Friday, February 23, 2024
Homeಕ್ರೀಡಾ ಸುದ್ದಿಆಸ್ಟ್ರೇಲಿಯಾದಲ್ಲಿ ಪಾಕ್ ಆಟಗಾರರಿಗೆ ಭಾರೀ ಮುಜುಗರ

ಆಸ್ಟ್ರೇಲಿಯಾದಲ್ಲಿ ಪಾಕ್ ಆಟಗಾರರಿಗೆ ಭಾರೀ ಮುಜುಗರ

ಸಿಡ್ನಿ,ಡಿ.2-ಇಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗಾಗಿ ವಿಮಾನದಲ್ಲಿ ಇಲ್ಲಿಗೆ ಬಂದಿಳಿದ ಪಾಕಿಸ್ತಾನ ಆಟಗಾರರಿಗೆ ಸ್ವಾಗತವಿರಲಿ ,ಕೇಳುವವರೇ ಇಲ್ಲದಂತಾಗಿತ್ತು. ಲಾಹೋರ್ ವಿಮಾನ ನಿಲ್ದಾಣದಿಂದ ಹೊರಟು ಪಾಕಿಸ್ತಾನ ಆಟಗಾರರು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಸ್ವಾಗತಿಸಲು ಅಥವಾ ಇವರನ್ನು ಕರೆದೊಯ್ಯಲು ಪಾಕಿಸ್ತಾನ ರಾಯಭಾರ ಕಚೇರಿ ಸಿಬ್ಬಂಧಿ ಅಥವಾ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳ ಪೈಕಿ ಯಾರೂ ಬಂದಿರಲಿಲ್ಲ. ವಿಮಾನ ನಿಲ್ದಾಣದ ಬಧ್ರತಾ ಸಿಬ್ಭಂದಿ ಅವರಿಗೆ ಹೊರಹೋಗಿ ಬಸ್ ಹತ್ತಲು ಸಹಾಯ ಮಾಡಿದ್ದಾರೆ. ಆದರೆ ತಮ್ಮ ಲಗೇಜ್ ಅನ್ನು ತಾವೇ ಟ್ರಿಕ್‍ನಲ್ಲಿ ತುಂಬಿಸಿ ಹೋಟೆಲ್‍ಗೆ ತೆರಳಬೇಕಾದ ಪರಿಸ್ಥಿತಿ ಒದಗಿಬಂತು.

ಅಶೋಕ್-ವಿಜಯೇಂದ್ರ ಹೈಕಮಾಂಡ್ ಭೇಟಿ ಮತ್ತಷ್ಟು ವಿಳಂಬ

ಪಾಕಿಸ್ತಾನ -ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿ.14 ರಿಂದ ಪರ್ತ್‍ನಲ್ಲಿ ಪ್ರಾರಂಭವಾಗುತ್ತದೆ. ನಂತರ ಡಿಸೆಂಬರ್ 26 ರಿಂದ 30 ವರೆಗೆ ಮೆಲ್ಬೋರ್ನ್, ಜನವರಿ 3 ರಿಂದ 7 ವರೆಗೆ ಸಿಡ್ನಿಯಲ್ಲಿ ತೃತೀಯ ಟೆಸ್ಟ್ ಪಂದ್ಯ ನಡೆಯಲಿದೆ.

ಪಾಕಿಸ್ತಾನವು ಆಸ್ಟ್ರೇಲಿಯಾದಲ್ಲಿ ಈವರೆಗೆ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆದರೆ ಇದೀಗ ಹೊಸ ನಾಯಕ ಶಾನ್ ಮಸೂದ್ ನೇತೃತ್ವದಲ್ಲಿ ತಂಡದ ಪ್ರದರ್ಶನದ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದೆ. ಆಟಗಾರರಿಗೆ ಈಗಾಗಿರುವ ಅನುಭವ ನೋಡಿದರೆ ಪಾಕಿಸ್ತಾನ ಕ್ರಿಕೆಟ್‍ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಭೀತಾಗಿದೆ.

ಬಾಬರ್ ಅಜಂ ಎಲ್ಲಾ ವಿಧದಲ್ಲಿ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ 34 ವರ್ಷದ ಅನುಭವಿ ಆಟಗಾರ ಮಸೂದ್ ಅವರನ್ನು ಇತ್ತೀಚೆಗಷ್ಟೆ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2023-25ರ ಪಾಯಿಂಟ್ ಟೇಬಲ್‍ನಲ್ಲಿ ಪಾಕಿಸ್ತಾನ ತಂಡ ಅಗ್ರಸ್ಥಾನದಲ್ಲಿದೆ. ಒಂಬತ್ತು ತಂಡಗಳ ಪಟ್ಟಿಯಲ್ಲಿ ಭಾರತ ಎರಡನೇ ಮತ್ತು ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.

RELATED ARTICLES

Latest News