Thursday, September 19, 2024
Homeರಾಷ್ಟ್ರೀಯ | Nationalಮನೆಯ ಮೇಲೆ ಬಿತ್ತು ವಿಮಾನದ ಎಂಜಿನ್‌ ತುಣುಕು

ಮನೆಯ ಮೇಲೆ ಬಿತ್ತು ವಿಮಾನದ ಎಂಜಿನ್‌ ತುಣುಕು

Part from Aircraft lands over house in Delhi's Vasant Kunj; probe underway

ನವದೆಹಲಿ,ಸೆ.5- ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ವಿಮಾನೆ ಎಂಜಿನ್‌ನಿಂದ ಲೋಹದ ವಸ್ತುವೊಂದು ಮನೆಯ ಮೇಲೆ ಬಿದ್ದಿರುವ ಘಟನೆ ವರದಿಯಾಗಿದೆ.ತಕ್ಷಣವೇ, ಆ ಸಮಯದಲ್ಲಿ ಟೇಕ್‌ ಆಫ್‌ ಆಗುತ್ತಿದ್ದ ಎಲ್ಲಾ ವಿಮಾನಗಳ ಪೈಲಟ್‌ಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಇದರ ನಂತರ, ವಿಮಾನವನ್ನು ಗುರುತಿಸಿ ಮತ್ತು ಅದನ್ನು ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲು ಸೂಚನೆಗಳನ್ನು ನೀಡಲಾಗಿತ್ತು.

ಈ ಘಟನೆ ಸೆ.2 ರಂದು ತಡರಾತ್ರಿ 9.30 ರ ಸುಮಾರಿಗೆ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಖಾಸಗಿ ವಿಮಾನಯಾನ ಸಂಸ್ಥೆಯೊಂದು ಐಜಿಐ ವಿಮಾನ ನಿಲ್ದಾಣದಿಂದ ಹೊರಟಿತ್ತು. ವಿಮಾನವು ವಸಂತ್‌ ಕುಂಜ್‌ ಪ್ರದೇಶದಿಂದ ಹೊರಡುವಾಗ, ಅದರ ಕೆಲವು ಲೋಹದ ತುಣುಕುಗಳು ಆ ಪ್ರದೇಶದ ಮನೆಯೊಂದರ ಛಾವಣಿಯ ಮೇಲೆ ಬಿದ್ದಿದ್ದವು.

ತಕ್ಷಣ ಮನೆಯ ಮಾಲೀಕರು ದೆಹಲಿ ಪೊಲೀಸ್‌‍ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ಹೊರಗೆ ವಿಮಾನದ ಎಂಜಿನ್‌ನ ಭಾಗ ಪತ್ತೆಯಾದ ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಸೋಮವಾರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್‌ ಇಂಡಿಯಾ ಎಕ್‌್ಸಪ್ರೆಸ್‌‍ ವಿಮಾನದಿಂದ ಈ ಲೋಹದ ವಸ್ತುಗಳು ಬಿದ್ದಿರಬಹುದು ಎಂದು ಮೂಲಗಳು ತಿಳಿಸಿವೆ.

ಬಹುಶಃ ವಿಮಾನ ಎಂಜಿನ್‌ನಿಂದ ಮುರಿದ ಬ್ಲೇಡ್‌ನ ಭಾಗ ಇದಾಗಿರಬಹುದು. ಆದಾಗ್ಯೂ, ಲೋಹದ ತುಂಡುಗಳು ಆ ವಿಮಾನದದ್ದೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಐಜಿಐ ವಿಮಾನ ನಿಲ್ದಾಣ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇದಾದ ನಂತರ ವಸಂತ್‌ ಕುಂಜ್‌ ಕಡೆಗೆ ಹಾರಿದ ವಿಮಾನಗಳನ್ನು ಗುರುತಿಸುವ ಕಾರ್ಯ ತ್ವರಿತವಾಗಿ ಆರಂಭವಾಯಿತು. ಆದಾಗ್ಯೂ, ಸ್ವಲ್ಪ ತನಿಖೆಯ ನಂತರ, ಆ ಸಮಯದಲ್ಲಿ ಐಜಿಐ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಮತ್ತು ಲ್ಯಾಂಡ್‌ ಆಗುವ ಬಗ್ಗೆ ಎಟಿಸಿ ವಿಮಾನದ ಪೈಲಟ್‌ಗೆ ಮಾಹಿತಿ ನೀಡಿತು. ಏರ್‌ ಇಂಡಿಯಾ ಎಕ್‌್ಸಪ್ರೆಸ್‌‍ ವಿಮಾನ ಐಎಕ್‌್ಸ -145 ನ ಭಾಗ ಅದು ಎಂದು ತಿಳಿದುಬಂದಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಸುರಕ್ಷಿತವಾಗಿದ್ದಾರೆ.

RELATED ARTICLES

Latest News