Home Blog Page 1891

ಲಾಹೋಸ್ ಕಾರ್ಖಾನೆಯಲ್ಲಿ ಬಂಧಿಯಾಗಿದ್ದಾರೆ ಒಡಿಶಾದ 35 ಕಾರ್ಮಿಕರು

ಭುವನೇಶ್ವರ,ಅ.14- ಒಡಿಶಾದ 35 ಕಾರ್ಮಿಕರ ಗುಂಪು ಅವರು ಕೆಲಸ ಮಾಡುತ್ತಿದ್ದ ಲಾವೋಸ್‍ನ ಕಂಪನಿಯೊಂದರಲ್ಲಿ ಬಂಲಾಹೋಸ್ ಕಾರ್ಖಾನೆಯಲ್ಲಿ ಬಂಧಿಯಾಗಿದ್ದಾರೆ ಒಡಿಶಾದ 35 ಕಾರ್ಮಿಕರುತರಾಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಇಲ್ಲಿನ ಪ್ಲೈವುಡ್ ಕಂಪನಿಯು ಸುಮಾರು ಒಂದೂವರೆ ತಿಂಗಳ ಹಿಂದೆ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ, ಆದರೆ ಅವರಿಗೆ ತಾಯ್ನಾಡಿಗೆ ಮರಳಲು ಅಥವಾ ವೇತನವನ್ನು ಪಾವತಿಸಲು ಅವಕಾಶ ನೀಡುತ್ತಿಲ್ಲ ಹೀಗಾಗಿ ನಮ್ಮನ್ನು ಕರೆಸಿಕೊಳ್ಳುವಂತೆ ನೌಕರರು ಒಡಿಶಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ತಮ್ಮ ಪಾಸ್‍ಪೋರ್ಟ್‍ಗಳನ್ನು ಕಂಪನಿಯು ಬಲವಂತವಾಗಿ ಕಿತ್ತುಕೊಂಡಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದ ನಂತರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಕಾರ್ಮಿಕರನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಇದರ ನಂತರ, ರಾಜ್ಯ ಕಾರ್ಮಿಕ ಆಯುಕ್ತರು ಲಾವೋಸ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮಸ್ಯೆನಿವಾರಣೆ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಮಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಭಾರ ಕಚೇರಿ ಒಡಿಶಾ ಸರ್ಕಾರಕ್ಕೆ ತಿಳಿಸಿದೆ.

40 ವರ್ಷಗಳ ನಂತರ ಮತದಾನದ ಭಾಗ್ಯ ಪಡೆದ ನಿವಾಸಿಗಳು

ನಮ್ಮಲ್ಲಿ ತಿನ್ನಲು ಹಣ ಅಥವಾ ಆಹಾರವಿಲ್ಲ. ನಮಗೆ ಹಿಂತಿರುಗಲು ಸಹ ಅನುಮತಿಸಲಾಗುವುದಿಲ್ಲ ಎಂದು ಆಗ್ನೇಯ ಏಷ್ಯಾದ ದೇಶದಲ್ಲಿ ಬಂ„ತರಾಗಿರುವ ಕಾರ್ಮಿಕರಲ್ಲಿ ಒಬ್ಬರಾದ ಸರೋಜ್ ಪಲೈ ಅಲವತ್ತುಕೊಂಡಿದ್ದಾರೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್

ಬೆಂಗಳೂರು, ಅ.14- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಿದೆ.

ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ(ವೇಗದೂತ), ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್‍ಕ್ಲಾಸ್(ಮಲ್ಟಿ ಆಕ್ಸಲ್), ಇ. ಪವರ್ ಪ್ಲಸ್, ಅಂಬಾರಿ ಕ್ಲಬ್‍ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‍ಗಳ ವಿಶೇಷ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ದಸರಾ ರಜೆಗಳ ಪ್ರಯುಕ್ತ ಕೆಎಸ್ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅ. 20ಂದ ಅ.26ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಅಂತರ ರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ಬಸ್‍ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.

ಹೆಚ್ಚುವರಿ ಬಸ್‍ಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ತೆರಳಲಿವೆ. ನಂತರ ರಾಜ್ಯದ ಮತ್ತು ಅಂತರ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.24 ರಿಂದ ಅ.29ರವರೆಗೆ ಪ್ರಯಾಣಿಕರು ಮರಳಿ ಬರಲು ಅನುಕೂಲವಾಗುವತೆ ವಿಶೇಷ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುವುದು.

