Thursday, November 6, 2025
Home Blog Page 35

ಸಚಿವ ಪ್ರಿಯಾಂಕ್‌ ಖರ್ಗೆಗೆ ಭಾರೀ ಮುಖಭಂಗ : ಚಿತ್ತಾಪುರದಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನ ಹೈಕೋರ್ಟ್‌ ಅನುಮತಿ

ಬೆಂಗಳೂರು,ಅ.19- ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.2ರಂದು ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆಸಲು ಹೈಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆಗೆ ಭಾರೀ ಮುಖಭಂಗವಾಗಿದೆ.

ಇಂದು ಚಿತ್ತಾಪುರದಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆಸಲು ತೀರ್ಮಾನಿಸಿತ್ತು. ಇದೇ ವೇಳೆ ಭೀಮ್‌ ಆರ್ಮಿ ಕೂಡ ನಗರದಲ್ಲಿ ಮತ್ತೊಂದು ಪಥಸಂಚಲನ ನಡೆಸಲು ನಿರ್ಧರಿಸಿತ್ತು. ಹೀಗೆ ಏಕಕಾಲದಲ್ಲಿ ಎರಡು ಸಂಘಟನೆಗಳು ಪಥಸಂಚಲನ ನಡೆಸಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಚಿತ್ತಾಪೂರ ತಾಲೂಕು ತಹಶೀಲ್ದಾರ್‌ ನಾಗಯ್ಯ ಅನುಮತಿ ನಿರಾಕರಿಸಿದ್ದರು.

ತಹಸೀಲ್ದಾರ್‌ ಅವರ ಆದೇಶವನ್ನು ಪ್ರಶ್ನಿಸಿ ಅಶೋಕ್‌ ಎಂಬುವರು ಕಲಬುರಗಿ ಸಂಚಾರಿ ಪೀಠಕ್ಕೆ ತುರ್ತು ಅರ್ಜಿ ವಿಚಾರಣೆ ನಡೆಸಲು ಮೇಲನವಿ ಸಲ್ಲಿಸಿದ್ದರು. ಎರಡು ಕಡೆಯ ವಾದ-ವಿವಾದ ಆಲಿಸಿದ ಕಲಬುರಗಿ ಸಂಚಾರಿ ಪೀಠದ ನ್ಯಾಯಾಧೀಶ ಎ.ಜಿ.ಎಸ್‌‍.ಕಮಲ್‌ ಅವರು ನ.2ರಂದು ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಅನುಮತಿ ನೀಡಿದ್ದಾರೆ. ಆದರೆ ಭಾನುವಾರವೇ ಪಥಸಂಚಲನ ನಡೆಸಬೇಕೆಂಬ ಆರ್‌ಎಸ್‌‍ಎಸ್‌‍ ಮನವಿಯನ್ನು ನ್ಯಾಯಾಲಯ ಸಮತಿಸಲಿಲ್ಲ.

ನ.2ರಂದು ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಅನುಮತಿ ನೀಡಿದ ನ್ಯಾಯಾಲಯ, ಕಾನೂನು ಸುವ್ಯವಸ್ಥೆಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ಧಕ್ಕೆಯಾಗಬಾರದೆಂದು ಅರ್ಜಿದಾರರ ಪರ ವಕೀಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದಕ್ಕೆ ಒಪ್ಪಿಗೆ ಸೂಚಿಸಿದ ಅರ್ಜಿದಾರರ ಪರ ವಕೀಲ ಅರುಣ್‌ ಶ್ಯಾಮ್‌, ರಾಜ್ಯದಲ್ಲಿ ಇದುವರೆಗೂ 250ಕ್ಕೂ ಹೆಚ್ಚು ಪಥಸಂಚಲನ ನಡೆಸಲಾಗಿದೆ. ಎಲ್ಲಿಯೂ ಕೂಡ ಶಾಂತಿಸುವ್ಯವಸ್ಥೆಗೆ ಧಕ್ಕೆ ಬಂದಿಲ್ಲ. ಎಲ್ಲಾ ಕಡೆಯೂ ಶಾಂತಿಯುತವಾಗಿ ನಡೆಸಿದ್ದೇವೆ. ಇಲ್ಲಿಯೂ ಕೂಡ ಅದೇ ರೀತಿ ನಡೆಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟರು.

ಪಥಸಂಚಲನ ನಡೆಸಲು ಹೊಸದಾಗಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕೆಂದು ಆದೇಶ ನೀಡಿದ ನ್ಯಾಯಾಧೀಶರು, ಸಾರ್ವಜನಿಕರ ಹಿತ, ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದರು.

ವಾದ-ಪ್ರತಿವಾದ
ಇದಕ್ಕೂ ಮುನ್ನ ಹೈಕೋರ್ಟ್‌ನಲ್ಲಿ ಕಾವೇರಿದ ವಾದ-ಪ್ರತಿವಾದ ನಡೆಯಿತು. ಆರ್‌ಎಸ್‌‍ಎಸ್‌‍ ಪರವಾಗಿ ಹಿರಿಯ ವಕೀಲ ಅರುಣ್‌ಶ್ಯಾಮ್‌ಹಾಗೂ ಸರ್ಕಾರದ ಪರವಾಗಿ ವಕೀಲ ಶಶಿಕಿರಣ್‌ ಶೆಟ್ಟಿ ಹಾಜರಾಗಿದ್ದರು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಅರುಣ್‌ ಶ್ಯಾಮ್‌ ಅವರು ಚಿತ್ತಾಪುರದಲ್ಲಿ ಭಾನುವಾರ ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆಸಲು ನಾವು ಹಿಂದೆಯೇ ತೀರ್ಮಾನಿಸಿದ್ದೆವು. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಚಿತ್ತಾಪುರ ತಹಸೀಲ್ದಾರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ಮತ್ತು ಪುರಸಭೆ ಅಧಿಕಾರಿಗಳಿಗೂ ಮನವಿಪತ್ರ ಸಲ್ಲಿಸಲಾಗಿತ್ತು.

ಆದರೆ ತಹಸೀಲ್ದಾರ್‌ ಏಕಾಏಕಿ ಅನುಮತಿ ನಿರಾಕರಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದರು. ನಾವು ಯಾರಿಗೂ ತೊಂದರೆಯಾಗದಂತೆ ಪಥಸಂಚಲನ ನಡೆಸುತ್ತೇವೆ. ತಹಸೀಲ್ದಾರ್‌ ಅವರ ಕ್ರಮ ಸಂವಿಧಾನ ವಿರೋಧಿ ಎಂದು ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು.

ಭೀಮ್‌ ಆರ್ಮಿ ಅವರಿಗೆ ಪಥಸಂಚಲನ ನಡೆಸಲು ಅವಕಾಶ ಕೊಡಬೇಡಿ ಎಂದು ಹೇಳುವುದಿಲ್ಲ. ಅನುಮತಿ ಪಡೆದುಕೊಂಡು ಅವರು ನಡೆಸಲಿ. ಇದಕ್ಕೆ ನಮ ಅಭ್ಯಂತರವಿಲ್ಲ. ಆದರೆ ಅನುಮತಿಯನ್ನು ನಿರಾಕರಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ಹಾಜರಾಗಿದ್ದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಚಿತ್ತಾಪುರದಲ್ಲಿ ಏಕಕಾಲಕ್ಕೆ ಆರ್‌ಎಸ್‌‍ಎಸ್‌‍ ಮತ್ತು ಭೀಮ್‌ ಆರ್ಮಿಯವರು ಪಂಥಸಂಚಲನ ನಡೆಸಲು ಮುಂದಾಗಿದ್ದಾರೆ. ಆದರೆ ಏಕಕಾಲಕ್ಕೆ ಎರಡು ಸಂಘಟನೆಗಳು ಒಂದೇ ಮಾರ್ಗದಲ್ಲಿ ಸಾಗಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಹೀಗಾಗಿ ತಹಸೀಲ್ದಾರ್‌ ಅವರು ಅನುಮತಿ ನಿರಾಕರಿಸಿದ್ದಾರೆ. ಅವರ ಕ್ರಮ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಎರಡು ಸಂಘಟನೆಗಳಿಗೆ ಏಕಕಾಲದಲ್ಲಿ ಅನುಮತಿ ನೀಡಿದರೆ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುವುದಿಲ್ಲ. ದಂಡಾಧಿಕಾರಿಗಳಾಗಿರುವ ತಹಸೀಲ್ದಾರ್‌ ಅವರು ತಮಗಿರುವ ವಿವೇಚನೆ ಬಳಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಪಥಸಂಚಲನಕ್ಕೆ ಯಾರು ಅನುಮತಿ ಕೊಡಬೇಕು? ಅನುಮತಿ ನೀಡುವ ಪ್ರಾಧಿಕಾರ ಯಾವುದು? ಈ ಬಗ್ಗೆ ಸ್ಪಷ್ಟವಾಗಿ ನಿಯಮಗಳಿವೆಯೇ? ಎರಡು ಸಂಘಟನೆಗಳು ಬೇರೆ ದಿನ ಪಥಸಂಚಲನ ನಡೆಸಲು ಅವಕಾಶ ನೀಡಬಹುದೇ? ಯಾವ ಕಾರಣಕ್ಕಾಗಿ ಪಥಸಂಚಲನ ನಿರಾಕರಿಸಿದ್ದಾರೆ? ಎಂದು ನ್ಯಾಯಾಧೀಶರು ಎಜೆ ಅವರನ್ನು ಪ್ರಶ್ನಿಸಿದರು.

