Home Blog Page 1945

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ

ಹ್ಯಾಂಗ್‍ಝೌ, ಸೆ.25 (ಪಿಟಿಐ) ಏಷ್ಯನ್ ಗೇಮ್ಸ್‍ನಲ್ಲಿ ಭಾರತದ ಶೂಟರ್‍ಗಳು ಎರಡು ದಿನಗಳ ಸ್ಪರ್ಧೆಯಲ್ಲಿ ಐದು ಪೋಡಿಯಂ ಫಿನಿಶ್‍ಗಳನ್ನು ಪಡೆಯುವ ಮೂಲಕ ಒಂದು ಚಿನ್ನ ಸೇರಿದಂತೆ ಮೂರು ಪದಕಗಳ ಬೇಟೆಯಾಡಿದೆ. ವಿಶ್ವ ಚಾಂಪಿಯನ್ ರುದ್ರಂ ಪಾಟೀಲ್ ನೇತೃತ್ವದ ಭಾರತೀಯ ತಂಡ 10 ಮೀಟರ್ ಏರ್ ರೈಫಲ್ ತಂಡವು ಕಾಂಟಿನೆಂಟಲ್ ಗೇಮ್ಸ್‍ನಲ್ಲಿ ವಿಶ್ವ ದಾಖಲೆಯ ಅಂಕದೊಂದಿಗೆ ದೇಶಕ್ಕೆ ತನ್ನ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದೆ.

ಐಶ್ವರಿ ಪ್ರತಾಪ್ ಸಿಂಗ್ ತೋಮರ್ ನಂತರ ದೇಶಕ್ಕೆ ವೈಯಕ್ತಿಕ ಕಂಚಿನ ಪದಕವನ್ನು ಗಳಿಸಿದರು. ಆದರ್ಶ್ ಸಿಂಗ್ , ಅನೀಶ್ ಭನ್ವಾಲಾ ಮತ್ತು ವಿಜಯವೀರ್ ಸಿಧು ಅವರನ್ನೊಳಗೊಂಡ 25 ಮೀಟರ್ ರ್ಯಾಪಿಡ್ ಫೈರ್ ತಂಡವು ಇಂಡೋನೇಷ್ಯಾ ಜೊತೆಗಿನ ಟೈ ನಂತರ ಒಟ್ಟು 1718 ಸ್ಕೋರ್‍ನೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿತು.

19 ಖಲಿಸ್ತಾನಿ ಉಗ್ರರ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ಚೀನಾ 1765 ಅಂಕಗಳೊಂದಿಗೆ ಚಿನ್ನವನ್ನು ಪಡೆದುಕೊಂಡರೆ, ದಕ್ಷಿಣ ಕೊರಿಯಾ 1734 ಒಟ್ಟುಗೂಡಿಸಿ ಬೆಳ್ಳಿಯನ್ನು ಪಡೆದುಕೊಂಡಿತು. ರುದ್ರಂಕ್ಷ್, ಒಲಿಂಪಿಯನ್ ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ಐಶ್ವರಿ ಅವರ ಮೂವರು ಅರ್ಹತಾ ಸುತ್ತಿನಲ್ಲಿ 1893.7 ಅಂಕಗಳನ್ನು ಗಳಿಸಿ 10 ಮೀಟರ್ ಏರ್ ರೈಫಲ್ ತಂಡದ ಚಿನ್ನದ ಹಾದಿಯಲ್ಲಿ ಶೂಟಿಂಗ್ ಪವರ್‍ಹೌಸ್ ಚೀನಾ ಮತ್ತು ದಕ್ಷಿಣ ಕೊರಿಯಾದ ಸವಾಲನ್ನು ಹಿಮ್ಮೆಟ್ಟಿಸಿದರು.

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ನವದೆಹಲಿ, ಸೆ 25 (ಪಿಟಿಐ)- ಮಹಿಳಾ ಮೀಸಲಾತಿ ಹೆಸರಿನಲ್ಲಿ ಮೋದಿ ಸರ್ಕಾರ ವಿಶ್ವಾಸಘಾತುಕತನ ತೋರುತ್ತಿದೆ ಎಂಬ ಬಗ್ಗೆ ಜನರ ಗಮನ ಸೆಳೆಯಲು ಕಾಂಗ್ರೆಸ್ ಇಂದಿನಿಂದ ದೇಶದ 21 ನಗರಗಳಲ್ಲಿ 21 ಮಹಿಳಾ ನಾಯಕರು ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಿದೆ.

