Thursday, November 6, 2025
Home Blog Page 1831

ರಾಜ್ಯದಲ್ಲಿ ಇನ್ನೂ 3 ದಿನ ಮಳೆ

ಬೆಂಗಳೂರು, ನ.8- ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಹಿಂಗಾರು ಚುರುಕಾಗಿದ್ದು, ಶುಕ್ರವಾರದವರೆಗೆ ಮಳೆ ಮುಂದು ವರೆಯಲಿದೆ. ಆದರೆ, ಮಳೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ. ಹಿಂಗಾರು ಚೇತರಿಸಿಕೊಂಡಿದ್ದರೂ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಚದುರಿದಂತೆ ಅಲ್ಲಲ್ಲಿ ಮಾತ್ರ ಮಳೆಯಾಗಿದೆ.

ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಜಲಾಶಯಗಳ ಒಳ ಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಚದುರಿದಂತೆ ಕೆಲವೆಡೆ ಮಳೆಯಾಗಿದೆ.

ಸೋಮವಾರಕ್ಕೆ ಹೋಲಿಸಿದರೆ ನಿನ್ನೆ ಮಳೆ ಪ್ರಮಾಣ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಿನ್ನೆ ಮಧ್ಯಾಹ್ನವೇ ಮಳೆ ಆರಂಭಗೊಂಡು ಜನ ಜೀವನ ಅಸ್ತವ್ಯಸ್ತಗೊಳಿಸಿತ್ತು. ಬಹಳಷ್ಟು ಕಡೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಕೆರೆ-ಕಟ್ಟೆಗಳಿಗೂ ನೀರು ಬಂದಿದೆ.

ತೀವ್ರ ಬರಪರಿಸ್ಥಿತಿ ಎದುರಿಸುತ್ತಿದ್ದ ರಾಜ್ಯಕ್ಕೆ ಹಿಂಗಾರು ಚೇತರಿಕೆಯಾಗಿ ಮಳೆಯಾಗುತ್ತಿರುವುದು ಜನರಲ್ಲಿ ಅದರಲ್ಲೂ ರೈತರಿಗೆ ಖುಷಿ ತಂದಿದೆ. ಆದರೆ, ಕೊಯ್ಲಿಗೆ ಬಂದಿದ್ದ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಈ ಮಳೆಯಿಂದ ತೊಂದರೆಯಾಗಿದೆ. ಕೆಲವೆಡೆ ಅಗಾಗ್ಗೆ ಮಳೆ ಬಂದರೆ, ಮತ್ತೆ ಕೆಲವೆಡೆ ಜಿಟಿ-ಜಿಟಿ ಮಳೆಯಾಗಿದೆ.

ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್

ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದ್ದು, ಆನಂತರ ಇಳಿಮುಖವಾಗಲಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಟ್ರಪ್‍ನಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಚದುರಿದಂತೆ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಳೆಯ ಅಬ್ಬರ ಕಡಿಮೆಯಾದರೂ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಮುಂದಿನ ಮೂರು ದಿನಗಳ ಅವಯಲ್ಲಿ ದಾವಣಗೆರೆ, ಹರಪನಹಳ್ಳಿ, ಚನ್ನಗಿರಿ, ಹಾವೇರಿ, ಗದಗ, ಹುಬ್ಬಳ್ಳಿ, ಸವದತ್ತಿ, ಬಾಗಲಕೋಟೆ, ಜಮಖಂಡಿ, ವಿಜಯಪುರ, ಇಂಡಿ ಭಾಗದಲ್ಲಿ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ 15ರಿಂದ 20 ಮಿ.ಮೀ., ಉತ್ತರ ಒಳನಾಡಿನಲ್ಲಿ 25ರಿಂದ 40 ಮಿ. ಮೀ. ನಷ್ಟು ಮಳೆಯಾಗುವ ಸೂಚನೆಗಳಿವೆ.

ಗಾಜಾ ಹೃದಯಭಾಗ ತಲುಪಿದ ಇಸ್ರೇಲ್ ಸೇನೆ

ಅದೇ ರೀತಿ ಮುಂದಿನ ಹತ್ತು ದಿನಗಳ ಅವಯಲ್ಲಿ ದಕ್ಷಿಣ ಒಳನಾಡಿನಲ್ಲಿ 20ರಿಂದ 40 ಮಿ.ಮೀ., ಮಲೆನಾಡಿನಲ್ಲಿ 30ರಿಂದ 60 ಮಿ.ಮೀ., ಕರಾವಳಿಯಲ್ಲಿ 35ರಿಂದ 50 ಮಿ.ಮೀ. ಹಾಗೂ ಉತ್ತರ ಒಳನಾಡಿನಲ್ಲಿ 20ರಿಂದ 50 ಮಿ.ಮೀ.ನಷ್ಟು ಮಳೆಯಾಗಲಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಅಕ್ಟೋಬರ್‍ನಲ್ಲಿ 131ಮಿ.ಮೀ. ವಾಡಿಕೆ ಮಳೆಗೆ ಕೇವಲ 47 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ.65 ರಷ್ಟು ಮಳೆ ಕೊರತೆ ಉಂಟಾಗಿತ್ತು. ಸೋಮವಾರ ರಾಜ್ಯದಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಮಳೆಯಾಗಿದೆ.

