Friday, November 7, 2025
Home Blog Page 2

ಇಮೇಲ್‌ ಮೂಲಕ ಶಾಲೆಗೆ ಬಾಂಬ್‌ ಬೆದರಿಕೆ ಹಾಕಿದ್ದ ಮಹಿಳಾ ಟೆಕ್ಕಿ ಅರೆಸ್ಟ್

ಬೆಂಗಳೂರು,ನ.6- ಇಮೇಲ್‌ ಐಡಿ ಮುಖಾಂತರ ಶಾಲೆಯೊಂದಕ್ಕೆ ಬಾಂಬ್‌ ಹಾಕ್ಸ್ (Bomb Hoaxes) ಬೆದರಿಕೆ ಸಂದೇಶ ಕಳುಹಿಸಿದ್ದ ಮಹಿಳಾ ಟೆಕ್ಕಿಯನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ರೆನೆಜೋಶಿಲ್ಡಾ ಬಂಧಿತ ಸಾಫ್ಟ್ ವೇರ್‌ ಇಂಜಿನಿಯರ್‌.

ಕಲಾಸಿಪಾಳ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಪಬ್ಲಿಕ್‌ ಶಾಲೆಯೊಂದರ ಇಮೇಲ್‌ ಐಡಿಗೆ ಜೂ.14ರಂದು ರಾತ್ರಿ 10.15ರ ಸುಮಾರಿನಲ್ಲಿ ಇಮೇಲ್‌ ಸಂದೇಶ ಬಂದಿತ್ತು. ಶಾಲಾ ಪ್ರಾಂಶುಪಾಲರು ಸಂದೇಶ ಗಮನಿಸಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ನಗರದಲ್ಲಿ ದಾಖಲಾಗಿರುವ ಇತರೆ ಹುಸಿಬಾಂಬ್‌ ಕರೆಗಳ ಪ್ರಕರಣಗಳನ್ನು ಉತ್ತರ ವಿಭಾಗದ ಸೈಬರ್‌ ಕ್ರೈಂನ ಸಹಾಯಕ ಪೊಲೀಸ್‌‍ ಆಯುಕ್ತರನ್ನು ಮುಖ್ಯ ತನಿಖಾಧಿಕಾರಿಯಾಗಿ ಮತ್ತು ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಯ ಇನ್‌ಸ್ಪೆಕ್ಟರ್‌ ಅವರನ್ನು ಸಹಾಯಕ ತನಿಖಾಧಿಕಾರಿಯಾಗಿ ಪ್ರಕರಣಗಳನ್ನು ಸೈಬರ್‌ ಕ್ರೈಂಗೆ ವರ್ಗಾಯಿಸಿ ತನಿಖೆ ಕೈಗೊಳ್ಳಲು ನಗರ ಪೊಲೀಸ್‌‍ ಆಯುಕ್ತರು ಸೂಚಿಸಿದ್ದರು.

ತನಿಖೆ ಮುಂದುವರೆಸಿದ್ದ ಸೈಬರ್‌ಕ್ರೈಂ ಪೊಲೀಸರು ಇಮೇಲ್‌ ಐಡಿ ಮೂಲಕ ಬೆದರಿಕೆವೊಡ್ಡಿದ್ದ ಮಹಿಳೆಯನ್ನು ಗುಜರಾತ್‌ ರಾಜ್ಯದ ಅಹಮದಾಬಾದ್‌ ನಗರದ ಕೇಂದ್ರ ಕಾರಾಗೃಹದಿಂದ ಬಾಡಿವಾರಂಟ್‌ ಮೂಲಕ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ, ಈ ಪ್ರಕರಣವೂ ಸೇರಿದಂತೆ ನಗರದ ಇತರೆ 6 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ಆರೋಪಿತೆ ಸಾಫ್ಟ್ ವೇರ್‌ ಇಂಜಿನಿಯರ್‌ ಉದ್ಯೋಗಿಯಾಗಿದ್ದು, ಈಗಾಗಲೇ ಈಕೆ ವಿರುದ್ಧ ಗುಜರಾತ್‌, ಮೈಸೂರು, ತಮಿಳುನಾಡಿನ ಚೆನ್ನೈನಲ್ಲಿಯೂ ಹುಸಿಬಾಂಬ್‌ ಕರೆಗಳ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುತ್ತದೆ.

ಈಕೆ ತನ್ನ ಡಿವೈಎಸ್‌‍ಗಳಿಗೆ ವಿಪಿಎನ್‌ ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದು, ಗೇಟ್‌ಕೋಡ್‌ ಎಂಬ ಅಪ್ಲಿಕೇಷನ್‌ ಮೂಲಕ ವರ್ಚ್ಯೂಯಲ್‌ ಮೊಬೈಲ್‌ ನಂಬರ್‌ಗಳನ್ನು ಪಡೆದುಕೊಂಡು ಸುಮಾರು ಆರೇಳು ವಾಟ್ಸಾಪ್‌ ಖಾತೆಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ತನಿಖೆಯಿಂದ ತಿಳಿದುಬರುತ್ತದೆ.

ಆರೋಪಿತೆಯನ್ನು ತೀವ್ರ ವಿಚಾರಣೆಗೊಳಪಡಿಸಿ ಪುನಃ ಆಕೆಯನ್ನು ಗುಜರಾತ್‌ನ ಅಹಮದಾಬಾದ್‌ ನಗರದ ಕೇಂದ್ರ ಕಾರಾಗೃಹಕ್ಕೆ ವಾಪಸ್‌‍ ಕಳುಹಿಸಲಾಗಿದೆ. ಉತ್ತರ ವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತ ಪವನ್‌, ಇನ್‌ಸ್ಪೆಕ್ಟರ್‌ ಮಂಜು ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

ಮತಗಳ್ಳತನ ಬಗ್ಗೆ ರಾಹುಲ್‌ಗಾಂಧಿಯವರ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ : ಪರಮೇಶ್ವರ್‌

ಬೆಂಗಳೂರು, ನ.6- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಟನ್‌ಗಟ್ಟಲೇ ದಾಖಲಾತಿಗಳನ್ನು ಪ್ರದರ್ಶಿಸಿ ಮತಗಳ್ಳತನ ಬಗ್ಗೆ ಆರೋಪ ಮಾಡಿದ್ದಾರೆ. ಅದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ಗಾಂಧಿ ಕಾಟಚಾರಕ್ಕೆ ಹೇಳಿಕೆ ನೀಡಿಲ್ಲ. ಎಲ್ಲಾ ರೀತಿಯ ದಾಖಲಾತಿಗಳನ್ನು ಬಹಿರಂಗ ಪಡಿಸಿದ್ದಾರೆ. ಮತಗಳ್ಳತನವಾಗಿರುವುದಂತು ನಿಜ ಎಂದರು.

