Friday, November 7, 2025
Home Blog Page 33

ಪ್ರತಿಕೂಲ ಹವಾಮಾನ ಲೆಕ್ಕಿಸದೆ ಇಂದು ಕೂಡ ಶ್ರೀದೇವಿರಮ್ಮನ ಬೆಟ್ಟಕ್ಕೆ ಭಕ್ತರ ದಂಡು

ಚಿಕ್ಕಮಗಳೂರು,ಅ.20- ಮಂಜು ಮುಸುಕಿದ ವಾತಾವರಣ, ತಣ್ಣಗೆ ಬೀಸುತ್ತಿರುವ ಗಾಳಿಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಂದು ಬೆಟ್ಟವೇರಿ ದೇವಿರಮನ ದರ್ಶನ ಪಡೆದು ಪುನೀತರಾದರು.

ನಿನ್ನೆ ಸುಮಾರು 40 ಸಾವಿರ ಜನ ಭಕ್ತರು ದರ್ಶನ ಪಡೆದಿದ್ದರು. ಇಂದು ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ವಾಹನಗಳಲ್ಲಿ ಆಗಮಿಸುವ ಭಕ್ತರಿಗೆ ಪೊಲೀಸರು ಅಡ್ಡ ಹಾಕಿ ತಮ ವಾಹನಗಳನ್ನು ನಗರದಲ್ಲಿಯೇ ಪಾರ್ಕಿಂಗ್‌ ಮಾಡಿ ಸರ್ಕಾರಿ ಬಸ್ಸಿನಲ್ಲಿ ಮಲ್ಲೇನಹಳ್ಳಿಗೆ ಪ್ರಯಾಣಿಸಲು ಸೂಚಿಸುತ್ತಿದ್ದರು. ಬೈಕ್‌ನಲ್ಲಿ ಬರುವಂತಹ ಭಕ್ತರಿಗೆ ಮಲ್ಲೇನಹಳ್ಳಿಗೆ ಬಿಡಲಾಗುತ್ತಿತ್ತು.

ನಗರದ ಐಡಿಎಸ್‌‍ಜಿ ಕಾಲೇಜ್‌ ಆವರಣ ಹಾಗೂ ಡಿ ಎ ಸಿ ಜಿ ಪಾಲಿಟೆಕ್ನಿಕ್‌ ಆವರಣ ಹಾಗೂ ಎಂ ಜಿ ರಸ್ತೆ, ಇಂದಿರಾಗಾಂಧಿ ರಸ್ತೆ, ರತ್ನಗಿರಿ ರಸ್ತೆ, ರಾಮನಹಳ್ಳಿ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ತಮ ವಾಹನಗಳನ್ನು ಭಕ್ತರು ಪಾರ್ಕಿಂಗ್‌ ಮಾಡಿ ಸರ್ಕಾರಿ ಬಸ್‌‍ ಹತ್ತಿ ಮಲ್ಲೇನಹಳ್ಳಿಗೆ ತಲುಪಿದರು ಭಕ್ತರಿಗೆ ನೂಕು ನುಗ್ಗಲು ಆಗದಂತೆ ಜಿಲ್ಲಾ ಪೊಲೀಸ್‌‍ ಮುಖ್ಯ ಅಧಿಕಾರಿ ವಿಕ್ರಮ್‌ ಅಮಟೆ ನೇತೃತ್ವದಲ್ಲಿ ಪೊಲೀಸ್‌‍ ತಂಡ ಅವಿರತವಾಗಿ ಶ್ರಮಿಸಿದೆ.

ರಾತ್ರಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಬೆಟ್ಟ ಹತ್ತಲು ಭಕ್ತರಿಗೆ ಕಠಿಣವಾಗುತ್ತಿದ್ದು ಸಂದರ್ಭದಲ್ಲಿ ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ನಿಂತು ಸ್ನೇಹಮಯ ವಾತಾವರಣದಲ್ಲಿ ಸಹಕರಿಸಿದ್ದು ಗಮನ ಸೆಳೆಯಿತು. ಬೆಟ್ಟದ ಮೇಲೆ ನೆಲೆಸಿರುವ ಶ್ರೀ ದೇವರಮನ ಸನ್ನಿಧಿಯಲ್ಲಿ ಇಂದು ವಿಶೇಷ ಪೂಜೆ , ನೆರವೇರಿತು ಬಂದ ಭಕ್ತರಿಗೆ ಹೂವು, ಕುಂಕುಮ ಪ್ರಸಾದ ವಿನಿಯೋಗ ಮಾಡಲಾಯಿತು.

ಇಂದು ಮಧ್ಯಾಹ್ನದವರೆಗೆ ಬೆಟ್ಟ ಹತ್ತಲು ಹಾಗೂ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು ನಾಳೆ ಬೆಳಿಗ್ಗೆ 8 ಗಂಟೆಗೆ ದೇವಾಲಯದಲ್ಲಿ ದೇವಿಗೆ ಉಡುಗೆ ಪೂಜೆ ನೆರವೇರಲಿದೆ ಸಂಜೆ 6.30ಕ್ಕೆ ಬಟ್ಟೆ ಬೆಣ್ಣೆ ಸುಡುವುದು ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗವಿದೆ.

ಅ.22ರಂದು ಬೆಳಿಗ್ಗೆ 8 ಗಂಟೆಗೆ ದೇವಿರಮನವರಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಗಳೊಂದಿಗೆ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ನೆರವೇರಲಿದೆ. ಅ. 23ರಂದು ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ ಹರಕೆ ಒಪ್ಪಿಸುವುದು ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.

