Friday, January 31, 2025
Homeರಾಷ್ಟ್ರೀಯ | Nationalವಿದೇಶಿ ಹಸ್ತಕ್ಷೇಪ ಇಲ್ಲದ ಮೊದಲ ಅಧಿವೇಶನ : ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ವಿದೇಶಿ ಹಸ್ತಕ್ಷೇಪ ಇಲ್ಲದ ಮೊದಲ ಅಧಿವೇಶನ : ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

PM Modi slams opposition in his address ahead of Budget session

ನವದೆಹಲಿ,ಜ.31- ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶಿ ಹಸ್ತಕ್ಷೇಪವಿಲ್ಲದ ಸಂಸತ್ ಅಧಿವೇಶನ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಜೆಟ್ ಅಧಿವೇಶನಕ್ಕೆ ತೆರಳುವ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಬಜೆಟ್ ಅಧಿವೇಶನದ ಆರಂಭದಲ್ಲಿ, ನಾನು ಸಮೃದ್ಧಿಯ ದೇವತೆ ಮಾ ಲಕ್ಷಿಯ ಮುಂದೆ ನಮಸ್ಕರಿಸುತ್ತೇನೆ. ದೇಶದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಬಹುಶಃ 10 ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶಿ ಹಸ್ತಕ್ಷೇಪ ಕಂಡುಬಂದಿಲ್ಲ.

ಪ್ರತಿ ಬಜೆಟ್ ಅಧಿವೇಶನಕ್ಕೂ ಮುನ್ನ ನಮ ದೇಶದಲ್ಲಿ ಅನೇಕ ಜನರು ಕಿಡಿ ಹೊತ್ತಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ ಎಂದು ಕಿಡಿಕಾರಿದರು. ಅಭಿವೃದ್ಧಿ ಹೊಂದಿದ ಭಾರತ ಎಂಬ ನಮ ಗುರಿಯನ್ನು ಸಾಧಿಸುವಲ್ಲಿ ಈ ಬಜೆಟ್ ಅಧಿವೇಶನ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತದೆ ಎಂದುಹೇಳಬಲ್ಲೆ. ನಮ ದೇಶದಲ್ಲಿ ಶತಮಾನಗಳಿಂದ ಲಕ್ಷಿ ದೇವಿಯನ್ನು ಸರಿಸಲಾಗುತ್ತದೆ. ದೇಶದ ಪ್ರತಿಯೊಂದು ಬಡ ಮತ್ತು ಮಧ್ಯಮ ವರ್ಗದ ಸಮುದಾಯ ಲಕ್ಷಿದೇವಿಯ ಆಶೀರ್ವಾದವನ್ನು ಪಡೆಯಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ನಮ ಗಣರಾಜ್ಯ 75 ವರ್ಷಗಳನ್ನು ಪೂರೈಸಿದೆ. ಇದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬಹಳ ಹೆಮೆಯ ವಿಷಯ. ದೇಶದ ಜನರು ನನಗೆ ಮೂರನೇ ಬಾರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಇದು ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಆಗಿದೆ. ಈ ಬಜೆಟ್ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ನೀಡುತ್ತದೆ ಎಂದರು.

ಈ ಅಧಿವೇಶನದಲ್ಲಿ ವಿಶೇಷವಾಗಿ ಮಹಿಳಾ ಶಕ್ತಿಯ ಹೆಮೆಯನ್ನು ಪುನಃ ಸ್ಥಾಪಿಸಲು, ಜಾತಿ ಮತ್ತು ಧರ್ಮದ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಮಹಿಳೆಗೆ ಗೌರವಾನ್ವಿತ ಜೀವನ ಮತ್ತು ಸಮಾನ ಹಕ್ಕುಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆಯು ಆರ್ಥಿಕ ಚಟುವಟಿಕೆಗಳಿಗೆ ನಮ ಮಾರ್ಗಸೂಚಿಯ ಆಧಾರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.ಈ ಬಜೆಟ್ ಹೊಸ ನಂಬಿಕೆ ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ ಎಂದು ನಾನು ಪೂರ್ಣ ನಂಬಿಕೆಯಿಂದ ಹೇಳಬಲ್ಲೆ. ಏಕೆಂದರೆ 2047ಕ್ಕೆ ಭಾರತವು ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುತ್ತದೆ. ಈ ವೇಳೆಗೆ ದೇಶವು ವಿಕಸಿತವಾಗಲಿದೆ. ಅಲ್ಲದೆ ನೂರಾ ನಲವತ್ತು ಕೋಟಿ ಭಾರತೀಯರು ತಮ ಸಾಮೂಹಿಕ ಪ್ರಯತ್ನಗಳ ಮೂಲಕ ಈ ನಿರ್ಣಯವನ್ನು ಪೂರೈಸುತ್ತಾರೆ ಎಂದು ಅವರು ಹೇಳಿದರು.

ನೀವು ಗಮನಿಸಿರಬೇಕು, 2014ರಿಂದ ಇದು ಮೊದಲ ಸಂಸತ್ ಅಧಿವೇಶನವಾಗಿದ್ದು, ನಮ ವ್ಯವಹಾರಗಳಲ್ಲಿ ಯಾವುದೇ ಱವಿದೇಶಿ ಚಿಂಗಾರಿೞ (ವಿದೇಶಿ ಹಸ್ತಕ್ಷೇಪ) ಕಂಡಿಲ್ಲ, ಇದರಲ್ಲಿ ಯಾವುದೇ ವಿದೇಶಿ ಶಕ್ತಿಗಳು ಬೆಂಕಿ ಹಚ್ಚಲು ಪ್ರಯತ್ನಿಸಲಿಲ್ಲ ಎಂದು ಮೋದಿ ಹೇಳಿದರು.

ನಮದು ಯುವ ರಾಷ್ಟ್ರ, ಇಂದು, 20-25 ವರ್ಷ ವಯಸ್ಸಿನವರು ವಿಕಸಿತ ಭಾರತದ ಹೆಚ್ಚಿನ ಫಲಾನುಭವಿಗಳಾಗುತ್ತಾರೆ. 50 ವರ್ಷ ವಯಸ್ಸಾಗುವ ಹೊತ್ತಿಗೆ ಅವರು ನೀತಿ ನಿರೂಪಣೆಯ ಚುಕ್ಕಾಣಿ ಹಿಡಿಯುತ್ತಾರೆ. ವಿಕಸಿತ ಭಾರತದ ನಮ ದೃಷ್ಟಿಯನ್ನು ಈಡೇರಿಸುವ ಪ್ರಯತ್ನಗಳು ನಮ ಯುವ ಪೀಳಿಗೆಗೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದು ಮೋದಿ ತಿಳಿಸಿದರು.

ಇಂದಿನಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರು ಇಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ರಾಷ್ಟ್ರಪತಿಗಳ ಭಾಷಣದ ನಂತರ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸಂಕ್ಷಿಪ್ತವಾಗಿ ಸಮಾವೇಶಗೊಂಡಿದೆ.

ಲೋಕಸಭೆಯು ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲಿನ ಚರ್ಚೆಗೆ ಎರಡು ದಿನಗಳನ್ನು (ಫೆ.3-4) ತಾತ್ಕಾಲಿಕವಾಗಿ ನಿಗದಿಪಡಿಸಿದೆ. ಆದರೆ ರಾಜ್ಯಸಭೆಯು ಚರ್ಚೆಗೆ ಮೂರು ದಿನಗಳನ್ನು ಮೀಸಲಿಟ್ಟಿದೆ.

RELATED ARTICLES

Latest News