Sunday, April 28, 2024
Homeಅಂತಾರಾಷ್ಟ್ರೀಯ12 ಪ್ರಕರಣಗಳಲ್ಲಿ ಇಮ್ರಾನ್‍ ಖಾನ್‍ಗೆ ಜಾಮೀನು

12 ಪ್ರಕರಣಗಳಲ್ಲಿ ಇಮ್ರಾನ್‍ ಖಾನ್‍ಗೆ ಜಾಮೀನು

ಇಸ್ಲಾಮಾಬಾದ್,ಫೆ.10- ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಗೆ ಜಾಮೀನು ಮಂಜೂರು ಮಾಡಿದೆ. ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್‍ಖಾನ್ ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಜೇತರಾಗಿದ್ದಾರೆ. ಇದರ ನಡುವೆ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಸಹಜಸ್ಥಿತಿಯತ್ತ ಹಿಂಸಾಚಾರ ಪೀಡಿತ ಉತ್ತರಾಖಂಡ

ಇಮ್ರಾನ್ ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನ ಹಲವಾರು ನಾಯಕರನ್ನು ಪಾಕಿಸ್ತಾನದಾದ್ಯಂತ ಪ್ರಮುಖ ಸೇನಾ ನೆಲೆಗಳಿಗೆ ಹಾನಿ ಮಾಡಿದ ಮೇ 9ರ ಹಿಂಸಾಚಾರಕ್ಕೆ ಸಂಬಂಜಾಸಿದಂತೆ ಅನೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇಸ್ಲಾಮಾಬಾದ್‍ನಲ್ಲಿ ಅರೆಸೈನಿಕ ರೇಂಜರ್‍ಗಳು ಇಮ್ರಾನ್ ಖಾನ್ ಅವರನ್ನು ಬಂಧಿಸಿದ ನಂತರ ಪ್ರತಿಭಟನೆಗಳು ಭುಗಿಲೆದಿದ್ದವು. ನಂತರದ ಹಿಂಸಾಚಾರದಲ್ಲಿ ರಾವಲ್ಪಿಂಡಿಯ ಸೇನಾ ಪ್ರಧಾನ ಕಛೇರಿ ಸೇರಿದಂತೆ 20ಕ್ಕೂ ಹೆಚ್ಚು ಮಿಲಿಟರಿ ಸ್ಥಾಪನೆಗಳು ಮತ್ತು ರಾಜ್ಯದ ಕಟ್ಟಡಗಳು ಹಾನಿಗೊಳಗಾಗಿದ್ದವು.

ಕಾಪ್ರ್ಸ್ ಕಮಾಂಡರ್ ಲಾಹೋರ್ ಅವರ ಮನೆ, ಅಸ್ಕರಿ ಟವರ್, ಶಾದ್ಮಾನ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಲಾಗಿದ್ದು, ಖಾನ್ ಅವರ ಜಮಾನ್ ಪಾರ್ಕ್ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಹಿಂಸಾಚಾರದ ನಂತರದ ದಿನಗಳಲ್ಲಿ ಖಾನ್ ಅವರ ಪಿಟಿಐಗೆ ಸಂಬಂಧಿಸಿದ ನೂರಾರು ಪ್ರತಿಭಟನಾಕಾರರನ್ನು ಬಂಧಿಸಲಾಯಿತು.

2022ರ ಏಪ್ರಿಲ್‍ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಾಗಿನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟ್ ತಂಡದ ನಾಯಕ ಮತ್ತು ಅವರ ಹಲವಾರು ಪಕ್ಷದ ನಾಯಕರು ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಮ್ರಾನ್ ಖಾನ್ ಅವರನ್ನು ಅವಿಶ್ವಾಸ ಮತದ ಮೂಲಕ ಪ್ರಧಾನಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು.
ಕಳೆದ ವರ್ಷ ಆಗಸ್ಟ್‍ನಲ್ಲಿ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಉಳಿಸಿಕೊಂಡಿದ್ದ ರಾಜ್ಯ ಉಡುಗೊರೆಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದ ತೋಷಖಾನಾ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಇಸ್ಲಾಮಾಬಾದ್ ಹೈಕೋರ್ಟ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದಾಗ, ಸೈಫರ್ ಕೇಸ್ ಎಂದು ಕರೆಯಲ್ಪಡುವ ರಾಜ್ಯದ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

RELATED ARTICLES

Latest News