Home Blog Page 1846

ತುಮಕೂರಿನಲ್ಲಿ ಅಗ್ನಿ ಅವಘಡ : ವ್ಯಕ್ತಿ ಸಜೀವ ದಹನ

ತುಮಕೂರು, ನ.2- ನಗರದ ಹೊರವಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸಜೀವದಹನವಾಗಿರುವ ಘಟನೆ ನಡೆದಿದೆ. ಕ್ಯಾತ್ಸಂದ್ರದ ಗೋಕುಲ ಬಡಾವಣೆಯ ನಿವಾಸಿ ಶಿವಕುಮಾರ್ ಎನ್ನುವವರಿಗೆ ಸೇರಿದ ಕಟ್ಟಡದ ಕೆಳಗಡೆ ಗೋಬಿ ಅಂಗಡಿಗೆ ಬಾಡಿಗೆಗೆ ನೀಡಲಾಗಿತ್ತು. ಮೇಲಿನ ಭಾಗದ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳನ್ನು ಶೇಖರಿಸ ಲಾಗಿತ್ತು ಎನ್ನಲಾಗಿದೆ.

ಸ್ಥಳೀಯರು ಮತ್ತು ಸುತ್ತಮುತ್ತಲಿನವರಿಗೂ ಸತ್ತ ವ್ಯಕ್ತಿಯ ಬಗ್ಗೆ ಏನೂ ಮಾಹಿತಿ ಇದ್ದಂತಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಶಾರ್ಟ್ ಸಕ್ರ್ಯೂಟಿನಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ನಂದಿಸಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕೊಠಡಿ ಒಳಗೆ ಹೋಗಿ ಪರಿಶೀಲಿಸಿದಾಗ ವ್ಯಕ್ತಿ ಶವ ಪತ್ತೆಯಾಗಿದೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ಹಲವು ದಿನಗಳಿಂದ ನಿರುಪಯುಕ್ತವಾಗಿದ್ದ ಕೊಠಡಿಯಲ್ಲಿ ಈ ವ್ಯಕ್ತಿ ಯಾವಾಗ ಸೇರಿಕೊಂಡಿದ್ದ ಎನ್ನುವುದು ಕೂಡಾ ನಿಗೂಢವಾಗಿದ್ದು ತನಿಖೆಯ ನಂತರ ಸತ್ಯ ಹೊರಬೀಳಲಿದೆ. ಬೆಂಕಿಯ ಅರಿವಿಲ್ಲದೆ ಮಲಗಿದ್ದ ವ್ಯಕ್ತಿ ಸುಟ್ಟು ಕರಕಲಾಗಿರಬಹುದು ಎಂಬ ಮಾಹಿತಿ ಇದೆ.

ಸುದ್ದಿ ತಿಳಿದು ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಮೃತ ದೇಹ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

“ಪಾಪ ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಅನ್ನಿಸುತ್ತಿದೆ”

ಬೆಂಗಳೂರು,ನ.2- ಹಿಂದುಳಿದ ವರ್ಗಗಳ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷ ಈ ರೀತಿ ನಡೆಸಿಕೊಳ್ಳುತ್ತಿರುವುದು, ಅವರ ವಿರುದ್ದ ಕಾಂಗ್ರೆಸ್ ಗುಂಪುಗಾರಿಕೆ ನೋಡಿದರೆ ಲೋಕಸಭೆಯ ನಂತರ ಅವರ ಕುರ್ಚಿಗೆ ಕಂಟಕವೆಂದು ತೋರುತ್ತಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪಾಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವರ ಸರ್ಕಾರದಲ್ಲೇ ನಡೆಯುತ್ತಿರುವ ಷಡ್ಯಂತ್ರವನ್ನು ನೋಡಿದರೆ ನಮಗೆ ಅಯ್ಯೋ ಅನ್ನಿಸುತ್ತಿದೆ. ಸಿದ್ದರಾಮಯ್ಯನವರು ಹಿಂದಿವಾಲಾ ಸುರ್ಜೆವಾಲಾ ಅವರನ್ನು ಸಮಸ್ಯೆ ಬಗೆಹರಿಸಲು ಕರ್ನಾಟಕಕ್ಕೆ ಸ್ವಾಗತಿಸಿರುವುದು ಅವರ ಅಸಹಾಯಕತೆಯನ್ನು ತೋರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಮೊದಲು ಇದ್ದ ಎರಡು ಗುಂಪುಗಳು ಈಗ 5 ಆಗಿದ್ದು, ಎಲ್ಲಾ ಗುಂಪಿನ ನಾಯಕರು ಬೇರೆ ಬೇರೆ ರಾಜ್ಯಗಳಲ್ಲಿ ರೆಸಾರ್ಟ್ ಬುಕ್ ಮಾಡಿ ಕಾಯುತ್ತಿರುವಂತೆ ಇದೆ ಎಂದು ಟೀಕಿಸಿದ್ದಾರೆ. ರಾಜ್ಯದ ಜನರಿಗೆ ಇವರ ಅಗ್ರಿಮೆಂಟ್ ಎಷ್ಟು ವರ್ಷಕ್ಕೆ ಎಂದು ಕಾಂಗ್ರೆಸ್ ಪಕ್ಷ ಹಾಗು ಸಿದ್ದರಾಮಯ್ಯನವರು ಸ್ಪಷ್ಟಪಡಿಸಲಿ, ಒಂದು ವರ್ಷವೋ, ಎರಡೋ ! ನಂತರ ಯಾರು? ಈ ಮಂತ್ರಿ ಮಂಡಲ ಒಂದು ವರ್ಷಕ್ಕೋ , ಎರಡೋ ಅಥವಾ ಮೂರೋ! ಈ ಸರ್ಕಾರ ಒಂದು ವರ್ಷಕ್ಕೋ , ಎರಡೂ ಅಥವಾ ಮೂರೋ ಎಂದು ಕುಹುಕವಾಡಿದ್ದಾರೆ.