ಇಂದಿನಿಂದ 21 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಇದರಲ್ಲಿ 21 ಮಹಿಳಾ ನಾಯಕರು ಮಹಿಳಾ ಮೀಸಲಾತಿ ವಿಷಯದ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಸಂಸದೆ ರಜನಿ ಪಾಟೀಲ್ ಅಹಮದಾಬಾದ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ, ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಹೈದರಾಬಾದ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಭುವನೇಶ್ವರದಲ್ಲಿ ರಂಜೀತ್ ರಂಜನ್, ಜೈಪುರದಲ್ಲಿ ಅಲ್ಕಾ ಲಂಬಾ, ಮುಂಬೈನಲ್ಲಿ ಅಮೀ ಯಾಗ್ನಿಕ್ , ರಾಂಚಿಯಲ್ಲಿ ರಾಗಿಣಿ ನಾಯಕ್ ಮತ್ತು ಶ್ರೀನಗರದಲ್ಲಿ ಶಾಮಾ ಮೊಹಮದ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಕಾಂಗ್ರೆಸ್‍ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು 21 ನಗರಗಳಲ್ಲಿ 21 ಮಹಿಳಾ ನಾಯಕರಿಂದ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮರಕ್ಕೆ ಕಾರು ಡಿಕ್ಕಿಯಾಗಿ ಐವರು ದುರ್ಮರಣ

ಉಮಾರಿಯಾ (ಮಧ್ಯಪ್ರದೇಶದ), ಸೆ .25- ಇಂದು ಮುಂಜಾನೆ ಉಮಾರಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-43 ಮಜ್ಗಾವಾ ಗ್ರಾಮದ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಘುಂಗುಟಿ ಪೊಲೀಸ್ ಠಾಣೆ ವ್ಯಾಪ್ತಿ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಐವರು ಉಮಾರಿಯಾದಿಂದ ಶಹದೋಲ್‍ಗೆ ತೆರಳುತ್ತಿದ್ದರು ಅಪಘಾತ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಮೃತರೆಲ್ಲರೂ 30 ರಿಂದ 35 ವರ್ಷದೊಳಗಿನವರು. ಅವರಲ್ಲಿ ಹೆಚ್ಚಿನವರು ಸರ್ಕಾರಿ ನೌಕರರು ಎಂದು ತಿಳಿದುಬಂದಿದ್ದು ಪ್ರವಾಸಕ್ಕೆ ತೆರಳುತ್ತಿದದರು ಎನ್ನಲಾಗುತ್ತಿದೆ. ಘುಂಗುಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

19 ಖಲಿಸ್ತಾನಿ ಉಗ್ರರ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ,ಸೆ.25-ಖಲಿಸ್ತಾನಿ ಉಗ್ರ ಗುರುಪತ್‍ವಂತ್ ಸಿಂಗ್ ಪನ್ನೂನ್‍ಗೆ ಸೇರಿದ್ದ ಭಾರತದಲ್ಲಿನ ಆಸ್ತಿಪಾಸ್ತಿಗಳನ್ನು ಎನ್‍ಐಎ ವಶಪಡಿಸಿಕೊಂಡ ಬಳಿಕ, ಇನ್ನೂ 19 ಖಲಿಸ್ತಾನಿ ಉಗ್ರರ ಭಾರತದ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ.

