Friday, November 7, 2025
Home Blog Page 1915

ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ

ಮಂಡ್ಯ,ಅ.5- ಜೆಡಿಎಸ್, ಬಿಜೆಪಿ ನಾಯಕರು ಕಾವೇರಿ ನದಿ ನೀರಿನ ವಿಚಾರದಲ್ಲಿ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಪ್ರಧಾನಿ ಮಧ್ಯಸ್ಥಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಹಾಗೂ ಕನ್ನಡಪರ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಾರೆ. ಬೆಳೆ ಹಾಗೂ ನೀರಿನ ರಕ್ಷಣೆ ವಿಷಯದಲ್ಲಿ ಅವರ ಕಾಳಜಿಗಳು ಸ್ತುತ್ಯಾರ್ಹ ಎಂದು ಹೇಳಿದರು.

ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್‍ನ ತೀರ್ಪು ಹಾಗೂ ಕೇಂದ್ರ ಸರ್ಕಾರದ 2 ತಾಂತ್ರಿಕ ಸಮಿತಿಗಳ ಆದೇಶ ಪ್ರಮುಖವಾಗಿದೆ. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಬಿಜೆಪಿಯವರಿಗೆ ರಾಜ್ಯದ ಜನರ ವಿಷಯದಲ್ಲಿ ಕನಿಷ್ಠ ಕೃತಜ್ಞತೆ ಇಲ್ಲ. 25 ಜನ ಸಂಸದರು ಗೆದ್ದಿದ್ದಾರೆ. ಕಾವೇರಿ ವಿಷಯದಲ್ಲಿ ಅವರ ಪಾತ್ರ ಏನು. ಮಂಡ್ಯದಲ್ಲಿ ಬಂದು ಮಾದ್ಯಮದ ಎದುರು ಪ್ರತಿಭಟನೆ ಮಾಡಿ ಪ್ರಚಾರ ಮಾಡುವುದಕ್ಕಷ್ಟೇ ಸೀಮಿತವೇ ಎಂದು ಪ್ರಶ್ನಿಸಿದರು.

ರಾಜಕಾರಣಕ್ಕಾಗಿ ಪ್ರಧಾನಿಯವರನ್ನು ಭೇಟಿ ಮಾಡುವ ನಾಯಕರು ಕಾವೇರಿ ವಿಷಯದಲ್ಲಿ ಪ್ರಧಾನಿಯವರ ಜೊತೆ ಏಕೆ ಚರ್ಚೆ ಮಾಡುತ್ತಿಲ್ಲ. ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ. ಕಾವೇರಿ ನದಿ ಪಾತ್ರದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕೇಂದ್ರ ಮಧ್ಯ ಪ್ರವೇಶ ಮಾಡಬೇಕು ಎಂದರು.

ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಎರಡು ಬಾರಿ ಸರ್ವಪಕ್ಷ ಸಭೆ ನಡೆಸಿದೆ. ಕೇಂದ್ರದಲ್ಲಿ ಸರ್ವಪಕ್ಷ ಸಂಸದರ ಜೊತೆಯೂ ಚರ್ಚೆ ನಡೆಸಲಾಗಿದೆ. ಮೂರು ದಿನ ದೆಹಲಿಯಲ್ಲೇ ಉಳಿದು ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ವಾಸ್ತವತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರಧಾನಿಯವರ ಭೇಟಿಗೆ ಎಷ್ಟೇ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಇತರರು ಸಹಾಯ ಮಾಡಲಿಲ್ಲ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ

ಪ್ರಧಾನಮಂತ್ರಿಯವರು ಮಧ್ಯಪ್ರವೇಶ ಮಾಡಲಾಗುವುದಿಲ್ಲ ಎಂದು ರಾಜ್ಯದ ಬಿಜೆಪಿ ನಾಯಕರೇ ಹೇಳುತ್ತಿರುವುದು ಸರಿಯಲ್ಲ. ಈ ಹಿಂದೆ ವಾಜಪೇಯಿ ಕೂಡ ಅಂತರಾಜ್ಯ ನದಿ ವಿವಾದದಲ್ಲಿ ಮಧ್ಯಪ್ರವೇಶ ಮಾಡಿದ್ದರು. ಬಿಜೆಪಿಯವರು ಪ್ರಧಾನಿಯವರ ಬಳಿ ಚರ್ಚೆ ಮಾಡದೇ ತಾವಾಗಿಯೇ ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಘೋಷಿಸುತ್ತಿದ್ದಾರೆ. ಹಾಗಿದ್ದ ಮೇಲೆ ರಾಜಕಾರಣ ಮಾಡುವುದನ್ನು ಬಿಟ್ಟು ಮನೆಯಲ್ಲಿರಲಿ ಎಂದು ಕಿಡಿಕಾರಿದರು.

