Sunday, September 15, 2024
Homeರಾಷ್ಟ್ರೀಯ | Nationalಮೊಮ್ಮಗನಿಂದಲೇ ಕೊಲೆಯಾದ ನಿವೃತ್ತ ಯೋಧ

ಮೊಮ್ಮಗನಿಂದಲೇ ಕೊಲೆಯಾದ ನಿವೃತ್ತ ಯೋಧ

Retired Soldier was killed by his grandson

ನವದೆಹಲಿ,ಸೆ.5- ಆಸ್ತಿ ವ್ಯಾಮೋಹದಿಂದ ಮೊಮಗನೆ ನಿವೃತ ಸೈನಿಕರಾಗಿದ್ದ ತಾತನನ್ನು ಕೊಲೆ ಮಾಡಿರುವ ಘಟನೆ ದೆಹಲಿಯ ಆದರ್ಶ್ನಗರದಲ್ಲಿ ನಡೆದಿದೆ.ತಾತ ಭೋಜರಾಜ್‌ ಅವರನ್ನು ಕೊಂದ ಪಾಪಿ ಮೊಮಗನ್ನು 35 ವರ್ಷದ ಪ್ರದೀಪ್‌ ಎಂದು ಗುರುತಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

1985 ರಲ್ಲಿ ಭಾರತೀಯ ಸೇನೆಯಿಂದ ನಿವತ್ತರಾಗಿದ್ದ ಮಾಜಿ ಹವಾಲ್ದಾರ್‌ ಭೋಜರಾಜ್‌ ಅವರು ತಮ ಪಿಂಚಣಿ ಹಣವನ್ನು ತನ್ನ ಇಬ್ಬರು ಪುತ್ರರಾದ ಜಯವೀರ್‌ ಮತ್ತು ಸುರೇಶ್‌ ಅವರಿಗೆ ಕೊಡುತ್ತಿದ್ದರು. ಅವರು ಇಬ್ಬರು ಪುತ್ರರಿಗೂ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು ಆದರೆ ಆಜಾದ್‌ಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಪಿಂಚಣಿ ಹಣ ಹಂಚಿಕೆ ವಿಚಾರವಾಗಿ ಸುರೇಶ್‌ ಅವರ ಪುತ್ರ ಪ್ರದೀಪ್‌ ಭೋಜರಾಜ್‌ ಜತೆ ವಾಗ್ವಾದ ನಡೆಸಿದಾಗ ಈ ಘಟನೆ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಪ್ರದೀಪ್‌ ಭೋಜರಾಜ್‌ ಅವರನ್ನು ದೊಣ್ಣೆಯಿಂದ ಪದೇ ಪದೇ ಥಳಿಸಿದ್ದ ಎನ್ನಲಾಗಿದೆ.

ಭೋಜರಾಜ್‌ ತೀವ್ರವಾಗಿ ಗಾಯಗೊಂಡಿದ್ದು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಪ್ರದೀಪ್‌ನನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ.

RELATED ARTICLES

Latest News