ಕಳೆದೊಂದು ವಾರದಲ್ಲಿ 30 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಆದರೂ ದಕ್ಷಿಣ ಒಳನಾಡಿನಲ್ಲಿ ನವೆಂಬರ್ ಒಂದರಿಂದ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.160ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ.29ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಶೇ.132 ಹಾಗೂ ಶೇ.208ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್

ಹಿಂಗಾರು ಹಂಗಾಮಿನ ಅವಯ ಅಕ್ಟೋಬರ್ ಒಂದರಿಂದ ನವೆಂಬರ್ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.47ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಕಂಡುಬಂದಿತ್ತು. ಅದೇ ರೀತಿ ಜೂನ್ ನಿಂದ ಈವರೆಗೆ ಶೇ.28ರಷ್ಟು, ಏಪ್ರಿಲ್‍ನಿಂದ ಇಲ್ಲಿವರೆಗೆ ಶೇ.25ರಷ್ಟು ಹಾಗೂ ಜನವರಿಯಿಂದ ಈತನಕ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮೊಲ್ಲಾ ಅರೆಸ್ಟ್

ದಿಸ್ಪುರ (ಅಸ್ಸಾಂ) ನ.8 -ಪುರೋಹಿತರು, ನಾಮಘರಿಯಾಗಳು ಮತ್ತು ಸಂತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಅಫ್ತಾಬುದ್ದೀನ್ ಮೊಲ್ಲಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಕಾಂಗ್ರೆಸ್ ನಾಯಕನನ್ನು ಜಲೇಶ್ವರ ವಿಧಾನಸಭಾ ಕ್ಷೇತ್ರದ (ಅಸ್ಸಾಂ) ಹಾಲಿ ಶಾಸಕ ಅಫ್ತಾಬುದ್ದೀನ್ ಮೊಲ್ಲಾ ಎಂದು ಗುರುತಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಿಜಿಪಿ ಜಿಪಿ ಸಿಂಗ್ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ.

ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್

ಬಂಧಿತ ಶಾಸಕ ಅಫ್ತಾಬುದ್ದೀನ್ ಮೊಲ್ಲಾ ಅವರ ವಿರುದ್ದ ಡಿಸ್‍ಪುರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 295(ಎ)/ 153ಎ(1)(ಬಿ)/505(2) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನ.4 ರಂದು ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪುರೋಹಿತರು, ನಾಮಘರಿಯಾಗಳು ಮತ್ತು ಧರ್ಮದರ್ಶಿಗಳನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ರೇಸಾರ್ಟ್‍ನಲ್ಲಿ ಜೆಡಿಎಸ್ ಶಾಸಕರ ವಾಸ್ತವ್ಯ

ಬೆಂಗಳೂರು, ನ.8-ಆಪರೇಷನ್ ಹಸ್ತ ನಡೆಸುವ ಸುಳಿವಿನ ಬೆನ್ನಲೇ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ನಿನ್ನೆಯಿಂದ ಹಾಸನದ ರೆಸಾರ್ಟ್‍ನಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಶಾಸಕರು ಪಕ್ಷ ಸಂಘಟನೆ, ಬಿಜೆಪಿಯೊಂದಿಗಿನ ಮೈತ್ರಿ, ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ಹಾಸನಾಂಬೆಯ ದರ್ಶನ ಪಡೆದಿರುವ ಜೆಡಿಎಸ್ ಶಾಸಕರು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇತೃತ್ವದಲ್ಲಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಶಾಸಕರಿಗೆ ಮಾರ್ಗದರ್ಶನ ಮಾಡಿದ್ದಾರೆ.

ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್

ಆಸೆ, ಆಮಿಷಗಳಿಗೆ ಒಳಗಾಗಬೇಡಿ, ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜನಪರ ಹೋರಾಟ ಮಾಡಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡೋಣ. ಮುಂದೆ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ ಎಂಬ ಸಂದೇಶ ನೀಡಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ರಾಷ್ಟ್ರೀಯ ಪಕ್ಷಗಳಲ್ಲಾಗುತ್ತಿರುವ ಬದಲಾವಣೆ ಸೇರಿದಂತೆ ಹಲವು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಪಕ್ಷಕ್ಕೆ ಆಗುತ್ತಿರುವ ಲಾಭ, ನಷ್ಟದ ಲೆಕ್ಕಾಚಾರವನ್ನು ಮಾಡಲಾಗಿದೆ. ಲೋಕಸಭಾ ಚುನಾವಣೆಯ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚಿಸಿ ಒಗ್ಗಟ್ಟಿನಿಂದ ಪಕ್ಷದ ಬೆಳವಣಿಗೆಗೆ ಶ್ರಮಿಸಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಪಕ್ಷಾಂತರಕ್ಕೆ ಮುಂದಾಗಿ ಶಾಸಕ ಸ್ಥಾನ ಕಳೆದುಕೊಳ್ಳಬೇಡಿ ಎಂಬ ಕಿವಿ ಮಾತು ಹೇಳಿದ್ದಾರೆ.

ಆಪರೇಷನ್ ಹಸ್ತ ಮಾಡಲಾಗುತ್ತದೆ ಎಂಬ ಉಹಾಪೋಹದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಹಾಸನಾಂಬೆ ಸನ್ನಿಯಲ್ಲಿ ಒಟ್ಟಾಗಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

