Friday, November 7, 2025
Home Blog Page 1912

ಒಬಿಸಿ ಮೀಸಲಾತಿ ನಿರ್ಧಾರದಿಂದ ಕಾಂಗ್ರೆಸ್ ಚುನಾವಣಾ ಹಾದಿ ಸುಗಮ

ಬೆಂಗಳೂರು,ಅ.6- ಹಿಂದುಳಿದ ವರ್ಗಗಳಿಗೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿರುವುದರಿಂದ ಚುನಾವಣೆಯ ಹಾದಿ ಸುಗಮವಾಗಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ನೀಡಿದ್ದ ವರದಿಯಲ್ಲಿ 5 ಶಿಫಾರಸ್ಸುಗಳ ಪೈಕಿ 3ನ್ನು ಅಂಗೀಕರಿಸಲಾಗಿದೆ. ಅದರ ಪ್ರಕಾರ ಮುಂದೆ ನಡೆಯುವ ಎಲ್ಲಾ ಚುನಾವಣೆಗಳಲ್ಲೂ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.33 ರಷ್ಟು ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ಭಾರೀ ಚರ್ಚೆಗೆ ಕಾರಣವಾಯ್ತು ರಾವಣನಿಗೆ ರಾಹುಲ್ ಗಾಂಧಿ ಹೋಲಿಕೆ

ಸಂಪುಟದ ತೀರ್ಮಾನ ಕುರಿತು ವಿಧಾನಮಂಡಲದಲ್ಲಿ ಚರ್ಚೆಯಾಗಿ ಕಾಯಿದೆಯಾಗಬೇಕಿದೆ. ಅದಕ್ಕೆ ರಾಷ್ಟ್ರಪತಿಯವರ ಸಹಿ ಕೂಡ ಅಗತ್ಯವಾಗಿದೆ. ಮೀಸಲಾತಿ ವಿವಾದ ಸುಪ್ರೀಂಕೋರ್ಟಿನ ವಿಚಾರಣೆಯಲ್ಲಿದೆ. ಈಗಾಗಲೇ ನೀಡಿರುವ ಮಧ್ಯಂತರ ತೀರ್ಪಿನಲ್ಲಿ ಒಬಿಸಿ ಮೀಸಲಾತಿಯನ್ನು ನ್ಯಾಯಾಲಯ ತಳ್ಳಿಹಾಕಿದೆ. ಹಿಂದಿನ ಬಿಜೆಪಿ ಸರ್ಕಾರ ನ್ಯಾಯಮೂರ್ತಿ ಭಕ್ತವತ್ಸಲ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು.

ಆಯೋಗ ನೀಡಿದ್ದ 5 ಶಿಫಾರಸ್ಸುಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡಬೇಕು, ಬಿಬಿಎಂಪಿ ಮೇಯರ್, ಉಪಮೇಯರ್ ಹುದ್ದೆಗೂ ಮೀಸಲಾತಿ ಅನ್ವಯವಾಗಬೇಕು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣಾ ಘಟಕಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಅೀಧಿನಕ್ಕೆ ಒಳಪಡಿಸಬೇಕು ಎಂಬ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳಲಾಗಿದೆ.

ಬಿಬಿಎಂಪಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಯ ಅಧಿಕಾರವಯನ್ನು 30 ತಿಂಗಳಿಗೆ ವಿಂಗಡಿಸಿರುವಂತೆ ಇತರೆ ಪಾಲಿಕೆಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಮೇಯರ್, ಉಪಮೇಯರ್ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರವಯನ್ನು ವಿಂಗಡಿಸಬೇಕು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮೂರು ವರ್ಗಗಳನ್ನಾಗಿ ವಿಭಜಿಸಬೇಕು ಎಂಬ ಶಿಫಾರಸ್ಸನ್ನು ಸಂಪುಟ ತಿರಸ್ಕರಿಸಿದೆ.

ಮಾಸ್ಕೋ-ದೆಹಲಿ ನಡುವೆ ಬಿರುಕು ಮೂಡಿಸಲು ಯಾರಿಂದಲೂ ಸಾಧ್ಯವಿಲ್ಲ ; ಪುಟಿನ್

ರಾಜ್ಯಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಕಾಂಗ್ರೆಸ್, ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ ಶಿಫಾರಸ್ಸುಗಳಿಗೆ ಒಪ್ಪಿಗೆ ಸೂಚಿಸುವ ಮೂಲಕ ರಾಜ್ಯಸರ್ಕಾರ ಮಹತ್ತರ ತೀರ್ಮಾನ ಕೈಗೊಂಡಿದೆ. ಈ ನಿರ್ಧಾರದ ಮೂಲಕ ಪಂಚಾಯತ್ ರಾಜ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾದಿ ಸುಗಮವಾಗಲಿದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಲಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಯಾವುದೇ ಸಮಯದಲ್ಲಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು, ಅ.6- ಮುಂದಿನ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇದೇ 8 ಅಥವಾ 10 ರಂದು ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಡ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆ ಅವಧಿ ಬಹುತೇಕ ಮುಕ್ತಾಯವಾಗಿದ್ದು, ಚುನಾವಣಾ ಆಯೋಗ ಆಕ್ಟೋಬರ್ 8 ಅಥವಾ 10 ರಂದು ದಿನಾಂಕವನ್ನು ಘೋಷಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ನವೆಂಬರ್ 2 ನೇ ವಾರದಿಂದ ಡಿಸೆಂಬರ್ ಮೊದಲ ವಾರದವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಎರಡು ಅಥವಾ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳಿಗೆ ಚುನಾವಣಾ ಆಯೋಗ ಒಂದೇ ಹಂತದಲ್ಲಿ ಮತದಾನ ನಡೆಸಲು ಉದ್ದೇಶಿಸಿದೆ. ಈ ಹಿಂದೆ 2018 ರಲ್ಲಿ ಈ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದ ಮತದಾನವನ್ನು ನಡೆಸಿತ್ತು.

ಭಾರತಕ್ಕೆ ಹಸ್ತಾಂತರದ ವಿರುದ್ಧ ಮನವಿ ಸಲ್ಲಿಸಲು ರಾಣಾಗೆ ಕಾಲಾವಕಾಶ

ನಕ್ಸಲ್ ಪೀಡಿತ ಛತ್ತೀಸ್‍ಗಡದಲ್ಲಿ ಈ ಬಾರಿ ಎರಡು ಅಥವಾ ಮೂರು ಹಂತದ ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಈ ಐದು ರಾಜ್ಯಗಳಿಗೆ ಭೇಟಿ ನೀಡಿದ್ದು, ತೆಲಂಗಾಣ ರಾಜ್ಯದ ಪ್ರವಾಸವೂ ಪೂರ್ಣಗೊಂಡಿದೆ. ವೀಕ್ಷಕರೊಂದಿಗಿನ ಈ ಸಭೆಯ ನಂತರ, ಚುನಾವಣಾ ಆಯೋಗವು ಈ ಐದು ರಾಜ್ಯಗಳ ಚುನಾವಣಾ ದಿನಾಂಕವನ್ನು ಯಾವುದೇ ಸಮಯದಲ್ಲಿ ಘೋಷಿಸಬಹುದು. ಸಭೆಯಲ್ಲಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದೆ.

