Home Blog Page 1877

ಸಿಎಂ ಹುದ್ದೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ : DCM

ಬೆಳಗಾವಿ, ಅ.19- ಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಾವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿಯ ಸಕ್ಯೂಟ್ ಹೌಸ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಕಕ್ಕೆ ಜನ ಐದು ವರ್ಷ ಆಡಳಿತ ನಡೆಸಲು ಆಶೀರ್ವಾದ ಮಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಬಹಷ್ಟು ಜನರಿಗೆ ಬಯಕೆಗಳಿರುತ್ತವೆ. ಅವರ ಆಸೆ, ವಿಚಾರಗಳು ಇರುತ್ತವೆ. ಆದರೆ ನಮ್ಮ ಆದ್ಯತೆ ಉತ್ತಮ ಆಡಳಿತ ನೀಡುವತ್ತ ಇದೆ. ಅಧಿಕಾರದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ, ಆ ಬಗ್ಗೆ ತಾವು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಈ ವರ್ಷ ಮಳೆಯ ಕೊರತೆಯಾಗಿದೆ. ಒಂದು ದಿನದ ಮಳೆ ಕೊರತೆಯಿಂದ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ. ಈ ವರ್ಷ 60-70 ದಿನಗಳು ಮಾತ್ರ ಮಳೆಯಾಗಿದೆ. ವಿದ್ಯುತ್ ಅನ್ನು 6ರಿಂದ 7 ರೂಪಾಯಿವರೆಗೂ ಖರೀದಿ ಮಾಡಿ, ರೈತರಿಗೆ ವಿನಾಯಿತಿ ರೂಪದಲ್ಲಿ ಪೂರೈಕೆ ಮಾಡಲಾಗುತ್ತಿದೆ. ರೈತರು ಬಳಸಿದ ವಿದ್ಯುತ್‍ಗೆ ಸರ್ಕಾರವೇ ಶುಲ್ಕ ಭರಿಸುತ್ತಿದೆ ಎಂದರು.

ಹಿಂದೆ ನಾವು ಅಧಿಕಾರದಲ್ಲಿದ್ದಾಗ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆಯನ್ನು ನಿರ್ಲಕ್ಷ್ಯಿಸಿತ್ತು. ಹಾಗಾಗಿ ಸಮಸ್ಯೆ ಶುರುವಾಗಿದೆ. ನಾವು ಹಿಂದಿನ ಸರ್ಕಾರವನ್ನು ಟೀಕಿಸುತ್ತಾ ಕುಳಿತುಕೊಳ್ಳುವುದಿಲ್ಲ. ಸರ್ಕಾರ ರಚನೆಯಾದ ದಿನದಿಂದಲೇ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಜೊತೆ ಪಾವಗಡದ ಸೌರಶಕ್ತಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹೊಸದಾಗಿ ವಿದ್ಯುತ್ ಉತ್ಪಾದನೆ ಕುರಿತು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ರೈತರಿಗೆ ಆರು ಗಂಟೆ ವಿದ್ಯುತ್ ನೀಡುತ್ತಿದ್ದೇವೆ, ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಏಳು ಗಂಟೆ ಸಬರಾಜು ಮಾಡಲಾಗುತ್ತಿತ್ತು. ಪ್ರಸ್ತುತ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಗೆ ವ್ಯತ್ಯಾಸವಾಗಿದೆ ಎಂದರು. ನೀರಾವರಿ ಪ್ರದೇಶದಲ್ಲಿ ಕೊನೆಭಾಗಕ್ಕೂ ನೀರು ತಲುಪಿಸಲು ಜಾಗೃತಿ ಮೂಡಿಸಬೇಕಿದೆ. ಕೆಲವು ಭಾಗಗಳಲ್ಲಿ ಪೈಪ್ ಹಾಕಿಕೊಂಡು 10-20 ಕಿಲೋಮೀಟರ್ ವರೆಗೂ ನೀರು ಹರಿಸಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರವಾಗುತ್ತಿದೆ ಎಂದರು.

ತಾವು ನಿನ್ನೆ ನೀರಾವರಿ ಬಳಕೆದಾರರ ಸಂಘಗಳ ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅವುಗಳನ್ನು ಮತ್ತೆ ಸಕ್ರಿಯಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದರು. ಎತ್ತಿನಹೊಳೆ ಯೋಜನೆಯಲ್ಲಿ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರಮ ಕೋಲಾರದವರೆಗೂ ನೀರು ಹರಿಸಬೇಕಿದೆ. ಮಧ್ಯದಲ್ಲಿ ಪಂಪ್‍ಸೆಟ್ ಹಾಕಿಕೊಂಡು ನೀರು ಎಳೆದುಕೊಂಡರೆ ಕೊನೆಭಾಗಕ್ಕೆ ನೀರು ಹೋಗುವುದಿಲ್ಲ. ಅದಕ್ಕಾಗಿ ಕಾಲುವೆ ಮಧ್ಯದಲ್ಲಿ ನೀರು ತೆಗೆಯದಂತೆ ತಡೆಯಲು ವಿಶೇಷ ಕಾನೂನು ರೂಪಿಸಲಾಗುವುದು ಎಂದರು.

ನೀರು ಬಳಕೆದಾರರ ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳು, ರೈತರಿಗೆ, ಇಂಜಿನಿಯರ್‍ಗಳಿಗೆ ಧಾರವಾಡದ ವಾಲ್ಮಿ ಸಂಸ್ಥೆಯಿಂದ ತರಬೇತಿ ಕೊಡಿಸಲು ನಿರ್ಧರಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ಬೆಳಗಾವಿಯಲ್ಲಿ ಉತ್ತಮ, ರೈತ ಪರ ಕಾಳಜಿ, ಬದ್ಧತೆ ಇರುವ ಅಧಿಕಾರಿಗಳಿದ್ದಾರೆ. ಏನು ಸಮಸ್ಯೆ ಇಲ್ಲ ಎಂದರು.