ಮಂಡ್ಯ : ಮೂರು ಬಸ್‌‍ಗಳ ನಡುವೆ ಭೀಕರ ಅಪಘಾತ, ಇಬ್ಬರು ಮಹಿಳೆಯರು ಸಾವು

ಮಂಡ್ಯ,ಅ.20-ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆ ಬಸ್‌‍ ಗಳ ನಡುವೆ ಭೀಕರ ಸರಣಿ ಅಪಘತ ಸಂಭವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಸಂಜೆ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಕರಿಯನಪುರ ಮಹಾದೇವ ಎಂಬುವವರ ಪತ್ನಿ ನಾಗಮ(60) ಹಾಗೂ ಹಲಗಪುರ ಗ್ರಾಮದ ಬಸವಣ್ಣ ಎಂಬುವವರ ಪತ್ನಿ ರತ್ನಮ(46) ಸಾವನ್ನಪ್ಪಿದ್ದು, ಎಪ್ಪತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇವರಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಜಿಲ್ಲೆಯ ವಿವಿಧೆಡೆ ಆಸ್ಪತ್ರೆಗಳಿಗೆ ಹಾಗೂ ಉಳಿದ ಗಾಯಾಳುಗಳನ್ನು ಕೊಳ್ಳೇಗಾಲದ ಆಸ್ಪತ್ರೆಗಳಲ್ಲಿ ಚಿಕೆತ್ಸೆ ಕೊಡಿಸಿ ಮೈಸೂರಿಗೆ ರವಾನಿಸಲಾಗಿದೆ. ಇವರ ಪೈಕಿ ಇಬ್ಬರು ಬಸ್‌‍ ಚಾಲಕರು ಸೇರಿ ಎಂಟು ಜನರ ಸ್ಥಿತಿ ಚಿಂತಜನಕವಾಗಿದೆ ಎನ್ನಲಾಗಿದೆ.

ಘಟನೆ ವಿವರ: ನಿನ್ನೆ ಸಂಜೆ ಬಾಚನಹಳ್ಳಿ ಸಮೀಪ ಜೋರು ಮಳೆ ಬರುತ್ತಿದ್ದ ಸಂದರ್ಭದಲ್ಲಿ ಕೊಳ್ಳೆಗಾಲ ಕಡೆಯಿಂದ ಬರುತ್ತಿದ್ದ ಕೆಎಸ್‌‍ಆರ್‌ಟಿಸಿ ಬಸ್‌‍ನ ಚಾಲಕ ರಸ್ತೆಯ ತಿರುವಿನಲ್ಲಿ ಮುಂದೆ ಹೋಗುತ್ತಿದ್ದ ಬೈಕ್‌ ಹಿಂದಿಕ್ಕಲು ಏಕಾಏಕಿ ಮುನ್ನುಗ್ಗಿದಾಗ ಈ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಕೆಎಸ್‌‍ಆರ್‌ಟಿಸಿ ಬಸ್‌‍ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಈ ಬಸ್‌‍ ಹಿಂಬದಿ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್‌‍ ಕೂಡ ಚಾಲಕನ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಸಂಭವಿಸಿ ಅವಘಡ ಸಂಭವಿಸಿದೆ. ಬಸ್‌‍ಗಳ ಸರಣಿ ಅಪಘಾತದ ತೀವ್ರತೆಗೆ ಮೂರು ಬಸ್‌‍ಗಳು ನಜ್ಜುಗುಜ್ಜಾಗಿ ಬಸ್‌‍ ಗಳಲ್ಲಿದ್ದ ಬಹಳಷ್ಟು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯಿಂದ ಬಸ್‌‍ನ ಮೂವರು ಚಾಲಕರು ಗಾಯಗೊಂಡರೇ ಇಬ್ಬರು ಚಾಲಕರ ಸ್ಥಿತಿ ಗಂಭೀರವಾಗಿದೆ.ಬಸ್‌‍ ಗಳ ಅಪಘಾತದಿಂದ ಒಂದು ಗಂಟೆಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ತಾಲೂಕಿನ ಎಲ್ಲಾ ಠಾಣೆಗಳ ಪೊಲೀಸರು ದೌಡಾಯಿಸಿ ವಿವಿಧೆಗಳಿಂದ ಆಂಬ್ಯುಲ್ಸೆ್‌ ಮತ್ತು ರಸ್ತೆ ಮಾರ್ಗದಲ್ಲಿ ಬರುವ ವಾನಗಳಲ್ಲಿ ಗಾಯಾಳು ರೋಗಿಗಳನ್ನು ಪಟ್ಟಣದ ತಾಲೂಕು ಆಸ್ಪತ್ರೆಗೆ ಕಳುಹಿಸಿದರು.

ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡು ಬಸ್‌‍ ಗಳಲ್ಲಿ ಪ್ರಯಾಣ ಮಾಡುತ್ತಿದ್ದವರು ತಮವರೆ ಎಂಬ ವಿಷಯ ತಿಳಿಯಲು ಮುಗಿಬಿದ್ದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್‌ ರವರು ರಜೆಯಲ್ಲಿದ್ದ ತಮ ವೈದ್ಯರ ತಂಡವನ್ನು ತುರ್ತಾಗಿ ಆಸ್ಪತ್ರೆಗೆ ಬರಮಾಡಿಕೊಂಡು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರನ್ನು ಆಂಬ್ಯಲೆನ್ಸ್ ಗಳ ಮೂಲಕ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಆಸ್ಪತ್ರೆಗಳಿಗೆ ಕಳುಹಿಸಲಾಯಿತು.

