಿಯ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಮುಂದಿನ ಬಾರಿ 11 ದಿನ ಮಾತ್ರ ದರ್ಶನ: 2014 ಅಕ್ಟೋಬರ್ 23 ರಿಂದ ನವೆಂಬರ್ 3ರ ವರೆಗೆ ಹಾಸನಾಂಬೆ ದೇವಿಯ ದೇವಾಲಯ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, 11 ದಿನ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.

ಹೂವಿನ ಹಾಸಿಗೆಯಲ್ಲ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾದಿ

ಬೆಂಗಳೂರು, ನ.15- ಹಲವರ ಅಪಸ್ವರದ ನಡುವೆಯೂ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದು ಅವರ ಪಾಲಿಗೆ ಹೂವಿನ ಹಾಸಿಗೆಯಲ್ಲ. ಬದಲಿಗೆ ಕೆಳ ಹೀನವಾಗಿರುವ ಪಕ್ಷಕ್ಕೆ ಹೊಸ ಹುರುಪು ನೀಡಿ, ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆ ಅವರ ಮೇಲಿದೆ.

ಇದೀಗ ರಾಜ್ಯಾಧ್ಯಕ್ಷ ಸ್ಥಾನ ಜವಾಬ್ದಾರಿ ವಹಿಸಿಕೊಂಡಿರುವ ವಿಜಯೇಂದ್ರ ಮುಂದೆ ಸಾಲು ಸಾಲು ಸವಾಲುಗಳು ಇವೆ. ಅದರಲ್ಲೂ, ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಪಕ್ಷ ಸಂಘಟನೆ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಲವು ಅಸ್ತ್ರಗಳೂ ಮುಂದಿದೆ.

ಜಾತಿ ಗಣತಿ ಬಿಜೆಪಿಯ ಮುಂದೆ ಇರುವ ಪ್ರಮುಖ ಅಸ್ತ್ರ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಶಾಶ್ವತ ಹಿಂದುಳಿದ ಆಯೋಗ ಶೀಘ್ರದಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದೆ. ಆದರೆ ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.

ಮಹಾರಾಷ್ಟ್ರ : ಮರಾಠ ಮೀಸಲಾತಿ ಹೋರಾಟಕ್ಕೆ ಮೊದಲ ಬಲಿ

ಅದರಲ್ಲೂ ಲಿಂಗಾಯತ ಸಮುದಾಯ ಜಾತಿಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪುಸುವಲ್ಲಿ ವಿಜಯೇಂದ್ರಗೆ ಅವಕಾಶ ಇದೆ. ಜಾತಿಗಣತಿ ವೈಜ್ಞಾನಿಕವಾಗಿಲ್ಲ ಎಂದು ಅಭಿಪ್ರಾಯ ರೂಪಿಸುವ ಮೂಲಕ ಹೋರಾಟ ರೂಪಿಸಲು ಅವಕಾಶ ಇದೆ.

ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದೆ. ವರ್ಗಾವಣೆ ದಂಧೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಆರೋಪಗಳನ್ನು ಮಾಡುತ್ತಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಆರೋಪಗಳು ಕೇಳಿಬಂದಿದೆ. ಈ ವಿಚಾರವಾಗಿ ಬಿಜೆಪಿಗಿಂತ ಹೆಚ್ಚಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಆದರೆ ಬಿಜೆಪಿ ಸೈಲೆಂಟಾಗಿತ್ತು. ಇದೀಗ ವಿಜಯೇಂದ್ರ ಅವರಿಗೆ ಈ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲು ಅವಕಾಶ ಇದೆ.