2ನೇ ಹಂತದ ಭಾರತ್ ಜೋಡೋ ಯಾತ್ರೆ ಸಿದ್ಧತೆ

ನವದೆಹಲಿ, ನ.8- ಮಿಜೋರಾಂ, ಛತ್ತೀಸ್‍ಗಡ , ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನ ಸಭೆಗಳಿಗೆ ಚುನಾವಣೆ ಬಳಿಕ, ಲೋಕಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್ 2ನೇ ಹಂತದ ಭಾರತ್ ಜೋಡೋ ಯಾತ್ರೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ. ಡಿಸೆಂಬರ್ ತಿಂಗಳಿಂದ ಫೆಬ್ರವರಿ ನಡುವೆ ಯಾವುದೇ ಸಮಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲೇ 2ನೇ ಹಂತದ ಭಾರತ್ ಜೋಡೊ ಮುಂದುವರಿಯಲಿದ್ದು, ಹೈಬ್ರಿಡ್ ಮೋಡ್‍ನಲ್ಲಿ ನಡೆಯುವ ಸಾಧ್ಯತೆಯಿದೆ. ಕಾರ್ಯಕ್ರದಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಮೆರವಣಿಗೆ ಅಥವಾ ವಾಹನಗಳನ್ನು ಬಳಸಬಹುದಾಗಿದೆ. ಆದರೆ, ರಾಹುಲ್ ಗಾಂ ಈ ಮೊದಲಿನಂತೆ ಕಾಲ್ನಡಿಗೆಯಲ್ಲೇ ಯಾತ್ರೆ ಮಾಡಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್

ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು 2022ರ ಸೆಪ್ಟೆಂಬರ್ 7 ರಿಂದ ಜನವರಿ 2023ರವರೆಗೂ ನಡೆಯಿತು. ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಸರಿಸುಮಾರು 4,080 ಕಿಮೀ ಗಳಷ್ಟು ದೂರ ಕ್ರಮಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯಾತ್ರೆಯನ್ನು ಮುಕ್ತಾಯಗೊಳಿಸಲಾಗಿತ್ತು.

ಯಾತ್ರೆಯು 12 ರಾಜ್ಯಗಳ 75 ಜಿಲ್ಲೆಗಳ ಮೂಲಕ 126 ದಿನಗಳಲ್ಲಿ ಸಾಗಿತು, ಇದು ಭಾರತದ ಸುದೀರ್ಘ ಪಾದಯಾತ್ರೆಯಾಗಿದೆ. ಕಾಂಗ್ರೆಸ್ ನಾಯಕರು ಮತ್ತು ಯಾತ್ರೆಯಲ್ಲಿ ಭಾಗವಹಿಸುವ ಇತರರು ಆಯಾ ರಾಜ್ಯಗಳಲ್ಲಿ ತಳಮಟ್ಟದ ಜನಸಂಖ್ಯೆಯೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಜನಾಂದೋಲನದ ಪ್ರಾಥಮಿಕ ಉದ್ದೇಶವು ಕಾಂಗ್ರೆಸ್‍ನಿಂದ ಪ್ರಚಾರ ಮಾಡಲ್ಪಟ್ಟಿದೆ.

ಜನರ ಜೊತೆಗೆ ರಾಹುಲ್ ಗಾಂಧಿ ಅವರೂ ಸಹ ಸಂವಾದ ನಡೆಸಿ, ಸಮಸ್ಯೆಗಳನ್ನು ಆಲಿಸಿದ್ದರು. ಕೇಂದ್ರ ಸರ್ಕಾರದ ಆಡಳಿತ, ಬಿಜೆಪಿ ವಿಭಜಕ ರಾಜಕೀಯದ ವಿರುದ್ಧ ಭಾರತವನ್ನು ಒಂದು ಗೂಡಿಸುವುದು. ನಿರುದ್ಯೋಗ ಮತ್ತು ಅಸಮಾನತೆಯಂತಹ ಇತರ ಸಾಮಾಜಿಕ-ಆರ್ಥಿಕ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿ ಚರ್ಚಿಸಿದ್ದರು.

ಕಳೆದ ಸೆಪ್ಟೆಂಬರ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪಕ್ಷವು 2ನೇ ಹಂತದ ಭಾರತ್ ಜೋಡೋ ಯಾತ್ರೆ ಯೋಜಿಸುತ್ತಿದೆ. ಯೋಜನೆಯು ನಿರ್ಮಾಣ ಹಂತದಲ್ಲಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು ರಾಹುಲ್ ಗಾಂಧಿ ಅವರನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಭಾರತ್ ಜೋಡೋ ಯಾತ್ರೆ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಮಹಿಳೆಯರ ಕುರಿತು ಹೊಲಸು ನಾಲಿಗೆ ಹರಿಬಿಟ್ಟಿದ್ದ ನಿತೀಶ್ ಕುಮಾರ್ ಕ್ಷಮೆಯಾಚನೆ

ಪಾಟ್ನಾ, ನ.8- ಮಹಿಳೆಯರು ಕುರಿತು ವಿವಾದತ್ಮಾಕ ಹೇಳಿಕೆ ನೀಡಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೊನೆಗೂ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದು, ಕ್ಷಮೆಯಾಚಿಸಿದ್ದಾರೆ. ನಾನು ಯಾರ ಮನಸ್ಸುನ್ನು ನೋಯಿಸಬೇಕೆಂಬ ಕಾರಣಕ್ಕಾಗಿ ಈ ಹೇಳಿಕೆ ನೀಡಿರಲಿಲ್ಲ. ಒಂದು ವೇಳೆ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಈ ಕೂಡಲೇ ಜನಸಂಖ್ಯೆ ನಿಯಂತ್ರಣದ ಬಗ್ಗೆ ತಪ್ಪು ಸಂದೇಶವನ್ನು ನೀಡಿದ್ದರೆ ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.

