Sunday, October 6, 2024
Homeರಾಜಕೀಯ | Politicsಪ್ರಧಾನಿ ಮೋದಿ ಭಾರತವನ್ನು ನಂ.1 ಸ್ಥಾನಕ್ಕೆ ಕೊಂಡೊಯ್ಯಬೇಕು, ಖರ್ಗೆ ಅಭಿನಂದಿಸುವುದನ್ನು ನಾವು ನೋಡಬೇಕು : ವಿಜಯೇಂದ್ರ

ಪ್ರಧಾನಿ ಮೋದಿ ಭಾರತವನ್ನು ನಂ.1 ಸ್ಥಾನಕ್ಕೆ ಕೊಂಡೊಯ್ಯಬೇಕು, ಖರ್ಗೆ ಅಭಿನಂದಿಸುವುದನ್ನು ನಾವು ನೋಡಬೇಕು : ವಿಜಯೇಂದ್ರ

Mallikarjun Kharge

ಬೆಂಗಳೂರು,ಸೆ.30- ಪ್ರಧಾನಿ ನರೇಂದ್ರಮೋದಿ ಅವರು ಭಾರತವನ್ನು ವಿಶ್ವ ಮುಂಚೂಣಿಯಲ್ಲಿ ನಂಬರ್‌ 1 ಸ್ಥಾನಕ್ಕೆ ಕೊಂಡೊಯ್ಯಬೇಕು, ಅದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಭಿನಂದಿಸುವುದನ್ನು ನಾವು ನೋಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಸಂಬಂಧ ಎಕ್‌್ಸನಲ್ಲಿ ಟ್ವೀಟ್‌ ಮಾಡಿರುವ ಅವರು, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರು ನೂರ್ಕಾಲ ಬಾಳಬೇಕು, ಸುದೀರ್ಘ ರಾಜಕೀಯ ಜೀವನ ಸಾಗಿಸಬೇಕು ಎನ್ನುವುದು ನಮ ಪ್ರಾಮಾಣಿಕ ಅಪೇಕ್ಷೆ ಹಾಗೂ ಪ್ರಾರ್ಥನೆ ಎಂದಿದ್ದಾರೆ.

ಖರ್ಗೆ ಅವರ ಕಣ್ಣ ಮುಂದೆಯೇ ಹೆಮೆಯ ಪ್ರಧಾನಿ ನರೇಂದ್ರ ಜೀ ಅವರು ಭಾರತವನ್ನು ವಿಶ್ವ ಮುಂಚೂಣಿಯಲ್ಲಿ ನಂಬರ್‌ 1 ಸ್ಥಾನಕ್ಕೆ ಕೊಂಡೊಯ್ಯಬೇಕು, ಅದನ್ನು ಖರ್ಗೆ ಅವರು ಅಭಿನಂದಿಸುವುದನ್ನು ನೋಡಬೇಕೆಂಬುದು ನಮ ಹೆಬ್ಬಯಕೆ ಎಂದು ಹೇಳಿದ್ದಾರೆ.

ಕೆಳಗಿಳಿಸುವವರ ವ್ಯೂಹ ಬೇಧಿಸಿ ಮೂರನೆ ಬಾರಿಯೂ ಮೇಲೆದ್ದು ನಿಂತ ಪ್ರಧಾನಿ ಮೋದಿಯವರ ಈವರೆಗಿನ ನಡೆ, ಸಾಧಿಸಿರುವ ಸಾಧನೆಗಳು ಶತಕೋಟಿ ಭಾರತೀಯರ ಕನಸನ್ನು ನನಸಾಗಿಸುತ್ತಿದೆ ಈ ನಿಟ್ಟಿನಲ್ಲಿ ಭಾರತ ಜಗತ್ತಿನ ಮುಂದೆ ನಂ.1 ಸ್ಥಾನದಲ್ಲಿ ತಲೆ ಎತ್ತಿ ನಿಲ್ಲವುದರಲ್ಲೂ ನಮಗೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

RELATED ARTICLES

Latest News