ಐದು ಗ್ಯಾರಂಟಿ ಘೋಷಣೆ ಮಾಡುವ ಮೂಲಕ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಂಡಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಜಾರಿ ಮಾಡಿರುವುದನ್ನು ಮುಂದಿಟ್ಟುಕೊಂಡು ವರ್ಚಸ್ಸು ಹೆಚ್ಚಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಆದರೆ ಗ್ಯಾರಂಟಿ ಜಾರಿಯಲ್ಲಿ ಹಲವು ಎಡವಟ್ಟುಗಳು ಮಾಡಿದೆ. ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲಿ ಸಮಸ್ಯೆಗಳು ಎದುರಾಗುತ್ತಿದೆ. ಇದನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಿಜಯೇಂದ್ರ ಹೋರಾಟದವನ್ನು ರೂಪಿಸಲು ಅವಕಾಶ ಇದೆ.

ರಾಜ್ಯದಲ್ಲಿ ಕೇವಲ ಗ್ಯಾರಂಟಿ ಯೋಜನೆಗಳ ಜಾರಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪ ಇದೆ. ಸರ್ಕಾರ ಅಕಾರಕ್ಕೆ ಬಂದು ಆರು ತಿಂಗಳಾದರೂ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇಲಾಖಾವಾರು ಕೆಲಸಗಳು ನಡೆದಿಲ್ಲ ಎಂಬ ಆರೋಪಗಳು ಇವೆ.

ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ವಿಜಯೇಂದ್ರ ಮುಂದಾಗುತ್ತಾರಾ ಎಂಬುದು ಕೂಡ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಸಾಕಷ್ಟು ಅಸ್ತ್ರಗಳು ವಿಜಯೇಂದ್ರ ಮುಂದಿದೆ. ವಿರೋಧ ಪಕ್ಷವಾದ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸರ್ಕಾರದ ವಿರುದ್ಧ ಹೇಗೆ ಹೋರಾಟ ರೂಪಿಸಿ ಜನಾಭಿಪ್ರಾಯ ರೂಪಿಸುತ್ತಾರೆ ಎಂಬುದನ್ನು ಕಾದುನೊಡಬೇಕಿದೆ.

ಪೋಸ್ಟರ್ ವಾರ್‌ಗೆ ನಾಂದಿಹಾಡುತ್ತಾ ‘ಕರೆಂಟ್ ಕಳ್ಳ’ ಎಂಬ ವಿವಾದಿತ ಪೋಸ್ಟರ್

ಬೆಂಗಳೂರು, ನ.15-ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದ ಗೋಡೆಗೆ ಕರೆಂಟ್ ಕಳ್ಳ ಎಂಬ ವಿವಾದಿತ ಪೋಸ್ಟರ್ ಹಂಟಿಸಿರುವುದು ಕೆಲ ಕಾಲಗೊಂದಲಕ್ಕೆ ಕಾರಣವಾಗಿತ್ತು. ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಪೋಸ್ಟರ್ ವಾರ್ ಸೃಷ್ಟಿಯಾಗುವ ಸಂಭವನಿಯತೆಯನ್ನು ಹೆಚ್ಚಿಸಿದೆ. ದೀಪಾವಳಿ ಹಬ್ಬದ ವಿದ್ಯುತ್ ಅಲಂಕಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರ ಜೆ.ಪಿ.ನಗರದ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎಂಬ ಆರೋಪಗಳಿವೆ. ಈ ಕುರಿತಂತೆ ದೂರು ದಾಖಲಾಗಿದೆ.

ಕುಮಾರಸ್ವಾಮಿಯವರು ಖುದ್ದು ಆರೋಪವನ್ನು ಒಪ್ಪಿಕೊಂಡಿದ್ದು, ಮನೆಯ ದೀಪಾಲಂಕಾರಕ್ಕೆ ಖಾಸಗಿ ಡೆಕೋರೆಟರ್‍ಗೆ ವಹಿಸಲಾಗಿತ್ತು. ಆತ ವಿದ್ಯುತ್ ಕಂಬದಿಂದ ನೇರ ಸಂಪರ್ಕ ಕಲ್ಪಿಸಿದ್ದಾನೆ, ಪ್ರಕರಣ ತಮ್ಮ ಗಮನಕ್ಕೆ ಬಂದ ತಕ್ಷಣ ಸರಿ ಪಡಿಸಲಾಗಿದೆ. ಈ ಸಂಬಂಧಿಸಿದ ದಂಡ ಪಾವತಿಸಲು ತಾವು ಸಿದ್ಧ ಎಂದಿದ್ದರು. ಮುಂದುವರೆದು ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ಅವರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿದ್ದವು.