ಚಿತ್ತಾಪುರದಲ್ಲಿ ಆರ್‌ಎಸ್‌‍ಎಸ್‌‍ ಪಥ ಸಂಚಲನಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ ತೆಗೆದುಕೊಳ್ಳುವ ತೀರ್ಮಾನವನ್ನು ಕಾದು ನೋಡುತ್ತಿದ್ದೇವೆ ಎಂದರು.ಕಬ್ಬು ಬೆಳೆಗಾರರು ಪ್ರತಿವರ್ಷ ಬೆಲೆಯ ವಿಚಾರವಾಗಿ ಪ್ರತಿಭಟನೆ ಮಾಡುತ್ತಿರುತ್ತಾರೆ. ಈ ವರ್ಷವೂ ಮಹಾರಾಷ್ಟ್ರದ ಮಾದರಿಯಲ್ಲಿ ದರ ನೀಡಲು ಒತ್ತಾಯಿಸುತ್ತಿದ್ದಾರೆ. ಮಹಾರಾಷ್ಟ್ರ ಕಬ್ಬಿಗೆ ಇಳುವರಿ ಹೆಚ್ಚಿದೆ. ನಮಲ್ಲಿನ ಕಬ್ಬು ಇಳುವರಿ ಆಧರಿಸಿ ದರ ನಿಗದಿ ಪಡಿಸುತ್ತಿದ್ದಾರೆ. ರೈತರೊಂದಿಗೆ ಚರ್ಚಿಸಲು ಸಾಕಷ್ಟು ಪ್ರಯತ್ನಗಳಾಗಿವೆ. ಆದರೆ ಸಂಧಾನ ವಿಫಲವಾಗಿದೆ. ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ನಿನ್ನೆ ಸ್ಥಳಕ್ಕೆ ತೆರಳಿದ್ದರು. ಇಂದು ಸಂಪುಟದಲ್ಲಿ ಚರ್ಚಿಸಲಾಗುತ್ತಿದೆ ಎಂದರು.

ರೈತರೊಂದಿಗೆ ಸಂಯಮದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಳೆದ ಬಾರಿ ವಿಧಾನಸೌಧದ ಮುಂದೆ ನಡೆದ ಪ್ರತಿಭಟನೆಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಈ ಬಾರಿ ಅಂತಹ ಬೆಳವಣಿಗೆಗೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಸೂಚಿಸಲಾಗಿದೆ. ಸಂಪುಟದಲ್ಲಿ ಬೆಲೆ ಪರಿಷ್ಕರಣೆಯ ಬಗ್ಗೆ ಚರ್ಚಿಸುವುದಾಗಿಯೂ ಹೇಳಿದರು.

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ಮನೆಯಲ್ಲಿ ಊಟ ಮಾಡಲಿದ್ದು, ನಾವೆಲ್ಲರೂ ಜೊತೆಗೂಡಲಿದ್ದೇವೆ. ಅಲ್ಲಿ ಬೇರೆ ರಾಜಕೀಯ ಚರ್ಚೆಗಳಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.ಸಿದ್ದರಾಮಯ್ಯ ಅವರು 5 ಬಾರಿ ತುಮಕೂರಿಗೆ ಆಗಮಿಸಿದ್ದಾರೆ ಅದರಲ್ಲಿ 3 ಬಾರಿ ರಾಜಣ್ಣ ಅವರ ಮನೆಯಲ್ಲಿ ಊಟ ಮಾಡಿದ್ದಾರೆ. ನಾಳೆ ಅವರ ಮನೆಗೆ ಭೇಟಿ ನೀಡುವ ಬಗ್ಗೆಯೂ ಎಲ್ಲಾ ಮುಖಂಡರ ಅಭಿಪ್ರಾಯವನ್ನು ಸಿದ್ದರಾಮಯ್ಯ ಕೇಳಿದ್ದರು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಭೇಟಿಗೂ, ರಾಜಕೀಯಕ್ಕೂ ಸಂಬಂಧವಿಲ್ಲ. ಜಲಾನಯನ ಇಲಾಖೆ ಸಂಬಂಧಪಟ್ಟಂತ ನ್ಯಾಯಾಲಯದ ಪ್ರಕರಣ ಕುರಿತು ಚರ್ಚಿಸಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿಯೇ ಹೋಗಿದ್ದಾರೆ. ಅದರಲ್ಲಿಯೂ ರಾಜಕೀಯ ಹುಡುಕುವುದು ಸರಿಯಲ್ಲ ಎಂದರು.

ತಮಗೆ ಅವಶ್ಯಕತೆ ಇದ್ದರೆ ಮಾತ್ರ ದೆಹಲಿ ಭೇಟಿ ನೀಡುತ್ತೇನೆ. ಅನಗತ್ಯವಾಗಿ ಹೋಗುವುದಿಲ್ಲ. ನಮ ಇಲಾಖೆಗೆ ವಿಶೇಷ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುವುದಾದರೆ ಹೋಗುವುದು ಸಹಜ. 5 ಸಾವಿರ ಪೊಲೀಸರ ಮನೆಗಳಿಗೆ ಅನುದಾನ ನೀಡುವಂತೆ ಕೇಂದ್ರ ಗೃಹ ಸಚಿವರಲ್ಲಿ ಈ ಮೊದಲು ಮನವಿ ಮಾಡಿದ್ದೆ. ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಅಕ್ಬರ್‌ ರಸ್ತೆಯಲ್ಲಿ ನಮಗೆ ಯಾವುದೇ ಕೆಲಸಗಳಿಲ್ಲ ಎಂದು ತಿಳಿಸಿದರು.

ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸಿರುವ ಎಸ್‌‍ಐಟಿ ಅಧಿಕಾರಿಗಳು ವರದಿ ನೀಡಲು ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿದೆ. ಅಕ್ಟೋಬರ್‌ ತಿಂಗಳ ಕೊನೆಯಲ್ಲಿ ಅಥವಾ ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ವರದಿ ನೀಡಬೇಕಿತ್ತು. ಕೆಲವು ಮಾದರಿಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಮತ್ತು ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದೆ. ಅಲ್ಲಿನ ವರದಿ ಬರಬೇಕು. ಅದನ್ನು ವಿಶ್ಲೇಷಿಸಿ ವರದಿಯಲ್ಲಿ ಸೇರಿಸಬೇಕಿದೆ. ಅದಕ್ಕಾಗಿ ಸಮಯವಕಾಶ ಕೇಳಿದ್ದಾರೆ. ಬಹುತೇಕ ಎಲ್ಲವೂ ಮುಗಿದಿದೆ ಎಂದರು.

ಒಳ ಮೀಸಲಾತಿಯ ಸಂಬಂಧಪಟ್ಟಂತೆ ಸಚಿವ ಸಂಪುಟಕ್ಕೆ ಕರಡು ಮಸೂದೆಯನ್ನು ಮಂಡಿಸಿದರೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದರು. ಬೆಂಗಳೂರು ನಗರದಲ್ಲಿ ಶಾಸಕರ ಬೇಡಿಕೆ ಆಧಾರಿತವಾಗಿ ಪೊಲೀಸ್‌‍ ಅಧಿಕಾರಿಗಳ ವರ್ಗಾವಣೆಯನ್ನು ತಡೆ ಹಿಡಿದಿದ್ದಾರೆ. ಉಳಿದಂತೆ ರಾಜ್ಯಾದ್ಯಂತ ಎಲ್ಲಾ ಅಧಿಕಾರಿಗಳ ವರ್ಗಾವಣೆ ಪೂರ್ಣಗೊಂಡಿದೆ ಎಂದರು.

