Monday, September 16, 2024
Homeರಾಷ್ಟ್ರೀಯ | Nationalಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಮದ್ಯ ಕುಡಿಸಿ ರಸ್ತೆ ಮಧ್ಯೆಯೇ ಅತ್ಯಾಚಾರ

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಮದ್ಯ ಕುಡಿಸಿ ರಸ್ತೆ ಮಧ್ಯೆಯೇ ಅತ್ಯಾಚಾರ

Man Gets Woman Drunk, Rapes Her On Road In Madhya Pradesh

ಭೂಪಾಲ್‌,ಸೆ.6– ದುಷ್ಕರ್ಮಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಮದ್ಯಪಾನ ಮಾಡಿಸಿ ರಸ್ತೆಯಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು ಈ ವಿಷಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಉಜ್ಜಯಿನಿಯ ಕೊ್ಲಾ ಫಾಟಕ್‌ ಬಳಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನೆಯ ವಿಡಿಯೋ ವೈರಲ್‌ ಆದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಡಿಯೋ ವೈರಲ್‌ ಆದ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತ ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಯುವಕ ತನ್ನನ್ನು ಮದುವೆಯಾಗುವುದಾಗಿ ಆಮಿಷ ಒಡ್ಡಿ ನಂತರ ಮದ್ಯ ಕುಡಿಸಿ ನಂತರ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ಲೋಕೇಶ್‌ ಎಂದು ಹೇಳಲಾಗಿದ್ದು, ಕತ್ಯ ಎಸಗಿ ಅಲ್ಲಿಂದ ಪರಾರಿಯಾಗಿದ್ದ.

ನಂತರ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಡಿಯೋ ಆಧರಿಸಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉಜ್ಜಯಿನಿ ಸೆಂಟ್ರಲ್‌ ಕೊತ್ವಾಲಿ ಪೊಲೀಸ್‌‍ ಠಾಣೆಯ ಸಿಎಸ್‌‍ ಪಿ ಓಂ ಪ್ರಕಾಶ್‌ ಮಿಶ್ರಾ ತಿಳಿಸಿದ್ದಾರೆ.

RELATED ARTICLES

Latest News