Home Blog Page 1894

ಇಸ್ರೇಲ್‍ನಿಂದ ತಾಯ್ನಾಡಿಗೆ ಬಂದಿಳಿದ ಭಾರತೀಯರು

ನವದೆಹಲಿ,ಅ.13- ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್‍ನಿಂದ 212 ಭಾರತೀಯರಿದ್ದ ಮೊದಲ ವಿಮಾನ ಇಂದು ಮುಂಜಾನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಈ ವಿಮಾನವು ನಿನ್ನೆ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತ್ತು. ನಸುಕಿನಲ್ಲೇ ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದರು.

ನವದೆಹಲಿಗೆ ಬಂದಿಳಿದ ನಂತರ ಮಾತನಾಡಿದ ಇಸ್ರೇಲ್ ವಿದ್ಯಾರ್ಥಿ ಶುಭಂ ಕುಮಾರ್, ನಾವು ಕೇಂದ್ರ ಸರ್ಕಾರ ಕೃತಜ್ಞರಾಗಿರುತ್ತೇವೆ. ಹೆಚ್ಚಿನ ವಿದ್ಯಾರ್ಥಿಗಳು ಸ್ವಲ್ಪ ಭಯಭೀತರಾಗಿದ್ದರು. ಭಾರತದ ರಾಯಭಾರ ಕಚೇರಿಯ ಮೂಲಕ ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಕೆಲವು ಅಧಿಸೂಚನೆಗಳು ಮತ್ತು ಲಿಂಕ್‍ಗಳನ್ನು ನೋಡಿದ ನಂತರ ನಮ್ಮ ಆತ್ಮಸ್ಥೈರ್ಯ ಹೆಚ್ಚಿತು ಎಂದು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಸುಮಾರು 212 ಜನರನ್ನು ವಾಪಸ್ ಕರೆತರಲಾಗಿದೆ. ಇಸ್ರೇಲ್‍ನಿಂದ ಭಾರತೀಯ ಪ್ರಜೆಗಳನ್ನು ಕರೆತರಲು ಅಗತ್ಯವಿದ್ದರೆ ವಾಯುಪಡೆಯನ್ನೂ ಬಳಸಿಕೊಳ್ಳಲಾಗುವುದು. ಸದ್ಯಕ್ಕೆ ಚಾರ್ಟರ್ ಫೈಟ್‍ಗಳನ್ನು ಬಳಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ನಿ ತಿಳಿಸಿದ್ದಾರೆ.

ಚರ್ಮರೋಗ ತಜ್ಞರಿಂದ ನಾಯ್ಡು ಆರೋಗ್ಯ ತಪಾಸಣೆ

ಆಪರೇಷನ್ ಅಜಯ್ ಚಾಲನೆಯಲ್ಲಿದೆ. ವಿಮಾನದಲ್ಲಿದ್ದ 212 ನಾಗರಿಕರು ನವದೆಹಲಿಯ ಮಾರ್ಗದಲ್ಲಿದ್ದಾರೆ ಎಂದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ತಿಳಿಸಿದ್ದರು. ಅದರಂತೆ 212 ಭಾರತೀಯ ಪ್ರಜೆಗಳನ್ನು ಹೊತ್ತ ಆಪರೇಷನ್ ಅಜಯ್‍ನ ಮೊದಲ ವಿಮಾನವು ಟೆಲ್ ಅವೀವ್‍ನಿಂದ ದೆಹಲಿಗೆ ಹೊರಟಿದೆ. ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿಮಾನದಲ್ಲಿರುವ ಪ್ರತಿಯೊಬ್ಬರಿಗೂ ಸುರಕ್ಷಿತ ಪ್ರಯಾಣ ಬಯಸುತ್ತದೆ ಎಂದು ಭಾರತೀಯ ಮಿಷನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು.

ಭಾರತೀಯ ನಾಗರಿಕರನ್ನು ಕರೆದೊಯ್ಯಲು ಮೊದಲ ಚಾರ್ಟರ್ ವಿಮಾನ ಇಂದು ರಾತ್ರಿ ಟೆಲ್ ಅವಿವ್ ತಲುಪಲಿದೆ ಮತ್ತು ನಾಳೆ ಬೆಳಿಗ್ಗೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಸುಮಾರು 18,000 ಭಾರತೀಯರು ಪ್ರಸ್ತುತ ಇಸ್ರೇಲ್‍ನಲ್ಲಿ ನೆಲೆಸಿದ್ದಾರೆ ಮತ್ತು ಸುಮಾರು ಒಂದು ಡಜನ್ ನಷ್ಟು ಜನರು ವೆಸ್ಟ್ ಬ್ಯಾಂಕ್‍ನಲ್ಲಿದ್ದಾರೆ ಮತ್ತು ಮೂರರಿಂದ ನಾಲ್ಕು ಜನರು ಗಾಜಾದಲ್ಲಿದ್ದಾರೆ ಎಂದು ತಿಳಿಸಿದ್ದರು.

ವಾರಾಂತ್ಯದಲ್ಲಿ ಹಮಾಸ್ ಬಂಡುಕೋರರು ಇಸ್ರೇಲಿ ಪಟ್ಟಣಗಳ ಮೇಲೆ ನಡೆಸಿದ ಸರಣಿ ದಾಳಿಯಿಂದ ಅಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಸ್ವದೇಶಕ್ಕೆ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಪ್ರಾರಂಭಿಸಿದೆ.

ಗಾಜಾ ಸರ್ವನಾಶಕ್ಕೆ ಸಿದ್ಧವಾದ ಇಸ್ರೇಲ್, ವಿನಾಶಕಾರಿ ದಾಳಿ ನಡೆಸದಂತೆ ವಿಶ್ವಸಂಸ್ಥೆ ಕರೆ

ಮಾಹಿತಿ ಪ್ರಕಾರ ಸುಮಾರು 18000 ಭಾರತೀಯರು ಇಸ್ರೇಲ್‍ನಲ್ಲಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈವರೆಗೆ ಯುದ್ಧದಿಂದ ಯಾವುದೇ ಭಾರತೀಯರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಗಾಯಗೊಂಡಿರುವ ಒಬ್ಬ ವ್ಯಕ್ತಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ.

ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್‍ನಲ್ಲಿ ಇದುವರೆಗೆ 222 ಸೈನಿಕರು ಸೇರಿದಂತೆ 1300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ. 1973 ರಲ್ಲಿ ಈಜಿಪ್ಟ್ ಮತ್ತು ಸಿರಿಯಾದೊಂದಿಗೆ ವಾರಗಳ ಕಾಲ ನಡೆದ ಯುದ್ಧದ ನಂತರ ಇಷ್ಟು ದೊಡ್ಡ ಸಂಖ್ಯೆಯ ಸಾವುನೋವುಗಳು ಸಂಭವಿಸಿರಲಿಲ್ಲ. ಇನ್ನು ಅಲ್ಲಿನ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಹಮಾಸ್ ಆಳ್ವಿಕೆಯ ಗಾಜಾ ಪಟ್ಟಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 1,417 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ಬೆಂಗಳೂರು,ಅ.13- ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ. ಮಹದೇವಪ್ಪನ ದುಡ್ಡು , ಕಾಕ ಪಾಟೀಲನ ದುಡ್ಡು , ದಯಾನಂದನ ದುಡ್ಡು ಎಂದು ಯತ್ನಾಳ್ ಕುಹುಕವಾಡಿದ್ದಾರೆ.

ಸಿಕ್ಕಿಬಿದ್ದಿರುವ 42 ಕೋಟಿ ನಗದಿನಲ್ಲಿ 4ನೇ 1ರಷ್ಟು ರಾಜಸ್ಥಾನಕ್ಕೆ, 4ನೇ 1ರಷ್ಟು ಮಧ್ಯಪ್ರದೇಶಕ್ಕೆ, 4ನೇ 1ರಷ್ಟು ತೆಲಂಗಾಣಕ್ಕೆ ಹಾಗೂ 4ನೇ 1ರಷ್ಟು ಛತ್ತೀಸ್‍ಘಡಕ್ಕೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕಿ ಮಾಜಿ ಕಾಪೆರ್ರೇಟರ್ ಅಶ್ವಥಮ್ಮ ಅವರ ಪತಿ ಅಂಬಿಕಾಪತಿಯ ಮಗಳ ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ 42 ಕೋಟಿ ಹಣ! ಈತ ಯಾರ ಚಿರಂಜೀವಿಯವರ ಪರವಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ಗುತ್ತಿಗೆದಾರರು ಕೇಳಿದರೆ ನಿಜ ಹೊರಬರಬಹುದು ಎಂದು ಹೇಳಿದ್ದಾರೆ.

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನೇ ಸರ್ಕಾರದ ಪರವಾಗಿ ವಸೂಲಿಗಿಳಿದರೆ ಗುತ್ತಿಗೆದಾರರನ್ನು ಕಾಪಾಡುವವರು ಯಾರು? ಈ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆಯಾಗಲಿ ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.

ಕುಡುಕ ತಂದೆಯ ಕತ್ತು ಸೀಳಿ ಕೊಂದ ಮಗ

ನವದೆಹಲಿ, ಅ 13 (ಪಿಟಿಐ)- ಕುಡಿತದ ಚಟಕ್ಕೆ ದಾಸನಾಗಿದ್ದ ತಂದೆಯನ್ನೆ ಹೆತ್ತ ಮಗ ಕತ್ತು ಸೀಳಿ ಕೊಂದಿರುವ ಘಟನೆ ಪಶ್ಚಿಮ ದೆಹಲಿಯ ಪಂಜಾಬಿ ಬಾಗ್‍ನಲ್ಲಿ ನಡೆದಿದೆ. ತಂದೆಯನ್ನೇ ಕೊಂದ ಹಂತಕ ಮಗನನ್ನು ರಿಂಕು ಯಾದವ್ ಎಂದು ಗುರುತಿಸಲಾಗಿದೆ.

ತಂದೆ ಸತೀಶ್ ಯಾದವ್ ಅವರ ಮದ್ಯದ ಚಟದಿಂದ ಬೇಸತ್ತ ರಿಂಕು ಅವರ ಕತ್ತು ಸೀಳಿ ಕೊಂದಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ತಂದೆಯ ಶವವನ್ನು ಪಶ್ಚಿಮ ವಿಹಾರ್‍ನಲ್ಲಿರುವ ಸ್ಮಶಾನಕ್ಕೆ ತಂದ ನಂತರ ಆತ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಗಾಜಾ ಸರ್ವನಾಶಕ್ಕೆ ಸಿದ್ಧವಾದ ಇಸ್ರೇಲ್, ವಿನಾಶಕಾರಿ ದಾಳಿ ನಡೆಸದಂತೆ ವಿಶ್ವಸಂಸ್ಥೆ ಕರೆ

ಅಂತ್ಯಕ್ರಿಯೆಗೆ ಬಂದಿದ್ದ ಯಾರೋ ಶವದ ಕುತ್ತಿಗೆ ಮತ್ತು ಮುಂದೋಳಿನ ಮೇಲೆ ಕತ್ತರಿಸಿದ ಗುರುತು ಗಮನಿಸಿದರು. ಇದನ್ನು ಪಾದ್ರಿಯ ಗಮನಕ್ಕೆ ತರಲಾಯಿತು, ನಂತರ ಅವರು ಯಾದವ್ ಅವರನ್ನು ಕೇಳಿದರು ಆದರೆ ತೃಪ್ತಿಕರ ಉತ್ತರ ನೀಡದಿದ್ದಾಗ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಲಾಯಿತ್ತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ರಿಂಕುವನ್ನು ವಿಚಾರಣೆಗೊಳಪಡಿಸಿದಾಗ ಆತ ಕುಡಿತದ ಚಟಕ್ಕೆ ದಾಸನಾಗಿ ಕುಟುಂಬದವರಿಗೆ ಕಿರುಕುಳ ನೀಡುತ್ತಿದ್ದ ತಂದೆಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಬೆಂಗಳೂರಲ್ಲಿ ಐಟಿ ದಾಳಿ : ಮಂಚದ ಕೆಳಗಿದ್ದ ಕಾಂಚಾಣ ಕಂಡು ಅಧಿಕಾರಿಗಳು ಶಾಕ್..!