ಗುರುತ್ತಿಸಲಾಗಿರುವ 19 ಜನರೂ ವಿದೇಶದಲ್ಲಿ ವಾಸವಿದ್ದು, ಭಾರತ ವಿರೋಧಿ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಏಂಬುದು ತನಿಖೆಯಿಂದ ತಿಳಿದುಬಂದಿದ್ದು ಇವರ ಆಸ್ತಿಪಾಸ್ತಿಗಳನ್ನು ಶೀಘ್ರವೇ ವಶಪಡಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಬ್ರಿಟನ್, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ದುಬೈ, ಪಾಕಿಸ್ತಾನದಲ್ಲಿ ಇವರು ಉಳಿದುಕೊಂಡಿದ್ದು ಇವರು ಖಲಿಸ್ತಾನಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇವರ ವಿರುದ್ಧ ಈಗಾಗಲೆ ಎನ್‍ಐಎ ಭಯೋತ್ಪಾದನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಗುರುತು ಪತ್ತೆಗೆ ಬಹುಮಾನ ಹಣ ಕೂಡ ನಿಗದಿಪಡಿಸಿದೆ.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ನವದೆಹಲಿ,ಸೆ.25-ಕೆನಡಾದಲ್ಲಿ ವಿದ್ಯಭ್ಯಾಸ ಮಾಡುತ್ತಿರುವ ಭಾರತ ಮೂಲದ ವಿದ್ಯಾರ್ಥಿಗಳು ಮುಂದೆ ಅಮೆರಿಕ ,ಜರ್ಮನಿ,ಫ್ರಾನ್ಸ್ ಸೇರಿದಂತೆ ಇತರ ದೇಶಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಯೋಚಿಸುತ್ತಿದ್ದಾರೆ.

ದೇಶ ತೊರೆಯುವಂತೆ ಕೆನಡಾಲ್ಲಿರುವ ಭಾರತೀಯರಿಗೆ ಖಲಿಸ್ತಾನಿ ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ಬೆನ್ನಲ್ಲೇ ಸುರಕ್ಷಿತವಾಗಿರುವಂತೆ ಭಾರತ ಸರ್ಕಾರ ತಿಳಿಸಿತ್ತು ಹೀಗಾಗಿ ವಿದ್ಯಭ್ಯಾಸಕ್ಕೆಂದು ಕೆನಡಾಗೆ ಬಂದಿರುವ ವಿದ್ಯಾರ್ಥಿಗಳು ಬೇರೆ ದೇಶಗಳಿಗೆ ತೆರಳುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-09-2023)

ಇಲ್ಲಿ ಸಾಕಷ್ಟು ಅನಿಶ್ಚಿತತೆ ಇದೆ. ನನ್ನ ಪೋಷಕರು ಹಾಗೂ ಕುಟುಂಬ ಗಾಬರಿಗೊಂಡಿದ್ದಾರೆ. ನಾನು ನನ್ನ ಕಾಲೇಜು ನೀಡುವ ಸಲಹೆಗಾಗಿ ಕಾಯುತ್ತಿದ್ದೇನೆ. ಈಗ ಆನ್‍ಲೈನ್ ತರಗತಿಗಳಿಗಾಗಿ ಬೇಡಿಕೆ ಇಟ್ಟಿದ್ದೇನೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ.

ಈಗಾಗಲೆ ಕೆಲ ಪೋಷಕರು ಕೆನಡಾದ ವಿವಿಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪ್ರವೇಶ ಪತ್ರ, ವೀಸಾ ಸೇರಿದಂತೆ ವಿವಿಧ ಪ್ರಕ್ರಿಯೆ ಮುಗಿಸಿದ್ದಾರೆ ಆದರೆ ಈಗ ಏನು ಮಾಡುವುದು ಎಂಬುದು ತಿಳಿಯದಾಗಿದೆ ಲಕ್ಷಾಂತರ ರೂ ಖರ್ಚು ಕಟ್ಟಿದ್ದೇವೆ ಬದಲಿ ವ್ಯವಸ್ಥೆ ಮಾಡಲಾಗುತ್ತಿದ್ದು ಫ್ರಾನ್ಸ್ ನತ್ತ ಕೆಲವರು ಮುಖ ಮಾಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(25-09-2023)

ನಿತ್ಯ ನೀತಿ :
ನಮ್ಮ ಚಿಂತನೆಯೆಂಬ ಬೀಜ ಸಾತ್ವಿಕ ಸ್ವಭಾವದ ಬೇರಾದರೆ ವ್ಯಕ್ತಿಯನ್ನು ಅಮೃತತ್ವದೆಡೆಗೆ ಕೊಂಡೊಯ್ಯುತ್ತದೆ. ತಾಮಸ ಪ್ರವೃತ್ತಿಯ ಗುಣಚರ್ಯೆಗಳು ವ್ಯಕ್ತಿಯನ್ನು ಅಧಃಪನದೆಡೆಗೆ ಕೊಂಡೊಯ್ಯುತ್ತದೆ.

