Sunday, September 15, 2024
Homeರಾಷ್ಟ್ರೀಯ | Nationalಕುಡಿದ ನಶೆಯಲ್ಲಿ ತಾಯಿ ಮೇಲೆ ಅತ್ಯಾಚಾರವೆಸಗಿದ ಪಾಪಿಪುತ್ರ

ಕುಡಿದ ನಶೆಯಲ್ಲಿ ತಾಯಿ ಮೇಲೆ ಅತ್ಯಾಚಾರವೆಸಗಿದ ಪಾಪಿಪುತ್ರ

Shocking Incident in Rajasthan: Son Arrested for Raping His Mother in Bundi District

ಜೈಪುರ,ಸೆ.5- ಕುಡಿತದ ಮತ್ತಿನಲ್ಲಿದ್ದ ಮಗ ತನ್ನ ತಾಯಿಯ ಮೇಲೆ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ರಾಜಸ್ಥಾನದಲ್ಲಿ ನಡೆದಿದೆ.ದೂರದಲ್ಲಿರುವ ತನ್ನ ಸಹೋದರ ಮನೆಗೆ ಪುತ್ರನೊಂದಿಗೆ ತೆರಳಿದ್ದ 52 ವರ್ಷದ ಮಹಿಳೆ ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ಕುಡಿತದ ಮತ್ತಿನಲ್ಲಿದ್ದ ಮಗನೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಬ್ಬ ಮಗ ಹಾಗೂ ಮಗಳೊಂದಿಗೆ ದಾಬಿ ಪೊಲೀಸ್‌‍ ಠಾಣೆಗೆ ತೆರಳಿ ಕಾಮುಕ ಮಗನ ವಿರುದ್ಧ ಆ ತಾಯಿ ದೂರು ನೀಡಿದ್ದಾರೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

ನಾವು ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಉಪ ಪೊಲೀಸ್‌‍ ವರಿಷ್ಠಾಧಿಕಾರಿ (ಡಿಎಸ್ಪಿ) ತರುಂಕಂತ್‌ ಸೋಮಾನಿ ತಿಳಿಸಿದ್ದಾರೆ.

RELATED ARTICLES

Latest News