ಇಂಡಿಯಾ ಘಟಬಂದನ್‍ಗಾಗಿ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂಬ ಆರೋಪ ಆಧಾರರಹಿತ. ರಾಜ್ಯ ಹಿತಾಸಕ್ತಿ ವಿಷಯದಲ್ಲಿ ಎರಡೂ ರಾಜ್ಯಗಳು ತಮ್ಮದೇ ಆದ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ರಾಜಕೀಯವೇ ಬೇರೆ, ರಾಜ್ಯದ ಹಿತಾಸಕ್ತಿಯೇ ಬೇರೆ. ರಾಜ್ಯಸರ್ಕಾರ ಹೇಳದೇ, ಕೇಳದೆ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಾರೆ. ತಾಂತ್ರಿಕ ಸಮಿತಿಗಳ ಆದೇಶವನ್ನು ಎಲ್ಲಾ ಕಾಲದಲ್ಲೂ ಸರ್ಕಾರಗಳು ಪಾಲನೆ ಮಾಡಿವೆ. ಸಂಕಷ್ಟದ ಸಂದರ್ಭದಲ್ಲಿ ಆದೇಶ ಪಾಲನೆ ಮಾಡಲಾಗದ ಬಗ್ಗೆ ನಾವು ಸಾಕಷ್ಟು ಮನವರಿಕೆ ಮಾಡಿಕೊಟ್ಟಿದ್ದೇವೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಈ ಪ್ರಯತ್ನದ ಹಂತದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ರಾಜ್ಯಸರ್ಕಾರಕ್ಕೆ ಸಹಕಾರ ನೀಡಿಲ್ಲ. ಹೀಗಾಗಿ ಕಾವೇರಿ ವಿಷಯದಲ್ಲಿನ ಹೊಣೆಗಾರಿಕೆ ಬಿಜೆಪಿಯವರದ್ದೇ. ನಾಟಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆಯೇ ಹೊರತು ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಕಾವೇರಿ ನೀರು ನಿಯಂತ್ರಣಾ ಸಮಿತಿ ಇದೇ 12 ರಂದು ಮತ್ತೆ ಸಭೆ ನಡೆಸಲಿದ್ದು, ಅಂದು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದಿಸುತ್ತಿವೆ ಎಂದರು. ರಾಜ್ಯದಲ್ಲಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಅದರ ಕುರಿತು ಸಚಿವ ಸಂಪುಟ ಹಾಗೂ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರದ ಅಕಾರಿಗಳ ಮೂರು ತಂಡಗಳು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನಾಲ್ಕು ದಿನಗಳ ಕಾಲ ಬರ ಅಧ್ಯಯನ ನಡೆಸಲಿವೆ ಎಂದು ಹೇಳಿದರು.

ಎನ್‍ಐಎ ಅಧಿಕಾರಿಗಳಿಗೆ ಖಲಿಸ್ತಾನ್ ಉಗ್ರರಿಂದ ಬೆದರಿಕೆ

ನವದೆಹಲಿ,ಅ.5-ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಅಧಿಕಾರಿಗಳಿಗೆ ಖಲಿಸ್ತಾನ ಪರ ಉಗ್ರರು ಹಾಗೂ ನಕ್ಸಲೀಯರು ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಗೃಹಸಚಿವಾಲಯ ದೇಶದ ಎಲ್ಲ ರಾಜ್ಯಗಳಲ್ಲಿರುವ ಎನ್‍ಐಎ ಕಚೇರಿ ಮತ್ತು ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಪತ್ರ ಬರೆದಿದೆ.

ಕೆಲವು ದಿನಗಳ ಹಿಂದೆ ದೇಶಾದ್ಯಂತ ಖಲಿಸ್ತಾನ ಪರ ಅನುಕಂಪ ಹೊಂದಿರುವವರ ಮೇಲೆ ಎನ್‍ಐಎ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಉಗ್ರರು ಮತ್ತು ನಕ್ಸಲೀಯರು ಎನ್‍ಐಎ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಬೆದರಿಕೆವೊಡ್ಡಿದ್ದಾರೆ ಎಂದು ಗೃಹ ಇಲಾಖೆ ರಾಜ್ಯ ಸರ್ಕಾರಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದೆ.

ಪಾಕಿಸ್ತಾನದ ಗುಪ್ತಚರ ವಿಭಾಗವಾದ ಐಎಸ್‍ಐ ಜೊತೆಗೆ ಕಳೆದ ವರ್ಷ ಭಾರತದಲ್ಲಿ ನಿಷೇಧಕ್ಕೊಳಪಟ್ಟಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಕೆಲವು ಸಕ್ರಿಯ ಸದಸ್ಯರು ಕೈ ಜೋಡಿಸಿದ್ದು ಎನ್‍ಐಎ ಅಧಿಕಾರಿಗಳ ಮೇಲೆ ಯಾವುದೇ ಸಂದರ್ಭದಲ್ಲೂ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳಿದೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಎನ್‍ಐಎ ಅಧಿಕಾರಿಗಳ ಬಗ್ಗೆ ರಹಸ್ಯವಾಗಿ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಕಲೆ ಹಾಕುತ್ತಿದ್ದು, ಐಎಸ್‍ಐ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದ ಸದಸ್ಯರು ಹಾಗೂ ನಕ್ಸಲೀಯರಿಗೆ ವಿದೇಶದಲ್ಲಿರುವ ಖಲಿಸ್ತಾನ ಬೆಂಬಲಿತ ಉಗ್ರರು ಆರ್ಥಿಕ ನೆರವು ಒದಗಿಸಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ಈಗಾಗಲೇ ನಿಷೇಧಕ್ಕೊಳಟ್ಟಿರುವ ಅಲ್ ಬದ್ರ್ ಸಂಘಟನೆಯು ಸಕ್ರಿಯವಾಗಲು ಹವಣಿಸುತ್ತಿದೆ. ಎನ್‍ಐಎ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ಇವರು ಪ್ರತಿ ದಾಳಿ ಮಾಡಬಹುದು. ಹೀಗಾಗಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆಯೂ ಸೂಚಿಸಲಾಗಿದೆ.