ಈ ಹಂತದಲ್ಲಿ ಅರುಣ್‌ ಶ್ಯಾಮ್‌ ಅವರು, ಅವರ ಉದ್ದೇಶವೇ ಪಥಸಂಚಲನ ಹಾಳು ಮಾಡುವುದು. ನಾವು 15 ದಿನ ಮುಂಚಿತವಾಗಿಯೇ ಅನುಮತಿ ಕೇಳಿದ್ದೆವು. ಈಗ ಏಕಾಏಕಿ ನಮಗೂ ಅನುಮತಿ ಕೊಡಿ ಎಂದು ಕೇಳುತ್ತಿದ್ದಾರೆ. 250 ಕಡೆ ಪಥಸಂಚಲನ ನಡೆದ ವೇಳೆ ಎಲ್ಲಿಯೂ ಕಾನೂನು ಉಲ್ಲಂಘನೆಯಾಗಿಲ್ಲ. ಆದರೆ ಇಲ್ಲಿ ಮಾತ್ರ ವಿಚಿತ್ರವಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಅಂತಿಮವಾಗಿ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಎರಡು ಸಂಘಟನೆಗಳಿಗೆ ಪಥಸಂಚಲನ ನಡೆಸಲು ಪ್ರತ್ಯೇಕ ಸಮಯ ನಿಗದಿಪಡಿಸಿ ಎಂದು ಜಿಲ್ಲಾಡಳಿತಕ್ಕೆ ನ್ಯಾಯಾಧೀಶರು ಸೂಚನೆ ನೀಡಿದರು.

ಪ್ರಕರಣದ ಹಿನ್ನೆಲೆ
ಚಿತ್ತಾಪೂರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್‌ ಖರ್ಗೆಗೆ ಜೀವಬೆದರಿಕೆ ಹಾಕಿದ್ದನ್ನು ಖಂಡಿಸಿ ನಡೆಸಲಾಗಿದ್ದ ಬಂದ್‌ ಮತ್ತು ಪ್ರತಿಭಟನೆಯ ನಡುವೆ, ಆರ್‌ಎಸ್‌‍ಎಸ್‌‍ ಸಂಘಟನೆಯು ನಡೆಸಲು ಯೋಜಿಸಿದ್ದ ಪಥಸಂಚಲನಕ್ಕೆ ತಾಲೂಕು ಆಡಳಿತ ಅನುಮತಿ ನಿರಾಕರಿಸಿತ್ತು.
ಚಿತ್ತಾಪೂರ ತಾಲೂಕು ತಹಶೀಲ್ದಾರ್‌ ನಾಗಯ್ಯ ಅವರು, ಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ಅನುಮತಿ ನೀಡಿಲ್ಲ ಎಂದು ಹೇಳಿದ್ದರು.
ಆರ್‌ಎಸ್‌‍ಎಸ್‌‍ ಪಥಸಂಚಲನದ ವಿರುದ್ಧವಾಗಿ ಭೀಮ್‌ ಆರ್ಮಿ ಸಂಘಟನೆ ಹಾಗೂ ಭಾರತೀಯ ದಲಿತ ಪ್ಯಾಂಥರ್‌ ಸಂಘದ ಸದಸ್ಯರು ಅದೇ ಮಾರ್ಗವಾಗಿ ಪಥಸಂಚಲನ ಮಾಡಲು ಅನುಮತಿ ಕೋರಿದ್ದರು.

ಭಾನುವಾರ ಎಲ್ಲಾ ಸಂಘಟನೆಗಳು ಒಂದೇ ಮಾರ್ಗದಲ್ಲಿ ಪಥಸಂಚಲನ ನಡೆಸಿದರೆ ಗೊಂದಲ ಉಂಟಾಗಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಂಘಟನೆಗಳಿಗೆ ಪಥಸಂಚಲನ ಮಾಡಲು ಅನುಮತಿ ನೀಡುವುದಿಲ್ಲ ಎಂದು ತಹಶೀಲ್ದಾರ್‌ ನಾಗಯ್ಯ ತಿಳಿಸಿದ್ದರು.

ಗರ್ಭಿಣಿ ಪತ್ನಿಯನ್ನು ಕೊಂದ ಹಂತಕನನ್ನು ಹತ್ಯೆ ಮಾಡಿದ ಪತಿ

ನವದೆಹಲಿ, ಅಕ್ಟೋಬರ್‌ 19 (ಪಿಟಿಐ) ತನ್ನ ಗರ್ಭಿಣಿ ಪತ್ನಿಯನ್ನು ಕೊಂದ ಕೊಲೆಗಾರನನ್ನು ಆಕೆಯ ಪತಿಯೇ ಕೊಚ್ಚಿ ಕೊಂದು ಹಾಕಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ನಬಿ ಕರೀಮ್‌ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯೊಬ್ಬರನ್ನು ಆಕೆಯ ಮಾಜಿ ಲಿವ್‌-ಇನ್‌ ಸಂಗಾತಿ ಇರಿದು ಕೊಂದಿದ್ದ. ನಂತರ ಆಕೆಯ ಪತಿ ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಮಕ್ಕಳ ತಾಯಿ ಶಾಲಿನಿ ಎಂಬುವರನ್ನು ಆಶು ಅಲಿಯಾಸ್‌‍ ಶೈಲೇಂದ್ರ ಎಂಬಾತ ಕೊಲೆ ಮಾಡಿದ್ದ ಆತನನ್ನು ಹುಡುಕಿಕೊಂಡು ಹೋದ ಶಾಲಿನಿ ಅವರ ಪತಿ ಆಕಾಶ್‌ ಭೀಕರವಾಗಿ ಕೊಲೆ ಮಾಡಿದ್ದಾರೆ.

ಹೊಡೆದಾಟದಲ್ಲಿ ಗಾಯಗೊಂಡಿರುವ 23 ವರ್ಷದ ಆಕಾಶ್‌ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪ ಪೊಲೀಸ್‌‍ ಆಯುಕ್ತ (ಕೇಂದ್ರ) ನಿಧಿನ್‌ ವಲ್ಸನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಡರಾತ್ರಿ 10.15 ರ ಸುಮಾರಿಗೆ ಆಕಾಶ್‌ ಮತ್ತು ಶಾಲಿನಿ ಕುತುಬ್‌ ರಸ್ತೆಯಲ್ಲಿ ತನ್ನ ತಾಯಿ ಶೀಲಾಳನ್ನು ಭೇಟಿಯಾಗಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಶು ಇದ್ದಕ್ಕಿದ್ದಂತೆ ಅಲ್ಲಿಗೆ ಬಂದು ಆಕಾಶ್‌ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ, ಎಂದು ಅವರು ಹೇಳಿದರು.ಆಕಾಶ್‌ ಮೊದಲ ಹೊಡೆತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಆಶು ಇ-ರಿಕ್ಷಾದಲ್ಲಿ ಕುಳಿತಿದ್ದ ಶಾಲಿನಿಯ ಕಡೆಗೆ ತಿರುಗಿ, ಆಕೆಗೆ ಹಲವು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕಾಶ್‌ ಅವಳನ್ನು ರಕ್ಷಿಸಲು ಧಾವಿಸಿದನು ಆದರೆ ಅವನಿಗೆ ಕೂಡ ಇರಿದ. ಆದಾಗ್ಯೂ, ಅವನು ಆಶುನನ್ನು ಸೋಲಿಸುವಲ್ಲಿ ಯಶಸ್ವಿಯಾದನು, ಅವನ ಚಾಕುವನ್ನು ಕಸಿದುಕೊಂಡು ಗಲಾಟೆಯ ಸಮಯದಲ್ಲಿ ಅವನನ್ನು ಇರಿದನು ಎಂದು ಡಿಸಿಪಿ ಹೇಳಿದರು.ಶಾಲಿನಿಯ ಸಹೋದರ ರೋಹಿತ್‌ ಮತ್ತು ಕೆಲವು ಸ್ಥಳೀಯ ನಿವಾಸಿಗಳು ಮೂವರನ್ನೂ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಶಾಲಿನಿ ಮತ್ತು ಆಶು ಸತ್ತಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಶಾಲಿನಿ ಸಾಯುವ ಸಮಯದಲ್ಲಿ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕುತುಬ್‌ ರಸ್ತೆಯ ಬಳಿಯ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಶಾಲಿನಿಯ ತಾಯಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಆಗ ಶಾಲಿನಿ ಆಶು ಜೊತೆ ಲಿವ್‌‍-ಇನ್‌ ಸಂಬಂಧ ಹೊಂದಿದ್ದರು. ನಂತರ, ಅವರು ಆಕಾಶ್‌ ಜೊತೆ ರಾಜಿ ಮಾಡಿಕೊಂಡು ಅವನ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ವಾಸಿಸಲು ಮರಳಿದರು ಎಂದು ಡಿಸಿಪಿ ಹೇಳಿದರು.