ಮಹಿಳಾ ಅಭಿವೃದ್ಧಿಯಲ್ಲಿ ರಾಜ್ಯವು ಮುಂದಿದೆ. ನನ್ನ ಹೇಳಿಕೆಗೆ ನಾನು ಕ್ಷಮೆಯಾಚಿಸುತ್ತೇನೆ, ನನ್ನ ಹೇಳಿಕೆಯು ತಪ್ಪು ಸಂದೇಶವನ್ನು ಕಳುಹಿಸಿದ್ದರೆ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಹೇಳಿದರು. ನಿನ್ನೆ ವಿಧಾನಸಭೆಯಲ್ಲಿ ಜನಸಂಖ್ಯಾ ನಿಯಂತ್ರಣದ ವಿಷಯದಲ್ಲಿ ಮಹಿಳೆಯರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡುವ ಬಿಹಾರ ಸಿಎಂ ನಿತೀಶ್ ಕುಮಾರ್, ವಿದ್ಯಾವಂತ ಮಹಿಳೆ ತನ್ನ ಪತಿ ಸಂಭೋಗದ ಸಮಯದಲ್ಲಿ ಸಂಯಮದಿಂದ ವರ್ತಿಸುವುದನ್ನು ಹೇಗೆ ತಡೆಯಬಹುದು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಭಾರೀ ವಿವಾದವನ್ನು ಸೃಷ್ಟಿಸಿತ್ತು.

ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ರೋಹಿಂಗ್ಯಾ ನಾಯಕನ ಬಂಧನ

ನಿತೀಶ್ ಕುಮಾರ್ ಹೇಳಿಕೆಗೆ ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು, ನಿತೀಶ್ ಕುಮಾರ್ ಅವರ ಕ್ಷಮೆಯಾಚನೆಯನ್ನು ಬಯಸುವುದಿಲ್ಲ, ಬದಲಿಗೆ ಅವರ ರಾಜೀನಾಮೆ ಎಂದು ಒತ್ತಾಯಿಸಿದ್ದರು. ಇದರ ನಡುವೆಯೇ ರಾಷ್ಟ್ರೀಯ ಮಹಿಳಾ ಆಯೋಗ ತಮ್ಮ ಹೇಳಿಕೆ ಕುರಿತು ವಿವರಣೆ ನೀಡುವಂತೆ ನೋಟೀಸ್ ಜಾರಿ ಮಾಡಿತ್ತು.

ಮಹಿಳೆಯರ ಬಗ್ಗೆ ನಿತೀಶ್ ಕುಮಾರ್ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‍ಸಿಡಬ್ಲ್ಯೂ) ಆಕ್ರೋಶ ವ್ಯಕ್ತಪಡಿಸಿ ನಿತೀಶ್ ಕುಮಾರ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಎನ್‍ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಒತ್ತಾಯಿಸಿದ್ದರು.

ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಆಡಿರುವ ಅಸಭ್ಯ ಮಾತುಗಳಿಂದ ಪ್ರತಿಯೊಬ್ಬ ಮಹಿಳೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗಿದೆ. ಅವರ ಭಾಷಣದಲ್ಲಿ ಬಳಸಲಾದ ಭಾಷೆಯು ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ನಾವು ಅಂತಹ ನಡವಳಿಕೆ ವಿರುದ್ಧ ಬಲವಾಗಿ ನಿಲ್ಲುತ್ತೇವೆ ಎಂದು ರೇಖಾ ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿಯನ್ನು ಟೀಕಿಸಿರುವ ಬಿಜೆಪಿಯ ಬಿಹಾರ ಘಟಕವು ನಿತೀಶ್ ಕುಮಾರ್ ಅವರನ್ನು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಅಸಭ್ಯ ರಾಜಕಾರಣಿ ಎಂದು ಟೀಕಾ ಪ್ರಹಾರ ನಡೆಸಿತ್ತು. ಮುಖ್ಯಮಂತ್ರಿ ಇನ್ನು ಮುಂದೆ ಸುಸಂಸ್ಕೃತ ಸಮಾಜವನ್ನು ಪ್ರತಿನಿಸಲು ಯೋಗ್ಯರಲ್ಲ ಎಂದು ಹೇಳಿದರು. ನಿತೀಶ್ ಕುಮಾರ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಸಚಿವ ಗಿರಿರಾಜ್ ಸಿಂಗ್ ಹೇಳಿದ್ದರು.

ಮೋದಿ ವಿರುದ್ಧ ಹರಿಹಾಯ್ದ ಅಸಾದುದ್ದೀನ್ ಓವೈಸಿ
ಏನಿದು ವಿವಾದ:
ಮದುವೆಯ ನಂತರ ಪುರುಷರು ತಮ್ಮ ಪತ್ನಿಯರನ್ನು ಸಂಭೋಗಿಸಲು ಕೇಳುತ್ತಾರೆ, ಆದರೆ ಬಿಹಾರದಲ್ಲಿ ವಿದ್ಯಾವಂತ ಮಹಿಳೆಯರು ತಮ್ಮ ಗಂಡಂದಿರನ್ನು ಸರಿಯಾದ ಸಮಯದಲ್ಲಿ ಹಾಗೆ ಮಾಡುವುದನ್ನು ನಿಲ್ಲಿಸುವಂತೆ ಕೇಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದ್ದರು. ಇದರಿಂದಾಗಿ ಬಿಹಾರದ ಜನಸಂಖ್ಯೆ ನಿಯಂತ್ರಣದಲ್ಲಿದೆ ಎಂದಾಗ ಹಿಂದೆ ಕುಳಿತಿದ್ದ ಕೆಲ ಶಾಸಕರು ನಗುತ್ತಿದ್ದರು.