ಎನ್‍ಐಎ ಅಧಿಕಾರಿಗಳ ಮೇಲೆ ಪಿಎಫ್‍ಐ ಜೊತೆಗೆ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಯಿದ್ದೀನ್, ಆರ್‍ಪಿಎಫ್, ಪಿಎಲ್‍ಎ ಸೇರಿದಂತೆ ಮತ್ತಿತರ ಸಂಘಟನೆಗಳ ಕಣ್ಣು ಬಿದ್ದಿದೆ. ಹೀಗಾಗಿ ಭದ್ರತೆ ಒದಗಿಸುವುದು ಅತ್ಯವಶ್ಯಕ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ತನಿಖಾ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಐಎಸ್‍ಐ ಕೆಲವು ಭಯೋತ್ಪಾದಕರನ್ನು ನಿಯೋಜಿಸಿದೆ. ವಿಶೇಷವಾಗಿ ಉನ್ನತ ಅಧಿಕಾರಿಗಳು, ತನಿಖಾ ಸಂಸ್ಥೆಗಳು, ಗಣ್ಯರು ಅವರ ಹಿಟ್ ಲಿಸ್ಟ್‍ನಲ್ಲಿದ್ದಾರೆ.

ಕಳೆದ ತಿಂಗಳು ಎನ್‍ಐಎ ಅಕಾರಿಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದ 62 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಹುತೇಕ ಮಾವೋವಾದಿ ನಕ್ಸಲೀಯರಿಗೆ ಬೆಂಬಲ ನೀಡುವವರು, ಹಣಕಾಸು ನೆರವು ಒದಗಿಸುವವರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗಿತ್ತು.

ಇಸ್ರೇಲ್‍ನಲ್ಲಿ ಸದ್ದು ಮಾಡುತ್ತಿದೆ ಅಖೇಲಿ ವೆಬ್‍ಸರಣಿ

ದಾಳಿಗೊಳಗಾದವರು ಬ್ಯಾಂಕ್ ಖಾತೆಗಳನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇದರಿಂದ ನಕ್ಸಲೀಯರಿಗೆ ಹೋಗುತ್ತಿದ್ದ ಆರ್ಥಿಕ ನೆರವು ಬಂದ್ ಆಗಿದೆ. ಈ ಬೆಳವಣಿಗೆಗಳಿಂದ ಕುಪಿತಗೊಂಡಿರುವ ನಕ್ಸಲೀಯರು ಎನ್‍ಐಎ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದಾರೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಭೋಪಾಲ್,ಅ.5- ವಿಧಾನಸಭೆ ಚುನಾವಣೆಗೂ ಮುನ್ನ ಮಧ್ಯಪ್ರದೇಶ ಸರ್ಕಾರ ಮಹಿಳೆಯರ ಪರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೀಗ ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 35ರಷ್ಟು ಮೀಸಲಾತಿ ದೊರೆಯಲಿದ್ದು , ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮಧ್ಯಪ್ರದೇಶದ ನಾಗರಿಕ ಸೇವೆಗಳ (ಮಹಿಳೆಯರ ನೇಮಕಾತಿಗಾಗಿ ವಿಶೇಷ ನಿಬಂಧನೆಗಳು) ನಿಯಮಗಳು, 1997ನ್ನು ತಿದ್ದುಪಡಿ ಮಾಡಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದ್ದು, ಇದರಲ್ಲಿ ಅರಣ್ಯ ಇಲಾಖೆ ಹೊರತುಪಡಿಸಿ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿ ನೀಡಲಾಗುವುದು ಎಂದು ತಿಳಿಸಿದೆ.