ಅಪಘಾತ ಸುದ್ದಿ ತಿಳಿದ ತಕ್ಷಣ ರಾಷ್ಟ್ರೀಯ ಹೆದ್ದಾರಿಯ ಸಿಬ್ಬಂದಿಗಳಾದ ರವಿಯವರ ತಂಡ ತಮ ಕ್ರೀನ್‌,ವೈದ್ಯಕೀಯ ಸಿಬ್ಬಂದಿ,ತುರ್ತು ವಾಹನಗಳೊಂದಿಗೆ ಸ್ಥಳಕ್ಕೆ ದಾವಿಸಿ ಸಮಯಕ್ಕೆ ಪೊಲೀಸರೊಂದಿಗೆ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು.ಆಸ್ಪತ್ರೆ ಮುಂದೆ ಜಮಾವಣೆಗೊಂಡಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಮಾನವೀಯತೆ ಮೆರೆದ ವೃತ್ತ ನಿರೀಕ್ಷಕ ಶ್ರೀಧರ್‌:
ಅಪಘಾತದ ತಿವ್ರತೆಗೆ ಘಾಸಿಗೊಂಡು ಗಾಯದಿಂದ ದುಃಖಿಸುತ್ತಾನಿಂತಿದ್ದ ಪುಟ್ಟ ಕಂದಮನನ್ನು ವೃತ್ತ ನಿರೀಕ್ಷಕ ಶ್ರೀಧರ್‌ ಅವರು ಸಂತೈಸಿ ತಮದೇ ವಾಹನದಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.

ಅವರ ಸಮಯಪ್ರಜ್ಞೆ ಹಾಗೂ ಜನರನ್ನು ನಿಯಂತ್ರಿಸಿ ಹೆಚ್ಚಿನ ಸಾವುಗಳು ಸಂಭವಿಸದಂತೆ ತುರ್ತು ಚಿಕೆತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಲು ಶ್ರಮಿಸಿದ ಅವರ ಕಾರ್ಯಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಮಹಾಪೊರವೇ ಹರಿದು ಬಂತು. ಈ ಬಗ್ಗೆ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಂಗ್‌ ಕಾಂಗ್‌ ರನ್‌ವೇಯಿಂದ ಸಮುದ್ರಕ್ಕೆ ಜಾರಿದ ಸರಕು ವಿಮಾನ, ಇಬ್ಬರು ಸಾವು

ಹಾಂಗ್‌ ಕಾಂಗ್‌, ಅ.20-ಸರಕು ವಿಮಾನವೊಂದು ಹಾಂಗ್‌ ಕಾಂಗ್‌ನ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಇಳಿಯುವಾಗ ರನ್‌ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ಯುನೈಟೆಡ್‌ ಅರಬ್‌ ಎಮಿರೇಟ್‌್ಸನ ದುಬೈನಿಂದ ಆಗಮಿಸುತ್ತಿದ್ದ ವಿಮಾನವು ಬೆಳಗಿನ ಜಾವ 3.50 ರ ಸುಮಾರಿಗೆ ಹಾಂಗ್‌ ಕಾಂಗ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಾಂಗ್‌ ಕಾಂಗ್‌ ವಿಮಾನ ನಿಲ್ದಾಣ ಪ್ರಾಧಿಕಾರಸ ಅಧಿಕಾರಿ ತಿಳಿಸಿದ್ದಾರೆ.

ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವಿಮಾನ ನಿಲ್ದಾಣದಲ್ಲಿ ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಆರಂಭಿಕ ವರದಿಗಳು ತಿಳಿಸಿವೆ.

ಏಷ್ಯಾದ ಅತ್ಯಂತ ಜನನಿಬಿಡಿಯಲ್ಲಿ ಒಂದಾದ ಹಾಂಗ್‌ ಕಾಂಗ್‌ ವಿಮಾನ ನಿಲ್ದಾಣದ ಉತ್ತರ ರನ್‌ವೇಯನ್ನು ಪ್ರಸ್ತುತ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಇತರ ಎರಡು ರನ್‌ವೇಗಳು ಕಾರ್ಯನಿರ್ವಹಿಸುತ್ತಲೇ ಇವೆ.

ಬೋಯಿಂಗ್‌ 747 ಸರಕು ವಿಮಾನವು ಟರ್ಕಿಶ್‌ ಏರ್‌ ಕಾರ್ಗೋ ವಾಹಕ ಏರ್‌ಎಸಿಟಿ ವಿಮಾನವಾಗಿದ್ದು, ಎಮಿರೇಟ್‌್ಸಸ್ಕೈಕಾರ್ಗೋಗೆ ಹಾರಾಟ ನಡೆಸುತ್ತಿದ್ದು, ವಿಮಾನ ಸಂಖ್ಯೆ 9788. ಇದು ಅಲ್‌ ಮಕ್ತೌಮ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿತ್ತು ಎಂದು ಗೊತ್ತಾಗಿದೆ.

ಹಾಂಗ್‌ ಕಾಂಗ್‌ನ ನಾಗರಿಕ ವಿಮಾನಯಾನ ಇಲಾಖೆಯು ವಿಮಾನಯಾನ ಸಂಸ್ಥೆ ಮತ್ತು ಅಪಘಾತದಲ್ಲಿ ಭಾಗಿಯಾಗಿರುವ ಇತರರ ವಿರುದ್ದ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ

2029ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಆದರೆ ಝಾನ್ಸಿಯಿಂದ ಮಾತ್ರ : ಉಮಾ ಭಾರತಿ

ಭೋಪಾಲ್‌‍,ಅ.20-ಪಕ್ಷದ ನಾಯಕರು ಹೇಳಿದರೆ 2029 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಾರಿ ಬಂಕಿ ಚೆಂಡು,ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ಆದರೆ ಉತ್ತರ ಪ್ರದೇಶದ ಝಾನ್ಸಿ ಕ್ಷೇತ್ರದಿಂದ ಮಾತ್ರಎಂದು ಷರತ್ತು ಮುಂದಿಟ್ಟಿದ್ದಾರೆ.

