Thursday, November 6, 2025
Home Blog Page 1937

ಕಾಂಗ್ರೆಸ್ ಬಂದ ಮೇಲೆ ಏನೇನೆಲ್ಲಾ ಹೋಯ್ತು ಎಂಬುದನ್ನು ಪಟ್ಟಿ ಮಾಡಿದ ಬಿಜೆಪಿ

ಬೆಂಗಳೂರು,ಸೆ.27- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಎಲ್ಲವೂ ಹೋಯಿತು ಎಂದು ಬಿಜೆಪಿ ವ್ಯಂಗ್ಯವಾಡಿದೆ. ಈ ಕುರಿತು ತನ್ನ ಅಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ಬಿಜೆಪಿ, ಕಾಂಗ್ರೆಸ್ ಬಂತು ಕಾವೇರಿ ಹೋಯಿತು. ಕಾಂಗ್ರೆಸ್ ಬಂತು ಅಭಿವೃದ್ಧಿ ಹೋಯಿತು.

ಕಾಂಗ್ರೆಸ್ ಬಂತು ಆರ್ಥಿಕತೆ ಹೋಯಿತು, ಕಾಂಗ್ರೆಸ್ ಬಂತು ಕರ್ನಾಟಕದ ಆಸ್ಮಿತೆ ಹೋಯಿತು ಎಂದು ವಾಗ್ದಾಳಿ ನಡೆಸಿದೆ. ಮುಂದುವರೆದು ಕಾಂಗ್ರೆಸ್ ಬಂತು ಮಹದಾಯಿ ಹೋಯಿತು, ಕಾಂಗ್ರೆಸ್ ಬಂತು ಭದ್ರಾ ಮೇಲ್ದಂಡೆ ಹೋಯಿತು. ಕಾಂಗ್ರೆಸ್ ಬಂತು ಅನ್ನಭಾಗ್ಯ ಹೋಯಿತು. ಕಾಂಗ್ರೆಸ್ ಬಂತು ಕಿಸಾನ್ ಸಮ್ಮಾನ್ ಹೋಯಿತು. ಕಾಂಗ್ರೆಸ್ ಬಂತು ರೈತರ ಮಕ್ಕಳ ವಿದ್ಯಾನಿ ಹೋಯ್ತು. ಕಾಂಗ್ರೆಸ್ ಬಂದಿದೆ ಜನತೆಯ ಬದುಕು ದುಸ್ತರವಾಗಿದೆ ಎಂದು ಟೀಕಾಪ್ರಹಾರ ನಡೆಸಿದೆ.

ಮತ್ತೊಂದು ಪೋಸ್ಟ್ ನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಶಾಲಾ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಜತೆ ಕಾಂಗ್ರೆಸ್ ಸರ್ಕಾರ ಮತ್ತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪಠ್ಯಪುಸ್ತಕದಲ್ಲಿರುವ ರಾಷ್ಟ್ರೀಯತೆಯ ವಿಚಾರಗಳನ್ನು ತೆಗೆದು ಹಾಕಿ ಕಮ್ಯುನಿಸ್ಟ್ ಮತ್ತು ದೇಶವಿರೋ ಎಡಬಿಡಂಗಿ ಸಿದ್ಧಾಂತವನ್ನು ಹೇರಿ ಮಕ್ಕಳ ಬ್ರೈನ್ ವಾಶ್ ಮಾಡುವುದಕ್ಕೆ ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಆರೋಪಿಸಿದೆ.

ಅವರ ಸರ್ಕಾರದ ಎಲ್ಲ ಆಟಗಳು ನಾಡ ಜನರ ಮುಂದೆ ಬಯಲಾಗಲಿದೆ, ಮುಗ್ಧ ಮಕ್ಕಳ ವಿದ್ಯಾಭ್ಯಾಸದ ಕಮ್ಯುನಿಸ್ಟೀಕರಣದ ವಿರುದ್ಧ ನಾವು ಧ್ವನಿ ಎತ್ತಲಿದ್ದೇವೆ ಎಂದು ಹೇಳಿದೆ.

