Home Blog Page 1827

ಕೆಸಿಆರ್ 59 ಕೋಟಿ ರೂ. ಆಸ್ತಿ ಒಡೆಯ

ಹೈದರಾಬಾದ್, ನ.10 (ಪಿಟಿಐ) – ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಹಿಂದೂ ಅವಿಭಜಿತ ಕುಟುಂಬ ಸೇರಿದಂತೆ ಸುಮಾರು 59 ಕೋಟಿ ರೂಪಾಯಿ ಮೌಲ್ಯದ ಕುಟುಂಬದ ಆಸ್ತಿ ಮತ್ತು 25 ಕೋಟಿ ರೂಪಾಯಿಗಳ ಹೊಣೆಗಾರಿಕೆಯನ್ನು ಘೋಷಿಸಿದ್ದಾರೆ.

ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್‍ನಿಂದ ಈ ವರದಿ ಬಹಿರಂಗಗೊಂಡಿದ್ದರೂ ಅವರ ಬಳಿ ಸ್ವಂತ ಕಾರಿಲ್ಲ ಎನ್ನುವುದು ವಿಶೇಷವಾಗಿದೆ.

ಅವರ ವಿರುದ್ಧ ಒಂಬತ್ತು ಪ್ರಕರಣಗಳು ಬಾಕಿ ಉಳಿದಿವೆ, ಎಲ್ಲವೂ ತೆಲಂಗಾಣ ರಾಜ್ಯ ಆಂದೋಲನದ ಸಮಯದಲ್ಲಿ ದಾಖಲಾಗಿವೆ ಮತ್ತು ಅವರು ಯಾವುದೇ ಕ್ರಿಮಿನಲ್ ಅಪರಾಧಕ್ಕೆ ಶಿಕ್ಷೆಗೊಳಗಾಗಿಲ್ಲ.
ಅವರ ಪತ್ನಿ ಶೋಭಾ ಅವರ ಹೆಸರಿನಲ್ಲಿರುವ ಚರ ಆಸ್ತಿಗಳ ಒಟ್ಟು ಮೌಲ್ಯವು ಏಳು ಕೋಟಿ ರೂ.ಗಿಂತ ಹೆಚ್ಚಿದ್ದು, ಅವರ ಹಿಂದೂ ಅವಿಭಜಿತ ಕುಟುಂಬದ ಒಂಬತ್ತು ಕೋಟಿ ರೂ. ಹಾಗೂ ಆಕೆಯ ಬಳಿ ಸುಮಾರು 1.5 ಕೋಟಿ ಮೌಲ್ಯದ 2.81 ಕೆಜಿ ಚಿನ್ನಾಭರಣ, ವಜ್ರ ಮತ್ತಿತರ ಬೆಲೆಬಾಳುವ ವಸ್ತುಗಳು ಇವೆ.

ಮೊಹಮ್ಮದ್ ಶಮಿಯನ್ನು ಮದುವೆಯಾಗಲು ಷರತ್ತು ವಿಧಿಸಿದ ಬಾಲಿವುಡ್ ನಟಿ

ರಾವ್ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 8.50 ಕೋಟಿ ರೂ.ಗಳಾಗಿದ್ದು, ಹೆಚ್‍ಯುಎಫ್ ಹೆಸರಿನಲ್ಲಿ ಸುಮಾರು 15 ಕೋಟಿ ರೂ.ಗಳಿವೆ. ಐಟಿ ರಿಟನ್ರ್ಸ್ ಪ್ರಕಾರ ರಾವ್ ಅವರ ಒಟ್ಟು ಆದಾಯವು ಮಾರ್ಚ್ 31, 2023 ರ ವೇಳೆಗೆ 1.60 ಕೋಟಿ ರೂ.ಗಿಂತ ಹೆಚ್ಚಿದ್ದರೆ, ಮಾರ್ಚ್ 31, 2019 ರ ವೇಳೆಗೆ ಇದು ರೂ. 1.74 ಕೋಟಿ ಆಗಿತ್ತು. ಅಫಿಡವಿಟ್‍ನಲ್ಲಿ ರಾವ್ ಅವರು ಕೃಷಿಕ ಎಂದು ತೋರಿಸಿದರು ಮತ್ತು ಅವರ ಶೈಕ್ಷಣಿಕ ಅರ್ಹತೆ ಬಿಎ ಆಗಿದೆ.

ಏತನ್ಮಧ್ಯೆ, ರಾವ್ ಅವರ ಪುತ್ರ ಮತ್ತು ಬಿಆರ್‍ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಮತ್ತು ಅವರ ಕುಟುಂಬವು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಸಲ್ಲಿಸಿದ ಅಫಿಡವಿಟ್‍ನಲ್ಲಿ ಒಟ್ಟು 54.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಹಿರಂಗಪಡಿಸಿದ್ದಾರೆ.

ಅಫಿಡವಿಟ್ ಪ್ರಕಾರ, ರಾಮರಾವ್ ಅವರ ಪತ್ನಿ ಶೈಲಿಮಾ ಅವರು 4.5 ಕೆಜಿ ಚಿನ್ನಾಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ಸೇರಿದಂತೆ 26.4 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಅದೇ ರೀತಿ, 2018 ರಲ್ಲಿ 1.30 ಕೋಟಿ ರೂಪಾಯಿಗಳ ಸ್ಥಿರಾಸ್ತಿಗಳಿಗೆ ಹೋಲಿಸಿದರೆ ರಾಮರಾವ್ ಅವರ 10.4 ಕೋಟಿ ರೂಪಾಯಿಗಳ ಸ್ಥಿರ ಆಸ್ತಿ (ಮಾರುಕಟ್ಟೆ ಮೌಲ್ಯ) ಹೆಚ್ಚಾಗಿದೆ. ಅವರ ಪತ್ನಿ 7.42 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ ಮತ್ತು ಅವರ ಮಗಳು 46.7 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

‘ಧನತೇರಸ್’ ಆಚರಣೆಯ ವಿಶೇಷತೆ ಏನು ಗೊತ್ತೇ..?