ಚುನಾವಣಾ ಆಯೋಗದ ಪೊಲೀಸ್, ಸಾಮಾನ್ಯ ಮತ್ತು ವೆಚ್ಚ ವೀಕ್ಷಕರ ಸಭೆಯ ಉದ್ದೇಶವು ಮಾದರಿ ನೀತಿ ಸಂಹಿತೆ ಪರಿಣಾಮಕಾರಿಯಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರವನ್ನು ಸುಗಮಗೊಳಿಸುವುದಾಗಿದೆ ಮತ್ತು ಹಣದ ಶಕ್ತಿಯನ್ನು ನಿಯಂತ್ರಿಸುವುದು.

ಆಯೋಗವು ಇದುವರೆಗೆ ರಾಜಸ್ಥಾನ, ಮಿಜೋರಾಂ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದೆ. ಆಯೋಗದ ತಂಡ ತೆಲಂಗಾಣಕ್ಕೂ ಭೇಟಿ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಐದು ರಾಜ್ಯಗಳ ಚುನಾವಣೆಯನ್ನು ಚುನಾವಣಾ ಆಯೋಗ ಪ್ರಕಟಿಸಬಹುದು.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ನವೆಂಬರ್-ಡಿಸೆಂಬನರ್‍ನಲ್ಲಿ ಛತ್ತೀಸ್ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ಮತ್ತು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮಿಜೋರಾಂ ವಿಧಾನಸಭೆಯ ಅಕಾರಾವ ಈ ವರ್ಷ ಡಿಸೆಂಬರ್ 17 ರಂದು ಕೊನೆಗೊಳ್ಳಲಿದೆ. ಈಶಾನ್ಯ ರಾಜ್ಯದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ.

ಮೈತ್ರಿಗೆ ಜೆಡಿಎಸ್-ಬಿಜೆಪಿಯಲ್ಲಿ ಅಪಸ್ವರ

ಬೆಂಗಳೂರು,ಅ.6-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಸೋಲಿಸಲು ಭಿನ್ನಾಭಿಪ್ರಾಯ ಮರೆತು ಒಗ್ಗೂಡಲು ಮುಂದಾಗಿದ್ದ ಬಿಜೆಪಿ , ಜೆಡಿಎಸ್ ಮೈತ್ರಿಗೆ ಅಪಸ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎರಡು ಪಕ್ಷಗಳ ನಡುವೆ ಕಂದಕ ಇನ್ನಷ್ಟು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಳವಾಗಿದೆ.

ಸೈದ್ಧಾಂತಿಕವಾಗಿ ಉತ್ತರ ಧೃವ ಮತ್ತು ದಕ್ಷಿಣ ಧೃವ ಎಂಬಂತಿದ್ದ ಬಿಜೆಪಿ, ಜೆಡಿಎಸ್ ಮೈತ್ರಿ ಮೇಲ್ನೋಟಕ್ಕೆ ಮೊದಲ ಹಂತದ ನಾಯಕರ ನಡುವೆ ಆಗಿದೆ. ಆದರೆ ಎರಡನೇ ಮತ್ತು ಮೂರನೇ ಹಂತದ ನಾಯಕರು ಈ ಕ್ಷಣಕ್ಕೂ ಮೈತ್ರಿಯನ್ನು ವಿರೋಧಿಸುತ್ತಲೇ ಇದ್ದಾರೆ.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮೈತ್ರಿಗೆ ವಿರೋಧ ವ್ಯಕ್ತಪಡಿಸಿರುವುದು ಒಂದು ನೆಪಮಾತ್ರ. ಬರುವ ದಿನಗಳಲ್ಲಿ ಈ ಧ್ವನಿಗೆ ಇನ್ನಷ್ಟು ಶಕ್ತಿ ಬರಲಿದ್ದು, ಜೆಡಿಎಸ್ ಜೊತೆ ಹೊಂದಾಣಿಕೆ ಬೇಡವೇ ಬೇಡ ಎಂಬ ಕೂಗು ಹೆಚ್ಚಾಗಲಿದೆ.

ಮಾಜಿ ಶಾಸಕ ಪ್ರೀತಂಗೌಡ ಕೂಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿಗೆ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಹಾಸನ ಕ್ಷೇತ್ರವನ್ನು ಜೆಡಿಎಸ್‍ನವರು ನಮಗೆ ಬಿಟ್ಟುಕೊಡಲಿ ಎಂದು ಸವಾಲು ಹಾಕಿದ್ದಾರೆ. ಇನ್ನು ಇದೇ ರೀತಿ ಅನೇಕ ಶಾಸಕರು ಒಳಗೊಳಗೇ ಜೆಡಿಎಸ್ ಜೊತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಬಹಿರಂಗವಾಗಿ ಯಾರೂ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿ ವಿರೋಧ ವ್ಯಕ್ತವಾದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಕಲ್ಲು ಬೀಳಬಹುದು ಎಂಬ ಆತಂಕ ಕಾಡುತ್ತಿದೆ.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಬಹುತೇಕ ಬಿಜೆಪಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ವೇಳೆಗೆ ಶಾಸಕ ಸ್ಥಾನಕ್ಕೆ ಇಬ್ಬರು ರಾಜೀನಾಮೆಯನ್ನು ನೀಡಬಹುದು. ಹೀಗಾಗಿಯೇ ಅವರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಅಲ್ಲದೆ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಂಘಟನೆಯಲ್ಲಿ ಪ್ರಬಲವಾಗಿದ್ದು, ಉಪಚುನಾವಣೆ ಎದುರಾದರೆ ಗೆದ್ದು ಬರುವುದು ಅಷ್ಟು ಸರಳವಾಗಿಲ್ಲ ಎಂಬುದು ಅವರಿಗೂ ಗೊತ್ತಾಗಿದೆ. ಹೀಗಾಗಿಯೇ ಜೆಡಿಎಸ್ ಜೊತೆ ಹೊಂದಾಣಿಕೆಗೆ ವಿರೋಧವನ್ನು ಹೊರಹಾಕಿದ್ದಾರೆ. ಸದ್ಯ ಶಿವರಾಂ ಹೆಬ್ಬಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲವಾದರೂ ಸೋಮಶೇಖರ್ ಅಭಿಪ್ರಾಯಕ್ಕೆ ಅವರ ಸಹಮತ ಇದ್ದೇ ಇರುತ್ತದೆ ಎಂದು ಹೇಳಲಾಗಿದೆ.

