Home Blog Page 1944

ಬೆಂಗಳೂರು ಬಂದ್‌ಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಫೆಡರೇಷನ್ ಬೆಂಬಲ

ಬೆಂಗಳೂರು,ಸೆ.25- ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಾಳೆ ನೀಡಿರುವ ಬೆಂಗಳೂರು ಬಂದ್ ಕರೆಗೆ ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಆದರೆ, ದೈನಂದಿನ ಬಸ್ ಸೌಲಭ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎಂದಿನಂತೆ ನಾಳೆಯೂ ಬಸ್‍ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಬೆಂಗಳೂರು ಮತ್ತು ರಾಮನಗರ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದಿಲ್ಲ. ಯಥಾರೀತಿ ಬಸ್ ಸೌಲಭ್ಯವನ್ನು ಪ್ರಯಾಣಿಕರಿಗೆ ಕಲ್ಪಿಸುವುದಾಗಿ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಮೂಲಗಳು ತಿಳಿಸಿವೆ.

ಅನ್ಯಾಯದ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ : ಕುರುಬೂರು ಶಾಂತಕುಮಾರ್

ಆದರೆ ಫೆಡರೇಶನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿ.ಎ. ಅವರು ಪತ್ರಿಕಾ ಪ್ರಕಟಣೆ ನೀಡಿ, ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಿಎಂಟಿಸಿಯ ಎಲ್ಲಾ ಘಟಕಗಳಲ್ಲಿಯೂ ಯಾವುದೇ ಬಸ್‍ಗಳನ್ನು ಘಟಕದಿಂದ ಹೊರತೆಗೆಯದೆ ಬಂದ್‍ಗೆ ಬೆಂಬಲ ವ್ಯಕ್ತಪಡಿಸುವಂತೆ ಎಲ್ಲಾ ನೌಕರರಿಗೂ ಕರೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ರಾಜ್ಯದ ರೈತರ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಈಗಾಗಲೇ ವಿವಿಧ ಸಂಘಟನೆಗಳು ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿವೆ.

ಹೀಗಾಗಿ ಬಂದ್ ಹಿನ್ನೆಲೆಯಲ್ಲಿ ನಾಳೆ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಾಸವಾದರೂ ಅಚ್ಚರಿಪಡಬೇಕಿಲ್ಲ.

ಮಹಿಳಾ ಮೀಸಲಾತಿಯಲ್ಲಿ ಒಬಿಸಿ ಕೋಟಾ ; ಉಮಾಭಾರತಿ ಭರವಸೆ

ಭೋಪಾಲ್, ಸೆ 25 (ಪಿಟಿಐ)- ಮಹಿಳಾ ಮೀಸಲಾತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಬಿಸಿ ಕೋಟಾ ನೀಡಲಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಆಶಾಭಾವ ವ್ಯಕ್ತಪಡಿಸಿದ್ದಾರೆ. ಕಳೆದ ವಾರದ ಆರಂಭದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯನ್ನು ಒದಗಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗಗಳು) ಕೋಟಾವನ್ನು ಸೇರಿಸದಿದ್ದಕ್ಕಾಗಿ ಅವರು ಭಾರಿ ನಿರಾಶೆಯನ್ನು ವ್ಯಕ್ತಪಡಿಸಿದ್ದರು.

ಇದೀಗ ಮೋದಿ ಭೋಪಾಲ್‍ಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಅವರು ಬಡವರು ಮತ್ತು ಹಿಂದುಳಿದವರ ಪರವಾಗಿ ಮೋದಿ ಮಹಿಳೆಯರಿಗೆ ಒಬಿಸಿ ಮೀಸಲಾತಿಯ ಬಗ್ಗೆ ಸಕಾರಾತ್ಮಕ ಸಂಕೇತವನ್ನು ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಉಮಾಭಾರತಿ ಎಕ್ಸ್ ಮಾಡಿದ್ದಾರೆ.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿರುವುದು ಸಂತಸ ತಂದಿದೆ, ಆದರೆ ಒಬಿಸಿಗಳಿಗೆ ಮೀಸಲಾತಿ ನೀಡುವ ಅವಕಾಶವನ್ನು ಹೊಂದಿಲ್ಲದ ಕಾರಣ ಸ್ವಲ್ಪ ನಿರಾಶೆಗೊಂಡಿದ್ದೇನೆ ಎಂದು ಭಾರ್ತಿ ಕಳೆದ ವಾರ ಪಿಟಿಐಗೆ ತಿಳಿಸಿದ್ದರು. ವಿವಿಧ ವಿಷಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಿಜೆಪಿಯ ಹಿರಿಯ ನಾಯಕಿ ಅವರು ರಾಜಕೀಯ ತ್ಯಜಿಸುವುದನ್ನು ನಿರಾಕರಿಸಿದ್ದರು.