ಪಂಚಾಂಗ : 25-09-2023, ಸೋಮವಾರ
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ
ತಿಥಿ: ದಶಮಿ / ನಕ್ಷತ್ರ: ಉತ್ತರಾಷಾಢ / ಯೋಗ: ಅತಿಗಂಡ / ಕರಣ: ವಣಿಜ್

ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.14
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ಇಂದಿನ ರಾಶಿಭವಿಷ್ಯ
ಮೇಷ
: ವೈದ್ಯವೃತ್ತಿಯಲ್ಲಿರುವವರು ಅಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ವೃಷಭ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮಿಥುನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ.

ಕಟಕ: ತಾಳ್ಮೆಯಿಂದ ಕೆಲಸ-ಕಾರ್ಯಗಳನ್ನು ಮುಗಿಸುವಿರಿ.
ಸಿಂಹ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಕನ್ಯಾ: ಹಂತ ಹಂತವಾಗಿ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.

ತುಲಾ: ಆರ್ಥಿಕ ಸುಧಾರಣೆಗೆ ಪತ್ನಿಯ ಸಹಕಾರ ಬಹಳ ಅಗತ್ಯವಾಗಿ ಬೇಕಾಗುತ್ತದೆ.
ವೃಶ್ಚಿಕ: ಹಲವಾರು ವಿಚಾರಗಳಲ್ಲಿ ತೊಂದರೆ ಕಂಡು ಬಂದರೂ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ.
ಧನುಸ್ಸು: ಷೇರು ಬಂಡವಾಳ ಹೆಚ್ಚಾಗಲಿದೆ.

ಮಕರ: ಎಲ್ಲಾ ಕೆಲಸ-ಕಾರ್ಯಗಳು ತ್ವರಿಗತಿಯಲ್ಲಿ ಸಾಗಲಿವೆ. ಹೆಚ್ಚು ಉತ್ಸಾಹದಿಂದಿರುವಿರಿ.
ಕುಂಭ: ಯಾವುದೇ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.
ಮೀನ: ನ್ಯಾಯವಾದಿಗಳು ಉದ್ಯೋಗದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.

ಶೋಭಾ ಕರಂದ್ಲಾಜೆ ಅವರಂತಾಗಬೇಕೆಂದು 2008ರಲ್ಲೇ ಆಸೆ ಪಟ್ಟಿದ್ದೆ : ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ,ಸೆ.24- ಕೇಂದ್ರ ಮತ್ತು ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಕ್ರಿಯಾಶೀಲತೆ ಕಂಡು ನಾನು ಅವರಂತೆ ಆಗಬೇಕು ಎಂದು 2008 ರಲ್ಲೇ ಆಸೆ ಪಟ್ಟಿದ್ದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ರಾಷ್ಟೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

