Home Blog Page 1817

ಅಕ್ರಮವಾಗಿ ವಿದ್ಯುತ್ ಸಂಪರ್ಕ : ಅಚಾತುರ್ಯಕ್ಕೆ ವಿಷಾದವಿದೆ, ದಂಡ ಕಟ್ಟುವೆ ಎಂದ ಕುಮಾರಸ್ವಾಮಿ

ಬೆಂಗಳೂರು, ನ.15-ದೀಪಾವಳಿ ಹಬ್ಬದ ನಿಮಿತ್ತ ಜೆ.ಪಿ.ನಗರದ ತಮ್ಮ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕೊಡಲಾಗಿದೆ ಎಂಬ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮವಾರ ನಾನು ಬಿಡದಿಯ ತೋಟದಲ್ಲಿದ್ದೆ. ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್ ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ : ಮರಾಠ ಮೀಸಲಾತಿ ಹೋರಾಟಕ್ಕೆ ಮೊದಲ ಬಲಿ

ಛತ್ರಪತಿ ಸಂಭಾಜಿನಗರ, ನ.15 (ಪಿಟಿಐ) ಮರಾಠ ಮೀಸಲಾತಿ ಹೋರಾಟಕ್ಕೆ ಮೊದಲ ಬಲಿಯಾಗಿದೆ.ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ ಮೀಸಲಾತಿ ವಿಚಾರವಾಗಿ 23 ವರ್ಷದ ಮರಾಠಾ ಸಮುದಾಯದ ವ್ಯಕ್ತಿಯೊಬ್ಬ ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರ್ಲಾಕ್ ಗ್ರಾಮದ ನಿವಾಸಿ ದಾಜಿಬಾ ರಾಮದಾಸ್ ಕದಮ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.ಅವರು ಯಾವುದೋ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು ಮತ್ತು ನವೆಂಬರ್ 11 ರಂದು ಝೆಂಡಾ ಚೌಕ್ ಪ್ರದೇಶದಲ್ಲಿ ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದಾಜಿಬಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಸಂಬಂಕರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಹಾರಾ ಗ್ರೂಪ್‍ನ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

ಪೊಲೀಸರಿಗೆ ವ್ಯಕ್ತಿಯ ಬಳಿ ಚೀಟಿ ಸಿಕ್ಕಿದ್ದು, ಅದರಲ್ಲಿ ಇದು ನನಗೆ ಸರ್ಕಾರಿ ಉದ್ಯೋಗದ ಪ್ರಶ್ನೆ. ಏಕ್ ಮರಾಠಾ, ಲಕ್ಷ ಮರಾಠಾ ಎಂದು ಬರೆದುಕೊಂಡಿದ್ದರು ಎಂದು ಅಕಾರಿ ಹೇಳಿದರು.ಭಾಗ್ಯನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ ದಾಖಲಾಗಿದೆ ಎಂದರು. ಮಹಾರಾಷ್ಟ್ರದಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮರಾಠರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ.

ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಡಿಸೆಂಬರ್ 24 ರೊಳಗೆ ಮೀಸಲಾತಿ ಘೋಷಿಸಲು ರಾಜ್ಯ ಸರ್ಕಾರಕ್ಕೆ ಹೊಸ ಗಡುವು ನೀಡಿದ್ದು, ಮರಾಠ ಯುವಕರು ಮೀಸಲಾತಿಗಾಗಿ ಶಾಂತಿಯುತವಾಗಿ ಹೋರಾಡಬೇಕು ಮತ್ತು ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿದರು.

ಕರ್ನಾಟಕ ಕರ-ಕುಶಲ ವಸ್ತುಗಳ ಪ್ರದರ್ಶನಕ್ಕೆ ದೆಹಲಿಯಲ್ಲಿ ಶಾಪಿಂಗ್ ಕಟ್ಟಡ ಸಂಕೀರ್ಣ

ನವದೆಹಲಿ, ನ.15-ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಭಾರತ ಅಂತರಾಷ್ಟ್ರೀಯ ವ್ಯಾಪಾರ ಮೇಳ 2023ರ ಅಂಗವಾಗಿ ಇಲ್ಲಿನ ಪ್ರಗತಿ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಕರ್ನಾಟಕ ಪೆವಿಲಿಯನ್ ಮಾದರಿಯಲ್ಲಿ ದೆಹಲಿಯಲ್ಲಿ ಶಾಶ್ವತವಾಗಿ 50 ಮಳಿಗೆಗಳನ್ನು ಒಳಗೊಂಡ ಒಂದು ಶಾಪಿಂಗ್ ಕಟ್ಟಡ ಸಂಕೀರ್ಣವನ್ನು ಆದಷ್ಟು ಬೇಗ ನಿರ್ಮಾಣ ಮಾಡುವುದಾಗಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಪ್ರಕಟಿಸಿದ್ದಾರೆ.

