Thursday, May 2, 2024
Homeಅಂತಾರಾಷ್ಟ್ರೀಯಪಾಕ್ 2ನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ, 12ಕ್ಕೂ ಹೆಚ್ಚು ಸಿಬ್ಬಂದಿ ಸಾವು

ಪಾಕ್ 2ನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ, 12ಕ್ಕೂ ಹೆಚ್ಚು ಸಿಬ್ಬಂದಿ ಸಾವು

ಇಸ್ಲಾಮಾಬಾದ್,ಮಾ.26- ಪಾಕಿಸ್ತಾನದ 2ನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣವಾದ ಟರ್ಬತ್‍ನಲ್ಲಿರುವ ಪಿಎನ್‍ಎಸ್ ಸಿದ್ದಿಕ್ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಒಂದು ಡಜನ್‍ಗಿಂತಲೂ ಹೆಚ್ಚು ಪಾಕಿಸ್ತಾನಿ ಸಿಬ್ಬಂದಿಯನ್ನು ಕೊಂದಿರುವುದಾಗಿ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಹೇಳಿಕೊಂಡಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.

ಇದಲ್ಲದೆ, ತನ್ನ ಹೋರಾಟಗಾರರೊಬ್ಬರು ಪಿಎನ್‍ಎಸ್ ಸಿದ್ದಿಕ್ ಮೇಲೆ ದಾಳಿ ಮಾಡಿದ ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಿದೆ. ಅಲ್ಲಿ ದಾಳಿ ಮಾಡಿದವನು ವಿವಿಧ ವಾಹನಗಳನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ. ದಾಳಿಯ ಹೊಣೆ ಹೊತ್ತುಕೊಂಡಿರುವ ಮಜೀದ್ ಬ್ರಿಗೇಡ್ ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಪಾಕಿಸ್ತಾನ ಹಾಗೂ ಚೀನಾ ಎರಡೂ ಸೇರಿ ಬಲೂಚಿಸ್ತಾನದ ಸಂಪನ್ಮೂಲವನ್ನು ಕಬಳಿಸುತ್ತಿವೆ ಎಂದು ಬಿಎಎಲ್ ಆರೋಪಿಸಿದೆ. ದಾಳಿಗೊಳಗಾದ ಪಾಕ್‍ನ ವಾಯುನೆಲೆಯೊಳಗೆ ನಮ್ಮ ಯೋಧರು ನುಗ್ಗಿದ್ದಾರೆ ಎಂದು ಬಿಎಎಲ್ ಹೇಳಿಕೊಂಡಿದೆ.

ಈ ದಾಳಿಯಲ್ಲಿ ಆರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ, ಇದರಲ್ಲಿ ನಾಲ್ವರು ಕೊಲ್ಲಲ್ಪಟ್ಟರು ಮತ್ತು ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಡರಾತ್ರಿ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ.ಈ ದಾಳಿಯಿಂದಾಗಿ ಕನಿಷ್ಠ ಮೂರು ಗಂಟೆಗಳ ಕಾಲ ನಿರಂತರ ಗುಂಡಿನ ದಾಳಿ ಮುಂದುವರೆದಿತ್ತು ಎಂದು ವರದಿಯಾಗಿದೆ.

ಹಲವು ಹೆಲಿಕಾಪ್ಟರ್ಗಳು ಆಕಾಶದಲ್ಲಿ ಹಾರಾಡುತ್ತಾ ಗಸ್ತು ತಿರುಗುವಂತೆ ಕಂಡು ಬಂದಿತ್ತು. ಜೊತೆಗೆ ಗುಂಡಿನ ಚಕಮಕಿ ನಡೆದಿತ್ತು ಎಂದು ವರದಿಯಾಗಿದೆ. ಈ ದಾಳಿಯ ಹಿನ್ನೆಲೆಯಲ್ಲಿ ಫ್ರಾಂಟಿಯರ್ ಕಾಪ್ರ್ಸ್ ಹಲವಾರು ಪ್ರಮುಖ ಟರ್ಬಟ್ ರಸ್ತೆಗಳನ್ನು ಬಂದ್ ಮಾಡಿದೆ ಮತ್ತು ಫ್ರಾಂಟಿರ್ಯ ಕಾಪ್ರ್ಸ್ ಸಿಬ್ಬಂದಿಯ ದೊಡ್ಡ ತುಕಡಿಯು ನೌಕಾ ವಾಯುನೆಲೆಯ ಕಡೆಗೆ ಚಲಿಸಿದೆ ಎಂದು ವರದಿಯಾಗಿದೆ.