ಕಳೆದ ವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ನಿತೀಶ್ ಕುಮಾರ್ ಅವರು 1987ರಲ್ಲಿ ಸ್ರ್ಪಧಿಸಿದ್ದ ಚುನಾವಣೆಯಲ್ಲಿ ಸಿಪಿಐ ಮತ್ತು ಸಿಪಿಐ-ಎಂ ತನಗೆ ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದರು. ಆದರೆ, ಆ ವರ್ಷ ಯಾವುದೇ ಚುನಾವಣೆ ನಡೆದಿರಲಿಲ್ಲ. ಇತ್ತೀಚೆಗಷ್ಟೇ ಜನತಾ ದರ್ಬಾರ್‍ನಲ್ಲಿ ಗೃಹ ಸಚಿವರನ್ನು ಕರೆಸುವಂತೆ ಅಲ್ಲಿನ ಅಧಿಕಾರಿಗಳನ್ನು ಕೇಳಿಕೊಂಡಿದ್ದು, ಈ ಹುದ್ದೆಯನ್ನು ತಾವೇ ನಿರ್ವಹಿಸಿದ್ದರಿಂದ ಎಡವಟ್ಟು ಎದುರಿಸಬೇಕಾಯಿತು.

ಸಿಎಂ ಹೇಳಿಕೆ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ್ದು. ಲೈಂಗಿಕ ಶಿಕ್ಷಣದ ವಿಷಯ ಚರ್ಚೆಯಾದಾಗಲೆಲ್ಲಾ ಜನರು ಹಿಂಜರಿಯುತ್ತಾರೆ. ಇದನ್ನು ಈಗ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಶಾಲೆಗಳಲ್ಲಿ ವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಕಲಿಸಲಾಗುತ್ತದೆ. ಮಕ್ಕಳು ಅದನ್ನು ಕಲಿಯುತ್ತಾರೆ. ಜನಸಂಖ್ಯೆಯ ಹೆಚ್ಚಳವನ್ನು ತಡೆಯಲು ಪ್ರಾಯೋಗಿಕವಾಗಿ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ ಎಂದು ತೇಜಸ್ವಿ ಯಾದವ್ ಸಮರ್ಥಿಸಿಕೊಂಡಿದ್ದರು.

3ನೇ ಬಾರಿಗೆ ನ್ಯೂಜೆರ್ಸಿ ಸೆನೆಟ್‍ಗೆ ಆಯ್ಕೆಯಾದ ವಿನ್ ಗೋಪಾಲ್

ನ್ಯೂಯಾರ್ಕ್, ನ. 8 (ಪಿಟಿಐ) ನ್ಯೂಜೆರ್ಸಿ ಸೆನೆಟ್‍ನಲ್ಲಿ ಅನಿವಾಸಿ ಭಾರತೀಯ ಸೆನೆಟರ್ ವಿನ್ ಗೋಪಾಲ್ ಅವರು ಮೂರನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ. 38 ವರ್ಷದ ಡೆಮೋಕ್ರಾಟ್ ಸೆನೆಟರ್ ಗೋಪಾಲ್ ಅವರು ನ್ಯೂಜೆರ್ಸಿಯ 11 ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‍ನಲ್ಲಿ ರಿಪಬ್ಲಿಕನ್ ಚಾಲೆಂಜರ್ ಸ್ಟೀವ್ ಡ್ನಿಸ್ಟ್ರಿಯನ್ ಅವರನ್ನು ಸೋಲಿಸಿ ಸತತ ಮೂರನೆ ಬಾರಿಗೆ ಮರು ಆಯ್ಕೆಯಾಗಿದ್ದಾರೆ.

ಗೋಪಾಲ್ ಪ್ರಸ್ತುತ ನ್ಯೂಜೆರ್ಸಿ ಸ್ಟೇಟ್ ಸೆನೆಟ್‍ನ ಅತ್ಯಂತ ಕಿರಿಯ ಸದಸ್ಯ ಮತ್ತು ರಾಜ್ಯದ ಇತಿಹಾಸದಲ್ಲಿ ಸೆನೆಟ್‍ಗೆ ಚುನಾಯಿತರಾದ ಮೊದಲ ದಕ್ಷಿಣ ಏಷ್ಯಾದ ಅಮೆರಿಕನ್ ಆಗಿದ್ದಾರೆ. ನ್ಯೂಜೆರ್ಸಿಯ ಶಾಸಕಾಂಗವು ರಾಜ್ಯ ಸೆನೆಟ್ ಮತ್ತು ಅಸೆಂಬ್ಲಿಯನ್ನು ಒಳಗೊಂಡಿದೆ ಮತ್ತು 40 ಜಿಲ್ಲೆಗಳಿಂದ 120 ಸದಸ್ಯರನ್ನು ಹೊಂದಿದೆ. ಪ್ರತಿ ಜಿಲ್ಲೆಯು ಸೆನೆಟ್‍ನಲ್ಲಿ ಒಬ್ಬ ಪ್ರತಿನಿಧಿಯನ್ನು ಮತ್ತು ಅಸೆಂಬ್ಲಿಯಲ್ಲಿ ಇಬ್ಬರು ನಾಲ್ಕು ಮತ್ತು ಎರಡು ವರ್ಷಗಳ ಅವಧಿಯನ್ನು ಪೂರೈಸುತ್ತದೆ.

ಗೋಪಾಲ, 2017 ರಲ್ಲಿ ಮೊದಲ ಬಾರಿಗೆ ಚುನಾಯಿತರಾದರು ಮತ್ತು 2021 ರಲ್ಲಿ ಮರು ಆಯ್ಕೆಯಾದರು, ಡಿನಿಸ್ಟ್ರಿಯನ್‍ಗೆ ಶೇಕಡಾ 58 ರಿಂದ 38 ರಷ್ಟು ಮತಗಳನ್ನು ಪಡೆದರು. ಅವರು ತಮ್ಮ ಯಶಸ್ಸಿಗೆ ಅವರ ಘಟಕ ಸೇವೆಗಳು ಮತ್ತು ದ್ವಿಪಕ್ಷೀಯತೆ ಕಾರಣ ಎಂದು ಹೇಳಿದರು.

ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ರೋಹಿಂಗ್ಯಾ ನಾಯಕನ ಬಂಧನ

ನೀವೆಲ್ಲರೂ ಇಂದು ರಾತ್ರಿ ಇತಿಹಾಸವನ್ನು ನಿರ್ಮಿಸಿದ್ದೀರಿ! ಫಲಿತಾಂಶ ಪ್ರಕಟವಾದ ನಂತರ ವರದಿಯಲ್ಲಿ ಗೋಪಾಲ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ. ಗೋಪಾಲ್ ಪ್ರಸ್ತುತ ಸೆನೆಟ್ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದಾರೆ ಮತ್ತು ಸೆನೆಟ್ ಬಹುಮತದ ಸಮ್ಮೇಳನದ ನಾಯಕರಾಗಿದ್ದಾರೆ. ಅವರ ಅಭಿಯಾನದ ಪ್ರಕಾರ ಅವರು ಈ ಹಿಂದೆ ಸೆನೆಟ್ ಮಿಲಿಟರಿ ಮತ್ತು ವೆಟರನ್ಸ ಅಫೇರ್ಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಅವರು ಸೆನೆಟ್ ಸರ್ಕಾರ, ವಾಜರಿಂಗ್ , ಪ್ರವಾಸೋದ್ಯಮ ಮತ್ತು ಐತಿಹಾಸಿಕ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷರು ಮತ್ತು ಆರೋಗ್ಯ, ಮಾನವ ಸೇವೆಗಳು ಮತ್ತು ಹಿರಿಯ ನಾಗರಿಕರ ಸಮಿತಿಯ ಸದಸ್ಯರೂ ಆಗಿದ್ದಾರೆ.

ನಾಳೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ ಅಭಿಷೇಕ್ ಬ್ಯಾನರ್ಜಿ

ಕೋಲ್ಕತ್ತಾ, ನ.8 (ಪಿಟಿಐ) ಆಪಾದಿತ ಶಾಲಾ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ.

ಬ್ಯಾನರ್ಜಿ ಅವರು ನಾಳೆ ಇಡಿ ಮುಂದೆ ಹಾಜರಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಮತ್ತು ಟಿಎಂಸಿ ವಕ್ತಾರ ಶಶಿ ಪಂಜಾ ಹೇಳಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ನಿರ್ಣಾಯಕ ಚುನಾವಣೆಗೆ ಮುನ್ನ ನಾಯಕರಿಗೆ ಕಿರುಕುಳ ನೀಡಲು ಬಿಜೆಪಿ ಇಂತಹ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ವಕ್ತಾರ ಶಮಿಕ್ ಲಾಹಿರಿ ಮಾತನಾಡಿ, ಪಕ್ಷಕ್ಕೆ ಸೇಡಿನ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಕೇಂದ್ರೀಯ ಸಂಸ್ಥೆಗಳಿಂದ ಸಮನ್ಸ್ ನೀಡುವುದು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದು, ಟಿಎಂಸಿಗೆ ಯಾವುದೇ ಸಮಸ್ಯೆ ಇದ್ದರೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದಿದ್ದಾರೆ.

ಭಾರತ-ಅಮೆರಿಕ ನಡುವೆ 2+2 ಸಚಿವರ ಮಾತುಕತೆ

ರಾಜ್ಯಕ್ಕೆ ನೀಡಬೇಕಾದ ಕೇಂದ್ರದ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ನಡೆದ ಟಿಎಂಸಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ಅಕ್ಟೋಬರ್ 3 ರ ಸಮನ್ಸ್‍ನಿಂದ ಹೊರಗುಳಿದ ನಂತರ ಅಕ್ಟೋಬರ್ 9 ರಂದು ಬ್ಯಾನರ್ಜಿಯವರಿಗೆ ಹಾಜರಾಗುವಂತೆ ಇಡಿ ಈ ಹಿಂದೆ ಸಮನ್ಸ್ ನೀಡಿತ್ತು.

ಸೆಪ್ಟೆಂಬರ್ 13 ರಂದು ನಡೆದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸುಮಾರು ಒಂಬತ್ತು ಗಂಟೆಗಳ ಕಾಲ ಇಡಿ ವಿಚಾರಣೆಗೆ ಒಳಗಾದ ಬ್ಯಾನರ್ಜಿ, ನಂತರ ವಿಚಾರಣೆಯು ತನಗೆ ಇಂಡಿಯಾ ಕೂಟದಲ್ಲಿ ಭಾಗವಹಿಸದಂತೆ ತಡೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.

ಅದಾನಿ ಸಂಸ್ಥೆಯಲ್ಲಿ ಅಮೆರಿಕದಿಂದ 553 ಮಿಲಿಯನ್ ಡಾಲರ್ ಹೂಡಿಕೆ

ನವದೆಹಲಿ,ನ.8-ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಭಾವ ಮೊಟಕುಗೊಳಿಸಲು ಯತ್ನಿಸುತ್ತಿರುವ ಅಮೆರಿಕ ಶ್ರೀಲಂಕಾದಲ್ಲಿರುವ ಭಾರತದ ಶತಕೋಟ್ಯಾಪತಿ ಗೌತಮ್ ಅದಾನಿ ಅಭಿವೃದ್ಧಿಪಡಿಸುತ್ತಿರುವ ಬಂದರು ಟರ್ಮಿನಲ್‍ಗೆ 553 ಮಿಲಿಯನ್ ಅಮೆರಿಕನ್ ಡಾಲರ್ ಹಣಕಾಸು ನೆರವು ಒದಗಿಸಲು ತೀರ್ಮಾನಿಸಿದೆ.