ಉಳಿದಂತೆ ಹಳೆ ಮೈಸೂರು ಭಾಗವಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆಗೆ ಎರಡು ಮತ್ತು ಮೂರನೇ ಹಂತದ ನಾಯಕರು ಸುತಾರಾಂ ಒಪ್ಪುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಉಂಟಾಗಿರಬಹುದು. ಆದರೆ ಇದೇ ಪರಿಸ್ಥಿತಿ ಲೋಕಸಭೆ ಚುನಾವಣೆಯಲ್ಲಿ ಇರುತ್ತದೆ ಎಂದು ಭಾವಿಸಬೇಕಿಲ್ಲ.

ವಿಧಾನಸಭಾ ಚುನಾವಣೆ ಸ್ಥಳೀಯ ರಾಜಕೀಯ ಪರಿಸ್ಥಿತಿಗನುಗುಣವಾಗಿ ನಡೆಯುತ್ತದೆ. ಇದೇ ಫಲಿತಾಂಶವನ್ನು ಲೋಕಸಭೆ ಚುನಾವಣೆಗೂ ಅನ್ವಯಿಸಿಕೊಳ್ಳಬೇಕಾಗಿಲ್ಲ. ಎರಡು ಚುನಾವಣೆಗಳ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲೇ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಒಂದು ಕಡೆ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ, ಸಂಘಟನೆಯ ಚತುರ ಡಿ.ಕೆ.ಶಿವಕುಮಾರ್‍ರಂತಹ ಘಟಾನುಘಟಿಗಳು ಇದ್ದಾಗಲೇ ನಾವು 25 ಸ್ಥಾನಗಳನ್ನು ಗೆದ್ದಿದ್ದೆವು ಇದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಡದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗಲೂ ಬಿಜೆಪಿ ಕ್ಲೀನ್‍ಸ್ವೀಪ್ ಮಾಡಿತ್ತು.

ಈಗ ಪಂಚಖಾತ್ರಿ ಯೋಜನೆಗಳು ಸರ್ಕಾರದ ಜನಪ್ರಿಯತೆ ಅಂದುಕೊಂಡರೂ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಕನಿಷ್ಠ ಎಂದರೂ 28 ರ ಪೈಕಿ 14 ರಿಂದ 15 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಒಂದಿಷ್ಟು ಶ್ರಮ ಹಾಕಿದರೆ 18 ರಿಂದ 20 ಸ್ಥಾನಗಳು ನಮಗೆ ಲಭಿಸಲಿವೆ.

ಹೈಸ್ಪೀಡ್ ರೈಲು ಸಂಚರಿಸುವ ಸುರಂಗ ಮಾರ್ಗ ಪೂರ್ಣ

1999 ರಿಂದ ಈವರೆಗೂ ರಾಜ್ಯದಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನಿಚ್ಛಳವಾಗಿ ಮುನ್ನಡೆ ಸಾಧಿಸಿಕೊಂಡು ಬಂದಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ನಮ್ಮ ಪರಿಶ್ರಮದಲ್ಲಿ ಜೆಡಿಎಸ್ ಮೂರರಿಂದ ನಾಲ್ಕು ಸ್ಥಾನಗಳನ್ನು ಗೆದ್ದುಕೊಳ್ಳಬಹುದು. ಬದಲಿಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಹಿಂದೆ ಸರಿಯುವುದೇ ಲೇಸು ಎನ್ನುವುದು ಬಹುತೇಕ ನಾಯಕರ ಒತ್ತಾಸೆಯಾಗಿದೆ.

ಹಾವು ಮುಂಗಸಿಯಂತಿದ್ದ ನಾವು ಏಕಾಏಕಿ ಪರಸ್ಪರ ಹಸ್ತಲಾಘವ ಮಾಡುವುದು ಅಷ್ಟು ಸುಲಭವಲ್ಲ. ಜೆಡಿಎಸ್‍ನ ಭದ್ರಕೋಟೆ ಎನಿಸಿದ ಹಾಸನದಲ್ಲೇ ಎರಡು ಸ್ಥಾನಗಳನ್ನು ಗೆದ್ದಿದ್ದೇವೆ. ಅಲ್ಲದೆ ಸ್ವತಃ ಹಾಸನ ಕ್ಷೇತ್ರದಲ್ಲೇ ನಮ್ಮ ಸಂಘಟನೆ ಈಗಲೂ ಪ್ರಬಲವಾಗಿದೆ. ಈ ಬಾರಿ ಬಿಜೆಪಿ ಗೆಲ್ಲುವ ವಾತಾವರಣವಿದ್ದು, ನಾವೇಕೆ ಜೆಡಿಎಸ್‍ಗೆ ಬಿಟ್ಟುಕೊಡಬೇಕೆಂದು ಪ್ರೀತಂಗೌಡ ರಾಜ್ಯನಾಯಕರಿಗೆ ಒತ್ತಡ ಹಾಕಿದ್ದಾರೆ.

ಹೀಗೆ ಎಲ್ಲಾ ಹಂತದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ವಿರೋಧ ವ್ಯಕ್ತವಾಗುತ್ತಿರುವುದರಿಂದ ಬಿಜೆಪಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಉದ್ಯಮಿಯಿಂದ 2 ಕೋಟಿ ಲಂಚ ಪಡೆದಿದ್ದರಂತೆ ಸಂಜಯ್‍ಸಿಂಗ್

ನವದೆಹಲಿ,ಅ.6-ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರು ಉದ್ಯಮಿಯೊಬ್ಬರಿಂದ ಎರಡು ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ಜಾರಿ ನಿರ್ದೇಶಾನಾಲಯ ನ್ಯಾಯಾಲಯಕ್ಕೆ ತಿಳಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಸಿಂಗ್ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ಎಂದು ಆರೋಪಿಸಿ ದೆಹಲಿ ನ್ಯಾಯಾಲಯವು ರಾಜ್ಯಸಭಾ ಸಂಸದರನ್ನು ತನಿಖಾ ಸಂಸ್ಥೆಯ ಐದು ದಿನಗಳ ಕಸ್ಟಡಿಗೆ ಒಪ್ಪಿಸಿದೆ.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ಉದ್ಯಮಿಯೊಬ್ಬರು ಸಿಂಗ್‍ಗೆ 2 ಕೋಟಿ ನೀಡಿದ್ದಾರೆ ಮತ್ತು ಈ ಮೊತ್ತವು ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಹಣದ ಜಾಡು ಹಿಡಿದಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಎಎಪಿ ನಾಯಕನಿಗೆ ಉದ್ಯಮಿ ದಿನೇಶ್ ಅರೋರಾ ಸೇರಿದಂತೆ ಹಲವು ಆರೋಪಿಗಳೊಂದಿಗೆ ನಿಕಟ ಸಂಬಂಧವಿದೆ ಎಂದು ಸಂಸ್ಥೆ ಆರೋಪಿಸಿದೆ.