ಮಧ್ಯಪ್ರದೇಶದ ಮಾಜಿ ಸಿಎಂ ಬಿಜೆಪಿ ಕೇಂದ್ರ ಮತ್ತು ಸಂಸದೀಯ ನಾಯಕರಿಗೆ ಈ ಕುರಿತ್ತು ಮನವರಿಕೆ ಮಾಡಿದ್ದಾರೆ.ಪಕ್ಷ ಕೇಳಿದರೆ,ನಾನು ಖಂಡಿತವಾಗಿಯೂ 2029 ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ಆದರೆ ಝಾನ್ಸಿಲೋಕಸಭಾ ಸ್ಥಾನದಿಂದ ಮಾತ್ರ ಎಂದು ಈಗಾಗಲೆ ಲಲಿತಪುರದಲ್ಲಿ ಮಾಧ್ಯಮ ಸ್ನೇಹಿತರಿಗೆ ಹೇಳಿದ್ದೇನೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಂವಾದದ ಸಂದರ್ಭದಲ್ಲಿ, ಝಾನ್ಸಿಸೇರಿರುವ ಬುಂದೇಲ್‌ಖಂಡ್‌ತನ್ನ ಭಾವನಾತಕ ಮನೆ ನಾನು ಜನರೊಂದಿಗೆ ಆಳವಾದ ಬಾಂಧವ್ಯವನ್ನು ಹಂಚಿಕೊಳ್ಳುತ್ತೇನೆ. ಪಕ್ಷ ಕೇಳಿದರೆ, ನಾನು ಖಂಡಿತವಾಗಿಯೂ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದರು.

2014 ರ ಲೋಕಸಭಾ ಚುನಾವಣೆಯಲ್ಲಿ ಝಾನ್ಸಿ ಕ್ಷೇತ್ರದಿಂದ ಗೆದ್ದ ಭಾರತಿ, ಈ ವರ್ಷದ ಆಗಸ್ಟ್‌ನಲ್ಲಿ ತಾನು ರಾಜಕೀಯದಿಂದ ದೂರವಿಲ್ಲ ಮತ್ತು ಸೂಕ್ತ ಸಮಯದಲ್ಲಿ ಚುನಾವಣಾ ಕ್ಷೇತ್ರಕ್ಕೆ ಮರಳುತ್ತೇನೆ ಎಂದು ಹೇಳಿದರು.

ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಝಾನ್ಸಿ ಸ್ಥಾನವನ್ನು ಗೆದ್ದಿದೆ. ಈ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿಯ ಅನುರಾಗ್‌ ಶರ್ಮಾ ಪ್ರತಿನಿಧಿಸುತ್ತಿದ್ದಾರೆ, ಅವರು ಸಂಸತ್‌ ಸದಸ್ಯರಾಗಿ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-10-2025)

ನಿತ್ಯ ನೀತಿ : ಒಂದು ಕಾಲವಿತ್ತು ಮೋಸ ಮಾಡದೇ ಬದುಕಬೇಕೆಂದಿತ್ತು. ಆದರೆ ಇಂದು ಮೋಸ ಹೋಗದೇ ಬದುಕುವುದೇ ಸಾಧನೆ ಆಗಿದೆ.

ಪಂಚಾಂಗ : ಸೋಮವಾರ, 20-10-2025
ಶೋಭಕೃತ್‌ನಾಮ ಸಂವತ್ಸರ / ದಕ್ಷಿಣಾಯನ / ಋತು: ಸೌರ ಶರದ್‌ / ಮಾಸ:ಆಶ್ವಯುಜ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಹಸ್ತ / ಯೋಗ: ವೈಧೃತಿ /ಕರಣ: ಚತುಷ್ಪಾದ
ಸೂರ್ಯೋದಯ – ಬೆ.06.11
ಸೂರ್ಯಾಸ್ತ – 5.58
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ
: ಐಷಾರಾಮಿ ಜೀವನ ನಿರ್ವಹಣೆ ಮಾಡುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಿರಿ.
ವೃಷಭ: ವ್ಯವಹಾರದಲ್ಲಿ ಸಣ್ಣಪುಟ್ಟ ನಷ್ಟ ಸಂಭವಿಸಲಿದೆ. ದುರಭ್ಯಾಸಗಳಿಂದ ದೂರವಿರಿ.
ಮಿಥುನ: ಉದ್ಯೋಗದಲ್ಲಿ ಉತ್ತಮ ಹೆಸರು ಗಳಿಸುವ ನಿಮ್ಮ ಪ್ರಯತ್ನಕ್ಕೆ ಶುಭ ಫಲ ದೊರೆಯಲಿದೆ.

ಕಟಕ: ಉದ್ಯಮಿಗಳು ಕೆಲಸಗಾರರೊಂದಿಗೆ ಯಾವುದೇ ಮನಸ್ತಾಪ ಮಾಡಿಕೊಳ್ಳದಿರಿ.
ಸಿಂಹ: ಅನ್ಯರ ಮಾತಿನ ಬಗ್ಗೆ ಅತಿಯಾದ ವಿಶ್ವಾಸ ಬೇಡ.
ಕನ್ಯಾ: ಕೆಲಸಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಅ ಕಾರಿ ಗಳಿಂದ ಸಂದೇಶ ಬರಲಿದೆ.

ತುಲಾ: ನಿಮ್ಮ ಹಾಸ್ಯದಿಂದ ಬೇರೆಯವರಿಗೆ ನೋವುಂಟಾಗದಂತೆ ನೋಡಿಕೊಳ್ಳಿ.
ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ.
ಧನುಸ್ಸು: ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಮಕರ: ವೈದ್ಯವೃತ್ತಿಯಲ್ಲಿರುವವರು ಅ ಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಕುಂಭ: ನಿಮ್ಮ ಆತ್ಮಬಲ, ದೈವಬಲದಿಂದ ಕೆಲಸದಲ್ಲಿ ಯಶಸ್ಸು ದೊರೆಯಲಿದೆ.
ಮೀನ: ಹೂವು, ಹಣ್ಣು ವ್ಯಾಪಾರದಲ್ಲಿ ವಿಶೇಷ ಲಾಭ ದೊರೆಯಲಿದೆ. ತಾಳ್ಮೆಯಿಂದ ಇರಿ.