ಕಾಲುವೆ ಮಧ್ಯದಲ್ಲಿ ನೀರು ಪಂಪ್ ಮಾಡುವುದಕ್ಕೆ ಶುಲ್ಕ ನಿಗದಿ ಮಾಡುವ ಪದ್ಧತಿಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿದೆ. ಅದನ್ನೂ ಅಧ್ಯಯನ ನಡೆಸಲಾಗುತ್ತಿದೆ. ನೀರಾವರಿ ಯೋಜನೆಗೆ ಬಳಕೆ ಮಾಡುವ ವಿದ್ಯುತ್‍ಗೆ ಸಾವಿರಾರು ಕೋಟಿ ರೂಪಾಯಿ ಶುಲ್ಕ ಪಾವತಿಸಬೇಕಿದೆ. ಪಂಪಿಂಗ್ ಮೂಲಕ ನೀರು ತುಂಬಿಸುವ ಕೆರೆಗಳಲ್ಲಿ ಮೀನು ಸಾಗಾಣಿಕೆ ಮಾಡುವಂತೆ ಸಂಬಂಧ ಪಟ್ಟ ಸಚಿವರಿಗೆ ಸೂಚಿಸಿದ್ದೇನೆ. ಮೀನು ಸಾಗಾಣಿಕೆಯಿಂದ ಬರುವ ಆದಾಯವನ್ನು ಸರ್ಕಾರಕ್ಕೆ ಪಾವತಿಸಬೇಕು, ಅದರಿಂದ ವಿದ್ಯುತ್ ಶುಲ್ಕ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಬೆಳಗಾವಿ ಜಿಲ್ಲೆಯೊಂದರಲ್ಲೇ ಎರಡು ಸಾವಿರ ಕೋಟಿ ರೂಪಾಯಿ ವಿದ್ಯುತ್ ಶುಲ್ಕ ಬಾಕಿ ಇದೆ. ಇದು ಪಾವತಿಯಾಗದಿದ್ದರೆ ಕಷ್ಟವಾಗುತ್ತದೆ. ಏಳು ರೂಪಾಯಿಗೆ ವಿದ್ಯುತ್ ಖರೀದಿಸಿ, ಎರಡು-ಮೂರು ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ನಷ್ಟವನ್ನು ಭರಿಸಲು ಮೀನುಗಾರಿಕೆ ಆದಾಯವನ್ನು ಆಶ್ರಯಿಸಲಾಗುವುದು. ಮಹಾರಾಷ್ಟ್ರ ಮಾದರಿಯನ್ನು ಅಧ್ಯಯನ ನಡೆಸಲಾಗುತ್ತಿದೆ, ವರದಿ ನೀಡಲು ಸೂಚಿಸಿದ್ದೇನೆ. ಒಳ್ಳೆಯ ಅಭ್ಯಾಸಗಳನ್ನು ಜಾರಿಗೆ ತರುವುದರಲ್ಲಿ ತಪ್ಪೇನು ಎಂದರು.

ಆದಾಯ ಮೀರಿ ಆಸ್ತಿ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು, ಡಿಕೆಶಿಗೆ ಟ್ರಬಲ್ ಶುರು

ಕಿತ್ತೂರು ಕರ್ನಾಟಕ ಭಾಗದ ಅದೃಷ್ಟ ಚೆನ್ನಾಗಿದೆ. ಮಲ್ಲಪ್ರಭಾ ಹೊರತು ಪಡಿಸಿ ಉಳಿದ ಎಲ್ಲಾ ಅಣೆಕಟ್ಟೆಗಳು, ಕೆರೆ-ಕುಂಟೆಗಳು ತುಂಬಿವೆ. ಮಳೆ ಇರಲಿ, ಇಲ್ಲದಿರಲಿ ಈಭಾಗದಲ್ಲಿ ಸಮಸ್ಯೆಗಳಿಲ್ಲ. ಹಳೆ ಮೈಸೂರು ಭಾಗವನ್ನೂ ದೇವರೆ ಕಾಪಾಡಬೇಕು ಎಂದರು.

ಮಹಾರಾಷ್ಟ್ರ ಚಂದಗಡದಲ್ಲಿ ಕಚೇರಿ ತೆರೆದು ಗಡಿ ಭಾಗದ ಮರಾಠಿಗರಿಗೆ ಆರೋಗ್ಯ ಯೋಜನೆ ಜಾರಿಗೆ ತರಲು ನೆರೆಯ ಸರ್ಕಾರ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸೂಕ್ಷ್ಮ ವಿಚಾರ. ವೈಯಕ್ತಿಕವಾಗಿ ಪ್ರತಿಕ್ರಿಯಿಸುವುದಿಲ್ಲ. ಅನಗತ್ಯ ವಿವಾದಗಳು ಸೃಷ್ಟಿಯಾಗಬಾರದು. ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದರು.

ತಮ್ಮ ವಿರುದ್ಧ ಸಿಬಿಐ ತನಿಖೆಗೆ ಆದೇಶಿರುವ ಪ್ರಕರಣದ ವಿಚಾರಣೆಯಲ್ಲಿ ಏನಾಗಿದೆ ಎಂದು ತಮಗೆ ಗೋತ್ತಿಲ್ಲ. ಎಫ್‍ಐಆರ್ ಹಾಕಿದ್ದು ಸರಿಯಿಲ್ಲ, ತನಿಖೆ ಮಾಡಬಾರದು. ಎಫ್‍ಐಆರ್‍ನಲ್ಲಿ ಲೋಪಗಳಿವೆ ಎಂದು ನಮ್ಮ ವಕೀಲರು ಅರ್ಜಿ ಹಾಕಿದ್ದರು. ಅದೇನಾಗಿಯೇ ಮಾಹಿತಿ ಇಲ್ಲ ಎಂದರು.