ಅಧಿಸೂಚನೆಯ ಪ್ರಕಾರ, ಯಾವುದೇ ಸೇವಾ ನಿಯಮದಲ್ಲಿ ಏನೇ ಇದ್ದರೂ, ರಾಜ್ಯದ ಅಡಿಯಲ್ಲಿ ಸೇವೆಯಲ್ಲಿರುವ (ಅರಣ್ಯ ಇಲಾಖೆ ಹೊರತುಪಡಿಸಿ) ಎಲ್ಲಾ ಹುದ್ದೆಗಳಲ್ಲಿ 35 ಪ್ರತಿಶತವನ್ನು ಮಹಿಳೆಯರಿಗೆ ಮೀಸಲಿಡಬೇಕು ಮತ್ತು ನೇರ ನೇಮಕಾತಿ ಹಂತದಲ್ಲಿ ಮಹಿಳೆಯರ ಪರವಾಗಿ ಮೀಸಲಾತಿಯನ್ನು ಒದಗಿಸಬೇಕು ಹೇಳಲಾದ ಮೀಸಲಾತಿಯು ಅಡ್ಡಲಾಗಿ ಮತ್ತು ವಿಭಾಗವಾರು ಇರುತ್ತದೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಬೋಧಕ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ:
ಈ ಹಿಂದೆ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ಪೊಲೀಸ್ ಮತ್ತು ಇತರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 35 ಪ್ರತಿಶತ ಮೀಸಲಾತಿ ಮತ್ತು ಬೋಧಕ ಹುದ್ದೆಗಳಲ್ಲಿ ಮಹಿಳೆಯರಿಗೆ 50 ಪ್ರತಿಶತ ಮೀಸಲಾತಿಯನ್ನು ಘೋಷಿಸಿದ್ದರು. ಇದಲ್ಲದೇ ಸ್ಥಳೀಯ ಸಂಸ್ಥೆಗಳಲ್ಲಿ ಮೇಲ್ದರ್ಜೆ ಸೇರಿದಂತೆ ಇತರೆ ಹುದ್ದೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅಷ್ಟೇ ಅಲ್ಲ, ಉತ್ತಮ ಶಿಕ್ಷಣಕ್ಕಾಗಿ ಸರ್ಕಾರವು ಹೆಣ್ಣುಮಕ್ಕಳ ಶುಲ್ಕವನ್ನು ಭರಿಸುತ್ತದೆ.

ಇತ್ತೀಚೆಗೆ ಕೇಂದ್ರದ ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿದೆ. ಅದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮೋದನೆ ಪಡೆದ ನಂತರ ಕಾನೂನಾಗಿ ಮಾರ್ಪಟ್ಟಿದೆ. ನಾರಿ ಶಕ್ತಿ ವಂದನ್ ಕಾಯ್ದೆ ಎಂಬ ಶೀರ್ಷಿಕೆಯ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯನ್ನು ಖಚಿತಪಡಿಸುತ್ತದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಸರಿ ಬಣ್ಣ ಏಕೆ..?

ನವದೆಹಲಿ,ಅ.5- ಕಿತ್ತಳೆ ಬಣ್ಣದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲನ್ನು ಪ್ರಾರಂಭಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಬೆರೆಸಬಾರದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪಗಳಿಗೆ ತಿಳಿಸಿದ್ದಾರೆ. ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಅವರು, ಮಾನವನ ಕಣ್ಣುಗಳಿಗೆ 2 ಬಣ್ಣಗಳು ಹೆಚ್ಚು ಗೋಚರಿಸುತ್ತವೆ. ಅವುಗಳೆಂದರೆ ಹಳದಿ ಮತ್ತು ಕಿತ್ತಳೆ ಬಣ್ಣ. ಯುರೋಪ್‍ನಲ್ಲಿ ಸುಮಾರು ಶೇ.80ರಷ್ಟು ರೈಲುಗಳನ್ನು ಕಿತ್ತಳೆ ಅಥವಾ ಹಳದಿ ಬಣ್ಣದ ಸಂಯೋಜನೆಯೊಂದಿಗೆ ಮಾಡಲಾಗುತ್ತದೆ ಎಂದಿದ್ದಾರೆ.


ಹಳದಿ ಮತ್ತು ಕಿತ್ತಳೆ ಬಣ್ಣಗಳಂತೆ ಹೊಳೆಯುವ ಬೆಳ್ಳಿಯಂತಹ ಇತರ ಹಲವು ಬಣ್ಣಗಳಿವೆ. ಆದರೆ ನಾವು ಮಾನವನ ಕಣ್ಣಿಗೆ ಚೆನ್ನಾಗಿ ಗೋಚರಿಸುವ ದೃಷ್ಟಿಕೋನದಿಂದ ಅದರ ಬಗ್ಗೆ ಮಾತನಾಡಿದರೆ, ಈ ಎರಡು ಬಣ್ಣಗಳು ಅತ್ಯುತ್ತಮವೆಂದು ಪರಿಗಣಿಸಬಹುದು ಎಂದು ವೈಷ್ಣವ್ ಎಂದಿದ್ದಾರೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ವಂದೇ ಭಾರತ್ ರೈಲುಗಳಲ್ಲಿ ಕಿತ್ತಳೆ ಬಣ್ಣ ಬಳಸಿರುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಇದು 100% ವೈಜ್ಞಾನಿಕ ಚಿಂತನೆ. ಈ ಕಾರಣದಿಂದಲೇ ಹಡಗು ಹಾಗೂ ವಿಮಾನಗಳಲ್ಲಿ ಇಡಲಾಗಿರುವ ಬ್ಲ್ಯಾಕ್ ಬಾಕ್ಸ್‍ಗಳಿಗೆ ಕಿತ್ತಳೆ ಬಣ್ಣ ಬಳಿಯಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿಗಳು ಹಾಗೂ ಲೈಫ್ ಜಾಕೆಟ್‍ಗಳು ಕೂಡಾ ಕಿತ್ತಳೆ ಬಣ್ಣದಲ್ಲಿರುತ್ತವೆ ಎಂದು ಅವರು ವಿವರಿಸಿದರು.

