ದುಬೈ, ಫೆ.19-ಚಾಂಪಿಯನ್ಸ್ ಟ್ರೋಫಿ ಅಂಗವಾಗಿ ದುಬೈನಲ್ಲಿ ಭಾರತದ ಆಟಗಾರರು ನೆಟ್ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬೌಲ್ ಮಾಡುವ ಮೂಲಕ ಜೀವನದ ಆಸೆಯನ್ನು ಪೂರೈಸಿಕೊಂಡಿದ್ದೇನೆ ಎಂದು ಪಾಕ್ ಯುವ ವೇಗಿ ಅವೈಸ್ ಅಹ್ಮದ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಖೈಬರ್ ಪುನ್ಯಾಪ್ರಾಂತ್ಯದಲ್ಲಿ ಜನಿಸಿದ ಅವೈಸ್ ಅಹ್ಮದ್, ನೆಟ್ಸ್ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬೌಲ್ ಮಾಡಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ನೆಟ್ಸ್ ನಲ್ಲಿ ನಾನು ಬೌಲಿಂಗ್ ಮಾಡುವಾಗ, ವಿರಾಟ್ ಕೊಹ್ಲಿ ಸ್ಟೈಕ್‌ನಲ್ಲಿದ್ದರು, ನಂತರ ನಾನು ರೋಹಿತ್ ಶರ್ಮಾರೊಂದಿಗೆ ಸಂವಾದ ನಡೆಸಿದೆ. ನಾನು ಚೆಂಡನ್ನು ಯಾವ ರೀತಿ ಸ್ವಿಂಗ್ ಮಾಡುತ್ತೇನೆ ಎಂದು ಇಬ್ಬರು ದಿಗ್ಗಜರು ನನ್ನನ್ನು ಕೇಳಿದರು. ನಂತರ ಅವರು ತನ್ನ ಬೌಲಿಂಗ್ ನಲ್ಲಿ ಯಾವುದೇ ತಪ್ಪು ಮಾಡದೆ ಚೆಂಡನ್ನು ಬಲವಾಗಿ ದಂಡಿಸಿದರು ಎಂದು ಅವೈಸ್ ತಿಳಿಸಿದರು.
ನೆಟ್ ಸೆಷನ್ ಮುಗಿದ ನಂತರ ರೋಹಿತ್ ಶರ್ಮಾ ಅವರು ನನ್ನ ಬೌಲಿಂಗ್ ಅನ್ನು ತುಂಬಾ ಮೆಚ್ಚಿಕೊಂಡು ಶ್ಲಾಘಿಘಿಸಿದರು. ನಾನು ಅಭ್ಯಾಸದ ವೇಳೆ ರೋಹಿತ್ ಭಾಯ್ ಅನ್ನು ಯಾರ್ಕರ್ ಗಳ ಮೂಲಕ ನಿಯಂತ್ರಿಸಲು ಪ್ರಯತ್ನಿಸಿದೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಕ್ ವೇಗಿ ಶಾಹಿನ್ ಶಾ ಆಫ್ರಿದಿ ಯಾವ ರೀತಿ ಪಾದಗಳನ್ನು ಗುರಿಯಾಗಿಸಿಕೊಳ್ಳುತ್ತಾರೋ ಅದೇ ರೀತಿ ನಾನು ಬೌಲ್ ಮಾಡಿದ್ದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಾಗಿತ್ತು ಎಂದು ತಿಳಿಸಿದರು.
ಈ ಇಬ್ಬರು ದಿಗ್ಗಜರನ್ನು ಭೇಟಿ ಮಾಡುವ ಕನಸನ್ನು ಎಲ್ಲರೂ ಕಾಣುತ್ತಾರೆ. ಆದರೆ ಅವರಿಗೆ ಬೌಲ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ನೆಟ್ಸ್ ನಲ್ಲಿ ರೋಹಿತ್ ಹಾಗೂ ವಿರಾಟ್ ಕೊಹ್ಲಿಗೆ ಬೌಲ್ ಮಾಡುವಾಗ ನಾನು ಉದ್ವೇಗಗೊಂಡಿಲ್ಲ. ಆದರೆ ಹಿಂದಿನ ದಿನ ಮೋಹಿತ್ (ರಾಘವ್ ) ಭಾಯ್ ನನಗೆ ಈ ವಿಷಯ ತಿಳಿಸಿದಾಗ ನಾನು ಸಾಕಷ್ಟು ಸಂತೋಷ ಹಾಗೂ ಆತಂಕದಲ್ಲಿದ್ದೆ ಎಂದು ಎಂದು ಅವೈಸ್ ಅಹ್ಮದ್ ಹೇಳಿದರು.
ಫೆ.23 ರಂದು ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ವೇಜ್ ಪಂದ್ಯ ನಡೆಯಲಿದ್ದು ವಿಶ್ವದೆಲ್ಲೆಡೆ ಅಭಿಮಾನಿಗಳು ಈ ಪಂದ್ಯ ಕಣ್ಣುಂಬಿಕೊಳ್ಳಲು ಕಾತರಿಸುತ್ತಿದ್ದಾರೆ.