ಬೆಂಗಳೂರು,ಅ.13- ಖಚಿತ ಮಾಹಿತಿ ಮೇರೆಗೆ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಹಾಗೂ ಮಾಜಿ ಕಾಪೊರೇಟರ್ ಪತಿ ಮನೆ ಮೇಲೆ ಮಿಂಚಿನ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 42 ಕೋಟಿ ನಗದು ಪತ್ತೆಹಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲೇ ಇದು ಐಟಿಯ ಅತಿದೊಡ್ಡ ದಾಳಿ ಇದಾಗಿದ್ದು , ದಾಳಿಯ ವೇಳೆ ಸಿಕ್ಕಿರುವ ಕಂತೆ ಕಂತೆ ನೋಟುಗಳನ್ನು ಕಂಡು ಸ್ವತಃ ಅಧಿಕಾರಿಗಳೇ ದಂಗಾಗಿದ್ದಾರೆ. ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯೆ ಅಶ್ವಥಮ್ಮ ಅವರ ಮನೆ ಮೇಲೆ ನಿನ್ನೆ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಇದೇ ಸಂದರ್ಭದಲ್ಲಿ ಆರ್‍ಟಿನಗರದ ಆತ್ಮಾನಂದ ಫ್ಲಾಟ್ ಮೇಲೆ ಅಶ್ವಥಮ್ಮ ಅವರ ಬಾಮೈದ ಪ್ರದೀಪ್‍ಗೆ ಸೇರಿದ ಫ್ಲಾಟ್‍ನಲ್ಲಿ ದಾಳಿ ನಡೆಸಿದ ವೇಳೆ ಮಂಚದ ಕೆಳಗೆ 23 ಬಾಕ್ಸ್‍ನಲ್ಲಿ ಸಂಗ್ರಹಿಸಿಟ್ಟಿದ್ದ 500 ರೂ. ಮುಖಬೆಲೆಯ ಒಟ್ಟು 42 ಕೋಟಿ ನಗದನ್ನು ಪತ್ತೆ ಮಾಡಿದ್ದಾರೆ. ಅಂಬಿಕಾಪತಿಯ ಪುತ್ರಿಯ ಆರ್‍ಟಿನಗರದಲ್ಲಿರುವ ವೈಟ್‍ಹೌಸ್ ಫ್ಲಾಟ್ ಮೇಲೂ ಐಟಿ ದಾಳಿ ನಡೆಸಿದೆ. ಮತ್ತೊಂದು ಪ್ರಕರಣದಲ್ಲಿ ಗುತ್ತಿಗೆದಾರ ಹೇಮಂತ್ ಅವರ ಬನಶಂಕರಿ ನಿವಾಸದ ಮೇಲೂ ದಾಳಿ ಮಾಡಲಾಗಿದೆ.

ಸದ್ಯಕ್ಕೆ ಪತ್ತೆಯಾಗಿರುವ ಕೋಟ್ಯಂತರ ಹಣ ಯಾರಿಗೆ ಸೇರಿದ್ದು, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಫ್ಲಾಟ್ ಯಾರ ಒಡೆತನಕ್ಕೆ ಸೇರಿದೆ, ಹಣದ ಮೂಲ ಯಾವುದು, ಎಲ್ಲಿಗೆ ಸಂಗ್ರಹಿಸಲಾಗುತಿತ್ತು ಎಂಬುದರ ಬಗ್ಗೆ ಯಾವ ಗುಟ್ಟನ್ನು ಐಟಿ ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಇಷ್ಟು ದೊಡ್ಡ ಮೊತ್ತದ ಹಣವನ್ನು ಕಾರಿನ ಮೂಲಕ ಚೆನ್ನೈನಿಂದ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಲಾಗುತ್ತಿತ್ತು.

ಇಸ್ರೇಲ್-ಹಮಾಸ್ ಯುದ್ಧ, ದೆಹಲಿಯಲ್ಲಿ ಬಿಗಿ ಬಂದೋಬಸ್ತ್

ಐಟಿ ಅಧಿಕಾರಿಗಳು ದಾಳಿ ನಡೆಸುವ ಒಂದು ಗಂಟೆಗೂ ಮುನ್ನ ಇದೇ ಫ್ಲಾಟ್‍ನಿಂದ 15 ಕೋಟಿ ಹಣವನ್ನು ಸಾಗಿಸಲಾಗಿತ್ತು. ಇನ್ನು ಒಂದೇ ಒಂದು ಗಂಟೆ ತಡವಾಗಿದ್ದರೂ ಈಗ ಪತ್ತೆಯಾಗಿರುವ ನಗದು ಕೂಡ ಅಲ್ಲಿಂದ ಬೇರೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸಲಾಗಿತ್ತು. ಇದೀಗ ಐಟಿ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹಾಗೂ ಮಾಜಿ ಬಿಬಿಎಂಪಿ ಸದಸ್ಯೆ ಅಶ್ವಥಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಬ್ಯಾಂಕ್ ಖಾತೆಗಳು, ಚಿರ-ಚರಾಸ್ತಿಗಳು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ದಾಳಿ ನಡೆಸಿದ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆಯಲಾಗಿತ್ತು. ಒಂದೇ ಒಂದು ಸಣ್ಣ ಸುಳಿವನ್ನೂ ಸಹ ನೀಡದೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.ದಾ ಳಿಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಬಳಕೆಯಾಗದ 2000 ಮುಖ ಬೆಲೆಯ ನೋಟುಗಳು ಸಹ ಪತ್ತೆಯಾಗಿದೆ.

ಚರ್ಮರೋಗ ತಜ್ಞರಿಂದ ನಾಯ್ಡು ಆರೋಗ್ಯ ತಪಾಸಣೆ

ಪೂರ್ವ ಗೋದಾವರಿ,ಅ.13- ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಚರ್ಮ ಅಲರ್ಜಿಯಾಗಿರುವ ಬಗ್ಗೆ ಜೈಲು ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಚರ್ಮರೋಗ ತಜ್ಞರ ತಂಡ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಅವರನ್ನು ತಪಾಸಣೆ ನಡೆಸಿತು.

ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ನೋಡಿಕೊಳ್ಳಲು ಚರ್ಮರೋಗ ವಿಭಾಗದ ಒಬ್ಬರು ಸಹಾಯಕ ಪ್ರಾಧ್ಯಾಪಕರು ಮತ್ತು ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರನ್ನು ನಿಯೋಜಿಸಲಾಗಿದೆ ಎಂದು ಜೈಲು ಅ„ಕಾರಿಗಳು ತಿಳಿಸಿದ್ದಾರೆ.

50 ವರ್ಷದ ಹಿಂದಿನ ಕೊಲೆ ಪ್ರಕರಣದಲ್ಲಿ 80 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಬಹುಕೋಟಿ ಕೌಶಲ ಅಭಿವೃದ್ಧಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಾಯ್ಡು ಅವರನ್ನು ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಳೆದ ತಿಂಗಳು ಬಂಧಿಸಿತ್ತು. ಕೌಶಲಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ಅವರು 33 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ಅಮರಾವತಿ ಒಳವರ್ತುಲ ರಸ್ತೆ ಪ್ರಕರಣದಲ್ಲಿ ಅಕ್ಟೋಬರ್ 16 ರವರೆಗೆ ಆಂಧ್ರಪ್ರದೇಶ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬಹುಕೋಟಿ ರೂಪಾಯಿ ಫೈಬರ್ ನೆಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರಿಗೆ ಪ್ರಸನರ್ ಇನ್ ಟ್ರಾನ್ಸಿಟ್ (ಪಿಟಿ) ವಾರಂಟ್ ಹೊರಡಿಸಲು ಇಲ್ಲಿನ ಎಸಿಬಿ ನ್ಯಾಯಾಲಯ ಆಂಧ್ರಪ್ರದೇಶ ಸಿಐಡಿಗೆ ಅನುಮತಿ ನೀಡಿದೆ.

ಸೋಮವಾರ ಬೆಳಗ್ಗೆ 10:00 ರಿಂದ ಸಂಜೆ 5:00 ಗಂಟೆಯೊಳಗೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥರನ್ನು ದೈಹಿಕವಾಗಿ ಹಾಜರುಪಡಿಸುವಂತೆ ವಿಜಯವಾಡದ ಎಸಿಬಿ ನ್ಯಾಯಾಲಯ ಆದೇಶಿಸಿದೆ. ಕೌಶಲಾಭಿವೃದ್ಧಿ ಪ್ರಕರಣ ಮತ್ತು ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದ ನಂತರ ನಾಯ್ಡು ಅವರನ್ನು ಆರೋಪಿಯನ್ನಾಗಿ ಹೆಸರಿಸಲಾದ ಮೂರನೇ ಅಕ್ರಮ ಪ್ರಕರಣ ಇದಾಗಿದೆ.

ಕೇರಳದ ರೆಸಾರ್ಟ್‍ನಲ್ಲಿ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳು ಪ್ರತ್ಯಕ್ಷ

ಫೈಬರ್‍ನೆಟ್ ಹಗರಣವು ಎಪಿ ಫೈಬರ್‍ನೆಟ್ ಯೋಜನೆಯ ಹಂತ-1 ರ 330 ಕೋಟಿಯ ವರ್ಕ್ ಆರ್ಡರ್ ಅನ್ನು ಅನುಕೂಲಕರ ಕಂಪನಿಗೆ ನಿಯಮಗಳನ್ನು ಉಲ್ಲಂಸಿ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ದುರ್ಬಳಕೆ ಮಾಡುವ ಮೂಲಕ ಟೆಂಡರ್ ಪ್ರಕ್ರಿಯೆಯಲ್ಲಿ ದುರ್ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ. ನಾಯ್ಡು ಅವರು ಇಂಧನ, ಮೂಲಸೌಕರ್ಯ ಮತ್ತು ಹೂಡಿಕೆ ಇಲಾಖೆಗಳ ಫೋರ್ಟ್ಫೋಲಿಯೊವನ್ನು ಹೊಂದಿದ್ದಾಗ ಹಗರಣ ನಡೆದಿದೆ ಎನ್ನಲಾಗಿದೆ.

ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ನಗದು ವಶ

ಮುಂಬೈ,ಅ.13-ಚಿನ್ನ ಕರಗಿಸುವ ಕೇಂದ್ರ ಮತ್ತು ಆಭರಣ ಮಳಿಗೆಗಳ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, 3.62 ಕೋಟಿ ರೂ.ಮೌಲ್ಯದ ಕಳ್ಳಸಾಗಣೆ ಚಿನ್ನ, 2.95 ಕೋಟಿ ರೂ.ನಗದು ಮತ್ತು 2.1 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಡಿಆರ್‍ಐ ಪ್ರಕಟಣೆ ತಿಳಿಸಿದೆ. ಇದರಲ್ಲಿ ನಾಲ್ವರು ಕೀನ್ಯಾದ ಐದು ಮಹಿಳೆಯರು ಮತ್ತು ಕಳ್ಳಸಾಗಣೆ ಚಿನ್ನದ ವಾಹಕಗಳಾಗಿ ಬಳಸಲಾದ ತಾಂಜಾನಿಯಾದವರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ನಿರ್ದಿಷ್ಟ ಗುಪ್ತಚರದ ಮಾಹಿತಿ ಮೇರೆಗೆ ಡಿಆರ್‍ಐ ರಹಸ್ಯವಾಗಿ ಕಳ್ಳಸಾಗಣೆ ಚಿನ್ನವನ್ನು ಕರಗಿಸಲು ಬಳಸುತ್ತಿರುವ ಆವರಣದಲ್ಲಿ ಶೋಧನೆ ನಡೆಸಿತು ಮತ್ತು ಕಳ್ಳಸಾಗಣೆ ಮಾಡಿದ ಚಿನ್ನವನ್ನು ಖರೀದಿಸಿದ ಆಭರಣ ವ್ಯಾಪಾರಿಯ ಆವರಣದಲ್ಲಿ ಶೋಧನೆ ನಡೆಸಿತು ಎಂದು ಪ್ರಕಟಣೆ ತಿಳಿಸಿದೆ.

