ಜಮು, ಮೇ 14 –ಇಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿಯ ಹಳ್ಳಿಯೊಂದರಿಂದ ಪಾಕಿಸ್ತಾನಿ ಒಳನುಸುಳುಕೋರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಥುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ (ಐಬಿ) ಬಳಿ ಭಯೋತ್ಪಾದಕರು ಎಂಬ ಶಂಕೆ ಮೇಲೆ ಐವರ ಚಲನವಲನದ ಗಮನಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಜಮುವಿನ ಹೊರವಲಯದಲ್ಲಿರುವ ಖೌರ್‌ನ ಪಲ್ಲನ್‌ವಾಲಾ ಪ್ರದೇಶದ ಎಲ್‌ಒಸಿ ಬಳಿಯ ಮಿಲನ್ ಡಿ ಖುಯಿ ಗ್ರಾಮದಿಂದ ಕರಾಚಿಯ ನಿವಾಸಿ ಜಹೀರ್ ಖಾನ್ ಎಂದು ಗುರುತಿಸಿಕೊಂಡ ಪಾಕಿಸ್ತಾನಿ ಒಳನುಗ್ಗಿಗಾರನನ್ನು ಬಂಧಿಸಲಾಗಿದೆ.
ಆತನ ಬಗ್ಗೆ ಅನುಮಾಗೊಂಡು ಪೋಲೀಸ್ ಸ್ಥಳೀಯ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆತ ಪಾಕಿಸ್ತಾನಿ ಪ್ರಜೆ ಎಂದು ತಿಳಿದುಬಂದಿದೆ.ಈ ವೇಲೆ ಆತ ಅಜಾಗರೂಕತೆಯಿಂದ ಗಡಿ ದಾಟಿದೆ ಎಂದು ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಮತ್ತು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.ಕಥುವಾ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರ ಉಪಸ್ಥಿತಿ ಬಗ್ಗೆ ಗ್ರಾಮಸ್ಥರು ತಿಳಿಸಿದ ನಂತರ ಇಂದು ಬೆಳಿಗ್ಗೆ ರಾಜ್‌ಬಾಗ್ ಪ್ರದೇಶದ ಜುಥಾನಾ ಗ್ರಾಮದಲ್ಲಿ ಪೊಲೀಸರು, ಸೇನೆ ಮತ್ತು ಬಿಎಸ್‌ಎಫ್ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಜಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಜೊತೆಗೆ ಐಜಿ ಬೂರಾ ಅವರು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಕಥುವಾ ತಲುಪಿದ್ದಾರೆ.ಗ್ರಾಮಸ್ಥರ ಪ್ರಕಾರ, ಕನಿಷ್ಠ ಐವರು ಶಂಕಿತ ಭಯೋತ್ಪಾದಕರ ಗುಂಪು ಮನೆಯೊಂದಕ್ಕೆ ನುಗ್ಗಿ ಆಹಾರಕ್ಕಾಗಿ ಹುಡುಕಿದೆ.
ಆದರೆ, ಅವರ ಚಲನವಲನವನ್ನು ಭದ್ರತಾ ಪಡೆಗಳಿಗೆ ವರದಿ ಮಾಡಲಾಗಿದೆ ಎಂದು ಅನುಮಾನಗೊಂಡ ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.