ಕಾಂಗ್ರೆಸ್‌‍ ಭವನ ನಿರ್ಮಾಣಕ್ಕಾಗಿ ನಿಗದಿ ಪಡಿಸಿದ ಜಮೀನಿಗೆ ಜಿಲ್ಲಾ ನ್ಯಾಯಾಲಯದಲ್ಲಿ ತಡೆಯಾಜ್ಞೆ ದೊರೆತಿದೆ. ಆದರೆ ಅರ್ಜಿದಾರರ ಬಳಿ ಜಮೀನಿನ ಒಡೆತನಕ್ಕೆ ಸಂಬಧಪಟ್ಟಂತೆ ಯಾವುದೇ ದಾಖಲಾತಿಗಳಿಲ್ಲ. ತಡೆಯಾಜ್ಞೆ ತೆರವಿಗೆ ಸಂಬಂಧಪಟ್ಟಂತೆ ಮೇಲನವಿಗೆ ಸಲ್ಲಿಸಲಾಗುವುದು. ಕಟ್ಟಡ ನಿರ್ಮಾಣಕ್ಕೂ ಚಾಲನೆ ನೀಡಲಾಗುವುದು ಎಂದರು.

ಕನ್ನಡದ ಖ್ಯಾತ ಖಳನಟ ಹರೀಶ್ ರಾಯ್ ಇನ್ನಿಲ್ಲ…!

ಬೆಂಗಳೂರು, ನ.6– ಕೆಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲಿ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್‌ವುಡ್‌ ನ ಖ್ಯಾತ ಖಳನಟ ಹರೀಶ್‌ ರಾಯ್‌ ಅವರು ಇಂದು ನಿಧನರಾಗಿದ್ದಾರೆ.

ಇತ್ತೀಚೆಗೆ ತಾವು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡುವಂತೆ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಹರೀಶ್‌ ರಾಯ್‌ ಅವರ ಮನವಿಗೆ ಸ್ಪಂದಿಸಿದ ಆ್ಯಕ್ಷನ್‌ ಪ್ರಿನ್‌್ಸ ಧ್ರುವಸರ್ಜಾ, ಸುದೀಪ್‌, ಶಿವರಾಜ್‌ಕುಮಾರ್‌ ಸೇರಿದಂತೆ ಹಲವರು ಕಲಾವಿದರು ಆರ್ಥಿಕ ಸಹಾಯ ಮಾಡಿದ್ದರೂ ಕೂಡ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.

ಓಂ, ಜೋಡಿಹಕ್ಕೆ, ಕೆಜಿಎಫ್‌ 1, ಕೆಜಿಎಫ್‌ 2 ಸೇರಿದಂತೆ ಹಲವಾರು ಚಿತ್ರಗಳಲ್ಲಿ ಹರೀಶ್‌ ರಾಯ್‌ ಅವರು ತಮ ಅಭಿಮಾನದಿಂದ ಗಮನ ಸೆಳೆದಿದ್ದರು. ಅವರ ನಿಧನಕ್ಕೆ ಚಂದನವನದ ಹಲವು ಕಲಾವಿದರು, ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

ವಂಚನೆ ಪ್ರಕರಣ : ನಟಿ ಶಿಲ್ಪಾ ಶೆಟ್ಟಿ ಸಂಸ್ಥೆಯ ಉದ್ಯೋಗಿಗಳಿಗೆ ಸಮನ್ಸ್

ಮುಂಬೈ, ನ.6- ಅರವತ್ತು ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ(Shilpa Shetty) ಮತ್ತು ಅವರ ಪತಿ ರಾಜ್‌ ಕುಂದ್ರಾ ಒಡೆತನದ ಬೆಸ್ಟ್‌ ಡೀಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಾಲ್ವರು ಉದ್ಯೋಗಿಗಳಿಗೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಸಮನ್ಸ್ ಜಾರಿ ಮಾಡಿದೆ.

ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿ ದೀಪಕ್‌ ಕೊಠಾರಿ ಅವರಿಗೆ ಸುಮಾರು 60 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ದಂಪತಿಗಳು ಪೊಲೀಸ್‌‍ ಪ್ರಕರಣ ಎದುರಿಸುತ್ತಿದ್ದಾರೆ.ನಾಲ್ವರು ಉದ್ಯೋಗಿಗಳಲ್ಲಿ ಒಬ್ಬರು ಕಳೆದ ವಾರ ಇಒಡಬ್ಲ್ಯೂನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಮತ್ತು ಅಗತ್ಯವಿದ್ದರೆ ಅವರನ್ನು ಮತ್ತೆ ಪ್ರಶ್ನಿಸಬಹುದು. ಇತರ ಮೂವರು ಉದ್ಯೋಗಿಗಳ ಹೇಳಿಕೆಗಳನ್ನು ಮುಂದಿನ ದಿನಗಳಲ್ಲಿ ದಾಖಲಿಸಲಾಗುವುದು ಎಂದು ತಿಳಿದುಬಂದಿದೆ.

ಆ ಸಮಯದಲ್ಲಿ ಈ ಉದ್ಯೋಗಿಗಳು ರಾಜ್‌ ಕುಂದ್ರಾ ಅವರ ಕಂಪನಿಯಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಹಿರಿಯ ಇಒಡಬ್ಲ್ಯೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕುಂದ್ರಾ ಹೇಳಿಕೊಂಡಿರುವಂತೆ, ಕಚೇರಿ ಪೀಠೋಪಕರಣಗಳಿಗೆ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ವಿಚಾರಣೆಯ ಉದ್ದೇಶವಾಗಿದೆ. ಇದಲ್ಲದೆ, ಇಒಡಬ್ಲ್ಯೂ ಉದ್ಯೋಗಿಗಳಿಗೆ ಅವರ ಸಂಬಳವನ್ನು ಹೇಗೆ ಪಾವತಿಸಲಾಗಿದೆ ಎಂದು ತಿಳಿಯಲು ಬಯಸುತ್ತದೆ – ಕಂಪನಿಯ ಗಳಿಕೆಯ ಮೂಲಕ ಅಥವಾ ಇತರ ಮೂಲಗಳಿಂದ.ಈ ಉದ್ಯೋಗಿಗಳನ್ನು ಪ್ರಶ್ನಿಸುವ ಮೂಲಕ ಹಣದ ಹಾದಿಯ ಚುಕ್ಕೆಗಳನ್ನು ಸಂಪರ್ಕಿಸಲು ಇಒಡಬ್ಲ್ಯೂ ಪ್ರಯತ್ನಿಸುತ್ತಿದೆ.