ಇದು ಆಶು ಅವರನ್ನು ಕೆರಳಿಸಿತು, ಅವರು ಶಾಲಿನಿಯ ಹುಟ್ಟಲಿರುವ ಮಗುವಿನ ತಂದೆ ಎಂದೂ ಹೇಳಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.ಆಶು ನಬಿ ಕರೀಮ್‌ ಪೊಲೀಸ್‌‍ ಠಾಣೆಯಲ್ಲಿ ಪಟ್ಟಿ ಮಾಡಲಾದ ರೌಡಿಶೀಟರ್‌ ಆಗಿದ್ದರು ಮತ್ತು ಹಿಂದಿನ ಕ್ರಿಮಿನಲ್‌ ದಾಖಲೆಗಳನ್ನು ಹೊಂದಿದ್ದರು.

ಆಕಾಶ್‌ ಕೂಡ ಈ ಹಿಂದೆ ಮೂರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.ಶೀಲಾ ಅವರ ದೂರಿನ ಆಧಾರದ ಮೇಲೆ, ನಬಿ ಕರೀಮ್‌ ಪೊಲೀಸ್‌‍ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ () ಸೆಕ್ಷನ್‌ 103-1 (ಕೊಲೆ) ಮತ್ತು 109-1 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಶ್ವ ದಾಖಲೆ ಸೇರಲು ಸಜ್ಜಾಗಿದೆ ರಾಮಮಂದಿರ ದೀಪೋತ್ಸವ

ಅಯೋಧ್ಯ, ಅ.19- ಇಲ್ಲಿನ ರಾಮಮಂದಿರದಲ್ಲಿ ಇಂದಿನಿಂದ ದೀಪೋತ್ಸವ ಆಚರಿಸಲಾಗುತ್ತಿದ್ದು, 26 ಲಕ್ಷಕ್ಕೂ ಹೆಚ್ಚು ದೀಪ ಹಚ್ಚುವ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗುತ್ತಿದೆ. ಶ್ರೀ ರಾಮನ ಆಗಮನವನ್ನು ಗುರುತಿಸುವ ದೀಪೋತ್ಸವವನ್ನು ಇಂದಿನಿಂದ ಆಚರಿಸಲು ಅಯೋಧ್ಯೆ ಸಜ್ಜಾಗಿದೆ.

26 ಲಕ್ಷಕ್ಕೂ ಹೆಚ್ಚು ದೀಪಗಳೊಂದಿಗೆ ಇತಿಹಾಸ ಸೃಷ್ಟಿಸುವ ದೀಪೋತ್ಸವಕ್ಕೆ ಭವ್ಯ ಸಿದ್ಧತೆಗಳು ನಡೆಯುತ್ತಿವೆ.ದಾಖಲೆಯ 26,11,101 ದೀಪಗಳು ರಾಮ್‌ ಕಿ ಪೈದಿ ಮತ್ತು 56 ಘಾಟ್‌ಗಳನ್ನು ಬೆಳಗಿಸಲಿದ್ದು, ಕಣ್ಣುಗಳನ್ನು ಬೆರಗುಗೊಳಿಸುವುದಲ್ಲದೆ, ಶ್ರೀರಾಮನ ಮೇಲಿನ ಭಕ್ತಿಯಿಂದ ಹೃದಯಗಳನ್ನು ತುಂಬುವ ದೈವಿಕ ದೃಶ್ಯ ಸೃಷ್ಟಿಯಾಗಲಿದೆ.

ಈ ದೀಪಗಳ ಕಾಂತಿಯು ಜಾಗತಿಕ ವೇದಿಕೆಯಲ್ಲಿ ಅಯೋಧ್ಯೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ತೋರಿಸುತ್ತದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದಲ್ಲಿ ಆಯೋಜಿಸಲಾದ ದೀಪೋತ್ಸವವು ನಂಬಿಕೆ, ಏಕತೆ ಮತ್ತು ಭಕ್ತಿಯ ಸಂಕೇತವಾಗಿ ನಿಂತಿದೆ.

ಈ ಹಬ್ಬವು ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮದ ಜಾಗತಿಕ ಕೇಂದ್ರವಾಗಿ ಅಯೋಧ್ಯೆಯ ಗುರುತನ್ನು ಬಲಪಡಿಸುತ್ತದೆ.ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸ್ವಯಂಸೇವಕರು 26 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ಹಿಂದಿನ ವರ್ಷದ ದಾಖಲೆಯನ್ನು ಮುರಿಯಲು ತಯಾರಿ ನಡೆಸುತ್ತಿದ್ದಾರೆ.

ಈ ಪ್ರಯತ್ನದಲ್ಲಿ 10,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಇಂದಿನಿಂದ ದೀಪಗಳು ಮತ್ತು ಎಣ್ಣೆಯನ್ನು ಸೇರಿಸಲಾಗುವುದು, ಸಂಜೆ ದೀಪಗಳನ್ನು ಬೆಳಗಿಸಲಾಗುವುದು. ದೀಪಗಳನ್ನು ಯಾವ ಮಾದರಿಯಲ್ಲಿ ಇಡಲಾಗಿದೆ ಎಂಬುದರ ಆಧಾರದ ಮೇಲೆ ಎಣಿಕೆ ಮಾಡಲಾಗುತ್ತಿದೆ.
ಗಿನ್ನೆಸ್‌‍ ವಿಶ್ವ ದಾಖಲೆಗಳ ತೀರ್ಪುಗಾರ ರಿಚರ್ಡ್‌ ಸ್ಟೆನ್ನಿಂಗ್‌ ದಾಖಲೆಯ ಪ್ರಯತ್ನಕ್ಕಾಗಿ ರಚನಾತ್ಮಕ ಪ್ರಕ್ರಿಯೆಯನ್ನು ವಿವರಿಸಿದ್ದಾರೆ, ಇದು ಸಾಮೂಹಿಕ ದೀಪ ಬೆಳಗುವಿಕೆಯನ್ನು ಒಳಗೊಂಡಿರುವ ದೀಪೋತ್ಸವ ಕಾರ್ಯಕ್ರಮಕ್ಕೆ ಹೋಲುತ್ತದೆ. ಈ ಪ್ರಯತ್ನವು ಸ್ಥಳಕ್ಕೆ ಪ್ರವೇಶಿಸುವ ಭಾಗವಹಿಸುವವರನ್ನು ಪತ್ತೆಹಚ್ಚಲು ಕೋಡ್‌ಗಳನ್ನು ಸ್ಕ್ಯಾನ್‌ ಮಾಡುವುದನ್ನು ಒಳಗೊಂಡಿರುತ್ತದೆ.

ಪ್ರದೇಶವನ್ನು ಪ್ರತ್ಯೇಕ ವಲಯಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ಇಬ್ಬರು ಮೇಲ್ವಿಚಾರಕರು ಮೇಲ್ವಿಚಾರಣೆ ಮಾಡುತ್ತಾರೆ, ಅವರು ದೀಪಗಳನ್ನು ಬೆಳಗಿಸುವುದನ್ನು ಮತ್ತು ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಬೆಳಗದ ದೀಪಗಳು ಅಥವಾ ದೋಷಗಳಂತಹ ಯಾವುದೇ ವ್ಯತ್ಯಾಸಗಳನ್ನು ಒಟ್ಟು ಎಣಿಕೆಯಿಂದ ಕಡಿತಗೊಳಿಸಲಾಗುತ್ತದೆ.

ಈ ವರ್ಷದ ಆಚರಣೆಯನ್ನು ನಗರದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವೆಂದು ನಿಸ್ಸಂದೇಹವಾಗಿ ನೆನಪಿಸಿಕೊಳ್ಳಲಾಗುತ್ತದೆ, ಏಕೆಂದರೆ ಪವಿತ್ರ ಭೂಮಿ ಅಯೋಧ್ಯೆ ಲಕ್ಷಾಂತರ ದೀಪಗಳ ಬೆಳಕಿನಿಂದ ಮತ್ತು ಲಕ್ಷಾಂತರ ಹೃದಯಗಳ ಭಕ್ತಿಯಿಂದ ಹೊಳೆಯುತ್ತದೆ.

