Thursday, September 19, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-09-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-09-2024)

Horoscope

ನಿತ್ಯ ನೀತಿ : ಸಂತೋಷ, ನಂಬಿಕೆ ಎನ್ನುವುದು ಮಾರಾಟಕ್ಕೆ ದೊರಕುವುದಿಲ್ಲ. ಸಂತೋಷವನ್ನು ಮನುಷ್ಯರ ಬಳಿ ಹಂಚಿಕೊಳ್ಳಬೇಕು. ನಂಬಿಕೆಯನ್ನು ಮನಸ್ಸಿನಿಂದ ಹಂಚಿಕೊಳ್ಳಬೇಕು.

ಪಂಚಾಂಗ : ಶುಕ್ರವಾರ , 06-09-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಹಸ್ತ / ಯೋಗ: ಶುಕ್ಲ / ಕರಣ: ವಣಿಜ್

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.27
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ಹವಾಮಾನ ವೈಪರೀತ್ಯದಿಂದಾಗಿ ದೂರ ಪ್ರಯಾಣ ರದ್ದು ಮಾಡಬೇಕಾಗಬಹುದು.
ವೃಷಭ: ವ್ಯಾಪಾರದಲ್ಲಿ ಅನುಕೂಲವಾಗಲಿದೆ. ಸಂಗಾತಿ ಮನೆ ಕಡೆಯಿಂದ ಶುಭ ಸುದ್ದಿ ಬರಲಿದೆ.
ಮಿಥುನ: ತಾಳ್ಮೆಯಿಂದ ವರ್ತಿಸಿದರೆ ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ.

ಕಟಕ: ಯಾರನ್ನೂ ಅತಿಯಾಗಿ ನಂಬಲು ಹೋಗ ದಿರಿ. ಪರಾವಲಂಬನೆಯಿಂದ ಅಪಾಯವೇ ಹೆಚ್ಚು.
ಸಿಂಹ: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ವಾಹನದಿಂದ ಅಪಾಯ ಎದುರಾಗಲಿದೆ.
ಕನ್ಯಾ: ಹೊಸ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ತುಲಾ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಧನುಸ್ಸು: ದುಡುಕು ಮಾತುಗಳನ್ನಾಡದಿರಿ. ಆಟಗಾರರಿಗೆ ನಿರೀಕ್ಷಿತ ಫಲ ಸಿಗಲಿದೆ.

ಮಕರ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನು ಖರ್ಚು ಮಾಡದಿರಿ.
ಕುಂಭ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಮೀನ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.

RELATED ARTICLES

Latest News