Saturday, July 20, 2024
Homeಬೆಂಗಳೂರುಬಿಸಿಲಿನ ತಾಪಕ್ಕೆ ಮೆಕ್ಕಾದಲ್ಲಿ ಬೆಂಗಳೂರಿನ ಇಬ್ಬರು ಸಾವು

ಬಿಸಿಲಿನ ತಾಪಕ್ಕೆ ಮೆಕ್ಕಾದಲ್ಲಿ ಬೆಂಗಳೂರಿನ ಇಬ್ಬರು ಸಾವು

ಬೆಂಗಳೂರು, ಜೂ.20- ಹಜ್‌ ನಿರ್ವಹಣೆಗೆ ತೆರೆಳಿದ್ದ ಬೆಂಗಳೂರು ನಗರದ ಇಬ್ಬರು ಯಾತ್ರಿಗಳು ಬಿಸಿಲಿನ ತಾಪಕ್ಕೆ ಮೃತಪಟ್ಟಿದ್ದಾರೆಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆರ್‌ಟಿ ನಗರದ ನಿವಾಸಿ ಕೌಸರ್‌ ರುಕ್ಸಾನ(69) ಮತ್ತು ಪ್ರೇಜರ್‌ ಟೌನ್‌ ನಿವಾಸಿ ಮೊಹಮದ್‌ ಇಲಿಯಾಸ್‌‍ ಮೃತಪಟ್ಟ ಹಜ್‌ ಯಾತ್ರಿಗಳು.

ಹಜ್‌ ನಿರ್ವಹಣೆಗಾಗಿ ಈ ಇಬ್ಬರು ಮೆಕ್ಕಾಗೆ ಹೋಗಿದ್ದರು. ಮೆಕ್ಕಾದ 8 ಕಿ.ಮೀ. ದೂರದಲ್ಲಿ ಇವರು ಬಿಸಿಲಿನ ಶಾಖಕ್ಕೆ ಮೃತಪಟ್ಟಿದ್ದಾರೆ.ಈ ಇಬ್ಬರು ಯಾತ್ರಿಗಳ ಅಂತ್ಯಸಂಸ್ಕಾರವನ್ನು ಮೆಕ್ಕಾದಲ್ಲೇ ನೆರವೇರಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

RELATED ARTICLES

Latest News