ಬ್ಯಾಂಕ್ ಲಾಕರ್‌ನಲ್ಲಿದ್ದ 18 ಲಕ್ಷ ರೂ. ತಿಂದ ಗೆದ್ದಲು ಹುಳುಗಳು

ಲಖ್ನೋ,ಸೆ.27- ಉಳಿತಾಯ ಖಾತೆಯ ಬ್ಯಾಂಕ್ ಲಾಕರ್‍ನಲ್ಲಿಟ್ಟಿದ್ದ 18 ಲಕ್ಷ ಹಣಕ್ಕೆ ಗೆದ್ದಲು ಹುಳುಗಳು ಮುತ್ತಿಕೊಂಡು ಹಾಳಾಗಿರುವ ಘಟನೆ ಉತ್ತರಪ್ರದೇಶದ ಮೊರದಾಬಾದ್‍ನಲ್ಲಿ ನಡೆದಿದೆ.ಅಲ್ಕಾ ಪಾಠಕ್ ಎಂಬುವರು 2022 ಅಕ್ಟೋಬರ್‍ನಲ್ಲಿ ಮಗಳ ವಿವಾಹಕ್ಕಾಗಿ ಉಳಿತಾಯ ಖಾತೆಯಲ್ಲಿ ಸಂಗ್ರಹಿಸಿದ್ದ 18 ಲಕ್ಷ ನಗದನ್ನು ಬ್ಯಾಂಕ್ ಲಾಕರ್‍ನಲ್ಲಿ ಸುರಕ್ಷಿತವಾಗಿಟ್ಟಿದ್ದರು.

ಇತ್ತೀಚೆಗೆ ಬ್ಯಾಂಕ್ ಅಕಾರಿಗಳು ಲಾಕರ್‍ನ ವಾರ್ಷಿಕ ನಿರ್ವಹಣೆ ಮತ್ತು ಕೆವೈಸಿ ಪರಿಶೀಲನೆಗಾಗಿ ಅಲ್ಕಾ ಅವರನ್ನು ಬ್ಯಾಂಕ್‍ಗೆ ಕರೆಸಿದಾಗ 18 ಲಕ್ಷ ನಗದಿಗೆ ಗೆದ್ದಲು ಹುಳುಗಳು ಮುತ್ತಿಕೊಂಡಿರುವುದು ಬೆಳಕಿಗೆ ಬಂದಿತು.

ಲಾಕರ್ ತೆಗೆಯುತ್ತಿದ್ದಂತೆ ತನ್ನ ನೋಟುಗಳಿಗೆ ಗೆದ್ದಲು ಹುಳುಗಳು ಮುತ್ತಿಕೊಂಡಿರುವುದನ್ನು ಕಂಡು ಅಲ್ಕಾ ಪಾಠಕ್ ಆಘಾತಕ್ಕೆ ಒಳಗಾಗದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕ್ ಐಎಸ್‍ಐ ಕೈವಾಡ ಬಯಲು

ಮಕ್ಕಳಿಗೆ ಟ್ಯೂಷನ್ ಹಾಗೂ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿದ್ದ ಅವರು ನಗದು ಮತ್ತು ಚಿನ್ನದ ಆಭರಣಗಳನ್ನು ಭದ್ರತಾ ದೃಷ್ಟಿಯಿಂದ ಬ್ಯಾಂಕ್ ಲಾಕರ್‍ನಲ್ಲಿ ಇಟ್ಟುಕೊಂಡಿದ್ದರು. ಮಗಳ ವಿವಾಹಕ್ಕೆ ಸಾಲಸೋಲ ಮಾಡುವ ಬದಲು ಆಭರಣಗಳ ಖರೀದಿ ಹಾಗೂ ಮದುವೆಯ ಇತರೆ ಖರ್ಚುಗಳಿಗಾಗಿ 18 ಲಕ್ಷ ಹಣವನ್ನು ಲಾಕರ್‍ನಲ್ಲಿ ಇಡಲಾಗಿತ್ತು.

ಲಾಕರ್ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಗೆದ್ದಲು ಹುಳುಗಳು ಅಂಟಿಕೊಂಡಿವೆ ಎಂದು ಬ್ಯಾಂಕ್ ಅಕಾರಿಗಳು ತಿಳಿಸಿದ್ದಾರೆ. ಈ ಕುರಿತು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶಿಸಿದ್ದು, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ನೀಡಿದ್ದಾರೆ.

ಮಹಿಳಾ ಶೂಟಿಂಗ್‍ನಲ್ಲಿ ಭಾರತ ತಂಡಕ್ಕೆ 1 ಚಿನ್ನ, 1ಬೆಳ್ಳಿ

ಹ್ಯಾಂಗ್‍ಝೌ, ಸೆ.27-ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನ ಭಾರತದ ಮಹಿಳೆಯರ ಶೂಟರ್‍ಗಳು ಇಂದು ವಿವಿಧ ವಿಭಾಗದ ಸ್ಪರ್ಧೆಯಲ್ಲಿ 1 ಚಿನ್ನ 1ಬೆಳ್ಳಿ ಪದಕ ಗೆದ್ದಿದ್ದಾರೆ.25 ಮೀ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ತ್ರಿಮೂರ್ತಿಗಳಾದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಚಿನ್ನದ ಪದಕವನ್ನು ಜಯಿಸಿದರು.