ಹಮಾಸ್ ನೆರವಿಗೆ ನಿಂತ ಇರಾನ್ ಬೆಂಬಲಿತ ಹಿಜ್ಬುಲ್ಲಾ

ರಾಜ್ಯದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಬಸ್‍ಗಳ ವ್ಯವಸ್ಥೆ ಕಲ್ಪಿಸುವುದಾಗಿ ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

600 ವಿಶೇಷ ಬಸ್ ವ್ಯವಸ್ಥೆ: ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 250ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ ಹಾಗೂ ಮೈಸೂರಿನ ಸುತ್ತ ಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕೆ.ಆರ್.ಎಸ್.ಅಣೆಕಟ್ಟು/ಬೃಂದಾವನ ಉದ್ಯಾನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 350 ಹೆಚ್ಚುವರಿ ಬಸ್‍ಗಳು ಸೇರಿದಂತೆ ಒಟ್ಟಾರೆ 600ದಸರಾ ವಿಶೇಷ ಬಸ್‍ಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಇ-ಟಿಕೇಟ್ ಬುಕಿಂಗ್ ಅನ್ನು ನಿಗಮದ ವೆಬ್ ಸೈಟ್ ಅಥವಾ ಮೊಬೈಲ್ ಮುಖಾಂತರ ಮಾಡಬಹುದಾಗಿದೆ. ಮೈಸೂರು ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ನಿಗಮದ ಸಾರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಮಾಹಿ ತಿಕೇಂದ್ರವನ್ನು ಪ್ರತ್ಯೇಕವಾಗಿ ತೆರೆಯಲಾಗುವುದು ಎಂದು ತಿಳಿಸಿದೆ.

ಮಧ್ಯರಾತ್ರಿ ಬಂದು ಹಣ್ಣು ಕದ್ದ ಕಳ್ಳ

ಸಾರ್ವಜನಿಕ ಪ್ರಯಾಣಿಕರುಕರ್ನಾಟಕ ಹಾಗೂ ನೆರೆರಾಜ್ಯಗಳಾದ ಆಂಧ್ರ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ತುಳುನಾಡು, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳಲ್ಲಿರುವ ಒಟ್ಟು703ಗಣಕೀಕೃತ ಮುಂಗಡ ಆಸನಗಳನ್ನು ಕಾ್ದುರಿಸುವ ಕೌಂಟರ್‍ಗಳ ಮೂಲಕ ನಿಗಮದ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾ್ದುರಿಸಬಹುದಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರುಒಟ್ಟಾಗಿ ಮುಂಗಡಟಿಕೇಟ್ ಕಾ್ದುರಿಸಿದಲ್ಲಿ ಶೇಕಡ5 ರಷ್ಟುರಿಯಾುತಿ ನೀಡಲಾಗುವುದು ಹಾಗೂ ಹೋಗುವ ಮತ್ತು ಬರುವ ಪ್ರಯಾಣದಟಿಕೇಟ್‍ನ್ನುಒಟ್ಟಿಗೆ ಕಾ್ದುರಿಸಿದಾಗ ಬರುವ ಪ್ರಯಾಣದರದಲ್ಲಿಶೇಕಡ 10 ರಷ್ಟುರಿಯಾುತಿ ನೀಡಲಾಗುವುದು. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾ್ದುರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡವಾಗಿಕಾ್ದುರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‍ಅಪ್ ಪಾುಂಟ್‍ನ ಹೆಸರನ್ನು ಗಮನಿಸುವಂತೆಕೋರಲಾಗಿದೆ. ಅಲ್ಲದೇ, ನಿಗಮದಕಾರ್ಯಾಚರಣೆ ವ್ಯಾಪ್ತಿಯಲ್ಲಿನಎಲ್ಲಾತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರಒತ್ತಡಕ್ಕನುಗುಣವಾಗಿ ಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.

ಇಸ್ರೇಲ್ ದಾಳಿಯಲ್ಲಿ ಪತ್ರಕರ್ತ ಸಾವು

ಟೆಲ್‍ಅವಿವ್,ಅ.14- ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ ವಿಶ್ವದ ಪ್ರತಿಷ್ಠಿತ ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಹತ್ಯೆಗೀಡಾಗಿದ್ದಾನೆ. ಯುದ್ಧಪೀಡಿತ ಪ್ಯಾಲೆಸ್ತೇನ್‍ಗೆ ವರದಿ ಮಾಡಲು ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಇಸಾಂ ಅಬ್ದುಲ್ ಅವರು ಇಸ್ರೇಲ್ ಕಡೆಯಿಂದ ಹಾರಿದ ಕ್ಷಿಪಣಿಗೆ ಬಲಿಯಾಗಿದ್ದಾರೆ.

ಘಟನೆಯಲ್ಲಿ ವಿವಿಧ ಸುದ್ದಿಸಂಸ್ಥೆಗಳ ಆರು ಮಂದಿ ಪತ್ರಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ರಾಯ್ಟರ್ಸ್ ವಿಡಿಯೋ ಜರ್ನಲಿಸ್ಟ್ ಅಬ್ದುಲ್ಲ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅತ್ಯಂತ ವಿಶಾದದಿಂದ ಹೇಳುತ್ತಿದ್ದೇವೆ. ಅವರಿಗೆ ನಮ್ಮ ಅಂತಿಮ ನಮನಗಳು ಎಂದು ಹೇಳಿದೆ. ಘಟನೆಯಲ್ಲಿ ಫ್ರಾನ್ಸ್‍ನ ಆರು ಮಂದಿ ಪತ್ರಕರ್ತರು ಗಾಯಗೊಂಡಿದ್ದು, ಆಂಬುಲೆನ್ಸ್‍ಗಳಲ್ಲಿ ವಿವಿಧ ಕಡೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಪಾರ್ವತಿಕುಂಡ್, ಜಾಗೇಶ್ವರ ದೇವಾಲಯಗಳ ಬಗ್ಗೆ ಮೋದಿ ಶ್ಲಾಘನೆ