ಚಿಕ್ಕಮಗಳೂರು : ದೇವಿರಮ್ಮ ಜಾತ್ರಾ ಮಹೋತ್ಸವ, ಮಳೆಯಲ್ಲೂ ಬೆಟ್ಟವೇರಿದ ಭಕ್ತರು

-ಉಮೇಶ್‌ಕುಮಾರ್‌, ಚಿಕ್ಕಮಗಳೂರು
ಚಿಕ್ಕಮಗಳೂರು, ಅ.19– ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ಶ್ರೀ ದೇವಿರಮ್ಮನವರ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆಯಿಂದ ಆರಂಭಗೊಂಡಿತು.

ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಶ್ರೀ ದೇವಿರಮ ಬೆಟ್ಟಕ್ಕೆ ಬರಿಗಾಲಿನಲ್ಲಿ ಭಕ್ತಾದಿಗಳು ಕಡಿದಾದ ದಾರಿಯಲ್ಲಿ ಪ್ರಪಾತಗಳ ಮೈ ಝುಮ್‌ ಎನಿಸುವ ಅಂಕುಡೊಂಕಿನ ಬೆಟ್ಟಗಳ ಮೇಲೆ ಚುಮು ಚುಮು ಚಳಿಯನ್ನು ಆಸ್ವಾದಿಸುತ್ತಾ ಬೆಟ್ಟದ ತುತ್ತತುದಿಯನ್ನೇರುತ್ತಿದ್ದಂತೆ ವಿಸ್ತಾರವಾಗಿ ಕಾಣುವ ಪ್ರಾಕೃತಿಕ ಸೌಂದರ್ಯ ನೋಡಿ ಎಲ್ಲಾ ದಣಿವನ್ನು ಮರೆಸಿ ಸಾರ್ಥಕ ಭಾವನೆಯಿಂದ ದೇವಿಯ ದರ್ಶನ ಪಡೆದರು.

ನಿನ್ನೆ ಇಡೀದಿನ ರಾತ್ರಿ ಮಳೆ ಆರ್ಭಟಿಸಿದ್ದು, ಇಂದು ಬೆಳಿಗ್ಗೆ ಮಳೆ ಬಿಡುವು ನೀಡಿದ್ದು , ಮಂಜು ಕವಿದ ವಾತಾವರಣ ಬೆಟ್ಟದಲ್ಲಿ ನಿರ್ಮಾಣಗೊಂಡಿತ್ತು. ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಚಿಕ್ಕಮಗಳೂರು ನಗರದ ಬಸ್‌‍ ನಿಲ್ದಾಣದಿಂದ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಮಲ್ಲೇನಹಳ್ಳಿ ಗೆ ಭಕ್ತರಿಗಾಗಿ ಬಸ್‌‍ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ವಿವಿಧ ವಾಹನಗಳಲ್ಲಿ ಚಿಕ್ಕಮಗಳೂರು ನಗರದ ಮೂಲಕ ಮಲ್ಲೇನಹಳ್ಳಿಗೆ ಸಾವಿರಾರು ಸಂಖ್ಯೆಯಲ್ಲಿ ತೆರಳಿದರು.

ಚಂದ್ರದೋಣ ಪರ್ವತ ಶ್ರೇಣಿಯ ಶ್ರೀದೇವಿರಮ ದೇವಸ್ಥಾನ 850 ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿ ದಾಪುಗಾಲು ಇಡುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಾಗೆಯೇ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಕೂಡ ನಡೆಯುತ್ತಿವೆ. ಚಾಮುಂಡೇಶ್ವರಿಯು ಉಗ್ರ ಸ್ವರೂಪಿಯಾಗಿದ್ದು, ಮೈಸೂರಿನ ಅಸುರನಾಗಿದ್ದ ಮಹಿಷಾಸುರನ ಮರ್ಧನ ಮಾಡಿ ತನ್ನ ಕೋಧಕ್ಕೆ ಭಕ್ತರು ಸಿಲುಕಬಾರದು ಎಂಬ ಕಾರಣಕ್ಕಾಗಿ ಶಾಂತ ಸ್ವರೂಪವಾಗಲು ಬಯಸಿ ಚಂದ್ರದೋಣ ಪರ್ವತ ಶ್ರೇಣಿಯತ್ತ ಬಂದಿದ್ದರು. ಆ ಸಂದರ್ಭದಲ್ಲಿ ಋಷಿಮುನಿಗಳಾದ ದತ್ತಾತ್ರೇಯ, ಸೀತಾಳಯ್ಯ, ಮುಳ್ಳಯ್ಯನವರು ನೆಲೆಸಿದ್ದು, ಆಗ ತನಗೆ ಸ್ವಲ್ಪ ದಿನ ಇಲ್ಲಿ ನೆಲೆಸಲು ಅವಕಾಶ ಮಾಡಿಕೊಡಲು ಕೇಳಿಕೊಂಡಾಗ ನೀನು ಸ್ತ್ರೀ ಆಗಿರುವುದರಿಂದ ಆ ಬೆಟ್ಟದಲ್ಲಿ ನೆಲೆಸು ಎಂದು ಜಾಗ ತೋರಿಸಿದರು ಆ ಜಾಗವೇ ಈಗ ಶ್ರೀ ದೇವಿರಮನ ಬೆಟ್ಟ ಎಂದು ಪ್ರಸಿದ್ಧಿ ಪಡೆದಿದೆ. ಎಂಬ ಐತಿಹಾಸಿಕ ಹಿನ್ನೆಲೆ ಒಂದಿದ್ದು ಬೆಟ್ಟವನ್ನು ಕಂಡ ದೇವಿಯು ತಾನು ನೆಲಸಲು ಪ್ರಶಸ್ತ ಸ್ಥಳವೆಂದು ಅರಿತು ನೆಲೆ ನಿಂತಳು.

ಈ ಹಿಂದೆ ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಿಂದಲೇ ಪ್ರತೀ ನರಕ ಚತುರ್ದಶಿ ದಿನದಂದು ಚಿಕ್ಕಮಗಳೂರಿನ ದೇವಿರಮನ ಬೆಟ್ಟದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮ ನೋಡಿ ನಂತರ ಹಬ್ಬವನ್ನು ಆಚರಣೆ ಮಾಡುತ್ತಿದ್ದರು ಎಂಬ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈಗಲೂ ಕೂಡ ಪ್ರತಿ ವರ್ಷ ಮೈಸೂರಿನ ರಾಜ ಮನೆತನದಿಂದ ದೇವಿಗೆ ಬಾಗಿನ ರೂಪದಲ್ಲಿ ಮಡಲಕ್ಕಿ ಬರುತ್ತದೆ.

ಜಿಲ್ಲೆಯ ಸುತ್ತಮುತ್ತ ಹಳ್ಳಿಗಳ ಜನ ಹಾಗೂ ಭಕ್ತಾದಿಗಳು ರಾತ್ರಿ ಬೆಟ್ಟದಲ್ಲಿ ಹತ್ತಿಸುವ ದೀಪೋತ್ಸವವನ್ನು (ಜ್ಯೋತಿ) ನೋಡಿಯೇ ಹಬ್ಬವನ್ನು ಆಚರಣೆ ಮಾಡುತ್ತಾರೆ. ಬೆಟ್ಟದಲ್ಲಿ ಜ್ಯೋತಿಯನ್ನು ಬೆಳಗಿಸಲು ಭಕ್ತರು ಬೆಳಗ್ಗೆ ಬೆಟ್ಟವನ್ನು ಏರಿ ಹರಕೆಯ ರೀತಿಯಲ್ಲಿ ಸಲ್ಲಿಸುವ ಮರದ ದಿಮಿ, ಬಟ್ಟೆ, ಬೆಣ್ಣೆ, ತುಪ್ಪ ಇತ್ಯಾದಿ ವಸ್ತುಗಳನ್ನಿಟ್ಟು ಅದಕ್ಕೆ ಬೆಂಕಿ ಕೊಟ್ಟು ರಾತ್ರಿ 7 ಗಂಟೆ ಗೆ ದೀಪ ಬೆಳಗಿಸಲಾಗುತ್ತದೆ.