ಮಸೂದೆಗೆ ಅಂಗೀಕಾರ ನೀಡದ ರಾಜ್ಯಪಾಲರ ವಿರುದ್ಧ ಸುಪ್ರೀಂಗೆ ದೂರು

ಕಾಂಗ್ರೆಸ್ ಕಚೇರಿಯಲ್ಲಿ 3 ಗಂಟೆ ನಡೆದ ರಾಜಿಸಂಧಾನ ವಿಫಲವಾಗಿರುವುದರ ಹಿಂದೆ ಯಾರು ಕೊಟ್ಟಿರುವ ಉಡುಗೊರೆಗಳು ಕಾರಣ ಎಂದು ಕಾಂಗ್ರೆಸ್ ಕಚೇರಿಯ ಗೋಡೆಗಳೂ ಕೂಗುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೆಯ ಸಂಧರ್ಭದಲ್ಲಿ ಪಿಎಸ್‍ಐ ಸ್ಕ್ಯಾಮ್ ಬಗ್ಗೆ ಬಾಯಿ ಬಡಿದುಕೊಂಡಿದ್ದ ಕಾಂಗ್ರೆಸ್ ನಾಯಕರು, ಈಗ ಅವರ ತನಿಖೆ ಎಲ್ಲಿಗೆ ಬಂದಿದೆ ಎಂದು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರು ಬೇಷರತ್ ಕ್ಷಮೆಯಾಚಿಸಬೇಕು. ಎಷ್ಟು ಜನರನ್ನು ಬಂಧಿಸಲಾಗಿದೆ? ಇವರ ತನಿಖೆಯಿಂದ ಯಾರ ಹೆಸರು ಈ ಹಗರಣದಲ್ಲಿ ಬೆಳಕಿಗೆ ಬಂದಿದೆ? ಇವೆಲ್ಲವನ್ನೂ ಬಹಿರಂಗಪಡಿಸಲಿ. ದಿನಕ್ಕೊಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ನಾಯಕರು ಈಗ ಎಲ್ಲಿ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ರಾಜ್ಯದ 200ಕ್ಕೂ ಅಧಿಕ ತಾಲ್ಲೂಕುಗಳು ಬರದ ಬೇಗೆಯಲ್ಲಿ ನಲುಗುತ್ತಿದೆ, ಬರ ಪರಿಹಾರ ಕೊಡಿ ಅಂದರೆ ಸರಕಾರದಲ್ಲಿ ಹಣ ಇಲ್ಲ. ರಾಜ್ಯ ವಿದ್ಯುಚ್ಛಕ್ತಿ ಕೊರತೆಯಿಂದ ನರಳುತ್ತಿದೆ , ವಿದ್ಯುತ್ ಕೊಂಡುಕೊಳ್ಳಲು ಸರಕಾರದಲ್ಲಿ ಹಣ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸಿ ಎಂದರೆ, ಅಭಿವೃದ್ಧಿ ಕಾಮಗಾರಿಗೆ ಸರಕಾರದಲ್ಲಿ ಹಣ ಇಲ್ಲ. ಅಂಗನವಾಡಿ ಮಕ್ಕಳಿಗೆ ನೀಡುತ್ತಿದ್ದ ಹಾಲು ಮೊಟ್ಟೆ ಕಡಿತ, ಯಾಕೆಂದರೆ ಮೊಟ್ಟೆ ನೀಡಲು ಸರಕಾರದಲ್ಲಿ ಹಣವಿಲ್ಲ ಎಂದು ಕಿಡಿಕಾರಿದ್ದಾರೆ. ಹೇಳುವುದಕ್ಕೆ ಸಮಾಜವಾದಿ, ಆದರೆ ಸ್ವ – ಮಜಾವಾದಿ !! ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗಾಗಿ : ಬಿಎಸ್‌ವೈ

ಬೆಂಗಳೂರು,ನ.2- ಎಐಸಿಸಿ ಕಾಂಗ್ರೆಸ್ ಉಸ್ತುವಾರಿಗಳು ಕರ್ನಾಟಕಕ್ಕೆ ಬರುವುದೇ ಹಣ ವಸೂಲಿಗೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆಂತರಿಕ ಕಚ್ಚಾಟದಿಂದಾಗಿ ಅಭಿವೃದ್ದಿ ಕಾಮಗಾರಿಗಳು ನಿಂತುಹೋಗಿವೆ ಎಂದು ಆರೋಪಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೆವಾಲ ಮತ್ತು ಕೆ.ಸಿ.ವೇಣುಗೋಪಾಲ್ ಕರ್ನಾಟಕಕ್ಕೆ ಏಕಾಏಕಿ ಬಂದಿದ್ದು ಏಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಚಿವರು ಮತ್ತು ಶಾಸಕರು ನಾಯಿನರಿಗಳ ತರ ಕಿತ್ತಾಡಿಕೊಳುತ್ತಿದ್ದಾರೆ. ಉಸ್ತುವಾರಿಗಳು ರಾಜ್ಯಕ್ಕೆ ಬರುವುದು ವಸೂಲಿಗೆ ಎಂಬುದು ಬಾಯ್ಬಿಟ್ಟು ಹೇಳಬೇಕೆ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಆದರೆ ಸರ್ಕಾರ ಮಾತ್ರ ಗಾಳಿಯಿಲ್ಲದೇ ಮುಂದೆ ಹೋಗುತ್ತಿಲ್ಲ. ತಮ್ಮ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಿತ್ರ ಪರಿಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತವಾಗಿವೆ.

ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದ್ದಾರೆ. ಬರ ಪೀಡಿತ ಪ್ರದೇಶಕ್ಕೆ ಸಿಎಂ ಸೇರಿ ಒಬ್ಬ ಮಂತ್ರಿ ಕೂಡ ಹೋಗಿಲ್ಲ. ಸರ್ಕಾರ ಯಾವ ರೀತಿ ದಿವಾಳಿ ಯಾಗಿದೆ ಎಂದರೆ ಶಾಸಕರ ಅನುದಾನ 2 ಕೋಟಿ ಬದಲು 50 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದಾರೆ. ಅನುದಾನವನ್ನು ಸಹ ಸರಿಯಾಗಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ತಾಂಡಾ, ಬೋವಿ, ಅಂಬೇಡ್ಕರ್ ನಿಗಮಗಳಿಗೆ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ. ರೈತ ಬರಗಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ನೀಡಲಾಗುತಿತ್ತು. ಮುಂದೆ ವಿದ್ಯುತ್ ಶುಲ್ಕ ರೈತನೇ ಭರಿಸುವ ಕೆಲಸ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯನವರು ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಚಾಳಿ ಇಟ್ಟುಕೊಂಡಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇರಬಹುದು. ಕೇಂದ್ರ ಸರ್ಕಾರ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಎಂದು ಸಮರ್ಥಿಸಿಕೊಂಡರು.