ಧನತ್ರಯೋದಶಿ ಇದನ್ನೇ ಆಡುಭಾಷೆಯಲ್ಲಿ ‘ಧನತೇರಸ್’ ಎನ್ನುತ್ತಾರೆ. ಈ ದಿನ ವ್ಯಾಪಾರಿಗಳು ತಿಜೋರಿಯನ್ನು ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ-ಪುಸ್ತಕಗಳನ್ನು ಈ ದಿನವೇ ತರುತ್ತಾರೆ. ನಮ್ಮ ಜೀವನವು ಧನದಿಂದಾಗಿ ಸರಿಯಾಗಿ ನಡೆದಿರುತ್ತದೆ, ಆದುದರಿಂದ ಈ ಧನವನ್ನು ಪೂಜಿಸುತ್ತಾರೆ. ಇಲ್ಲಿ ‘ಧನ’ವೆಂದರೆ ಶುದ್ಧ ಲಕ್ಷ್ಮೀ. ಶ್ರೀಸೂಕ್ತದಲ್ಲಿ ವಸು, ಜಲ, ವಾಯು, ಅಗ್ನಿ ಮತ್ತು ಸೂರ್ಯ ಇವುಗಳಿಗೆ ಧನವೆಂದೇ ಹೇಳಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅವಳೇ ನಿಜವಾದ ಲಕ್ಷಿ ! ಇಲ್ಲದಿದ್ದಲ್ಲಿ ಅಲಕ್ಷ್ಮೀಯಿಂದ ಅನರ್ಥವಾಗುತ್ತದೆ.

ಧನತ್ರಯೋದಶಿಯ ದಿನದಂದು ಹೊಸ ಚಿನ್ನವನ್ನು ಖರೀದಿಸುವ ವಾಡಿಕೆಯಿದೆ. ಇದರಿಂದ ವರ್ಷವಿಡೀ ಮನೆಯಲ್ಲಿ ಧನಲಕ್ಷ್ಮೀ ವಾಸಿಸುತ್ತಾಳೆ. ವಾಸ್ತವದಲ್ಲಿ ಲಕ್ಷ್ಮೀ ಪೂಜೆಯ ಸಮಯದಲ್ಲಿ ಇಡೀ ವರ್ಷದ ಜಮಾಖರ್ಚನ್ನು ಕೊಡುವುದಿರುತ್ತದೆ. ಧನತ್ರಯೋದಶಿಯವರೆಗೆ ಬಾಕಿ ಉಳಿದ ಸಂಪತ್ತನ್ನು ಪ್ರಭುಕಾರ್ಯಕ್ಕಾಗಿ ಖರ್ಚು ಮಾಡಿದರೆ, ಸತ್‌ಕಾರ್ಯಕ್ಕಾಗಿ ಧನವು ಖರ್ಚಾಗುವುದರಿಂದ ಧನಲಕ್ಷ್ಮೀಯು ಕೊನೆತನಕ ಲಕ್ಷ್ಮೀರೂಪದಲ್ಲಿ ಮನೆಯಲ್ಲಿ ಇರುತ್ತಾಳೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-11-2023)

ಧನವೆಂದರೆ ಹಣ. ಈ ಹಣವು ಕಪ್ಪು ಹಣವಾಗಿರದೇ, ಸ್ವತಃ ಕಷ್ಟದಿಂದ ಗಳಿಸಿದ ಮತ್ತು ಇಡೀ ವರ್ಷದಲ್ಲಿ ಒಂದೊಂದು ಪೈಸೆಯನ್ನು ಜಮೆ ಮಾಡಿದ್ದಾಗಿರಬೇಕು. ಈ ಹಣದಲ್ಲಿ ಕನಿಷ್ಟಪಕ್ಷ ೧/೬ ರಷ್ಟು ಭಾಗವನ್ನು ಪ್ರಭುಕಾರ್ಯಕ್ಕಾಗಿ ಖರ್ಚು ಮಾಡಬೇಕು, ಎಂದು ಶಾಸ್ತ್ರವು ಹೇಳುತ್ತದೆ. ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ವರ್ಷದ ಕೊನೆಯಲ್ಲಿ ತಮ್ಮ ಸಂಪೂರ್ಣ ಖಜಾನೆಯನ್ನು ಸತ್ಪಾತ್ರರಿಗೆ ದಾನ ಮಾಡಿ ಖಾಲಿ ಮಾಡುತ್ತಿದ್ದರು.