ಪ್ರಗತಿ ಮೈದಾನದಲ್ಲಿ ಆಯೋಜಿಸಿದ್ದ ಭಾರತ ಅಂತರಾಷ್ಟ್ರೀಯ ವ್ಯಾಪಾರ ಮೇಳ 2023ರಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಕರ -ಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ದೆಹಲಿಯಲ್ಲಿ 50 ಮಳಿಗೆಗಳನ್ನು ಶಾಶ್ವತವಾಗಿ ನಿರ್ಮಾಣ ಮಾಡಲಾಗುವುದು. ಇದರಿಂದ ಕರ್ನಾಟಕದ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಕರ್ನಾಟಕ ಪೆವಿಲಿಯನ್ ನಲ್ಲಿದ್ದ 40ಕ್ಕೂ ಹೆಚ್ಚು ಮಳೆಗೆಗಳನ್ನು ಜಯಚಂದ್ರ ಅವರು ವೀಕ್ಷಿಸಿದರು. ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ್ದ ಗ್ರಾಮೀಣ ಗುಡಿ ಕೈಗಾರಿಕೆ ವಸ್ತುಗಳು, ಚನ್ನಪಟ್ಟಣದ ಗೊಂಬೆಗಳು, ಕೆಎಸ್‍ಐಸಿ ಮೈಸೂರು ರೇಷ್ಮೆ ಸೀರೆಗಳು, ಸಿರಿಧಾನ್ಯಗಳು, ಮರದಿಂದ ಮಾಡಿದ್ದ ಅಲಂಕಾರಿಕ ವಸ್ತುಗಳು, ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ತಯಾರಿಸಿದ್ದ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ಆಯುರ್ವೇದ ಔಷಗಳು, ವಿವಿಧ ಬಗೆಯ ತಿಂಡಿ-ತಿನಿಸುಗಳು ಸೇರಿದಂತೆ ಕರ್ನಾಟಕದಲ್ಲಿ ತಯಾರಿಸಿದ್ದ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿ ಮಾರಟಗಾರರಿಗೆ ಪ್ರೋತ್ಸಾಹ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಭವನ ನಿವಾಸಿ ಆಯುಕ್ತರಾದ ಎಂ.ಇಮ್. ಕೊಂಗ್ಲ ಜಮೀರ್ ಹಾಜರಿದ್ದರು.

ಸಹಾರಾ ಗ್ರೂಪ್‍ನ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

ಮುಂಬೈ.ನ.15-ದೇಶದ ಅದ್ಬುತ ಉದ್ಯಮಿ ಸಹಾರಾ ಗ್ರೂಪ್‍ನ ಸಂಸ್ಥಾಪಕ ಸುಬ್ರತಾ ರಾಯ್ ನಿಧನರಾಗಿದ್ದಾರೆ. ಆನಾರೋಗ್ಯದ ಕಾರಣ 75 ವರ್ಷದ ಸುಬ್ರತಾ ಅವರನ್ನು ನ. 12ರಂದು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಇಂದು ಮುಂಜಾನೆ ಹೃದಯಘಾತದಿಂದ ನಿಧನರಾಗಿದ್ದಾರೆ .

ಸುಬ್ರತಾ ರಾಯ್ ಅವರು ಮೆಟಬಾಲಿಕ್ ಕಾಯಿಲೆ, ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು, ದೀರ್ಘಕಾಲದ ಹೋರಾಟದ ಬಳಿಕ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ ,ಸೂರ್ತಿದಾಯಕ ನಾಯಕ ಹಾಗೂ ದೂರದೃಷ್ಟಿಯುಳ್ಳವರು ಎಂದು ಸಹಾರಾ ಇಂಡಿಯಾ ಕುಟುಂಬವು ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತಿದೆ,

ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ ರಾಯ್ ಅವರು ಕಾರ್ಖಾನೆಗಳು, ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಸೇರಿ ವಿವಿಧ ಕ್ಷೇತ್ರದಲ್ಲಿ ಛಾಪು ಮೂಡಿಸಿ ವಿಶಾಲವಾದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು.