ಎನ್‍ಡಿಆರ್‍ಎಫ್‍ನಿಂದ 12,784 ಕೋಟಿ, ಎಸ್‍ಡಿಆರ್‍ಎಫ್‍ನಿಂದಲೂ ಹಣ ಬಿಡುಗಡೆಯಾಗಿದೆ. 5.23 ಲಕ್ಷ ಕೋಟಿ ಕೇಂದ್ರದ ಯೋಜನೆ ಹೊರತುಪಡಿಸಿ ಕೊಟ್ಟಿದ್ದಾರೆ. 37 ಲಕ್ಷ ಕೋಟಿ ರಸ್ತೆ ಕಾಮಗಾರಿಗೆ ನೀಡಲಾಗಿದೆ. ಹೆದ್ದಾರಿ ಕಾಮಗಾರಿಗೆ 47,200 ಕೋಟಿ, ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ವೇ ಜೊತೆಗೆ ಚೆನೈ-ಬೆಂಗಳೂರು ಎಕ್ಸ್ಪ್ರೆಸ್ ವೇ ನಿರ್ಮಾಣವಾಗುತ್ತಿದೆ ಎಂದರು.

ಕಿಸಾನ್ ಯೋಜನೆಗೆ ನಮ್ಮ ಸರ್ಕಾರ 4 ಸಾವಿರ ಕೊಡುತ್ತಿತ್ತು. ಈಗ ಸಿದ್ದರಾಮಯ್ಯನವರು ಅದನ್ನೂ ನಿಲ್ಲಿಸಿದ್ದಾರೆ. ಭದ್ರಾ ಯೋಜನೆಗೆ ನೀಡಲಾಗಿದೆ. ರಾಜ್ಯದ ರೈಲು ಯೋಜನೆಗೆ 800 ಕೋಟಿ ನೀಡಿದರೆ ಈಗ 3,700 ಕೋಟಿ ಕೊಡಲಾಗುತ್ತಿದೆ. ಬೆಂಗಳೂರು ಉಪರೈಲು ಯೋಜನೆಗೆ 400 ಕೋಟಿ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ಎರಡು, ಮೂರನೇ ಯೋಜನೆಗೆ ಹಣ ಬಿಡುಗಡೆ ಮಾಡಿದೆ. ಮೋದಿ ಅವರು ರಾಜಕೀಯ ಮಾಡದೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾವು ಆರು ತಿಂಗಳು ಅವಕಾಶ ನೀಡಿದೆವು. ಆದರೆ ಆರು ತಿಂಗಳಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಹಾಗಾಗಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗಲಿದೆ. ಹೊಸ ಪಂಪ್‍ಸೆಟ್‍ಗೆ ರೈತ ಎರಡು ಲಕ್ಷ ಕೊಡಬೇಕಿದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ, ರಘು, ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ರವಿಕುಮಾರ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.

ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ನವದೆಹಲಿ,ನ.2- ಐಐಟಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಮನೆಯಲ್ಲಿ ಭಾರ ಎತ್ತುವ ರಾಡ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿ ಪನವ್ ಜೈನ್(23) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಪೋಷಕರು ವಾಕಿಂಗ್ ಮುಗಿಸಿ ನಿನ್ನೆ ರಾತ್ರಿ 9 ಗಂಟೆಗೆ ಮನೆಗೆ ಹಿಂತಿರುಗಿದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ತಕ್ಷಣವೇ ಪೋಷಕರು ಅವರನ್ನು ಪುಷ್ಪಾಂಜಲಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗೆ ಪನವ್ ಜೈನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ಪನವ್ ತಮ್ಮ ಮನೆಯಲ್ಲಿ ಅಳವಡಿಸಲಾಗಿದ್ದ ಭಾರ ಎತ್ತುವ ರಾಡ್‍ನಲ್ಲಿ ದುಪಟ್ಟಾ (ಸ್ಕಾರ್ಫ್) ನಿಂದ ನೇಣು ಹಾಕಿಕೊಂಡಿದ್ದಾನೆ. ತನ್ನ ಮಗ ಕಳೆದ ಕೆಲವು ತಿಂಗಳುಗಳಿಂದ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾನೆ ಮತ್ತು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪವನ್ ತಂದೆ ತಿಳಿಸಿದ್ದಾರೆ.

ಈವರೆಗೂ ಯಾವುದೇ ಆತ್ಮಹತ್ಯೆಪತ್ರ ಪತ್ತೆಯಾಗಿಲ್ಲ . ಪ್ರಕರಣ ಕುರಿತು ಹೆಚ್ಚಿನ ತನಿಖೆಗೆ ಮುಂದಾಗಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು

ನವದೆಹಲಿ,ನ.2- ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೀಡಿರುವ ಸಮನ್ಸ್ ಕಾನೂನು ಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ದೂರಿರುವ ಮುಖ್ಯಮಂತ್ರಿ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆಗೆ ಇಂದು ಹಾಜರಾಗಬೇಕೆಂದು ಇಡಿ ಅಧಿಕಾರಿಗಳು ಕೇಜ್ರಿವಾಲ್‍ಗೆ ಸಮನ್ಸ್ ಜಾರಿ ಮಾಡಿದ್ದರು. ಈ ಸಮನ್ಸ್‍ಗೆ ಉತ್ತರ ನೀಡಿರುವ ಕೇಜ್ರಿವಾಲ್ ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ. ಬಿಜೆಪಿ ನಿರ್ದೇಶನದಂತೆ ನನಗೆ ಸಮನ್ಸ್ ಜಾರಿ ಮಾಡಲಾಗಿದೆ. ಮೊದಲು ಇದನ್ನು ಹಿಂಪಡೆಯಿರಿ ಎಂದು ಮನವಿ ಮಾಡಿದ್ದಾರೆ.