ಆಗ ಅವರಿಗೆ ನಾವು ಧನ್ಯರಾದೆವೆಂದು ಅನಿಸುತ್ತಿತ್ತು. ಇದರಿಂದಾಗಿ ಜನತೆ ಹಾಗೂ ರಾಜನ ನಡುವಿನ ಸಂಬಂಧವು ಕೌಟುಂಬಿಕ ಸ್ವರೂಪದ್ದಾಗಿತ್ತು. ರಾಜನ ಖಜಾನೆಯು ಜನತೆಯದ್ದಾಗಿದ್ದು ರಾಜನು ಕೇವಲ ಆ ಖಜಾನೆಯ ಸಂರಕ್ಷಕನಾಗಿರುತ್ತಿದ್ದನು. ಇದರಿಂದ ಜನರು ಸಹ ಯಾವುದೇ ಪ್ರತಿಬಂಧವಿಲ್ಲದೇ ತೆರಿಗೆಯನ್ನು ನೀಡುತ್ತಿದ್ದರು. ಸಹಜವಾಗಿಯೇ ಖಜಾನೆಯು ಪುನಃ ತುಂಬುತ್ತಿತ್ತು. ಧನವನ್ನು ಸತ್‌ಕಾರ್ಯಕ್ಕಾಗಿ ವಿನಿಯೋಗಿಸುವುದರಿಂದ ಆತ್ಮಬಲವು ಹೆಚ್ಚಾಗುತ್ತದೆ.

ಹಣವೆಂದರೆ ಕೇವಲ ಧನವಾಗಿಲ್ಲ, ಪಂಚಮಹಾಭೂತಗಳೇ ನಿಜವಾದ ಧನಗಳಾಗಿವೆ. ಯಾವುದರಿಂದ ನಮ್ಮ ಜೀವನದ ಪೋಷಣೆಯು ಸುವ್ಯವಸ್ಥಿತವಾಗಿ ನಡೆಯುತ್ತದೆಯೋ ಅಂತಹ ಧನವನ್ನು ಪೂಜಿಸುತ್ತಾರೆ. ಇಲ್ಲಿ ಧನ ಎಂದರೆ ಶುದ್ಧ ಲಕ್ಷ್ಮೀ. ಶ್ರೀಸೂಕ್ತದಲ್ಲಿ ಭೂಮಿ, ಜಲ, ವಾಯು, ಅಗ್ನಿ, ಸೂರ್ಯ ಇವುಗಳನ್ನು ಧನವೆಂದೇ ಕರೆಯಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅದುವೇ ನಿಜವಾದ ಲಕ್ಷ್ಮೀ.

ಧನ್ವಂತರಿ ಜಯಂತಿ : ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ವೈದ್ಯರು ಈ ದಿನ ಧನ್ವಂತರಿಯ ಪೂಜೆಯನ್ನು ಮಾಡುತ್ತಾರೆ. ಬೇವಿನ ಎಲೆಯ ಸಣ್ಣ-ಸಣ್ಣ ತುಂಡು ಮತ್ತು ಸಕ್ಕರೆಯನ್ನು ‘ಪ್ರಸಾದ’ವೆಂದು ಎಲ್ಲರಿಗೂ ಕೊಡುತ್ತಾರೆ. ಇದರಲ್ಲಿ ಬಹುದೊಡ್ಡ ಅರ್ಥವಿದೆ. ಬೇವು ಅಮೃತದಿಂದ ಉತ್ಪನ್ನವಾಗಿದೆ.

ಧನ್ವಂತರಿಯು ಅಮೃತತತ್ವವನ್ನು ಕೊಡುವವನಾಗಿದ್ದಾನೆ ಎಂಬುದು ಇದರಿಂದ ಸ್ಪಷ್ಟ ವಾಗುತ್ತದೆ. ಪ್ರತಿದಿನ ಬೇವಿನ ಐದಾರು ಎಲೆಗಳನ್ನು ತಿಂದರೆ ರೋಗಗಳು ಬರುವ ಸಂಭವವೇ ಕಡಿಮೆಯಾಗುತ್ತದೆ. ಬೇವಿಗೆ ಇಷ್ಟೊಂದು ಮಹತ್ವವಿರುವುದರಿಂದಲೇ ಈ ದಿನ ಅದನ್ನು ಧನ್ವಂತರಿಯ ಪ್ರಸಾದವೆಂದು ಕೊಡುತ್ತಾರೆ. ಬೇವಿನ ಆಧ್ಯಾತ್ಮಿಕ ಮಹತ್ವವನ್ನು ಸನಾತನದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’ ಇದರಲ್ಲಿ ಕೊಡಲಾಗಿದೆ.

ಯಮದೀಪದಾನ : ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಧನತ್ರಯೋದಶಿಯಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು.

ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿಡಬೇಕು. ಆನಂತರ ಮುಂದಿನ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂದಿಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ||

ಅರ್ಥ : ಧನತ್ರಯೋದಶಿಯಂದು ಯಮನಿಗೆ ನೀಡಿದ ದೀಪದ ದಾನದಿಂದ ಅವನು ಪ್ರಸನ್ನನಾಗಿ ನನ್ನನ್ನು ಮೃತ್ಯುಪಾಶ ಮತ್ತು ಶಿಕ್ಷೆಯಿಂದ ಮುಕ್ತಗೊಳಿಸಲಿ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

ಜಾತಿ ಗಣತಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ಬಿಜೆಪಿ

ನವದೆಹಲಿ,ನ.10- ಪ್ರತಿಪಕ್ಷಗಳ ಜಾತಿ ಗಣತಿ ವಿಚಾರದಿಂದ ತಲೆ ಕೆಡಿಸಿಕೊಂಡಿರುವ ಬಿಜೆಪಿ ಮುಖಂಡರುಗಳು ಒಬಿಸಿ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಭಾರಿ ಕಸರತ್ತು ನಡೆಸಿದೆ. ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿದಂತೆ ಉನ್ನತ ನಾಯಕರು ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರೊಂದಿಗೆ ಮಹತ್ವದ ಸಭೇ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ವಾರ ದೆಹಲಿಯಲ್ಲಿ ಈ ನಾಯಕರುಗಳು ಭೇಟಿಯಾಗಿ ವಿವರಗಳನ್ನು ಚರ್ಚಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 10 ರಾಜ್ಯಗಳ ನಲವತ್ತು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎನ್‍ಡಿಎ ಮಿತ್ರಪಕ್ಷಗಳಾಗಿದ್ದ ಅಪ್ನಾ ದಳ (ಸೋನೆಲಾಲ), ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ, ನಿಶಾದ್ ಪಕ್ಷ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ ಸೇರಿದಂತೆ ಅದರ ಹಲವಾರು ಪಕ್ಷಗಳು ಜಾತಿ ಗಣತಿ ವಿಷಯವನ್ನು ಬೆಂಬಲಿಸಿವೆ ಎಂಬ ಅಂಶವು ಬಿಜೆಪಿಯ ಒತ್ತಡ ಹೆಚ್ಚಿಸಿದೆ.