ಹೊಸೂರಿನಿಂದ ಬೆಂಗಳೂರಿನ ಬೊಮ್ಮಸಂದ್ರದವರೆಗೂ ಮೇಟ್ರೋ ಯೋಜನೆ ಅನುಷ್ಠಾನಗೊಳಿಸಲು ತಮಿಳುನಾಡು ಸರ್ಕಾರ ಟೆಂಡರ್ ಕರೆದಿಲ್ಲ. ಎರಡು ರಾಜ್ಯಗಳ ನಡುವಿನ ಗಡಿಭಾಗದಲ್ಲಿ ಹೆಚ್ಚು ಬೆಳವಣಿಗೆಗಳಾಗಿವೆ. ನಾನೇ ಬಿಬಿಎಂಪಿ ಸಚಿವನಿದ್ದೇನೆ, ಟೆಂಡರ್ ಕರೆದಿಲ್ಲ. ಆದರೆ ಮೇಟ್ರೋ ಯೋಜನೆಗೆ ಕಾರ್ಯಸಾಧುತ್ವದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಮದರು.

ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್

ಕರ್ನಾಟಕದ ಜನ, ಹೂಸೂರಿಗೆ ಹೋಗಿ, ಅಲ್ಲಿನವರು ಇಲ್ಲಿಗೆ ಬಂದು ಕೆಲ ಮಾಡುತ್ತಾರೆ. ಜನರಿಗೆ ಅನುಕೂಲವಾಗುವಂತೆ ಮೆಟ್ರೋ ಯೋಜನೆ ಜಾರಿಗೊಳಿಸಲು ತಮಿಳುನಾಡು ಸರ್ಕಾರ ಮನವಿ ಮಾಡಿತ್ತು. ಯೋಜನೆ ಜಾರಿ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ಮೇಟ್ರೋ ಯೋಜನೆಗೆ ಶೇ.50ರಷ್ಟು ಅನುದಾನ ನೀಡುತ್ತಿದೆ ಎಂದ ಅವರು, ಮಹಾರಾಷ್ಟ್ರದ ಬಸ್‍ಗಳು ಕರ್ನಾಟಕಕ್ಕೆ ಬರಬಾರದು ಎಂದು ಹೇಳಲು ಸಾಧ್ಯವೇ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರೈಲು ಸಂಪರ್ಕಗಳಿಲ್ಲವೇ ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ ಸರ್ಕಾರ ಕುಡಿಯುವ ನೀರು ಪೂರೈಸಲು ದೂದ್‍ಗಂಗಾ ನದಿ ತಿರುವ ಯೋಜನೆ ಕೈಗೆತ್ತಿಕೊಂಡಿದು ಗೋತ್ತಿಲ್ಲ. ಬೆಳಗಾವಿ ಭಾಗಕ್ಕೆ ನೀರೆ ಬರುತ್ತಿಲ್ಲ ಎಂಬ ವರದಿಯ ಬಗ್ಗೆ ತಂತ್ರಜ್ಞರ ಜೊತೆ ಚರ್ಚೆ ಮಾಡಿ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಅಯೋಧ್ಯೆ ರಾಮ ಜನ್ಮಭೂಮಿ ಆವರಣದಲ್ಲಿ ಅರ್ಚಕರೊಬ್ಬರು ಶವ ಪತ್ತೆ

ಅಯೋಧ್ಯೆ,ಆ.19- ಇಲ್ಲಿನ ಹನುಮಾನ್‍ಗರ್ಹಿ ದೇವಸ್ಥಾನದ ಅರ್ಚಕರೊಬ್ಬರು ಇಂದು ರಾಮ ಜನ್ಮಭೂಮಿ ಆವರಣದ ಹೈ-ಸೆಕ್ಯುರಿಟಿ ವಲಯದ ಕೊಠಡಿಯೊಂದರಲ್ಲಿ ಕತ್ತು ಸೀಳಿ ಶವವಾಗಿ ಪತ್ತೆಯಾಗಿದ್ದಾರೆ. ಪರಿಚಿತರೇ ಅವರನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ತನಿಖಾಧಿಕಾರಿಗಳು ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಕೊಲೆಯಾದ ಅರ್ಚಕ ರಾಮ್ ಸಹ್ರೇದಾಸ್(44) ಅವರ ಕೊಠಡಿಗೆ ಯಾರೊಬ್ಬರು ಒಳಪ್ರವೇಶಿಸಲು ನಿರ್ಬಂಧಿಸಿದ್ದಾರೆ.

ದಾಸ್ ಹನುಮಾನ್ ಗರ್ಹಿ ದೇವಸ್ಥಾನದ ಪಕ್ಕದ ಕೋಣೆಯಲ್ಲಿ ಇಬ್ಬರು ಶಿಷ್ಯರೊಂದಿಗೆ ತಂಗಿದ್ದರು, ಅವರು ಪ್ರಮುಖ ಶಂಕಿತರಾಗಿದ್ದಾರೆ. ಶಂಕಿತರಲ್ಲಿ ಒಬ್ಬನನ್ನು ವಿಚಾರಗೊಳಪಡಿಸಲಾಗಿದೆ. ಎರಡನೆ ಶಂಕಿತ ಆರೋಪಿ ಕಾಣೆಯಾಗಿದ್ದು, ಈತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅೀಧಿಕ್ಷಕ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.

ಡಾಬರ್ ಉತ್ಪನ್ನಗಳ ವಿರುದ್ಧ ಅಮೆರಿಕ, ಕೆನಡಾದಲ್ಲಿ ಕೇಸ್

ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ತಮಗೆ ಮಾಹಿತಿ ನೀಡಲಾಯಿತು. ಬೆಳಗಿನ ಪ್ರಾರ್ಥನೆಗೆ ಹಾಜರಾಗದ ಹಿನ್ನೆಲೆಯಲ್ಲಿ ದಾಸ್ ಅವರ ದೇಹವು ಗಂಟಲು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಾಸ್ ಹನುಮಾನ್ ಗರ್ಹಿ ದೇವಸ್ಥಾನದ ಅರ್ಚಕರಲ್ಲಿ ಒಬ್ಬರಾಗಿದ್ದರು.