2008 ರಲ್ಲಿ ತಾವು ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ಆ ವೇಳೆ ಶೋಭಾ ಕರಂದ್ಲಾಜೆ ಅವರು ಸಚಿವರಾಗಿದ್ದು, ಬೆಳಗಾವಿಗೆ ಆಗಮಿಸಿದ್ದರು. ಮೊದಲ ಬಾರಿಗೆ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಕ್ರಿಯಾಶೀಲತೆ ನೋಡಿ ಒಂದಲ್ಲಾ ಒಂದು ನಾನೂ ಅವರಂತಾಗಬೇಕು ಎಂದು ಆಸೆಪಟ್ಟಿದ್ದೆ. ಇಂದು ಸಚಿವೆಯಾಗಿದ್ದೇನೆ. ಶೋಭಾ ಕರಂದ್ಲಾಜೆ ಈಗ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇಲಾಖಾ ಕಾರ್ಯಕ್ರಮಗಳ ಕುರಿತು ಮಾತನಾಡಿದ ಲಕ್ಷ್ಮೀಹೆಬ್ಬಾಳ್ಕರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದ ಅಡಿಯಲ್ಲಿ, ಪ್ರತಿಯೊಬ್ಬ ನಾಗರೀಕರಿಗೂ ಅನುಕೂಲವಾಗುವಂತೆ ಸಾಮಾಜಿಕ ಕಳಕಳಿಯಿಂದ ಪ್ರತಿವರ್ಷ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಅಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಪ್ರತಿಯೊಬ್ಬರಿಗೂ ಈ ಯೋಜನೆಗಳನ್ನು ಅವರ ಮನೆಯ ಬಾಗಿಲಿಗೆ ತಲಪಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿರುವ ವಿಕಲಚೇತನರಲ್ಲಿ 6,800 ಜನರಿಗೆ ವಿವಿಧ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ವಾಹನಗಳ ಅವಶ್ಯಕತೆಯಿದ್ದು, ಈ ವರ್ಷ ಮೊದಲ ಹಂತದಲ್ಲಿ 3,000 ಜನರಿಗೆ 30 ಕೋಟಿ ವೆಚ್ಚದಲ್ಲಿ ವಾಹನಗಳನ್ನು ವಿತರಿಸಲಾಗುವುದು,ಉಳಿದವರಿಗೆ ಮುಂದಿನ ವರ್ಷ ನೀಡಲಾಗುವುದು, ವಿಕಲಚೇತನರು ದೈಹಿಕವಾಗಿ ದುರ್ಬಲರಾಗಿರಬಹುದು ಆದರೆ ಮಾನಸಿಕವಾಗಿ ಅವರು ಇತರರಿಗಿಂತ ಸದೃಢವಾಗಿರುತ್ತಾರೆ, ಇವರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

BIG NEWS : ಸೆ.29 ರಂದು ‘ಕರ್ನಾಟಕ ಬಂದ್’ಗೆ ಕರೆಕೊಟ್ಟ ವಾಟಾಳ್

ಸಾರ್ವಜನಿಕರ ಕುಂದು ಕೊರತೆ ಆಲಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆ ಯಲ್ಲಿ ಪ್ರತಿ ತಿಂಗಳ 25 ರಂದು ಜನತಾ ದರ್ಶನದ ಮೂಲಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕಾರ ಮಾಡಲಾಗುವುದು. ಸಾರ್ವಜನಿಕರು ತಮ್ಮ ಕುಂದಕೊರತೆಗಳನ್ನು ಜನತಾದರ್ಶನದ ಮೂಲಕ ಬಗೆಹರಿಸಿಕೊಳ್ಳುವಂತೆ ಸಚಿವರು ತಿಳಿಸಿದರು.

ಈ ವೇಳೆ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಸಿಇಒ ಪ್ರಸನ್ನ.ಹೆಚ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಉಪವಿಭಾಗಕಾರಿ ರಶ್ಮಿ ಮತ್ತಿತರರು ಇದ್ದರು.

ಬೆಂಗಳೂರು : ಕಟ್ಟಡದಿಂದ ಜಿಗಿದು ನವವಿವಾಹಿತ ಆತ್ಮಹತ್ಯೆ

ಬೆಂಗಳೂರು,ಸೆ.24- ನವವಿವಾಹಿತೆಯೊಬ್ಬರು ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಭುವನೇಶ್ವರಿನಗರದ ನಾಲ್ಕನೇ ಕ್ರಾಸ್ ನಿವಾಸಿ ರಮ್ಯಾ (27) ಆತ್ಮಹತ್ಯೆ ಮಾಡಿಕೊಂಡಿರುವ ನವವಿವಾಹಿತೆ.

ಒಂದೂವರೆ ವರ್ಷದ ಹಿಂದೆಯಷ್ಟೇ ವೆಂಕಟೇಶ್ ಎಂಬುವವರನ್ನು ರಮ್ಯಾ ವಿವಾಹವಾಗಿದ್ದು, ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದರು. ದಂಪತಿ ಅನ್ಯೋನ್ಯವಾಗಿಯೇ ಇದ್ದರು ಎಂದು ಹೇಳಲಾಗಿದೆ.