ಭಾರತೀಯ ರೈಲ್ವೆ ತನ್ನ ಮೊದಲ ಕಿತ್ತಳೆ ಹಾಗೂ ಬೂದು ಬಣ್ಣದ ಸಂಯೋಜನೆಯ ವಂದೇ ಭಾರತ್ ರೈಲನ್ನು ಕೇರಳದ ಕಾಸರಗೋಡು ಹಾಗೂ ತಿರುವನಂತಪುರಂ ನಡುವೆ ಸಂಚರಿಸಲು ನೀಡಿದೆ. ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 9 ರೈಲುಗಳೊಂದಿಗೆ ವೀಡಿಯೋ ಕಾನರೆನ್ಸ್ ಮೂಲಕ ಚಾಲನೆ ನೀಡಿದ್ದರು.

ಅ.11ರಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ 3 ದಿನ ಜೆಡಿಎಸ್‍ನ ಕೋರ್ ಕಮಿಟಿ ಪ್ರವಾಸ

ಬೆಂಗಳೂರು, ಅ.5-ಜೆಡಿಎಸ್‍ನ ಕೋರ್ ಕಮಿಟಿ ಆರಂಭಿಸಿರುವ ಪಕ್ಷದ ಪುನಶ್ಚೇತನ ಪರ್ವದ ಎರಡನೇ ಕಾರ್ಯಕ್ರಮವು ಕಿತ್ತೂರು ಕರ್ನಾಟಕ ಭಾಗದಲ್ಲಿ ಅ.11ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದ ಕೋರ್ ಕಮಿಟಿಯು ಪಕ್ಷದ ಪುನರ್ ಸಂಘಟನೆಗಾಗಿ ರಾಜ್ಯ ಪ್ರವಾಸವನ್ನು ಆರಂಭಿಸಿದ್ದು, ವಿಭಾಗವಾರು ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗೊಂಡಿತ್ತು. ಎರಡನೇ ಹಂತದಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರವಾಸ ಹಮ್ಮಿಕೊಂಡಿದೆ.

ಅ.11ರಿಂದ 13ರವರೆಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡು ಆಯಾ ಜಿಲ್ಲೆಯ ಜಿಲ್ಲಾಧ್ಯಕ್ಷರು, ಸ್ಥಳೀಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಪಕ್ಷದ ಪದಾಕಾರಿಗಳು, ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಧಿಸಿದ್ದ ಅಭ್ಯರ್ಥಿಗಳು, ಪಕ್ಷದ ಮುಖಂಡರ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಪಕ್ಷದ ಪುನರ್ ಸಂಘಟನೆಗೆ ಸಂಬಂಧಿಸಿದಂತೆ ಕೋರ್ ಕಮಿಟಿಯು ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಸಂಬಂಸಿದ ಸಭೆಯನ್ನು ಅ.11ರಂದು ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಸಂಬಂಸಿದ ಸಭೆಯನ್ನು ಅ.12ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಿದ್ದು, ಬೆಳಗಾವಿ ವಿಭಾಗದ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲಾಗುತ್ತದೆ.

ಸೆ.26 ಮತ್ತು 27 ರಂದು ಕಲ್ಯಾಣ ಕರ್ನಟಕ ಭಾಗದದಲ್ಲಿ ಸಭೆಗಳನ್ನು ನಡೆಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಸಲಹೆ, ಸೂಚನೆ ಆಲಿಸಲಾಗಿದೆ. ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕೋರ್ ಕಮಿಟಿಯು ಪಕ್ಷದ ಪುನಶ್ಚೇತನ ಹಾಗೂ ಪದಾಕಾರಿಗಳ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದೆ. ಆ ನಂತರ ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳ ಬದಲಾವಣೆ ಮಾಡಲು ವರಿಷ್ಠರು ಉದ್ದೇಶಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ

ಶಿವಮೊಗ್ಗ, ಅ.5- ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ ಮಾಡಿದೆ. ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆಯೇ ಎರಡು ಕಾರುಗಳಲ್ಲಿ ಆಗಮಿಸಿರುವ ಇಡಿ ಅಧಿಕಾರಿಗಳು, ಶಿವಮೊಗ್ಗದ ಶರಾವತಿ ನಗರದ ನಿವಾಸ ಹಾಗೂ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಮಂಜುನಾಥಗೌಡ ಮನೆ ಮೇಲೂ ದಾಳಿ ಮಾಡಿದ್ದಾರೆ.