ಎ-ಖಾತಾ ಸದುಪಯೋಗಕ್ಕೆ ಡಿಸಿಎಂ ಡಿಕೆಶಿ ಕರೆ

ಬೆಂಗಳೂರು, ಅ.19- ನಿಮ ಆಸ್ತಿ ದಾಖಲೆ ಸರಿ ಮಾಡಿಸಿಕೊಳ್ಳಲು ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದ್ದು, ಎಲ್ಲರೂ ಇ ಖಾತಾ ಮಾಡಿಸಿಕೊಳ್ಳಿ. ಸರ್ಕಾರ ಬಿ ಖಾತೆಯಿಂದ ಎ ಖಾತಾಗೆ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿನ ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಭಾನುವಾರ ಹಮಿಕೊಂಡಿದ್ದ ಬೆಂಗಳೂರು ನಡಿಗೆ ಅಭಿಯಾನದ ಅಂಗವಾಗಿ ನಾಗರಿಕರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಸಿಎ ನಿವೇಶನದ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದು, ಸರ್ಕಾರ ಈ ವಿಚಾರದಲ್ಲಿ ಪ್ರತ್ಯೇಕ ನೀತಿ ರೂಪಿಸುತ್ತಿದೆ. ಈ ಹಿಂದೆ ಬಿಡಿಎ ನಿಭಾಯಿಸುತ್ತಿದ್ದ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ಜಿಬಿಎಗೆ ವರ್ಗಾವಣೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಜಿಬಿಎ ನಿಭಾಯಿಸಲಿದ್ದು, ಉಳಿದ ಸಣ್ಣ ಯೋಜನೆಗಳನ್ನು ಪಾಲಿಕೆಗಳು ಮಾಡಲಿವೆ ಎಂದರು.

ಜನರ ಕಲ್ಯಾಣಕ್ಕೆ ಪ್ರತಿ ವರ್ಷ 1 ಲಕ್ಷ ಕೋಟಿ ವೆಚ್ಚ: ಜನರ ಹೊಟ್ಟೆ ತುಂಬಿಸಬೇಕು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಿಸಬೇಕು ಎಂದು ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ವರ್ಷ ಇದಕ್ಕೆ 52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದರ ಜೊತೆಗೆ ರೈತರಿಗೆ ಉಚಿತ ವಿದ್ಯುತ್‌ ನೀಡಲು ನಾವು ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. ಹೀಗೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 1 ಲಕ್ಷ ಕೋಟಿಯಷ್ಟು ಮೀಸಲಿಡುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ನೀವೆಲ್ಲರೂ ಅದರಲ್ಲಿ ಭಾಗವಹಿಸಬೇಕು. ಇದನ್ನು ಎಲ್ಲ ಸಮಾಜದ ಭವಿಷ್ಯಕ್ಕಾಗಿ ಮಾಡುತ್ತಿದ್ದೇವೆ. ನೀವು ಅಗತ್ಯವಾದ ಮಾಹಿತಿ ನೀಡಿ, ಅನಗತ್ಯ ಎನಿಸಿದ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಅವರ ಬಗ್ಗೆ ನೀವು ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ಬೆಂಗಳೂರು ದಕ್ಷಿಣ ಉಸ್ತುವಾರಿ ಸಚಿವರಾಗಿರುವ ಅವರು ಹೆಚ್ಚು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಹಿರಿಯ ನಾಯಕರನ್ನು ಹೊಂದಿರುವುದು ನಿಮ ಭಾಗ್ಯ. ನೀವು 8 ಬಾರಿ ಅವರನ್ನು ಆಯ್ಕೆ ಮಾಡಿದ್ದು, ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಮಗೆ ಮಾರ್ಗದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಪ್ರಶ್ನೋತ್ತರ:
ಬೆಂಗಳೂರು ನಡಿಗೆ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ಜನರ ಅಭಿಪ್ರಾಯ, ಸಲಹೆ, ಅಹವಾಲು ಕೇಳಬೇಕು, ಉತ್ತಮ ಆಡಳಿತ ನೀಡಬೇಕು ಎಂದು ನಾನೇ ಜನರ ಬಳಿಗೆ ತಲುಪುತ್ತಿದ್ದೇನೆ. ಜನರಿಂದಲೂ ಉತ್ತಮ ಸಹಕಾರ ನೀಡುತ್ತಿದ್ದು, ನನಗೂ ಇದು ಹೊಸ ಅನುಭವ ನೀಡಿದೆ. ಜನರ ಅಹವಾಲನ್ನು ಅಧಿಕಾರಿಗಳು ಬಗೆಹರಿಸಲಿದ್ದಾರೆ ಎಂದರು.ಈಜಿಪುರ ಮೇಲ್ಸೇತುವೆ ಯಾವಾಗ ಮುಗಿಯಲಿದೆ ಎಂದು ಕೇಳಿದಾಗ, ಅದು ಆದಷ್ಟು ಬೇಗ ಮುಕ್ತಾಯವಾಗುತ್ತದೆ ಎಂದರು.

ಐಟಿ ಬಿಟಿ ಕಂಪನಿಗಳ ಸಿಇಓಗಳ ಸಭೆ ಯಾವಾಗ ಮಾಡುತ್ತೀರಿ ಎಂದು ಕೇಳಿದಾಗ, ನಾನು ಅವರೊಂದಿಗೆ ಪ್ರತ್ಯೇಕ ಸಭೆ ಮಾಡುವೆ. ಸಚಿವರಾದ ಪ್ರಿಯಾಕ್‌ ಖರ್ಗೆ, ಎಂ.ಬಿ ಪಾಟೀಲ್‌ ಅವರ ಜೊತೆಗೂಡಿ ಚರ್ಚೆ ಮಾಡುತ್ತೇವೆ ಎಂದರು.