ಯುದ್ಧಪೀಡಿತ ಪ್ಯಾಲೆಸ್ತೇನ್ ಮತ್ತು ಇಸ್ರೇಲ್‍ಗೆ ಹೊಂದಿಕೊಂಡಿರುವ ಅಲ್ಮ ಅಲ್-ಶಾಬ್ ಬಳಿ ಪತ್ರಕರ್ತರ ಗುಂಪು ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಈ ಸ್ಥಳದಲ್ಲಿ ಇಸ್ರೇಲ್ ಮಿಲಿಟರಿ ಮತ್ತು ಲೆಮೆನಾನ್‍ನ ಮಿಲೇಶಿಯ ಹಿಜ್ಬುಲ್ಲಾ ಗುಂಪಿನ ನಡುವೆ ಭೀಕರ ರಣಕಾಳಗ ನಡೆಯುತ್ತಿದೆ. ಈ ವೇಳೆ ಕ್ಷಿಪಣಿಯಿಂದ ತೂರಿಬಂದು ಅಪ್ಪಳಿಸಿದ್ದರಿಂದ ರಾಯ್ಟರ್ಸ್ ಸುದ್ದಿಸಂಸ್ಥೆಯ ಪತ್ರಕರ್ತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪ್ರಿಯಾಂಕಾ ವಾದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಇಂದೋರ್ (ಮಧ್ಯಪ್ರದೇಶ),ಅ.14- ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಿಯಾಂಕಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸಿದೆ.

ಬಿಜೆಪಿಯ ಮಾಜಿ ಕಾನೂನು ಘಟಕದ ಸಂಚಾಲಕ ವಕೀಲ ಪಂಕಜ್ ವಾಧ್ವಾನಿ ಮಾಧ್ಯಮದೊಂದಿಗೆ ಮಾತನಾಡಿ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ಮಂಡ್ಲಾದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ಉಲ್ಲೇಖಿಸಿ ದೂರು ದಾಖಲಿಸಲಾಗಿದೆ.

ಶುಕ್ರವಾರ ಚುನಾವಣಾ ಆಯೋಗಕ್ಕೆ ವಕೀಲ ವಧ್ವಾನಿ ದೂರು ನೀಡಿದ್ದು, ದೂರಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರವೂ ಪ್ರಿಯಾಂಕ ಗಾಂಧಿ ವಿದ್ಯಾರ್ಥಿವೇತನ ಯೋಜನೆಯನ್ನು ಘೋಷಿಸಿರುವುದು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಜನರನ್ನು ಮತಕ್ಕಾಗಿ ಓಲೈಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.

ಪಾರ್ವತಿಕುಂಡ್, ಜಾಗೇಶ್ವರ ದೇವಾಲಯಗಳ ಬಗ್ಗೆ ಮೋದಿ ಶ್ಲಾಘನೆ

ಮಂಡ್ಲಾ ಜಿಲ್ಲೆಯಲ್ಲಿ ಅಕ್ಟೋಬರ್ 12 ರಂದು ಸಾರ್ವಜನಿಕ ಭಾಷಣ ಕಾರ್ಯಕ್ರಮವೊಂದು ನಡೆದಿದ್ದು ಆ ವೇಳೆ ಪ್ರಿಯಾಂಕಾ ಗಾಂಧಿ 1 ರಿಂದ 12 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ 500 ರಿಂದ ರೂ 1,500 ನೀಡುವುದಾಗಿ ಹೇಳಿದ್ದರು. ಈ ಯೋಜನೆಯ ಪ್ಯಾಕೇಜ್ ಒಟ್ಟು 648.80 ಕೋಟಿ ರೂ. ಆಗಲಿದೆ. ಈ ಘೋಷಣೆ ಮಾದರಿ ಸಂಹಿತೆಯ ಉಲ್ಲಂಘನೆ ಮತ್ತು ಜನರನ್ನು ಮತ ನೀಡುವಂತೆ ಪ್ರೇರೇಪಿಸುವುದಾಗಿದೆ. ಅಲ್ಲದೇ ಮಧ್ಯಪ್ರದೇಶ ಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯೂ ಆಗಿದೆ.

ಈ ಕುರಿತು ದೂರನ್ನು ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ದೂರನ್ನು ಪರಿಶೀಲಿಸಿ ತನಿಖೆ ಆರಂಭಿಸಲಾಗಿದೆ ಎಂದು ವಾಧ್ವಾನಿ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಮೂಲಕ ರಾಜ್ಯವು 230 ವಿಧಾನಸಭಾ ಕ್ಷೇತ್ರಗಳಿಂದ ಶಾಸಕರನ್ನು ಆಯ್ಕೆ ಮಾಡಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿ.3ರಂದು ಮತ ಎಣಿಕೆ ನಡೆಯಲಿದೆ.