ಪಟ್ಟಣದ ಬೆಟ್ಟಮಕ್ಕಿಯ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆರ್.ಎಂ. ಮಂಜುನಾಥ್ ಗೌಡರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿರುವ ಆರ್.ಎಂ.ಎಂ. ಅವರ ಮೂರು ನಿವಾಸಗಳ ಮನೆಗಳ ಮೇಲೆ ಇಡಿ ದಾಳಿ ಮಾಡಿದ್ದು, ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ನಿವಾಸ, ತೀರ್ಥಹಳ್ಳಿಯ ಕಲ್ಲುಕೊಪ್ಪ ನಿವಾಸದ ಮೇಲೆ ಹಾಗೂ ಶಿವಮೊಗ್ಗದ ಶರಾವತಿ ನಗರದಲ್ಲಿರುವ ನಿವಾಸದ ಮೇಲೂ ದಾಳಿ ಮಾಡಿದ್ದರೆನ್ನಲಾಗಿದೆ.

ಮನೆ ಸುತ್ತಮುತ್ತ ಶಸ್ತ್ರಾಸ್ತ್ರ ಪೊಲೀಸರು ಸುತ್ತುವರೆದಿದ್ದರು. ಸರ್ಕಾರಿ ಕಾರುಗಳಲ್ಲಿ ಬಂದಿದ್ದ ಅಧಿಕಾರಿಗಳ ತಂಡ ಆರ್.ಎಂ.ಎಂ. ನಿವಾಸಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇಸ್ರೇಲ್‍ನಲ್ಲಿ ಸದ್ದು ಮಾಡುತ್ತಿದೆ ಅಖೇಲಿ ವೆಬ್‍ಸರಣಿ

ರಿಯಲ್ ಎಸ್ಟೇಟ್ ಕಂಪನಿ ಮೇಲೆ ದಾಳಿ: ಮತ್ತೊಂದೆಡೆ ರಾಜಧಾನಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್‍ನ ಹಲವು ನಗರಗಳಲ್ಲಿ ಇರುವ ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಪುರವಂಕರ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಸುಮಾರು 40 ಕಚೇರಿ, ಸ್ಥಳ, ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯು ನಿನ್ನೆ (ಅಕ್ಟೋಬರ್ 4) ದಾಳಿ ನಡೆಸಿದೆ. ಆದಾಯ ತೆರಿಗೆ ಇಲಾಖೆಯು ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್‍ನ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಇರುವ ಕಚೇರಿಗಳ ಮೇಲೆ ದಾಳಿಯನ್ನು ನಡೆಸಲಾಗಿದೆ.

ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ವಲಯದ ನಿರ್ಮಾಣದ ಕಂಪನಿಯಾದ ಪುರವಂಕರ ಲಿಮಿಟೆಡ್, ಪ್ರತಿ ಷೇರಿಗೆ 124.70 ರೂಪಾಯಿಯಂತೆ ಬುಧವಾರ ವಹಿವಾಟು ಕೊನೆಗೊಳಿಸಿದೆ. ಬುಧವಾರ ಮಧ್ಯಾಹ್ನ 3:59ಕ್ಕೆ ಸ್ಟಾಕ್ ಸುಮಾರು ಶೇಕಡ 2.73 ರಷ್ಟು ಕುಸಿತವನ್ನು ದಾಖಲಿಸಿದೆ.

ಪ್ರೀತಿ ಒಪ್ಪಿಕೊಳ್ಳದ ಕುಟುಂಬ, ಪ್ರೇಮ ವಿವಾಹವಾಗಿದ್ದ ದಂಪತಿ ಆತ್ಮಹತ್ಯೆ

ಇನ್ನು ಗುರುವಾರ ಈ ಸಮಯಕ್ಕೆ ಪುರವಂಕರ ಲಿಮಿಟೆಡ್ ಸ್ಟಾಕ್ ಸುಮಾರು ಶೇಕಡ 3.29 ರಷ್ಟು ಜಿಗಿತ ಕಂಡು, 128.80 ರೂಪಾಯಿಗೆ ತಲುಪಿದೆ. ಸ್ಟಾಕ್‍ನ 52 ವಾರಗಳ ಗರಿಷ್ಠ ಮಟ್ಟ 136.45 ರೂಪಾಯಿ ಆಗಿದ್ದು, 52 ವಾರಗಳ ಕನಿಷ್ಠ ಮಟ್ಟ 58.20 ರೂಪಾಯಿ ಆಗಿದೆ.