ಕುಂದ್ರಾ ಅವರ ಕಂಪನಿಯು ಹೂಡಿಕೆಯ ಹೆಸರಿನಲ್ಲಿ 60 ಕೋಟಿ ರೂ. ಸಾಲವನ್ನು ತೆಗೆದುಕೊಳ್ಳುವುದನ್ನು ಸಮರ್ಥಿಸಲು ಸಾಕಷ್ಟು ಆದೇಶಗಳನ್ನು ಹೊಂದಿದೆಯೇ ಎಂದು ತನಿಖಾ ತಂಡವು ನಿರ್ಧರಿಸಲು ಪ್ರಯತ್ನಿಸುತ್ತಿದೆ ಎಂದು ಹಿರಿಯ ಅಧಿಕಾರಿ ಹೇಳಿದರು.
ಕುಂದ್ರಾ ಅವರ ಕಂಪನಿಗೆ ಉತ್ಪನ್ನಗಳನ್ನು ಜಾಹೀರಾತು ಮಾಡಿದ ಕಂಪನಿಗಳೊಂದಿಗೆ ಸಂಬಂಧಿಸಿದ ಉತ್ಪನ್ನ ಪೂರೈಕೆದಾರರು ಮತ್ತು ವ್ಯಕ್ತಿಗಳನ್ನು ಶೀಘ್ರದಲ್ಲೇ ಪ್ರಶ್ನಿಸುತ್ತದೆ.

ಪ್ರಶ್ನೋತ್ತರ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅಗತ್ಯವಿದ್ದರೆ, ಕುಂದ್ರಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕರೆಸಲಾಗುತ್ತದೆ.ಅಕ್ಟೋಬರ್‌ ಆರಂಭದಲ್ಲಿ ವಿಚಾರಣೆ ನಡೆಸಿದಾಗ, ಉದ್ಯಮಿ ಕುಂದ್ರಾ ಅವರು ತಮ್ಮ ಕಂಪನಿಯು ವಿದ್ಯುತ್‌ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ವ್ಯಾಪಾರ ಮಾಡಿದೆ ಮತ್ತು 2016 ರಲ್ಲಿ ಕೇಂದ್ರವು ಜಾರಿಗೆ ತಂದ ನೋಟು ರದ್ದತಿಯ ನಂತರ ಗಮನಾರ್ಹ ನಷ್ಟವನ್ನು ಎದುರಿಸಿದೆ ಎಂದು ಹೇಳಿದ್ದರು.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಂಪನಿಯು ಸಾಲ ಪಡೆದ ಹಣವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ.ಈಗ ಕಾರ್ಯನಿರ್ವಹಿಸದ ಮನೆ ಶಾಪಿಂಗ್‌ ಮತ್ತು ಆನ್‌ಲೈನ್‌‍ ಚಿಲ್ಲರೆ ವೇದಿಕೆಯಾದ ಬೆಸ್ಟ್‌ ಡೀಲ್‌ ಟಿವಿ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕರಾಗಿದ್ದ ಕುಂದ್ರಾ ಮತ್ತು ಶೆಟ್ಟಿ ವಿರುದ್ಧ ಆಗಸ್ಟ್‌ 14 ರಂದು ಮುಂಬೈನಲ್ಲಿ ಉದ್ಯಮಿ ದೀಪಕ್‌ ಕೊಥಾರಿ ಅವರನ್ನು ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಸುಮಾರು 60 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಯಿತು.

2015 ಮತ್ತು 2023 ರ ನಡುವೆ, ದಂಪತಿಗಳು ಬೆಸ್ಟ್‌ ಡೀಲ್‌ ಟಿವಿ ಪ್ರೈವೇಟ್‌ ಲಿಮಿಟೆಡ್‌ನಲ್ಲಿ 60 ಕೋಟಿ ರೂ. ಹೂಡಿಕೆ ಮಾಡಲು ತಮ್ಮನ್ನು ಪ್ರೇರೇಪಿಸಿದರು, ಆದರೆ ಆ ಮೊತ್ತವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಕೊಥಾರಿ ಆರೋಪಿಸಿದ್ದಾರೆ.ಕುಂದ್ರಾ ಅವರು ನಟರಾದ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಅವರಿಗೆ 60 ಕೋಟಿ ರೂ.ಗಳಲ್ಲಿ ಒಂದು ಭಾಗವನ್ನು ಶುಲ್ಕವಾಗಿ ಪಾವತಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

Rahul Gandhi ಆರೋಪ ನಿರಾಕರಿಸಿದ ಬ್ರೇಜಿಲ್‌ ಮಾಡಲ್‌

ನವದೆಹಲಿ, ನ.6- ರಾಹುಲ್‌ಗಾಂಧಿ (Rahul Gandhi) ಅವರು ಮಾಡಿದ್ದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನದ ಆರೋಪವನ್ನು ಸ್ವತಃ ಬ್ರೆಜಿಲಿಯನ್‌ ಮಾಡೆಲ್‌ಅಲ್ಲಗಳೆದಿದ್ದಾರೆ.

ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬ್ರೆಜಿಲ್‌ ರೂಪದರ್ಶಿ 22 ಕಡೆ ಮತ ಚಲಾಯಿಸಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ಬ್ರೆಜಿಲ್‌ ಮಾಡೆಲ್‌ ಲಾರಿಸಾ ಪ್ರತಿಕ್ರಿಯೆ ನೀಡಿ ರಾಹುಲ್‌ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.

ರಾಹುಲ್‌ ನನ್ನ ಹಳೆಯ ಫೋಟೊ ಬಳಸಿ ಸೀಮಾ ಮತ್ತು ಸರಸ್ವತಿ ಎಂದು ಕರೆಯುತ್ತಿದ್ದಾರೆ. ನಾನು ಬ್ರೆಜಿಲಿಯನ್‌ ಇದು ರಾಜಕೀಯ ನಾಟಕದಂತೆ ಕಾಣುತ್ತಿದೆ. ಮಾಧ್ಯಮಗಳು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಚುನಾವಣೆಯಲ್ಲಿ ತನ್ನ ಹೆಸರು ಕೇಳಿಬಂದಿರುವುದಕ್ಕೆ ಲಾರಿಸಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಫೋಟೊ ನನ್ನ ಆರಂಭಿಕ ಮಾಡೆಲಿಂಗ್‌ ದಿನಗಳ ಹಳೆಯ ಸ್ಟಾಕ್‌ ಫೋಟೊ. ನಾನೀಗ ಮಾಡೆಲ್‌ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾರಾದ್ರೂ ಗಂಟೆಗೆ 20 ವೋಟ್‌ ಹಾಕೋಕೆ ಸಾಧ್ಯವಾ ಎಂದು ಬಿಜೆಪಿ ಪ್ರಶ್ನೆ ಭಾರತದ ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಫೋಟೊವನ್ನು ಸ್ಟಾಕ್‌ ಇಮೇಜ್‌ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಲಾಗಿದೆ.