ವಿಜಯೇಂದ್ರ ಕೇವಲ ಬಿಎಸ್‍ವೈ ಬಣಕ್ಕೆ ಮಾತ್ರ ಅಧ್ಯಕ್ಷರೇ..? : ಕಾಂಗ್ರೆಸ್ ಲೇವಡಿ

ಪ್ರಕರಣದ ಬೆನ್ನಲ್ಲೆ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯ ತಡೆಗೋಡೆಗೆ ನಿನ್ನೆ ರಾತ್ರಿ ಪೋಸ್ಟರ್ ಅಂಟಿಸಲಾಗಿದೆ. ಆಕ್ಷೇಪಾರ್ಹ ಪೋಸ್ಟರ್ ಜೊತೆಗೆ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‍ವರೆಗೂ ಉಚಿತ ವಿದ್ಯುತ್‍ಸೌಲಭ್ಯ ಇದೆ. ಹೆಚ್ಚಿನ ವಿದ್ಯುತ್ ಕಳ್ಳತನ ಮಾಡಬೇಡಿ ಎಂದು ಮತ್ತೊಂದು ಪೋಸ್ಟರ್ ಅಂಟಿಸಲಾಗಿದೆ.

ಪೋಸ್ಟರ್ ಅಂಟಿಸಿರುವುದು ಗಮನಕ್ಕೆ ಬರುತ್ತಿದ್ದಂತೆ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವುಗಳನ್ನು ತೆರವು ಮಾಡಿದ್ದಾರೆ. ತಡರಾತ್ರಿ ಈ ಪೋಸ್ಟರ್ ಅಂಟಿಸಿರುವ ಸಾಧ್ಯತೆ ಇದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ಕೃತ್ಯ ಎಸಗಿದವರ ಪತ್ತೆಗೆ ಮುಂದಾಗಿದ್ದಾರೆ.

ಈ ಮೊದಲು ವಿಧಾನಸಭೆ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದ ಪೇಸಿಎಂ ಪೋಸ್ಟರ್ ಭಾರಿ ಪರಿಣಾಮ ಬೀರಿತ್ತು. ಈಗ ಜೆಡಿಎಸ್ ನಾಯಕ ವಿರುದ್ಧವೂ ಅದೇ ರೀತಿಯ ಪೋಸ್ಟರ್ ವಾರ್ ಕಂಡು ಬಂದಿದೆ.

ವಿಜಯೇಂದ್ರ ಕೇವಲ ಬಿಎಸ್‍ವೈ ಬಣಕ್ಕೆ ಮಾತ್ರ ಅಧ್ಯಕ್ಷರೇ..? : ಕಾಂಗ್ರೆಸ್ ಲೇವಡಿ

ಬೆಂಗಳೂರು,ನ.15- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅತ್ತ ಬಿ.ವೈ.ವಿಜಯೆಂದ್ರ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿರುವ ಕಾಂಗ್ರೆಸ್, ವಿಜಯೇಂದ್ರ ಕೇವಲ ಬಿಎಸ್‍ವೈ ಬಣಕ್ಕೆ ಮಾತ್ರ ಅಧ್ಯಕ್ಷರೇ ಎಂದು ಪ್ರಶ್ನಿಸಿದೆ.

ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈವರೆಗೂ ನಳೀನ್ ಕುಮಾರ್ ಕಟೀಲ್ ಅವರ ಫೋಟೋವೇ ಉಳಿದಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಪೋಸ್ಟರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಿರ್ಗಮಿತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಭಾವಚಿತ್ರಗಳು ಕಂಡು ಬಂದಿವೆ.

ಇದನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ.ಅದೇ ಸಂತೋಷ ಕೂಟದ ಭಾಗವಾಗಿರುವ ಬಿಜೆಪಿ ಸಾಮಾಜಿಕ ಜಾಲತಾಣಕ್ಕೂ ವಿಜಯೆಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದೆ.

ವಿಜಯೆಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ ಇನ್ನೂ ಸಹ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಳಿನ್ ಕುಮಾರ್ ಕಟೀಲ್ ಕಂಗೊಳಿಸುತ್ತಿದ್ದಾರೆ. ಬಿಜೆಪಿ ಪಕ್ಷ ವಿಜಯೆಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ ? ವಿಜಯೆಂದ್ರ ಬಿಎಸ್‍ವೈ ಬಣಕ್ಕೆ ಮಾತ್ರ ಅಧ್ಯಕ್ಷರೆ ಎಂದು ಲೇವಡಿ ಮಾಡಲಾಗಿದೆ.

ಕಾರ್ಯಕರ್ತರ ಹರ್ಷೋದ್ಘಾರಗಳ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಪದಗ್ರಹಣ

ಬೆಂಗಳೂರು,ನ.15- ಕಳೆಗುಂದಿದ್ದ ಪಕ್ಷಕ್ಕೆ ಹೊಸ ಚೈತನ್ಯ ನೀಡುವ ದೃಢಸಂಕಲ್ಪ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸುವ ಪ್ರತಿಜ್ಞೆಯೊಂದಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಇಂದು ಅಧಿಕಾರ ಸ್ವೀಕರಿಸಿದರು.

ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿಂದು ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಹರ್ಷೋದ್ಘಾರಗಳ ನಡುವೆ ಪದಗ್ರಹಣ ಮಾಡಿದರು.ನಿರ್ಗಮಿತ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ನೂತನ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡಿ ವಿದ್ಯುಕ್ತವಾಗಿ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಅಕಾರ ಸ್ವೀಕಾರ ಮಾಡಿದ್ದು, ರಾಜ್ಯದಲ್ಲಿ ಇಂದಿನಿಂದ ವಿಜಯೇಂದ್ರ ಪರ್ವ ಆರಂಭವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಬಿಜೆಪಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಪುಟಿದೇಳಲು ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕಲ್ಪಿಸಿದೆ.

ರಶ್ಮಿಕಾ ಮಂದಣ್ಣ ಡೀಪ್‍ಫೇಕ್ ಪ್ರಕರಣದಲ್ಲಿ ಬಿಹಾರದ ಯುವಕನ ವಿಚಾರಣೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಬಲ ಸಮುದಾಯ ವೀರಶೈವ ಲಿಂಗಾಯುತ ಸಮುದಾಯ ಹಿಂದೆ ಸರಿದಿದ್ದರಿಂದ ಪಕ್ಷಕ್ಕೆ ಹೀನಾಯ ಸೋಲುನ್ನುಂಟಾಗಿತ್ತು. ಮತ್ತೆ ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರಿಗೆ ಮಣೆ ಹಾಕಿತ್ತು. ಹಲವು ಹಿರಿಯ ನಾಯಕರ ಅಸಮಾಧಾನದೊಂದಿಗೆ ಇದೀಗ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿ ಅಕಾರ ಸ್ವೀಕರಿಸಿದ್ದು, 2024ರ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮಹತ್ವದ ಹೊಣೆಗಾರಿಕೆ ಬಿ.ವೈ.ವಿ ಅವರ ಮೇಲಿದೆ.