ಆಯೋಧ್ಯೆ ಹೆದ್ದಾರಿಯಲ್ಲಿ ಅಪಘಾತ, ಇಬ್ಬರು ಸಾವು

ಅಯೋಧ್ಯೆ,ಅ.5- ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಹಾರದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಇತರ ಎಂಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಹರಿಯಾಣದ ಗುರುಗ್ರಾಮ್‍ನಿಂದ ಪ್ರಯಾಣಿಕರನ್ನು ತುಂಬಿದ ಬಸ್ ಬಿಹಾರದ ಮಧುಬನಿಗೆ ಪ್ರಯಾಣಿಸುತ್ತಿದ್ದು, ಇಂದು ಬೆಳಿಗ್ಗೆ ಅಯೋಧ್ಯೆ ತಲುಪಿದ ತಕ್ಷಣ, ಕೊತ್ವಾಲಿ ನಗರದ ಮೇಲ್ಸೇತುವೆಯಲ್ಲಿ ಬಸ್ ಇದ್ದಕ್ಕಿದ್ದಂತೆ ನಿಂತಿತು. ಹಿಂದಿನಿಂದ ಬಂದ ಲಾರಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಇಂದು ಬೆಳಗ್ಗೆ ಹರ್ಯಾಣದಿಂದ ಬಿಹಾರಕ್ಕೆ ಬಸ್ಸೊಂದು ತೆರಳುತ್ತಿತ್ತು. ಶಾಂತಿ ಮೇಲ್ಸೇತುವೆಯ ಮೇಲೆ ಚಲಿಸುತ್ತಿದ್ದಾಗ ಹಿಂದಿನಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಬಂದ ತಕ್ಷಣ ಎಲ್ಲಾ ಅಧಿಕಾರಿಗಳು ಮತ್ತು ನೌಕರರು. ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು ಆದರೆ ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ಅಯೋಧ್ಯೆ ಸಿಟಿ ಎಸ್ಪಿ ಮಧುಬನ್ ಸಿಂಗ್ ತಿಳಿಸಿದ್ದಾರೆ.

ಜಪಾನ್ ದ್ವೀಪದ ಬಳಿ ಭೂಕಂಪ, ಸುನಾಮಿ ಎಚ್ಚರಿಕೆ

ಇದಲ್ಲದೆ ಎಂಟು ಮಂದಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆ ಮತ್ತು ಟ್ರಾಮಾ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಗಂಭೀರ ರೋಗಿಗಳನ್ನು ಲಕ್ನೋಗೆ ಉಲ್ಲೇಖಿಸಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಮಧುಬನ್ ಸಿಂಗ್ ಮತ್ತಷ್ಟು ಮಾಹಿತಿ ನೀಡಿದರು.

ಮೃತ ಪ್ರಯಾಣಿಕರು ಬಿಹಾರದ ಮಧುಬನಿ ಮತ್ತು ಸುಪೌಲ್ ನಿವಾಸಿಗಳು. ಆರು ಮಂದಿ ಪ್ರಯಾಣಿಕರನ್ನು ದರ್ಶನ್ ನಗರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಇಬ್ಬರು ಪ್ರಯಾಣಿಕರನ್ನು ಅಯೋಧ್ಯೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಪತ್ನಿ ಅಗಲಿಕೆಯಿಂದ ನೊಂದಿದ್ದ ಎಸಿಪಿ ಆತ್ಮಹತ್ಯೆ

ನವದೆಹಲಿ,ಅ.5- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹಾಯಕ ಪೊಲೀಸ್ ಆಯುಕ್ತರೊಬ್ಬರು ತಮ್ಮ ಸರ್ವೀಸ್ ರಿವಾಲ್ವರ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ವರ್ಷದ ದೆಹಲಿ ಪೊಲೀಸ್ ಅಧಿಕಾರಿ ಅನಿಲ್ ಸಿಸೋಡಿಯಾ ಅವರು ಆಗ್ನೇಯ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಆಗ್ನೇಯ ದೆಹಲಿಯ ಜಂಗ್‍ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ್ ಸಿಸೋಡಿಯಾ ಅವರನ್ನು ದೆಹಲಿಯ ನೈಋತ್ಯ ವಲಯದಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಆಗಿ ನಿಯೋಜಿಸಲಾಗಿದೆ.

ಶಾಮನೂರು ಹೇಳಿಕೆಗೆ ಪೂರಕವಾಗಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಂದ ದೂರು

ಅವರು ಜಂಗ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಮೂರು ದಿನಗಳ ಹಿಂದೆ ನಿಧನರಾಗಿದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.ಏತನ್ಮಧ್ಯೆ, ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅದು ಹೇಳಿದೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ನವದೆಹಲಿ,ಅ.5- ಮಹಿಳಾ ಮೀಸಲಾತಿ ಕಾಯ್ದೆಯಿಂದ ಜಾತಿ ಆಧಾರಿತ ಜನಗಣತಿಯವರೆಗಿನ ವಿವಿಧ ವಿಷಯಗಳನ್ನು ಚರ್ಚಿಸಲು ಅ 9 ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಪ್ರಸ್ತುತ ದೇಶದ ರಾಜಕೀಯ ಪರಿಸ್ಥಿತಿ, ಜಾತಿ ಆಧಾರಿತ ಜನಗಣತಿ, ಮಹಿಳಾ ಮೀಸಲಾತಿ ಕಾಯ್ದೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮೊದಲು, ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಪಡೆಯುವ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸುವ ಪಕ್ಷದ ನಾಯಕರೊಂದಿಗೆ ಕಾಂಗ್ರೆಸ್ ಎರಡು ದಿನಗಳ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನು ಹೈದರಾಬಾದ್‍ನಲ್ಲಿ ನಡೆಸಿತ್ತು.