ಖಾತಾ ಪರಿವರ್ತನೆಗೆ ಶೇ.5 ಹಣ ಪಾವತಿ ಬಗ್ಗೆ ಕೇಳಿದಾಗ, ಜನರು ತಮ ಆಸ್ತಿ ದಾಖಲೆ ಸರಿ ಮಾಡಿಕೊಳ್ಳಲು ಇದು ದೊಡ್ಡ ಮೊತ್ತವಲ್ಲ. ಖಾತಾ ಪರಿವರ್ತನೆಯಿಂದ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗಲಿದೆ. ಅನೇಕರು ಕಂದಾಯ ನಿವೇಶನ ಖರೀದಿ ಮಾಡಿದ್ದು, ನಾವು ಎಲ್ಲರಿಗೂ ಸಮನಾದ ಸೇವೆ ನೀಡಬೇಕು. ಹೀಗಾಗಿ ಅವರ ಸಹಕಾರ ಬೇಕಾಗಿದೆ.

ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಯಾರೂ ಲಂಚ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.ಆರ್‌ಎಸ್‌‍ಎಸ್‌‍ ನಿರ್ಬಂಧ ವಿಚಾರವಾಗಿ ಕೇಳಿದಾಗ, ಆರ್‌ಎಸ್‌‍ಎಸ್‌‍ ವಿಚಾರದಲ್ಲಿ ನಾವು ಹೊಸ ನಿಯಮ ರೂಪಿಸಿಲ್ಲ. ಬಿಜೆಪಿ ಸರ್ಕಾರದ ಆದೇಶವನ್ನೇ ಹೊರಡಿಸಿದ್ದೇವೆ. 2013ರಲ್ಲಿ ಜಗದೀಶ್‌ ಶೆಟ್ಟರ್‌ ಅವರ ಸರ್ಕಾರದ ಆದೇಶವನ್ನು ಮತ್ತೆ ಜಾರಿಗೊಳಿಸುತ್ತಿದ್ದೇವೆ ಎಂದರು.

ಇಂಡಿಗೋ ವಿಮಾನದಲ್ಲಿ ಆತಂಕ ಸೃಷ್ಟಿಸಿದ ಬಾಂಬ್‌ ಬರಹ

ಬೆಂಗಳೂರು, ಅ. 19 ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದ ವಾಶ್‌ ರೂಮ್‌ನಲ್ಲಿ ಅನಾಮಿಕ ಪ್ರಯಾಣಿಕನೊಬ್ಬ ಬಾಂಬ್‌ ಎಂದು ಬರೆದಿದ್ದ ಘಟನೆ ಇತರ ಪ್ರಯಾಣಿಕರ ಆತಂಕಕ್ಕೆ ಎಡೆಮಾಡಿತ್ತು.

ಮಧ್ಯರಾತ್ರಿ ನಡೆದ ಘಟನೆಯಲ್ಲಿ, ಒಬ್ಬ ಪ್ರಯಾಣಿಕನು ವಿಮಾನದ ಬಾತ್‌ ರೂಮ್‌ನಲ್ಲಿ ಬಾಂಬ್‌‍ ಎಂದು ಪೆನ್‌ನಿಂದ ಬರೆದಿದ್ದಾನೆ. ಈ ಬರಹವನ್ನು ನೋಡಿದ ಇತರ ವಿಮಾನ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪರಿಶೀಲನೆ ಬಳಿಕ ಆತಂಕ ಪಡುವ ಸಂಗತಿಯಿಲ್ಲವೆಂದು ತಿಳಿದ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಮಂಗಳೂರಿನ ಬದಲಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಮಧ್ಯರಾತ್ರಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್‌ ಆಗಿದ್ದು, ಏರ್‌ಪೋರ್ಟ್‌ ಸುರಕ್ಷತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡರು.

168 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಬಳಿಕ ಸಂಪೂರ್ಣ ವಿಮಾನ ಮತ್ತು ಪ್ರಯಾಣಿಕರ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.ಅಪಾವಿಲ್ಲವೆಂದು ತಿಳಿದ ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಹುಚ್ಚಾಟದಿಂದ ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿ, ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿಸಿದ ವ್ಯಕ್ತಿ ಯಾರೆಂದು ಸಧ್ಯಕ್ಕೆ ತಿಳಿದು ಬಂದಿಲ್ಲ. ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸನಾಂಬ ದರ್ಶನ : ಶಿಷ್ಟಾಚಾರ ಪಾಲಿಸದೆ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಆರೋಪ : ಜೆಡಿಎಸ್‌‍ನಿಂದ ಪ್ರತಿಭಟನೆ

ಹಾಸನ, ಅ.19– ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಹಾಸನಾಂಬ ದರ್ಶನಕ್ಕಾಗಿ ಭೇಟಿ ನೀಡಿದ ವೇಳೆಯಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಜೆಡಿಎಸ್‌‍ ಶಾಸಕ ಹೆಚ್‌.ಪಿ.ಸ್ವರೂಪ್‌ ಪ್ರಕಾಶ್‌ ನೇತೃತ್ವದಲ್ಲಿ ಹಾಸನಾಂಬ ಮುಖ್ಯ ದ್ವಾರದ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ವಿರುದ್ಧ ಶಾಸಕ ಸ್ವರೂಪ್‌ ಪ್ರಕಾಶ್‌ ನೇತೃತ್ವದಲ್ಲಿ ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಲಿಂಗೇಶ್‌, ಮುಖಂಡರಾದ ಮಂಜೇಗೌಡ ಹಾಗೂ ಜೆಡಿಎಸ್‌‍ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿನ್ನೆ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ಜೊತೆ ಸ್ಥಳೀಯ ಶಾಸಕ ಸ್ವರೂಪ್‌ ಪ್ರಕಾಶ್‌ ಸೇರಿ ಹತ್ತಕ್ಕೂ ಹೆಚ್ಚು ಶಾಸಕರು ಆಗಮಿಸಿದ್ದರು. ಆಗ ಕುಮಾರಸ್ವಾಮಿ ಅವರನ್ನು ಜಿಲ್ಲಾಧಿಕಾರಿಯವರು ಸ್ವಾಗತಿಲಿಲ್ಲ ಎಂಬ ಆರೋಪ ಮಾಡಿದ್ದಾರೆ.

