Friday, July 19, 2024
Homeರಾಜಕೀಯಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಹಿಳೆಯರಿಗೆ 4 ಸಾವಿರ ರೂ.ಲಾಭ ; ರಾಹುಲ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಹಿಳೆಯರಿಗೆ 4 ಸಾವಿರ ರೂ.ಲಾಭ ; ರಾಹುಲ್

ಹೈದರಾಬಾದ್, ನ.2 (ಪಿಟಿಐ) ತೆಲಂಗಾಣದಲ್ಲಿ ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಸಾಮಾಜಿಕ ಪಿಂಚಣಿ, ಎಲ್‍ಪಿಜಿ ಸಿಲಿಂಡರ್‍ನಲ್ಲಿ ಉಳಿತಾಯ ಮತ್ತು ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣದ ಮೂಲಕ ತೆಲಂಗಾಣದಲ್ಲಿ ಮಹಿಳೆಯರು 4,000 ರೂ.ವರೆಗೆ ಲಾಭ ಪಡೆಯಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಹೇಳಿದ್ದಾರೆ.

ಕಾಳೇಶ್ವರಂ ಯೋಜನೆಯ ಮೆಡಿಗಡ್ಡಾ ಬ್ಯಾರೇಜ್ ಬಳಿಯ ಅಂಬಟಿಪಲ್ಲಿ ಗ್ರಾಮದಲ್ಲಿ ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ರಾಜ್ಯವನ್ನು ಲೂಟಿ ಮಾಡಿದ್ದಾರೆ ಎನ್ನಲಾದ ಎಲ್ಲ ಹಣವನ್ನು ಮರಳಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಿದರು.

ಇಲ್ಲಿ ಮುಖ್ಯಮಂತ್ರಿಗಳ ಲೂಟಿಯಿಂದ ತೆಲಂಗಾಣ ಮಹಿಳೆಯರು ಹೆಚ್ಚು ತೊಂದರೆಗೀಡಾಗಿದ್ದಾರೆ, ಮುಖ್ಯಮಂತ್ರಿ ಲೂಟಿ ಮಾಡಿದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ರಾಹುಲ್ ಹೇಳಿದರು.

ಕರುನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ : ಗಣ್ಯರಿಂದ ಶುಭಾಶಯ

ಮೊದಲ ಹಂತವಾಗಿ ಪ್ರತಿ ತಿಂಗಳು 2,500 ರೂ.ಗಳನ್ನು ಸಾಮಾಜಿಕ ಪಿಂಚಣಿಯಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದರು. ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 1,500 ರೂಪಾಯಿ ಉಳಿತಾಯವಾಗಲಿದೆ, ಈಗ 1,000 ರೂಪಾಯಿ ಬೆಲೆಯ ಎಲ್‍ಪಿಜಿ ಸಿಲಿಂಡರ್ ಅನ್ನು 500 ರೂಪಾಯಿಗಳಿಗೆ ಮತ್ತು ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣದ ಮೂಲಕ ಇನ್ನೂ 1,000 ರೂಪಾಯಿಗಳನ್ನು ಪೂರೈಸುತ್ತದೆ.
ಇವೆಲ್ಲದರ ಜೊತೆಗೆ ನೀವು ಪ್ರತಿ ತಿಂಗಳು 4,000 ರೂ. ಪ್ರಯೋಜನ ಪಡೆಯುತ್ತೀರಿ. ಇದನ್ನು ಪರಜಾಲ ಸರ್ಕಾರ (ಜನರ ಸರ್ಕಾರ) ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು.

ತೆಲಂಗಾಣದಲ್ಲಿ 1 ಲಕ್ಷ ಕೋಟಿ ರೂಪಾಯಿ ಲೂಟಿಯಾಗಿದೆ ಎಂದು ಆರೋಪಿಸಿದ ಗಾಂ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕೆಸಿಆರ್ ನೇತೃತ್ವದ ಪಕ್ಷದ ನಡುವೆ ಹೋರಾಟವಿದ್ದರೂ ಬಿಆರ್‍ಎಸ್, ಬಿಜೆಪಿ ಮತ್ತು ಎಂಐಎಂ ಒಂದೇ ಕಡೆ ಸ್ರ್ಪಧಿಸಲಿವೆ ಎಂದು ಹೇಳಿದರು.

ಎಂಐಎಂ ಮತ್ತು ಬಿಜೆಪಿ ಬಿಆರ್‍ಎಸ್‍ಗೆ ಬೆಂಬಲ ನೀಡುತ್ತಿವೆ. ಆದ್ದರಿಂದ ನೀವು ದೋರಲ ಸರ್ಕಾರವನ್ನು ತೊಡೆದುಹಾಕಲು ಮತ್ತು ಪರಜಾಲ ಸರ್ಕಾರವನ್ನು (ಜನರ ಆಡಳಿತ) ಸ್ಥಾಪಿಸಲು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂದು ಅವರು ಹೇಳಿದರು.

ಕಾಳೇಶ್ವರಂ ಯೋಜನೆಯು ಕೆಸಿಆರ್‍ಗೆ ಹಣ ಸಂಪಾದನೆಗಾಗಿ ಎಟಿಎಂ ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ರಾಹುಲï, ಈ ಯಂತ್ರವನ್ನು ಚಲಾಯಿಸಲು ತೆಲಂಗಾಣದ ಎಲ್ಲಾ ಕುಟುಂಬಗಳು 2040 ರವರೆಗೆ ವಾರ್ಷಿಕ 31,500 ರೂ.ಪಾವತಿಸಬೇಕಾಗುತ್ತದೆ ಎಂದಿದ್ದಾರೆ.

RELATED ARTICLES

Latest News