BIG NEWS : ಸೆ.29 ರಂದು ‘ಕರ್ನಾಟಕ ಬಂದ್’ಗೆ ಕರೆಕೊಟ್ಟ ವಾಟಾಳ್

ರಾತ್ರಿ 8 ಗಂಟೆ ಸುಮಾರಿನಲ್ಲಿ ರಮ್ಯಾ ಮನೆಯ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿದು ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರ ಸಾವು

ದುಮ್ಕಾ (ಜಾರ್ಖಂಡ್), ಸೆ.24 -ಜಾರ್ಖಂಡ್‍ನ ದುಮ್ಕಾ ಜಿಲ್ಲೆಯ ಹನ್ಸಿಹಾ ಪ್ರದೇಶದ ಆಟದ ಮೈದಾನಕ್ಕೆ ಸಿಡಿಲು ಬಡಿದು ಪಂದ್ಯ ವೀಕ್ಷಿಸುತ್ತಿದ್ದ ಇಬ್ಬರು ಪ್ರೇಕ್ಷಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಪಂದ್ಯದ ವೇಳೆ ಗುಡುಗು ಸಹಿತ ಭಾರೀ ಮಳೆ ಪ್ರಾರಂಭವಾದ ನಂತರ ಮೈದಾನದಿಂದ ಹೊರಬಂದು ಪಕ್ಕದಲ್ಲಿ ಹಲವಾರು ಪ್ರೇಕ್ಷಕರು ಟೆಂಟ್ ಅಡಿಯಲ್ಲಿ ಆಶ್ರಯ ಪಡೆದಾಗ ಸಿಡಿಲು ಬಡಿದು ಈ ಘಟನೆ ಸಂಭವಿಸಿದೆ.

BIG NEWS : ಸೆ.29 ರಂದು ‘ಕರ್ನಾಟಕ ಬಂದ್’ಗೆ ಕರೆಕೊಟ್ಟ ವಾಟಾಳ್

ಶಿವಲಾಲ್ ಸೊರೆನ್ (32) ಮತ್ತು ಸಂತ್ಲಾಲ್ ಹೆಂಬ್ರಾಮ್ (20) ಎಂಬ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಹನ್ಸಿಹಾ ಪೊಲೀಸ್ ಠಾಣಾಕಾರಿ ಜಿತೇಂದ್ರ ಕುಮಾರ್ ಸಾಹು ತಿಳಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕಾವೇರಿಗಾಗಿ ಕರೆನೀಡಿರುವ ಬಂದ್‍ ವಿರೋಧಿಸುವಂತೆ ಸಚಿವರಿಗೆ ಸಿಎಂ ಸಂದೇಶ

ಬೆಂಗಳೂರು,ಸೆ.24- ಕಾವೇರಿ ನೀರಿಗಾಗಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ವಿರೋಧ ವ್ಯಕ್ತಪಡಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಸಂದೇಶ ರವಾನಿಸಿದ್ದಾರೆ. ಕಾವೇರಿ ನಾಡಿನ ಅಸ್ಮಿತೆಯಾಗಿದ್ದು, ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದು ಕನ್ನಡಿಯಷ್ಟೇ ಸತ್ಯವಾಗಿದೆ.

ಒಂದೆಡೆ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾದ ಅನಿವಾರ್ಯತೆ ಇದೆ. ಮತ್ತೊಂದೆಡೆ ಜಲಾಶಯಗಳಲ್ಲಿ ನೀರು ಬರಿದಾಗುತ್ತಿರುವುದರಿಂದ ನಮ್ಮ ಬೆಳೆ ಹಾಗೂ ಕುಡಿಯುವ ನೀರಿನ ಸಂಕಷ್ಟಗಳು ಹೆಚ್ಚಾಗುತ್ತಿದೆ. ಎಷ್ಟು ಬಾರಿ ಮನವಿ ಮಾಡಿದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿಲ್ಲ. ಪ್ರಧಾನಮಂತ್ರಿಯವರಿಗೆ ಸಮಯ ಕೇಳಿದರೂ ಸ್ಪಂದಿಸಿಲ್ಲ.