ರಾಜಕೀಯ ಪ್ರೇರಿತವಾದ ಸಮನ್ಸ್‍ಗೆ ನಾನು ವಿಚಾರಣೆಗೆ ಹಾಜರಾಗಬೇಕಾದ ಅಗತ್ಯವಿಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ನಾನು ಪ್ರಚಾರದಲ್ಲಿ ತೊಡಗಬಾರದೆಂಬ ಒಂದೇ ಕಾರಣಕ್ಕಾಗಿ ಸಮನ್ಸ್ ಜಾರಿ ಮಾಡಲಾಗಿದೆ. ಕೂಡಲೇ ಇಡಿ ಅಧಿಕಾರಿಗಳು ಸಮನ್ಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲಗಳ ಪ್ರಕಾರ ಕೇಜ್ರಿವಾಲ್ ಇಂದು ಮಧ್ಯಪ್ರದೇಶದ ಸಿಂಗ್ರೌಲಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರಾಣಿ ಅಗರ್‍ವಾಲ್ ಪರವಾಗಿ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಎಎಪಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸೇರಿದಂತೆ ಮತ್ತಿತರರು ಪ್ರಚಾರದಲ್ಲಿ ತಡಗಿಸಿಕೊಳ್ಳಲಿದ್ದಾರೆ.

ಬಿಜೆಪಿ ನನ್ನನ್ನು ಪ್ರಚಾರ ಮಾಡದಂತೆ ತಡೆಯಲು ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನಾನು ತನಿಖಾ ಸಂಸ್ಥೆಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವುಗಳು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಎಲ್ಲವೂ ಕೇಂದ್ರ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿರುವುದರಿಂದ ನನಗೆ ನೀಡಿರುವ ಸಮನ್ಸ್ ಕಾನೂನು ಬಾಹಿರ ಎಂದು ತಮ್ಮ ನಡೆಯನ್ನು ಕೇಜ್ರಿವಾಲ್ ಸಮರ್ಥಿಸಿಕೊಂಡಿದ್ದಾರೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ಏನಿದು ಪ್ರಕರಣ:
ದೆಹಲಿ ಸರ್ಕಾರ 2021ರ ನವೆಂಬರ್ 17ರಂದು ಈ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಭ್ರಷ್ಟಾಚಾರ ಆರೋಪದ ಮೇಲೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಇದನ್ನು ರದ್ದುಗೊಳಿಸಲಾಯಿತು. ಈ ಅಬಕಾರಿ ನೀತಿಯು ಆರ್ಥಿಕ ಲಾಭ ಪಡೆಯುವ ಸಲುವಾಗಿ ಮದ್ಯದ ಪರವಾನಗಿಯನ್ನು ಅನರ್ಹರಿಗೂ ನೀಡುವಲ್ಲಿ ಸರ್ಕಾರ ಒಲವು ತೋರಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ದೆಹಲಿ ಸರ್ಕಾರ ಮತ್ತು ಸಿಸೋಡಿಯಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.

ಕಳೆದ ಫೆಬ್ರವರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಅ.4ರಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಸಿದ ಅದೇ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‍ನಲ್ಲಿ ಕೇಜ್ರಿವಾಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸುಮಾರು ಒಂಬತ್ತು ಗಂಟೆಗಳ ಕಾಲ ಪ್ರಶ್ನಿಸಿತ್ತು. ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯನ್ನು ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿದೆ.ಏಕೆಂದರೆ ಇದು ಕೆಲವು ಮದ್ಯದ ವ್ಯಾಪಾರಿಗಳಿಗೆ ಒಲವು ತೋರಿದೆ ಎಂದು ಆಪಾದಿಸಲಾಗಿದೆ.

2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಮೈತ್ರಿಕೂಟದ ಉನ್ನತ ನಾಯಕರನ್ನು ಗುರಿಯಾಗಿಸುವ ಬಿಜೆಪಿಯ ಯೋಜನೆಯ ಭಾಗವಾಗಿ ದೆಹಲಿ ಮುಖ್ಯಮಂತ್ರಿಯನ್ನು ಮೊದಲು ಬಂಧಿಸಲಾಗುವುದು ಎಂದು ಕೇಜ್ರಿವಾಲ್ ಪಕ್ಷ ಆರೋಪಿಸಿದೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಎಪಿ ನಾಯಕ ರಾಘವ್ ಚಡ್ಡಾ ಅವರು 2014 ರಿಂದ ತನಿಖಾ ಸಂಸ್ಥೆಗಳು ದಾಖಲಾದ ಶೇಕಡಾ 95 ರಷ್ಟು ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧವಾಗಿವೆ ಎಂದಿದ್ದಾರೆ. ಇದೀಗ ಭಾರತ ಮೈತ್ರಿಕೂಟ ರಚನೆಯಾದ ನಂತರ ಬಿಜೆಪಿಯು ಕಂಗಾಲಾಗಿದೆ. ಅವರು ಭಾರತದ ಉನ್ನತ ನಾಯಕರನ್ನು ಗುರಿಯಾಗಿಸಲು ಯೋಜನೆ ರೂಪಿಸಿದ್ದಾರೆ ಎಂದು ನಮಗೆ ಮೂಲಗಳಿಂದ ತಿಳಿದುಬಂದಿದೆ. ಈ ಯೋಜನೆಯಲ್ಲಿ ಮೊದಲ ಬಂಧನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಿರುತ್ತದೆ ಎಂದು ಅವರು ಹೇಳಿದರು.