ನಾನು ಎಂದಿಗೂ ಭಾರತಕ್ಕೆ ಹೋಗಿಲ್ಲ. ನಾನು ಬ್ರೆಜಿಲಿಯನ್‌ ಡಿಜಿಟಲ್‌ ಇನ್‌ಫ್ಲುಯೆನ್ಸರ್‌ ಮತ್ತು ಕೇಶ ವಿನ್ಯಾಸಕಿ. ನಾನು ಭಾರತೀಯ ಜನರನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ : ಇಂದು ಮೊದಲ ಹಂತದ ಮತದಾನ

ಪಾಟ್ನಾ, ನ. 6: ಬಿಹಾರ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ ಆರಂಭಗೊಂಡಿದ್ದು, ಮತದಾನದ ಹಬ್ಬಕ್ಕೆ ಮತದಾರರಿಂದ ಭಾರಿ ಉತ್ಸಾಹ ಕಂಡುಬಂದಿದೆ. ಇದರೊಂದಿಗೆ ಬಿಹಾರದ ರಾಜಕೀಯವು ನಿರ್ಣಾಯಕ ತಿರುವು ತಲುಪಿದೆ. ಇಂದು, ಮೊದಲ ಹಂತದ ಮತದಾನದಲ್ಲಿ, 18 ಜಿಲ್ಲೆಗಳಾದ್ಯಂತ 121 ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಈ ಹಂತವು ರಾಜ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವುದಲ್ಲದೆ, ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಎರಡಕ್ಕೂ ಅಗ್ನಿಪರೀಕ್ಷೆ ಎಂದೇ ಬಿಂಬಿಸಲಾಗುತ್ತಿದೆ.ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಮತದಾನ ನಡೆಯುತ್ತಿರುವುದರಿಂದ ಆಡಳಿತವು ಪ್ರತಿ ಮತಗಟ್ಟೆಯಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿ, ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಈ ಸ್ಥಾನಗಳಲ್ಲಿ ಪ್ರತಿ ಸ್ಥಾನಕ್ಕೆ ಸರಾಸರಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಮುಜಫರ್‌ಪುರ ಮತ್ತು ಕುಧ್ನಿಯಲ್ಲಿ ಗರಿಷ್ಠ 20 ಅಭ್ಯರ್ಥಿಗಳು ಮತ್ತು ಭೋರೆ, ಪರ್ಬಟ್ಟಾ, ಅಲೌಲಿಯಲ್ಲಿ ಕನಿಷ್ಠ 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಮೊದಲ ಹಂತದಲ್ಲಿ ಒಟ್ಟು 45,341 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಬೂತ್‌ನಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.

ಪ್ರಧಾನ ಕಚೇರಿಯಿಂದ ನೇರ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವಂತೆ ಎಲ್ಲಾ ಬೂತ್‌ಗಳಲ್ಲಿ ವೆಬ್‌ಕಾಸ್ಟಿಂಗ್‌‍ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.ಈ ಬಾರಿ, ಮೊದಲ ಹಂತದಲ್ಲಿ ಹಲವಾರು ಪ್ರಮುಖ ಸ್ಪರ್ಧೆಗಳು ನಡೆಯಲಿವೆ. 25 ಸ್ಥಾನಗಳಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನೇರ ಸ್ಪರ್ಧೆ ಇದೆ.

12 ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌‍ ಸ್ಪರ್ಧಿಸಿದರೆ, 34 ಸ್ಥಾನಗಳಲ್ಲಿ ಜೆಡಿಯು ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ. 11 ಸ್ಥಾನಗಳಲ್ಲಿ ಜೆಡಿಯು ವಿರುದ್ಧ ಕಾಂಗ್ರೆಸ್‌‍ ಸ್ಪರ್ಧಿಸುತ್ತಿದೆ, ಮತ್ತು 14 ಸ್ಥಾನಗಳಲ್ಲಿ ಎಲ್‌ಜೆಪಿ (ಆರ್) ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ, ಈ ಪೈಕಿ 12 ಸ್ಥಾನಗಳಲ್ಲಿ ನೇರ ಸ್ಪರ್ಧೆಗಳಿವೆ.

ಸಿಪಿಐ-ಎಂಎಲ್‌ ಏಳು ಸ್ಥಾನಗಳಲ್ಲಿ ಜೆಡಿಯು, ಐದು ಸ್ಥಾನಗಳಲ್ಲಿ ಬಿಜೆಪಿ ಮತ್ತು ಎರಡು ಸ್ಥಾನಗಳಲ್ಲಿ ಎಲ್‌ಜೆಪಿ (ಆರ್‌) ವಿರುದ್ಧ ಸ್ಪರ್ಧಿಸಲಿದೆ. ವಿಐಪಿ ಪಕ್ಷವು ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅದರಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಮತ್ತು ಒಂದು ಸ್ಥಾನ ಜೆಡಿಯು ವಿರುದ್ಧ ಸ್ಪರ್ಧಿಸುತ್ತಿದೆ. ಸಿಪಿಐ(ಎಂ) ಮತ್ತು ಸಿಪಿಐ ಕೂಡ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಸ್ಪರ್ಧೆಯನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಿದೆ.

ಇಂದು ಬಿಹಾರದಲ್ಲಿ ಪ್ರಜಾಪ್ರಭುತ್ವದ ಆಚರಣೆಯ ಮೊದಲ ಹಂತವಾಗಿದೆ. ವಿಧಾನಸಭಾ ಚುನಾವಣೆಯ ಈ ಹಂತದಲ್ಲಿ ಎಲ್ಲಾ ಮತದಾರರು ಪೂರ್ಣ ಉತ್ಸಾಹದಿಂದ ಮತ ಚಲಾಯಿಸಬೇಕೆಂದು ನಾನು ಕೋರುತ್ತೇನೆ. ಈ ಸಂದರ್ಭದಲ್ಲಿ, ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ರಾಜ್ಯದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ನನ್ನ ವಿಶೇಷ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಎಕ್‌್ಸ ಮಾಡಿದ್ದಾರೆ.

ಮೋದಿ ಪೋಸ್ಟ್‌ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಮತದಾನಕ್ಕಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲಾ ಬೂತ್‌ಗಳಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಕೆಲಸಕ್ಕಾಗಿ ಸುಮಾರು ನಾಲ್ಕೂವರೆ ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಇದರಲ್ಲಿ ಕೇಂದ್ರ ಪಡೆಗಳ 1500 ಕಂಪನಿಗಳು ಸೇರಿವೆ. ಇದಲ್ಲದೆ, 60 ಸಾವಿರಕ್ಕೂ ಹೆಚ್ಚು ಬಿಹಾರ ಪೊಲೀಸ್‌‍ ಸಿಬ್ಬಂದಿ-ಅಧಿಕಾರಿಗಳು, 30 ಸಾವಿರ ಬಿಹಾರ ವಿಶೇಷ ಸಶಸ್ತ್ರ ಪೊಲೀಸರು, 22 ಸಾವಿರ ಗೃಹರಕ್ಷಕರು, 20 ಸಾವಿರ ತರಬೇತಿ ಕಾನ್‌ಸ್ಟೆಬಲ್‌ಗಳು ಮತ್ತು ಸುಮಾರು 1.5 ಲಕ್ಷ ಕಾವಲುಗಾರರನ್ನು ಸಹ ಚುನಾವಣಾ ಕೆಲಸಕ್ಕಾಗಿ ನಿಯೋಜಿಸಲಾಗಿದೆ.