ಆರೋಪಿ ನೀತಿ ನಿರೂಪಣೆಯ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸುವ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ತನ್ನ ಅರ್ಜಿಯಲ್ಲಿ ತಿಳಿಸಿದೆ. ಎಎಪಿ ಸಂಸದರ ಆವರಣದಿಂದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದು, ಅವರನ್ನು ಎದುರಿಸುವುದಾಗಿ ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಅರೋರಾದ ಉದ್ಯೋಗಿ ಸರ್ವೇಶ್ ಎಂಬುವರು ಹಣವನ್ನು ತಲುಪಿಸಿದ್ದಾರೆ ಎಂದು ಅದು ಆರೋಪಿಸಿದೆ.

ಅಪರಾಧದ ಆದಾಯಕ್ಕೂ ನೇರ ಸಂಬಂಧವಿದೆ ಎಂದು ಇಡಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಯ ವಿರುದ್ಧ ಹೊರಿಸಲಾದ ಆರೋಪಗಳು ಮತ್ತು 2 ಕೋಟಿ ಪಡೆಯುವ ಮೂಲಕ ಅಪರಾಧದ ಆದಾಯಕ್ಕೆ ಸಂಬಂಧಿಸಿದ ಚಟುವಟಿಕೆಗಳೊಂದಿಗೆ ನೇರ ನಂಟನ್ನು ನ್ಯಾಯಾಲಯದ ಮುಂದೆ ಇರಿಸಿರುವ ವಿಷಯದಿಂದ, ಅವರ ಸುಸ್ಥಿರ ಮತ್ತು ಕಸ್ಟಡಿ ವಿಚಾರಣೆ ಅಗತ್ಯವೆಂದು ತೋರುತ್ತಿದೆ ಎಂದು ನ್ಯಾಯಾಧಿಶರು ಗಮನಿಸಿದ್ದಾರೆ.

ವಿಮಾನ ಸಿಬ್ಬಂದಿಗಳನ್ನು ನಿಂದಿಸಿದವನ ವಿರುದ್ಧ ಎಫ್ಐಆರ್

ಆದ್ದರಿಂದ, ಮೇಲಿನ ಮತ್ತು ಸಂಪೂರ್ಣ ಸಂಗತಿಗಳು ಮತ್ತು ಸಂದರ್ಭಗಳ ದೃಷ್ಟಿಯಿಂದ, ಆರೋಪಿಯನ್ನು ಮೌಖಿಕ ಮತ್ತು ಸಾಕ್ಷ್ಯಚಿತ್ರ ಸಾಕ್ಷ್ಯಗಳೊಂದಿಗೆ ವಿವರವಾದ ಮತ್ತು ನಿರಂತರ ವಿಚಾರಣೆ ಮತ್ತು ಮುಖಾಮುಖಿ ಉದ್ದೇಶಗಳಿಗಾಗಿ ಅಕ್ಟೋಬರ್ 10, 2023 ರವರೆಗೆ ಇಡಿ ವಶಕ್ಕೆ ನೀಡಲಾಗುತ್ತಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು,ಎಂದು ನ್ಯಾಯಾಧಿಶರು ತಿಳಿಸಿದರು.

ಭಾರೀ ಚರ್ಚೆಗೆ ಕಾರಣವಾಯ್ತು ರಾವಣನಿಗೆ ರಾಹುಲ್ ಗಾಂಧಿ ಹೋಲಿಕೆ

ನವದೆಹಲಿ,ಅ.6- ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಕೆಸರೆರಚಾಟಗಳು ಜೋರಾಗುತ್ತಿದ್ದು, ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ರಾಹುಲ್ ಗಾಂಧಿಯನ್ನು ರಾಮಾಯಣದ ಖಳನಾಯಕ ರಾವಣನಿಗೆ ಹೋಲಿಕೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯ ಅಧಿಕೃತ ಎಕ್ಸ್ ಮಾಧ್ಯಮದಲ್ಲಿ ಪ್ರಕಟಿಸಲಾಗಿರುವ ಪೋಸ್ಟರ್‍ನಲ್ಲಿ ರಾಹುಲ್‍ಗಾಂಧಿಯ ಮುಖಕ್ಕೆ ಹತ್ತು ತಲೆಗಳನ್ನು ಜೋಡಿಸಲಾಗಿದ್ದು, ಹೊಸ ತಲೆಮಾರಿನ ರಾವಣ, ಆತ ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ, ಆತನ ಗುರಿಯೇ ಭಾರತವನ್ನು ಧ್ವಂಸ ಮಾಡುವುದು ಎಂದು ಅಡಿಬರಹ ನೀಡಲಾಗಿದೆ. ಇದನ್ನು ಖಂಡಿಸಿ ಬಿಜೆಪಿಯೇತರ ರಾಜಕೀಯ ನಾಯಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಏಕಕಾಲದಲ್ಲಿ ಈ ಹಿಂದೆ ಮಹಾತ್ಮಗಾಂಧಿಜಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಜವಹರಲಾಲ್ ನೆಹರೂ, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಾಬಾಯಿ ಪಟೇಲ್, ಮೌಲಾನ ಆಜಾದ್ ಸೇರಿದಂತೆ 10 ಮಂದಿ ಮಹಾತ್ಮರ ತಲೆಗಳನ್ನು ಅಂಟಿಸಿ, ಅದಕ್ಕೆ ಆರ್‍ಎಸ್‍ಎಸ್ ನ ಸಾವರ್ಕರ್ ಹಾಗೂ ಇತರ ಪ್ರಮುಖರು, ಅಖಂಡ ಭಾರತ ಎಂಬ ಸೂಚ್ಯದ ಬಾಣ ಹೊಡೆಯುವಂತಹ ವ್ಯಂಗ್ಯ ಚಿತ್ರ ರಚನೆಯಾಗಿತ್ತು. ಈಗ ಅದು ವ್ಯಾಪಕ ವೈರಲ್ ಆಗುತ್ತಿದೆ.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ಜೊತೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನರೇಂದ್ರ ಮೋದಿಯವರನ್ನು ರಾವಣನಿಗೆ ಹೋಲಿಸಿ ಹತ್ತು ತಲೆಗಳನ್ನು ಜೋಡಿಸಿರುವ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆರೋಪ, ಪ್ರತ್ಯಾರೋಪ, ಕೆಸರೆರಚಾಟಗಳು ವ್ಯಾಪಕವಾಗಿದೆ.