ಬಿಜೆಪಿಯು ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ ಎಂದು ತಿಳಿದಿದೆ. ಕೇಜ್ರಿವಾಲ್ ಅವರನ್ನು ಚುನಾವಣೆಯಲ್ಲಿ ಸ್ರ್ಪಸಲು ಸಾಧ್ಯವಾಗದಂತೆ ಕೇಜ್ರಿವಾಲ್ ಅವರನ್ನು ಬಂಧಿಸಲು ಅದು ಯೋಜಿಸುತ್ತಿದೆ ಎಂದು ಚಡ್ಡಾ ಆರೋಪಿಸಿದ್ದರು.

ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ವಿದೇಶಾಂಗ, ರಕ್ಷಣಾ ಕಾರ್ಯದರ್ಶಿಗಳು

ವಾಷಿಂಗ್ಟನ್, ನ 2 (ಪಿಟಿಐ) ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ ಆಸ್ಟಿನ್ ಅವರು ಈ ತಿಂಗಳು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಭೇಟಿ ಸಂದರ್ಭದಲ್ಲಿ ಅವರು ತಮ್ಮ ಭಾರತೀಯ ಸಹವರ್ತಿಗಳಾದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ 2+2 ಸಚಿವ ಸಂವಾದ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಸ್ಟೇಟ್ ಡಿಪಾಟ್ರ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಭಾರತಕ್ಕೆ ಬ್ಲಿಂಕನ್ ಅವರ ಪ್ರವಾಸವು ಒಂದು ವಾರಕ್ಕೂ ಹೆಚ್ಚು ಅವಧಿಯ ಪ್ರವಾಸದ ಕೊನೆಯಲ್ಲಿ ಬರುತ್ತದೆ – ನವೆಂಬರ್ 2 ರಿಂದ ನವೆಂಬರ್ 10 ರವರೆಗೆ – ಇಸ್ರೇಲ್ ಮತ್ತು ಜೋರ್ಡಾನ್‍ನಿಂದ ಪ್ರಾರಂಭಿಸಿ ಇಂಡೋ-ಪೆಸಿಫಿಕ್ ಜಪಾನ್, ದಕ್ಷಿಣ ಕೊರಿಯಾ ಮತ್ತು ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಹಿಳೆಯರಿಗೆ 4 ಸಾವಿರ ರೂ.ಲಾಭ ; ರಾಹುಲ್

ಈ ದೇಶಗಳಿಗೆ ಅವರ ಪ್ರವಾಸದ ನಿಖರವಾದ ದಿನಾಂಕಗಳನ್ನು ಘೋಷಿಸಲಾಗಿಲ್ಲ. ನವದೆಹಲಿಯಲ್ಲಿ ಅಮೆರಿಕದ ನಿಯೋಗ 2+2 ಸಚಿವರ ಸಂವಾದದಲ್ಲಿ ಭಾಗವಹಿಸಲಿದೆ. ನಿಯೋಗವು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಹಿರಿಯ ಭಾರತೀಯ ಅಧಿಕಾರಿಗಳನ್ನು ಭೇಟಿ ಮಾಡಿ ದ್ವಿಪಕ್ಷೀಯ ಮತ್ತು ಜಾಗತಿಕ ಕಾಳಜಿಗಳು ಮತ್ತು ಇಂಡೋ-ಪೆಸಿಫಿಕ್‍ನಲ್ಲಿನ ಬೆಳವಣಿಗೆಗಳೆರಡನ್ನೂ ಚರ್ಚಿಸುತ್ತದೆ ಎಂದು ಮಿಲ್ಲರ್ ಹೇಳಿದರು. ಬ್ಲಿಂಕನ್ ಗುರುವಾರ ಟೆಲ್ ಅವೀವ್‍ಗೆ ಹೊರಡುತ್ತಿದ್ದಾರೆ.

ಮಸೂದೆಗೆ ಅಂಗೀಕಾರ ನೀಡದ ರಾಜ್ಯಪಾಲರ ವಿರುದ್ಧ ಸುಪ್ರೀಂಗೆ ದೂರು

ನವದೆಹಲಿ,ನ.2- ಸರ್ಕಾರದ ಮಸೂದೆಗಳಿಗೆ ಅಂಗೀಕಾರ ನೀಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಧೋರಣೆ ವಿರುದ್ಧ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ನಮ್ಮ ಸರ್ಕಾರ ಮಂಡಿಸಿರುವ ಎಂಟು ಮಸೂದೆಗಳಿಗೆ ಅಂಗೀಕಾರ ನೀಡುವಂತೆ ರಾಜ್ಯಪಾಲರಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿಕೊಂಡಿದೆ.

ತನ್ನ ಅರ್ಜಿಯಲ್ಲಿ ಕೇರಳ ಸರ್ಕಾರವು ರಾಜ್ಯಪಾಲರು ಸಮಂಜಸವಾದ ಸಮಯದಲ್ಲಿ ಮಂಡಿಸಿದ ಪ್ರತಿಯೊಂದು ಮಸೂದೆಯನ್ನು ವಿಲೇವಾರಿ ಮಾಡಲು ಬದ್ಧರಾಗಿದ್ದಾರೆ, ಇದು ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಜನರ ಅಗತ್ಯತೆಗಳನ್ನು ಪರಿಗಣಿಸಿ ಕಲ್ಯಾಣ ಕ್ರಮಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಮೇಲೆ ಪರಿಣಾಮ ಬೀರುವ ಇತರ ಕಾನೂನುಗಳನ್ನು ಹೊಂದಿರಬೇಕು.

ಆದರೂ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಕಾರ ಮತ್ತು ಕರ್ತವ್ಯಗಳನ್ನು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ರಾಜ್ಯಪಾಲರ ಬಳಿ ಎಂಟು ಮಸೂದೆಗಳು ಬಾಕಿ ಉಳಿದಿವೆ, ಅವುಗಳಲ್ಲಿ ಮೂರು ಸುಮಾರು ಎರಡು ವರ್ಷಗಳಿಂದ ಅವರ ಮೇಜಿನ ಮೇಲೆ ಮತ್ತು ಮೂರು 12 ತಿಂಗಳುಗಳಿಗಿಂತ ಹೆಚ್ಚು ಕಾಲ ಇವೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಹಿಳೆಯರಿಗೆ 4 ಸಾವಿರ ರೂ.ಲಾಭ ; ರಾಹುಲ್

ಬಾಕಿ ಉಳಿದಿರುವ ಬಿಲ್‍ಗಳಲ್ಲಿ ಒಂದು ಎಂದರೆ ಖಾನ್ ಅವರನ್ನು ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ತೆಗೆದುಹಾಕುವುದು. ಈ ಹಿಂದೆ ಆಡಳಿತ ಪಕ್ಷವು ಪಕ್ಷದ ನಾಯಕರ ಕುಟುಂಬದ ಸದಸ್ಯರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸುತ್ತಿದೆ ಎಂದು ರಾಜ್ಯಪಾಲರು ಆರೋಪಿಸಿದ್ದರು.