ಚುನಾವಣೆಯ ಸಮಯದಲ್ಲಾಗುವ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಬಿಹಾರ ಪೊಲೀಸರು ಕ್ಯೂಆರ್‌ಟಿ ತಂಡವನ್ನು ಸಹ ರಚಿಸಿದ್ದಾರೆ. ಈ ತಂಡವು ಚುನಾವಣೆ ಸಮಯದಲ್ಲಿ ಬಂದೊದಗುವ ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುತ್ತಾರೆ. ಈ ತಂಡದಲ್ಲಿ ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ಕಾರ್ಯಪಡೆ ಯ ಕಮಾಂಡೋಗಳು ಕೂಡ ಇರಲಿದ್ದಾರೆ.ಪ್ರತಿ ಜಿಲ್ಲೆಯಲ್ಲಿಯೂ ತರಬೇತಿ ಪಡೆದ ಪೊಲೀಸರು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ಸೈನಿಕರನ್ನು ಒಳಗೊಂಡ ವಿಐಪಿ ಭದ್ರತಾ ಪೂಲ್‌ ಅನ್ನು ರಚಿಸಲಾಗಿದೆ.

ಡಯಾರಾ ಪ್ರದೇಶದಲ್ಲಿ ಎಸ್‌‍ಟಿಎಫ್‌‍ ಜೊತೆಗೆ ಅಶ್ವಾರೋಹಿ ದಳವನ್ನು ನಿಯೋಜಿಸಲಾಗಿದೆ.ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಶಸ್ತ್ರಾಸ್ತ್ರ ಕಾಯ್ದೆಯಡಿ 1 ಸಾವಿರ ಜನರನ್ನು ಸುಮಾರು 800 ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದೆ. ಚುನಾವಣೆ ಮುಗಿದ ಬಳಿಕ ತನಿಖೆ ನಡೆಸಲಾಗುತ್ತದೆ.

ಮನೆ ತೊರೆದ ಪತ್ನಿ, ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

ಮುಳಬಾಗಿಲು,ನ.6– ಕೌಟುಂಬಿಕ ಕಲಹದಿಂದ ಐದು ವರ್ಷದ ಮಗಳನ್ನು ಕೊಂದು ತಂದೆ ಆತಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾಹಕ ಘಟನೆ ತಾಲೂಕಿನ ಮುಡಿಯನೂರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.ಮುಡಿಯನೂರು ಗ್ರಾಮದ ಲೋಕೇಶ್‌ (37) ಎಂಬುವರೇ ಮಗಳು ನಿಹಾರಿಕಾ(5)ಳನ್ನು ಕೊಂದು ಆತಹತ್ಯೆಗೆ ಶರಣಾದ ತಂದೆ.

ಲೋಕೇಶ್‌ ಅವರು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್‌ ಆಗಿದ್ದು ಕೊಳಿಫಾರಂವೊಂದರ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.ಇತ್ತೀಚೆಗೆ ಕೌಟುಂಬಿಕ ಕಲಹದಿಂದಾಗಿ ಪತ್ನಿ ನವ್ಯಶ್ರೀ ಮನೆ ತೊರೆದು ಹೋಗಿದ್ದರು. ಇದಲ್ಲದೆ ಕೆಲವರ ಚುಚ್ಚುಮಾತಿನಿಂದ ಅವಮಾನ ಸಹಿಸದೆ ಮನನೊಂದಿದ್ದ ಲೋಕೇಶ್‌ ಅವರು ಸಾಯಲು ನಿರ್ಧರಿಸಿ ಕಳೆದ ರಾತ್ರಿ ಮಗಳು ನಿಹಾರಿಕಾಳನ್ನು ನೀರಿನ ಡ್ರಮ್‌ನಲ್ಲಿ ಮುಳಿಗಿಸಿ, ಉಸಿರುಗಟ್ಟಿಸಿ ಕೊಲೆಗೈದು ನಂತರ ಶವವನ್ನು ಕಾರಿನಲ್ಲಿಟ್ಟಿದ್ದಾರೆ.

ನಂತರ ಲೋಕೇಶ್‌ ಮನೆ ಸಮೀಪದಲ್ಲಿರುವ ಕಾಲೇಜಿನ ಬಳಿ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಕೆಳಗಿಳಿಸಿದ್ದಾರೆ.

ಲೋಕೇಶ್‌ ಅವರಿಗೆ ಒಬ್ಬಳು ಮಗಳಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದಾಗ ಪೊಲೀಸರು ಅವರ ಮನೆ ಬಳಿ ಹೋಗಿ ಮಗಳಿಗಾಗಿ ಹುಡುಕಾಟ ನಡೆಸಿದಾಗ ಕಾರಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಅಪ್ಪ, ಮಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಎಸ್‌‍ಟಿ ಇಳಿಕೆಯ ಹೊರತಾಗಿಯೂ ಅಕ್ಟೋಬರ್‌ನಲ್ಲಿ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಗಣನೀಯ ಹೆಚ್ಚಳ

ಬೆಂಗಳೂರು, ನ.6-ಕೇಂದ್ರ ಸರ್ಕಾರದ ಜೆಎಸ್‌‍ಟಿ ದರ ಇಳಿಕೆಯ ನಂತರವೂ ರಾಜ್ಯದ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಅಕ್ಟೋಬರ್‌ನಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಏಳು ತಿಂಗಳಲ್ಲೇ ಅಧಿಕ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ.

ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ, ಕಳೆದ ಅಕ್ಟೋಬರ್‌ನಲ್ಲಿ ಒಟ್ಟು 9498.67 ಕೋಟಿ ರೂ.ನಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದು ಏಪ್ರಿಲ್‌ನಿಂದೀಚೆಗೆ ಮಾಸಿಕವಾರು ತೆರಿಗೆೆ ಸಂಗ್ರಹದಲ್ಲಿ ಅಧಿಕವಾಗಿದೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿಗೆ ಹೋಲಿಸಿದರೂ 387.25 ಕೋಟಿ ರೂ.ನಷ್ಟು ಹೆಚ್ಚಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ 7291.54 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ, 2104.53 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 102.60 ಕೋಟಿ ರೂ ವೃತ್ತಿ ತೆರಿಗೆ ಸಂಗ್ರಹವಾಗಿದೆ. ವೃತ್ತಿ ತೆರಿಗೆ ಹೊರತು ಪಡಿಸಿ ಉಳಿದೆರಡು ತೆರಿಗೆಗಳಲ್ಲಿ ಸೆಪ್ಟೆಂಬರ್‌ ತಿಂಗಳಿಗಿಂತ ಹೆಚ್ಚಾಗಿದೆ. ಒಟ್ಟಾರೆ ಮೂರು ತೆರಿಗೆಗಳ ಸಂಗ್ರಹವನ್ನು ಗಣನೆಗೆ ತೆಗೆದುಕೊಂಡರೆ ಸೆಪ್ಟೆಂಬರ್‌ಗಿಂತ 607.04 ಕೋಟಿ ರೂ.ನಷ್ಟು ಅಕ್ಟೋಬರ್‌ ತಿಂಗಳಲ್ಲಿ ಅಧಿಕವಾಗಿದೆ.