ಪಾಕಿಸ್ತಾನದಲ್ಲಿ ಮತ್ತೊಬ್ಬ ಮಸೂದ್ ಆಪ್ತನನ್ನು ಹೊಸಕಿಹಾಕಿದ ‘ಪರಿಚಿತ ವ್ಯಕ್ತಿ’

ರಾಯ್ ಅವರ ಮೊದಲು ಗೋರಖ್‍ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಶಿಕ್ಷಣ ಪಡೆದು ವ್ಯವಹಾರ ಆರಂಭಿಸಿದರು 1976 ರಲ್ಲಿ ಸಹಾರಾ ಫೈನಾನ್ಸ್ ಸಂಸ್ಥೆ ಖರೀದಿಸಿ ನಂತರ 1978 ರ ಹೊತ್ತಿಗೆ ಅವರು ಅದನ್ನು ಸಹಾರಾ ಇಂಡಿಯಾ ಪರಿವಾರ್ ಆಗಿ ಪರಿವರ್ತಿಸಿದರು.

ರಾಯ್ ಅವರ ನಾಯಕತ್ವದಲ್ಲಿ, ಸಹಾರಾ ಹಲವಾರು ವ್ಯವಹಾರಗಳಿಗೆ ವಿಸ್ತರಿಸಿತು. 1992 ರಲ್ಲಿ ಹಿಂದಿ ಭಾಷೆಯ ಪತ್ರಿಕೆ ರಾಷ್ಟ್ರೀಯ ಸಹಾರಾವನ್ನು ಪ್ರಾರಂಭಿಸಿತು, 1990 ರ ದಶಕದ ಉತ್ತರಾರ್ಧದಲ್ಲಿ ಪುಣೆ ಬಳಿ ಮಹತ್ವಾಕಾಂಕ್ಷೆಯ ಆಂಬಿ ವ್ಯಾಲಿ ಸಿಟಿ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಸಹಾರಾ ಟಿವಿಯೊಂದಿಗೆ ದೂರದರ್ಶನ ಕ್ಷೇತ್ರವನ್ನು ಪ್ರವೇಶಿಸಿತು, ನಂತರ ಅದನ್ನು ಸಹಾರಾ ಒನ್ ಎಂದು ಮರುನಾಮಕರಣ ಮಾಡಲಾಯಿತು.

2000 ರ ದಶಕದಲ್ಲಿ, ಲಂಡನ್‍ನ ಗ್ರೋಸ್ವೆನರ್ ಹೌಸ್ ಹೋಟೆಲ್ ಮತ್ತು ನ್ಯೂಯಾರ್ಕ್ ನಗರದ ಪ್ಲಾಜಾ ಹೋಟೆಲ್‍ಗಳಂತಹ ಸಾಂಪ್ರದಾಯಿಕ ಆಸ್ತಿಗಳನ್ನು ಸ್ವಾೀನಪಡಿಸಿಕೊಳ್ಳುವ ಮೂಲಕ ಸಹಾರಾ ಅಂತಾರಾಷ್ಟ್ರೀಯ ಮಟ್ಟಕ್ಕೂ ಕಾಲಿಟ್ಟಿತ್ತು.

ಸಹಾರಾ ಕಂಪನಿಯಲ್ಲಿ 1ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ವ್ಯಾಪಾರ ಯಶಸ್ಸಿನ ಹೊರತಾಗಿಯೂ, ರಾಯ್ ಕಾನೂನು ಸವಾಲುಗಳನ್ನು ಎದುರಿಸಿದರು. 2014 ರಲ್ಲಿ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ದೊಂದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಅವರನ್ನು ಬಂಧನಕ್ಕೆ ಆದೇಶಿಸಿತ್ತು,