ದಲಿತ ಮಹಿಳೆಯನ್ನು ನಗ್ನಗೊಳಿಸಿ, ಬಾಯಿಗೆ ಮೂತ್ರ ವಿಸರ್ಜನೆ ಮಾಡಿ ಕ್ರೌರ್ಯ

ಪಾಟ್ನಾ,ಸೆ.25- ಸಾಲಕ್ಕೆ ಹೆಚ್ಚುವರಿ ಬಡ್ಡಿ ನೀಡಲು ನಿರಾಕರಿಸಿದ್ದಕ್ಕಾಗಿ ಬಿಹಾರದಲ್ಲಿ ದಲಿತ ಮಹಿಳೆಯೊಬ್ಬಳ ಮೇಲೆ ಅಮಾನುಷವಾಗಿ ಹಲ್ಲೇ ನಡೆಸಿ ಬಟ್ಟೆ ಬಿಚ್ಚಿಸಿ ಆಕೆಯ ಬಾಯಿಗೆ ಮೂತ್ರ ವಿಸರ್ಜನೆ ಮಾಡಿಸಿರುವ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಆಕೆಯ ಪತಿ ಗ್ರಾಮದ ಪ್ರಬಲ ವ್ಯಕ್ತಿಯಿಂದ ಪಡೆದಿದ್ದ ಸಾಲಕ್ಕೆ ಹೆಚ್ಚುವರಿ ಬಡ್ಡಿ ನೀಡಲು ನಿರಾಕರಿಸಿದ್ದರಿಂದ ಇಂತಹ ನೀಚಕೃತ್ಯ ನಡೆಸಲಾಗಿದೆ ಎಂದು ವರದಿಯಾಗಿದೆ.

ಮಹಿಳೆಯ ಪತಿ ಪಾಟ್ನಾ ಜಿಲ್ಲೆಯ ಮೋಸಿಂಪುರ ಗ್ರಾಮದಲ್ಲಿ ಪ್ರಮೋದ್ ಸಿಂಗ್ ಅವರಿಂದ RS 1,500 ಸಾಲ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ದಂಪತಿ ಸಂಪೂರ್ಣ ಹಣವನ್ನು ಮರುಪಾವತಿಸಿದ್ದರು, ಆದರೆ, ಪ್ರಮೋದ್ ಸಿಂಗ್ ಹೆಚ್ಚುವರಿ ಬಡ್ಡಿಗೆ ಬೇಡಿಕೆ ಇಟ್ಟಿದ್ದರು.

ಅನ್ಯಾಯದ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ : ಕುರುಬೂರು ಶಾಂತಕುಮಾರ್

