Friday, November 22, 2024
Homeರಾಷ್ಟ್ರೀಯ | Nationalಅಸಾಧ್ಯವಾದದ್ದನ್ನು ಮಾಡಿ ತೋರಿಸಿದ್ದಾರೆ ಪ್ರಧಾನಿ ಮೋದಿ : ಅಮಿತ್ ಶಾ

ಅಸಾಧ್ಯವಾದದ್ದನ್ನು ಮಾಡಿ ತೋರಿಸಿದ್ದಾರೆ ಪ್ರಧಾನಿ ಮೋದಿ : ಅಮಿತ್ ಶಾ

ಅಹಮದಾಬಾದ್, ಮಾ 15 (ಪಿಟಿಐ) : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯ ರದ್ದತಿ ಅಥವಾ ಒಂದು ಶ್ರೇಣಿಯ ಒಂದು ಪಿಂಚಣಿ (ಒಆರ್‍ಒಪಿ) ಅನುಷ್ಠಾನ ಸೇರಿದಂತೆ ಎಲ್ಲಾ ಅಸಾಧ್ಯವಾಗಿ ಕಾಣುವ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಪೂರ್ಣಗೊಳಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗಾಂಧಿನಗರದ ಲೋಕಸಭಾ ಸಂಸದರಾದ ಶಾ ಅವರು, ಗುಜರಾತ್ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಈ ಹೇಳಿಕೆಯನ್ನು ನೀಡಿದ್ದಾರೆ. ಅವರು ಅಹಮದಾಬಾದ್ ಮತ್ತು ಗಾಂಧಿನಗರ ಜಿಲ್ಲೆಗಳಲ್ಲಿ 3,012 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರಗಳಿಗಿಂತ ಭಿನ್ನವಾಗಿ, ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಕಳೆದ ಐದು ವರ್ಷಗಳಲ್ಲಿ ನಾನು ಭೂಮಿಪೂಜೆ ಮಾಡಿದ ಎಲ್ಲ ಯೋಜನೆಗಳಲ್ಲಿ 91 ಪ್ರತಿಶತ ಪೂರ್ಣಗೊಂಡಿದೆ. ಇದು ಬಿಜೆಪಿಯ ಕೆಲಸದ ಸಂಸ್ಕøತಿ ಎಂದು ದೆಹಲಿಯಲ್ಲಿಂದು ಷಾ ತಮ್ಮ ಭಾಷಣದಲ್ಲಿ ಹೇಳಿದರು.

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದಾಗ, ಬಿಜೆಪಿಯ ಚುನಾವಣಾ ಪ್ರಣಾಳಿಕೆಯು ಸುಮಾರು 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಬಾಕಿ ಉಳಿದಿರುವ ಹಲವಾರು ಅಪೂರ್ಣ ಕಾಮಗಾರಿಗಳನ್ನು ಒಳಗೊಂಡಿತ್ತು ಎಂದು ಕೇಂದ್ರ ಗೃಹ ಸಚಿವರು ಗಮನಸೆಳೆದರು.

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಿಸುವ ನಮ್ಮ ಭರವಸೆಯ ಬಗ್ಗೆ ಪ್ರತಿಪಕ್ಷಗಳು ನಮ್ಮನ್ನು ನೋಡಿ ನಗುತ್ತಿದ್ದವು. ಆದರೆ ಈಗ, ಇತ್ತೀಚೆಗೆ ದೇವರ ಪ್ರಾಣ ಪ್ರತಿಷ್ಠೆ ಮಾಡಿದ ನಂತರ ಪ್ರಧಾನಿ ಜನರಿಗೆ ದೇವಾಲಯದ ಬಾಗಿಲು ತೆರೆದಿದ್ದಾರೆ. ಒಂದು ಶ್ರೇಣಿಯ ಒಂದು ಪಿಂಚಣಿ ಇರಲಿ ಅಥವಾ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಲಿ, ನಮ್ಮ ಪ್ರಧಾನಿ ತಮ್ಮ ಅಧಿಕಾರಾವಧಿಯಲ್ಲಿ ಅಂತಹ ಅಸಾಧ್ಯವೆಂದು ತೋರುವ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಶಾ ಹೇಳಿದರು.

80 ಕೋಟಿ ನಾಗರಿಕರಿಗೆ ಉಚಿತ ಪಡಿತರ, ಬಡವರಿಗೆ 12 ಕೋಟಿ ಶೌಚಾಲಯ ನಿರ್ಮಾಣ, ನಾಲ್ಕು ಕೋಟಿ ನಾಗರಿಕರಿಗೆ ಮನೆ ಹಂಚಿಕೆ, 10 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ ಮತ್ತು 14 ಕೋಟಿ ನಾಗರಿಕರಿಗೆ ನಲ್ಲಿ ನೀರಿನ ಸಂಪರ್ಕ ನೀಡುವುದು ಮೋದಿ ಸರ್ಕಾರದ ಇತರ ಪ್ರಮುಖ ಸಾಧನೆಗಳಾಗಿವೆ ಎಂದು ಅವರು ಹೇಳಿದರು.

RELATED ARTICLES

Latest News