ದಾಸ್ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ. ಹತ್ಯೆಯ ಹಿಂದಿನ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತಿದ್ದು, ನಿನ್ನೆ ರಾತ್ರಿ ದಾಸ್ ಮತ್ತು ಅವರ ಶಿಷ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದುಬಂದಿದೆ.

ಒರಿಸ್ಸಾ ಹಾಗು ತ್ರಿಪುರಕ್ಕೆ ನೂತನ ರಾಜ್ಯಪಾಲರ ನೇಮಕ

ನವದೆಹಲಿ,ಅ.19- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒರಿಸ್ಸಾ ಹಾಗು ತ್ರಿಪುರಕ್ಕೆ ಇಬ್ಬರು ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಒರಿಸ್ಸಾ ರಾಜ್ಯಪಾಲರನ್ನಾಗಿ ಜಾರ್ಖಂಡ್‍ನ ಮಾಜಿ ಮುಖ್ಯಮಂತ್ರಿ ರಘುಭರ್ ದಾಸ್ ಅವರನ್ನು, ಆಂಧ್ರಪ್ರದೇಶದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಇಂದ್ರಸೇನ ರೆಡ್ಡಿ ನಲ್ಲು ಅವರನ್ನು ತ್ರಿಪುರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ಹಾಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ರಘುಭರ್ ದಾಸ್ ಜಾರ್ಖಂಡ್‍ನ ಮೊದಲ ಆದಿವಾಸಿಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಿಜೆಪಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಅವರು ಪಕ್ಷದ ವಿವಿಧ ಉನ್ನತ ಹುದ್ದೆಗಳನ್ನು ಪಡೆದಿದ್ದರು. ಜಾರ್ಖಂಡ್‍ನ ಟಾಟಾ ನಗರದಲ್ಲಿರುವ ಟಾಟಾ ಸ್ಟೀಲ್ ಕಂಪನಿಯ ಉದ್ಯೋಗಿಯಾಗಿದ್ದ ರಘುಭರ್ ದಾಸ್ ಅವರನ್ನು ಪಕ್ಷಕ್ಕೆ ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ ಬಿಜೆಪಿಯು 2014ರಿಂದ 2019ರವರೆಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿತ್ತು.

ಡಾಬರ್ ಉತ್ಪನ್ನಗಳ ವಿರುದ್ಧ ಅಮೆರಿಕ, ಕೆನಡಾದಲ್ಲಿ ಕೇಸ್

ಇನ್ನು ತ್ರಿಪುರದ ರಾಜ್ಯಪಾಲರಾಗಿ ನೇಮಕಾಗಿರುವ ಇಂದ್ರಸೇನ ರೆಡ್ಡಿ ನಲ್ಲು ಅವರು ಮಲಕಪೇಟೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು, ಒಂದು ದಶಕದಿಂದ ರಾಜಕೀಯವಾಗಿ ಜನಮನದಲ್ಲಿ ಇಲ್ಲದಿದ್ದರೂ ಪಕ್ಷದ ವಲಯದಲ್ಲಿ ಸಕ್ರಿಯರಾಗಿದ್ದಾರೆ.

1985 ಮತ್ತು 1999ರ ಚುನಾವಣೆಗಳಲ್ಲಿ ಮಲಕ್‍ಪೇಟೆಯಿಂದ ಶಾಸಕರಾಗಿ ಗೆದ್ದರು. ಸಂಯೋಜಿತ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅವರು ಬಿಜೆಪಿಯ ನೆಲದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರೆಡ್ಡಿ ಅವರು 2003ರಿಂದ 2007ರವರೆಗೆ ಸಂಯೋಜಿತ ಆಂಧ್ರಪ್ರದೇಶದ ಬಿಜೆಪಿಯ ಅಧ್ಯಕ್ಷರಾಗಿ ಮತ್ತು 2014ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಿಸಲಾಗಿತ್ತು.

ಬಂಡಾರು ದತ್ತಾತ್ರೇಯ ಅವರು ಪ್ರಸ್ತುತ ಹರಿಯಾಣದ ರಾಜ್ಯಪಾಲರಾಗಿ ತೆಲಂಗಾಣದಿಂದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಎರಡನೇ ಬಿಜೆಪಿ ನಾಯಕರಾಗಿದ್ದಾರೆ. ಆಂಧ್ರಪ್ರದೇಶದ ಹಿರಿಯ ನಾಯಕ ಕಂಬಂ ಹರಿಬಾಬು ಅವರು ಪ್ರಸ್ತುತ ಮಿಜೋರಾಂ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಹೀಗಾಗಿ ಎರಡು ತೆಲುಗು ರಾಜ್ಯಗಳ ಮೂವರು ನಾಯಕರನ್ನು ಒಂದೇ ಸಮಯದಲ್ಲಿ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ರಾಹುಲ್ ಅಣತಿಯಂತೆ ಹಮಾಸ್‍ಗೆ ಕಾಂಗ್ರೆಸ್ ಬೆಂಬಲಿಸಿದೆ ; ಹಿಮಂತ್ ಬಿಸ್ವಾ

ಈ ಹಿಂದೆ ಬಿಜೆಪಿಯ ಮಾಜಿ ಮುಖ್ಯಸ್ಥ, ವಿ ರಾಮರಾವ್ ಸಿಕ್ಕಿಂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರೆ, ಮಾಜಿ ಕೇಂದ್ರ ಸಚಿವ ಚಿ.ಎನ್‍ಡಿಎಯ ಮೊದಲ ಅವಧಿಯಲ್ಲಿ ವಿದ್ಯಾ ಸಾಗರ್ ರಾವ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಿಸಲಾಗಿತ್ತು. ಈ ಎಲ್ಲಾ ನಾಯಕರು ರಾಜ್ಯ ಬಿಜೆಪಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಿಸೋಡಿಯ ಬಂಧನ ಅವಧಿ ವಿಸ್ತರಣೆ

ನವದೆಹಲಿ,ಅ.19-ಅಬಕಾರಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಬಂಧನದ ಅವಯನ್ನು ನ್ಯಾಯಾಲಯ ಇದೇ ತಿಂಗಳ 22ರವರೆಗೆ ವಿಸ್ತರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿನ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು.

