Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಹಾವು ಕಚ್ಚಿದ್ದನ್ನ ಮುಳ್ಳು ಚುಚ್ಚಿದೆ ಭಾವಿಸಿ ನಿರ್ಲಕ್ಷಿಸಿದ್ದ ವ್ಯಕ್ತಿ ಸಾವು

ಹಾವು ಕಚ್ಚಿದ್ದನ್ನ ಮುಳ್ಳು ಚುಚ್ಚಿದೆ ಭಾವಿಸಿ ನಿರ್ಲಕ್ಷಿಸಿದ್ದ ವ್ಯಕ್ತಿ ಸಾವು

ಚಿಕ್ಕಮಗಳೂರು, ಮೇ.28-ಹಾವು ಕಚ್ಚಿದ್ದನ್ನ ಮುಳ್ಳು ಚುಚ್ಚಿದೆ ಅಂತಾ ಭಾವಿಸಿ ರಾತ್ರಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ಸಾವನ್ನಪ್ಪಿರುವ ಅಚ್ಚರಿಯ ಘಟನೆ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.ಮೃತ ದುರ್ದೈವಿಯನ್ನು ಗಣ್ಯನಾಯ್ಕ(44)ಗುರುತಿಸಲಾಗಿದೆ.

ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ್ದು, ಕೆಲಸದಲ್ಲಿ ಮಗ್ನವಾಗಿದ್ದ ಅವರು ಹಾವು ಕಚ್ಚಿರುವುದೇ ಗಮನಕ್ಕೆ ಬಂದಿಲ್ಲ. ರಾತ್ರಿ ಮನೆಗೆ ಬಂದ ಗಣ್ಯನಾಯ್ಕ ಮನೆಯವರಿಗೆ ಮುಳ್ಳು ಚುಚ್ಚಿದೆ ಅಂತಾಹೇಳಿ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಆದರೆ ಬೆಳಗ್ಗೆ ತುಂಬಾ ಸಮಯವಾದರು ಹಾಸಿಗೆಯಿಂದ ಏಳದೇ ಇದ್ದದ್ದನ್ನ ನೋಡಿ, ಮನೆಯವರು ಎಬ್ಬಿಸಿದಾಗ ಸಾವನ್ನಪ್ಪಿರುವುದು ಗೊತ್ತಾಗಿದೆ.

ಹಾವು ಕಚ್ಚಿದ್ರೂ ಮುಳ್ಳು ಚುಚ್ಚಿದೆ ಅಂತಾ ನಿರ್ಲಕ್ಷಿಸಿದ್ದೇ ಇದೀಗ ಗಣ್ಯ ನಾಯ್ಕ ಜೀವ ಹೋಗಲು ಕಾರಣವಾಗಿದೆ. ಒಂದು ವೇಳೆ ಆಗಲೇ ಎಚ್ಚೆತ್ತುಕೊಂಡಿದ್ರೆ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ರೆ ಸಾವು ತಪ್ಪಿಸಬಹುದಿತ್ತೆನೋ.? ಆದರೆ ಹಾವು ಕಚ್ಚಿದ್ರೂ ಗಮನ ನೀಡದೇ ಇದ್ದಿದ್ದು ಇಂದು ಅಮೂಲ್ಯ ಜೀವವನ್ನ ಕಳೆದುಕೊಳ್ಳುವಂತಾಗಿದೆ.

RELATED ARTICLES

Latest News