ಶ್ರೀಲಂಕಾದ ಬಂದರು ಮತ್ತು ಹೆದ್ದಾರಿ ಯೋಜನೆಗಳಿಗಾಗಿ ಚೀನಾದಿಂದ ಹೆಚ್ಚು ಸಾಲು ಪಡೆಯುವುದನ್ನು ಮನಗಂಡಿರುವ ಅಮೆರಿಕ ಶ್ರೀಲಂಕಾದ ಮೇಲೆ ಬೀಜಿಂಗ್ ಹಿಡಿತ ಸಡಿಲಿಸುವ ಪಣ ತೊಟ್ಟಿದೆ. ಅದಾನಿಗೆ, ಹಿಂಡೆನ್‍ಬರ್ಗ್ ರಿಸರ್ಚ್ ಕಿರು ಮಾರಾಟಗಾರರಿಂದ ವಂಚನೆಯ ಆರೋಪದ ನಂತರ ಈ ವರ್ಷದ ಆರಂಭದಲ್ಲಿ ಸಂಘಟಿತ ಮಾರುಕಟ್ಟೆ ಮೌಲ್ಯದಿಂದ ಶತಕೋಟಿಗಳನ್ನು ಅಳಿಸಿದ ನಂತರ ಅಮೆರಿಕದ ಈ ಹಣವು ನ್ಯಾಯಸಮ್ಮತತೆಯ ಮುದ್ರೆಯನ್ನು ನೀಡಬಹುದು.

ಮೋದಿ ವಿರುದ್ಧ ಹರಿಹಾಯ್ದ ಅಸಾದುದ್ದೀನ್ ಓವೈಸಿ

ಕೊಲಂಬೊದಲ್ಲಿನ ಡೀಪ್‍ವಾಟರ್ ವೆಸ್ಟ್ ಕಂಟೈನರ್ ಟರ್ಮಿನಲ್ ಏಷ್ಯಾದಲ್ಲಿ ಅಮೆರಿಕ ಸರ್ಕಾರಿ ಏಜೆನ್ಸಿಯ ಅತಿದೊಡ್ಡ ಮೂಲಸೌಕರ್ಯ ಹೂಡಿಕೆಯಾಗಿದೆ ಮತ್ತು ಜಾಗತಿಕವಾಗಿ ಅದರ ಅತಿದೊಡ್ಡ ಹೂಡಿಕೆಯಾಗಿದೆ. ಇದು ಶ್ರೀಲಂಕಾದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಎರಡೂ ದೇಶಗಳಿಗೆ ಪ್ರಮುಖ ಪಾಲುದಾರ ಭಾರತ ಸೇರಿದಂತೆ ಅದರ ಪ್ರಾದೇಶಿಕ ಆರ್ಥಿಕ ಏಕೀಕರಣ ಎಂದು ಡಿಎಫ್‍ಸಿ ಹೇಳಿಕೆಯಲ್ಲಿ ತಿಳಿಸಿದೆ.


ಕಳೆದ ವರ್ಷದ ಅಂತ್ಯದ ವೇಳೆಗೆ ದ್ವೀಪ ರಾಷ್ಟ್ರದಲ್ಲಿ ಚೀನಾ ಸುಮಾರು 2.2 ಶತಕೋಟಿ ಹೂಡಿಕೆ ಮಾಡಿದೆ, ಇದು ಚೀನಾದ ಅತಿದೊಡ್ಡ ವಿದೇಶಿ ನೇರ ಹೂಡಿಕೆಯಾಗಿರುವುದು ವಿಶೇಷ. ಅಮೆರಿಕ ನಿಧಿಯು ಸಣ್ಣ ಮಾರಾಟಗಾರ-ಸ್ಟುಂಗ್ ಅದಾನಿ ಗ್ರೂಪ್‍ಗೆ ಅನುಮೋದನೆಯಾಗಿ ಕಾರ್ಯನಿರ್ವಹಿಸಬಹುದು, ಜೊತೆಗೆ ಅದು ಬಹುಪಾಲು ಪಾಲನ್ನು ಹೊಂದಿರುವ ವಿವಾದಾತ್ಮಕ ಬಂದರು ಯೋಜನೆಯಾಗಿದೆ. ಹಿಂಡೆನ್‍ಬರ್ಗ್ ರಿಸರ್ಚ್ ಮತ್ತು ವಿವಿಧ ಮಾಧ್ಯಮಗಳ ತನಿಖೆಗಳು ಮಾಡಿದ ಕಾಪೆರ್ರೇಟ್ ವಂಚನೆ ಆರೋಪಗಳ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದೆ, ಅದನ್ನು ಪದೇ ಪದೇ ನಿರಾಕರಿಸಲಾಗಿದೆ.

ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್

ಹೈದರಾಬಾದ್,ನ.8- ಪವರ್ ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದೊಂದಿಗೆ ಬಿಜೆಪಿ ಸಖ್ಯ ಮುಂದುವರೆದಿದೆ. ತೆಲಂಗಾಣದಲ್ಲಿ ಬಿಜೆಪಿ ಹೆಜ್ಜೆಗುರುತು ಮೂಡಿಸುವ ಹುಮ್ಮಸ್ಸಿನಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪವನ್ ಕಲ್ಯಾಣ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಉಭಯ ಪಕ್ಷಗಳ ನಡುವಿನ ಮೈತ್ರಿ ಮುಂದುವರೆಯಲಿದೆ ಎಂಬ ಸೂಚನೆ ನೀಡಿದ್ದಾರೆ.