ಮೆಟ್ರೋದಲ್ಲಿ ಸ್ಟಂಟ್ ಮಾಡಿದ ವಿದ್ಯಾರ್ಥಿಗೆ ಬಿತ್ತು ದಂಡ

ಆರೋಪಿಗಳ ಪರ ವಕೀಲರು ದಾಖಲೆಗಳು ಸರಿಯಾಗಿಲ್ಲದ ಕಾರಣ ಅವುಗಳನ್ನು ಪರಿಶೀಲಿಸಲು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಎರಡು ಕಡೆ ವಾದ-ವಿವಾದ ಆಲಿಸಿದ ನ್ಯಾಯಾಲಯ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಈ ತಿಂಗಳ 22ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಆಯ್ಕೆ

ಬೆಂಗಳೂರು,ಅ.19- ಜೆಡಿಎಸ್ ರಾಜ್ಯ ಘಟಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜನೆ ಮಾಡಿದ್ದು, ಹಂಗಾಮಿ ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಜೆಪಿಭವನದಲ್ಲಿಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು, ಸದಸ್ಯರು, ಶಾಸಕರು ಒಳಗೊಂಡಂತೆ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನೊಳಗೊಂಡಂತೆ ರಾಜ್ಯ ಘಟಕವನ್ನು ವಿಸರ್ಜನೆ ಮಾಡಲಾಗಿದೆ.

ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಹಾಗೂ ಮುಂದಿನ ಚುನಾವಣೆವರೆಗೆ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಂಗಾಮಿ (ಅಡಹಾಕ್) ರಾಜ್ಯಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

ಜೆಡಿಎಸ್ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕಾರ್ಯ ನಿರ್ವಹಿಸಲಿದ್ದಾರೆ. ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಇನ್ನು ಮೂರು ದಿನದಲ್ಲಿ ಕೆಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡುವುದಾಗಿ ಗೌಡರು ತಿಳಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರ ಬಗ್ಗೆ ಯಾವ ತೀರ್ಮಾನ ಮಾಡಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ರಿಮೂವ್ ಮಾಡಲಾಗಿದೆ. ನೀವು ರಾಜ್ಯ ಘಟಕ ವಿಸರ್ಜನೆ ಮಾಡಲಾಗಿದೆ ಎಂದು ಭಾವಿಸಬಹುದು ಎಂದು ಹೇಳಿದರು.

ಕೋರ್ ಕಮಿಟಿಯ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಒಕ್ಕಲಿಗರೇ ಆಗಿದ್ದಾರೆ ಎಂದು ನೀವು ಪ್ರಶ್ನಿಸಬಹುದು. ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಇದೆ. ಅವರ ನಾಯಕತ್ವವನ್ನು ಗುರುತಿಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಿದ ರೈತರ ಸಾಲಮನ್ನಾ, ಜನಪ್ರಿಯ ಕಾರ್ಯಕ್ರಮಗಳು, ಚುನಾವಣಾ ಪೂರ್ವದಲ್ಲಿ ನಡೆದ ಜನತಾ ಜಲಧಾರೆ, ಪಂಚರತ್ನ ಕಾರ್ಯಕ್ರಮಗಳಿಂದ ಅವರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದಾರೆ. ಹೀಗಾಗಿ ಪಕ್ಷದ ಎಲ್ಲ ನಾಯಕರು, ಮುಖಂಡರು ಒಟ್ಟಾಗಿ ತೀರ್ಮಾನಿಸಿ ಕುಮಾರಸ್ವಾಮಿ ಅವರೇ ಅಧ್ಯಕ್ಷರಾಗಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.

ರಾಜ್ಯ ಘಟಕ, ರಾಷ್ಟ್ರ ಘಟಕ ಬೇರೆ. ಬೇರೆ ಬೇರೆ ರಾಜ್ಯ ಘಟಕಗಳು ಬೇರೆ. ತಮಿಳುನಾಡಿನ ಘಟಕ ಪಕ್ಷ ಕೈಗೊಳ್ಳುತ್ತಿರುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ. ತಮಿಳುನಾಡು ಘಟಕ ಅಲ್ಲಿನ ಸರ್ಕಾರಲ್ಲಿ ಭಾಗಿಯಾಗಿದೆ ಎಂದು ಹೇಳಿದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರುಖ್ ಸೇರಿದಂತೆ ಹಲವು ಮುಖಂಡರು ಪಕ್ಷದಲ್ಲಿ ಇದ್ದಾರೆ. ನಮಗೆ ಅಲ್ಪಸಂಖ್ಯಾತ ಮುಖಂಡರ ಕೊರತೆ ಇಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ವಿಧವಾದ ಬೆಳವಣಿಗೆಗಳಿವೆ. ಪಶ್ಚಿಮ ಬಂಗಾಳವೇ ಬೇರೆ, ತ್ರಿಪುರವೇ ಬೇರೆ, ಕರ್ನಾಟಕವೇ ಬೇರೆ ಎಂದು ಅವರು ವಿಶ್ಲೇಷಿಸಿದರು.