ಕಲಾ ಲೋಕದ ರಾಯಭಾರಿಗೆ 68ನೇ ಹುಟ್ಟುಹಬ್ಬ

ಒಬಿಸಿ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಬಿಹಾರದ ಜನಸಂಖ್ಯೆಯ ಶೇ.60 ಕ್ಕಿಂತ ಹೆಚ್ಚಾಗಿದೆ ಎಂಬ ವರದಿಯು ಭಾರತದ ಜನಸಂಖ್ಯೆಯ ಕನಿಷ್ಠ 40 ಪ್ರತಿಶತದಷ್ಟಿರುವುದು ವಿಶೇಷ. ಮೂಲಗಳ ಪ್ರಕಾರ ದೆಹಲಿ ಸಭೆ (ಮತ್ತು ಬಿಹಾರ ವರದಿ) ಜಾತಿ ಜನಗಣತಿ ಸಮಸ್ಯೆಯನ್ನು ಪರಿಹರಿಸಲು ಬಿಜೆಪಿಯನ್ನು ಕ್ರಿಯಾತ್ಮಕ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಧಂತೇರಸ್ ದಿನದ ಶುಭ ಕೋರಿದ ಮೋದಿ

ನವದೆಹಲಿ,ನ.10- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಧಂತೇರಸ್ ಹಬ್ಬದ ಶುಭಾಷಯ ಕೋರಿದ್ದಾರೆ. ದೇಶದಲ್ಲಿರುವ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ, ಆರೋಗ್ಯ ಮತ್ತು ಸಮೃದ್ಧಿಯ ಸಂಕೇತವಾದ ಧಂತೇರಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಧನ್ವಂತರಿಯ ಆಶೀರ್ವಾದದೊಂದಿಗೆ, ನೀವೆಲ್ಲರೂ ಆರೋಗ್ಯವಾಗಿ, ಸಮೃದ್ಧವಾಗಿ ಮತ್ತು ಸಂತೋಷದಿಂದ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವು ಹೊಸ ಶಕ್ತಿಯನ್ನು ಪಡೆಯುವುದನ್ನು ಮುಂದುವರೆಸಿದೆ ಎಂದು ಪ್ರಧಾನಿ ಮೋದಿ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಧಂತೇರೆಸ್ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ, ಇದನ್ನು ದೇಶದಾದ್ಯಂತ ಅಪಾರ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ.

ಕಲಾ ಲೋಕದ ರಾಯಭಾರಿಗೆ 68ನೇ ಹುಟ್ಟುಹಬ್ಬ

ಸಿದ್ಧಿ ವಿನಾಯಕ ಗಣೇಶ, ಸಂಪತ್ತಿನ ದೇವತೆ ಮಹಾಲಕ್ಷ್ಮೀ ಮತ್ತು ಕುಬೇರ ಅವರನ್ನು ಪೂಜಿಸಲು ಸಮರ್ಪಿತವಾದ ಧಂತೇರಸಾ ದಿನದಂದು ಚಿನ್ನಾಭರಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಖರೀದಿಸಿದರೆ ಮಂಗಳಕರ ಎಂದು ಭಾವಿಸಲಾಗಿದೆ.

ಈ ದಿನದಂದು ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಪಾತ್ರೆಗಳು, ಅಡುಗೆ ಸಾಮಾನುಗಳು, ವಾಹನಗಳು, ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತಿತರ ವಸ್ತುಗಳ ಜೊತೆಗೆ ಪೊರಕೆಗಳ ಖರೀದಿಯನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇನ್ನೋವಾ ಕಾರಿನಿಂದ ಸರಣಿ ಅಪಘಾತ, ಮೂವರ ದುರ್ಮರಣ

ಮುಂಬೈ, ನ.10 (ಪಿಟಿಐ) ಇಲ್ಲಿನ ಬಾಂದ್ರಾ-ವರ್ಲಿ ಸೀ ಲಿಂಕ್‍ನಲ್ಲಿ ವೇಗವಾಗಿ ಬಂದ ಟೊಯೊಟಾ ಇನ್ನೋವಾ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಉತ್ತರ ದಿಕ್ಕಿನ ಲೇನ್‍ನಲ್ಲಿ ಸಮುದ್ರ ಸಂಪರ್ಕದ ಬಾಂದ್ರಾ ತುದಿಯಲ್ಲಿರುವ ಟೋಲ್ ಬೂತ್‍ಗೆ ಸುಮಾರು 100 ಮೀಟರ್ ಮೊದಲು ಇನ್ನೋವಾ ಮೊದಲು ಮರ್ಸಿಡಿಸ್ ಬೆಂಜ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ವಲಯ 9 ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕೃಷ್ಣಕಾಂತ್ ಉಪಾಧ್ಯಾಯ ಹೇಳಿದ್ದಾರೆ.