ಪಂಜಾಬ್‍ನಲ್ಲಿ ಇಬ್ಬರು ಎಲ್‍ಇಟಿ ಉಗ್ರರ ಬಂಧನ

ಇನ್ನು ಈಗಾಗಲೇ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 7ಕ್ಕೆ ಮಿಜೋರಾಂ ಮತ್ತು ಛತ್ತೀಸ್ಗಢ, ನವೆಂಬರ್ 25ಕ್ಕೆ ರಾಜಸ್ಥಾನ, ನವೆಂಬರ್ 30ಕ್ಕೆ ತೆಲಂಗಾಣದಲ್ಲಿ ಮತದಾನ ನಡೆಯಲಿದೆ. ಹಾಗೇ ಇವೆಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.

ಮೊಬೈಲ್ ಚಟ ಪ್ರಶ್ನಿಸಿದ ತಾಯಿಯನ್ನೇ ಕೊಂದ ಮಗ

ಕಾಸರಗೋಡು, ಅ 14 (ಪಿಟಿಐ) – ಮೊಬೈಲ್ ಚಟವನ್ನು ಪ್ರಶ್ನಿಸಿದ ತಾಯಿಯನ್ನೇ ಮಗ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಮಗನಿಂದ ತೀವ್ರ ಹಲ್ಲೇಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ 63 ವರ್ಷದ ಮಹಿಳೆ ರುಗ್ಮಿಣಿ ಕಣ್ಣೂರು ಜಿಲ್ಲೆಯ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಕಣಿಚಿರ ರುಗ್ಮಿಣಿ ಎಂಬುವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಮಗ ಸುಜಿತ್ ಅವರ ಮನೆಯಲ್ಲಿ ಗೋಡೆಗೆ ತಲೆ ಬಡಿದು ಹಲ್ಲೇ ನಡೆಸಿದ್ದ ಎನ್ನಲಾಗಿದೆ. ಅಪರಾಧ ವರದಿಯಾದ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತ-ಶ್ರೀಲಂಕಾ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭ : ಮೋದಿ

ವಿಚಾರಣೆಯ ಸಮಯದಲ್ಲಿ, ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನು ತನ್ನ ಮೊಬೈಲ್ ಫೋನ್ ಅನ್ನು ನಿರಂತರವಾಗಿ ಬಳಸುವುದನ್ನು ಪ್ರಶ್ನಿಸಿದ್ದರಿಂದ ಅವನು ತನ್ನ ತಾಯಿಯ ಮೇಲೆ ದಾಳಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಅವರು ಹೇಳಿದರು.

ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಕೋಝಿಕ್ಕೋಡ್‍ನ ಕುತಿರವಟ್ಟಂನಲ್ಲಿರುವ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಮಾಸ್ ನೆರವಿಗೆ ನಿಂತ ಇರಾನ್ ಬೆಂಬಲಿತ ಹಿಜ್ಬುಲ್ಲಾ

ಬೈರುತ್,ಅ.14- ಸಮಯ ಬಂದಾಗ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ತನ್ನ ಪ್ಯಾಲೆಸ್ತೀನ್ ಮಿತ್ರ ಹಮಾಸ್‍ನೊಂದಿಗೆ ಕೈ ಜೋಡಿಸಲು ಸಿದ್ದರಿರುವುದಾಗಿ ಲೆಬನಾನ್‍ನ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ಹೇಳಿಕೆ ನೀಡಿದೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಹಿಜ್ಬುಲ್ಲಾ ಉಪ ಮುಖ್ಯಸ್ಥ ನಯಿಮ್ ಕಾಸ್ಸೆಮ್ ಈ ಹೇಳಿಕೆ ನೀಡಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಹಮಾಸ್ ಗುರಿಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದೆ, ಕನಿಷ್ಠ 1,900 ಜನರನ್ನು ಕೊಂದಿದೆ, ಹೆಚ್ಚಾಗಿ ನಾಗರಿಕರು ಮತ್ತು 600 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಹತರಾಗಿದ್ದಾರೆ. ಹೀಗಾಗಿ ನಾವು ಹಮಾಸ್ ಪರ ನಿಲ್ಲಲು ತೀರ್ಮಾನಿಸಿದ್ದೇವೆ ಎಂದು ಬೈರುತ್‍ನ ದಕ್ಷಿಣ ಉಪನಗರಗಳಲ್ಲಿ ಪ್ಯಾಲೇಸ್ಟಿನಿಯನ್ ಪರ ರ್ಯಾಲಿಯಲ್ಲಿ ಕಾಸ್ಸೆಮ್ ಹೇಳಿದರು.

