Friday, May 3, 2024
Homeರಾಷ್ಟ್ರೀಯಪೊಲೀಸರ ತ್ಯಾಗ ಬಲಿದಾನ ಸ್ಮರಿಸಿದ ಮೋದಿ

ಪೊಲೀಸರ ತ್ಯಾಗ ಬಲಿದಾನ ಸ್ಮರಿಸಿದ ಮೋದಿ

ನವದೆಹಲಿ, ಅ 21 (ಪಿಟಿಐ) ಪೊಲೀಸ್ ಸ್ಮರಣಾರ್ಥ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್ ಸಿಬ್ಬಂದಿಯ ಸಮರ್ಪಣಾ ಮನೋಭಾವವನ್ನು ಸ್ಮರಿಸಿಕೊಂಡಿದ್ದಾರೆ. ತಮ್ಮ ಕರ್ತವ್ಯದ ಸಾಲಿನಲ್ಲಿ ತ್ಯಾಗ ಬಲಿದಾನ ಮಾಡಿದ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಲು ಪೊಲೀಸ್ ಸ್ಮರಣಾರ್ಥ ದಿನವನ್ನು ಆಚರಿಸಲಾಗುತ್ತದೆ.

1959 ರಲ್ಲಿ ಈ ದಿನದಂದು ಲಡಾಖ್‍ನ ಹಾಟ್ ಸ್ಪ್ರಿಂಗ್ಸ್‍ನಲ್ಲಿ ಭಾರೀ ಶಸಸಜ್ಜಿತ ಚೀನೀ ಸೈನಿಕರ ವಿರುದ್ಧ ಹೋರಾಡುವ 10 ವೀರ ಪೊಲೀಸ್ ಸಿಬ್ಬಂದಿ ತಮ್ಮ ಪ್ರಾಣವನ್ನು ಅರ್ಪಿಸಿದ ನೆನಪಿಗಾಗಿ ಪೊಲೀಸ್ ಸ್ಮರಣಾರ್ಥ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

“ಶಿವಕುಮಾರ್ ಪೂಜಾರಿ ಆತ್ಮಹತ್ಯೆಗೂ ನನಗೂ ಸಂಬಂಧ ಇಲ್ಲ”

ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಮೋದಿ, ನಮ್ಮ ಪೊಲೀಸ್ ಸಿಬ್ಬಂದಿಯ ನಿರಂತರ ಸಮರ್ಪಣೆಯನ್ನು ನಾವು ಶ್ಲಾಸುತ್ತೇವೆ. ಅವರು ಉತ್ತಮ ಬೆಂಬಲದ ಆಧಾರ ಸ್ತಂಭಗಳು, ಸವಾಲುಗಳ ಮೂಲಕ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತಾರೆ ಎಂದಿದ್ದಾರೆ.

ಸೇವೆಗೆ ಅವರ ಅಚಲ ಬದ್ಧತೆಯು ವೀರತ್ವದ ನಿಜವಾದ ಮನೋಭಾವವನ್ನು ಬಿಂಬಿಸುತ್ತದೆ. ಅಂತಿಮ ತ್ಯಾಗ ಮಾಡಿದ ಎಲ್ಲಾ ಸಿಬ್ಬಂದಿಗೆ ಹೃತ್ಪೂರ್ವಕ ನಮನಗಳು ಎಂದು ಅವರು ಹೇಳಿದ್ದಾರೆ.

RELATED ARTICLES

Latest News