ಮನು, ಈಶಾ ಮತ್ತು ರಿದಮ್ ಒಟ್ಟು 1759 ಪಾಂಯಿಂಟ್ ದಾಖಲಿಸಿ ಭಾರತದೇಶಕ್ಕೆ ನಾಲ್ಕನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.ಚೀನಿಯರು 1756 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಪಡೆದರು, ಆದರೆ ದಕ್ಷಿಣ ಕೊರಿಯಾದ ಶೂಟರ್‍ಗಳು ಒಟ್ಟು 1742 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕ್ ಐಎಸ್‍ಐ ಕೈವಾಡ ಬಯಲು

ಇನ್ನು 50 ಮೀಟರ್ ರೈಫಲ್ 3 ಪೋಸಿಷನ್ ಸ್ಪರ್ಧೆಯಲ್ಲಿ ಮತ್ತೊಂದು ಮಹಿಳಾ ತಂಡ ಬೆಳ್ಳಿ ಪದಕ ಗೆದ್ದಿದೆ ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಅವರ ಮೂವರು ಒಟ್ಟು 1764 ಪಾಯಿಂಟ್‍ಗಳನ್ನು ಪಡೆದು ಎರಡನೇ ಸ್ಥಾನ ಪಡೆದರು.ಆತಿಥೇಯ ಚೀನಾ 1773 ಸ್ಕೋರ್‍ನೊಂದಿಗೆ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ 1756 ಸ್ಕೋರ್‍ನೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಮಹಿಳೆಯರ 50 ಮೀ ಶೂಟಿಂಗ್‍ನಲ್ಲಿ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಬೆಳ್ಳಿ
ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನ ಭಾರತದ ಮಹಿಳೆಯರ ಶೂಟರ್‍ಗಳು ತಂಡ 50 ಮೀಟರ್ ರೈಫಲ್ 3 ಪೋಸಿಷನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಅವರ ಮೂವರು ಒಟ್ಟು 1764 ಪಾಯಿಂಟ್‍ಗಳನ್ನು ಪಡೆದು ಎರಡನೇ ಸ್ಥಾನ ಪಡೆದರು. ಆತಿಥೇಯ ಚೀನಾ 1773 ಸ್ಕೋರ್‍ನೊಂದಿಗೆ ಚಿನ್ನ ಗೆದ್ದರೆ, ದಕ್ಷಿಣ ಕೊರಿಯಾ 1756 ಸ್ಕೋರ್‍ನೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಜಗ್ಗೇಶ್ ನಾಟಿ ಕಾಮಿಡಿ ಕಚಗುಳಿಯ ತೋತಾಪುರಿ-2 ಚಿತ್ರ ಈ ವಾರ ರಿಲೀಸ್

ನವರಸ ನಾಯಕ ಜಗ್ಗೇಶ್ ಅಭಿನಯಿಸಿದ ತೋತಾಪುರಿ ಚಿತ್ರ ಪ್ರೇಕ್ಷಕರನ್ನು ರಂಜಿಸಿ ಯಶಸ್ಸನ್ನು ಕಂಡಿತ್ತು. ನೀರ್‍ದೋಸೆ ಖ್ಯಾತಿಯ ವಿಜಯಪ್ರಸಾದ್ ಈ ಗೆಲುವನ್ನೇ ಮುಂದಿಟ್ಕೊಂಡು ಎರಡನೇ ಭಾಗಕ್ಕೆ ಮುನ್ನುಡಿ ಬರೆದರು. ಮೊದಲ ಭಾಗದಲ್ಲಿ ಜಗ್ಗೇಶ್ ತನ್ನ ಸಹಜ ಅಭಿನಯದಿಂದ ಎಲ್ಲರನ್ನು ಮಸ್ತಾಗಿ ರಂಜಿಸಿದ್ದರು.

ಮತ್ತೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವಿಜಯಪ್ರಸಾದ್ ತೋತಾಪುರಿ-2 ಮೇಲು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿದೇಶ ಶುಕ್ರವಾರ ದೊರೆ ಕಾಣುತ್ತಿರುವ ಈ ಚಿತ್ರಕ್ಕೆ ಗೋವಿಂದಾಯ ನಮಃ, ಶಿವಲಿಂಗದಂಥ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದ ಕೆ.ಸುರೇಶ್ ತೋತಾಪುರಿ ಟೈಟಲ್‍ನ ಎರಡು ಚಿತ್ರಕ್ಕೂ ಇವರ ನಿರ್ಮಾಪಕ.