ವಿಧಾನಸಭೆ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ ಪಕ್ಷದಲ್ಲಿನ ವಿವಿಧ ಘಟಕಗಳ ಜವಾಬ್ದಾರಿ, ಸ್ಥಾನಮಾನ ಮಾರ್ಪಡು ಮಾಡಿರಲಿಲ್ಲ. ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರು ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಮಾಸ್ ಉಗ್ರರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಇಸ್ರೇಲಿ ಮಹಿಳೆ ಭೇಟಿಯಾದ ಬಿಡೆನ್

ಬಿಜೆಪಿ ಜೊತೆ ರಾಜ್ಯದಲ್ಲಿ ಹೋಗಬೇಕಾದ ಸನ್ನಿವೇಶವನ್ನು ಮನವರಿಕೆ ಮಾಡಿಕೊಟ್ಟ ನಂತರ ಕೇರಳ ಭಾಗವು ಅಲ್ಲಿನ ಎಡಪಂಥೀಯ ಪಕ್ಷದ ಜೊತೆ ಕೆಲಸ ಮಾಡಿರುವ ಶಾಸಕರ ಒಪ್ಪಿಗೆಯೂ ದೊರೆತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಕೋರ್‍ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಎಚ್.ಕೆ.ಕುಮಾರಸ್ವಾಮಿ, ಹಲ್‍ಕೋಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಕೋರ್ ಕಮಿಟಿ ಸದಸ್ಯರಾದ ವೈ.ಎಸ್.ವಿ.ದತ್ತ, ಮಾಜಿ ಸಚಿವರಾದ ಎ.ಮಂಜು, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಹಲವು ಉಪಸ್ಥಿತರಿದ್ದರು.

ಅರಿಶಿನ-ಕುಂಕುಮ ಆದೇಶಕ್ಕೆ ಸ್ಪಷ್ಟನೆ ಕೊಟ್ಟ ಸಿಎಂ

ಬೆಂಗಳೂರು, ಅ.19- ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಹೊಸದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.

ವಿಧಾನಸೌಧ ಮತ್ತು ವಿಕಾಸಸೌಧ ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯಲಿದೆ. ಈ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ, ಇದು ಹೊಸತೇನಲ್ಲ ಎಂದಿದ್ದಾರೆ.

ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಜೊತೆಯಲ್ಲಿ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2021ರ ಅಕ್ಟೋಬರ್ 12ರಂದು ಹೊರಡಿಸಿದ್ದ ಸುತ್ತೋಕೆ ಹಾಗೂ ಸೆಪ್ಟಂಬರ್ 30ರಂದು ಹೊರಡಿಸಲಾಗಿರುವ ಸುತ್ತೋಲೆ ಎರಡನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹೆಣ್ಣುಮಕ್ಕಳು ಬಳೆ ತೊಡಬಾರದು ಎಂದು ಆದೇಶ ಹೊರಡಿಸಿದೆ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ, ಹಿಂದು ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ ಎಂದು ಪ್ರಚಾರ ಮಾಡಲಾಯಿತು. ಆ ದೇಶ ಕೂಡ ಕೇಂದ್ರ ಸರ್ಕಾರದ ಸುತ್ತೋಲೆ ಆಧಾರಿತವಾಗಿತ್ತು ಎಂದು ಸ್ಪಷ್ಟನೆ ದೊರೆತ ಬಳಿ ಟೀಕಾಕಾರರು ತಣ್ಣಗಾದರು.

ರಾಹುಲ್ ಅಣತಿಯಂತೆ ಹಮಾಸ್‍ಗೆ ಕಾಂಗ್ರೆಸ್ ಬೆಂಬಲಿಸಿದೆ ; ಹಿಮಂತ್ ಬಿಸ್ವಾ

ಈ ಮತ್ತೊಮ್ಮೆ ದಸರಾ-ಆಯುಧ ಪೂಜೆ ಸಂದರ್ಭದಲ್ಲಿ ಕುಂಕುಮ, ಹರಿಶಿನ ಬಳಸಬಾರದು ಎಂಬ ಆದೇಶವನ್ನು ಕಾಂಗ್ರೆಸ್ ಸರ್ಕಾರವೇ ಹೊರಡಿಸಿದೆ ಎಂದು ಪ್ರಚಾರ ಮಾಡಲಾಗಿದೆ. ಅದಕ್ಕೂ ಹಿಂದಿನ ಸರ್ಕಾರದ ಆದೇಶವನ್ನು ಬಯಲುಗೊಳಿಸುವ ಮೂಲಕ ಮುಖ್ಯಮಂತ್ರಿ ಬಿಜೆಪಿ ಟಾಂಗ್ ನೀಡಿದ್ದಾರೆ.

ಆದಾಯ ಮೀರಿ ಆಸ್ತಿ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು, ಡಿಕೆಶಿಗೆ ಟ್ರಬಲ್ ಶುರು

ಬೆಂಗಳೂರು,ಅ.19: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ರದ್ದು ಗೊಳಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಇದರ ನಡುವೆಯೇ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ತನಿಖೆ ಮುಂದುವರಿಸಿ 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ. ಕಳೆದ 2014 ಮತ್ತು 2018ರ ನಡುವೆ ತಮ್ಮ ಆದಾಯಕ್ಕಿಂತ ಮೀರಿ ಆಸ್ತಿ ಗಳಿಸಿದ್ದಾರೆ ಎಂದು 2018ರಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತುಇದಲ್ಲದೆ 2023ರಲ್ಲೂ ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿತ್ತು.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು 2023ರಲ್ಲಿ ಸಿಬಿಐ ತನಿಖೆ ತಡೆ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಅವರಿಗೆ ಮಧ್ಯಂತರ ತಡೆ ನೀಡಲಾಗಿತ್ತು. ಇದೀಗ ಹೈಕೋರ್ಟ್ ಈಗ ಪುನಃ ತನಿಖೆ ಪುನಾರಂಭಿಸುವಂತೆ ಆದೇಶ ಹೊರಡಿಸಿರುವುದರಿಮದ ಮತ್ತೆ ಡಿ.ಕೆ. ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಿದೆ.