ದಂಪತಿ ಇದಕ್ಕೆ ನಿರಾಕರಿಸಿದಾಗ, ಪ್ರಮೋದ್ ಸಿಂಗ್ ಅವರ ಮಗ ಮತ್ತು ಸಹಾಯಕರು ಆಕೆಯ ಮೇಲೆ ಹಲ್ಲೇ ನಡೆಸಿ ವಿವಸ್ತ್ರಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೈಪಂಪ್‍ನಿಂದ ನೀರು ಪಡೆಯಲು ಮನೆಯ ಹೊರಗೆ ಇದ್ದಾಗ ಪ್ರಮೋದ್, ಆತನ ಮಗ ಅಂಶು ಮತ್ತು ಇತರ ನಾಲ್ವರು ಪುರುಷರು ತಮ್ಮೊಂದಿಗೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಅವರು ಅವಳನ್ನು ದೊಣ್ಣೆಗಳಿಂದ ಥಳಿಸಿದರು ಮತ್ತು ಗ್ರಾಮದ ಪ್ರತ್ಯೇಕ ಸ್ಥಳದಲ್ಲಿ ಅವಳನ್ನು ವಿವಸಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಪ್ರಮೋದ್ ಸಿಂಗ್ ಅಂಶು ಬಾಯಿಯಲ್ಲಿ ಮೂತ್ರ ವಿಸರ್ಜಿಸುವಂತೆ ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ಅವಳು ಹೇಗೋ ತಪ್ಪಿಸಿಕೊಂಡು ಬಂದಳು. ಮಧ್ಯರಾತ್ರಿ ಆಕೆಯನ್ನು ಹುಡುಕುತ್ತಾ ಹೊರಟಾಗ ಆಕೆ ಬೆತ್ತಲೆಯಾಗಿ ಮನೆಯತ್ತ ಓಡಿ ಬಂದಿದ್ದಾರೆ. ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾಗಿದ್ದು, ಆರು ಮಂದಿಯನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಬಂದ್‍ಗೆ ಜ್ಯುವೆಲರಿ ಅಸೋಸಿಯೇಶನ್ ಬೆಂಬಲ : ಶರವಣ

ಬೆಂಗಳೂರು, ಸೆ.25- ಕಾವೇರಿ ವಿವಾದದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್‍ಗೆ ಕರ್ನಾಟಕ ಜ್ಯುವೆಲರಿ ಅಸೋಸಿಯೇಶನ್ ಬೆಂಬಲ ನೀಡಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷರ ಮತ್ತು ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ ತಿಳಿಸಿದ್ದಾರೆ.

ವ್ಯಕ್ತಿಗತವಾಗಿ ತಾವು ಹಾಗೂ ತಮ್ಮ ಸಂಘಟನೆ ಜನರ ಪರವಾಗಿದ್ದು, ರಾಜ್ಯಕ್ಕೆ ಆಗಿರುವ ಅನ್ಯಾಯ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ಜ್ಯುವೆಲೇರಿ ಅಸೋಸಿಯೇಶನ್ ನಾಡಿನ ಹಿತವನ್ನೆ ಬಯಸುತ್ತದೆ. ನಾಡು, ನುಡಿಗೆ ಬದ್ಧವಾಗಿದೆ. ನೆಲ ಜಲಕ್ಕೆ ಸಂಕಷ್ಟ ಎದುರಾದಾಗ ಜನರ ಪರ ದನಿಗೂಡಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಪಿಯುಸಿ ಪರೀಕ್ಷೆಗಳ ಮೌಲ್ಯಮಾಪಕರ ಸಂಭಾವನೆ ಬಿಡುಗಡೆಗೆ ಆಗ್ರಹ