ಈ ವಾರ ತೆರೆ ಮೇಲೆ ಗಣೇಶನ ‘ಬಾನ ದಾರಿಯಲಿ’ ಪಯಣ ಆರಂಭ

ಕಳೆದ ವರ್ಷ ತೆರೆಕಂಡಿದ್ದ ನವರಸನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯ ಅಮೋಘವಾಗಿ ಮೂಡಿಬಂದಿತ್ತು. ಭಾಗ ಎರಡರಲ್ಲೂ ಈ ಜೋಡಿಯನ್ನು ನೋಡಲು ಪ್ರೇಕ್ಷಕರು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಡಾಲಿ ಧನಂಜಯ್ ಕೂಡ ಎರಡನೇ ಭಾಗದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

ಈ ಚಿತ್ರಕ್ಕೆ ನಿರಂಜನ ಬಾಬು ಅವರ ಛಸಯಾಗ್ರಹಣ, ಅರುಣ್ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದಿವೆ.

ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕ್ ಐಎಸ್‍ಐ ಕೈವಾಡ ಬಯಲು

ನವದೆಹಲಿ,ಸೆ.27- ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧಕ್ಕೆ ಕಾರಣ ಎನ್ನಲಾದ ಖಲಿಸ್ತಾನ ಪರ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಪಾಕಿಸ್ತಾನದ ಗುಪ್ತಚರ ಐಎಸ್‍ಐ ಕೈವಾಡ ಇರುವುದು ಬೆಳಕಿಗೆ ಬಂದಿದೆ.

ಉಭಯ ರಾಷ್ಟ್ರಗಳ ನಡುವೆ ಸಂಬಂಧವನ್ನು ಹಾಳು ಮಾಡುವ ಏಕೈಕ ಕಾರಣಕ್ಕಾಗಿಯೇ ಕೆನಡಾದಲ್ಲಿದ್ದ ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‍ನನ್ನು ಪಾಕ್‍ನ ಗುಪ್ತಚರದ ಐಎಸ್‍ನವರೇ ಹತ್ಯೆ ಮಾಡಿರಬಹುದು ಎಂದು ಕೇಂದ್ರ ಸರ್ಕಾರ ಶಂಕೆ ವ್ಯಕ್ತಪಡಿಸಿದೆ.
ಹಿಂಬಾಗಿಲ ಮೂಲಕ ಭಾರತಕ್ಕೆ ಕೆಟ್ಟ ಹೆಸರು ತರಲು ಹವಣಿಸಿರುವ ಪಾಕಿಸ್ತಾನ ಐಎಸ್‍ಐ ಏಜೆಂಟರ ಮೂಲಕವೇ ನಿಜ್ಜರ್‍ನನ್ನು ಹತ್ಯೆ ಮಾಡಿರಬಹುದು ಎಂದು ಹೇಳಿದೆ.

ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ ನಿಜ್ಜರ್‍ನನ್ನು ಹತ್ಯೆಗೈಯ್ದಿರುವ ಪ್ರಕರಣದಲ್ಲಿ ಐಎಸ್‍ಐ ಕೈವಾಡವನ್ನು ತಳ್ಳಿಹಾಕುವಂತಿಲ್ಲ. ಕೆನಡಾ ಮತ್ತು ಭಾರತದ ನಡುವೆ ಸಂಬಂಧವನ್ನು ಹಾಳು ಮಾಡುವುದು ಅವರ ಉದ್ದೇಶಗಳಲ್ಲಿ ಒಂದು. ಅಂತರಾಷ್ಟ್ರೀಯ ಮಟ್ಟಗಳಲ್ಲಿ ಭಾರತಕ್ಕೆ ಮಸಿ ಬಳಿಯುವ ಪ್ರಯತ್ನ ಆಗಿರಬಹುದು ಎಂದು ಕೇಂದ್ರ ಗುಪ್ತಚರ ವಿಭಾಗ ಶಂಕೆ ವ್ಯಕ್ತಪಡಿಸಿದೆ.

ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು

ಗತ್ಯೆಗೀಡಾದ ನಿಜ್ಜರ್ ಅಕ್ಕಪಕ್ಕ ಯಾವಾಗಲೂ ಐಎಸ್‍ಐ ಏಜೆಂಟರೇ ಇರುತ್ತಿದ್ದರು. ಭಾರತದ ಪ್ರತಿಯೊಂದು ಚಲನವಲನದ ಬಗ್ಗೆಯೂ ಆತನಿಗೆ ಮಾಹಿತಿ ನೀಡುವುದು, ಭಾರತದ ವಿರುದ್ಧ ಎತ್ತಿಕಟ್ಟುವುದು ಅವರ ಉದ್ದೇಶವಾಗಿದೆ. ಇದರ ಮುಂದುವರಿದ ಭಾಗವಾಗಿಯೇ ನಿಜ್ಜರ್‍ನನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