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್‌ ಅಂತ್ಯದ ವರೆಗೆ ಒಟ್ಟು 62694.87 ಕೋಟಿ ರೂ. ನಷ್ಟು ತೆರಿಗೆಗಳ ಸಂಗ್ರಹವಾಗಿದೆ. ಇದರಲ್ಲಿ 46423.66 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ, 15379.71 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 891.50 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗಿದೆ.

2024-25ನೇ ಆರ್ಥಿಕ ಸಾಲಿನಲ್ಲಿ ಒಟ್ಟು 102585.52 ಕೋಟಿ ರೂ. ತೆರಿಗೆಗಳ ಸಂಗ್ರಹವಾಗಿತ್ತು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇನ್ನೂ 5 ತಿಂಗಳು ಬಾಕಿ ಇದ್ದು, ವರ್ಷಾಂತ್ಯಕ್ಕೆ ಕಳೆದ ವರ್ಷದ ದಾಖಲೆ ಮುರಿಯುವ ಸಾಧ್ಯತೆಗಳಿವೆ.

ಬಿಹಾರ ಚುನಾವಣೆ : ಹಾಡಿನ ಮೂಲಕ ಮತದಾನಕ್ಕೆ ಪ್ರೇರಿಪಿಸುತ್ತಿರುವ ಐಎಎಸ್‌‍ ಅಧಿಕಾರಿ

ಹಾಜಿಪುರ, ನ. 6 (ಪಿಟಿಐ) ವೈಶಾಲಿ ಜನರೇ ನನ್ನ ಕರೆಯನ್ನು ಆಲಿಸಿ, ದಯವಿಟ್ಟು ಮೊದಲು ನಿಮ ಮತ ಚಲಾಯಿಸಿ ನಂತರ ಉಪಹಾರ ಸೇವಿಸಿ ಎಂದು ಸ್ವರಬದ್ಧವಾಗಿ ಹಾಡುವ ಮೂಲಕ ಜನರನ್ನು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವ ಮೂಲಕ ಯುವ ಐಎಎಸ್‌‍ ಅಧಿಕಾರಿಯೊಬ್ಬರು ಜನರ ಮನಗೆದ್ದಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ವೈಶಾಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ವರ್ಷಾ ಸಿಂಗ್‌ ಅವರು ಸ್ಥಳೀಯ ಬಜ್ಜಿಕಾ ಉಪಭಾಷೆಯಲ್ಲಿ ಹಾಡುವ ಮೂಲಕ ತಮ್ಮ ಜಿಲ್ಲೆಯ ಮತದಾರರನ್ನು ಹೊರಬಂದು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸುವಂತೆ ಒತ್ತಾಯಿಸುತ್ತಿದ್ದಾರೆ.

ವೈಶಾಲಿ ಕಿ ಜನತಾ ಸುನಿಹಾ ಹಮ್ರೋ ಪುಕಾರ್‌, ಪಹಿಲೇ ಕರಿಹಾ ಮತ್‌ಡಾನ್‌ ಫಿರ್‌ ಜಲ್ಪನ್‌ ಕರಿಹಾ (ವೈಶಾಲಿಯ ಜನರೇ, ನನ್ನ ಕರೆಯನ್ನು ಆಲಿಸಿ, ದಯವಿಟ್ಟು ಮೊದಲು ನಿಮ್ಮ ಮತ ಚಲಾಯಿಸಿ, ನಂತರ ಉಪಾಹಾರ ಸೇವಿಸಿ), ಎಂದು 2016 ರ ಬ್ಯಾಚ್‌ನ ಬಿಹಾರ ಕೇಡರ್‌ನ ಐಎಎಸ್‌‍ ಅಧಿಕಾರಿಯೊಬ್ಬರು ತಾವು ರಚಿಸಿದ ಹಾಡಿನ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೈಶಾಲಿಯಲ್ಲಿ ಮತದಾನ ಶೇ. 58 ರಷ್ಟಿತ್ತು. ನನ್ನನ್ನು ವೈಶಾಲಿಗೆ ವರ್ಗಾಯಿಸಿದಾಗ, ಈ ಚುನಾವಣೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಪ್ರೇರೇಪಿಸಲು ನಾನು ನಿರ್ಧರಿಸಿದೆ. ಇದು ಪ್ರಜಾಪ್ರಭುತ್ವದ ಹಬ್ಬ… ಜನರು ತಮ್ಮ ಮತಗಳ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು.ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಿಶೇಷವಾಗಿ ಮಹಿಳೆಯರನ್ನು ಮತದಾನದತ್ತ ಆಕರ್ಷಿಸಲು ಒಬ್ಬ ಸಮುದಾಯದ ಭಾಗವಾಗಿರುವ ಅವರ ಭಾವನೆಯನ್ನು ಮತ್ತು ಮತದಾರರ ಭಾಗವಹಿಸುವಿಕೆಯ ಮೂಲಕ ಅರ್ಥಪೂರ್ಣ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯವಿತ್ತು. ಇದನ್ನು ಅವರ ಸ್ಥಳೀಯ ಭಾಷೆಯಲ್ಲಿ ಹಾಡುವ ಮೂಲಕ ಮಾಡಬಹುದು ಎಂದು ನಾನು ಅರಿತುಕೊಂಡೆ. ಆದ್ದರಿಂದ ನಾನು ಅದನ್ನು ಮಾಡಿದೆ ಎಂದು ಅವರು ಹೇಳಿದರು.

ನನಗೆ ಹಾಡುವುದರಲ್ಲಿ ಯಾವುದೇ ಔಪಚಾರಿಕ ತರಬೇತಿ ಇಲ್ಲ, ಆದರೆ ನಾನು ಚೆನ್ನಾಗಿ ಹಾಡುತ್ತೇನೆ. ನನ್ನ ಉಪಕ್ರಮಕ್ಕಾಗಿ ನನ್ನನ್ನು ಪ್ರಶಂಸಿಸಲಾಗಿದೆ. ಸ್ಥಳೀಯ ಭಾಷೆಯಲ್ಲಿ ಹಾಡುಗಳ ಮೂಲಕ ಜನರು ಮತ ಚಲಾಯಿಸಲು ಪ್ರೋತ್ಸಾಹಿಸುವುದು ಮತದಾರರಿಗೆ ಶಕ್ತಿ ತುಂಬುತ್ತದೆ ಎಂದು ನಾನು ಅರಿತುಕೊಂಡೆ. ಈ ಬಾರಿ ವೈಶಾಲಿಯಲ್ಲಿ ಮತದಾನದ ಶೇಕಡಾವಾರು ಹೆಚ್ಚಾಗುತ್ತದೆ ಎಂದು ನನಗೆ ಸಾಕಷ್ಟು ಭರವಸೆ ಇದೆ ಎಂದು ಅವರು ಹೇಳಿದರು.