ಬೆಂಗಳೂರು, ಸೆ.25- ಪಿಯುಸಿ ವಾರ್ಷಿಕ ಪರೀಕ್ಷಾ ಮತ್ತು ಪೂರಕ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಉಪನ್ಯಾಸಕರ ಸಂಭಾವನೆ ಹಾಗೂ ಭತ್ಯೆಗಳನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯನ್ನು ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ಕರ್ನಾಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಉಪನ್ಯಾಸಕರ ಸಂಭಾವನೆ ಹಾಗೂ ಭತ್ಯೆ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಅಕ್ಟೋಬರ್ 3ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಮಾರ್ಚ್ – ಏಪ್ರಿಲ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯ, ಜೂನ್‍ನಲ್ಲಿ ನಡೆದ ಮೊದಲ ಪೂರಕ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ಹಾಗೂ ಆಗಸ್ಟ್-ಸೆಪ್ಟೆಂಬರ್‍ನಲ್ಲಿ ನಡೆದ 2ನೇ ಪೂರಕ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ಭಾಗಿಯಾದ ಉಪನ್ಯಾಸಕರ ಸಂಭಾವನೆ ಮತ್ತು ಭತ್ಯೆಗಳನ್ನು ಈವರೆಗೂ ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ಜರೂರಾಗಿ ಮೌಲ್ಯಮಾಪನ ಮಾಡಿಸಿ, ಶೀಘ್ರದಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದೇವೆಂದು ಹೆಮ್ಮೆಪಡುವ ಮಂಡಲಿಯು ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಮಂಡಲಿಯ ಹಿರಿಮೆ ಮತ್ತು ಯಶಸ್ಸಿಗೆ ಕಾರಣೀಭೂತರಾದ ಉಪನ್ಯಾಸಕರ ಸಂಭಾವನೆ ಮತ್ತು ಭತ್ಯೆಗಳ ಶೀಘ್ರ ಬಿಡುಗಡೆಗೂ ಇದೇ ಇಚ್ಛಾಶಕ್ತಿ ಪ್ರದರ್ಶಿಸಬೇಕಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಮೌಲ್ಯಮಾಪನದ ಕಡೆಯ ದಿನದಂದೆ ಚೆಕ್ ಮೂಲಕ ಉಪನ್ಯಾಸಕರಿಗೆ ಸಂಭಾವನೆ ಮತ್ತು ಭತ್ಯೆಗಳನ್ನು ವಿತರಿಸಲಾಗುತ್ತಿತ್ತು. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪರೀಕ್ಷಾ ಶುಲ್ಕವನ್ನು ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ ಉಪನ್ಯಾಸಕರಿಗೆ ವಿತರಿಸಲು ಏಕೆ ವಿಳಂಬ ಧೋರಣೆ ಎಂದಿದ್ದಾರೆ.

ವಿಶೇಷವಾಗಿ ಖಾಸಗಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರು ಮೌಲ್ಯಮಾಪನದ ಸಂಭಾವನೆ ಮತ್ತು ಭತ್ಯೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಅನೇಕರು ನನ್ನ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದು ಅವರ ಜೀವನ ನಿರ್ವಹಣೆಯ ಪ್ರಶ್ನೆಯೂ ಆಗಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಅನ್ಯಾಯದ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ : ಕುರುಬೂರು ಶಾಂತಕುಮಾರ್

ದಾಬಸ್‍ಪೇಟೆ,ಸೆ.25- ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದು ಖಂಡನೀಯ. ಯಾವ ಸರ್ಕಾರಗಳು ರೈತರಪರ ನಿಲ್ಲುವುದಿಲ್ಲ. ನೀರಿನ ವಿಷಯ ಬಂದಾಗ ದೂರವೇ ಉಳಿಯುತ್ತವೆ. ಅನ್ಯಾಯದ ವಿರುದ್ದ ನಾವೆಲ್ಲರೂ ಪ್ರಾಮಾಣಿಕವಾಗಿ ಹೋರಾಟ ಮಾಡಬೇಕಿದೆ ಎಂದು ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ರಾಜ್ಯ ಪಟ್ಟಣದಲ್ಲಿ ರೈತ ಸಂಘಟನೆಗಳ ಓಕ್ಕೂಟ, ರಾಜ್ಯ ಕಬ್ಬು ಬೇಳೇಗಾರರ ಸಂಘ ಕರ್ನಾಟಕದಿಂದ ನೆಲಮಂಗಲ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ನಾಳೆ ಬೆಂಗಳೂರು ಬಂದ್ ಮಾಡುತ್ತಿದ್ದೇವೆ. ಹಲವಾರು ಕನ್ನಡಪರ ಸಂಘಟನೆಗಳು ಒಗ್ಗೂಡಿ ಟೌನ್‍ಹಾಲಿನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಶಾಂತಿಯುತ ಬಂದ್ ಮಾಡುತ್ತಿದ್ದೇವೆ ಎಂದರು.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಕರ್ನಾಟಕ ಕೈಗಾರಿಕಾ ಪ್ರದೇಶದವರೂ ನಿಮ್ಮ ಭೂಮಿಯನ್ನು ಸ್ವಾೀಧಿನ ಮಾಡಿ ಅದಕ್ಕೆ ತಕ್ಕದಾದ ಬೆಲೆಯನ್ನು ನೀಡಬೇಕು ಇಲ್ಲಾವಾದರೆ ಅದರ ಬಗ್ಗೆ ನಮ್ಮ ತಾಲೂಕು ಘಟಕ ಉಗ್ರವಾಗಿ ಹೋರಾಡುತ್ತದೆ, ಸೋಂಪುರ ಹೋಬಳಿಯಲ್ಲಿ ಅಕ್ರಮ ಕ್ಷೇಷರ್ ನಿಂದ, ರಿಯಲ್ ಏಸ್ಟೆಟ್ ನಿಂದ ಮಾಫಿಯಾ ಹೆಚ್ಚಾಗಿದೆ ಎಂದರು.