ಮುಖಂಡರಾದ ವಿ. ಸೋಮಣ್ಣ, ಸಿ.ಟಿ. ರವಿ, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಬಹಿರಂಗವಾಗಿ ಪಕ್ಷದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿಲ್ಲವಾದರೂ ಆಂತರಿಕವಾಗಿ ಅಸಮಾಧಾನಗೊಂಡಿದ್ದು, ಮುಂದಿನ ದಿನಗಳಲ್ಲಿ ಸಹಕಾರ ನೀಡಲಿದ್ದಾರೆಯೇ ಎಂಬುವುದು ಯಕ್ಷಪಪ್ರಶ್ನೆಯಾಗಿದೆ.

ಇಂದು ಬೆಳಿಗ್ಗೆ ಡಾಲರ್ಸ್ ಕಾಲೋನಿ ಧವಳಗಿರಿ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ಪಕ್ಷದ ಕಚೇರಿಗೆ ವಿಜಯೇಂದ್ರ ಅವರು ಆಗಮಿಸಿದರು.ಈ ವೇಳೆ ಹಿರಿಯ ನಾಯಕರು, ಕಾರ್ಯಕರ್ತರು ಹೂಗುಚ್ಛ ನೀಡಿ ಅಭಿನಂದನೆಗಳ ಸುರಿಮಳೆ ಗೈದರು.

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸದಾನಂದಗೌಡ, ಸಂಸದರಾದ ತೇಜಸ್ವಿ ಸೂರ್ಯ, ಬಿ.ವೈ. ರಾಘವೇಂದ್ರ, ಜಿಎಸ್ ಬಸವರಾಜ್, ಮಾಜಿ ಸಚಿವರಾದ ಕೆ. ಗೋಪಾಲಯ್ಯ, ಆರ್. ಆಶೋಕ್, ಈಶ್ವರಪ್ಪ , ಕಾರಜೋಳ ಸೇರಿದಂತೆ ಹಾಲಿ ಶಾಸಕರು, ನಾಯಕರು, ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.

ಗೆಹ್ಲೋಟ್-ಪೈಲಟ್ ನಡುವೆ ಸಂಧಾನ.?

ಜೈಪುರ,ನ.15- ರಾಜಸ್ಥಾನ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ವೈಷಮ್ಯ ಕೊನೆಗಾಣಿಸುವ ಕಸರತ್ತಿಗೆ ಕೈ ಹಾಕಲಾಗಿದೆ.ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಇಬ್ಬರು ಒಟ್ಟಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟಿದ್ದೇವೆ ಎಂದು ಗೆಹ್ಲೋಟ್ ಎಕ್ಸ್ ಮಾಡಿದ್ದಾರೆ.

ಬಿಡಿ! ಯಾರು ಏನು ಹೇಳಿದರು? ನಾನು ಹೇಳಿದ್ದಕ್ಕೆ ನಾನು ಜವಾಬ್ದಾರನಾಗಿರುತ್ತೇನೆ … ರಾಜಕೀಯ ಚರ್ಚೆಗಳಲ್ಲಿ ನಾವು ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು 46 ವರ್ಷದ ಪೈಲಟ್ ಪಿಟಿಐಗೆ ತಿಳಿಸಿದರು. ಹಾಗೂ ಒಟ್ಟಿಗೆ ಕಾಂಗ್ರೆಸ್ ಗೆಲ್ಲಿಸುತ್ತೇವೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮಿಸಿ, ಮರೆತುಬಿಡಿ ಮತ್ತು ಮುಂದುವರಿಯಿರಿ ಎಂದು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.

ರಶ್ಮಿಕಾ ಮಂದಣ್ಣ ಡೀಪ್‍ಫೇಕ್ ಪ್ರಕರಣದಲ್ಲಿ ಬಿಹಾರದ ಯುವಕನ ವಿಚಾರಣೆ

ತನ್ನ ಟೋಂಕ್ ಕ್ಷೇತ್ರದ ಸ್ಥಾನವನ್ನು ಉಳಿಸಿಕೊಳ್ಳಲು ನೋಡುತ್ತಿರುವ ಪೈಲಟ್, ಕಾಂಗ್ರೆಸ್ ಅಕಾರವನ್ನು ಉಳಿಸಿಕೊಂಡರೆ, ಮೂರು ವರ್ಷಗಳ ಹಿಂದೆ ಅವರ ಬಂಡಾಯವು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು ಎಂಬ ಮಾತನ್ನು ಸಹ ಕಡಿಮೆ ಮಾಡಿದ್ದಾರೆ.