ಗಾಜಾ ಜನರ ಸ್ಥಳಾಂತರಕ್ಕೆ ಇಸ್ರೇಲ್ ಸೂಚಿಸಿರುವುದು ಕಳವಳಕಾರಿ ; ಗುಟೆರಸ್

ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಮತ್ತು ಕ್ರಮಕ್ಕೆ ಸಮಯ ಬಂದಾಗ ನಾವು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ಪ್ರಮುಖ ರಾಷ್ಟ್ರಗಳು, ಅರಬ್ ದೇಶಗಳು ಮತ್ತು ವಿಶ್ವಸಂಸ್ಥೆಯ ರಾಯಭಾರಿಗಳು, ನೇರವಾಗಿ ಮತ್ತು ಪರೋಕ್ಷವಾಗಿ, ಯುದ್ಧದಲ್ಲಿ ಮಧ್ಯಪ್ರವೇಶಿಸದಂತೆ ನಮ್ಮನ್ನು ಕೇಳುವುದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

40 ವರ್ಷಗಳ ನಂತರ ಮತದಾನದ ಭಾಗ್ಯ ಪಡೆದ ನಿವಾಸಿಗಳು

ಬಸ್ತಾರ್,ಅ.14- ಛತ್ತೀಸ್‍ಗಢದ ಬಸ್ತಾರ್ ಜಿಲ್ಲೆಯ ವಿಧಾನಸಭೆ ಚುನಾವಣೆ ವಿಶೇಷವಾಗಲಿದ್ದು, ಇಲ್ಲಿನ 40 ಮಾವೋವಾದಿ ಪೀಡಿತ ಗ್ರಾಮಗಳ ನಿವಾಸಿಗಳು 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಪಡೆಯಲಿದ್ದಾರೆ.

ಮಾವೋವಾದಿ ಪೀಡಿತ ಗ್ರಾಮಗಳು ಭಾರಿ ಅಪಾಯಕಾರಿಯಾಗಿದ್ದು, ಇದುವರೆಗೂ ಇಲ್ಲಿ ಸುರಕ್ಷಿತವಾಗಿ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಇಲ್ಲಿ 40ಕ್ಕೂ ಹೆಚ್ಚು ಮಾವೋವಾದಿ ಪೀಡಿತ ಗ್ರಾಮಗಳಿದ್ದು, 40 ವರ್ಷಗಳ ನಂತರ ಮತದಾನಕ್ಕಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಗ್ರಾಮಗಳಲ್ಲಿ ಶನಿವಾರ 120 ಮತಗಟ್ಟೆಗಳನ್ನು ಪುನಃ ತೆರೆಯಲಾಗುತ್ತಿದೆ.

ಮಾವೋವಾದಿ ಸಂಘಟನೆಯಿಂದ ಚುನಾವಣಾ ಬಹಿಷ್ಕಾರ ಘೋಷಣೆ ಬಳಿಕ ಚುನಾವಣಾ ಆಯೋಗ ಈ ಭಾಗದಲ್ಲಿ ಸಂಪೂರ್ಣ ಕಟ್ಟೆಚ್ಚರ ವಹಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಿತ್ತು. ಕಳೆದ ಐದು ವರ್ಷಗಳಲ್ಲಿ, ಈ ಹೆಚ್ಚು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ 60 ಕ್ಕೂ ಹೆಚ್ಚು ಭದ್ರತಾ ಪಡೆ ಶಿಬಿರಗಳನ್ನು ಸ್ಥಾಪಿಸಲಾಗಿದೆ.

ಶಿಬಿರಗಳ ಸ್ಥಾಪನೆಯ ನಂತರ, ಈ ಪ್ರದೇಶಗಳಲ್ಲಿ ನಿರಂತರವಾಗಿ ಪ್ರದೇಶದ ಪ್ರಾಬಲ್ಯದ ಪ್ರಕ್ರಿಯೆಯನ್ನು ನಡೆಸಲಾಯಿತು ಮತ್ತು ಈಗ, ಪೊಲೀಸರ ಪ್ರಕಾರ, ಈ ಪ್ರದೇಶಗಳು ಎಷ್ಟು ಸುರಕ್ಷಿತವಾಗಿದೆ, ಅಲ್ಲಿ ಮತದಾನ ಪ್ರಕ್ರಿಯೆ ನಡೆಸಬಹುದು. ಇದಕ್ಕಾಗಿ ಚುನಾವಣಾ ಆಯೋಗವು ಮತಗಟ್ಟೆಗಳಿಗೆ ತರಬೇತಿ ನೀಡುವ ಪ್ರಕ್ರಿಯೆಯನ್ನೂ ಆರಂಭಿಸಿದೆ.

ಇಸ್ರೇಲ್‍ನಲ್ಲಿ ಸಿಲುಕಿರುವ ತನ್ನ ಪತ್ನಿಯನ್ನು ಕರೆತರುವಂತೆ ಪ್ರೊಫೆಸರ್ ಮನವಿ

ನವೆಂಬರ್ 7 ರಂದು ಬಸ್ತಾರ್‍ನಲ್ಲಿ ಮುಂಬರುವ ಚುನಾವಣೆಗೆ ಭದ್ರತಾ ಪಡೆಗಳ ಸಿದ್ಧತೆ ಕುರಿತು ಮಾತನಾಡಿದ ಬಸ್ತಾರ್ ವಿಭಾಗದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸುಂದರರಾಜ್ ಪಿ, ಭದ್ರತಾ ಪಡೆಗಳು ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿವೆ ಎಂದು ಹೇಳಿದರು.