50 ವರ್ಷದ ಹಿಂದಿನ ಕೊಲೆ ಪ್ರಕರಣದಲ್ಲಿ 80 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಮಂಬೈನ ಚಿನ್ನ ಮಳಿಗೆಯ ಶೋಧನೆಯಲ್ಲಿ, ಭಾರತಕ್ಕೆ ಅಕ್ರಮವಾಗಿ ಸಾಗಿಸಲಾಗಿದ್ದ 2.1 ಕೆ.ಜಿ ಚಿನ್ನ, 1 ಲಕ್ಷ ಡಾಲರ್ ಮೊತ್ತದ 84.15 ಲಕ್ಷ ಭಾರತೀಯ ಹಣ, ಜೊತೆಗೆ 2.32 ಕೋಟಿ ನಗದು, ಇವುಗಳೆಲ್ಲವೂ ಕಳ್ಳಸಾಗಣೆ ಚಿನ್ನದಿಂದ ಮಾರಾಟವಾದ ಆದಾಯವಾಗಿದ್ದು, ಕರಗುವ ಘಟಕದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಚಿನ್ನ ಕರಗುವ ಸೌಲಭ್ಯದ ಮಾಲೀಕರು, ನಿರ್ವಾಹಕರು ಪುನರಾವರ್ತಿತ ಅಪರಾಧಿಯಾಗಿದ್ದು, ಅವರು ಇತರ ಪ್ರಕರಣಗಳಲ್ಲಿಯೂ ಬೇಕಾಗಿದ್ದಾರೆ ಎಂದು ತಿಳಿದುಬಂದಿದೆ. ಆಫ್ರಿಕಾದಿಂದ ಬಂದಿರುವ ಆರೋಪಿಗಳು ತಮ್ಮ ವ್ಯವಹಾರವನ್ನು ನಡೆಸುತ್ತಿದ್ದ ಎರಡು ಹೋಟೆಲ್‍ಗಳಲ್ಲೂ ಶೋಧನೆ ನಡೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚಿನ್ನವನ್ನು ವಿವಿಧ ವಾಹಕಗಳಿಂದ ಸಂಗ್ರಾಹಕರು ಸಂಗ್ರಹಿಸಿದ್ದಾರೆ, ಹೆಚ್ಚಾಗಿ ಕೀನ್ಯಾ ಮತ್ತು ತಾಂಜೇನಿಯಾದವರು, ನಂತರ ಅದನ್ನು ಕರಗಿಸಲು ಮತ್ತು ಆಭರಣಗಳಿಗೆ ನಗದುಗಾಗಿ ಮಾರಾಟ ಮಾಡಲು ರವಾನಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

50 ವರ್ಷದ ಹಿಂದಿನ ಕೊಲೆ ಪ್ರಕರಣದಲ್ಲಿ 80 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಮೆಲ್ಟರ್‍ನಿಂದ ಸಂಗ್ರಹಿಸಿದ ಹಣವನ್ನು ಸಂಗ್ರಾಹಕರಿಗೆ ಮರುಪಾವತಿಸಲಾಯಿತು, ಅವರು ಹಣವನ್ನು ವಿವಿಧ ವಾಹಕಗಳ ನಡುವೆ ಹಂಚುತ್ತಿದ್ದರು. ಇದು ಆಫ್ರಿಕನ್ ಪ್ರಜೆಗಳನ್ನು ವಾಹಕಗಳಾಗಿ ಒಳಗೊಂಡಿರುವ ಕಳ್ಳಸಾಗಣೆ ಸಿಂಡಿಕೇಟ್‍ಗಳ ಅತ್ಯಂತ ಮಹತ್ವದ ತಿರುವಾಗಿರುವುದು ವಿಶೇಷ. ಈ ವರ್ಷದ ಏಪ್ರಿಲ್‍ನಲ್ಲಿ, ಸುಡಾನ್ ಪ್ರಜೆಗಳನ್ನು ವಾಹಕಗಳಾಗಿ ಬಳಸಿದ ಅಂತಹ ಮತ್ತೊಂದು ಸಿಂಡಿಕೇಟ್ ಅನ್ನು ಡಿಆರ್‍ಐ ಭೇದಿಸಿತು.

ಇಸ್ರೇಲ್-ಹಮಾಸ್ ಯುದ್ಧ, ದೆಹಲಿಯಲ್ಲಿ ಬಿಗಿ ಬಂದೋಬಸ್ತ್

ನವದೆಹಲಿ,ಅ.13- ಇಸ್ರೇಲ್‍ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭಾವ್ಯ ಪ್ರತಿಭಟನೆಗಳ ದೃಷ್ಟಿಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಶುಕ್ರವಾರದ ಪ್ರಾರ್ಥನೆಯ ವೇಳೆ ದೆಹಲಿ ಪೊಲೀಸ್ ಸಿಬ್ಬಂದಿ ಭಾರೀ ಬಲದೊಂದಿಗೆ ಬೀದಿಗಳಲ್ಲಿ ಇರುತ್ತಾರೆ.

ಯಹೂದಿ ಧಾರ್ಮಿಕ ಸಂಸ್ಥೆಗಳು ಮತ್ತು ಇಸ್ರೇಲ್ ರಾಯಭಾರ ಕಚೇರಿಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಮೆರಿಕ, ಯುಕೆ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಇಸ್ರೇಲ್‍ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ದೃಷ್ಟಿಯಿಂದ ಸಂಭಾವ್ಯ ಯಹೂದಿ ಗುರಿಗಳು ಮತ್ತು ಪ್ಯಾಲೇಸ್ಟಿನಿಯನ್ ಪರ ಪ್ರತಿಭಟನಾಕಾರರ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ ನಂತರ ದೆಹಲಿಯಲ್ಲೂ ಅದೇ ರೀತಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪಂಚ ಗ್ಯಾರಂಟಿಗಳಿಂದ 1 ಕೋಟಿ ಜನ ಮೇಲ್ದರ್ಜೆಗೆ : ಸಚಿವ ಹೆಚ್.ಕೆ.ಪಾಟೀಲ್

ಹಮಾಸ್‍ನಿಂದ ಇಸ್ರೇಲ್‍ನ ರಕ್ತಸಿಕ್ತ ದಾಳಿಯ ನಂತರ, ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಫ್ರಾನ್ಸ್ಎಲ್ಲಾ ಪ್ಯಾಲೆಸ್ತೀನ್ ಪರ ಪ್ರದರ್ಶನಗಳನ್ನು ನಿಷೇಧಿಸಿದೆ. ನಿಷೇಧದ ವಿಮರ್ಶಕರು ಇದು ವಾಕ್ ಮತ್ತು ಸಭೆಯ ಸ್ವಾತಂತ್ರ್ಯವನ್ನು ಉಲ್ಲಂಸುತ್ತದೆ ಎಂದು ವಾದಿಸಿದ್ದಾರೆ.