ದೇವಿರಮನ ಬೆಟ್ಟದ ತಪ್ಪಲಿನ ಕೆಳಗೆ ವಿಶಾಲವಾದ ಬಯಲಿನಲ್ಲಿ ಪ್ರಶಾಂತವಾಗಿ ನೆಲೆಸಿರುವ ತಾಯಿ (ಚಾಮುಂಡೇಶ್ವರಿ) ಶ್ರೀ ದೇವಿರಮ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುತ್ತಾ ಪ್ರಾರ್ಥಿಸಿ ಬಂದವರನ್ನು ಮನಸಾರೆ ಪೊರೆಯುತ್ತಿದ್ದಾಳೆ . ವರ್ಷದ 365 ದಿನವೂ ಅನ್ನದಾಸೋಹ ಕಾರ್ಯಕ್ರಮ ಇಲ್ಲಿ ಜರುಗುತ್ತದೆ. ಶ್ರೀ ದೇವಿರಮ ಅಭಿವೃದ್ಧಿ ಟ್ರ್ಟ್‌‍ ಹಾಗೂ ಜಿಲ್ಲಾಡಳಿತ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ಈ ಬಾರಿ ಮಳೆಯ ಕಾರಣದಿಂದಾಗಿ ಎರಡು ದಿನಗಳ ಕಾಲ ಬೆಟ್ಟವನ್ನು ಹತ್ತಲು ಅವಕಾಶ ಮಾಡಿಕೊಟ್ಟಿದ್ದು ಇಂದು ಮತ್ತು ನಾಳೆ ಮಧ್ಯಾಹ್ನ 3ರ ವರೆಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ಲಾಸ್ಟಿಕ್‌ ತಿಂಡಿ ಪಟ್ಟಣಗಳನ್ನು ಗಿರಿ ಪ್ರದೇಶಕ್ಕೆ ಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು, ಆರೋಗ್ಯ ಸಮಸ್ಯೆ ಇರುವವರು ಬೆಟ್ಟ ಹತ್ತಲು ಅವಕಾಶ ಇರುವುದಿಲ್ಲ ಹಾಗೂ ಪಟಾಕಿ ಮತ್ತಿತರ ಸಿಡಿಮದ್ದುಗಳನ್ನು ಕೊಂಡೊಯ್ಯುವಂತಿಲ್ಲ.

ಪಾದರಕ್ಷೆಯನ್ನು ಗಿರಿಯ ಕೆಳಭಾಗದಲ್ಲೇ ಬಿಟ್ಟು ಬರಿಗಾಲಿನಲ್ಲಿ ಬೆಟ್ಟ ಹತ್ತಬೇಕು. ದೇವಿಯ ದರ್ಶನದ ಕೂಡಲೇ ಸಮಯ ವ್ಯರ್ಥ ಮಾಡದೆ ಬೆಟ್ಟದಿಂದ ಕೆಳಗೆ ಇಳಿದು ಬೇರೆ ಭಕ್ತರಿಗೆ ಅವಕಾಶ ಮಾಡಿಕೊಡಬೇಕು. ಮದ್ಯಪಾನ, ಧೂಮಪಾನ ಮಾಡಿ ಬೆಟ್ಟ ಹತ್ತುವಂತಿಲ್ಲ ಎಂದು ಅಭಿವೃದ್ಧಿ ಸಮಿತಿ ತಿಳಿಸಿದೆ. ಹಾಗೂ ಜಿಲ್ಲಾಡಳಿತ ಮತ್ತು ಅಭಿವೃದ್ಧಿ ಸಮಿತಿ ಸೂಚಿಸಿರುವ ಮಾರ್ಗದಲ್ಲೇ ಬೆಟ್ಟ ಹತ್ತಬೇಕು ಎಂದು ಸೂಚಿಸಲಾಗಿದೆ.

ನಾಳೆ (ಅ.20) ಬೆಟ್ಟದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಅ.21 ಮಂಗಳವಾರ ಬೆಟ್ಟದ ಕೆಳಗಿರುವ ಶ್ರೀ ದೇವಿರಮನವರ ದೇವಸ್ಥಾನದಲ್ಲಿ ದೇವಿಗೆ ಉಡುಗೆ ಪೂಜೆ ನಡೆಯಲಿದೆ. ಅ 22 ಬುಧವಾರ ಬೆಳಗ್ಗೆ 8 ಗಂಟೆಗೆ ಶ್ರೀ ದೇವಿರಮನವರಿಗೆ ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮಗಳು, ಶ್ರೀ ಮಹಾ ಗಣಪತಿ ಪೂಜೆ, ಅಗ್ನಿಕುಂಡ ಸ್ಥಾಪನೆ ಯೊಂದಿಗೆ ಧಾರ್ಮಿಕ ಕಾರ್ಯಗಳು ನಡೆಯಲಿವೆ.

ಅ.23ರ ಗುರುವಾರ ಸೂರ್ಯೋದಯಕ್ಕೆ ಕೆಂಡಾರ್ಚನೆ ನಂತರ ಮಹಾಮಂಗಳಾರತಿ ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಈ ವರ್ಷದ ಶ್ರೀ ದೇವಿರಮನವರ ದೀಪೋತ್ಸವ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಟ್ರ್ಟ್‌‍ನ ಅಧ್ಯಕ್ಷ ಎಂ.ಎ. ಕುಲಶೇಖರ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ಶರ್ಮಾ ಅಟ್ಟರ್‌ ಪ್ಲಾಪ್‌

ಪರ್ತ್‌, ಅ.19- ಏಳು ತಿಂಗಳ ಬಿಡುವಿನ ನಂತರ ಬ್ಯಾಟ್‌ ಹಿಡಿದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೋಹ್ಲಿ ಅಟ್ಟರ್‌ ಪ್ಲಾಪ್‌ ಆಗಿದ್ದಾರೆ. ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಈ ಇಬ್ಬರು ಘಟಾನುಘಟಿ ನಾಯಕರು ಎರಡಂಕಿ ದಾಟುವಲ್ಲಿ ವಿಫಲರಾಗಿದ್ದಾರೆ.

2027 ರ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ಹಂಬಲದೊಂದಿಗೆ ಕಣಕ್ಕಿಳಿದ ರೋಹಿತ್‌ ಶರ್ಮಾ ಅವರು 14 ಎಸೆತಗಳಲ್ಲಿ ಕೇವಲ ಎಂಟು ರನ್‌ ಗಳಿಗೆ ಹ್ಯಾಜಲ್‌ವುಡ್‌ಗೆ ವಿಕೇಟ್‌ ಒಪ್ಪಿಸಿದರು.ಇವರ ನಂತರ ಕಣಕ್ಕಿಳಿದ ವಿರಾಟ್‌ ಕೋಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು.

ಅಭಿಮಾನಿಗಳ ಜೈಕಾರದೊಂದಿಗೆ ಬ್ಯಾಟ್‌ ಹಿಡಿದು ಮೈದಾನಕ್ಕೆ ಬಂದ ಕೊಹ್ಲಿ ಏಳು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಪಂದ್ಯ ಆರಂಭಕ್ಕೂ ಮುನ್ನ ಫಾಕ್‌್ಸ ಕ್ರಿಕೆಟ್‌ನೊಂದಿಗೆ ಮಾತನಾಡುತ್ತಾ, ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನೊಂದಿಗಿನ ತಮ್ಮ ಪ್ರೀತಿಯ ಸಂಬಂಧ ಮತ್ತು ಆಸ್ಟ್ರೇಲಿಯಾ ಅವರಿಗೆ ಏನು ಅರ್ಥ ಎಂದು ತಿಳಿಸಿದ್ದರು.ಇಲ್ಲಿ ಆರಂಭದಲ್ಲಿ ತುಂಬಾ ಕಠಿಣವಾಗಿತ್ತು ಎಂದು ಅವರು ಒಪ್ಪಿಕೊಂಡರು.

ಇದು ನನ್ನನ್ನು ಕ್ರಿಕೆಟಿಗನಾಗಿ ರೂಪಿಸಿತು. ಯುಕೆಯಲ್ಲಿ ನನ್ನ ಇತ್ತೀಚಿನ ಸಮಯವು ನಾನು ದೀರ್ಘಕಾಲದಿಂದ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿತು ಎಂದಿದ್ದರು.ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿಯವರ ಟ್ರ್ಯಾಕ್‌ ರೆಕಾರ್ಡ್‌ ಕೂಡ ಅಷ್ಟೇ ಪ್ರಭಾವಶಾಲಿಯಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ, ಅವರು 29 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಐದು ಶತಕಗಳೊಂದಿಗೆ 1,327 ರನ್‌ ಗಳಿಸಿದ್ದಾರೆ.

ಅದೇ ರೀತಿ ರೋಹಿತ್‌ ಆಸ್ಟ್ರೇಲಿಯಾ ನೆಲದಲ್ಲಿ ಬಹಳ ಹಿಂದಿನಿಂದಲೂ ಯಶಸ್ಸನ್ನು ಅನುಭವಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಏಕದಿನ ಪಂದ್ಯಗಳಲ್ಲಿ, ಅವರು 53.12 ಕ್ಕಿಂತ ಸ್ವಲ್ಪ ಹೆಚ್ಚು ಸರಾಸರಿಯೊಂದಿಗೆ 1,300 ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ.

ಹೀಗಾಗಿಯೇ ಈ ಇಬ್ಬರು ಮಾಜಿ ನಾಯಕರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಮೊದಲ ಪಂದ್ಯದಲ್ಲಿ ಇಬ್ಬರು ಹತಾಶರಾಗಿದ್ದರೂ ಉಳಿದಿರುವ ಪಂದ್ಯಗಳಲ್ಲಿ ತಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶವಿದೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.

