ಅಮೃತಸರ/ಜಮ್ಮು,ಫೆ.16- ಪಂಜಾಬ್‌ನ ಪಠಾಣ್ ಕೋಟ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಮುಂಜಾನೆ ಬಿಎಸ್‌ಎಫ್ ಪಡೆಗಳು ಪಾಕಿಸ್ತಾನಿ ಒಳನುಸುಳುಕೋರನನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಗಡಿ ಭದ್ರತಾಪಡೆ ಸಿಬ್ಬಂದಿಯೂ ಉದ್ದಕ್ಕೂ ಬಾರ್ಡರ್ ಔಟ್‌ಪೋಸ್ಟ್ ತಶ್ವತನ್ ಪ್ರದೇಶದಲ್ಲಿ ಕೆಲವು ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದರು. ನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಆತನ ಗುರುತು ಪತ್ತೆ ಮಾಡಲಾಗುತ್ತಿದೆ. ಘಟನೆಯ ಬಗ್ಗೆ ಪಾಕಿಸ್ತಾನ ರೇಂಜರ್‌ಗ್ಗಳೊಂದಿಗೆ ತೀವ್ರ ಪ್ರತಿಭಟನೆಯನ್ನು ದಾಖಲಿಸಲಾಗುವುದು ಎಂದು ಬಿಎಸ್‌ಎಫ್, ಜಮ್ಮು ಗಡಿರೇಖೆಯ ವಕ್ತಾರರು ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ 553-ಕಿಮೀ ವ್ಯಾಪ್ತಿಯನ್ನು ಒಳಗೊಂಡಂತೆ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.