ಆಸ್ಪತ್ರೆ ಮೇಲಿನ ದಾಳಿಯಲ್ಲಿ ಇಸ್ರೇಲ್ ಪಾತ್ರವಿಲ್ಲ : ಅಮೆರಿಕ ಸ್ಪಷ್ಟನೆ

ತನಿಖೆ ವೇಳೆ ಸಿಬಿಐ 200 ಕೋಟಿ ರೂ. ಅಧಿಕ ಅಕ್ರಮ ಆಸ್ತಿ ಪತ್ತೆ ಯಾಗಿದೆ ಎಂದು ಸಿಬಿಐ ವಾದ ಮಂಡಿಸಿತ್ತು, ತಡೆಯಾಜ್ಞೆ ತೆರವಿಗೆ ಮೇಲ್ಮನವಿ ಸಲ್ಲಿಸಿತ್ತು. ಈಗ ಅದನ್ನು ಮಾನ್ಯ ಮಾಡಿ ನ್ಯಾಯಾಲಯ ತನಿಖೆ ಮುಂದುವರೆಸುವಂತೆ ಸೂಚಿಸಿದೆ. ಸದ್ಯದಲ್ಲೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಸಾಕಲಾಗದೆ ಕಂದನನ್ನು ಕೆರೆಗೆ ಎಸೆದ ಕರುಣೆಯಿಲ್ಲದ ತಂದೆ

ಪಿರಿಯಾಪಟ್ಟಣ ,ಅ.10- ಸಾಕಲು ಆಗುತ್ತಿಲ್ಲವೆಂದು ಪಾಪಿ ತಂದೆಯೊಬ್ಬ ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಲೆ ಮಾಡಿರುವ ದುರಂತ ಘಟನೆ ತಾಲೂಕಿನ ಮಾಕೋಡಿನಲ್ಲಿ ನಡೆದಿದೆ. ಹೀನ ಕೃತ್ಯ ಎಸೆಗಿರುವ ಆರೋಪಿ ತಂದೆ ಗಣೇಶ್ (30)ನನ್ನು ಪಿರಿಯಾಪಟ್ಟಣ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಳೆದ 2014 ರಲ್ಲಿ ಗಣೇಶ್ ಬೆಂಗಳೂರು ಸಮೀಪದ ದೇವನಹಳ್ಳಿ ತಾಲೂಕಿನ ದೊಡ್ಡಸನ್ನೆ ಗ್ರಾಮದ ಲಕ್ಷ್ಮೀ ಎಂಬುವವರನ್ನು ಮದುವೆಯಾಗಿದ್ದ. ಆರಂಭದಲ್ಲಿ ದೇವನಹಳ್ಳಿಯಲ್ಲಿಯೆ ವಾಸವಿದ್ದ ದಂಪತಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು ಕಳೆದ ಒಂದು ವರ್ಷದ ಹಿಂದೆ ಮೂರನೇ ಮಗುವಿಗೆ ಜನ್ಮ ನೀಡುವ ವೇಳೆ ಲಕ್ಷ್ಮೀ ಮೃತಪಟ್ಟಿದ್ದಾಳೆ. ನಂತರ ಮೊಮಕ್ಕಳನ್ನು ಲಕ್ಷ್ಮೀ ಪೊಷಕರೇ ಸಾಕಿ ಸಲಹಿದ್ದಾರೆ.

ಡಾಬರ್ ಉತ್ಪನ್ನಗಳ ವಿರುದ್ಧ ಅಮೆರಿಕ, ಕೆನಡಾದಲ್ಲಿ ಕೇಸ್

ಇತೀಚೆಗೆ ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಮಗ ಕುಮಾರ್ ಜೊತೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿಗೆ ವಾಪಸ್ ಆಗಿದ್ದ ಗಣೇಶ ಇಲ್ಲಿ ತಾಯಿಯೊಂದಿಗೆ ಮಗುವನ್ನು ಸಾಕುತ್ತಿದ್ದನು. ಹಲವು ಬಾರಿ ಮಗುವನ್ನು ನಮಗೆ ವಾಪಸ್ಸು ನೀಡಿ, ನಾವೇ ಸಾಕುವುದಾಗಿ ಅತ್ತೆ ತಿಳಿಸಿದ್ದರು. ಆದರೆ, ಅತ್ತೆಗೆ ಮಗುವನ್ನು ಒಪ್ಪಿಸಲು ನಿರಾಕರಿಸಿದ್ದ ಆದರೆ ಈಗ ಸಾಕಲು ಆಗುತ್ತಿಲ್ಲವೆಂದು ಕೆರೆಗೆ ಎಸೆದು ಕೊಂದೇ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣಾ ಪೊಲೀಸರು, ಆರೋಪಿ ಬಂಧಿಸಿದ್ದಾರೆ ಘಟನೆಯ ಬಗ್ಗೆ ತಿಳಿದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ

ಟೆರರ್ ಫಂಡಿಂಗ್ ಮೇಲೆ ಕೇಂದ್ರ ಸರ್ಕಾರದ ಹದ್ದಿನ ಕಣ್ಣು

ನವದೆಹಲಿ,ಅ.19- ವಿದೇಶದಿಂದ ಭಯೋತ್ಪಾದಕ ಸಂಘಟನೆಗಳಿಗೆ ಬರುವ ಹಣವನ್ನು ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ವಿದೇಶದಿಂದ ರವಾನೆಯಾಗುವ 50,000 ರೂ. ಮೇಲ್ಪಟ್ಟ ವಹಿವಾಟಿನ ಮೇಲೆ ನಿಗಾವಹಿಸಲು ಕೇಂದ್ರ ಮುಂದಾಗಿದೆ. ಹಣ ಕಳಿಸಿದವರು ಹಾಗೂ ಸ್ವೀಕರಿಸಿದವರ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ಉಗ್ರ ಸಂಘಟನೆಗಳಿಗೆ ವಿದೇಶಗಳಿಂದ ಹಣ ರವಾನೆ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. 50 ಸಾವಿರ ರೂ.ಗಳಿಗೂ ಮೀರಿದ ಎಲ್ಲಾ ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರದ ಮೇಲೆ ಭಾರೀ ನಿಗಾವಹಿಸಲು ಸಂಬಂಧಪಟ್ಟ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಈ ಕುರಿತು ಈಗಾಗಲೇ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.