ಶಾಮನೂರು ಹೇಳಿಕೆಗೆ ಪೂರಕವಾಗಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಂದ ದೂ

ಛತ್ತೀಸ್‍ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ಈ ವರ್ಷದ ಕೊನೆಯಲ್ಲಿ ಚುನಾವಣೆಗಳು ನಡೆಯಲಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಸಭೆ ನಡೆಸಲಾಗುತ್ತಿದೆ.

ನಾವು ಕಾನೂನು ಮತ್ತು ಸುವ್ಯವಸ್ಥೆ, ಸ್ವಾತಂತ್ರ್ಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸಮಾನತೆ ಮತ್ತು ಸಮಾನತೆಯ ಅವರ ನಿರೀಕ್ಷೆಗಳನ್ನು ಈಡೇರಿಸುತ್ತೇವೆ ಎಂದು ಪಕ್ಷವು ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಂಡಿದ್ದೇವೆ ಎಂದು ಆ ಪಕ್ಷದ ಮುಖಂಡರುಗಳು ತಿಳಿಸಿದ್ದಾರೆ.

ಪಾಕ್ ಮೀನುಗಾರರನ್ನು ಬಂಧಿಸಿದ ಬಿಎಸ್ಎಫ್‌

ಅಹಮದಾಬಾದ್,ಅ.5- ಗುಜರಾತ್‍ನ ಸರ್ ಕ್ರಿಕ್ ಜಲ ಭಾಗದಲ್ಲಿ ಎಂಜಿನ್ ಅಳವಡಿಸಿದ ಮರದ ದೋಣಿ ಯೊಂದಿಗೆ ಸಾಗುತ್ತಿದ್ದ ಪಾಕಿಸ್ತಾನದ ಮೀನುಗಾರನನ್ನು ಗಡಿ ಭದ್ರತಾ ಪಡೆ ಬಂಧಿಸಿದೆ. ನಿನ್ನೆ ಸಂಜೆ ಸಿಕ್ಕಿಬಿದ್ದಿರುವ ಮೀನುಗಾರನನ್ನು ನೆರೆಯ ದೇಶದ ಸಿಂಧ್ ಪ್ರಾಂತ್ಯದ ಎಂಡಿ ಖಮೇಸಾ ಎಂದು ಗುರುತಿಸಲಾಗಿದೆ ಎಂದು ಬಿಎಎಸ್‍ಎಫ್‌ ತಿಳಿಸಿದೆ.

ಸರ್ ಕ್ರೀಕ್ ಒಂದು ಉಬ್ಬರವಿಳಿತದ ನದೀಮುಖವಾಗಿದ್ದು, ಈ ಪ್ರದೇಶ ಭಾಗಶಃ ಸುತ್ತುವರಿದ ಕರಾವಳಿಯಾಗಿದ್ದು, ಇದು ಪಾಕಿಸ್ತಾನಿ ಪ್ರಾಂತ್ಯದ ಸಿಂಧ್‍ನಿಂದ ಗುಜರಾತ್ ಅನ್ನು ಪ್ರತ್ಯೇಕಿಸುತ್ತದೆ.

ಶಾಮನೂರು ಹೇಳಿಕೆಗೆ ಪೂರಕವಾಗಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಂದ ದೂರು

ತಡರಾತ್ರಿ, ಗಸ್ತು ತಿರುಗುತ್ತಿದ್ದ ತಂಡವು ಭಾರತದ ಕಡೆಯ ಸರ್ ಕ್ರೀಕ್‍ನಲ್ಲಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿತು. ತಕ್ಷಣವೇ ಬಿಎಸ್‍ಎಫ್‌ ಪಡೆಗಳು ಸ್ಥಳಕ್ಕೆ ಧಾವಿಸಿ ಸರ್ ಕ್ರೀಕ್ ಹತ್ತಿರ ಮರದ ದೋಣಿಯಲ್ಲಿ ಸಾಗುತ್ತಿದ್ದ ಪಾಕ್ ಮೀನುಗಾರನನ್ನು ಬಂಧಿಸಿದ್ದಾರೆ.

ಬಂಧಿತ ಪಾಕ್ ಮೀನುಗಾರನ ಗುರುತನ್ನು ಎಂಡಿ ಖಮೇಸಾ ಎಂದು ಖಚಿತಪಡಿಸಿಕೊಳ್ಳಲಾಗಿದೆ, ವಯಸ್ಸು 50 ವರ್ಷ, ಮತ್ತು ಪಾಕಿಸ್ತಾನದ ಸಿಂಧ್‍ನ ಸುಜಾವಾಲ್ ಜಿಲ್ಲಾಯ ಶಹಬಂದರ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.