ಈ ಮೊದಲಿನ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿತ ಸಂಘಟನೆಗಳು ರಾಹುಲ್‍ಗಾಂಧಿಯವರನ್ನು ಪಪ್ಪು ಎಂದು ಬಿಂಬಿಸಿದ್ದವು. ಆದರೆ ಇತ್ತೀಚೆಗೆ ರಾಹುಲ್‍ಗಾಂಯವರ ನಡೆಗಳು, ಅಂತಾರಾಷ್ಟ್ರೀಯ ಗಡಿ ವಿವಾದ ಮತ್ತು ಕರೋನ ಸಂದರ್ಭದಲ್ಲಿನ ಅವರ ಹೇಳಿಕೆಗಳು, ಭಾರತ ಜೋಡೊ ಯಾತ್ರೆಗಳು ರಾಹುಲ್‍ಗಾಂಧಿಯವರ ವಾಸ್ತವ ಪ್ರಬುದ್ಧತೆಯನ್ನು ಅನಾವರಣಗೊಳಿಸಿವೆ ಎಂದು ಕಾಂಗ್ರೆಸ್ ನಾಯಕರು ವಿಶ್ಲೇಷಿಸಿದ್ದಾರೆ.

2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಈವರೆಗೂ ಪಪ್ಪು ಎಂದು ಬಿಂಬಿಸಿದ ರಾಹುಲ್‍ಗಾಂಧಿಯವರನ್ನು, ಹೊಸದಾಗಿ ರಾವಣ, ದುಷ್ಟ ಎಂದು ನಂಬಿಸುವ ಸಂಚನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್‍ನ ಸಂಸದ ಮಾಣಿಕಂ ಠಾಕೂರ್ ಟೀಕಿಸಿದ್ದಾರೆ.

ಇಂಡಿಯಾ ಘಟಬಂಧನ್‍ನ ಸಹಪಾಠಿಯಾಗಿರುವ ಶಿವಸೇನೆ ಉದ್ಧವ್‍ಠಾಕ್ರೆ ಬಣದ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಪೋಸ್ಟರ್‍ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯವರು ಜನಮನ್ನಣೆ ಕಳೆದುಕೊಂಡಿದ್ದಾರೆ. ಹೀಗಾಗಿ 2024 ರಲ್ಲಿ ಸೋಲುವ ಭಯ ಕಾಡುತ್ತಿದೆ. ರಾವಣ ಪೋಸ್ಟರ್ ಬಿಜೆಪಿಯವರಿಗೆ ರಾಹುಲ್ ಗಾಂಧಿ ಕುರಿತಾದ ಭಯದ ಸಂಕೇತ ಎಂದು ಹೇಳಿದ್ದಾರೆ.

ತಮಿಳುನಾಡಿನ ಕಾಂಗ್ರೆಸ್ ರಾಹುಲ್ ಗಾಂಧಿ ಭಾರತ್ ಜೋಡೊ ಸಂದರ್ಭದಲ್ಲಿ ಟ್ರೋಲರ್‍ಗಳ ಕುರಿತು ನೀಡಿದ್ದ ಹೇಳಿಕೆಯನ್ನು ಪೋಸ್ಟ್ ಮಾಡಿದೆ. ಟ್ರೋಲರ್‍ಗಳು ಹೆಚ್ಚು ಶ್ರಮ ಹಾಕಬೇಕು, ಬುದ್ಧಿವಂತರಾಗಬೇಕು, ಸ್ಮಾರ್ಟ್ ಆಗಿ ಎಡಿಟಿಂಗ್ ಮಾಡುವುದನ್ನು ಕಲಿಯಬೇಕು. ಏಕೆಂದರೆ ಅದು ನನಗೆ ಅನುಕೂಲವಾಗಲಿದೆ ಎಂದು ಆ ವೇಳೆ ರಾಹುಲ್‍ಗಾಂಧಿ ಹೇಳಿದ್ದರು. ಪ್ರಸ್ತುತ ಅದು ಈ ಸಂದರ್ಭದಲ್ಲಿ ನೆಟ್ಟಿಗರಿಗೆ ಅಸ್ತ್ರವಾಗಿ ಬಳಕೆಯಾಗುತ್ತಿದೆ.

ಕಾಂಗ್ರೆಸ್‍ನ ನಾಯಕ ಬಿಹಾರದ ಅಂಕುರ್‍ಸಿಂಗ್ ಅವರು, ಪ್ರಿಯಾಂಕ ಗಾಂಧಿ ವಾದ್ರ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವು ಗ್ರಾಮೀಣ ಭಾಗದ ಮಕ್ಕಳು ಪ್ರಿಯಾಂಕ ಅವರನ್ನು ಭೇಟಿ ಮಾಡಿದ ವೇಳೆ ರಾಹುಲ್‍ಗಾಂಧಿಯವರಿಗೆ ಜೈಕಾರ ಕೂಗುವ ಜೊತೆಗೆ ಪ್ರಧಾನಿಯವರಿಗೆ ಧಿಕ್ಕಾರ ಕೂಗಿದ್ದಾರೆ.

ವಿಮಾನ ಸಿಬ್ಬಂದಿಗಳನ್ನು ನಿಂದಿಸಿದವನ ವಿರುದ್ಧ ಎಫ್ಐಆರ್

ಆದರೆ ಪ್ರಿಯಾಂಕ ಮಕ್ಕಳಿಗೆ ಆ ರೀತಿ ಮಾಡಬಾರದು. ಒಳ್ಳೆಯದನ್ನು ಕಲಿಯಬೇಕು. ಮತ್ತೊಬ್ಬರನ್ನು ಟೀಕಿಸಬಾರದು ಎಂದು ತಿಳಿ ಹೇಳಿರುವುದು ವೈರಲ್ ಆಗುತ್ತಿದೆ. ಕಾಂಗ್ರೆಸ್‍ನವರಿಗಿರುವ ಸಂಸ್ಕøತಿ, ಬಿಜೆಪಿಯವರಿಗೆ ಇಲ್ಲ ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಅಸ್ಸಾಂನ ಕಾಂಗ್ರೆಸ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಆಕ್ಷೇಪಾರ್ಹ ಪೋಸ್ಟರ್ ಹಂಚಿಕೊಂಡಿದೆ. ರಾಜ್ಯಸರ್ಕಾರದ ಸಚಿವ ದಿನೇಶ್‍ಗುಂಡೂರಾವ್ ಬಿಜೆಪಿಯ ಪೋಸ್ಟರ್ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್‍ಗಾಂಧಿಯವರನ್ನು ರಾವಣನಂತೆ ಬಿಂಬಿಸಿರುವ ಪೋಸ್ಟರ್ ಬಿಡುಗಡೆ ಮಾಡಿರುವ ಬಿಜೆಪಿ ತನ್ನ ಮಾನಸಿಕ ವಿಕಾರತೆಯನ್ನು ಕಾರಿಕೊಂಡಿದೆ.