ತಾಯಿಯೊಂದಿಗೆ ಅಕ್ರಮ ಸಂಬಂಧ ಶಂಕೆ, ಸ್ನೇಹಿತನನ್ನು ಭೀಕರವಾಗಿ ಕೊಂದ ಕುಚಿಕುಗಳು

ಭೋಪಾಲ್‌‍, ಅ. 19: ತನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ಮೂವರು ಸ್ನೇಹಿತರೇ ತಮ ಕುಚುಕು ಗೆಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೂವರು ಸ್ನೇಹಿತರು ಸೇರಿ ತಮ್ಮ ಗೆಳೆಯನ ಕತ್ತು ಕೊಯ್ದು ಕೊಲೆ ಮಾಡಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಪರಾರಿಯಾಗಿದ್ದಾರೆ.ಮೂವರಲ್ಲಿ ಒಬ್ಬನ ತಾಯಿಯ ಜತೆ ತನ್ನ ಗೆಳೆಯನಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಲ್ಲಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ಯಾಮ್‌ ನಗರ ಮಲ್ಟಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಈ ಕುರಿತು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆಶಿಶ್‌ (25) ಎಂಬುವವ ಶವವನ್ನು ಗಂಟಲು ಸೀಳಿ ತಲೆಯನ್ನು ಕಲ್ಲಿನಿಂದ ಜಜ್ಜಿದ ಸ್ಥಿತಿಯಲ್ಲಿ ಪತ್ತೆ ಮಾಡಿದ್ದರು.

ಪ್ರಾಥಮಿಕ ತನಿಖೆಯಲ್ಲಿ ರಂಜಿತ್‌, ನಿಖಿಲ್‌ ಮತ್ತು ವಿನಯ್‌ ಎಂಬ ಮೂವರು ಸ್ಥಳೀಯ ವ್ಯಕ್ತಿಗಳು ಈ ಕೊಲೆ ಮಾಡಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಆಶಿಶ್‌ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ರಂಜಿತ್‌ಗೆ ಬಂದಿತ್ತು, ಇದರಿಂದಾಗಿ ಅವನು ಆಶಿಶ್‌ನನ್ನು ತನ್ನ ಮನೆಯ ಬಳಿ ಬರದಂತೆ ಎಚ್ಚರಿಸಿದ್ದನು ಎಂದು ಪೊಲೀಸ್‌‍ ಮೂಲಗಳು ಬಹಿರಂಗಪಡಿಸಿವೆ.

ತಡರಾತ್ರಿ ರಂಜಿತ್‌ ತನ್ನ ಮನೆಯ ಬಳಿ ಆಶಿಶ್‌ನನ್ನು ನೋಡಿದ್ದಾನೆ ಎಂದು ವರದಿಯಾಗಿದೆ. ಕೋಪದ ಭರದಲ್ಲಿ, ಅವನು ತನ್ನ ಸ್ನೇಹಿತರಾದ ನಿಖಿಲ್‌ ಮತ್ತು ವಿನಯ್‌ ಜೊತೆಗೂಡಿ ಆಶಿಶ್‌ನನ್ನು ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮೂವರು ಮೊದಲು ಆಶಿಶ್‌ನ ಕತ್ತು ಸೀಳಿ ನಂತರ ಅವನ ತಲೆಗೆ ಕಲ್ಲಿನಿಂದ ಹೊಡೆದ ಪರಿಣಾಮ ಆಶಿಶ್‌ ತಕ್ಷಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆಶಿಶ್‌ ಮತ್ತು ರಂಜಿತ್‌ ಅನುಮಾನದಿಂದ ಅವರ ನಡುವೆ ಬಿರುಕು ಉಂಟಾಗುವ ಮೊದಲು ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು ಎಂಬುದು ದುರಂತ .ದಾಳಿಯ ಸಂಪೂರ್ಣ ಉದ್ದೇಶವನ್ನು ಬಹಿರಂಗಪಡಿಸಲು ಮತ್ತು ದಾಳಿಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

ಮರಾಠಾ ಮಂದಿರ ಥಿಯೇಟರ್‌ನಲ್ಲಿ 30 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಲೆ ಇದೆ ‘ದಿಲ್ವಾಲೆ ದುಲ್ಹನಿಯ ಲೇ ಜಾಯೇಂಗೆ’ ಚಿತ್ರ

ಮುಂಬೈ, ಅ. 19 (ಪಿಟಿಐ) ಒಂದು ಚಲನಚಿತ್ರ ಚಿತ್ರಮಂದಿರಗಳಲ್ಲಿ ಎಷ್ಟು ದಿನ ಓಡಬಹುದು. ವರ್ಷ..ಎರಡು ವರ್ಷ ಇಲ್ಲ ಮೂರು ವರ್ಷ ಅನ್ಕೊಂಡರೆ ಅದು ನಿಮ ತಪ್ಪು, ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರ ಮುಂಬೈನ ಮರಾಠಾ ಮಂದಿರ ಥಿಯೇಟರ್‌ನಲ್ಲಿ ಕಳೆದ 30 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಲೆ ಇದೆ.

ನಮ ಚಿತ್ರಮಂದಿರಲದಲ್ಲಿ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಕಳೆದ 30 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಲೆ ಇದು ಮತ್ತು ಪ್ರೇಕ್ಷಕರು ಬರುವವರೆಗೂ ಅದು ಮುಂದುವರಿಯುತ್ತದೆ ಎಂದು ಥಿಯೇಟರ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್‌ ದೇಸಾಯಿ ಹೇಳುತ್ತಾರೆ.

1952 ರಲ್ಲಿ ತೆರೆಯಲಾದ 1,107 ಆಸನಗಳ ಈ ಚಿತ್ರಮಂದಿರವು ಮುಘಲ್‌‍-ಎ-ಅಜಮ್‌‍ ಮತ್ತು ಪಕೀಜಾ ಸೇರಿದಂತೆ ಹಲವಾರು ಐಕಾನಿಕ್‌ ಚಲನಚಿತ್ರಗಳನ್ನು ಪ್ರದರ್ಶಿಸಿದೆ. ಆದರೂ ಶಾರುಖ್‌ ಖಾನ್‌-ಕಾಜೋಲ್‌ ಅಭಿನಯದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಅಕ್ಟೋಬರ್‌ 20, 1995 ರಂದು ಬಿಡುಗಡೆಯಾದಾಗಿನಿಂದ ಅಭೂತಪೂರ್ವ ಮತ್ತು ದಾಖಲೆಯ ಓಟದೊಂದಿಗೆ ಇತಿಹಾಸದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಯಶ್‌ ಚೋಪ್ರಾ ಅವರ ಮಗ ಆದಿತ್ಯ ನಿರ್ದೇಶನದ ಚೊಚ್ಚಲ ಚಿತ್ರ ಬಿಡುಗಡೆಗೆ ಹತ್ತು ದಿನಗಳ ಮೊದಲು ಖಾಸಗಿ ಪ್ರದರ್ಶನದ ಸಮಯದಲ್ಲಿ, ದೇಸಾಯಿ ಅವರು ದಿವಂಗತ ಚಲನಚಿತ್ರ ನಿರ್ಮಾಪಕರಿಗೆ – ಯೇ ಲಂಬಿ ರೇಸ್‌‍ ಕಾ ಘೋಡಾ ಹೈ ಎಂದು ಹೇಳಿದರು.ನಾನು ಚಿತ್ರವನ್ನು ಬಿಡುಗಡೆ ಮಾಡುವ ಮೊದಲೇ ನೋಡಿದ್ದೆ ಮತ್ತು ಅದನ್ನು ಬಿಡುಗಡೆ ಮಾಡಲು ಹತಾಶನಾಗಿದ್ದೆ. ಕಥೆ, ಪಾತ್ರವರ್ಗದ ಉತ್ತಮ ಮಿಶ್ರಣ, ಅಮರೀಶ್‌ ಪುರಿ, ಶಾರುಖ್‌‍, ಕಾಜೋಲ್‌ ಪಾತ್ರಗಳು ಎಲ್ಲವೂ ಇದರಲ್ಲಿವೆ, ಬದಲಾಗಿ ಚಿತ್ರದ ಪ್ರತಿಯೊಂದು ಪಾತ್ರವೂ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಸಾರ್ವಜನಿಕರು ಬಯಸಿದರೆ, ನಾವು ಥಿಯೇಟರ್‌ನಲ್ಲಿ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಆ ಸಮಯದಲ್ಲಿ, ನಾವು ಇದನ್ನು ಇಷ್ಟು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತೇವೆ ಎಂದು ನನಗೆ ತಿಳಿದಿರಲಿಲ್ಲ. ಟಿಕೆಟ್‌ ದರಗಳು ತುಂಬಾ ಕಡಿಮೆ ಇರುವುದರಿಂದ, ಇದು ನಮ್ಮ ಚಿತ್ರಮಂದಿರಗಳಲ್ಲಿ ಬಹಳ ಕಾಲ ಇರುತ್ತದೆ ಎಂದು ನಮ್ಮ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ನಹರ್‌ ಭಾವಿಸಿದ್ದರು ಮತ್ತು ಅದು ನಿಜವಾಯಿತು, ಎಂದು ದೇಸಾಯಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಸಾಮಾನ್ಯ ವಾರದ ದಿನಗಳಲ್ಲಿ, ಚಿತ್ರಮಂದಿರವು ಬೆಳಿಗ್ಗೆ 11:30 ರ ಮ್ಯಾಟಿನಿಗಾಗಿ ಸುಮಾರು 70 ರಿಂದ 100 ವೀಕ್ಷಕರನ್ನು ಸೆಳೆಯುತ್ತದೆ, ಆದರೆ ವಾರಾಂತ್ಯದ ಹಾಜರಾತಿ 200 ರಿಂದ 300 ಉತ್ಸಾಹಿ ಅಭಿಮಾನಿಗಳಿಗೆ ಹೆಚ್ಚಾಗುತ್ತದೆ. ಟಿಕೆಟ್‌ಗಳ ಬೆಲೆ ಬಾಲ್ಕನಿಗೆ 50 ರೂ. ಮತ್ತು ಡ್ರೆಸ್‌‍ ಸರ್ಕಲ್‌ಗೆ 30 ರೂ. ಇದೆ. ಡಿಡಿಎಲ್‌ಜೆ ವಿಶೇಷವಾದದ್ದು ವಿವಿಧ ಜನಸಂಖ್ಯಾಶಾಸ್ತ್ರಗಳಲ್ಲಿ ಪ್ರತಿಧ್ವನಿಸುವ ಸಾಮರ್ಥ್ಯ ಎಂದು ದೇಸಾಯಿ ಹೇಳಿದರು.ಮುಂಬೈ ಸೆಂಟ್ರಲ್‌ ರೈಲ್ವೆ ನಿಲ್ದಾಣ ಮತ್ತು ಎಸ್‌‍ಟಿ ಬಸ್‌‍ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಮರಾಠಾ ಮಂದಿರದಲ್ಲಿ, ಜನರು ಈ ಐಕಾನಿಕ್‌ ಚಿತ್ರವನ್ನು ವೀಕ್ಷಿಸಲು ದೇಶದ ವಿವಿಧ ಭಾಗಗಳಿಂದ ಬರುತ್ತಾರೆ.