ಎಲ್ಲರಿಗೂ ತಿಳಿದಿರುವಂತೆ, ಬಸ್ತಾರ್ ವಿಭಾಗದ ಎಲ್ಲಾಏಳು ಜಿಲ್ಲೇಗಳಲ್ಲಿ ನವೆಂಬರ್ 7 ರಂದು ಛತ್ತೀಸ್‍ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಅದೇ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲಾ ಭದ್ರತಾ ವ್ಯವಸ್ಥೆಗಳು ಮತ್ತು ಆಡಳಿತದ ಸಿದ್ಧತೆಗಳು ನಡೆಯುತ್ತಿವೆ. ಮತ್ತು ನಾವು ಪ್ರಯತ್ನಿಸುತ್ತಿದ್ದೇವೆ.

ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಹೋಮ್‍ವರ್ಕ್ ಮಾಡುವುದು ಉತ್ತಮ ಮತ್ತು ಈ ಬಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿ ನಡೆಯುತ್ತವೆ ಎಂದು ನಾವು ಪೂರ್ಣ ಭರವಸೆ ಹೊಂದಿದ್ದೇವೆ ಎಂದು ಐಜಿಪಿ ಸುಂದರರಾಜ್ ಹೇಳಿದರು.

ಮಧ್ಯರಾತ್ರಿ ಬಂದು ಹಣ್ಣು ಕದ್ದ ಕಳ್ಳ

ಮೈಸೂರು, ಅ.14- ಮೈಸೂರು ನಗರದ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಹಣ್ಣುಗಳ ಸಗಟು ಮಾರುಕಟ್ಟೆಯಲ್ಲಿ ಮಧ್ಯ ರಾತ್ರಿ ವ್ಯಕ್ತಿಯೊಬ್ಬ ಹಣ್ಣುಗಳನ್ನು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೇರೆಯಾಗಿದೆ.

ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದ ವ್ಯಕ್ತಿ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಿ ಕಟ್ಟಿದ ಲಾರಿಯ ಮೇಲೆ ಹತ್ತಿ ಟಾರ್ಪಲ್ ಹರಿದು ಹಣ್ಣುಗಳನ್ನು ಕಳ್ಳತನ ಮಾಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೇರಿಯಾಗಿದೆ. ಕಳ್ಳರ ಹಾವಳಿಯಿಂದಾಗಿ ಮೈಸೂರಿನ ನ್ಯೂ ಸಯಾಜಿ ರಾವ್ ರಸ್ತೆಯಲ್ಲಿರುವ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಹಣ್ಣುಗಳು ಸಗಟು ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ.

ಮೊದಮೊದಲು ಚಿನ್ನ ,ಹಣ ಕದಿಯುತ್ತಿದ್ದ ಕಳ್ಳರು ಈಗೀಗ ಹಣ್ಣುಗಳು ಕದಿಯಲೂ ಶುರು ಮಾಡಿದ್ದಾರೆ. ಮೈಸೂರಿನಲ್ಲಿ ಎರಡು ಮೂರು ತಿಂಗಿಳಿಂದ ಹಣ್ಣು ಗಳ್ಳನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದರೆ. ತಿಂಗಿಳಿನಿಂದಲ್ಲೂ ಮಾರುಕಟ್ಟೆಯಲ್ಲಿ ಕಳ್ಳರ ಕಾಟ ಅಧಿಕವಾಗಿದೆ.

ಮಾರಾಟಕ್ಕೆ ತರಿಸುತ್ತಿದ್ದ ದಾಳಿಂಬೆ, ಸೇಬು ಲಾರಿಗಳ ಮೇಲೆ ಕಳ್ಳರು ಕಳವು ಮಾಡ್ತಾ ಇದ್ದಾರೆ ಎಂದ ಲಾರಿ ಡ್ರೈವರ್ ಹಾಗೂ ಅಂಗಡಿ ಮಾಲೀಕರು

ಪಾರ್ವತಿಕುಂಡ್, ಜಾಗೇಶ್ವರ ದೇವಾಲಯಗಳ ಬಗ್ಗೆ ಮೋದಿ ಶ್ಲಾಘನೆ

ನವದೆಹಲಿ,ಅ.14- ಉತ್ತರಾಖಂಡದ ಪಾರ್ವತಿ ಕುಂಡ ಮತ್ತು ಜಾಗೇಶ್ವರ ದೇಗುಲಗಳಿಗೆ ತಾವು ಭೇಟಿ ನೀಡಿದ್ದು ವಿಶೇಷ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಕೃತಿ ಸೌಂದರ್ಯ ಮತ್ತು ದೈವತ್ವಕ್ಕಾಗಿ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲೇಬೇಕು ಎಂದು ಹೇಳಿದ್ದಾರೆ.