ಈ ವಿಷಯದಲ್ಲಿ ರಾಜ್ಯಸರ್ಕಾರ ಅಸಹಾಯಕವಾಗಿದೆ. ನ್ಯಾಯಾಲಯಗಳಿಗೆ, ನೀರು ಹಂಚಿಕೆಯ ಸಮಿತಿಗಳಿಗೆ ವಾಸ್ತವತೆಯನ್ನು ಮನವರಿಕೆ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ಜನಾಂದೋಲನ ನಡೆಯುತ್ತಿದೆ. ಇದನ್ನು ನಾವು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಬಂದ್ ಸೇರಿದಂತೆ ಯಾವುದೇ ಹೋರಾಟಗಳಿಗೆ ವಿರೋಧ ವ್ಯಕ್ತಪಡಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

BIG NEWS : ಸೆ.29 ರಂದು ‘ಕರ್ನಾಟಕ ಬಂದ್’ಗೆ ಕರೆಕೊಟ್ಟ ವಾಟಾಳ್

ಪ್ರತಿಭಟನಾಕಾರರು ಸಹಜವಾಗಿ ಕೇಂದ್ರದ ಜೊತೆ ರಾಜ್ಯಸರ್ಕಾರವನ್ನು ಟೀಕೆ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆಗಳಿಗೆ ನಾವು ಒಗ್ಗಿಕೊಳ್ಳಬೇಕು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದು, ಲೇವಡಿ ಮಾಡುವುದು, ಬೆದರಿಸುವುದು ಖಂಡಿಸುವಂತಹ ಪ್ರವೃತ್ತಿಗಳು ಬೇಡ. ಪ್ರಜಾಸತ್ತಾತ್ಮಕವಾಗಿ ಕಾನೂನು ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುವವರಿಗೆ ಮುಕ್ತ ಸ್ವಾತಂತ್ರ್ಯವಿದೆ. ನಾವು ಅದನ್ನು ಗೌರವಿಸೋಣ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಬಂದ್‍ನಿಂದ ಬ್ರಾಂಡ್ ಬೆಂಗಳೂರಿಗೆ ಧಕ್ಕೆಯಾಗುತ್ತದೆ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಕರವೇಯ ಪ್ರವೀಣ್‍ಶೆಟ್ಟಿ, ಕೆಲವು ಸಂಘಟನೆಗಳು ಬೆಂಗಳೂರು ಬಂದ್‍ಗೆ ಬಹಿರಂಗ ವಿರೋಧ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಹಿರಿಯರಾದ ವಾಟಾಳ್ ನಾಗರಾಜ್ ಹಾಗೂ ಮತ್ತಿತರರು ಸೆ.29 ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ.

ಹೀಗಾಗಿ ಬೆಂಗಳೂರು ಬಂದ್ ವಿಷಯದಲ್ಲೂ ಗೊಂದಲಗಳು ಸೃಷ್ಟಿಯಾಗಲಾರಂಭಿಸಿವೆ. ಕಾವೇರಿ ವಿಷಯದಲ್ಲಿ ಪ್ರತಿಭಟನೆ ನಡೆಯುತ್ತಿರುವುದರ ಬಗ್ಗೆ ಸರ್ಕಾರದಲ್ಲಿರುವ ಕೆಲವರು ಅಸಮಾಧಾನಗೊಂಡರೆ, ಪ್ರತಿಭಟನೆಗಳಿಂದ ರಾಜ್ಯಸರ್ಕಾರಕ್ಕೆ ಸಹಾಯವಾಗುತ್ತಿದೆ ಎಂಬ ಪ್ರತಿಪಾದನೆಯನ್ನು ಕೆಲವರು ಮಾಡುತ್ತಿದ್ದಾರೆ. ಈಗ ಬಂದ್‍ಗಳಲ್ಲೂ ಬೆಂಗಳೂರು, ಕರ್ನಾಟಕ ಎಂಬ ಗೊಂದಲಗಳು ಸೃಷ್ಟಿಯಾಗಿವೆ.