ನಮ್ಮಲ್ಲಿ ಇದನ್ನು ವೀಕ್ಷಿಸಲು ಬರುವ ಪ್ರೇಕ್ಷಕರು ವಿಭಿನ್ನ ಗುಂಪಿನಲ್ಲಿದ್ದಾರೆ, ಒಬ್ಬರು ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ, ಮತ್ತು ನಂತರ ಮೇಲ್‌ ಮಧ್ಯಮ ವರ್ಗವಿದೆ, ಅವರೆಲ್ಲರೂ ಇದನ್ನು ವೀಕ್ಷಿಸಲು ಆನಂದಿಸುತ್ತಾರೆ. ಇದಲ್ಲದೆ, ಅವರು ಈ ದರದಲ್ಲಿ ಚಲನಚಿತ್ರವನ್ನು ಖರೀದಿಸಲು ಶಕ್ತರು ಎಂದು ಅವರು ಹೇಳಿದರು.ಕೆಲವು ವರ್ಷಗಳ ಹಿಂದೆ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವು 1,000 ವಾರಗಳ ನಂತರ ಪ್ರದರ್ಶನವನ್ನು ನಿಲ್ಲಿಸುತ್ತದೆ ಎಂದು ಚಿತ್ರಮಂದಿರವು ಒಂದು ಸೂಚನೆಯನ್ನು ಹಾಕಿದಾಗ, ದೇಸಾಯಿ ಅವರು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಬಗ್ಗೆ ಪ್ರೇಕ್ಷಕರು ಹೊಂದಿರುವ ಅದ್ಭುತವಾದ ಬಾಂಧವ್ಯ ಮತ್ತು ಪ್ರೀತಿಯನ್ನು ಕಣ್ಣಾರೆ ಕಂಡರು.ಅದನ್ನು ಸ್ವೀಕರಿಸುವ ಬದಲು, ಅನೇಕ ಅಭಿಮಾನಿಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಲು ಥಿಯೇಟರ್‌ಗೆ ಬಂದರು.ಇಲ್ಲಿಗೆ ಬಂದು ನೀವು ಚಿತ್ರಮಂದಿರದಲ್ಲಿ ಚಿತ್ರದ ಪ್ರದರ್ಶನವನ್ನು ಏಕೆ ಕೊನೆಗೊಳಿಸಲು ಬಯಸುತ್ತೀರಿ ಎಂದು ಕೇಳುವ ಜೋಡಿಗಳಿದ್ದರು. ಅವರು ಫಲಕವನ್ನು ತೆಗೆದುಹಾಕಲು ಕೇಳಿದರು. ಚಿತ್ರವನ್ನು ಹಿಟ್‌ ಮಾಡುವುದು ಸಾರ್ವಜನಿಕರೇ ಎಂದು ದೇಸಾಯಿ ಹೇಳಿದರು.

ಮಾರ್ಚ್‌ 2020 ರಲ್ಲಿ ಭಾರತವನ್ನು ಅಪ್ಪಳಿಸಿದ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾಲ್ಕು ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ಅಲ್ಪಾವಧಿಯ ವಿರಾಮವನ್ನು ಹೊರತುಪಡಿಸಿ, ಬಿಡುಗಡೆಯಾದಾಗಿನಿಂದ ಪ್ರತಿದಿನ ಇಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-10-2025)

ನಿತ್ಯ ನೀತಿ : ಜೀವನದಲ್ಲಿ ಯಾವತ್ತೂ ನಟಿಸಬೇಡ. ನೀನು ಹೇಗಿದ್ದೀಯ ಹಾಗೇ ಇರು. ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬೇಡ. ಏಕೆಂದರೆ ನಟನೆ ಒಮ್ಮೆ ಅಭ್ಯಾಸವಾದರೆ ಜೀವನಪೂರ್ತಿ ನಟಿಸುತ್ತಲೇ ಇರಬೇಕಾಗುತ್ತದೆ.

ಪಂಚಾಂಗ : ಭಾನುವಾರ, 19-10-2025
ವಿಶ್ವಾವಸುನಾಮ ಸಂವತ್ಸರ / ಅಯನ: ದಕ್ಷಿಣಾಯನ / ಋತು: ಸೌರ ಶರದ / ಮಾಸ: ಆಶ್ವಯುಜ / ಪಕ್ಷ: ಕೃಷ್ಣ / ತಿಥಿ: ತ್ರಯೋದಶಿ / ನಕ್ಷತ್ರ: ಉತ್ತರಾ / ಯೋಗ: ಐಂದ್ರ / ಕರಣ: ವಿಷ್ಟಿ

ಸೂರ್ಯೋದಯ – ಬೆ.06.11
ಸೂರ್ಯಾಸ್ತ – 06.00
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ಸಮಯ ಕಳೆಯುವಿರಿ.
ವೃಷಭ: ಅಂದುಕೊಂಡ ಕೆಲಸ-ಕಾರ್ಯಗಳಲ್ಲಿ ಒಂದಷ್ಟು ಶ್ರಮವಿದ್ದರೂ ತಕ್ಕ ಪ್ರತಿಫಲ ಸಿಗಲಿದೆ.
ಮಿಥುನ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.

ಕಟಕ: ಹಲವಾರು ಸವಾಲುಗಳನ್ನು ಎದುರಿಸಬೇಕಾದ ಸಂದರ್ಭ ಎದುರಾಗಲಿದೆ.
ಸಿಂಹ: ಆರೋಗ್ಯ ಸಮಸ್ಯೆ ಗಳನ್ನು ಎದುರಿಸಲು ಹೆಚ್ಚು ವ್ಯಾಯಾಮ ಮಾಡಬೇಕು.
ಕನ್ಯಾ: ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.

ತುಲಾ: ಸ್ಥಿರಾಸ್ತಿಯಿಂದ ಲಾಭ ಬರುವುದು. ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯುವುದು.
ವೃಶ್ಚಿಕ: ಹಣ ಉಳಿತಾಯ ಮಾಡಲು ಪ್ರಯತ್ನಿಸಿ.
ಧನುಸ್ಸು: ಮಾತು ಕಡಿಮೆ ಆಡಿದಷ್ಟು ಒಳಿತು.

ಮಕರ: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.
ಕುಂಭ: ವಿವಾಹ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆ ಯಾಗಲಿದೆ. ಆಹಾರ ಕ್ರಮದಲ್ಲಿ ಜಾಗ್ರತೆ ವಹಿಸಿ.
ಮೀನ: ನೌಕರರಿಗೆ ಉದ್ಯೋಗದಲ್ಲಿನ ಹೊಸ ವ್ಯವಸ್ಥೆಯಿಂದಾಗಿ ಮನಸ್ಸಿಗೆ ಸಂತಸ ಸಿಗಲಿದೆ.