ಈ ವಿಚಾರವನ್ನು ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿಗಳು, ಯಾರಾದರೂ ನನ್ನನ್ನು ಕೇಳಿದರೆ – ಉತ್ತರಾಖಂಡದಲ್ಲಿ ನೀವು ಭೇಟಿ ನೀಡಲೇಬೇಕಾದ ಒಂದು ಸ್ಥಳವಿದ್ದರೆ ಅದು ಯಾವ ಸ್ಥಳವಾಗಿದೆ ಎಂದು ನಾನು ಹೇಳುತ್ತೇನೆ, ನೀವು ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಬೇಕು. ರಾಜ್ಯದ ಕುಮಾನ್ ಪ್ರದೇಶ. ಪ್ರಾಕೃತಿಕ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಇಸ್ರೇಲ್‍ನಲ್ಲಿ ಸಿಲುಕಿರುವ ತನ್ನ ಪತ್ನಿಯನ್ನು ಕರೆತರುವಂತೆ ಪ್ರೊಫೆಸರ್ ಮನವಿ

ಖಂಡಿತವಾಗಿಯೂ, ಉತ್ತರಾಖಂಡವು ಭೇಟಿ ನೀಡಲು ಯೋಗ್ಯವಾದ ಅನೇಕ ಪ್ರಸಿದ್ಧ ಸ್ಥಳಗಳನ್ನು ಹೊಂದಿದೆ ಮತ್ತು ನಾನು ಆಗಾಗ್ಗೆ ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ಇದು ಅತ್ಯಂತ ಸ್ಮರಣೀಯ ಅನುಭವಗಳಾಗಿರುವ ಕೇದಾರನಾಥ ಮತ್ತು ಬದರಿನಾಥದ ಪವಿತ್ರ ಸ್ಥಳಗಳನ್ನು ಒಳಗೊಂಡಿದೆ. ಆದರೆ, ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ಹಿಂತಿರುಗಲು. ಹಲವು ವರ್ಷಗಳ ನಂತರ ವಿಶೇಷವಾಗಿದೆ ಎಂದು ಅವರು ಹೇಳಿದರು.

ಪಿಥೋರಗಢದಲ್ಲಿರುವ ಪಾರ್ವತಿ ಕುಂಡ್ ಭಾರತದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 5,338 ಅಡಿ ಎತ್ತರದಲ್ಲಿರುವ ಹಿಂದೂ ಯಾತ್ರಾಸ್ಥಳವು ಪ್ರತಿವರ್ಷ ಭಕ್ತರನ್ನು ಸೆಳೆಯುತ್ತದೆ. ಈ ತಾಣವು ಮಹಾನ್ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ಮತ್ತು ಶಿವ ಮತ್ತು ಪಾರ್ವತಿ ದೇವಿಯು ಧ್ಯಾನ ಮಾಡಿದ ಸ್ಥಳವೆಂದು ನಂಬಲಾಗಿದೆ. ದೈವಿಕ ದಂಪತಿಗಳ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.

ಇದಕ್ಕೂ ಮುನ್ನ ಉತ್ತರಾಖಂಡದ ದೇವಭೂಮಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಪಿಥೋರಗಢದ ಪಾರ್ವತಿ ಕುಂಡದಲ್ಲಿ ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಪವಿತ್ರ ಆದಿ-ಕೈಲಾಸದಿಂದ ಆಶೀರ್ವಾದ ಪಡೆದರು. ಈ ತಾಣವು ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆ ಮತ್ತು ಮಿಶ್ರಿತ ಮತ್ತು ಉಸಿರುಕಟ್ಟುವ ನೈಸರ್ಗಿಕ ಸೌಂದರ್ಯಕ್ಕಾಗಿ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಮೋರಾದ ಜಾಗೇಶ್ವರ ಧಾಮಕ್ಕೆ ಭೇಟಿ ನೀಡಿ, ಜನಪ್ರಿಯ ಯಾತ್ರಾಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಗಾಜಾ ಜನರ ಸ್ಥಳಾಂತರಕ್ಕೆ ಇಸ್ರೇಲ್ ಸೂಚಿಸಿರುವುದು ಕಳವಳಕಾರಿ ; ಗುಟೆರಸ್

ಸುಮಾರು 6200 ಅಡಿ ಎತ್ತರದಲ್ಲಿರುವ ದೇಶದ ಅತ್ಯಂತ ಪವಿತ್ರ ಮತ್ತು ಜನಪ್ರಿಯ ಪ್ರವಾಸಿ ತಾಣದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಜಾಗೇಶ್ವರ ಧಾಮವು ಸುಮಾರು 224 ಕಲ್ಲಿನ ದೇವಾಲಯಗಳನ್ನು ಒಳಗೊಂಡಿದೆ.ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಧಾನಿ ಮೋದಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

ಭಾರತ-ಶ್ರೀಲಂಕಾ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭ : ಮೋದಿ

ನವದೆಹಲಿ, ಅ 14 (ಪಿಟಿಐ) ಭಾರತ ಮತ್ತು ಶ್ರೀಲಂಕಾ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಎರಡು ರಾಷ್ಟ್ರಗಳ ನಡುವೆ ದೋಣಿ ಸೇವೆಯ ಪ್ರಾರಂಭ ಪ್ರಮುಖ ಮೈಲಿಗಲ್ಲು ಎಂದು ಮೋದಿ ಶ್ಲಾಸಿದ್ದಾರೆ.