3 ಸಾವಿರ ಕ್ಯೂಸೆಕ್ ನೀರು ಬಿಡುವ ಶಿಫಾರಸ್ಸನ್ನು ಸುಪ್ರೀಂನಲ್ಲಿ ಪ್ರಶ್ನಿಸುತ್ತೇವೆ : ಸಿಎಂ

ಚಾಮರಾಜನಗರ,ಸೆ.27- ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ನೀಡಿರುವ ಶಿಫಾರಸ್ಸನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿತಿಯ ಆದೇಶದಿಂದಾಗಿ ತಾವು ವಕೀಲರ ಜೊತೆ ಚರ್ಚೆ ನಡೆಸಿದ್ದು, ಅದನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಬಹುದು ಎಂದು ಸಲಹೆ ನೀಡಿದ್ದಾರೆ. ಅದರಂತೆ ಮೇಲ್ಮನವಿ ಸಲ್ಲಿಸಿದ್ದೇವೆ. ತಮಿಳುನಾಡಿಗೆ ಬಿಡಲು ನಮ್ಮ ಬಳಿ ನೀರೇ ಇಲ್ಲ ಎಂದು ಹೇಳಿದರು.

ತೀರ್ಪಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಸೆ.29 ರಂದು ಬಂದ್ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಘೋಷಣೆ ನೀಡಿವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಆದರೆ ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ ಬಂದ್, ಪ್ರತಿಭಟನಾ ಮೆರವಣಿಗೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು.

ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯ ಈಗ ಇಲ್ಲವಾಗಿದೆ. ನಾನು ಮೊದಲ ಅವಯಲ್ಲಿ ಮುಖ್ಯಯಾದ ಬಳಿಕ ಚಾಮರಾಜನಗರಕ್ಕೆ ಭೇಟಿ ನೀಡಿದ್ದೆ. ಆ ಬಳಿಕವೂ 5 ವರ್ಷ ಗಟ್ಟಿಯಾಗಿ ಆಡಳಿತ ನಡೆಸಿದೆ. ಮೌಢ್ಯ, ಮೂಢನಂಬಿಕೆ, ಕಂದಾಚಾರದ ಮೇಲೆ ನನಗೆ ನಂಬಿಕೆಯಿಲ್ಲ. ಹಾಗಾಗಿ 12 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ ಎಂದರು.

ಮಲೈಮಹದೇಶ್ವರ ದೇವಸ್ಥಾನ ಪ್ರಾಕಾರದ ಸಭೆಗಾಗಿ ತಾವಿಂದು ಇಲ್ಲಿಗೆ ಭೇಟಿ ನೀಡಿದ್ದು, ಮಹದೇಶ್ವರನ ದರ್ಶನ ಪಡೆದು, ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ಜನರು ಮತ್ತು ರೈತರು ಸೌಖ್ಯವಾಗಿರಲಿ ಎಂದು ಪ್ರಾರ್ಥಿಸಿದ್ದೇನೆ.ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಹೀಗಾಗಿ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸ್ಥಳೀಯ ಶಾಸಕರು, ಜನಪ್ರತಿನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಮಹದೇಶ್ವರನ ಮುಂದೆ ಭಕ್ತಿ ಭಾವ ಪರವಶರಾಗಿ ಪೂಜೆ ಸಲ್ಲಿಸಿದ ನಂತರ ಪ್ರಾಕಾರದ ಸಭೆ ನಡೆಸಿದ್ದು, ಮಹದೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಹಲವಾರು ಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ.ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಮಂತ್ರಿ ಹಾಗೂ ಗಣ್ಯರಿಗೆ ಪೂರ್ಣ ಕುಂಭ ಸ್ವಾಗತ ಕೋರಿದರು.

ಹೇಮಾವತಿ ಜಲಾಶಯ ಸಂತ್ರಸ್ಥರಿಂದ ಡಿಸಿ ಕಚೇರಿ ಎದುರು ಅರೆಬೆತ್ತಲೆ ಧರಣಿ

ಹಾಸನ,ಸೆ.27-ಹಲವು ದಶಕದಿಂದ ಹೋರಾಟ ನಡೆಸಿದರೂ ಸ್ಪಂದಿಸದ ಜಿಲ್ಲಾಡಳಿತದ ಕ್ರಮ ವಿರೋಸಿ ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿ ಸದಸ್ಯರು ಡಿಸಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನಾ ಧರಣಿ ನಡೆಸಿದರು.ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಎಸ್.ಕೃಷ್ಣ , ನಾವು ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದರು ನ್ಯಾಯ ದೊರೆಯುತ್ತಿಲ್ಲ.

ಮುಖ್ಯಮಂತ್ರಿ, ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಕಾಧಿರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಪಹಣಿ, ಪೋಡಿ ಮಾಡದೆ ಸತಾಯಿಸಲಾಗುತ್ತಿದೆ. ನಮಗೆ ಅಗತ್ಯ ದಾಖಲೆ ಕೊಡದಿದ್ದಲ್ಲಿ ಜಲಾಶಯಕ್ಕೆ ಕೊಟ್ಟಿರುವ ನಮ್ಮ ಭೂಮಿ ವಾಪಸ್ ನೀಡಲಿ ಎಂದು ಆಗ್ರಹಿಸಿದರು.

