Wednesday, January 15, 2025
Homeರಾಷ್ಟ್ರೀಯ | Nationalಭಾರತಕ್ಕೆ ಬಂದು ನೆಲೆಸಿರುವ ಪಾಕ್ ಪ್ರಜೆ ಸೀಮಾ ಹೈದರ್‌ ಇದೀಗ ಗರ್ಭಿಣಿ

ಭಾರತಕ್ಕೆ ಬಂದು ನೆಲೆಸಿರುವ ಪಾಕ್ ಪ್ರಜೆ ಸೀಮಾ ಹೈದರ್‌ ಇದೀಗ ಗರ್ಭಿಣಿ

Pakistani Woman Seema Haider reveals pregnancy with Sachin Meena’s child,

ನೊಯ್ಡಾ,ಡಿ.24- ಪಬ್ಜೀ ಗೇಮ್‌ನಲ್ಲಿ ಪರಿಚಯವಾದ ಸ್ನೇಹಿತನನ್ನು ವರಿಸಲು ಪತಿಯನ್ನು ತೊರೆದು ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದು, ಗ್ರೇಟರ್‌ ನೋಯ್ಡಾದಲ್ಲಿ ತನ್ನ ಪ್ರಿಯಕರನೊಂದಿಗೆ ನೆಲೆಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್‌ ಇದೀಗ ಗರ್ಭಿಣಿಯಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆ್ಯಕ್ಟಿವ್‌ ಆಗಿರುವ ಸೀಮಾ ಹೈದರ್‌ ಇದೀಗ ಗರ್ಭಿಣಿಯಾಗಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸೀಮಾ ಗರ್ಭಧಾರಣೆಯ ಪರೀಕ್ಷಾ ಕಿಟ್‌ನ್ನೊಂದಿಗೆ ಕಾಣಿಸಿಕೊಂಡಿದ್ದು, ಗರ್ಭಿಣಿಯಾಗಿರುವ ಬಗ್ಗೆ ಪತಿ ಸಚಿನ್‌ಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಜಕೋಬಾಬಾದ್‌ ಮೂಲದ ಸೀಮಾ ಹೈದರ್‌ ಸಂದರ್ಶನವೊಂದರಲ್ಲಿ ಱತಾನು ಹಿಂದು ಧರ್ಮವನ್ನು ಸ್ವೀಕರಿಸಿದ್ದೇನೆ. ತಾಯ್ನಾಡಿಗೆ (ಪಾಕಿಸ್ತಾನ) ಮರಳಲು ಇಷ್ಟವಿಲ್ಲ. ತನ್ನ ನಾಲ್ಕು ಮಕ್ಕಳು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆೞ ಎಂದು ಹೇಳಿದ್ದರು. ಭಾರತೀಯ ಪೌರತ್ವವನ್ನು ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರು.

ಭಾರತೀಯ ಪ್ರಜೆ ಸಚಿನ್‌ ಮೀನಾ ಹಾಗೂ ಸೀಮಾ ಹೈದರ್‌ 2019ರಲ್ಲಿ ಪಬ್ಜಿ ಆನ್ಲೈನ್‌ ಗೇಮಿಂಗ್‌ ಪ್ಲಾಟ್ಫಾರ್ಮ್‌ ಮೂಲಕ ಪರಿಚಯವಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ಸೀಮಾ ಹೈದರ್‌ ಗಂಡ ಗುಲಾಮ್‌ ಹೈದರ್ನನ್ನು ತೊರೆದು ತನ್ನ ನಾಲ್ಕು ಮಕ್ಕಳೊಂದಿಗೆ ಮೇ 2023ರಲ್ಲಿ ಪಾಕಿಸ್ತಾನದ ತಮ ಕರಾಚಿ ನಿವಾಸದಿಂದ ನೇಪಾಳಕ್ಕೆ ತೆರಳಿ, ಅಲ್ಲಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಸೀಮಾ ಹೈದರ್‌ ಹಾಗೂ ಸಚಿನ್‌ ಮೀನಾ ನೇಪಾಳದ ಪಶು ಪತಿನಾಥ ದೇವಾಲಯದಲ್ಲಿ ಮದುವೆಯಾಗಿದ್ದರು. ಮತಾಂತರದ ಬಳಿಕ ಎಂಟು ವರ್ಷದ ಮಗ ಫರ್ಹಾನ್‌ ಅಲಿಯನ್ನು ರಾಜ್‌ ಎಂದು ಮರುನಾಮಕರಣ ಮಾಡಿದ್ದರು. ಮೂವರು ಪುತ್ರಿಯರಾದ ಫರ್ವಾ, ಫರಿಹಾ ಬಟೂಲ್‌, ಹಾಗೂ ಫರ್ಹಾ ಅವರಿಗೆ ಕ್ರಮವಾಗಿ ಪ್ರಿಯಾಂಕಾ, ಮುನ್ನಿ ಹಾಗೂ ಪರಿ ಎಂದು ಹೆಸರು ಬದಲಾಯಿಸಿದ್ದರು.

RELATED ARTICLES

Latest News