ನೇಣು ಬಿಗಿದು ನಾಯಿಯನ್ನು ಕೊಂದ ಕ್ರೂರಿ ಟ್ರೈನರ್

2005ರ ಹಣ ವರ್ಗವಾಣೆ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರಗಳಲ್ಲಿ ಕಳುಹಿಸಿದವರು ಮತ್ತು ಸ್ವೀಕರಿಸಿದವರ ಅಗತ್ಯ ಮಾಹಿತಿ ಸಂಗ್ರಹಿಸುವಂತೆ ತಿಳಿಸಲಾಗಿದೆ.

ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್

ಬೆಂಗಳೂರು,ಅ.19- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ಬಿಜೆಪಿ ಟ್ವೀಟ್ ಮೂಲಕ ಟೀಕೆಗಳನ್ನು ಮುಂದುವರೆಸಿದೆ. ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ ಎಂದು ಸವಾಲು ಹಾಕಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ವಿರೋಧ ಪಕ್ಷದಲ್ಲಿದ್ದಾಗ ಸುಳ್ಳು ಆರೋಪಗಳನ್ನು ಮಾಡಿ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸುತ್ತಿದ್ದ ಸಿದ್ದರಾಮಯ್ಯ ಅವರು ಇಂದು ನ್ಯಾಯಾಂಗ ತನಿಖೆಗೆ ಕೊಡಬೇಕಾದ ಪ್ರಕರಣಗಳ ಪಟ್ಟಿ ಎಂದು ಹಲವು ಪ್ರಕರಣಗಳನ್ನು ಉಲ್ಲೇಖಿಸಿದೆ.

ಸಿದ್ದರಾಮಯ್ಯ ಅವರು ಶುದ್ಧ ಹಸ್ತರು, ಸಾಚಾಗಳು ಎಂದು ಸಾಬೀತುಪಡಿಸಲೇಬೇಕಾದ ಸಮಯ ಬಂದಿದೆ. ಕೈಯಲ್ಲಿ ಅಧಿಕಾರವಿದೆ ನ್ಯಾಯಾಂಗ ತನಿಖೆ ಕೊಟ್ಟು ನಾವು ಮಜವಾದಿಯಲ್ಲ ಸಮಾಜವಾದಿ ಎಂದಾದರೂ ತೋರಿಸಿ ಸವಾಲೊಡ್ಡಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿ ಸರ್ಕಾರದ ಹಿಂದಿನ ಹಗರಣಗಳ ತನಿಖೆಗೆ ಮುಂದಾಗಿದೆ. ಈಗಾಗಲೇ ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ನಡೆಸಲಾಗುತ್ತಿದೆ.

ಆಸ್ಪತ್ರೆ ಮೇಲಿನ ದಾಳಿಯಲ್ಲಿ ಇಸ್ರೇಲ್ ಪಾತ್ರವಿಲ್ಲ : ಅಮೆರಿಕ ಸ್ಪಷ್ಟನೆ

ಬಿಜೆಪಿ ಸರ್ಕಾರದ ವೇಳೆ ಭಾರೀ ಚರ್ಚೆಗೆ ಕಾರಣವಾಗಿದ್ದ ಶೇ.40ರಷ್ಟು ಕಮೀಷನ್ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಸರ್ಕಾರ ನಿರ್ಧರಿಸಿದೆ. ಅಲ್ಲದೇ 545 ಪಿಎಸ್‍ಐ ನೇಮಕಾತಿ ಹಗರಣದ ನ್ಯಾಯಾಂಗ ತನಿಖೆಗೆ ಸಹ ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಡೆದ ಶಿವಮೊಗ್ಗದ ಕಲ್ಲು ತೂರಾಟ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ. ಈಗ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ ಮುಂತಾದ ವಿಚಾರ ಮುಂದಿಟ್ಟುಕೊಂಡು ನ್ಯಾಯಾಂಗ ತನಿಖೆಯ ಕುರಿತು ಬಿಜೆಪಿ ಟ್ವೀಟ್‍ನಲ್ಲಿ ಉಲ್ಲೇಖಿಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಚಿವರು ಕಾಣೆಯಾಗಿದ್ದಾರೆ ಎಂಬ ಅಭಿಯಾನವನ್ನು ನಡೆಸುತ್ತಿದೆ.

ರಾಹುಲ್ ಅಣತಿಯಂತೆ ಹಮಾಸ್‍ಗೆ ಕಾಂಗ್ರೆಸ್ ಬೆಂಬಲಿಸಿದೆ ; ಹಿಮಂತ್ ಬಿಸ್ವಾ

ಬುಧವಾರ, ಡಿಯರ್ ಕರ್ನಾಟಕ ಕಾಂಗ್ರೆಸ್ ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರು ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಹಾಕಿತ್ತು. ಕಾಂಗ್ರೆಸ್‍ನ ದುರಾಡಳಿತಕ್ಕೆ ಬೇಸತ್ತ ಗ್ರಾಮವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ. ದಯವಿಟ್ಟು ಹುಡುಕಿ ಕೊಡಿ! ಎಂದು ಮನವಿ ಮಾಡುವ ಮೂಲಕ ವ್ಯಂಗ್ಯ ಮಾಡಿತ್ತು.
ಬಿಜೆಪಿ ಟ್ವೀಟ್ ಹೀಗಿದೆ

  • ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು..!
  • ಶ್ಯಾಡೋ ಸಿಎಂ ವರ್ಗಾವಣೆ ದಂಧೆ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು!
  • ಹಣ ಸಂಗ್ರಹಿಸಿ ಸಿಕ್ಕಿಬಿದ್ದಿರುವ #ATMSarkaraದ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
  • ಕಾಸಿಗಾಗಿ ಫೋಸ್ಟಿಂಗ್ ಮಾಡಿರುವ ಕಾಂಗ್ರೆಸ್ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!
  • ಚುನಾವಣೆ ವೇಳೆ ಕುಕ್ಕರ್, ಇಸ್ತ್ರಿ ಪಟ್ಟಿಗೆ ಹಂಚಿರುವ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ತನಿಖೆ ಆಗಬೇಕು..!