ಭಾರತದ ನಾಗಪಟ್ಟಣಂ ಮತ್ತು ಶ್ರೀಲಂಕಾದ ಕಂಕಸಂತುರೈ ನಡುವೆ ದೋಣಿ ಸೇವೆಗಳನ್ನು ಪ್ರಾರಂಭಿಸುವ ಕಾರ್ಯಕ್ರಮವನ್ನು ವೀಡಿಯೊ ಸಂದೇಶದ ಮೂಲಕ ಉದ್ದೇಶಿಸಿ ಮೋದಿ ಮಾತನಾಡಿದರು. ಈ ದೋಣಿ ಸಂಪರ್ಕವು ಎರಡು ನಗರಗಳನ್ನು ಹತ್ತಿರ ತರುವುದು ಮಾತ್ರವಲ್ಲ. ಇದು ನಮ್ಮ ದೇಶಗಳನ್ನು ಹತ್ತಿರಕ್ಕೆ ತರುತ್ತದೆ, ನಮ್ಮ ಜನರನ್ನು ಹತ್ತಿರಗೊಳಿಸುತ್ತದೆ ಮತ್ತು ನಮ್ಮ ಹೃದಯಗಳನ್ನು ಹತ್ತಿರ ತರುತ್ತದೆ ಎಂದು ಅವರು ಹೇಳಿದರು.

ಗುತ್ತಿಗೆದಾರರ ಬಿಲ್ ಬಾಕಿಗೆ ಬಿಜೆಪಿಯೇ ಹೊಣೆ : ಸತೀಶ್ ಜಾರಕಿಹೊಳಿ

ಭಾರತ ಮತ್ತು ಶ್ರೀಲಂಕಾ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿವೆ ಮತ್ತು ನಾಗಪಟ್ಟಣಂ ಮತ್ತು ಕಂಕಸಂತುರೈ ನಡುವೆ ದೋಣಿ ಸೇವೆಯನ್ನು ಪ್ರಾರಂಭಿಸುವುದು ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಿ ಹೇಳಿದರು.

ಭಾರತ ಮತ್ತು ಶ್ರೀಲಂಕಾ ನಡುವಿನ ಸಂಸ್ಕøತಿ, ವಾಣಿಜ್ಯ ಮತ್ತು ನಾಗರಿಕತೆಯ ಹಂಚಿಕೆಯ ಇತಿಹಾಸವನ್ನು ಒತ್ತಿಹೇಳುತ್ತಾ, ನಾಗಪಟ್ಟಣಂ ಮತ್ತು ಹತ್ತಿರದ ಪಟ್ಟಣಗಳು ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳೊಂದಿಗೆ ಸಮುದ್ರ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ ಮತ್ತು ಐತಿಹಾಸಿಕ ಬಂದರು ಪೂಂಪುಹಾರ್ ಅನ್ನು ಉಲ್ಲೇಖಿಸುತ್ತದೆ ಎಂದು ತಿಳಿಸಿದರು.

ಅವರು ಎರಡು ದೇಶಗಳ ನಡುವಿನ ದೋಣಿಗಳು ಮತ್ತು ಹಡಗುಗಳ ಚಲನೆಯನ್ನು ವಿವರಿಸುವ ಸಂಗಮ್ ಯುಗದ ಸಾಹಿತ್ಯಗಳಾದ ಪಟ್ಟಿನಪ್ಪಲೈ ಮತ್ತು ಮಣಿಮೇಕಲೈ ಬಗ್ಗೆ ಮಾತನಾಡಿದರು.

ಗಾಜಾ ಜನರ ಸ್ಥಳಾಂತರಕ್ಕೆ ಇಸ್ರೇಲ್ ಸೂಚಿಸಿರುವುದು ಕಳವಳಕಾರಿ ; ಗುಟೆರಸ್

ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಸೇತುವೆಯನ್ನು ಉಲ್ಲೇಖಿಸುವ ಮಹಾನ್ ಕವಿ ಸುಬ್ರಮಣ್ಯ ಭಾರತಿ ಅವರ ಸಿಂಧು ನದಿಯಿಂ ಮಿಸೈ ಗೀತೆಯನ್ನು ಮೋದಿ ಸ್ಪರ್ಶಿಸಿದರು. ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕøತಿಕ ಸಂಪರ್ಕಗಳನ್ನು ಜೀವಂತಗೊಳಿಸುತ್ತದೆ ಎಂದು ಅವರು ಹೇಳಿದರು.