ಕಾವೇರಿ ನೀರು ಬಿಡುತ್ತಿರುವುದರಿಂದ ಕಾವೇರಿ ನ್ಯಾಯಾೀಧಿಕರಣ ಹಾಗೂ ಸುಪ್ರೀಂಕೋರ್ಟ್ ತಿರ್ಪೀನಿಂದ 26ನೇ ತಾರಿಖು ಬೆಂಗಳೂರು ಬಂದ್ ಮಾಡುತ್ತಿದ್ದೇವೆ ಇದಕ್ಕೇ ಹಲವಾರು ಕನ್ನಡ ಪರ ಸಂಘಟನೆಗಳು, ಎಲ್ಲರೂ ಬಂದ ಮಾಡಲು ತೀರ್ಮಾನಿಸಿದ್ದು ಅಂದು ನಾವು ಟೋನ್ ಹಾಲಿನಿಂದ ಮೈಸೂರು ಭ್ಯಾಂಕ್ ನವರೆವಿಗೂ ಶಾಂತಿಯುತ ಬಂದ್ ಮಾಡಿ ಯಶಸ್ವಿಗೊಳಿಸುತ್ತೇವೆ ಎಂದರು.

ಅಧ್ಯಕ್ಷತೆಯನ್ನು ಭಾಬಾ ಸಾಹೇಬ್ ಜನಾರಾಳಕರನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯದೀಶರು, ಮುಖ್ಯ ಅಥೀತಿಗಳಾದ ಟಿ.ಎನ್.ಶ್ರೀನಿವಾಸಯ್ಯ, ಕಾನೂನು ಸಲಹಗಾರರಾದ ಡಾ.ಕಿಶನ್ ರಾವ್ ಉಪಸ್ತೀತರಿದ್ದರು.
ನೂತನ ಪದಾದಿಕಾರಿಗಳಾದ ನೆಲಮಂಗಳ ತಾಲೂಕು ಅಧ್ಯಕ್ಷ ಶ್ರೀಪತಿಹಳ್ಳಿ ರಾಜೇಶ್, ಪ್ರಧಾನ ಕಾರ್ಯಧರ್ಶಿ ಹಳೇನಿಜಗಲ್ ಗುರುಮೂರ್ತಿ , ಉಪಾಧ್ಯಕ್ಷರಾದ ಎನ್.ಶಿವಕುಮಾರ, ಎಂ.ಸಿ.ನೀಲಕಂಟಯ್ಯ, ಎಚ್.ಪಿ.ಸುರೇಶ, ದಾಬಸ್‍ಪೇಟೆ ಪಂಚಾಕ್ಷರಿ ಸಂಘಟನಾ ಕಾರ್ಯಧರ್ಶಿ ಶಿವಶಂಕರಯ್ಯ, ದಾಬಸ್ ಪೇಟೆ ಜಗದೀಶ್, ಕಾಂತರಾಜು, ಗೌರಾಪುರ ಲೋಕೇಶ್ ಇದ್ದರು.

