Saturday, May 11, 2024
Homeರಾಜಕೀಯಪೋಸ್ಟರ್ ವಾರ್‌ಗೆ ನಾಂದಿಹಾಡುತ್ತಾ 'ಕರೆಂಟ್ ಕಳ್ಳ' ಎಂಬ ವಿವಾದಿತ ಪೋಸ್ಟರ್

ಪೋಸ್ಟರ್ ವಾರ್‌ಗೆ ನಾಂದಿಹಾಡುತ್ತಾ ‘ಕರೆಂಟ್ ಕಳ್ಳ’ ಎಂಬ ವಿವಾದಿತ ಪೋಸ್ಟರ್

ಬೆಂಗಳೂರು, ನ.15-ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದ ಗೋಡೆಗೆ ಕರೆಂಟ್ ಕಳ್ಳ ಎಂಬ ವಿವಾದಿತ ಪೋಸ್ಟರ್ ಹಂಟಿಸಿರುವುದು ಕೆಲ ಕಾಲಗೊಂದಲಕ್ಕೆ ಕಾರಣವಾಗಿತ್ತು. ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಪೋಸ್ಟರ್ ವಾರ್ ಸೃಷ್ಟಿಯಾಗುವ ಸಂಭವನಿಯತೆಯನ್ನು ಹೆಚ್ಚಿಸಿದೆ. ದೀಪಾವಳಿ ಹಬ್ಬದ ವಿದ್ಯುತ್ ಅಲಂಕಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರ ಜೆ.ಪಿ.ನಗರದ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎಂಬ ಆರೋಪಗಳಿವೆ. ಈ ಕುರಿತಂತೆ ದೂರು ದಾಖಲಾಗಿದೆ.

ಕುಮಾರಸ್ವಾಮಿಯವರು ಖುದ್ದು ಆರೋಪವನ್ನು ಒಪ್ಪಿಕೊಂಡಿದ್ದು, ಮನೆಯ ದೀಪಾಲಂಕಾರಕ್ಕೆ ಖಾಸಗಿ ಡೆಕೋರೆಟರ್‍ಗೆ ವಹಿಸಲಾಗಿತ್ತು. ಆತ ವಿದ್ಯುತ್ ಕಂಬದಿಂದ ನೇರ ಸಂಪರ್ಕ ಕಲ್ಪಿಸಿದ್ದಾನೆ, ಪ್ರಕರಣ ತಮ್ಮ ಗಮನಕ್ಕೆ ಬಂದ ತಕ್ಷಣ ಸರಿ ಪಡಿಸಲಾಗಿದೆ. ಈ ಸಂಬಂಧಿಸಿದ ದಂಡ ಪಾವತಿಸಲು ತಾವು ಸಿದ್ಧ ಎಂದಿದ್ದರು. ಮುಂದುವರೆದು ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ಅವರ ನಡುವೆ ಆರೋಪ ಪ್ರತ್ಯಾರೋಪಗಳು ನಡೆದಿದ್ದವು.

ವಿಜಯೇಂದ್ರ ಕೇವಲ ಬಿಎಸ್‍ವೈ ಬಣಕ್ಕೆ ಮಾತ್ರ ಅಧ್ಯಕ್ಷರೇ..? : ಕಾಂಗ್ರೆಸ್ ಲೇವಡಿ

ಪ್ರಕರಣದ ಬೆನ್ನಲ್ಲೆ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯ ತಡೆಗೋಡೆಗೆ ನಿನ್ನೆ ರಾತ್ರಿ ಪೋಸ್ಟರ್ ಅಂಟಿಸಲಾಗಿದೆ. ಆಕ್ಷೇಪಾರ್ಹ ಪೋಸ್ಟರ್ ಜೊತೆಗೆ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‍ವರೆಗೂ ಉಚಿತ ವಿದ್ಯುತ್‍ಸೌಲಭ್ಯ ಇದೆ. ಹೆಚ್ಚಿನ ವಿದ್ಯುತ್ ಕಳ್ಳತನ ಮಾಡಬೇಡಿ ಎಂದು ಮತ್ತೊಂದು ಪೋಸ್ಟರ್ ಅಂಟಿಸಲಾಗಿದೆ.

ಪೋಸ್ಟರ್ ಅಂಟಿಸಿರುವುದು ಗಮನಕ್ಕೆ ಬರುತ್ತಿದ್ದಂತೆ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವುಗಳನ್ನು ತೆರವು ಮಾಡಿದ್ದಾರೆ. ತಡರಾತ್ರಿ ಈ ಪೋಸ್ಟರ್ ಅಂಟಿಸಿರುವ ಸಾಧ್ಯತೆ ಇದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು, ಕೃತ್ಯ ಎಸಗಿದವರ ಪತ್ತೆಗೆ ಮುಂದಾಗಿದ್ದಾರೆ.

ಈ ಮೊದಲು ವಿಧಾನಸಭೆ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದ ಪೇಸಿಎಂ ಪೋಸ್ಟರ್ ಭಾರಿ ಪರಿಣಾಮ ಬೀರಿತ್ತು. ಈಗ ಜೆಡಿಎಸ್ ನಾಯಕ ವಿರುದ್ಧವೂ ಅದೇ ರೀತಿಯ ಪೋಸ್ಟರ್ ವಾರ್ ಕಂಡು ಬಂದಿದೆ.

RELATED ARTICLES

Latest News