ಮೊಹಮ್ಮದ್ ಶಮಿಯನ್ನು ಮದುವೆಯಾಗಲು ಷರತ್ತು ವಿಧಿಸಿದ ಬಾಲಿವುಡ್ ನಟಿ

ಇನ್ನೋವಾ ಚಾಲಕ ಸೇರಿದಂತೆ ಗಾಯಗೊಂಡಿರುವ ಆರು ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನೋವಾ ಹೊರತುಪಡಿಸಿ ಇನ್ನೂ ಐದು ವಾಹನಗಳು ಸಮುದ್ರ ಕೊಂಡಿಯಲ್ಲಿ ಅಪಘಾತಕ್ಕೀಡಾಗಿವೆ ಎಂದು ಅವರು ಹೇಳಿದರು.ಅಪಘಾತದ ಸಮಯದಲ್ಲಿ ಚಾಲಕ ಸೇರಿದಂತೆ ಏಳು ಜನರು ಇನ್ನೋವಾದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಮೇರೆಗೆ ಇನ್ನೋವಾ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-11-2023)

ನಿತ್ಯ ನೀತಿ : ಜಗತ್ತಿನಲ್ಲಿ ಎಲ್ಲರನ್ನೂ ಸಮಾನವಾಗಿ ನೋಡುವುದು ಗಡಿಯಾರ ಮಾತ್ರ. ಬಡವರಿಗೂ ಒಂದೇ… ಶ್ರೀಮಂತರಿಗೂ ಒಂದೇ…

ಪಂಚಾಂಗ ಶುಕ್ರವಾರ 10-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಹಸ್ತ / ಯೋಗ: ವಿಷ್ಕಂಭ / ಕರಣ: ಗರಜೆ

ಸೂರ್ಯೋದಯ : ಬೆ.06.16
ಸೂರ್ಯಾಸ್ತ : 05.51
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಬಂಧುಗಳೊಂದಿಗೆ ವೈಮನಸ್ಸು ಉಂಟಾಗ ದಂತೆ ನೋಡಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವೃಷಭ: ವ್ಯಾಪಾರದಲ್ಲಿ ಎಚ್ಚರಿಕೆಯಿಂದಿರಿ. ಉತ್ತಮ ಫಲಿತಾಂಶಗಳನ್ನು ನೋಡಬಹುದು.
ಮಿಥುನ: ದಾಂಪತ್ಯದಲ್ಲಿ ಸಮಸ್ಯೆ ಉಂಟಾಗ ಬಹುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಒಳಿತು.

ಕಟಕ: ದೂರ ಪ್ರಯಾಣ ಮಾಡುವಿರಿ. ಸಹೋದರರೊಂದಿಗೆ ವಾದ-ವಿವಾದಕ್ಕಿಳಿಯದಿರಿ.
ಸಿಂಹ: ಕಚೇರಿಯಲ್ಲಿ ಸಮಾಧಾನದಿಂದ ಕಾರ್ಯನಿರ್ವಹಿಸಿ.
ಕನ್ಯಾ: ವೃತ್ತಿ ಜೀವನದಲ್ಲಿ ಏರುಪೇರು ಉಂಟಾಗಿ ಗೊಂದಲ ಮೂಡಬಹುದು.

ತುಲಾ: ಮಾನಸಿಕ ಚಾಂಚಲ್ಯ ಕಾಡಲಿದೆ. ವ್ಯಾಪಾರ ಸ್ಥಳದಲ್ಲಿ ಮೈಮರೆಯದೆ ವ್ಯವಹರಿಸಿ.
ವೃಶ್ಚಿಕ: ಪರಿಶ್ರಮ ಪಟ್ಟರೂ ಉದ್ದೇಶಿತ ಕಾರ್ಯಗಳಲ್ಲಿ ವಿಫಲವಾಗಲಿದೆ. ಪರರ ವಿಷಯದಲ್ಲಿ ಜಾಗ್ರತೆ ಇರಲಿ.
ಧನುಸ್ಸು: ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದು ಸೂಕ್ತ.

ಮಕರ: ವಿನಾಕಾರಣ ಅಧಿಕ ಭಯದಿಂದ ಆತಂಕಕ್ಕೆ ಒಳಗಾಗುವಿರಿ. ಹಣಕಾಸು ವಿಷಯದಲ್ಲಿ ಹುಷಾರಾಗಿರಿ.
ಕುಂಭ: ಕುಟುಂಬದಲ್ಲಿ ನೀವು ನಿರೀಕ್ಷಿಸರದೆ ಇರುವ ಘಟನೆಗಳು ಅನಿರೀಕ್ಷಿತವಾಗಿ ನಡೆಯಲಿವೆ.
ಮೀನ: ಮುಖಭಂಗವಾಗುವಂಥ ಮಾತುಗಳ ಬಳಕೆ ಮಾಡದಿರುವುದು ಒಳಿತು. ಓದಿನಲ್ಲಿ ಏಕಾಗ್ರತೆ ವಹಿಸಿ.