ನಮಗೆ ನೀಡಿರುವ ಭೂಮಿಗೆ ಸಂಬಂಧಿಸಿದ ಅಗತ್ಯ ದಾಖಲೆ ಇಲ್ಲದೆ ಸರ್ಕಾರದಿಂದ ಯಾವುದೆ ಸೌಲಭ್ಯ ಪಡೆಯುಲು ಆಗುತ್ತಿಲ್ಲ. ಅಲ್ಲದೆ, ಬೆಳೆ ಹಾನಿ ಪರಿಹಾರ ಪಡೆಯಲು ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು

ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಯಾವುದೇ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸದೆ ಬೇಕಾಬಿಟ್ಟಿ ಉತ್ತರ ನೀಡುತ್ತಾರೆ. ಯಾವುದೇ ರಾಜಕಾರಣಿಗಳು ನಮ್ಮ ಗೋಳು ಕೇಳುತ್ತಿಲ್ಲ. ಆದ್ದರಿಂದ 35 ಸಾವಿರ ಸಂತ್ರಸ್ಥರು ಮುಂದಿನ ಲೋಕಸಭಾ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೃಷ್ಣ ತಿಳಿಸಿದರು.

ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ಜಿಲ್ಲೆಯ ಸುಮಾರು 10 ಸಾವಿರ ರೈತ ಕುಟುಂಬಗಳಿಗೆ ಪರಿಹಾರವಾಗಿ ಜಿಲ್ಲೆಯ ವಿವಿಧೆಡೆ ಹಲವು ದಶಕಗಳ ಹಿಂದೆಯೇ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ನೀಡಲಾಗಿದೆ.

ಇದಕ್ಕೆ ಹಣ ಕಟ್ಟಿಸಿಕೊಂಡಿದ್ದು, ಇಲ್ಲಿಯವರೆಗೆ ಬಹು ಪಾಲು ಸಂತ್ರಸ್ತ ಕುಟುಂಬಗಳಿಗೆ ಜಮೀನುಗಳನ್ನು ಗುರುತಿಸಿ, ಖಾತೆ, ಪಹಣಿ ಮುಂತಾದ ಹಕ್ಕುಪತ್ರಗಳನ್ನು ನೀಡದೆ ಸರ್ಕಾರ ಹಾಗೂ ಜಿಲ್ಲಾಡಳಿತ ಅನ್ಯಾಯವೆಸಗುತ್ತಿದೆ. ನಮಗೆ ಅಗತ್ಯ ದಾಖಲೆ ಒದಗಿಸಲು ಯಾವುದೇ ತೊಡಕು ಇಲ್ಲದಿದ್ದರು ಅಧಿಕಾರಿಗಳ ವರ್ತನೆ ಖಂಡನೀಯ ಎಂದರು. ಪ್ರತಿಭಟನೆಯಲ್ಲಿ ವೆಂಕಟರಾಮೇಗೌಡ, ಜಯರಾಮ, ರಾಜೇಗೌಡ, ಸ್ವಾಮಿ ಸೇರಿದಂತೆ 30 ಕ್ಕೂ ಹೆಚ್ಚು ಮಂದಿ ಇದ್ದರು.

ಈ ವಾರ ತೆರೆ ಮೇಲೆ ಗಣೇಶನ ‘ಬಾನ ದಾರಿಯಲಿ’ ಪಯಣ ಆರಂಭ

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ, ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಶ್ರೀವಾರಿ ಟಾಕೀಸ್ ನಿರ್ಮಾಣದ ಬಾನ ದಾರಿಯಲಿ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈಗಾಗಲೆ ಹಾಡುಗಳು ಮತ್ತು ಟ್ರೈಲರ್‍ನಿಂದ ಭಾರೀ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಗೋಲ್ಡನ್ ಸ್ಟಾರ್‍ಗೆ ದೊಡ್ಡ ಹಿಟ್ ಕೊಡುವ ಮುನ್ಸೂಚನೆ ಕೊಟ್ಟಿದೆ.ಅವರೇ ಹೇಳುವ ಹಾಗೆ,ಇದು ನಾನು ಈವರೆಗೂ ಮಾಡಿರದ ಪಾತ್ರ ಬಾನ ದಾರಿಯಲಿ ಪ್ರೀತಿಯ ಬಗೆಗಿನ ಚಿತ್ರ.

ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ್ದ ಈ ಯಶಸ್ವಿ ಹಾಡಿಗೂ ನಮ್ಮ ಸಿನಿಮಾ ಕಥೆಗೆ ಹೊಂದಾಣಿಕೆಯಾಗುತ್ತದೆ. ಹಾಗಾಗಿ ಬಾನ ದಾರಿಯಲಿ ಶೀರ್ಷಿಕೆ ಇಟ್ಟಿದ್ದೇವೆ. ಪ್ರೀತಂ ಗುಬ್ಬಿ ನಾನು ಮುಂಚಿನಿಂದ ಸ್ನೇಹಿತರು. ನಮ್ಮ ಕಾಂಬಿನೇಷನ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಆದರೆ, ಈ ಚಿತ್ರ ಎಲ್ಲರ ಮನಸ್ಸಿಗೂ ಬಹಳ ಹತ್ತಿರವಾಗುತ್ತದೆ.

ಕೀನ್ಯಾ, ಆಫ್ರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಅಲ್ಲಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ನಮ್ಮ ತಂತ್ರಜ್ಞರ ಶ್ರಮವನ್ನು ಮೆಚ್ಚಲೇಬೇಕು. ಚಿತ್ರದ ನಾಯಕಿಯರು, ರಂಗಾಯಣ ರಘು ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎನ್ನುತ್ತಾರೆ.

ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು

ಕೆಆರ್‍ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಗಣೇಶ್ ಅಭಿಮಾನಿಗಳಲ್ಲಿ ಕುತೂಹಲವನ್ನುಂಟುಮಾಡಿದೆ. ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಗಣೇಶ್ ಜೋಡಿಯಾಗಿ ಅಭಿನಯಿಸಿದ್ದು ಹಾಡುಗಳಲ್ಲಿ ತುಂಬಾ ಮುದ್ದಾಗಿ ಕಾಣ್ತಾರೆ. ಸೊಗಸಾದ ಸಂಗೀತಕ್ಕೆ ಕಾರಣ ಅರ್ಜುನ್ ಜನ್ಯ.

ಹೆಚ್ಚು ಆಕ್ಷನ್ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಮಾಸ್ತಿ ಪ್ರೇಮ ಕಥೆಗೆ ಪೆನ್ನು ಹಿಡಿದಿದ್ದಾರೆ.ಹೆಚ್ಚು ಎಮೋಷನ್ ಕಥೆಗಳನ್ನು ಪರದೆ ಮೇಲೆ ತಂದಿದ್ದ ನಿರ್ದೇಶಕ ಪ್ರೀತಮ್ ಗುಬ್ಬಿ ಮೊಟ್ಟ ಮೊದಲಬಾರಿಗೆ ಎಮೋಷನ್ ಅಂಡ್ ಲವ್‍ಅನ್ನು ಬ್ಲೆಂಡ್ ಮಾಡಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಇನ್ನು ವಿತರಣೆಯ ಜವಾಬ್ದಾರಿಯನ್ನು ಹೊತ್ತ ಕೆಆರ್‍ಜಿ ಸ್ಟುಡಿಯೋಸ್ ನ ವಿತರಣೆಯ ನೂರನೆಯ ಚಿತ್ರ. ಚಿತ್ರವನ್ನು ನೋಡಿದ್ದೇನೆ ಅದ್ಭುತವಾಗಿ ಮೂಡಿಬಂದಿದೆ. ನೋಡುವ ಸಂದರ್ಭದಲ್ಲಿ ಕಣ್ಣಲ್ಲಿ ನೀರು ಬರುತ್ತಿತ್ತು ಎಂಬ ಮಾತನ್ನು ಯೋಗಿ ಹೇಳಿಕೊಂಡಿದ್ದರು.

ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‍ಗೆ ಕಾರು ಡಿಕ್ಕಿ, ನಾಲ್ವರ ದುರ್ಮರಣ

ನಾಗಮಂಗಲ, ಸೆ.27- ರಸ್ತೆ ಬದಿ ನಿಂತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.ಬೆಂಗಳೂರು ಮೂಲದ ಮಹಿಳೆ ಹಾಗೂ ಮೂವರು ಪುರುಷರು ಮೃತಪಟ್ಟಿದ್ದು, ಇವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.

ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿಯ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆ ಎದುರಿನ ರಸ್ತೆ ಬದಿ ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸಲಾಗಿತ್ತು. ಇದೇ ಮಾರ್ಗವಾಗಿ ಹಾಸನ ಕಡೆಯಿಂದ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಬಸ್‍ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಹಾಗೂ ಮೂವರು ಪುರುಷರು ಮೃತಪಟ್ಟಿದ್ದಾರೆ.

