Friday, November 22, 2024
Homeರಾಷ್ಟ್ರೀಯ | Nationalದಾಖಲೆ ಮತದಾನ ಮಾಡಿದ ಬಾರಾಮುಲ್ಲಾ ಕ್ಷೇತ್ರದ ಮತದಾರರಿಗೆ ಮೋದಿ ಅಭಿನಂದನೆ

ದಾಖಲೆ ಮತದಾನ ಮಾಡಿದ ಬಾರಾಮುಲ್ಲಾ ಕ್ಷೇತ್ರದ ಮತದಾರರಿಗೆ ಮೋದಿ ಅಭಿನಂದನೆ

ನವದೆಹಲಿ, ಮೇ 21 (ಪಿಟಿಐ) ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಿರುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಮತ್ತು ಅಂತಹ ಸಕ್ರಿಯ ಭಾಗವಹಿಸುವಿಕೆ ಪ್ರಜಾಪ್ರಭುತ್ವದಲ್ಲಿ ಉತ್ತಮ ಪ್ರವತ್ತಿಯಾಗಿದೆ ಎಂದು ಹೇಳಿದ್ದಾರೆ.

ಬಾರಾಮುಲ್ಲಾ ಲೋಕಸಭಾ ಕ್ಷೇತ್ರವು ಒಂದು ಕಾಲದಲ್ಲಿ ಉಗ್ರಗಾಮಿಗಳ ಹಾವಳಿಯಿಂದ ತತ್ತರಿಸಿಹೋಗಿತ್ತು. ಅಂತಹ ಪ್ರದೇಶದಲ್ಲಿ ನಿನ್ನೆ ಹಿಂಸಾಚಾರ ಮುಕ್ತ ಮತದಾನ ನಡೆದು ಶೇ.59ರಷ್ಟು ಮತದಾನ ನಡೆದಿರುವುದು ದಾಖಲೆಯಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮುಗಿಬಿದ್ದಿದ್ದರಿಂದ ಬಾರಾಮುಲ್ಲಾದ ಮತದಾನ ಕೇಂದ್ರಗಳು ಜನರಿಂದ ಗಿಜಿಗುಡುತ್ತಿದ್ದವು. ಪ್ರಜಾಸತ್ತಾತಕ ಮೌಲ್ಯಗಳಿಗೆ ಮುರಿಯಲಾಗದ ಬದ್ಧತೆಗಾಗಿ ಬಾರಾಮುಲ್ಲಾದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ಅಭಿನಂದನೆಗಳು. ಇಂತಹ ಸಕ್ರಿಯ ಭಾಗವಹಿಸುವಿಕೆ ಉತ್ತಮ ಪ್ರವತ್ತಿಯಾಗಿದೆ ಎಂದು ಮೋದಿ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌ಜಿ) ಮನೋಜ್‌ ಸಿನ್ಹಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮೋದಿಯವರ ಹೇಳಿಕೆಗಳು ಬಂದವು, ಬಾರಾಮುಲ್ಲಾ ಸಂಸದೀಯ ಕ್ಷೇತ್ರದಲ್ಲಿ ಶೇ.58 ಕ್ಕಿಂತ ಹೆಚ್ಚು ಮತದಾನವಾಗಿದೆ, ಇದು ತುಂಬಾ ಉತ್ತೇಜನಕಾರಿಯಾಗಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ನಿರ್ಣಯ ಮತ್ತು ಅಚಲ ನಂಬಿಕೆಯನ್ನು ತೋರಿಸುತ್ತದೆ. ನಾನು ಅಭಿನಂದಿಸುತ್ತೇನೆ ಮತ್ತು ನಮ ಪ್ರಜಾಪ್ರಭುತ್ವದ ಮಹಾ ಕುಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಕ್ಕಾಗಿ ಬಾರಾಮುಲ್ಲಾದ ಜನರಿಗೆ ಧನ್ಯವಾದಗಳು ಎಂದಿದ್ದರು.

RELATED ARTICLES

Latest News