ಇದು ಸುದೀರ್ಘವಾದ ಕಾನೂನು ಹೋರಾಟಕ್ಕೆ ಕಾರಣವಾಯಿತು, ರಾಯ್ ತಿಹಾರ್ ಜೈಲಿನಲ್ಲಿ ಕಾಲ ಕಳೆದರು ಮತ್ತು ಅಂತಿಮವಾಗಿ ಪೆರೋಲ್ ಮೇಲೆ ಬಿಡುಗಡೆಯಾದರು.ಕ್ರೀಡಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು ದೇಶಪ್ರೇಮಿಯಾಗಿದ್ದಾರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-11-2023)

ನಿತ್ಯ ನೀತಿ : ಮಾತು, ಮನಸ್ಸು ಮತ್ತು ನಡೆಗಳು ಮನುಷ್ಯನನ್ನು ಸಜ್ಜನನನ್ನಾಗಿಸುತ್ತವೆ. ದಾರಿ ತಪ್ಪಿದರೆ ಅಧಮನನ್ನಾಗಿಸುತ್ತವೆ.

ಪಂಚಾಂಗ ಮಂಗಳವಾರ 14-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಅನುರಾಧಾ / ಯೋಗ: ಶೋಭನ / ಕರಣ: ಬಾಲವ

ಸೂರ್ಯೋದಯ : ಬೆ.06.18
ಸೂರ್ಯಾಸ್ತ : 05.50
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ವೃಷಭ: ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಕಡಿಮೆಯಾಗಲಿದೆ. ಕುಲದೇವರನ್ನು ಪ್ರಾರ್ಥಿಸಿ.
ಮಿಥುನ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.

ಕಟಕ: ನಿಮ್ಮ ವರ್ಚಸ್ಸಿನ ಪ್ರಭಾವದಿಂದ ವಿನೂತನ ವಾದ ಅವಕಾಶಗಳು ದೊರೆಯಲಿವೆ.
ಸಿಂಹ: ಮಾನಸಿಕ ಧೈರ್ಯ, ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಧ್ಯಾನ ಮಾಡುವುದು ಒಳಿತು.
ಕನ್ಯಾ: ಅನವಶ್ಯಕ ಗೊಂದಲಗಳನ್ನು ಮೈಮೇಲೆ ಎಳದುಕೊಳ್ಳದಿರಿ. ಸ್ನೇಹಿತರನ್ನು ನಂಬಿ.

ತುಲಾ: ಹಿಂಜರಿಕೆ ಮತ್ತು ಭಯದ ಸ್ವಭಾವ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ವೃಶ್ಚಿಕ: ಅನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ಧನುಸ್ಸು: ಹತ್ತಿರದ ಸ್ನೇಹಿತ ರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.

ಮಕರ: ಕಚೇರಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ.
ಕುಂಭ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.
ಮೀನ: ಕುಟುಂಬ ಕಲಹ ಉಂಟಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆಯಿಂದ ಮಾತನಾಡಿ.

ಪಾಕಿಸ್ತಾನದಲ್ಲಿ ಮತ್ತೊಬ್ಬ ಮಸೂದ್ ಆಪ್ತನನ್ನು ಹೊಸಕಿಹಾಕಿದ ‘ಪರಿಚಿತ ವ್ಯಕ್ತಿ’

ಇಸ್ಲಾಮಾಬಾದ್,ನ.13- ಪಾಕಿಸ್ತಾನದ ಮೂಲದ ಲಷ್ಕರ್ ತೋಯ್ಬಾ ಸಂಘಟನೆಯ ಹಿರಿಯ ಕಮಾಂಡರ್ ಅಕ್ರಂಖಾನ್ ಘಾಜಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದ ಕೆಲವು ದಿನಗಳಲ್ಲಿಯೇ ಮತ್ತೊಬ್ಬ ಉಗ್ರನ ಹತ್ಯೆ ನಡೆದಿದೆ. ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಹಾಗೂ ಮೌಲಾನಾ ಮಸೂದ್ ಅಜರ್‍ನ ಆಪ್ತ ಸ್ನೇಹಿತ ಮೌಲಾನಾ ರಹೀಮ್ ಉಲ್ಲಾ ತಾರೀಖ್‍ನನ್ನು ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಕರಾಚಿಯಲ್ಲಿ ಭಾರತ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಲು ತೆರಳುತ್ತಿದ್ದಾಗ ಕರಾಚಿಯ ಓರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಈತನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ.