ಹಾಸನಾಂಬ ದೇವಿ ದರ್ಶನ ಮಾಡಿ ಹೊರ ಬಂದಾಗ ಜಿಲ್ಲಾಡಳಿತ ಗೌರವಾರ್ಪಣೆ ಮಾಡಲಿಲ್ಲ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಬಂದಾಗ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಆಡಳಿತಾಧಿಕಾರಿಗಳು ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಸ್ವರೂಪ್‌ ಪ್ರಕಾಶ್‌, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬಂದಾಗ ಜಿಲ್ಲಾಡಳಿತ ಗೌರವಿಸಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿ ಅವರು ಬಂದಾಗ ಅಗೌರವ ಏಕೆ? ಎಂದು ಪ್ರಶ್ನಿಸಿದರು.

ದೇವಾಲಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕಾರಣ. ಕುಮಾರಸ್ವಾಮಿ ಅವರ ಕೊಡುಗೆಯೂ ಇದೆ. ಬಿಜೆಪಿ-ಜೆಡಿಎಸ್‌‍ ಮೈತ್ರಿ ಸರ್ಕಾರದ ಅವಧಿಯಲ್ಲಿ ಎರಡು ಕೋಟಿ ರೂ. ಅನುದಾನ ಕೊಡಲಾಗಿತ್ತು. ಗೋಪುರ ನಿರ್ಮಿಸಲಾಗಿದೆ. ಜಿಲ್ಲೆಯ ರೈತರ ಮಗನಾದ ಕುಮಾರಸ್ವಾಮಿ ಅವರು ದೇವಾಲಯಕ್ಕೆ ಬಂದಾಗ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ಶಿಷ್ಟಾಚಾರದಂತೆ ಗೌರವ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮ ದರ್ಶನ ಉತ್ತಮವಾಗಿ ನಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆ ಇದೆ. ವಿಜ್ಞಾನ ಕಾಲೇಜಿನ ಕ್ರೀಡಾಂಗಣ ಹಾಳಾಗಿದೆ. ನನ್ನ ಗಮನಕ್ಕೂ ಬಾರದ ರೀತಿಯಲ್ಲಿ ಅಲ್ಲಿ ಆಹಾರ ಮೇಳ ಮಾಡಿ ಹಾಳು ಮಾಡಿದ್ದಾರೆ. ಅದರ ಉದ್ಘಾಟನೆಗೆ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ. ಈ ರೀತಿಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ ಎಂದು ಅವರು ಹೇಳಿದರು.

ದ್ವೇಷದಿಂದ ಮಗಳ ಅಶ್ಲೀಲ ವಿಡಿಯೋ ವೈರಲ್‌ ಮಾಡಿದವರ ವಿರುದ್ಧ ಕ್ರಮಕ್ಕೆ ತಂದೆ ದೂರು

ಮೈಸೂರು, ಅ.19- ಕೆಆರ್‌ನಗರ ತಾಲ್ಲೂಕಿನ ಕಾಂಗ್ರೆಸ್‌‍ ಮುಖಂಡರೊಬ್ಬರ ಅಶ್ಲೀಲ ವಿಡಿಯೋ ವೈರಲ್‌ ಆಗಿದ್ದು, ಸಂತ್ರಸ್ತ ಮಹಿಳೆಯ ತಂದೆ ದೂರು ನೀಡಿ, ಜಮೀನಿನ ವಿವಾದದ ಹಿನ್ನೆಲೆಯಲ್ಲಿ ದ್ವೇಷಕ್ಕಾಗಿ ನಮ ಕುಟುಂಬದ ಘನತೆಗೆ ಧಕ್ಕೆ ತರುವಂತಹ ಹುನ್ನಾರ ನಡೆದಿದೆ ಎಂದು ತಿಳಿಸಿದ್ದಾರೆೆ.

ಸೋಮೇಗೌಡ ಎಂಬುವವರು ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು ತಾವು ವ್ಯವಸಾಯ ಮಾಡಿಕೊಂಡಿದ್ದೇವೆ. ತಮಗೆ ಇಬ್ಬರು ಮಕ್ಕಳಿದ್ದಾರೆ. ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಗೆ ಮೂರು ತಿಂಗಳ ಹಿಂದೆ ಮಗಳ ಮದುವೆ ಮಾಡಿಕೊಡಲಾಗಿದೆ. ಮಗಳು ಅಳಿಯ ಅನೋನ್ಯವಾಗಿದ್ದರು ಎಂದು ತಿಳಿಸಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಮಗಳು ಮನೆಗೆ ಬಂದಿದ್ದಾರೆ. ಅ.16 ರಂದು ಬೆಳಗ್ಗೆ ಸಂಬಂಧಿಯೊಬ್ಬರು ಜಮೀನಿನ ಬಳಿ ಭೇಟಿಯಾದಾಗ ನಿಮ ಮಗಳು ಮತ್ತು ಲೋಹಿತ್‌ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋ, ಮಲ್ಲಿಕಾರ್ಜುನ ಎಂಬುವರ ವಾಟ್ಸಾಪ್‌ಗೆ ಬಂದಿದ್ದು, ಆತ ಅದನ್ನು ನನ್ನ ವಾಟ್ಸಾಪ್‌ ನಂಬರಿಗೆ ಕಳುಹಿಸಿದ್ದಾನೆ.