ಇದರ ಬೆನ್ನಲ್ಲೇ ಹೆಲಿಕಾಪ್ಟರ್‍ಗಳು ಆಕಾಶದಲ್ಲಿ ಗಸ್ತು ತಿರುಗಿವೆ. ಟರ್ಬಟ್ ಮಿಲಿಟರಿ ಚಟುವಟಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ದಾಳಿಯ ಹಿನ್ನೆಲೆಯಲ್ಲಿ ಟರ್ಬತ್‍ನ ಬೋಧನಾ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ವೈದ್ಯರಿಗೆ ಸೂಚನೆ ನೀಡಲಾಗಿದೆ.

ಈ ದಾಳಿಯಿಂದಾಗಿ ಟರ್ಬಟ್‍ನ ಬೋಧನಾ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಬಲೂಚಿಸ್ತಾನ್ ಲಿಬರೇಷ್ ಆರ್ಮಿ ನಡೆಸಿದ ಈ ದಾಳಿಯೂ ಒಂದೇ ವಾರದಲ್ಲಿ ನಡೆದ 2ನೇ ದಾಳಿಯಾಗಿದೆ. ಹಾಗೆಯೇ ವರ್ಷದಲ್ಲಿ ನಡೆದ ಮೂರನೇ ದಾಳಿಯಾಗಿದೆ. ಇದಕ್ಕೂ ಮೊದಲು ಜನವರಿ 29ರಂದು ಮೆಕ್ ನಗರವನ್ನು ಬಿಎಎಲ್ ಗುರಿ ಮಾಡಿ ದಾಳಿ ನಡೆಸಿತ್ತು. ಇದಾದ ನಂತರ ಮಾರ್ಚ್ 20 ರಂದು ಗ್ವಾದರ್‍ನಲ್ಲಿರುವ ಮಿಲಿಟರಿ ಹೆಡ್ ಕ್ವಾರ್ಟರ್ ಮೇಲೆಯೂ ದಾಳಿ ನಡೆಸಿತ್ತು.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಪ್ರಮುಖವಾದ ಗ್ವಾದರ್ ಬಂದರಿನಲ್ಲಿ ಪಿ ಸಿದ್ದಿಕಿ ನೌಕಾ ವಿಮಾನ ನಿಲ್ದಾಣವಿದೆ. ಇದರ ಅಡಿಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ರಸ್ತೆಗಳು ಮತ್ತು ಇಂಧನ ಯೋಜನೆಗಳು ನಿರ್ಮಾಣವಾಗಲಿವೆ. ಇದು ಚೀನಾದ ಯೋಜನೆಯಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‍ಭಾಗವಾಗಿದೆ.

ಬಲೂಚಿಸ್ತಾನದಲ್ಲಿ ಚೀನಾ ಮಾಡುತ್ತಿರುವ ಹೂಡಿಕೆಯನ್ನು ಮಜೀದ್ ಬ್ರಿಗೇಡ್ ವಿರೋಧಿಸುತ್ತದೆ. ಚೀನಾ ಮತ್ತು ಪಾಕಿಸ್ತಾನಗಳು ಈ ಪ್ರದೇಶದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎನ್ನುವುದು ಅವರ ವಾದವಾಗಿದೆ. ಮಜೀದ್ ಬ್ರಿಗೇಡ್‍ನಿಂದ ಈ ವಾರ ನಡೆದ ಎರಡನೇ ದಾಳಿ ಇದಾಗಿದ್ದು, ಈ ವರ್ಷ ಮೂರನೇ ದಾಳಿಯಾಗಿದೆ.

RELATED ARTICLES

Latest News