ತಾರೀಖ್ ಪಾಕಿಸ್ತಾನದಲ್ಲಿ ಖ್ಯಾತ ಮೌಲಾನಾನಾಗಿದ್ದು, ಆತನ ಭಾಷಣ ಗಳನ್ನು ಕೇಳಲು ಸಾವಿರಾರು ಜನರು ಸೇರುತ್ತಾರೆ. ಧಾರ್ಮಿಕ ಸಮಾವೇಶಗಳಲ್ಲಿ ಆತ ಭಾರತ ವಿರೋಧಿ ಭಾಷಣಗಳನ್ನು ಮಾಡುತ್ತಿದ್ದ.

ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿ ರುವ ಉಗ್ರರ ದಾಳಿಗಳಿಗಾಗಿ ಲಷ್ಕರ್ ಸಂಘಟನೆಗೆ ಯುವಕರನ್ನು ಪ್ರಚೋದಿಸಿ, ನೇಮಕ ಮಾಡಿಕೊಳ್ಳುವ ಹೊಣೆ ಗಾರಿಕೆಯನ್ನು ನಿಭಾಯಿಸಿಸುತ್ತಿದ್ದ ಅಕ್ರಂಖಾನ್ ಘಾಜಿಯನ್ನು ಪಾಕಿಸ್ತಾನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ಬೈಕ್‍ನಲ್ಲಿ ಬಂದ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಜೈಶ್ ಎ ಮೊಹಮ್ಮದ್ ಸಂಘಟನೆಯ ಮಸೂದ್ ಅಜರ್‍ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ದೇವೇಗೌಡರು, ಎಸ್.ಎಂ.ಕೃಷ್ಣ ಹಾಗೂ ಬೊಮ್ಮಾಯಿ ಭೇಟಿ ಮಾಡಿದ ವಿಜಯೇಂದ್ರ

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ನಿಗೂಢ ರೀತಿಯಲ್ಲಿ ಕೆಲವು ಪ್ರಮುಖ ವ್ಯಕ್ತಿಗಳ ಹತ್ಯೆಗಳು ನಡೆಯುತ್ತಿವೆ. ಇವರೆಲ್ಲರೂ ಉಗ್ರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ಭಾರತ ವಿರೋ ಕೃತ್ಯಗಳಲ್ಲಿ ಭಾಗಿಯಾಗಿದ್ದವರೇ ಆಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸುಂಜುವಾನ್‍ನ ಭಾರತೀಯ ಸೇನಾ ಶಿಬಿರದ ಮೇಲೆ 2018ರಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರ ಖವಾಜಾ ಶಾಹಿದ್ ಅಲಿಯಾಸ್ ಮಿಯಾ ಮುಜಾಹಿದ್‍ನನ್ನು ಅಪಹರಿಸಿ ಶಿರಚ್ಛೇದ ಮಾಡಲಾಗಿತ್ತು. ಇದೇ ರೀತಿ ಧಾಂಗ್ರಿ ಪ್ರದೇಶದ ಉಗ್ರ ದಾಳಿಯ ಮಾಸ್ಟರ್‍ಮೈಂಡ್ ರಿಯಾಜ್ ಅಹ್ಮದ್ ಅಲಿಯಾಸ್ ಅಬು ಖಾಸಿಂನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಸೀದಿ ಯೊಂದರ ಒಳಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ರಾವಲ್ಪಿಂಡಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬಶೀರ್ ಅಹ್ಮದ್ ಪೀರ್ ಅಲಿಯಾಸ್ ಇಮ್ತಿಯಾಜ್ ಅಲಂನನ್ನು ಹತ್ಯೆ ಮಾಡಲಾಗಿತ್ತು.

ಈ ಹತ್ಯೆಗಳ ಹಿನ್ನೆಲೆ ಇಂದಿಗೂ ನಿಗೂಢ ವಾಗಿ ಉಳಿದಿದೆ. ಯಾವ ಸಂಘಟನೆಯೂ ಇವುಗಳಿಗೆ ಹೊಣೆ ಹೊತ್ತುಕೊಂಡಿಲ್ಲ.