ತೆಲಂಗಾಣದಲ್ಲಿ ಜನಸೇನಾ ಪಕ್ಷಕ್ಕೆ ಎಂಟು ಸ್ಥಾನಗಳನ್ನು ನೀಡಲಾಗಿದೆ ಅಲ್ಲಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷವು ರೇಸ್‍ನಲ್ಲಿ ಇರುವುದಿಲ್ಲ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಇಲ್ಲಿಯವರೆಗೆ ರಾಜಕಾರಣದಲ್ಲಿ ಅಂತಹ ದೊಡ್ಡ ಪ್ರಭಾವ ಬೀರಿಲ್ಲ, ಆದರೂ ಕೆ ಚಂದ್ರಶೇಖರ್ ರಾವ್ ಅವರ ಭಾರತ ರಾಷ್ಟ್ರ ಸಮಿತಿಯಿಂದ ಆಳ್ವಿಕೆ ನಡೆಸುತ್ತಿರುವ ರಾಜ್ಯದಲ್ಲಿ ನಟನ ದೊಡ್ಡ ಅಭಿಮಾನಿ ಬಳಗವನ್ನು ಸೆಳೆಯಲು ಬಿಜೆಪಿ ಆಶಿಸುತ್ತಿದೆ.

ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ನಾಯ್ಡು ಅವರೊಂದಿಗೆ ಹೋರಾಡಲು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಟಿಡಿಪಿ ಮುಖ್ಯಸ್ಥರು 2018 ರ ಒಕ್ಕೂಟದಿಂದ ಹೊರನಡೆಯುವ ನಿರ್ಧಾರದ ನಂತರ ಮತ್ತೆ ಎನ್‍ಡಿಎ ಬಣದಲ್ಲಿ ಗುರುತಿಸಿಕೊಂಡಿಲ್ಲ.

ಕೇರಳದಲ್ಲಿ ಇಬ್ಬರು ನಕ್ಸಲರ ಬಂಧನ

ಆದರೆ ಇದು ಪವನ್ ಕಲ್ಯಾಣ್ ಅವರ ಬಿಜೆಪಿ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಿಲ್ಲ. ಇಂದು ಹೈದರಾಬಾದ್‍ನಲ್ಲಿ ನಡೆದ ಸಭೆಯಲ್ಲಿ, ಜನಸೇನಾ ಪಕ್ಷದ ಮುಖ್ಯಸ್ಥರು, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಪ್ರಧಾನಿ ಮೋದಿಯವರ ಕಠಿಣತೆ ಮತ್ತು ಚುನಾವಣಾ ಲಾಭಗಳನ್ನು ಮಾತ್ರ ನೋಡದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಾಗಿ ನಾನು ಇಷ್ಟಪಡುತ್ತೇನೆ ಎಂದು ಹೇಳಿದರು.

ಕುತೂಹಲ ಕೆರಳಿಸಿದ ವರುಣ್-ರಾಹುಲ್‍ ಭೇಟಿ

ನವದೆಹಲಿ,ನ.8- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವರುಣ್ ಗಾಂಧಿ ಅವರ ಭೇಟಿ ರಾಜಕೀಯ ವಲಯದಲ್ಲಿ ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶದ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಕೇದಾರನಾಥ ದೇವಾಲಯದಲ್ಲಿ ಒಟ್ಟಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕವಾಗಿ ಅಪರೂಪಕ್ಕೆ ಒಟ್ಟಿಗೆ ಕಾಣಿಸಿಕೊಳ್ಳುವ ಸೋದರ ಸಂಬಂಗಳ ನಡುವಿನ ಸಭೆಯು ವರುಣ್ ಗಾಂಧಿಯವರ ರಾಜಕೀಯ ಭವಿಷ್ಯದ ಬಗ್ಗೆ ಕೆಲವು ವಲಯಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿಯವರ ಪುತ್ರ ವರುಣ್ ಗಾಂಧಿ ಇತ್ತೀಚಿನ ತಿಂಗಳುಗಳಲ್ಲಿ ಪ್ರಮುಖ ಬಿಜೆಪಿ ಸಭೆಗಳಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಈಗ ರದ್ದಾದ ಕೃಷಿ ಕಾನೂನುಗಳು ಸೇರಿದಂತೆ ನಿರ್ಣಾಯಕ ವಿಷಯಗಳ ಕುರಿತು ಅವರ ಕಾಮೆಂಟ್‍ಗಳು ಕೆಲವೊಮ್ಮೆ ಪಕ್ಷದ ನಿಲುವಿಗೆ ಭಿನ್ನವಾಗಿವೆ.

ಮೋದಿ ವಿರುದ್ಧ ಹರಿಹಾಯ್ದ ಅಸಾದುದ್ದೀನ್ ಓವೈಸಿ

ಈ ಇಬ್ಬರು ಗಾಂಯರ ನಡುವಿನ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪತ್ರಿಕಾಗೋಷ್ಠಿಯಲ್ಲಿ ವರುಣ್ ಗಾಂಯನ್ನು ಕಾಂಗ್ರೆಸ್‍ಗೆ ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿರುವ ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ಧಾಂತವನ್ನು ವರುಣ್ ಅಳವಡಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ರಾಹುಲ್ ಗಾಂಧಿ ಕಳೆದ ಮೂರು ದಿನಗಳಿಂದ ಉತ್ತರಾಖಂಡದ ಕೇದಾರನಾಥದಲ್ಲಿದ್ದು, ವರುಣ್ ಗಾಂಧಿ ಮಂಗಳವಾರ ತಮ್ಮ ಕುಟುಂಬದೊಂದಿಗೆ ಶಿವನಿಗೆ ಸಮರ್ಪಿತವಾದ ದೇವಾಲಯಕ್ಕೆ ಭೇಟಿ ನೀಡಿದ್ದರು.