ಕಲಾ ಲೋಕದ ರಾಯಭಾರಿಗೆ 68ನೇ ಹುಟ್ಟುಹಬ್ಬ

ಶಂಕರ್ ನಾಗ್ ಎಂದಾಕ್ಷಣ ಕನ್ನಡಿಗರಲ್ಲಿ ಒಂದು ರೋಮಾಂಚನ. ಕಲಾ ಲೋಕದ ರಾಯಭಾರಿ, ಕನ್ನಡ ಸಿನಿ ಜಗತ್ತಿನಲ್ಲಿ ಅಜರಾಮರವಾಗಿ ಉಳಿಯುವ ದೈತ್ಯ ಪ್ರತಿಭೆ. ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು 68ನೇ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಆ ಅದೃಷ್ಟ ಇಲ್ಲ ಎನ್ನುವುದೇ ನಮ್ಮೆಲ್ಲರ ದುರದೃಷ್ಟಕ ಸಂಗತಿ. ಹೊನ್ನಾವರ ತಾಲ್ಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರೂ ಕೂಡ ಕಡಿಮೆ ಅವಧಿಯಲ್ಲಿ ಇವರು ಮಾಡಿದ ಸಾಧನೆ ಅಪಾರ.

ಕಲೆಯ ಬಗ್ಗೆ ಅಪಾರ ಪ್ರೇಮ:
ಓದು ಮುಗಿದ ನಂತರ ಕಲೆಯ ಮೇಲೆ ಅಪಾರ ಅಭಿಮಾನ ಮತ್ತು ಪ್ರೀತಿ ಇದ್ದ ಕಾರಣ ಮುಂಬೈನ ಮರಾಠಿ ರಂಗಮಂದಿರದ ಕಡೆಗೆ ಪಯಣ ಬೆಳೆಸಿದ ಇವರು, ಮರಾಠಿ ರಂಗಭೂಮಿಯನ್ನು ಕರಗತ ಮಾಡಿಕೊಂಡರು. ಅಷ್ಟೇ ಅಲ್ಲದೆ ಮರಾಠಿ ಚಿತ್ರಮಂದಿರಕ್ಕೂ ಪ್ರವೇಶ ಮಾಡಿ ಚಿತ್ರವನ್ನು ಮಾಡಿ ಅದಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಅಷ್ಟರಮಟ್ಟಿಗೆ ತಾನು ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವ ಚಾಣಾಕ್ಷ. ಅಲ್ಲಿಂದ ಕಲಾ ಬದುಕಿನಲ್ಲಿ ಮಾಡಿದ್ದೆಲ್ಲವೂ ಇತಿಹಾಸವೇ.

ನಿರ್ದೇಶಕರಾಗಿಯೂ ಯಶಸ್ಸು ಕಂಡ ಶಂಕರನಾಗ್:
ಇವರ ಪ್ರತಿಭೆಯನ್ನು ಅರಿತ ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದರು. ಇವರ ಅದೃಷ್ಟ ಮತ್ತು ಪ್ರತಿಭೆ ಎರಡೂ ಇವರನ್ನು ಕೈ ಹಿಡಿಯುತ್ತದೆ. ಏಕೆಂದರೆ ಇವರು ಮಾಡಿದ ಮೊದಲ ಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುತ್ತಾರೆ. ನಂತರ 12 ವರ್ಷಗಳ ಕಾಲ 92 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಆಳುತ್ತಾರೆ. ತಮ್ಮ ಸಹೋದರ ಅನಂತ ನಾಗ್ ಅವರೊಡನೆ ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ ಮತ್ತು ಗೀತಾ ಚಿತ್ರಗಳನ್ನು ನಿರ್ಮಿಸಿ ನಿರ್ಮಾಣದಲ್ಲೂ ಯಶಸ್ಸನ್ನು ಕಾಣುತ್ತಾರೆ.

ಮೆಟ್ರೋ ಕನಸು ಕಂಡಿದ್ದರು:
ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿ ಭಾರತದ ಬೆಳ್ಳಿ ಪರದೆಯ ಮೇಲೆ ಸುವರ್ಣ ಅಕ್ಷರಗಳ ಮೂಲಕ ಇತಿಹಾಸ ಕೆತ್ತಿದರು.

ಡಾ.ರಾಜ್‍ಕುಮಾರ್ ಅವರ ಒಂದು ಮುತ್ತಿನ ಕಥೆ ಚಿತ್ರವನ್ನು ನಿರ್ದೇಶನ ಮಾಡಿದ ಶಂಕರ್ ನಾಗ್, ನೀರಿನೊಳಗೆ ಕ್ಯಾಮೆರಾಗಳನ್ನು ಇಟ್ಟು ಚಿತ್ರೀಕರಿಸುವ ಕಲೆಯನ್ನು ಅಂದೇ ಅವರು ಕರಗತ ಮಾಡಿಕೊಂಡಿದ್ದರು. ಅಷ್ಟರಮಟ್ಟಿಗೆ ದೂರಾಲೋಚನೆ ಅವರದ್ದು. 40 ವರ್ಷಗಳ ಹಿಂದೆಯೇ ಮೆಟ್ರೋ ಕನಸನ್ನು ಕಂಡಿದ್ದ ಇವರು ಸಮಾಜ ಸೇವೆಗೆ ಯಾವಾಗಲೂ ತಮ್ಮನ್ನ ತೊಡಗಿಸಿಕೊಳ್ಳುತ್ತಿದ್ದರು.