ಟೆಕ್ಕಿಯೊಂದಿಗೆ ಅಸಭ್ಯ ವರ್ತನೆ

0

ಬೆಂಗಳೂರು,ನ.13- ರಾತ್ರಿ ಸಮಯದಲ್ಲಿ ಸ್ಕೂಟರ್‍ನಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್ ಜತೆ ಅಪರಿಚಿತ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

26 ವರ್ಷದ ಸಾಫ್ಟ್‍ವೇರ್ ಇಂಜಿನಿಯರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ರೋಡ್ ರೋಮಿಯೋ ಬಂಧನಕ್ಕೆ ಜಾಲ ಬೀಸಿದ್ದಾರೆ.

ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ

ನ.6ರಂದು ಯುವತಿ ರಾತ್ರಿ 10.30ರ ಸಮಯದಲ್ಲಿ ಸೌತ್ ಎಂಡ್ ವೃತ್ತದಲ್ಲಿ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‍ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾನೆ.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ರಸ್ತೆ ಬದಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಜಾತಿಜನಗಣತಿ ವರದಿ ಮಂಡನೆ : ಸತೀಶ್ ಜಾರಕಿಹೊಳಿ

ಬೆಳಗಾವಿ,ನ.13- ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಮೀಕ್ಷಾ ವರದಿ ಡಿ.15ಕ್ಕೆ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಗಳು ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ಅಧ್ಯಕ್ಷತೆಯ ಆಯೋಗದ ವರದಿಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಮೊದಲು ಅದು ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅದರಲ್ಲಿರುವ ಶಬ್ದಗಳೇನು, ಅಂಕಿಸಂಖ್ಯೆಗಳೇನು ಎಂಬ ಬಗ್ಗೆ ಸಾರ್ವಜನಿಕವಾಗಿ ಸದನದಲ್ಲಿ ಚರ್ಚೆಯಾಗಬೇಕು. ಎಲ್ಲರು ಒಪ್ಪಿದರೆ ವರದಿ ಅಂಗೀಕಾರವಾಗುತ್ತದೆ. ಇಲ್ಲವಾದರೆ ತಿರಸ್ಕಾರಗೊಳ್ಳಲಿದೆ. ಎಲ್ಲದಕ್ಕಿಂತ ಮೊದಲು ಅದರ ಬಗ್ಗೆ ಚರ್ಚೆ ಅಗತ್ಯ ಎಂದರು.

ಬೆಳಗಾವಿ ಅಧಿವೇಶನದಲ್ಲಿ ವರದಿ ಮಂಡನೆಯಾಗುವ ಸಾಧ್ಯತೆಗಳು ತೀವ್ರ ಕಡಿಮೆಯಿದೆ. ಡಿ.15ಕ್ಕೆ ವರದಿ ಸಲ್ಲಿಕೆಯಾಗಬಹುದು ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಸಚಿವರಿಗೆ ಈವರೆಗೂ ಹೈಕಮಾಂಡ್ ಸೂಚನೆ ಮಾಡಿಲ್ಲ. ಹಾಗಾಗಿ ಸಚಿವರ ಸ್ಪರ್ಧೆ ಇಲ್ಲ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಈಗಾಗಲೇ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆಸಕ್ತರಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಮೊದಲು ಅರ್ಜಿ ಸಲ್ಲಿಕೆಯಾಗಬೇಕು. ಆನಂತರ ನಿಗದಿತ ಮಾನದಂಡಗಳನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ

ಆಕಾಂಕ್ಷಿಗಳು ಸಮುದಾಯದಲ್ಲಿ ಜನಪ್ರಿಯತೆ ಹೊಂದಿರಬೇಕು, ಪಕ್ಷನಿಷ್ಠರಾಗಿರಬೇಕು, ಹೈಕಮಾಂಡ್ ಪರಿಗಣಿಸಬೇಕು. ಅಂಥವರನ್ನು ಆಯ್ಕೆ ಮಾಡಲಾಗುತ್ತದೆ. ಬೆಳಗಾವಿ ಲೋಕಸಭೆಗೆ ಲಿಂಗಾಯಿತ ಸಮುದಾಯದ ಬಗ್ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮುದಾಯದಲ್ಲಿ ಟಿಕೆಟ್‍ನೀಡುವ ಚರ್ಚೆಗಳಾಗಿವೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬ ಈವರೆಗೂ ಟಿಕೆಟ್ ಕೇಳಿಲಿಲ್ಲ ಎಂದು ಸ್ಪಷ್ಟಪಡಿಸಿದರು. ನಿಗಮಮಂಡಳಿ ನೇಮಕಾತಿಗೆ ಪಂಚರಾಜ್ಯಗಳ ಚುನಾವಣೆ ಮತ್ತು ವಿಧಾನಮಂಡಲದ ಅಧಿವೇಶನದ ಬಳಿಕ ಪ್ರಕ್ರಿಯೆ ನಡೆಯಲಿದೆ ಎಂದರು.

ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಾವು ಎಲ್ಲಿಯೂ ಹೇಳಿಕೆ ನೀಡಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಮುಖ್ಯಮಂತ್ರಿಯಾಗುವ ಬಗ್ಗೆ ಯಾವುದೇ ಆತುರವಿಲ್ಲ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಬೇಕು. ಆ ವೇಳೆ ಹೈಕಮಾಂಡ್ ನಾಯಕತ್ವವನ್ನು ಗುರುತಿಸಿದಾಗ ಮಾತ್ರ ತಾವು ಪ್ರಯತ್ನಿಸುವುದಾಗಿ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೇವೆ. ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಲು ತಾವು ಸದ್ಯಕ್ಕೆ ತಯಾರಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಮಿಕಲ್ ಗೋದಾಮಿಗೆ ಬೆಂಕಿ, 9ಮಂದಿ ಸಜೀವದಹನ

ಹೈದರಾಬಾದ್,ನ.13- ಇಲ್ಲಿನ ಕೆಮಿಕಲ್ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ಹೈದರಾಬಾದ್‍ನ ನಾಂಪಲ್ಲಿ ಪ್ರದೇಶದ ಬಜಾರ್‍ಘಾಟ್‍ನಲ್ಲಿರುವ ಅಪಾರ್ಟ್‍ಮೆಂಟ್ ಸಂಕೀರ್ಣದಲ್ಲಿರುವ ರಾಸಾಯನಿಕ ಗೋಡೌನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರ್ಘಟನೆ ಸಂಭವಿಸಿದೆ.

ಅಗ್ನಿ ಅವಘಡಕ್ಕೆ ಕಾರಣ ಮತ್ತು ಹಾನಿಯ ಪ್ರಮಾಣ ಇನ್ನೂ ಅಧಿಕೃತವಾಗಿ ತಿಳಿದು ಬರಬೇಕಿದೆ. ಮೊನ್ನೆಯಷ್ಟೇ ಹೈದರಾಬಾದ್‍ನ ಶಾಲಿಬಂಡಾದಲ್ಲಿರುವ ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ದೇವೇಗೌಡರು, ಎಸ್.ಎಂ.ಕೃಷ್ಣ ಹಾಗೂ ಬೊಮ್ಮಾಯಿ ಭೇಟಿ ಮಾಡಿದ ವಿಜಯೇಂದ್ರ

ಆರು ಅಗ್ನಿಶಾಮಕ ಟೆಂಡರ್‍ಗಳು ಮತ್ತು 30 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ರವಾನಿಸಿದ್ದಾರೆ ಮತ್ತು ಯಶಸ್ವಿಯಾಗಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ವರದಿಯಾಗಿದೆ.

ಕಟ್ಟೆಚ್ಚರದ ನಡವೆಯೂ ಸಿಕ್ಕಾಪಟ್ಟೆ ಸದ್ದುಮಾಡಿದ ರಾಸಾಯನಿಕ ಪಟಾಕಿಗಳು

ಬೆಂಗಳೂರು,ನ.13- ರಾಜ್ಯ ಸರ್ಕಾರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟೆಚ್ಚರದ ಹೊರತಾಗಿಯೂ ನಿನ್ನೆ ಮತ್ತೆ ರಾಸಾಯನಿಕ ಪಟಾಕಿಗಳೇ ಅಬ್ಬರಿಸಿವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅ.17ರಂದು ಸುತ್ತೋಲೆ ಹೊರಡಿಸಿ ಪಟಾಕಿಗಳ ಬಳಕೆ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿತ್ತು.