ಇದು ನನ್ನ ಅವಕಾಶ, ನಿಮ್ಮ ಅವಕಾಶ ಅಥವಾ ಅವರ ಅವಕಾಶದ ಪ್ರಶ್ನೆ ಎಂದು ನಾನು ಭಾವಿಸುವುದಿಲ್ಲ. ಇದೀಗ ನಾವು ಕಾಂಗ್ರೆಸ್ ಪಕ್ಷವನ್ನು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಬೇಕು … ಸಂಪ್ರದಾಯವೆಂದರೆ ನೀವು ಚುನಾವಣೆಯಲ್ಲಿ ಸ್ರ್ಪಸುತ್ತೀರಿ … ಒಮ್ಮೆ ನೀವು ಬಹುಮತವನ್ನು ದಾಟಿದರೆ, ದೆಹಲಿಯ ಶಾಸಕರು ಮತ್ತು ನಾಯಕತ್ವವು ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕೆಂದು ನಿರ್ಧರಿಸುತ್ತದೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್‍ಫೇಕ್ ಪ್ರಕರಣದಲ್ಲಿ ಬಿಹಾರದ ಯುವಕನ ವಿಚಾರಣೆ

ನವದೆಹಲಿ,ನ.15- ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‍ಫೇಕ್ ವೀಡಿಯೊಗೆ ಸಂಬಂಸಿದಂತೆ ದೆಹಲಿ ಪೊಲೀಸರು ಬಿಹಾರದ 19 ವರ್ಷದ ಯುವಕನನ್ನು ಪ್ರಶ್ನಿಸಿದ್ದಾರೆ.ಯುವಕನು ಮೊದಲು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊವನ್ನು ಅಪ್‍ಲೋಡ್ ಮಾಡಿದ್ದಾನೆ ಮತ್ತು ನಂತರ ಅದನ್ನು ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅವರ ಖಾತೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಮೊದಲು ಅಪ್‍ಲೋಡ್ ಮಾಡಿದ್ದರಿಂದ ತನಿಖೆಗೆ ಸೇರಲು ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹಿರಿಯ ಅಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಕಿಕೆಟ್ ದೇವರು ಸಚಿನ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿ ಇಂದಿಗೆ 24 ವರ್ಷ

ನವೆಂಬರ್ 10 ರಂದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 465 (ನಕಲಿ ಶಿಕ್ಷೆ) ಮತ್ತು 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ) ಮತ್ತು ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್‍ನಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಮತ್ತು 66ಉ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಇನ್‍ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಡೌನ್‍ಲೋಡ್ ಮಾಡಿರುವುದಾಗಿ ಅವರು ಹೇಳಿದ್ದರೂ, ನಾವು ಅವರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಅಕಾರಿ ಹೇಳಿದರು. ಬಿಹಾರ ಮೂಲದ ಯುವಕನಿಗೆ ಐಎಫ್‍ಎಸ್‍ಒ ಘಟಕದ ಮುಂದೆ ಹಾಜರಾಗಲು ಮತ್ತು ತನ್ನ ಮೊಬೈಲ್ ಫೋನ್ ತರಲು ಕೇಳಲಾಯಿತು, ಅವರು ವೀಡಿಯೊವನ್ನು ಅಪ್‍ಲೋಡ್ ಮಾಡಲು ಬಳಸಿದ್ದಾರೆಂದು ಹೇಳಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಎಫ್‍ಐಆರ್ ದಾಖಲಿಸಿದ ಕೂಡಲೇ ಐಎಫ್‍ಎಸ್‍ಒ ಘಟಕವು ಆರೋಪಿಯನ್ನು ಗುರುತಿಸಲು ಯುಆರ್‍ಎಲ್ ಮತ್ತು ಇತರ ವಿವರಗಳನ್ನು ಪಡೆಯಲು ಮೆಟಾಗೆ ಪತ್ರ ಬರೆದಿದೆ.