ಹಮಾಸ್‍ನ ಅನಿರೀಕ್ಷಿತ ಭೂ-ಸಮುದ್ರ-ವಾಯು ದಾಳಿಗೆ ಇಸ್ರೇಲ್ ಪ್ರತೀಕಾರಕ್ಕೆ ಮುಂದಾದ ನಂತರ ಗಾಜಾದಲ್ಲಿ 1,500 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ದಾಳಿ ಪ್ರಾರಂಭವಾದ ಕೂಡಲೇ, ಯುದ್ಧದ ಸ್ಥಿತಿ ಎಂದು ಘೋಷಿಸಿದರು ಮತ್ತು ಗಾಜಾವನ್ನು ಭಗ್ನಾವಶೇಷಕ್ಕೆ ಇಳಿಸುವುದಾಗಿ ಪ್ರತಿಜ್ಞೆ ಮಾಡಿದರು.

ಗಾಜಾ ಸರ್ವನಾಶಕ್ಕೆ ಸಿದ್ಧವಾದ ಇಸ್ರೇಲ್, ವಿನಾಶಕಾರಿ ದಾಳಿ ನಡೆಸದಂತೆ ವಿಶ್ವಸಂಸ್ಥೆ ಕರೆ

ಟೆಲ್‍ಆವೀವ್,ಅ.13- ಇಡೀ ಗಾಜಾ ಪಟ್ಟಿಯನ್ನು ಸರ್ವನಾಶ ಮಾಡಲು ಇಸ್ರೇಲ್ ಪಣತೊಟ್ಟಿದ್ದು, ಯಾವುದೇ ವಿನಾಶಕಾರಿ ದಾಳಿ ನಡೆಸದಂತೆ ವಿಶ್ವಸಂಸ್ಥೆ ಇಸ್ರೇಲ್‍ಗೆ ಮನವಿ ಮಾಡಿಕೊಂಡಿದೆ. ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಸ್ಥಳೀಯರು 24 ಗಂಟೆಯೊಳಗೆ ದಕ್ಷಿಣ ನಗರಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ವಿಶ್ವಸಂಸ್ಥೆ ವಿನಾಶಕಾರಿ ದಾಳಿ ನಡೆಸದಂತೆ ಇಸ್ರೇಲ್‍ಗೆ ಸೂಚನೆ ನೀಡಿದೆ.

ಹಮಾಸ್ ಕಾರ್ಯಕರ್ತರು ಗಾಜಾ ನಗರದ ಕೆಳಗಿರುವ ಸುರಂಗಗಳಲ್ಲಿ ಅಡಗಿರುವ ಕಾರಣ ಸ್ಥಳೀಯರ ಸ್ಥಳಾಂತರ ಆದೇಶವಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಗಾಜಾ ನಿವಾಸಿಗಳೇ, ನಿಮ್ಮ ವೈಯಕ್ತಿಕ ಸುರಕ್ಷತೆ ಮತ್ತು ನಿಮ್ಮ ಕುಟುಂಬಗಳಿಗಾಗಿ ದಕ್ಷಿಣಕ್ಕೆ ತೆರಳಿ. ಮಾನವ ಗುರಾಣಿಯಾಗಿ ನಿಮ್ಮನ್ನು ಬಳಸಿಕೊಳ್ಳುವ ಹಮಾಸ್ ಭಯೋತ್ಪಾದಕರಿಂದ ದೂರವಿರಿ. ಇಸ್ರೇಲ್‍ಪಡೆಗಳು ಮುಂಬರುವ ದಿನಗಳಲ್ಲಿ ಗಾಜಾ ನಗರದಲ್ಲಿ ಗಣನೀಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಮತ್ತು ನಾಗರಿಕರಿಗೆ ಹಾನಿಯಾಗುವುದನ್ನು ತಪ್ಪಿಸಲು ಬಯಸುತ್ತದೆ ಎಂದು ಇಸ್ರೇಲಿ ರಕ್ಷಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.

ದುರಂತವನ್ನು ವಿಪತ್ತಿನ ಪರಿಸ್ಥಿತಿ ಯಾಗಿ ಪರಿವರ್ತಿಸುವುದನ್ನು ತಪ್ಪಿಸಲು ಗಜನ್‍ಗಳಿಗೆ ಸಾಮೂಹಿಕ ಸ್ಥಳಾಂತರ ಆದೇಶವನ್ನು ವಾಪಸ್ ಪಡೆಯುವಂತೆ ವಿಶ್ವಸಂಸ್ಥೆ ಇಸ್ರೇಲ್ ಮಿಲಿಟರಿಗೆ ಕರೆ ನೀಡಿದೆ. ವಿನಾಶಕಾರಿ ಮಾನವೀಯ ಪರಿಣಾಮಗಳಿಲ್ಲದೆ ಅಂತಹ ಆಂದೋಲನ ನಡೆಯುವುದು ಅಸಾಧ್ಯವೆಂದು ಪರಿಗಣಿಸಲಾಗುವುದು ಎಂದು ಅದು ವಿಶ್ವಸಂಸ್ಥೆ ಹೇಳಿದೆ.