ನ.23ರಂದು ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ವತಿಯಿಂದ ‘ಒಗ್ಗಟ್ಟಿನ ಓಟ’ ಮ್ಯಾರಥಾನ್

ಬೆಂಗಳೂರು : ದೇಶದ ಪ್ರತಿಷ್ಠಿತ ಕೆನರಾ ಬ್ಯಾಂಕ್ ವತಿಯಿಂದ ನವೆಂಬರ್ 23 ರಂದು ಬೆಂಗಳೂರಿನಲ್ಲಿ ಒಗ್ಗಟ್ಟಿನ ಓಟ ಮ್ಯಾರಥಾನ್ ನನ್ನ ಹಮ್ಮಿಕೊಂಡಿದೆ.
ಇದು ಮೂರನೇ ಆವೃತ್ತಿಯಾಗಿದ್ದು ದಕ್ಷಿಣ ಭಾರತದ ಅತಿ ದೊಡ್ಡ ಬ್ಯಾಂಕುಗಳಾಗಿದ ಕೆನರಾ ಬ್ಯಾಂಕ್ ಆರೋಗ್ಯದ ಬಗ್ಗೆ ಕಾಳಜಿ. ಬ್ಯಾಂಕ್ ನ ಸಂಸ್ಥಾಪಧ ದಿನಾಚರಣೆಯನ್ನು ವಿಸ್ಮರಣೆ ಮಾಡುವ ದೃಷ್ಟಿಯಿಂದ ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೆನರಾ ಬ್ಯಾಂಕ್ “ಕೆನರಾ ಬ್ಯಾಂಕ್ ಮ್ಯಾರಥಾನ್ 2025” ಅನ್ನು ಅನಾವರಣಗೊಳಿಸಿದೆ — ಆರೋಗ್ಯ, ಏಕತೆ ಮತ್ತು ಸಂತೋಷದಾಯಕ ಜೀವನಶೈಲಿಯನ್ನು ಬೆಳೆಸಲು ಓಟ
ಬೆಂಗಳೂರು, ಅಕ್ಟೋಬರ್ 18, 2025: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್, ಇಂದು ಕೆನರಾ ಬ್ಯಾಂಕ್ ಮ್ಯಾರಥಾನ್ 2025 ರ ಮೂರನೇ ಆವೃತ್ತಿಯನ್ನು ಘೋಷಿಸಿದೆ, ಈ ಕಾರ್ಯಕ್ರಮವು ನಾಗರಿಕರಲ್ಲಿ ಏಕತೆ, ಆರೋಗ್ಯ ಮತ್ತು ಸಂತೋಷದ ಜೀವನಶೈಲಿಯನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಅಧಿಕೃತ ಕೆನರಾ ಬ್ಯಾಂಕ್ ಮ್ಯಾರಥಾನ್ ಟಿ-ಶರ್ಟ್ ಅನ್ನು ಅನಾವರಣಗೊಳಿಸಲಾಯಿತು.ಮ್ಯಾರಥಾನ್ ಭಾನುವಾರ, ನವೆಂಬರ್ 23, 2025 ರಂದು ನಡೆಯಲಿದೆ. ಇದು 3K, 5K ಮತ್ತು 10K ಓಟಗಳನ್ನು ಹೊಂದಿರುತ್ತದೆ, ಮತ್ತು ಇದು ಜೀವನದ ಎಲ್ಲಾ ಹಂತಗಳ ಭಾಗವಹಿಸುವವರಿಗೆ ಮುಕ್ತವಾಗಿದೆ. ಹಿರಿಯ ನಾಗರಿಕರು ಅಥವಾ ಕುಟುಂಬಗಳು ಸೇರಿದಂತೆ ಎಲ್ಲರಿಗೂ ಪ್ರೀತಿಪಾತ್ರರೊಂದಿಗೆ ಓಡುವ ಆನಂದವನ್ನು ಅನುಭವಿಸಲು 3K ಓಟವನ್ನು ಕಸ್ಟಮೈಸ್ ಮಾಡಲಾಗಿದೆ. ಕಳೆದ ವರ್ಷ, 10,000 ನಾಗರಿಕರು ಓಟದಲ್ಲಿ ಭಾಗವಹಿಸಿದ್ದರು; ಈ ವರ್ಷ, ಸಂಖ್ಯೆ 10,000 ಮೀರುವ ನಿರೀಕ್ಷೆಯಿದೆ. ಈ ಸಂದರ್ಭವನ್ನು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಕೆ. ಸತ್ಯನಾರಾಯಣ ರಾಜು, ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ಕೆ. ಸತ್ಯನಾರಾಯಣ ರಾಜು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ, “ಕೆನರಾ ಬ್ಯಾಂಕ್ ಮ್ಯಾರಥಾನ್ ಕೇವಲ ಓಟಕ್ಕಿಂತ ಹೆಚ್ಚಿನದಾಗಿದೆ, ಇದು ಆರೋಗ್ಯಕರ ಮತ್ತು ಏಕೀಕೃತ ಭಾರತವನ್ನು ಪೋಷಿಸುವ ನಮ್ಮ ಬದ್ಧತೆಯ ಮೂಲಭೂತ ಭಾಗವಾಗಿದೆ. ಈ ವಾರ್ಷಿಕ ಕಾರ್ಯಕ್ರಮದ ಮೂಲಕ, ನಾವು ಒಂದೇ ಸಮುದಾಯವಾಗಿ ಒಟ್ಟಿಗೆ ಬರುವುದನ್ನು ಮತ್ತೆ ಒತ್ತಿ ಹೇಳುತ್ತೇವೆ. ಎಲ್ಲಾ ಬೆಂಗಳೂರಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಸಂತೋಷದಾಯಕ ಮತ್ತು ಸಕ್ರಿಯ ಜೀವನಶೈಲಿಯನ್ನು ಬೆಂಬಲಿಸಲು ನಾವು ಮನವಿ ಮಾಡುತ್ತೇವೆ.”
2025 ರ ಕೆನರಾ ಬ್ಯಾಂಕ್ ಮ್ಯಾರಥಾನ್ ಕೆನರಾ ಬ್ಯಾಂಕಿನ ಸಾಮಾಜಿಕ ಜವಾಬ್ದಾರಿಯ ಪ್ರಯತ್ನ ಮತ್ತು ಆರೋಗ್ಯ, ಕ್ಷೇಮ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೇಲೆ ಅದರ ನಿರಂತರ ಗಮನಕ್ಕೆ ಅನುಗುಣವಾಗಿದೆ.

ಭಾಗಿಗಳು ಕೆನರಾ ಬ್ಯಾಂಕ್ ವೆಬ್‌ಸೈಟ್ https://www.canarabankmarathon.com/ ಗೆ ಭೇಟಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಬಹುದು.
ಪ್ರಮುಖ ನವೀಕರಣಗಳಿಗಾಗಿ, ದಯವಿಟ್ಟು ಕೆನರಾ ಬ್ಯಾಂಕ್ ಅಧಿಕೃತ ವೆಬ್‌ಸೈಟ್ https://www.canarabank.bank.in/ ಗೆ ಭೇಟಿ ನೀಡಿ
ಪ್ರತಿಭಾ ಎಸ್‌ಜಿ|+91 9591380816 | pratibha.sg@veritasreputation.com

ಅಭಿನವ ಬೀಚಿ ಗಂಗಾವತಿ ಪ್ರಾಣೇಶ್ ಅವರ ತಾಯಿ ಸತ್ಯವತಿ ಬಾಯಿ ವಿಧಿವಶ

ಕೊಪ್ಪಳ : ಅಭಿನವ ಬೀಚಿ, ಹಾಸ್ಯ ಭಾಷಣಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾವತಿ ಪ್ರಾಣೇಶ್ ಅವರ ತಾಯಿ ಸತ್ಯವತಿ ಬಾಯಿ (86) ಅವರು ಇಂದು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ವರು ಸ್ವಗ್ರಾಮ ಗಂಗಾವತಿಯಲ್ಲಿ ವಿಧಿವಶರಾಗಿದ್ದಾರೆ.ಅವರ ಅಂತ್ಯಕ್ರಿಯೆ ನಾಳೆ(ಅ. 19) ಬೆಳಿಗ್ಗೆಯೇ 9 ಗಂಟೆಗೆ ಗಂಗಾವತಿಯಲ್ಲಿ ನೆರವೇರಲಿದೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಗಂಗಾವತಿ ಪ್ರಾಣೇಶ್, ನಾನು ಕಲಾವಿದನಾಗಿದ್ದು ತಾಯಿಯಿಂದ. ನನ್ನ ಬದುಕಿನ ಸ್ಪೂರ್ತಿ ನನ್ನ ತಾಯಿ. ಆದರೆ ತಾಯಿ ನಮ್ಮನ್ನು ಅಗಲಿದ್ದಾರೆ ಎಂದು ಗಂಗಾವತಿ ಪ್ರಾಣೇಶ್ ಹೇಳಿದ್ದಾರೆ.