Friday, January 31, 2025
Homeಅಂತಾರಾಷ್ಟ್ರೀಯ | Internationalಪರ್‌ಪ್ಲೆಕ್ಸಿಟಿ - ಟಿಕ್‌ಟಾಕ್‌ ವಿಲೀನಕ್ಕೆ ಹೊಸ ಪ್ರಯತ್ನ

ಪರ್‌ಪ್ಲೆಕ್ಸಿಟಿ – ಟಿಕ್‌ಟಾಕ್‌ ವಿಲೀನಕ್ಕೆ ಹೊಸ ಪ್ರಯತ್ನ

Perplexity AI proposes TikTok merger with 50% stake for US government: Source

ವಾಷಿಂಗ್ಟನ್‌,ಜ.27-ಪರ್‌ಪ್ಲೆಕ್ಸಿಟಿ ಎಐ ಕಂಪನಿಯು ಟಿಕ್‌ಟಾಕ್‌ ಕಂಪನಿಯನ್ನು ತನ್ನಲ್ಲಿ ವಿಲೀನಗೊಳಿಸಿ ಹೊಸ ಸಂಸ್ಥೆಯನ್ನು ರೂಪಿಸುವ ಹೊಸ ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

ಈ ಹೊಸ ಪ್ರಸ್ತಾವನೆಯು ಅಮೆರಿಕ ಸರ್ಕಾರವು ಹೊಸದಾಗಿ ಸೃಷ್ಟಿಯಾಗುವ ಸಂಸ್ಥೆಯಲ್ಲಿ ಶೇ.50ರಷ್ಟು ಷೇರುಗಳನ್ನು ಹೊಂದಲು ಅವಕಾಶ ಕಲ್ಪಿಸುತ್ತದೆ.ಜನವರಿ 18 ರಂದು ಟಿಕ್‌ಟಾಕ್‌ನ ಪೋಷಕ ಸಂಸ್ಥೆ ಬೈಟ್‌ಡಾನ್ಸ್ ಗೆ ಟಿಕ್‌ಟಾಕ್‌ ಅನ್ನು ನಿಷೇಧಿಸುವ ಕಾನೂನು ಜಾರಿಯಾಗುವ ಮುನ್ನ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗಿನದು ಅದರ ಪರಿಷ್ಕೃತ ಪ್ರಸ್ತಾವನೆಯಾಗಿದೆ.

ಮೊದಲನೆಯ ಪ್ರಸ್ತಾವನೆಯಲ್ಲಿ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಕೃತಕ ಬುದ್ಧಿಮತ್ತೆ ನವೋದ್ಯಮ ಪರ್‌ಪ್ಲೆಕ್ಸಿಟಿಯ ಜೊತೆಗೆ ಟಿಕ್‌-ಟಾಕ್‌ನ ಅಮೆರಿಕದ ವಹಿವಾಟುಗಳನ್ನು ವಿಲೀನಗೊಳಿಸಿ ಹೊಸ ಸಂಸ್ಥೆ ಹುಟ್ಟುಹಾಕಲು ಕೋರಲಾಗಿತ್ತು. ಇದಕ್ಕೆ ಬೈಟ್‌ಡಾನ್ಸ್ ಪ್ರತಿಕ್ರಿಯೆ ನೀಡಿರಲಿಲ್ಲ.

ಹೊಸ ಪ್ರಸ್ತಾವನೆಯಲ್ಲಿ ಸಾರ್ವಜನಿಕ ಹೂಡಿಕೆಗೂ ಅವಕಾಶ ಕಲ್ಪಿಸಲಾಗಿದ್ದು ಕನಿಷ್ಠ ಪಕ್ಷ 300 ಶತಕೋಟಿ ಡಾಲರ್‌ಗಳಿಗೂ ಅಧಿಕ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ ಎಂದು ಕಂಪನಿಗೆ ಸಂಬಂಧಪಟ್ಟವರೊಬ್ಬರು ತಿಳಿಸಿದ್ದಾರೆ.ಬೈಟ್‌ಡಾನ್‌್ಸ ಮತ್ತು ಟಿಕ್‌ಟಾಕ್‌ ಕಂಪನಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

RELATED ARTICLES

Latest News