37 ನಾಗರಿಕರನ್ನು ಕೊಂದ ನೈಜಿರಿಯಾ ಉಗ್ರರು

ಮೈದುಗುರಿ, ನ.2- ಈಶಾನ್ಯ ನೈಜೀರಿಯಾದಲ್ಲಿ ಉಗ್ರಗಾಮಿಗಳು ಎರಡು ವಿಭಿನ್ನ ದಾಳಿಗಳಲ್ಲಿ ಕನಿಷ್ಠ 37 ಗ್ರಾಮಸ್ಥರನ್ನು ಕೊಂದು ಹಾಕಿದ್ದಾರೆ. ನೈಜೀರಿಯಾದ ಯೋಬೆ ರಾಜ್ಯದ ಗೈದಮ್ ಜಿಲ್ಲೆಯ ಗ್ರಾಮಸ್ಥರನ್ನು ಗುರಿಯಾಗಿಸಿಕೊಂಡ ಉಗ್ರರು, ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಮೊದಲ ದಾಳಿಯಲ್ಲಿ, 20 ಜನರನ್ನು ಕೊಲ್ಲಲು ಲ್ಯಾಂಡ್ ಮೈನ್ ಬಳಸಿ ಮೊದಲು 17 ಜನರನ್ನು ಗುಂಡಿಕ್ಕಿ ಕೊಂದರು ಎಂದು ಸಾಕ್ಷಿಗಳು ತಿಳಿಸಿದ್ದಾರೆ.

ಬೊಕೊ ಹರಾಮ್ ಇಸ್ಲಾಮಿಕ್ ಉಗ್ರಗಾಮಿ ಗುಂಪು 2009 ರಲ್ಲಿ ಈಶಾನ್ಯ ನೈಜೀರಿಯಾದಲ್ಲಿ ಇಸ್ಲಾಮಿಕ್ ಕಾನೂನು ಅಥವಾ ಷರಿಯಾದ ಆಮೂಲಾಗ್ರ ವ್ಯಾಖ್ಯಾನವನ್ನು ಸ್ಥಾಪಿಸುವ ಪ್ರಯತ್ನದಲ್ಲಿ ದಂಗೆಯನ್ನು ಪ್ರಾರಂಭಿಸಿತು. ನೆರೆಯ ಯೋಬ್‍ನ ಬೊರ್ನೊ ರಾಜ್ಯದಲ್ಲಿ ಕೇಂದ್ರೀಕೃತವಾಗಿರುವ ಉಗ್ರಗಾಮಿ ಹಿಂಸಾಚಾರದಿಂದಾಗಿ ಕನಿಷ್ಠ 35,000 ಜನರು ಸಾವನ್ನಪ್ಪಿದ್ದಾರೆ ಮತ್ತು 2 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ಅವರು ಈಶಾನ್ಯ ಮತ್ತು ವಾಯುವ್ಯ ಮತ್ತು ಮಧ್ಯ ಪ್ರದೇಶಗಳಲ್ಲಿ ದೇಶದ ಭದ್ರತಾ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಲಿಲ್ಲ, ಅಲ್ಲಿ ಡಜನ್‍ಗಟ್ಟಲೆ ಸಶಸ್ತ್ರ ಗುಂಪುಗಳು ಗ್ರಾಮಸ್ಥರನ್ನು ಕೊಂದು ಸುಲಿಗೆಗಾಗಿ ಪ್ರಯಾಣಿಕರನ್ನು ಅಪಹರಿಸುತ್ತಿವೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಹಿಳೆಯರಿಗೆ 4 ಸಾವಿರ ರೂ.ಲಾಭ ; ರಾಹುಲ್

ಗೈಡಮ್‍ನ ದೂರದ ಗುರೋಕಾಯೆಯಾ ಗ್ರಾಮದಲ್ಲಿ ಬಂದೂಕುಧಾರಿಗಳು ಕೆಲವು ಗ್ರಾಮಸ್ಥರ ಮೇಲೆ ಗುಂಡು ಹಾರಿಸಿ ಅವರಲ್ಲಿ 17 ಮಂದಿಯನ್ನು ಕೊಂದರು ಎಂದು ಆ ಪ್ರದೇಶದ ನಿವಾಸಿ ಶೈಬು ಬಾಬಗಾನ ಹೇಳಿದ್ದಾರೆ. ಅವರ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೋಗಿದ್ದ ಕನಿಷ್ಠ 20 ಗ್ರಾಮಸ್ಥರನ್ನು ಲ್ಯಾಂಡ್ ಮೈನ್ ಬಳಸಿ ಹತ್ಯೆ ಮಾಡಲಾಗಿದೆಯಂತೆ.

25 ದಿನಗಳ ಯುದ್ಧದಲ್ಲಿ 3600 ಪ್ಯಾಲೆಸ್ತೀನ್ ಮಕ್ಕಳು ಸಾವು

ದೇರ್-ಅಲ್-ಬಾಲಾಹ್, ನ.2 – ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಮೊದಲ 25 ದಿನಗಳಲ್ಲಿ 3,600 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಕ್ಕಳನ್ನು ಮಿಸ್ ಫೈರಡ್ ರಾಕೆಟ್‍ಗಳಿಂದ ಒಡೆದರು, ಸ್ಪೋಟಗಳಿಂದ ಸುಟ್ಟು ಮತ್ತು ಕಟ್ಟಡಗಳಿಂದ ಪುಡಿಮಾಡಲ್ಪಟ್ಟರು, ಮತ್ತು ಅವರಲ್ಲಿ ನವಜಾತ ಶಿಶುಗಳು ಮತ್ತು ಅಂಬೆಗಾಲಿಡುವವರು, ಅತ್ಯಾಸಕ್ತಿಯ ಓದುಗರು, ಮಹತ್ವಾಕಾಂಕ್ಷಿ ಪತ್ರಕರ್ತರು ಮತ್ತು ಚರ್ಚ್‍ನಲ್ಲಿ ಸುರಕ್ಷಿತವಾಗಿರಬೇಕೆಂದು ಭಾವಿಸಿದ ಹುಡುಗರು ಇದ್ದರು ಎಂದು ಮಾಹಿತಿ ನೀಡಲಾಗಿದೆ.