ಕಿಕೆಟ್ ದೇವರು ಸಚಿನ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿ ಇಂದಿಗೆ 24 ವರ್ಷ

ನವದೆಹಲಿ,ನ.15- ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿ ಇಂದಿಗೆ 24 ವರ್ಷಗಳು ಸಂದಿದೆ.1989ರ ನ.15 ರಂದು ಸಚಿನ್ ತೆಂಡೂಲ್ಕರ್ ಅವರು ತಮ್ಮ 16ನೇ ವಯಸ್ಸಿನಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡುವ ಮೂಲಕ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟರು.

ಮೊದಲ ಪಂದ್ಯದಲ್ಲೆ ಪಾಕಿಸ್ತಾನದ ಘಟಾನುಘಟಿ ಬೌಲರ್‍ಗಳಾದ ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಸ್ ಅವರಂತಹ ವೇಗದ ಬೌಲಿಂಗ್ ಅನ್ನು ಎದುರಿಸಿದ ಅವರು ಮೊದಲ ಪಂದ್ಯದಲ್ಲಿ ಕೇವಲ 15 ರನ್ ಮಾಡಿ ಪೆವಿಲಿಯನ್ ಸೇರಿಕೊಂಡರು. ನಂತರ ಪುಟಿದೆದ್ದ ಸಚಿನ್ ಅವರು ವಿಶ್ವ ಮೆಚ್ಚುವ ಆಟಗಾರರಾಗಿ ರೂಪುಗೊಂಡು ಹಲವಾರು ಸಾಧನೆಗಳನ್ನು ಸಾಸಿ ಕಳೆದ 2013ರಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ನಂತರ ನಿವೃತ್ತಿ ಘೋಷಿಸಿದ್ದರು.

ಮಹಾರಾಷ್ಟ್ರ : ಮರಾಠ ಮೀಸಲಾತಿ ಹೋರಾಟಕ್ಕೆ ಮೊದಲ ಬಲಿ

ಸಚಿನ್ ಅವರನ್ನು ಸಾಮಾನ್ಯವಾಗಿ ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ, ಕ್ರಿಕೆಟ್ ಆಡಿದ ಶ್ರೇಷ್ಠ ಬ್ಯಾಟರ್ ಎಂದು ಪರಿಗಣಿಸಲಾಗಿದೆ. 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 48.52 ಸರಾಸರಿಯಲ್ಲಿ 34,357 ರನ್ ಗಳಿಸಿದ ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅವರು 100 ಶತಕಗಳನ್ನು ಮತ್ತು 164 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು. ಶತಕ ಸಿಡಿಸಿದ ಏಕೈಕ ಆಟಗಾರ.

ಎಕದಿನ ಪಂದ್ಯಗಳಲ್ಲಿ 18,426 ರನ್‍ಗಳು ಮತ್ತು ಟೆಸ್ಟ್‍ನಲ್ಲಿ 15,921 ರನ್‍ಗಳೊಂದಿಗೆ, ಸಚಿನ್ ಎರಡೂ ಸ್ವರೂಪಗಳಲ್ಲಿ ಅತ್ಯಕ ರನ್‍ಗಳನ್ನು ಹೊಂದಿದ್ದಾರೆ. ದ್ವಿಶತಕ ಬಾರಿಸಿದ ಮತ್ತು 200 ಟೆಸ್ಟ್ ಪಂದ್ಯಗಳನ್ನು ಆಡಿದ ಮೊದಲ ಆಟಗಾರ.

