Tuesday, January 21, 2025
Homeರಾಜ್ಯಪಿಜಿ ವೈದ್ಯಕೀಯ ಕೋರ್ಸ್ : 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

ಪಿಜಿ ವೈದ್ಯಕೀಯ ಕೋರ್ಸ್ : 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

PG Medical Course: 2nd round seat allocation results announced

ಬೆಂಗಳೂರು,ಡಿ.20- ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆದ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

ಪಿಜಿ ವೈದ್ಯಕೀಯ ಕೋರ್ಸ್ನ ಒಟ್ಟು 2,405 ಸೀಟುಗಳು ಈ ಸುತ್ತಿನಲ್ಲಿ ಲಭ್ಯ ಇದ್ದು, ಅಷ್ಟನ್ನೂ ಹಂಚಿಕೆ ಮಾಡಲಾಗಿದೆ. ವೇಳಾ ಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಒಟ್ಟು 4,651 ಮಂದಿಯ ಮೂಲ ದಾಖಲೆಗಳನ್ನು ಸ್ವೀಕರಿಸಿದ್ದು ಅಷ್ಟೂ ಮಂದಿಯನ್ನು ಸೀಟು ಹಂಚಿಕೆಗೆ ಪರಿಗಣಿಸಲಾಗಿದೆ. ಮೂಲ ದಾಖಲೆ ಸಲ್ಲಿಸದವರನ್ನು ಸೀಟು ಹಂಚಿಕೆಗೆ ಪರಿಗಣಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

RELATED ARTICLES

Latest News