ಗಾಜಾ ಪಟ್ಟಿಯ 2.3 ಮಿಲಿಯನ್ ನಿವಾಸಿಗಳಲ್ಲಿ ಅರ್ಧದಷ್ಟು ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು ಯುದ್ಧದಲ್ಲಿ ಇಲ್ಲಿಯವರೆಗೆ ಕೊಲ್ಲಲ್ಪಟ್ಟವರಲ್ಲಿ 40 ಪ್ರತಿಶತದಷ್ಟು ಮಕ್ಕಳು ಇದ್ದಾರೆ. ಕಳೆದ ವಾರ ಬಿಡುಗಡೆಯಾದ ಗಾಜಾ ಆರೋಗ್ಯ ಸಚಿವಾಲಯದ ದತ್ತಾಂಶದ ಅಸೋಸಿಯೇಟೆಡ್ ಪ್ರೆಸ್ ವಿಶ್ಲೇಷಣೆಯು ಅಕ್ಟೋಬರ್ 26 ರ ಹೊತ್ತಿಗೆ, 12 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 2,001 ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ, ಇದರಲ್ಲಿ 615 ಮಕ್ಕಳಲ್ಲಿ 3 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಭಾರತ-ಪೋರ್ಚಗಲ್ ನಡುವೆ ನೇರ ವಾಯು ಸಂಪರ್ಕ ಬೇಕು : ಜೈಶಂಕರ್

ಇಸ್ರೇಲ್ ತನ್ನ ವೈಮಾನಿಕ ದಾಳಿಗಳು ಹಮಾಸ್ ಉಗ್ರಗಾಮಿ ತಾಣಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳುತ್ತದೆ ಮತ್ತು ಅದು ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ಆರೋಪಿಸಿದೆ. 500 ಕ್ಕೂ ಹೆಚ್ಚು ಉಗ್ರಗಾಮಿ ರಾಕೆಟ್‍ಗಳು ತಪ್ಪಾಗಿ ಗುಂಡು ಹಾರಿಸಿ ಗಾಜಾದಲ್ಲಿ ಇಳಿದಿದ್ದು, ಅಪರಿಚಿತ ಸಂಖ್ಯೆಯ ಪ್ಯಾಲೆಸ್ಟೀನಿಯಾದವರನ್ನು ಕೊಂದಿದೆ ಎಂದು ಅದು ಹೇಳಿದೆ.

ಸಂಸ್ಕೃತದಲ್ಲಿ ಬಂತು ನಾಟು ನಾಟು ಸಾಂಗ್

ಪುಣೆ, ನ.2 (ಪಿಟಿಐ)-ಆರ್‍ಆರ್‍ಆರ್ ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ಹಾಡು ನಾಟು ನಾಟು ಮತ್ತು ಪುಷ್ಟಾ ಚಿತ್ರದ ಶ್ರೀವಲ್ಲಿ ಹಾಗೂ ಊ ಅಂಟವಾ ಇಲ್ಲ ಊಹುಂ ಅಂಟವಾ ದಂತಹ ಹಲವಾರು ಚಿತ್ರಗಳ ಹಾಡುಗಳನ್ನು ಇಲ್ಲಿನ ಸಂಗೀತ ಆಸಕ್ತರ ಗುಂಪು ಸಂಸ್ಕøತ ಭಾಷೆಗೆ ತರ್ಜುಮೆ ಮಾಡುವಲ್ಲಿ ಯಶಸ್ವಿಯಾಗಿವೆ.

ಸಂಸ್ಕøತವನ್ನು ವಿಶ್ವದ ಅತ್ಯಂತ ಹಳೆಯ ಜೀವಂತ ಭಾಷೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಶ್ರೀಮಂತ ಸಾಹಿತ್ಯ ಸಂಪ್ರದಾಯವನ್ನು ಹೊಂದಿದೆ ಮತ್ತು ಭಾರತದಲ್ಲಿ ಧಾರ್ಮಿಕ ಮತ್ತು ವಿಧ್ಯುಕ್ತ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಅಂತಹ ಭಾಷೆಯನ್ನು ಮತ್ತಷ್ಟು ಬೆಳೆಸಬೇಕು ಎಂಬ ಉದ್ದೇಶದಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆಯಂತೆ.

ಮ್ಯೂಸಿಕ್ ಬ್ಯಾಂಡ್ ವೃಂದ ಗಂಧರ್ವ ಸಖ್ಯಂ ಸಂಸ್ಥೆ 15 ರಿಂದ 50 ವರ್ಷ ವಯಸ್ಸಿನ ಮುಂಬೈನ ಕೆಲವರು ಸೇರಿದಂತೆ ಸುಮಾರು 20 ಸದಸ್ಯರನ್ನು ಹೊಂದಿದೆ. ಅವರು ಸಂತೂರ್ , ಕೀಬೋರ್ಡ್, ಗಿಟಾರ್ ಮತ್ತು ತಬಲಾಗಳಂತಹ ವಾದ್ಯಗಳೊಂದಿಗೆ ಕವರ್ ಹಾಡುಗಳನ್ನು ಮಾಡುವ ಮೂಲಕ ಸಂಗೀತ ಸಂಯೋಜನೆಗಳನ್ನು ರಚಿಸುತ್ತಾರೆ.