ಈ ಆದೇಶವು ಯುಎನ್ ಸಿಬ್ಬಂದಿಗೆ ಮತ್ತು ಗಾಜಾದಲ್ಲಿನ ಶಾಲೆಗಳು ಮತ್ತು ಚಿಕಿತ್ಸಾಲಯಗಳಂತಹ ಯುಎನ್ ಸೌಲಭ್ಯಗಳಲ್ಲಿ ಆಶ್ರಯ ಪಡೆದವರಿಗೆ ಸಹ ಅನ್ವಯಿಸುತ್ತದೆ ಎಂದು ಹೇಳಿದೆ. ಅಮೆರಿಕದ ಉನ್ನತ ರಾಜತಾಂತ್ರಿಕ ಆಂಟೋನಿ ಬ್ಲಿಂಕೆನ್ ನಿನ್ನೆ ಟೆಲ್ ಅವೀವ್‍ಗೆ ಭೇಟಿ ನೀಡಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತಮ್ಮ ದೇಶದ ಬೆಂಬಲವನ್ನು ಭರವಸೆ ನೀಡಿದರು. ಗುಂಡುಗಳಿಂದ ಮಗುಚಿದ ಮತ್ತು ಸೈನಿಕರ ಶಿರಚ್ಛೇದನ ಭಯಾನಕ ಫೋಟೋಗಳನ್ನು ತೋರಿಸಲಾಗಿದೆ ಎಂದು ಅವರು ಹೇಳಿದರು. ಇಸ್ರೇಲ್‍ನಲ್ಲಿ ಕನಿಷ್ಠ 22 ಅಮೆರಿಕನ್ನರ ಸಾವನ್ನು ಯುಎಸ್ ದೃಢಪಡಿಸಿದೆ.

ಭಾರತದಲ್ಲಿ ನಿರುದ್ಯೋಗ ದರ 6 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ : ಪ್ರಧಾನಿ

ಮಾರಣಾಂತಿಕ ಇಸ್ರೇಲ್ -ಹಮಾಸ್ ಯುದ್ಧವು ಇಂದಿಗೆ ಒಂದು ವಾರವನ್ನು ಪೂರ್ಣಗೊಳಿಸುತ್ತದೆ, ಮಧ್ಯಪ್ರಾಚ್ಯದಲ್ಲಿ ಎಲ್ಲಿಯೂ ಶಾಂತಿ ಗೋಚರಿಸುವುದಿಲ್ಲ. ಯುದ್ಧವು ಶನಿವಾರ ಪ್ರಾರಂಭವಾದಾಗಿನಿಂದ ಇಸ್ರೇಲ್‍ನಲ್ಲಿ ಕನಿಷ್ಠ 1,200 ಮತ್ತು ಗಾಜಾ ಪಟ್ಟಿಯಲ್ಲಿ 1,400 ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ, 1,500 ಹಮಾಸ್ ಕಾರ್ಯಕರ್ತರ ಶವಗಳು ಇಸ್ರೇಲ್ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಇಸ್ರೇಲಿ ಕಡೆಯಿಂದ ಎಳೆಯಲ್ಪಟ್ಟ ಸುಮಾರು 150 ಜನರನ್ನು ಇನ್ನೂ ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡಿದೆ.

ಇಸ್ರೇಲ್ ಗಾಜಾದ ಮೇಲೆ ಸಂಪೂರ್ಣ ಮುತ್ತಿಗೆಯನ್ನು ವಿ„ಸಿದೆ, ನೀರು, ಇಂಧನ ಮತ್ತು ವಿದ್ಯುತ್ ಸರಬರಾಜುಗಳನ್ನು ಕಡಿತಗೊಳಿಸಿದೆ. ಪ್ಯಾಲೆಸ್ತೀನ್ ಪ್ರದೇಶದ ಏಕೈಕ ವಿದ್ಯುತ್ ಸ್ಥಾವರವು ಇಂಧನ ಖಾಲಿಯಾದ ನಂತರ ಮುಚ್ಚಲ್ಪಟ್ಟಿದೆ. ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಗಾಜಾಕ್ಕೆ ಮಾನವೀಯ ನೆರವನ್ನು ಅನುಮತಿಸುವುದಿಲ್ಲ ಎಂದು ಇಸ್ರೇಲ್ ಪ್ರತಿಜ್ಞೆ ಮಾಡಿದೆ.

ಸಂಘರ್ಷದ ಪರಿಸ್ಥಿತಿಯು ಇಸ್ರೇಲ್‍ನಿಂದ ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ಹಲವಾರು ದೇಶಗಳನ್ನು ಪ್ರೇರೇಪಿಸಿದೆ. ಆಪರೇಷನ್ ಅಜಯï ಅಡಿಯಲ್ಲಿ ವಿಶೇಷ ವಿಮಾನದಲ್ಲಿ ಇಂದು ಬೆಳಿಗ್ಗೆ ಭಾರತವು ತನ್ನ 212 ನಾಗರಿಕರನ್ನು ಇಸ್ರೇಲ್‍ನಿಂದ ವಾಪಸ್ ಕರೆತಂದಿದೆ. ಏರ್ ಇಂಡಿಯಾ ಇಸ್ರೇಲ್‍ನಿಂದ ತನ್ನ ಹಾರಾಟವನ್ನು ಸ್ಥಗಿತಗೊಳಿಸಿರುವುದರಿಂದ ಹಾಗೆ ಮಾಡಲು ಸಾಧ್ಯವಾಗದವರಿಗೆ ಹಿಂತಿರುಗಲು ಅನುಕೂಲವಾಗುವಂತೆ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. ಅವರ ವಾಪಸಾತಿ ವೆಚ್ಚವನ್ನು ಸರಕಾರವೇ ಭರಿಸುತ್ತಿದೆ.

50 ವರ್ಷದ ಹಿಂದಿನ ಕೊಲೆ ಪ್ರಕರಣದಲ್ಲಿ 80 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಫಿರೋಜಾಬಾದ್ (ಯುಪಿ), ಅ.13 – ಸುಮಾರು 50 ವರ್ಷದ ಹಿಂದೆ ದಾಖಲಾದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯವು 80 ವರ್ಷದ ಜೀವಾವಧಿ ಶಿಕ್ಷೆ ವಿಧಿಸಿದ ಘಟನೆ ಇಲ್ಲಿ ನಡೆದಿದೆ.ಅಪರಾಧಿ ಮಹೇಂದ್ರ ಸಿಂಗ್‍ಗೆ ಜೈಲು ಶಿಕ್ಷೆ ಜೊತೆಗೆ 20,000 ರೂಪಾಯಿ ದಂಡವನ್ನೂ ವಿಧಿಸಿದೆ.