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ

ಹ್ಯಾಂಗ್‍ಝೌ, ಸೆ.25 (ಪಿಟಿಐ) ಏಷ್ಯನ್ ಗೇಮ್ಸ್‍ನಲ್ಲಿ ಭಾರತದ ಶೂಟರ್‍ಗಳು ಎರಡು ದಿನಗಳ ಸ್ಪರ್ಧೆಯಲ್ಲಿ ಐದು ಪೋಡಿಯಂ ಫಿನಿಶ್‍ಗಳನ್ನು ಪಡೆಯುವ ಮೂಲಕ ಒಂದು ಚಿನ್ನ ಸೇರಿದಂತೆ ಮೂರು ಪದಕಗಳ ಬೇಟೆಯಾಡಿದೆ. ವಿಶ್ವ ಚಾಂಪಿಯನ್ ರುದ್ರಂ ಪಾಟೀಲ್ ನೇತೃತ್ವದ ಭಾರತೀಯ ತಂಡ 10 ಮೀಟರ್ ಏರ್ ರೈಫಲ್ ತಂಡವು ಕಾಂಟಿನೆಂಟಲ್ ಗೇಮ್ಸ್‍ನಲ್ಲಿ ವಿಶ್ವ ದಾಖಲೆಯ ಅಂಕದೊಂದಿಗೆ ದೇಶಕ್ಕೆ ತನ್ನ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದೆ.

ಐಶ್ವರಿ ಪ್ರತಾಪ್ ಸಿಂಗ್ ತೋಮರ್ ನಂತರ ದೇಶಕ್ಕೆ ವೈಯಕ್ತಿಕ ಕಂಚಿನ ಪದಕವನ್ನು ಗಳಿಸಿದರು. ಆದರ್ಶ್ ಸಿಂಗ್ , ಅನೀಶ್ ಭನ್ವಾಲಾ ಮತ್ತು ವಿಜಯವೀರ್ ಸಿಧು ಅವರನ್ನೊಳಗೊಂಡ 25 ಮೀಟರ್ ರ್ಯಾಪಿಡ್ ಫೈರ್ ತಂಡವು ಇಂಡೋನೇಷ್ಯಾ ಜೊತೆಗಿನ ಟೈ ನಂತರ ಒಟ್ಟು 1718 ಸ್ಕೋರ್‍ನೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿತು.

19 ಖಲಿಸ್ತಾನಿ ಉಗ್ರರ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ಚೀನಾ 1765 ಅಂಕಗಳೊಂದಿಗೆ ಚಿನ್ನವನ್ನು ಪಡೆದುಕೊಂಡರೆ, ದಕ್ಷಿಣ ಕೊರಿಯಾ 1734 ಒಟ್ಟುಗೂಡಿಸಿ ಬೆಳ್ಳಿಯನ್ನು ಪಡೆದುಕೊಂಡಿತು. ರುದ್ರಂಕ್ಷ್, ಒಲಿಂಪಿಯನ್ ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ಐಶ್ವರಿ ಅವರ ಮೂವರು ಅರ್ಹತಾ ಸುತ್ತಿನಲ್ಲಿ 1893.7 ಅಂಕಗಳನ್ನು ಗಳಿಸಿ 10 ಮೀಟರ್ ಏರ್ ರೈಫಲ್ ತಂಡದ ಚಿನ್ನದ ಹಾದಿಯಲ್ಲಿ ಶೂಟಿಂಗ್ ಪವರ್‍ಹೌಸ್ ಚೀನಾ ಮತ್ತು ದಕ್ಷಿಣ ಕೊರಿಯಾದ ಸವಾಲನ್ನು ಹಿಮ್ಮೆಟ್ಟಿಸಿದರು.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ನವದೆಹಲಿ, ಸೆ 25 (ಪಿಟಿಐ)- ಮಹಿಳಾ ಮೀಸಲಾತಿ ಹೆಸರಿನಲ್ಲಿ ಮೋದಿ ಸರ್ಕಾರ ವಿಶ್ವಾಸಘಾತುಕತನ ತೋರುತ್ತಿದೆ ಎಂಬ ಬಗ್ಗೆ ಜನರ ಗಮನ ಸೆಳೆಯಲು ಕಾಂಗ್ರೆಸ್ ಇಂದಿನಿಂದ ದೇಶದ 21 ನಗರಗಳಲ್ಲಿ 21 ಮಹಿಳಾ ನಾಯಕರು ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಿದೆ.

