Wednesday, December 4, 2024
Homeಕ್ರೀಡಾ ಸುದ್ದಿ | Sportsಪಾಕ್ ನಟಿಯ ಡೇಟಿಂಗ್ ಭಗ್ನಗೊಳಿಸಿದ ವಿರಾಟ್‍ಕೊಹ್ಲಿ

ಪಾಕ್ ನಟಿಯ ಡೇಟಿಂಗ್ ಭಗ್ನಗೊಳಿಸಿದ ವಿರಾಟ್‍ಕೊಹ್ಲಿ

ಪುಣೆ, ಅ.20- ಒಡಿಐ ಸ್ವರೂಪದಲ್ಲಿ 48ನೇ ಶತಕ ಸಿಡಿಸುವ ಮೂಲಕ 2023ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ 7 ವಿಕೆಟ್‍ಗಳ ಗೆಲುವು ತಂದುಕೊಟ್ಟಿದ್ದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಪಾಕಿಸ್ತಾನ ನಟಿಯ ಡೇಟಿಂಗ್ ಕನಸನ್ನು ಭಗ್ನಗೊಳಿಸಿದ್ದಾರೆ.

ಗುರುವಾರ (ಮಾ.20) ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ 256 ರನ್‍ಗಳ ಗಳಿಸಿದ್ದರು. 257 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (48 ರನ್), ಶುಭಮನ್ ಗಿಲ್ ( 53 ರನ್) ಹಾಗೂ ರನ್ ಮಷೀನ್ ವಿರಾಟ್ ಕೊಹ್ಲಿ (ಅಜೇಯ 103ರನ್) ನೆರವಿನಿಂದ 41.3 ಓವರ್‍ಗಳಲ್ಲೇ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ.

ಸತೀಶ್ ಜಾರಕಿಹೊಳಿ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವಿಲ್ಲ : ಸಚಿವ ರಾಜಣ್ಣ

ಟೀಮ್ ಇಂಡಿಯಾ 7 ವಿಕೆಟ್‍ಗಳ ಗೆಲುವು ಸಾಧಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸುವ ಮೂಲಕ ಪಾಕಿಸ್ತಾನ ನಟಿಯ ಬಾಂಗ್ಲಾದೇಶ ಹುಡುಗನೊಂದಿಗಿನ ಡೇಟಿಂಗ್ ಕನಸನ್ನು ನುಚ್ಚುನೂರು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚೇಡಿಸಿದ್ದಾರೆ.

ಇಂಡೋ- ಬಾಂಗ್ಲಾ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ನಟಿ ಶೇರ್ ಶೆನ್ವಾರಿ ಅವರು, `ಇನ್‍ಷಾ ಅಲ್ಲಾ … ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಬಾಂಗ್ಲಾದೇಶ ಸೋಲಿಸಿದರೆ, ನಾನು ಢಾಕಾಗೆ ಹೋಗಿ ಬಾಂಗ್ಲಾ ಹುಡುಗನೊಂದಿಗೆ ಮೀನಿನ ಖಾದ್ಯದ ಡಿನ್ನರ್ ಮಾಡುವುದರೊಂದಿಗೆ ಅವನೊಂದಿಗೆ ಒಂದು ದಿನ ಡೇಟಿಂಗ್ ಮಾಡುತ್ತೇನೆ’ ಎಂದು ಟ್ವಿಟ್ ಮಾಡಿದ್ದರು.

ಗ್ಯಾರಂಟಿ ಸರ್ಕಾರದ ಕಲೆಕ್ಷನ್ ವಂಶಾವಳಿ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ

ಅಕ್ಟೋಬರ್ 14 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಟೀಮ್ ಇಂಡಿಯಾ ವಿರುದ್ಧ 8 ವಿಕೆಟ್‍ಗಳ ಸೋಲು ಕಂಡ ನಿರಾಸೆಯಿಂದ ಪಾಕಿಸ್ತಾನ ನಟಿಯು ಈ ರೀತಿಯ ಹೇಳಿಕೆ ನೀಡಿದ್ದರು. ಆದರೆ ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ 7 ವಿಕೆಟ್‍ಗಳ ಗೆಲುವು ಸಾಧಿಸಿದ ನಂತರ ಪಾಕ್ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರೆ.

RELATED ARTICLES

Latest News