ಹೈಸ್ಪೀಡ್ ರೈಲು ಸಂಚರಿಸುವ ಸುರಂಗ ಮಾರ್ಗ ಪೂರ್ಣ

ಗೋಡ್ಸೆ ಆರಾಧಕರಾದ ಬಿಜೆಪಿಯವರಿಂದ ಇಂತಹ ವಿಕೃತಿಗಳನ್ನಲ್ಲದೆ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಕೀಚಕ ಮಾರೀಚನಂತಹ ಸಂತತಿಯೇ ತುಂಬಿಕೊಂಡಿರುವ ಬಿಜೆಪಿಯಿಂದ ರಾಹುಲ್‍ಗಾಂಧಿಯವರನ್ನು ರಾವಣನಿಗೆ ಹೋಲಿಸಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸೃಷ್ಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಧ್ವನಿ ಮಾದರಿಯ ಕೆಲವು ಯುಗಳ ಗೀತೆಗಳು ವೈರಲ್ ಆಗಿದ್ದವು. ಈಗ ಅದೇ ತಂತ್ರಜ್ಞಾನದಲ್ಲಿ ರೂಪಿಸಲಾದ ರಾವಣ ಪೋಸ್ಟರ್ ಭಾರೀ ವೈರಲ್ ಆಗಿದೆ.

ಭಾರತಕ್ಕೆ ಹಸ್ತಾಂತರದ ವಿರುದ್ಧ ಮನವಿ ಸಲ್ಲಿಸಲು ರಾಣಾಗೆ ಕಾಲಾವಕಾಶ

ವಾಷಿಂಗ್ಟನ್, ಅ 6 (ಪಿಟಿಐ) 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ತಹವ್ವುರ್ ರಾಣಾಗೆ ಭಾರತಕ್ಕೆ ಹಸ್ತಾಂತರದ ವಿರುದ್ಧ ಮನವಿ ಸಲ್ಲಿಸಲು ಅಮೆರಿಕದ ಫಡರಲ್ ನ್ಯಾಯಾಲಯವು ಹೆಚ್ಚಿನ ಸಮಯವನ್ನು ನೀಡಿದೆ.

ಆಗಸ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಅನ್ನು ನಿರಾಕರಿಸಿದ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‍ನಲ್ಲಿರುವ ಅಮೆರಿಕ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ರಾಣಾ ಒಂಬತ್ತನೇ ಸಕ್ರ್ಯೂಟ್ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಮುಂಬೈ ದಾಳಿಯಲ್ಲಿನ ಪಾತ್ರಕ್ಕಾಗಿ ರಾಣಾ ಅನೇಕ ಆರೋಪಗಳನ್ನು ಎದುರಿಸುತ್ತಾನೆ ಮತ್ತು ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಕಂಚು ಗೆದ್ದ ಭಾರತ ಮಹಿಳಾ ರಿಕರ್ವ್ ತಂಡ

ಅವರ ಕೋರಿಕೆಯ ನಂತರ, ಒಂಬತ್ತನೇ ಸಕ್ರ್ಯೂಟ್‍ನ ಕೋರ್ಟ್ ಆಫ ಅಪೀಲ್ಸ್‍ನ ನ್ಯಾಯಾಧಿಶ ಫಿಶರ್ ಅವರು ರಾಣಾ ಅವರನ್ನು ಅಕ್ಟೋಬರ್ 10 ರ ಮೊದಲು ತಮ್ಮ ವಾದವನ್ನು ಸಲ್ಲಿಸುವಂತೆ ಕೇಳಿಕೊಂಡರು ಮತ್ತು ಯುಎಸ್ ಸರ್ಕಾರವು ನವೆಂಬರ್ 8 ರೊಳಗೆ ಅದರ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಳಲಾಯಿತು. ಜಡ್ಜ್ ಫಿಶರ್ ಅವರು ರಾಣಾ ಅವರು ತಡೆಹಿಡಿಯದಿದ್ದಲ್ಲಿ ಗಮನಾರ್ಹವಾದ ಸರಿಪಡಿಸಲಾಗದ ಹಾನಿಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ತೋರಿಸಿದ್ದಾರೆ ಎಂದು ಬರೆದಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಗೆಲುವು

ಗಂಭೀರ ಅಪರಾಧಗಳ ವಿಚಾರಣೆಗಾಗಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು ಮತ್ತು ಅವರ ವಾದಗಳ ಪರಿಶೀಲನೆಗಾಗಿ ಯಾವುದೇ ಭರವಸೆ ಇಲ್ಲ ಅಥವಾ ಯುನೈಟೆಡ್ ಸ್ಟೇಟ್ಸ್ಗೆ ಹಿಂದಿರುಗುವ ಭರವಸೆ ಇಲ್ಲ. ಸರ್ಕಾರವು ಇದನ್ನು ಒಪ್ಪಿಕೊಳ್ಳುತ್ತದೆ ಆದರೆ ನಂತರ ವಾದಿಸುತ್ತದೆ ಏಕೆಂದರೆ ಈ ಹೇಳಲಾದ ಸರಿಪಡಿಸಲಾಗದ ಹಾನಿಯು ಯಾವುದೇ ಪಲಾಯನಕಾರರಿಗೆ ನಿರ್ದಿಷ್ಟವಾಗಿ ಅನ್ವಯಿಸುತ್ತದೆ, ಅವರು ಹಸ್ತಾಂತರಿಸುವಿಕೆಯ ಬಾಕಿ ಉಳಿದಿರುವ ಮೇಲ್ಮನವಿಯನ್ನು ಬಯಸುತ್ತಾರೆ, ಅದನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಧಿಶರು ಹೇಳಿದರು.