ಸುಪ್ರೀಂಕೋರ್ಟ್ 2018ರಲ್ಲಿ ನೀಡಿದ್ದ ನಿರ್ದೇಶನಗಳ ಪ್ರಕಾರ ಶಬ್ದ ಹಾಗೂ ವಾಯುಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಬಳಸಲು ಅವಕಾಶ ಇಲ್ಲ. ಜೊತೆಗೆ ರಾತ್ರಿ 8ರಿಂದ 10 ಗಂಟೆವರೆಗೂ ಮಾತ್ರ ಹಸಿರು ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳು, ಎಸ್ಪಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆಗಳನ್ನು ರಚಿಸಿತ್ತು. ಈ ಕಾರ್ಯಪಡೆಗಳು ರಾಜ್ಯಾದ್ಯಂತ ಪರಿಶೀಲನೆ ನಡೆಸಿ ಪರಿಸರಕ್ಕೆ ಹಾನಿ ಮಾಡುವ ಪಟಾಕಿಗಳ ಸಂಗ್ರಹವನ್ನು ತಡೆಯಲು ಯತ್ನಿಸಿದರು.

ದೀಪಾವಳಿ ‘ಗಿಫ್ಟ್’ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ

ಹಸಿರು ಪಟಾಕಿಗಳ ಪತ್ತೆಹಚ್ಚುವಿಕೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಆದರೆ ಈ ಎಲ್ಲ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಧಿಕಾರಿಗಳ ಕಠಿಣ ನಿಯಮಾವಳಿಗಳು ಎಂದಿನಂತೆ ಜನಸಾಮಾನ್ಯರಿಗೆ ಬರೆ ಎಳೆದಿದೆ. ಸರ್ಕಾರದ ನಿಯಮಗಳನ್ನು ಮುಂದಿಟ್ಟುಕೊಂಡು ಮಾರಾಟಗಾರರು ಪಟಾಕಿಯ ದರಗಳನ್ನು ಏರಿಕೆ ಮಾಡಿಕೊಂಡಿದ್ದಾರೆ. ಹಸಿರು ಪಟಾಕಿಗಳು ದುಬಾರಿ ಯಾಗಿರುವುದರಿಂದ ಮತ್ತು ಅವುಗಳು ದೀಪಾವಳಿಯ ಅಬ್ಬರಕ್ಕೆ ಪೂರಕವಾಗಿ ಇಲ್ಲದಿರುವುದರಿಂದ ಸಾರ್ವಜನಿಕರು ಮತ್ತೆ ರಾಸಾಯನಿಕ ಮಿಶ್ರಿತ ಪಟಾಕಿಗಳ ಮೊರೆ ಹೋಗಿದ್ದಾರೆ.

ನಿನ್ನೆ ತಡರಾತ್ರಿಯವರೆಗೂ ಪಟಾಕಿಗಳ ಅಬ್ಬರಿಸಿವೆ. ವಾಯು ಮಾಲಿನ್ಯ ಉಸಿರುಗಟ್ಟಿಸುವಂತಾಗಿತ್ತು. ಹಸಿರು ಪಟಾಕಿಗಳ ಬಳಕೆ ಕ್ಷೀಣವಾಗಿತ್ತು. ಇಂದು ಮತ್ತು ನಾಳೆ ದೀಪಾವಳಿಯ ಸಂಭ್ರಮ ಬಾಕಿಯಿದ್ದು, ಪಟಾಕಿಗಳ ಅಬ್ಬರ ಖಾಯಂ ಎಂಬಂತಾಗಿದೆ.

ಈ ಹಿಂದೆ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದು ದುರಂತ ಸಂಭವಿಸಿದ್ದರಿಂದಾಗಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ನಿಯಮಾವಳಿಗಳನ್ನು ಬಿಗಿಗೊಳಿಸಿತ್ತು. ಆದರೆ ಅದು ನಿರೀಕ್ಷಿತ ಪರಿಣಾಮ ಬೀರಿಲ್ಲ. ಭಾವನಾತ್ಮಕ ವಿಷಯಗಳಾಗಿರುವುದರಿಂದ ಅಧಿಕಾರಿಗಳು ಕೂಡ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರು ಪರಿಸರ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ ದೀಪಾವಳಿಯ ಸಂಭ್ರಮದಲ್ಲಿ ಮುಳುಗಿದ್ದಾರೆ.