ಸಂಘಟಿತ ಅಪರಾಧಗಳಿಗೆ ಕೆನಡಾದಲ್ಲಿ ಬೆಂಬಲ ಕಳವಳಕಾರಿ : ಜೈಶಂಕರ್

ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಅರ್ಧ ಭಾಗ ಬಸ್‍ನೊಳಗೆ ಹೊಕ್ಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಬೆಳ್ಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರಿನೊಳಗೆ ಸಿಕ್ಕಿಕೊಂಡಿದ್ದ ನಾಲ್ವರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತಪಟ್ಟವರು ಬೆಂಗಳೂರು ಮೂಲದವರು ಎಂದು ಹೇಳಲಾಗಿದ್ದು, ಸದ್ಯಕ್ಕೆ ಹೆಸರು, ವಾಸ ಸ್ಥಳದ ವಿಳಾಸ ತಿಳಿದು ಬಂದಿಲ್ಲ.ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇಯರ್-ಫೋನ್ ವಿಚಾರಕ್ಕೆ ಸ್ನೇಹಿತನನ್ನೆ ಕೊಂದ 9ನೇ ತರಗತಿ ವಿದ್ಯಾರ್ಥಿಗಳು

ರೂರ್ಕೆಲಾ,ಸೆ.27- ಇಯರ್-ಫೋನ್ ಹಂಚಿಕೊಳ್ಳಲು ಜಗಳವಾಡಿದ ನಂತರ 9 ನೇ ತರಗತಿಯ ವಿದ್ಯಾರ್ಥಿಯನ್ನು ಅವನ ಇಬ್ಬರು ಸ್ನೇಹಿತರು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ರೂರ್ಕೆಲಾದಲ್ಲಿ ನಡೆದಿದೆ. ಸ್ನೇಹಿತರ ಕೋಪಕ್ಕೆ ಬಲಿಯಾದ ವಿದ್ಯಾರ್ಥಿಯನ್ನು ನುವಾ ಬಸ್ತಿಯ ರುದ್ರ ನಾರಾಯಣ ಪಾಧಿ ಎಂದು ಗುರುತಿಸಲಾಗಿದೆ. ಈತ ರೂರ್ಕೆಲಾದ ಸಿವಿಲ್ ಟೌನ್‍ಶಿಪ್‍ನಲ್ಲಿರುವ ಡೆವಲಪ್ಡ್ ಏರಿಯಾ ಹೈಸ್ಕೂಲ್‍ನ ವಿದ್ಯಾರ್ಥಿಯಾಗಿದ್ದರು.ಇಲ್ಲಿನ ಹೆಕೆಟ್ ರಸ್ತೆಯ ಉದ್ದಕ್ಕೂ 15 ವರ್ಷದ ಆತನ ಶವವು ಪೊದೆ ಪ್ರದೇಶದಲ್ಲಿ ಪತ್ತೆಯಾಗಿದೆ, ಬಲಿಪಶು ಭಾನುವಾರದಿಂದ ಕಾಣೆಯಾಗಿದ್ದರು.

ಭಾನುವಾರ ಸಂಜೆಯಿಂದ ವಿದ್ಯಾರ್ಥಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಆರ್‍ಎನ್ ಪಾಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. 9 ನೇ ತರಗತಿಯ ವಿದ್ಯಾರ್ಥಿಯ ತಂದೆ ಘಟನೆಯ ಬಗ್ಗೆ ಮತ್ತು ಇನ್ನೊಂದು ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಾಪರಾಧಿಗಳ ಸಂಭವನೀಯ ಒಳಗೊಳ್ಳುವಿಕೆಯ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು.

ಸಂಘಟಿತ ಅಪರಾಧಗಳಿಗೆ ಕೆನಡಾದಲ್ಲಿ ಬೆಂಬಲ ಕಳವಳಕಾರಿ : ಜೈಶಂಕರ್

ಪನ್ಪೋಶ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಉಪಾಸನಾ ಪಾಧಿ ಅವರು ತಮ್ಮ ಮಗ ಇಬ್ಬರು ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದರು ಎಂಬ ಸುಳಿವುಗಳನ್ನು ಪೋಷಕರು ಒದಗಿಸಿದ್ದರು. ಇವರಿಬ್ಬರ ಜೊತೆಗೆ ಅಪರಾಧಕ್ಕೆ ಸಾಕ್ಷಿಯಾಗಿದ್ದ ಮತ್ತೊಬ್ಬ ಬಾಲಕನನ್ನು ಹೇಳಿಕೆ ದಾಖಲಿಸಲು ವಶಕ್ಕೆ ಪಡೆಯಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಹದಿಹರೆಯದವರು ತಮ್ಮ ಬೈಸಿಕಲ್‍ನಲ್ಲಿ ಇಯರ್-ಫೋನ್ ಹಂಚಿಕೊಳ್ಳುವ ವಿಷಯದಲ್ಲಿ ಜಗಳವಾಡಿದರು. ಜಗಳ ವಿಕೋಪಕ್ಕೆ ತಿರುಗಿದ್ದು, ಇಬ್ಬರು ಆರೋಪಿಗಳು ಸಂತ್ರಸ್ಥನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.