ಮಾಸ್ಕೋ-ದೆಹಲಿ ನಡುವೆ ಬಿರುಕು ಮೂಡಿಸಲು ಯಾರಿಂದಲೂ ಸಾಧ್ಯವಿಲ್ಲ ; ಪುಟಿನ್

ಸೋಚಿ,ಅ.6- ಭಾರತ ಸರ್ಕಾರ ತನ್ನ ನಾಗರಿಕರ ಹಿತಾಸಕ್ತಿಗಳಿಗಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಮಾಸ್ಕೋ ಮತ್ತು ನವದೆಹಲಿ ನಡುವೆ ಬಿರುಕು ಮೂಡಿಸಲು ಪಶ್ಚಿಮದ ಯಾವುದೇ ಪ್ರಯತ್ನಗಳು ಅರ್ಥಹೀನ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ತಮ್ಮ ಏಕಸ್ವಾಮ್ಯವನ್ನು ಒಪ್ಪದ ಪ್ರತಿಯೊಬ್ಬರಿಂದ ಶತ್ರುವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ, ಪ್ರತಿಯೊಬ್ಬರೂ ಅಪಾಯದಲ್ಲಿದ್ದಾರೆ – ಭಾರತವೂ ಸಹ, ಆದರೆ ಭಾರತೀಯ ನಾಯಕತ್ವವು ತನ್ನ ರಾಷ್ಟ್ರದ ಹಿತಾಸಕ್ತಿಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುಟಿನ್ ರಷ್ಯಾದ ಸೋಚಿ ಕಪ್ಪು ಸಮುದ್ರದ ರೆಸಾರ್ಟ್‍ನಲ್ಲಿ ತಿಳಿಸಿದ್ದಾರೆ.

ಭಾರತವನ್ನು ರಷ್ಯಾದಿಂದ ದೂರವಿಡುವ ಪ್ರಯತ್ನಗಳು ಅರ್ಥಹೀನ, ಭಾರತವು ಸ್ವತಂತ್ರ ರಾಜ್ಯವಾಗಿದೆ ಎಂದು ಅವರು ಹೇಳಿದರು. ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮ ದೇಶದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ರಿಯಾಯಿತಿ ದರದ ರಷ್ಯಾದ ತೈಲವನ್ನು ಸ್ನ್ಯಾಪ್ ಮಾಡಿದ್ದಕ್ಕಾಗಿ ಭಾರತೀಯ ಸಂಸ್ಕರಣಾಗಾರರು ಟೀಕೆಗಳನ್ನು ಎದುರಿಸುತ್ತಿರುವ ನಡುವೆ ಅವರ ಈ ಹೇಳಿಕೆಗಳು ಬಂದಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಯುಎಸ್ ಮತ್ತು ಯುರೋಪಿಯನ್ ಒಕ್ಕೂಟವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿತು.

ವಿಮಾನ ಸಿಬ್ಬಂದಿಗಳನ್ನು ನಿಂದಿಸಿದವನ ವಿರುದ್ಧ ಎಫ್ಐಆರ್

ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಸಿದ ಪುಟಿನ, ಅವರ ನಾಯಕತ್ವದಲ್ಲಿ ಭಾರತವು ಸದೃಢವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಭಾರತವು 1.5 ಶತಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ, ಆರ್ಥಿಕ ಬೆಳವಣಿಗೆಯ ಶೇ7 ಕ್ಕಿಂತ ಹೆಚ್ಚು … ಅದು ಶಕ್ತಿಯುತ ದೇಶ, ಪ್ರಬಲ ದೇಶ. ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಅದು ಬಲವಾಗಿ ಮತ್ತು ಬಲವಾಗಿ ಬೆಳೆಯುತ್ತಿದೆ ಎಂದು ಪುಟಿನ್ ಹೇಳಿದರು.

ಪ್ರಪಂಚದ ಬಹುತೇಕ ಎಲ್ಲ ಭಾಗಗಳಲ್ಲಿ ಭಾರತೀಯರು ತಮ್ಮ ಛಾಪು ಮೂಡಿಸುತ್ತಿರುವುದರಿಂದ ರಷ್ಯಾದಂತೆ ಭಾರತಕ್ಕೂ ಯಾವುದೇ ಗಡಿಗಳಿಲ್ಲ ಎಂದು ಅವರು ಹೇಳಿದರು. ರಾಜಕೀಯ ಪ್ರದರ್ಶನ ವನ್ನು ಉಂಟುಮಾಡಲು ಬಯಸದ ಕಾರಣ ನಾನು ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಬ್ರಿಕ್ಸ್ ಸಭೆ ಮತ್ತು ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸಮಾಜಾಯಿಷಿ ನೀಡಿದರು.

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ವಾಷಿಂಗ್ಟನ್ ಅ 6 (ಪಿಟಿಐ) ಉಕ್ರೇನ್‍ಗೆ ನೆರವು ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ಇಬ್ಬರು ವ್ಯಕ್ತಿಗಳು ಅಯೋವಾದಲ್ಲಿ ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ತಮ್ಮ ಮಧ್ಯದ ಬೆರಳನ್ನುತೋರಿಸಿ ಓಡಿ ಹೋದರು ಎಂದು ರಿಪಬ್ಲಿಕನ್ ಪಕ್ಷದ ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ಅನಿವಾಸಿ ಭಾರತೀಯ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.

ಆದರೆ ಅಪಘಾತವು ಉದ್ದೇಶಪೂರ್ವಕವಾಗಿದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಯೋವಾದ ಗ್ರಿನ್ನೆಲ್‍ನಲ್ಲಿ ಈ ಘಟನೆ ಸಂಭವಿಸಿದ್ದು, ಮಹಿಳೆಯೊಬ್ಬಳು ಚಾಲನೆ ಮಾಡುತ್ತಿದ್ದ ನೀಲಿ ಬಣ್ಣದ ಹೋಂಡಾ ಸಿವಿಕ್ ಕಾರು ತನ್ನ ಪ್ರಚಾರದ ಎಸ್‍ಯುವಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಿಂತಿತು.