ಹೆಚ್ಚಿನ ಜನರು ತಮ್ಮ ಔಪಚಾರಿಕ ಶಿಕ್ಷಣದಲ್ಲಿ ಸಂಸ್ಕøತವನ್ನು ಒಂದು ವಿಷಯವಾಗಿ ಅಧ್ಯಯನ ಮಾಡುತ್ತಾರೆಯೇ ಹೊರತು ಭಾಷೆಯಾಗಿ ಅಲ್ಲ ಎಂದು ಛಂದ ಶಾಸ್ತ್ರ(ಲಯದ ವಿಜ್ಞಾನ) ದಲ್ಲಿ ಡಾಕ್ಟರೇಟ್ ಗಳಿಸಿರುವ ಮುಂಬೈನ ಸಂಸ್ಕøತ ಪ್ರಾಧ್ಯಾಪಕ ಡಾ.ಶ್ರೀಹರಿ ಗೋಕರ್ಣಕರ್ ಹೇಳಿದರು.

ಜನರಿಗೆ, ವಿಶೇಷವಾಗಿ ಯುವಜನರಿಗೆ ಇಷ್ಟವಾಗುವ ರೀತಿಯಲ್ಲಿ ಪ್ರಾಚೀನ ಭಾಷೆಯನ್ನು ನಿಯಮಿತ ಬಳಕೆಗೆ ತರುವುದು ನಮ್ಮ ಗುರಿಯಾಗಿದೆ. ಕ್ರ್ಯಾಶ್ ಕೋರ್ಸ್‍ಗಳು, ಸಂಭಾಷಣೆಗಳು ಮತ್ತು ಹೆಚ್ಚಿನವುಗಳ ಮೂಲಕ ಭಾಷೆಯನ್ನು ಜನಪ್ರಿಯಗೊಳಿಸಲು ವಿವಿಧ ಪ್ರಯತ್ನಗಳು ನಡೆಯುತ್ತಿದ್ದರೂ, ನಮ್ಮ ಉದ್ದೇಶವು ಸಂಗೀತಂ(ಸಂಗೀತ ಮಾರ್ಗ) ಮೂಲಕ ಮನರಂಜನೆಯ ಮೂಲಕ ಭಾಷೆಯನ್ನು ಉತ್ತೇಜಿಸುವುದು ಎಂದು ಬ್ಯಾಂಡ್‍ನೊಂದಿಗೆ ಸಂಬಂಧ ಹೊಂದಿರುವ ಗೋಕರ್ಣಕರ್ ಹೇಳಿದರು.

ಮರುಸೃಷ್ಟಿಸಿದ ನಿರೂಪಣೆಗಳು ಮತ್ತು ಕವರ್ ಹಾಡುಗಳ ಮೂಲಕ ಸಂಸ್ಕøತವನ್ನು ಪ್ರಚಾರ ಮಾಡಲು, ಬ್ಯಾಂಡ್ ತನ್ನದೇ ಆದ ಯೂಟ್ಯೂಬ್ ಚಾನೆಲ್ ಸಂಸ್ಕøತಶ್ರೀಯನ್ನು ಪ್ರಾರಂಭಿಸಿತು, ಹಮ್ ದಿಲ್ ದೇ ಚುಕೆ ಸನಮ್ ಗೀತೆಯ ಅಲ್ಬೆಲಾ ಸಾಜನ್ ಹಾಡಿನೊಂದಿಗೆ ತನ್ನದೇ ಆದ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿತು.
ಸಾಮಾಜಿಕ ಮಾಧ್ಯಮದಲ್ಲಿ ಅವರ ಗೋಚರತೆ ಬೆಳೆದಂತೆ, ಪರಿಕಲ್ಪನೆಯ ಸರಳತೆ ಮತ್ತು ಲಯಬದ್ಧ ರಚನೆಯಿಂದಾಗಿ ಪ್ರೇಕ್ಷಕರು ಈ ಸಂಗೀತದ ಭಾಷೆ ಯನ್ನು ಪ್ರಶಂಸಿಸಲು ಪ್ರಾರಂಭಿಸಿದ್ದಾರೆ ಎಂದು ಬ್ಯಾಂಡ್ ಪ್ರತಿಪಾದಿಸುತ್ತದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಹಿಳೆಯರಿಗೆ 4 ಸಾವಿರ ರೂ.ಲಾಭ ; ರಾಹುಲ್

ಇತಿಹಾಸ ಶಿಕ್ಷಕಿ, ಗಾಯಕ ಮತ್ತು ಸಂಯೋಜಕರೂ ಆಗಿರುವ ಪ್ರಮುಖ ಸದಸ್ಯ ಪ್ರಾಂಜಲ್ ಅಕ್ಕಲಕೋಟ್ಕರ್ ಮಾತನಾಡಿ, ಕೊರಿಯನ್ ಜನಪ್ರಿಯ ಸಂಗೀತದ ಬಗ್ಗೆ ಯುವಕರಲ್ಲಿ ಆಕರ್ಷಣೆ ಇತ್ತು. ಅರ್ಥದ ಕಡೆ ಗಮನ ಕೊಡದೆ ಆ ಹಾಡುಗಳನ್ನು ಹಾಡುತ್ತಿದ್ದರು. ಅಲ್ಲಿಯೇ ಸಂಸ್ಕøತದಲ್ಲಿ ಮ್ಯೂಸಿಕಲ್ ಬ್ಯಾಂಡ್ ಅನ್ನು ರಚಿಸುವ ಆಲೋಚನೆ ಹೊಳೆಯಿತು.

ಅದರ ಸಂಸ್ಕøತ ಸಂಗೀತ ಕಾರ್ಯಕ್ರಮಗಳ ಸಮಯದಲ್ಲಿ, ಬ್ಯಾಂಡ್ ಮೊದಲಾರ್ಧದಲ್ಲಿ ಅದರ ಸದಸ್ಯರು ಸಂಯೋಜಿಸಿದ ಮೂಲ ಹಾಡುಗಳನ್ನು ಮತ್ತು ದ್ವಿತೀಯಾರ್ಧದಲ್ಲಿ ಹಿಂದಿ ಮತ್ತು ಮರಾಠಿ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ಕವರ್ ಹಾಡುಗಳನ್ನು ಪ್ರದರ್ಶಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.