ಸೆಪ್ಟೆಂಬರ್ 14, 1974 ರಂದು ನಾರ್ಖಿ ಗ್ರಾಮದಲ್ಲಿ ತಾಯಿ ಮೀರಾ ದೇವಿಉನ್ನು ಮಗ ಮಹೇಂದ್ರ ಸಿಂಗ್ ಗುಂಡಿಕ್ಕಿ ಕೊಂದಿದ್ದ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆಗ ಆತ ಅಲ್ಲಿಂದ ಪರಾರರಿಯಾಗಿದ್ದ ಇತ್ತೀಚೆಗೆ ಗ್ರಮಕ್ಕೆ ಬಂದಿದ್ದಾಗ ಕೆಲವರು ಆತನನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನೆಯ ನಡೆಸಾಗ ನಾರ್ಖಿಗ್ರಾಮ ಆಗ್ರಾ ಜಿಲ್ಲೆಯ ಭಾಗವಾಗಿತ್ತು.ಈಗ ಅದು ಫಿರೋಜಾಬಾದ್ ಜಿಲ್ಲೆ ವ್ಯಪ್ತಿಗೆ ಸೇರಿದೆ. ಪೊಲೀಸರು ಘಟನೆಯ ಪೈಲ್, ದಾಖಲೆ ಮತ್ತೆ ನೋಡಿ ಮಹೇಂದ್ರ ಸಿಂಗ್‍ನನ್ನು ಬಂಪೊಸಿದ್ದರು ಆಗ ಆತನಿಗೆ 79 ವರ್ಷ.

ಯುಎಇ ಆಭರಣ, ರತ್ನಗಳು ಆಮದಿನಲ್ಲಿ ಶೇ.30 ರಷ್ಟು ಭಾರತ ಪಾಲು

ಪೊಲೀಸರೆ ಅಚ್ಚರಿಗೊಂಡು ಕಾನೂನು ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾೀಧಿಶ ಜಿತೇಂದ್ರ ಗುಪ್ತಾ ಅವರು ಅಪರಾಧ ಸಾಭೀತಾದ ಕಾರಣ ಮಹೇಂದ್ರಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಮತ್ತು ದಂಡವನ್ನು ಪಾವತಿಸದಿದ್ದಲ್ಲಿ, ಅಪರಾಧಿ ಹೆಚ್ಚುವರಿ ವರ್ಷ ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ನಾರಾಯಣ್ ಸಕ್ಸೇನಾ ಮಾತನಾಡಿ ಕಾನೂನಿಗೆ ಎಲ್ಲಾ ಸಮಾನರು ಎಂದು ಹೇಳಿದ್ದಾರೆ.

ಕೇರಳದ ರೆಸಾರ್ಟ್‍ನಲ್ಲಿ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳು ಪ್ರತ್ಯಕ್ಷ

ವಯನಾಡ್ (ಕೇರಳ), ಅ. 13-ಉತ್ತರ ಕೇರಳ ವಯನಾಡ್ ಜಿಲ್ಲೆಯ ಖಾಸಗಿ ರೆಸಾರ್ಟ್‍ಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಶಂಕಿತ ಮಾವೋವಾದಿಗಳ ಗುಂಪು ಆಗಮಿಸಿ ಅಲ್ಲಿದ್ದವರನ್ನು ಬೆದರಿಸಿರುವ ಘಟನೆ ಬೆಳಕಿಗೆ ಬಂದಿದೆ. ತಲಪ್ಪುಳ ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಿಮಲದ ರೆಸಾರ್ಟ್‍ನಲ್ಲಿ ಬುಧವಾರ ಸಂಜೆ 6.40ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಧುನಿಕ ಶಸ್ತ್ರ ಹೊಂದಿದ್ದ ಆರು ಜನರು ರೆಸಾರ್ಟ್ ಮ್ಯಾನೇಜರ್‍ನ ಮೊಬೈಲ್ ಫೋನ್ ಕಿತ್ತುಕೊಂಡು ನಂತರ ಕೆಲ ಪತ್ರಕರ್ತರ ವಾಟ್ಸಾಪ್‍ಗುಂಪಿಗೆ ತಮ್ಮ ಹೇಳಿಕೆಯನ್ನು ಕಳುಹಿಸುವಂತೆ ಹೇಳಿ ನಂತರ ಅಲ್ಲಿಂದ ನಿರ್ಗಮಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ರಾಜ್ಯದಾದ್ಯಂತ ಒಟ್ಟು 23 ಪತ್ರಕರ್ತರು ಸಿಪಿಐ(ಮಾವೋವಾದಿ) ಕಬನಿ ಪ್ರದೇಶ ಸಮಿತಿಯಿಂದ ಹೇಳಿಕೆಯ ಸಂದೇಶ ಸ್ವೀಕರಿಸಿದ್ದಾರೆ. ನಮಗೆ ಬಂದ ಮಾಹಿತಿಯ ಪ್ರಕಾರ, ಅವರೆಲ್ಲರೂ ಎಕೆ -47 ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು ರಾಜ್ಯ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ನಿರುದ್ಯೋಗ ದರ 6 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ : ಪ್ರಧಾನಿ

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಬನಿ ಪ್ರದೇಶ ಸಮಿತಿಯ ವಕ್ತಾರರು ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಜಂಟಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚೆಗೆ, ಈ ಉತ್ತರ ಕೇರಳ ಜಿಲ್ಲೆಯ ವಿವಿಧ ಅರಣ್ಯದ ಅಂಚಿನಲ್ಲಿರುವ ಕುಗ್ರಾಮಗಳಲ್ಲಿ ಮಾವೋವಾದಿಗಳ ಉಪಸ್ಥಿತಿಯ ಶಂಕಿತ ವರದಿಗಳು ಬಂದಿವೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.