ನಂತರ ಆರೋಪಿತ ಪ್ರತಿಭಟನಾಕಾರರು ಕೂಡಲೇ ಸ್ಥಳದಿಂದ ನಿರ್ಗಮಿಸಿದರು. ಪ್ರತಿಭಟನಾಕಾರರಲ್ಲಿ ಇಬ್ಬರು ಮಾತ್ರ ಅನುಚಿತ ವರ್ತನೆ ತೋರಿದ್ದಾರೆ ಉಳಿದವರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಎಂದು ರಾಮಸ್ವಾಮಿ ಎಕ್ಸ್ ಮಾಡಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ ಎಂದು ಕಾರ್ಯಕ್ರಮದ ನಂತರ ರಾಮಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಬಡ್ಡಿ ಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ

ನಾನು ಇಂದು ಮುಂಜಾನೆ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾ ಮತ್ತು ಪ್ರತಿಭಟನಾಕಾರರ ಸಣ್ಣ ಗುಂಪನ್ನು ಭೇಟಿ ಮಾಡಿದೆ. ನಾನು ಅವರ ಪ್ರಶ್ನೆಗಳಿಗೆ ಗೌರವಯುತವಾಗಿ ಉತ್ತರಿಸಿದೆ ಮತ್ತು ನಾನು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ಸಹ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

ವಿಶ್ವಕಪ್ ಮಹಾಸಮರ, ಭಾರತಕ್ಕೆ ಆರಂಭಿಕ ಆಘಾತ

ನವದೆಹಲಿ,ಅ.6- ವಿಶ್ವಕಪ್ ಮಹಾಸಮರ ಆರಂಭವಾಗಿರುವ ಬೆನ್ನಲ್ಲೇ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ವಿಯ ಫಾರ್ಮ್‍ನಲ್ಲಿರುವ ಭಾರತದ ಆರಂಭಿಕ ಆಟಗಾರ ಶುಬ್‍ಮನ್‍ಗಿಲ್ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗುವ ಸಾಧ್ಯತೆ ಇದೆ.

ಏಕೆಂದರೆ ಶುಬ್‍ಮನ್‍ಗಿಲ್‍ಗೆ ಕಳೆದ ಎರಡು ದಿನಗಳಿಂದ ತೀವ್ರವಾದ ಜ್ವರ ಕಾಣಿಸಿಕೊಂಡಿದೆ. ಇನ್ನೊಂದೆಡೆ ಅವರಿಗೆ ಡೆಂಗ್ಯೂ ತಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಿಲ್ ಕಣಕ್ಕಿಳಿಯುವ ಸಾಧ್ಯತೆ ಕ್ಷೀಣಿಸಿದೆ.

ಒಂದು ವೇಳೆ ಗಿಲ್ ಅಷ್ಟರೊಳಗೆ ಫಾರ್ಮ್‍ಗೆ ಮರಳಿದರೆ ಪಂದ್ಯಕ್ಕೆ ಸೇರ್ಪಡೆಯಾಗಲಿದ್ದಾರೆ. ಇಲ್ಲದಿದ್ದರೆ ಇಶಾನ್ ಕಿಶೋರ್ ಭಾರತದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬಹುದೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಭರ್ಜರಿ ಫಾರ್ಮ್‍ನಲ್ಲಿರುವ ಶುಬ್‍ಮನ್‍ಗಿಲ್ ಅವರ ಆಟವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದರು.

ಕಂಚು ಗೆದ್ದ ಭಾರತ ಮಹಿಳಾ ರಿಕರ್ವ್ ತಂಡ

ಏಷ್ಯಾ ಕಪ್ ಸರಣಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡ ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಇದೀಗ ತೀವ್ರ ಜ್ವರ ಕಾಣಿಸಿಕೊಂಡಿರುವುದರಿಂದ ಭಾನುವಾರದ ಪಂದ್ಯಕ್ಕೆ ಲಭ್ಯವಾಗುವ ಬಗ್ಗೆ ವೈದ್ಯರು ಖಚಿತಪಡಿಸಿಲ್ಲ. ಇಂದು ಅವರಿಗೆ ವೈದ್ಯರು ಚಿಕಿತ್ಸೆಗೆ ಒಳಪಡಿಸಲಿದ್ದಾರೆ. ಡೆಂಗ್ಯೂ ಪರೀಕ್ಷೆ ಮಾಡಲಾಗುತ್ತಿದ್ದು, ಒಂದೆರೆಡು ದಿನ ವಿಶ್ರಾಂತಿಗೆ ವೈದ್ಯರು ಸೂಚಿಸಿದರೆ, ಕಾಂಗೋರೊ ವಿರುದ್ಧ ಪಂದ್ಯದಿಂದ ದೂರ ಉಳಿಯಲಿದ್ದಾರೆ.

ವಿಮಾನ ಸಿಬ್ಬಂದಿಗಳನ್ನು ನಿಂದಿಸಿದವನ ವಿರುದ್ಧ ಎಫ್ಐಆರ್

ನವದೆಹಲಿ,ಅ 6 (ಪಿಟಿಐ)- ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಗೆ ಅಶ್ಲೀಲ ಪದಗಳಿಂದ ನಿಂದಿಸಿ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಅಭಿನವ್ ಶರ್ಮಾ ಅಶ್ಲೀಲ ಪದ ಬಳಕೆ ಮಾಡುತ್ತಿದ್ದರು ಆ ಸಂದರ್ಭದಲ್ಲಿ ಎಕಾನಮಿ ಕ್ಲಾಸ್ ಕ್ಯಾಬಿನೆಟ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಲಿಖಿತ ಎಚ್ಚರಿಕೆ ನೀಡಿದರು ಆತ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ನಂತರ ಅದೇ ರೀತಿ ವರ್ತಿಸಿದ್ದರಿಂದ ಸಿಬ್ಬಂದಿ ಆತನನ್ನು ತಡೆದರು ಎಂದು ಎಫ್ಐಆರ್‍ನಲ್ಲಿ ತಿಳಿಸಲಾಗಿದೆ.

ಕಬಡ್ಡಿ ಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ

ಎಫ್ಐಆರ್‍ನ ಪ್ರಕಾರ ಪ್ರಯಾಣಿಕ ದೂರುದಾರರು ಮತ್ತು ಇತರ ಮಹಿಳಾ ಸಿಬ್ಬಂದಿಯನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವನು ತುಂಬಾ ಜೋರಾಗಿ ಮಾತನಾಡುತ್ತಿದ್ದನು ಮತ್ತು ಅವನ ಸುತ್ತ ಕುಳಿತಿದ್ದ ಪ್ರಯಾಣಿಕರು ಮತ್ತು ಕುಟುಂಬಗಳನ್ನು ಹೆದರಿಸುವಂತಹ ಅಸಭ್ಯ ಭಾಷೆಯನ್ನು ಬಳಸಿದನು. ಅವನು ನಮ್ಮ ದೇಶದ (ಭಾರತ) ಬಗ್ಗೆ ತುಂಬಾ ಅಗೌರವ ತೋರುತ್ತಿದ್ದನು ಮತ್ತು ಅವನ ನಡವಳಿಕೆಯು ತುಂಬಾ ಆಕ್ರಮಣಕಾರಿಯಾಗಿತ್ತು ಎಂದು ಎಫ್ಐಆರ್ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 (ಪದ, ಸನ್ನೆ ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ) ಮತ್ತು ವಿಮಾನ ನಿಯಮಗಳ ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್‍ನ ಜಲಂಧರ್ ಎಂದು ಪೊಲೀಸರು ತಿಳಿಸಿದ್ದಾರೆ.