Monday, December 2, 2024
Homeರಾಷ್ಟ್ರೀಯ | Nationalಅಧಿವೇಶನ ಆರಂಭಕ್ಕೂ ಮುನ್ನ ರಾಹುಲ್ ಗಾಂಧಿಗೆ ಮೋದಿ ತರಾಟೆ

ಅಧಿವೇಶನ ಆರಂಭಕ್ಕೂ ಮುನ್ನ ರಾಹುಲ್ ಗಾಂಧಿಗೆ ಮೋದಿ ತರಾಟೆ

People have rejected 'some parties' again, strengthened Lok Sabha

ನವದೆಹಲಿ,ನ.25- ಪ್ರತಿಪಕ್ಷಗಳು ಸಂಸತ್ ಅಧಿವೇಶನವನ್ನು ಅಡ್ಡಿಪಡಿಸುವ ಮೂಲಕ ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಜನರಿಂದ ನಿರಂತರವಾಗಿ ತಿರಸ್ಕರಿಸಲ್ಪಟ್ಟವರು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ದ ಬೇಸರ ವ್ಯಕ್ತಪಡಿಸಿದರು.

ಇಂದು ಸಂಸತ್ತಿನ ಅಧಿವೇಶನದ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ, ಪ್ರತಿಪಕ್ಷಗಳನ್ನು ಉಲ್ಲೇಖಿಸಿ ಕೆಲವರು ಹೊಸ ಸಂಸದರ ಆಲೋಚನೆಗಳು, ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ತಿರಸ್ಕೃತರಾಗಿರುವ ಕೆಲವರು ಬೆರಳೆಣಿಕೆಯ ಜನರು ಗೂಂಡಾಗಿರಿಯ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಗೂಂಡಾಗಳನ್ನು ಸಾರ್ವಜನಿಕರು ಶಿಕ್ಷಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರು ಅವರನ್ನು ಗಮನಿಸುತ್ತಿದ್ದಾರೆ, ಇಂತಹವರು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ. ಪ್ರತಿಪಕ್ಷಗಳು ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಬೇಕು. ಪ್ರತಿಪಕ್ಷಗಳು ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಬೇಕು.ಕೆಲವು ವಿರೋಧ ಪಕ್ಷದ ಸಂಸದರು ತಮ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲ. ಅವರಿಗೆ ಜನರ ಆಶೋತ್ತರಗಳ ಬಗ್ಗೆ ಕಾಳಜಿ ಇಲ್ಲ. ಜಗತ್ತು ಭಾರತದತ್ತ ನಿರೀಕ್ಷೆಯಿಂದ ನೋಡುತ್ತಿದೆ.

ಚರ್ಚೆಯು ಕೆಲವು ಅರ್ಥಪೂರ್ಣ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.ಅತ್ಯಂತ ನೋವಿನ ಸಂಗತಿಯೆಂದರೆ, ಹೊಸ ಸಂಸದರು ಹೊಸ ಆಲೋಚನೆಗಳನ್ನು, ಹೊಸ ಶಕ್ತಿಯನ್ನು ತರುತ್ತಾರೆ. ಅವರು ಯಾವುದೇ ಒಂದು ಪಕ್ಷಕ್ಕೆ ಸೇರಿಲ್ಲ ಎಲ್ಲಾ ಪಕ್ಷಗಳಿಗೆ ಸೇರಿದವರು. ಆದರೆ, ಕೆಲವರು ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ, ಅವರಿಗೆ ಸದನದಲ್ಲಿ ಮಾತನಾಡುವ ಅವಕಾಶವೂ ಸಿಗುವುದಿಲ್ಲ.

80-90 ಬಾರಿ ಜನರಿಂದ ನಿರಂತರವಾಗಿ ತಿರಸ್ಕರಿಸಲ್ಪಟ್ಟವರು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ. ಅವರು ಪ್ರಜಾಪ್ರಭುತ್ವದ ಮನೋಭಾವವನ್ನು ಗೌರವಿಸುವುದಿಲ್ಲ ಅಥವಾ ಜನರ ಆಶೋತ್ತರಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವರಿಗೆ ಜನರ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲ, ಅವರು ಅವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವೆಂದರೆ ಅವರು ಎಂದಿಗೂ ಜನರ ನಿರೀಕ್ಷೆಗಳಿಗೆ ತಕ್ಕಂತೆ ಬದುಕುವುದಿಲ್ಲ ಎಂದು ಪ್ರಧಾನಿ ಹೇಳಿದರು.