ಬಳಿಕ ಡಿಲಿಟ್‌ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌‍ ಮುಖಂಡರಾಗಿರುವ ಲೋಹಿತ್‌ ಮತ್ತು ನಮಗೂ ಜಮೀನಿನ ದಾರಿ ವಿಚಾರವಾಗಿ ಪದೇ ಪದೇ ಗಲಾಟೆಯಾಗಿದೆ. ನಿಮ ಕುಟುಂಬಕ್ಕೆ ಒಂದು ಗತಿ ಕಾಣಿಸುತೇನೆ ಎಂದು ಆತ ಹೇಳುತ್ತಿದ್ದ.

ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದ. ಈ ದ್ವೇಷದಿಂದ ನನ್ನ ಮಗಳ ಮತ್ತು ನನ್ನ ಕುಟುಂಬವನ್ನು ಬೀದಿ ಪಾಲು ಮಾಡಲು ಸಂಚು ನಡೆಸಿದ್ದಾನೆ. ಅಶ್ಲೀಲ ವಿಡಿಯೋವನ್ನು ಹರಿ ಬಿಟ್ಟು ಸಂಸಾರಕ್ಕೆ ತೊಂದರೆ ಮಾಡಿರುವ ಲೋಹಿತ್‌ ಅಲಿಯಾಸ್‌‍ ರಾಜೀ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ತಮ ಮಗಳಿಗೆ ನ್ಯಾಯ ಕೊಡಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ನ್ಯಾಮತಿಯ ಎಸ್‌‍ಬಿಐ ಬ್ಯಾಂಕ್‌ ಕಳವು ಪ್ರಕರಣ ಸುಖಾಂತ್ಯ, ಗ್ರಾಹಕರು ನಿರಾಳ

ದಾವಣಗೆರೆ,ಅ.19- ನ್ಯಾಮತಿಯ ಎಸ್‌‍ಬಿಐ ಬ್ಯಾಂಕ್‌ನಲ್ಲಿ ನಡೆದಿದ್ದ 17 ಕೆಜಿ ಚಿನ್ನ ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದ್ದು,ಅಧಿಕಾರಿಗಳು , ಗ್ರಾಹಕರು ನಿರಾಳರಾಗಿದ್ದಾರೆ. ದರೋಡೆಯಾಗಿದ್ದ ಗ್ರಾಹಕರ ಅಡವಿಟ್ಟಿದ್ದ ಬಂಗಾರವನ್ನುಸಂಪೂರ್ಣ ವಶಪಡಿಸಿಕೊಂಡು ಪೊಲೀಸರು ಬ್ಯಾಂಕ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಕಳೆದ ಅಕ್ಟೋಬರ್‌ 2024ರ 28ರಂದು ದಿಪಾವಳಿ ಸಂದರ್ಭದಲ್ಲಿ ನಡೆದಿದ್ದ ಭಾರಿ ಬ್ಯಾಂಕ್‌ ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಸಂಚು ಮಾಡಿ ಎಸ್‌‍ಬಿಐ ಬ್ಯಾಂಕಿನಿಂದ 12.95 ಕೋಟಿ ರೂ. ಮೌಲ್ಯದ 509 ಜನ ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ದರೋಡೆ ಮಾಡಲಾಗಿತ್ತು ಖತರ್ನಾಕ್‌ ಕಳ್ಳರು ಬ್ಯಾಂಕ್‌‍ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಕ್ಯಾಮೆರಾ ಡಿವಿಆರ್‌ ತೆಗೆದುಕೊಂಡು, ಸುಳಿವು ಸಿಗದಂತೆ ಇಡಿ ಬ್ಯಾಂಕ್‌ ತುಂಬೆಲ್ಲಾ ಕಾರದ ಪುಡಿ ಎಸೆದಿದ್ದರು.ಪಕ್ಕಾ ಸಿನಿಮಾ ಶೈಲಿಯಲ್ಲಿ ಭಾರಿ ಮ್ರಮಾಣದದ ಚಿನ್ನ ಕಳುವಾಗಿತ್ತು ಇದರಿಂದ ಗ್ರಾಹಕರು ಅಕ್ಷರಶಃ ಕಂಗಾಲಾಗಿದ್ದರು.

ದಾವಣಗೆರೆ ಪೊಲೀಸರು ಚಲಬಿಡದೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಬಂಗಾರ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಹಿನ್ನಲೆ ಪೊಲೀಸರು ಗ್ರಾಹಕರ ಸಮುಖದಲ್ಲಿ ಎಲ್ಲ ಬಂಗಾರವನ್ನು ಬ್ಯಾಂಕ್‌‍ಗೆ ಹಸ್ತಾಂತರ ಮಾಡಿದ್ದಾರೆ.

ಪೊಲೀಸರು ಹಸ್ತಾಂತರ ಮಾಡುತ್ತಿದ್ದಂತೆ ಸೇರಿದ್ದ ಎಸ್‌‍ಬಿಐ ಗ್ರಾಹಕರು, ಕಳ್ಳತನ ನಡೆದ ದಿನ ತಮ ಕುಟುಂಬದ ಪರಿಸ್ಥಿತಿ ನೆನೆದು ಭಾವುಕರಾಗಿದ್ದಾರೆ. ಈಗ ಬ್ಯಾಂಕ್‌ ಅಧೕಕಾರಿಗಳು ಸಾಲದ ಹಣ ನೀಡಿ ಅಡವಿಟ್ಟ ಚಿನ್ನವನ್ನು ವಾಪಸ್‌‍ ನೀಡಲು ಮುಂದಾಗಿದೆ.