ದೀಪಾವಳಿಯಲ್ಲಿ ಸ್ಥಳೀಯ ಉತ್ಪನ್ನ ಖರೀದಿಸಿ ಸೆಲ್ಫಿ ಕಳುಹಿಸಿ : ಮೋದಿ

ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್. ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟಪಟ್ಟು ಮದುವೆಯಾದರು. ಮಗಳು ಕಾವ್ಯ. ಈ ದಂಪತಿ ಸಂಕೇತ್ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ಬರೆದು ನಿರ್ದೇಶಿಸಿ ಕಲಾವಿದರನ್ನು ಬೆಳೆಸಿದರು. ಅಷ್ಟೇ ಅಲ್ಲದೆ ನಾಟಕಗಳಿಗಾಗಿ ಒಂದು ರಂಗಮಂದಿರ ನಿರ್ಮಿಸಬೇಕೆಂಬ ಕನಸು ಅವರಲ್ಲಿ ಇತ್ತು. ಅದು ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದರು. ನಂತರ ಅವರ ಕನಸನ್ನು ನನಸು ಮಾಡಿದ್ದು ಅವರ ಪತ್ನಿ ಅರುಂಧತಿ ನಾಗ್. ಇವರು ಕಟ್ಟಿ ಬೆಳೆಸುತ್ತಿರುವ ರಂಗಶಂಕರ ಇಂದು ಬೃಹದಾಕಾರವಾಗಿ ಬೆಳೆದು ಸಾವಿರಾರು ಕಲಾವಿದರಿಗೆ ಅನ್ನ ನೀಡುತ್ತಿದೆ
ಮತ್ತು ಕನ್ನಡ ರಂಗಭೂಮಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ.

ಮೊಹಮ್ಮದ್ ಶಮಿಯನ್ನು ಮದುವೆಯಾಗಲು ಷರತ್ತು ವಿಧಿಸಿದ ಬಾಲಿವುಡ್ ನಟಿ

ಬೆಂಗಳೂರು, ನ. 9- 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 16 ವಿಕೆಟ್ ಗಳೊಂದಿಗೆ ಟೀಮ್ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಮೊಹಮ್ಮದ್ ಶಮಿಯನ್ನು 2ನೇ ವಿವಾಹವಾಗಲು ಬಾಲಿವುಡ್ ನಟಿ ಪಾಯಲ್ ಘೋಶ್ ಷರತ್ತು ಬದ್ಧ ಸಮ್ಮತಿ ಸೂಚಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅವರ ಬೌಲಿಂಗ್ ಪ್ರದರ್ಶನಕ್ಕೆ ಕ್ಲೀನ್ ಬೌಲ್ಡ್ ಆಗಿರುವ ಪಯಾಲ್ ಘೋಶ್, ಶಮಿ ನಿಮ್ಮ ಇಂಗ್ಲಿಷ್ ಭಾಷೆಯನ್ನು ಸುಧಾರಿಸಿಕೊಳ್ಳಿ ನಾನು ನಿಮ್ಮನ್ನು ಮದುವೆಯಾಗಲು ರೆಡಿ ಎಂದು ಪಾಯಲ್ ಘೋಶ್ ತಮ್ಮ ಅಧಿಕೃತ ಟ್ವಿಟ್ಟರ್ ಗೋಡೆ ಮೇಲೆ ಬರೆದುಕೊಂಡಿದ್ದಾರೆ.

ರೂಪದರ್ಶಿಯಾಗಿದ್ದ ಪಾಯಲ್ ಘೋಶ್ ಅವರು ತೆಲುಗಿನ ಪ್ರಯಾಣಂ ಸಿನಿಮಾ ಮೂಲಕ ತಮ್ಮ ಸಿನಿಮಾ ಜರ್ನಿ ಆರಂಭಿಸಿ, ನಂತರ ವರ್ಷಧಾರೆ, ಊಸರವಳ್ಳಿ, ಮಿಸ್ಟರ್ ರಾಸ್ಕಲ್, ಪಟೇಲ್ ಕಿ ಪಂಜಾಬ್ ಶಾದಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವುದಲ್ಲದೆ, ರಾಮದಾಸ್ ಅತ್ವಾಲೆ ಅವರ ರಾಜಕೀಯ ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ 2020ರಲ್ಲಿ ಆಯ್ಕೆಯಾಗಿದ್ದರು.

ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‍ : ಗಂಗೂಲಿ

ಶಮಿ ಅವರು ಹಿಂದೆ ರೂಪದರ್ಶಿ ಹಸೀನಾ ಜಹಾನ್ ಅವರು ವಿವಾಹವಾಗಿದ್ದು ಇವರಿಗೆ ಒಬ್ಬ ಹೆಣ್ಣು ಮಗುವಿದ್ದು, ಇತ್ತೀಚೆಗೆ ವಿಚ್ಛೇದನಗೊಂಡಿದ್ದು ತಿಂಗಳಿಗೆ 12 ಲಕ್ಷ ರೂ. ಜೀವನಾಂಶ ಭರಿಸುವಂತೆ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಪ್ರಶ್ನಿಸಿ ಹಸೀನ್ ಇದೀಗ ಉನ್ನತ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇನ್ನು ಕೋರ್ಟ್ ಮಗುವನ್ನು ತಾಯಿಯ ಮಡಿಲಿಗೆ ಒಪ್ಪಿಸಿದೆ. ಮಗು ಆರೈಕೆಗೆ ಮಾಸಿಕ 80 ಸಾವಿರ ರೂ. ಮತ್ತು ಹಸೀನ್ ಅವರಿಗೆ ಮಾಸಿಕ 40 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಕೋರ್ಟ್ ಆದೇಶಿಸಿತ್ತು.

ಮೇಕೆದಾಟು ಯೋಜನೆಯನ್ನು ಆರಂಭಿಸುತ್ತೇವೆ : ಡಿಕೆಶಿ

ಬೆಂಗಳೂರು, ನ.9- ಮೇಕೆದಾಟು ಯೋಜನೆಯನ್ನು ನಮ್ಮ ಸರ್ಕಾರ ಆರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ನಾವು ಶುರು ಮಾಡುತ್ತೇವೆ.