2024 ರ ಕೊನೆಯ ಹಂತವು ನಡೆಯುತ್ತಿದೆ ಮತ್ತು ದೇಶವು 2025ಕ್ಕೆ ತಯಾರಿ ನಡೆಸುತ್ತಿದೆ. ಸಂಸತ್ತಿನ ಈ ಅಧಿವೇಶನವು ಹಲವಾರು ವಿಧಗಳಲ್ಲಿ ವಿಶೇಷವಾಗಿದೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಸಂವಿಧಾನದ 75ನೇ ವರ್ಷದ ಆರಂಭವಾಗಿದೆ. ನಾಳೆ ಸಂವಿಧಾನ್ ಸದನದಲ್ಲಿ ಎಲ್ಲರೂ ನಮ ಸಂವಿಧಾನದ 75ನೇ ವರ್ಷವನ್ನು ಆಚರಿಸಲಿದ್ದಾರೆ ಎಂದರು.

ಹೊಸ ಆಲೋಚನೆಗಳು ಮತ್ತು ಶಕ್ತಿಯನ್ನು ಹೊಂದಿರುವ ಹೊಸ ಸಂಸದರಿಗೆ ಮಾತನಾಡಲು ಬಿಡಬೇಕು, ಜಗತ್ತು ಭಾರತದತ್ತ ನೋಡುತ್ತಿದೆ. ಪ್ರಪಂಚದಲ್ಲಿ ಭಾರತಕ್ಕೆ ಇಂದಿನಂತೆ ಅಂತಹ ಅವಕಾಶಗಳು ಸಿಗುವುದು ಅಪರೂಪ. ಜಗತ್ತಿಗೆ ಸಂದೇಶ ಹೋಗಬೇಕು.ಹೊಸ ಸಂಸದರು ಹೊಸ ಆಲೋಚನೆಗಳನ್ನು, ಹೊಸ ಶಕ್ತಿಯನ್ನು ತರುತ್ತಾರೆ ಮತ್ತು ಅವರು ಯಾವುದೇ ಒಂದು ಪಕ್ಷಕ್ಕೆ ಸೇರಿಲ್ಲ ಆದರೆ ಎಲ್ಲಾ ಪಕ್ಷಗಳಿಗೆ ಸೇರಿದವರು. ಕೆಲವರು ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ, ಅವರಿಗೆ ಸದನದಲ್ಲಿ ಮಾತನಾಡುವ ಅವಕಾಶವೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನು ಸರಿದೂಗಿಸಲು ಇರುವ ಏಕೈಕ ಮಾರ್ಗವೆಂದರೆ ನಾವು ಪ್ರತಿ ವಿಷಯದ ವಿವಿಧ ಅಂಶಗಳನ್ನು ಸದನದಲ್ಲಿ ಆರೋಗ್ಯಕರ ರೀತಿಯಲ್ಲಿ ಹೈಲೈಟ್ ಮಾಡಬೇಕು, ಮುಂಬರುವ ಪೀಳಿಗೆಗಳು ಸಹ ಅದರಿಂದ ಸ್ಫೂರ್ತಿ ಪಡೆಯುತ್ತವೆ ಎಂದು ಹೇಳಿದರು.

ಸ್ಪೀಕರ್ ಹೇಳಿದ್ದೇನು? :
ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಕಾರಾತಕ ಸಂವಾದದಲ್ಲಿ ಭಾಗವಹಿಸಲು ಮತ್ತು ಅಧಿವೇಶನದಲ್ಲಿ ಸಹಕರಿಸುವಂತೆ ಸಂಸದರನ್ನು ಒತ್ತಾಯಿಸಿದರು. ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಎತ್ತುತ್ತಾರೆ ಎಂದು ಅವರು ನಿರೀಕ್ಷಿಸುತ್ತಿದ್ದು, ಅದು ಸದನದ ದಕ್ಷತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣಕ್ಕೆ ನಮ ಕೊಡುಗೆಗೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.

ಎಕ್‌್ಸ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸ್ಪೀಕರ್, ಸದನದ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಗೌರವಾನ್ವಿತ ಸದಸ್ಯರು ಸಂಸದೀಯ ಕಾರ್ಯವಿಧಾನಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಸಂವಿಧಾನವು ಸಾಮಾಜಿಕ ದಾಖಲೆ ಮತ್ತು ಸಾಮಾಜಿಕ ಬದಲಾವಣೆಯ ಮೂಲವಾಗಿರುವುದರಿಂದ ಅದನ್ನು ರಾಜಕೀಯದಿಂದ ದೂರವಿಡಬೇಕು ಎಂದು ಲೋಕಸಭೆ ಸ್ಪೀಕರ್ ಹೇಳಿದ್ದಾರೆ.

RELATED ARTICLES

Latest News