ವೈಶಾಲಿಯ ಐತಿಹಾಸಿಕ ಮಹತ್ವದ ಕುರಿತು ಮಾತನಾಡುತ್ತಾ, ಸಿಂಗ್‌ ಈ ಪ್ರದೇಶವನ್ನು ಕ್ರಿ.ಪೂ 600 ರಲ್ಲಿ ಪ್ರಜಾಪ್ರಭುತ್ವದ ಆರಂಭಿಕ ರೂಪವು ಹುಟ್ಟಿಕೊಂಡ ಸ್ಥಳವೆಂದು ಕರೆಯಲಾಗುತ್ತದೆ ಎಂದು ಹೇಳಿದರು.ವೈಶಾಲಿಯ ಬಗ್ಗೆ ಅನೇಕ ಉಲ್ಲೇಖಗಳು ಜೈನ ಧರ್ಮ ಮತ್ತು ಬೌದ್ಧ ಧರ್ಮ ಎರಡರ ಪ್ರಾಚೀನ ಗ್ರಂಥಗಳಲ್ಲಿ ಕಂಡುಬರುತ್ತವೆ, ಇದು ವೈಶಾಲಿ ಮತ್ತು ಪ್ರಾಚೀನ ಭಾರತದ ಇತರ ಮಹಾ ಜನಪದಗಳ (ಮಹಾ ಸಾಮ್ರಾಜ್ಯಗಳು) ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಸಂರಕ್ಷಿಸುತ್ತದೆ.

ಈ ಗ್ರಂಥಗಳ ಪ್ರಕಾರ, ವೈಶಾಲಿಯನ್ನು ಕ್ರಿ.ಪೂ 6 ನೇ ಶತಮಾನದ ವೇಳೆಗೆ ಗಣರಾಜ್ಯವಾಗಿ ಸ್ಥಾಪಿಸಲಾಯಿತು, ಕ್ರಿ.ಪೂ 563 ರಲ್ಲಿ ಗೌತಮ ಬುದ್ಧನ ಜನನಕ್ಕೂ ಮುಂಚೆಯೇ, ಇದು ಸರಿಯಾಗಿ ಚುನಾಯಿತವಾದ ಸಭೆ ಮತ್ತು ದಕ್ಷ ಆಡಳಿತವನ್ನು ಹೊಂದಿರುವ ವಿಶ್ವದ ಮೊದಲ ಗಣರಾಜ್ಯವಾಗಿದೆ. ಕೊನೆಯ ಜೈನ ತೀರ್ಥಂಕರನಾದ ಭಗವಾನ್‌ ಮಹಾವೀರನ ಜನ್ಮಸ್ಥಳವಾಗಿ ವೈಶಾಲಿ ವಿಶೇಷ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಗೌತಮ ಬುದ್ಧನು ತನ್ನ ಕೊನೆಯ ಧರ್ಮೋಪದೇಶವನ್ನು ನೀಡಿದ ಮತ್ತು ತನ್ನ ಪರಿನಿರ್ವಾಣವನ್ನು (ಅಂತಿಮ ಜ್ಞಾನೋದಯ) ಘೋಷಿಸಿದ ಸ್ಥಳವೂ ಇದಾಗಿದೆ ಎಂದು ಸಿಂಗ್‌ ಹೇಳಿದರು.

ಫಿಲಿಪೈನ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ : ಚಂಡಮಾರುತಕ್ಕೆ 241 ಜನ ಬಲಿ

ಮನಿಲಾ, ನ. 6-ಫಿಲಿಪೈನ್ಸ್‌ನಲ್ಲಿ ಈ ವರ್ಷ ದೇಶವನ್ನು ಅಪ್ಪಳಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪದಲ್ಲಿ ಕಲೇಗಿ ಚಂಡಮಾರುತವು ಮಧ್ಯ ಪ್ರಾಂತ್ಯಗಳಲ್ಲಿ ಕನಿಷ್ಠ 241 ಜನರನ್ನು ಬಲಿ ತೆಗೆದುಕೊಂಡು ಕಾಣೆಯಾಗಿದೆ.ಇದರ ನಡುವೆ ಫಿಲಿಪೈನ್‌್ಸನ ಅಧ್ಯಕ್ಷ ಫರ್ಡಿನಾಂಡ್‌ ಮಾರ್ಕೋಸ್‌‍ ಜೂನಿಯರ್‌ ಇಂದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಉಷ್ಣವಲಯದ ಚಂಡಮಾರುತವು ದಕ್ಷಿಣ ಚೀನಾ ಸಮುದ್ರಕ್ಕೆ ಬೀಸುವ ಮೊದಲು ಕಲೇಗಿ ಕನಿಷ್ಠ 114 ಜನರನ್ನು ಬಲಿ ತೆಗೆದುಕೊಂಡಿತು, ಅವರಲ್ಲಿ ಹೆಚ್ಚಿನವರು ಹಠಾತ್‌ ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿದರು ಮತ್ತು 127 ಜನರು ಕಾಣೆಯಾದರು. ುಮಾರು 2 ಮಿಲಿಯನ್‌ ಜನರ ಮೇಲೆ ಪರಿಣಾಮ ಬೀರಿದ ಚಂಡಮಾರುತದ ದಾಳಿಯು 560,000 ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂತರಿಸಿತು, ಇದರಲ್ಲಿ ಸುಮಾರು 450,000 ಜನರನ್ನು ತುರ್ತು ಆಶ್ರಯಗಳಿಗೆ ಸ್ಥಳಾಂತರಿಸಲಾಯಿತು.

ಚಂಡಮಾರುತದ ಪರಿಣಾಮಗಳನ್ನು ನಿರ್ಣಯಿಸಲು ವಿಪತ್ತು-ಪ್ರತಿಕ್ರಿಯೆ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾರ್ಕೋಸ್‌‍ ಮಾಡಿದ ತುರ್ತು ಘೋಷಣೆಯು ಸರ್ಕಾರಕ್ಕೆ ತುರ್ತು ನಿಧಿಗಳನ್ನು ವೇಗವಾಗಿ ವಿತರಿಸಲು ಮತ್ತು ಆಹಾರ ಸಂಗ್ರಹಣೆ ಮತ್ತು ಅಧಿಕ ಬೆಲೆ ನಿಗದಿಯನ್ನು ತಡೆಯಲು ಅನುವು ಮಾಡಿಕೊಡುತ್ತದೆ.