ಇಂದಿನಿಂದ 21 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಇದರಲ್ಲಿ 21 ಮಹಿಳಾ ನಾಯಕರು ಮಹಿಳಾ ಮೀಸಲಾತಿ ವಿಷಯದ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಸಂಸದೆ ರಜನಿ ಪಾಟೀಲ್ ಅಹಮದಾಬಾದ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ, ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಹೈದರಾಬಾದ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಭುವನೇಶ್ವರದಲ್ಲಿ ರಂಜೀತ್ ರಂಜನ್, ಜೈಪುರದಲ್ಲಿ ಅಲ್ಕಾ ಲಂಬಾ, ಮುಂಬೈನಲ್ಲಿ ಅಮೀ ಯಾಗ್ನಿಕ್ , ರಾಂಚಿಯಲ್ಲಿ ರಾಗಿಣಿ ನಾಯಕ್ ಮತ್ತು ಶ್ರೀನಗರದಲ್ಲಿ ಶಾಮಾ ಮೊಹಮದ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಕಾಂಗ್ರೆಸ್‍ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು 21 ನಗರಗಳಲ್ಲಿ 21 ಮಹಿಳಾ ನಾಯಕರಿಂದ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮರಕ್ಕೆ ಕಾರು ಡಿಕ್ಕಿಯಾಗಿ ಐವರು ದುರ್ಮರಣ

ಉಮಾರಿಯಾ (ಮಧ್ಯಪ್ರದೇಶದ), ಸೆ .25- ಇಂದು ಮುಂಜಾನೆ ಉಮಾರಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-43 ಮಜ್ಗಾವಾ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಘುಂಗುಟಿ ಪೊಲೀಸ್ ಠಾಣೆ ವ್ಯಾಪ್ತಿ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಐವರು ಉಮಾರಿಯಾದಿಂದ ಶಹದೋಲ್‍ಗೆ ತೆರಳುತ್ತಿದ್ದರು ಅಪಘಾತ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಮೃತರೆಲ್ಲರೂ 30 ರಿಂದ 35 ವರ್ಷದೊಳಗಿನವರು. ಅವರಲ್ಲಿ ಹೆಚ್ಚಿನವರು ಸರ್ಕಾರಿ ನೌಕರರು ಎಂದು ತಿಳಿದುಬಂದಿದ್ದು ಪ್ರವಾಸಕ್ಕೆ ತೆರಳುತ್ತಿದದರು ಎನ್ನಲಾಗುತ್ತಿದೆ. ಘುಂಗುಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

19 ಖಲಿಸ್ತಾನಿ ಉಗ್ರರ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ,ಸೆ.25-ಖಲಿಸ್ತಾನಿ ಉಗ್ರ ಗುರುಪತ್‍ವಂತ್ ಸಿಂಗ್ ಪನ್ನೂನ್‍ಗೆ ಸೇರಿದ್ದ ಭಾರತದಲ್ಲಿನ ಆಸ್ತಿಪಾಸ್ತಿಗಳನ್ನು ಎನ್‍ಐಎ ವಶಪಡಿಸಿಕೊಂಡ ಬಳಿಕ, ಇನ್ನೂ 19 ಖಲಿಸ್ತಾನಿ ಉಗ್ರರ ಭಾರತದ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ.

ಗುರುತ್ತಿಸಲಾಗಿರುವ 19 ಜನರೂ ವಿದೇಶದಲ್ಲಿ ವಾಸವಿದ್ದು, ಭಾರತ ವಿರೋಧಿ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಏಂಬುದು ತನಿಖೆಯಿಂದ ತಿಳಿದುಬಂದಿದ್ದು ಇವರ ಆಸ್ತಿಪಾಸ್ತಿಗಳನ್ನು ಶೀಘ್ರವೇ ವಶಪಡಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಬ್ರಿಟನ್, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ದುಬೈ, ಪಾಕಿಸ್ತಾನದಲ್ಲಿ ಇವರು ಉಳಿದುಕೊಂಡಿದ್ದು ಇವರು ಖಲಿಸ್ತಾನಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇವರ ವಿರುದ್ಧ ಈಗಾಗಲೆ ಎನ್‍ಐಎ ಭಯೋತ್ಪಾದನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಗುರುತು ಪತ್ತೆಗೆ ಬಹುಮಾನ ಹಣ ಕೂಡ ನಿಗದಿಪಡಿಸಿದೆ.