ವಿಚಾರಣೆಗೆ ಸಮುಯ ನಿಗದಿ ಮಾಡುವುದಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ತಿಳಿಸಿದೆ. 2018ರ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 24 ಟಿಎಂಸಿಯನ್ನು ನಿಗದಿ ಮಾಡಿತ್ತು. ಅದನ್ನು ಬಳಸಿಕೊಳ್ಳಲು ನಾವು ಸರ್ಕಾರಿ ಆದೇಶ ಹೊರಡಿಸಿದ್ದೇವೆ. ಮೇಕೆದಾಟು ಯೋಜನೆ ಕುರಿತು ವಿಚಾರಣೆ ನಡೆಯುವ ವೇಳೆ ರಾಜ್ಯಕ್ಕೆ ಎಷ್ಟು ನೀರಿನ ಅಗತ್ಯ ಇದೆ ಎಂದು ಸಮರ್ಥ ವಾದ ಮಂಡಿಸಬೇಕಿದೆ. ಅದಕ್ಕೆ ತಯಾರಿಯಾಗಿ 24 ನೀರು ಬಳಕೆಯ ಆದೇಶ ಹೊರಡಿಸಲಾಗಿದೆ ಎಂದರು.

ಪ್ರತಿನಿತ್ಯ ಬೆಳಗ್ಗೆ 10ರಿಂದ 10.30ರವರೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಭೇಟಿಗೆ ಸಮಯ ನೀಡುತ್ತೇನೆ. ತಮ್ಮ ಕ್ಷೇತ್ರದಲ್ಲಿನ ಕೆಲಸ ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದು. ಹೊರಗಡೆ ಹೋಗುವ ದಿನ ಹೊರತಾಗಿ ಬೆಂಗಳೂರಿನಲ್ಲಿರುವ ಎಲ್ಲಾ ದಿನ ಸಮಯಾವಕಾಶ ನೀಡಲಾಗುವುದು, ಶಾಸಕರಿಗೆ ಮೊದಲ ಆದ್ಯತೆ ನೀಡಲು ನಿರ್ಧಸಲಾಗಿದೆ ಎಂದರು.

ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‍ : ಗಂಗೂಲಿ

ಕಾಂಗ್ರೆಸ್ ಪಕ್ಷದಲ್ಲಿ ಯಾರೇಲ್ಲಾ 3ಕ್ಕಿಂತ ಹೆಚ್ಚು ವರ್ಷಗಳಿಂದ ಪದಾಧಿಕಾರಿಗಳಾಗಿದ್ದಾರೆ ಅವರ ಸ್ಥಾನಕ್ಕೆ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ಆಗಿದೆ. ಇನ್ನು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಶೇ.75ರಷ್ಟು ಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಹೋಗಿ ಸಭೆ ಮಾಡಿದ್ದಾರೆ, ಉಳಿದವರು ಸಭೆ ಮಾಡಿ ಆದಷ್ಟು ಬೇಗ ತಮ್ಮ ವರದಿ ನೀಡಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿರುವುದು ಬಹಳ ಸಂತೋಷದ ವಿಷಯ. ಅವರು ಅಲ್ಲಿಗೆ ಹೋಗಲಿ. ಅವರಿಗೆ ಬೇಕಾದರೆ ಬಸವರಾಜ ಬೊಮ್ಮಾಯಿ ಹಾಗೂ ಲೋಕಾಯುಕ್ತ ವರದಿಗಳನ್ನು ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ ಸಾಧ್ಯತೆ

ಬೆಂಗಳೂರು,ನ.9- ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ನೇಮಕಗೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷ ಮೇ 31ರಿಂದಲೂ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ವಂದಿತಾ ಶರ್ಮ ಅವರು ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.

ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಹರಿಯಾಣ ಮೂಲದ ರಜನೀಶ್ ಗೋಯಲ್ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ವರ್ಷದ ಜುಲೈವರೆಗೂ ಸೇವಾವ ಹೊಂದಿರುವ ರಜನೀಶ್ ಗೋಯಲ್ ಪ್ರಸ್ತುತ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‍ : ಗಂಗೂಲಿ

ಸಾರ್ವಜನಿಕ ಆಡಳಿತದಲ್ಲಿ ಡಾಕ್ಟರೇಟ್ ಪಡೆದಿರುವ ಅವರು 1986ರ ಆ.25ರಂದು ಐಎಎಸ್ ಸೇವೆಗೆ ಸೇರ್ಪಡೆಯಾದರು. ಇವರ ಪತ್ನಿ ಶಾಲಿನಿ ರಜನೀಶ್ ಕೂಡ ಪ್ರಸ್ತುತ ಐಎಎಸ್ ಅಧಿಕಾರಿಯಾಗಿದ್ದಾರೆ.
ಮುಂದಿನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿಗಳಾದ ವಿ.ಮಂಜುಳ, ಅಜಯ್ ಸೇಠ್, ಡಾ.ಇ.ವಿ.ರಮಣರೆಡ್ಡಿ, ಅನಿಲ್‍ಕುಮಾರ್ ಝಾ ಜೇಷ್ಠತಾ ಪಟ್ಟಿಯಲ್ಲಿದ್ದಾರೆ. ಆದರೆ ಸರ್ಕಾರ ರಜನೀಶ್ ಗೋಯಲ್ ಅವರ ಕುರಿತು ಒಲವು ಹೊಂದಿದೆ ಎಂದು ಹೇಳಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ನೇಮಕಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳಲಿರುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡುವ ಸಾಧ್ಯತೆಗಳಿರುವುದಾಗಿ ಮೂಲಗಳು ತಿಳಿಸಿವೆ.