ಅವರು ತಮ್ಮ ಹೆಸರಿಗೆ 201 ಅಂತರಾಷ್ಟ್ರೀಯ ವಿಕೆಟ್‍ಗಳನ್ನು ಹೊಂದಿದ್ದಾರೆ, ಇದು ಅವರನ್ನು ಬಹಳ ಉಪಯುಕ್ತವಾದ ಅರೆಕಾಲಿಕ ಸ್ಪಿನ್ ಬೌಲಿಂಗ್ ಆಯ್ಕೆಯನ್ನಾಗಿ ಮಾಡಿದೆ. ಒಟ್ಟು 664 ಅಂತರಾಷ್ಟ್ರೀಯ ಪ್ರದರ್ಶನಗಳೊಂದಿಗೆ, ಅವರು ಸಾರ್ವಕಾಲಿಕ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ. ಅವರು 2011 ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.

ಸಚಿನ್ 2008-2013 ರವರೆಗಿನ ಆರು ಐಪಿಎಲ್ ಸೀಸನ್‍ಗಳನ್ನು ಮುಂಬೈ ಇಂಡಿಯನ್ಸ್‍ಗಾಗಿ ಆಡಿದ್ದಾರೆ, ಅಲ್ಲಿ ಅವರು 78 ಪಂದ್ಯಗಳಲ್ಲಿ 34.84 ಸರಾಸರಿಯಲ್ಲಿ ಒಟ್ಟು 2334 ರನ್ ಗಳಿಸಿದ್ದಾರೆ. ಸಚಿನ್ 119.82 ಸ್ಟ್ರೈಕ್ ರೇಟ್‍ನೊಂದಿಗೆ 29 ಸಿಕ್ಸರ್‍ಗಳು ಮತ್ತು 295 ಬೌಂಡರಿಗಳನ್ನು ಹೊಡೆದು 13 ಅರ್ಧಶತಕಗಳು ಮತ್ತು ನೂರು ಶತಕಗಳನ್ನು ಹೊಂದಿದ್ದಾರೆ. ಅವರು 2013 ರ ಆವೃತ್ತಿಯ ಪಂದ್ಯಾವಳಿಯನ್ನು ಫ್ರಾಂಚೈಸ್‍ನೊಂದಿಗೆ ಆಟಗಾರರಾಗಿ ಗೆದ್ದರು.

ಐಪಿಎಲ್ 2010 ರಲ್ಲಿ ಸಚಿನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರು 15 ಪಂದ್ಯಗಳಲ್ಲಿ 47.53 ಸರಾಸರಿಯಲ್ಲಿ 132.61 ಸ್ಟ್ರೈಕ್ ರೇಟ್‍ನಲ್ಲಿ 618 ರನ್ ಗಳಿಸಿದರು. ಅವರು ಆ ಋತುವಿನಲ್ಲಿ ಐದು ಅರ್ಧಶತಕಗಳನ್ನು ಗಳಿಸಿದರು ಮತ್ತು ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 89 ಆಗಿತ್ತು. ಆ ಋತುವಿನಲ್ಲಿ ಅವರು ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು.

ಅಕ್ರಮವಾಗಿ ವಿದ್ಯುತ್ ಸಂಪರ್ಕ : ಅಚಾತುರ್ಯಕ್ಕೆ ವಿಷಾದವಿದೆ, ದಂಡ ಕಟ್ಟುವೆ ಎಂದ ಕುಮಾರಸ್ವಾಮಿ

ಬೆಂಗಳೂರು, ನ.15-ದೀಪಾವಳಿ ಹಬ್ಬದ ನಿಮಿತ್ತ ಜೆ.ಪಿ.ನಗರದ ತಮ್ಮ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂಬ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮವಾರ ನಾನು ಬಿಡದಿಯ ತೋಟದಲ್ಲಿದ್ದೆ. ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.