Monday, May 19, 2025
Homeರಾಷ್ಟ್ರೀಯ | Nationalಜೂ.18ಕ್ಕೆ ವಾರಣಾಸಿಯಲ್ಲಿ ರೈತ ಸಮಾವೇಶ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಜೂ.18ಕ್ಕೆ ವಾರಣಾಸಿಯಲ್ಲಿ ರೈತ ಸಮಾವೇಶ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ವಾರಣಾಸಿ,ಜೂ.11- ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 18 ರಂದು ವಾರಣಾಸಿಗೆ ಭೇಟಿ ನೀಡಲಿದ್ದು, ಅಲ್ಲಿ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಕೇಂದ್ರದಲ್ಲಿ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತತ್ವದ ಎನ್‌ಡಿಎ ಸರ್ಕಾರ ರಚನೆಯಾದ ನಂತರ ಪ್ರಧಾನಿ ಮೋದಿ ವಾರಣಾಸಿಗೆ ಇದು ಮೊದಲ ಭೇಟಿಯಾಗಿದೆ ಎಂದು ಬಿಜೆಪಿ ಕಾಶಿ ವಲಯ ಅಧ್ಯಕ್ಷ ದಿಲೀಪ್‌ ಪಟೇಲ್‌ ಹೇಳಿದರು.

ಕಾಶಿ ಪ್ರದೇಶ ಬಿಜೆಪಿ ಮಾಧ್ಯಮ ಪ್ರಭಾರಿ ನವರತನ್‌ ರಾಠಿ ಮಾತನಾಡಿ, ರೊಹಾನಿಯಾ ಅಥವಾ ಸೇವಾಪುರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಬಹುದಾದ ರೈತ ಸಮಾವೇಶಕ್ಕೆ ಸ್ಥಳ ಆಯ್ಕೆ ಮಾಡಲು ಕಾಶಿ ಪ್ರದೇಶ ಬಿಜೆಪಿ ಶ್ರಮಿಸುತ್ತಿದೆ.

ವಾರಣಾಸಿಯ ಬಿಜೆಪಿ ಪದಾಧಿಕಾರಿಗಳ ಸಭೆಯು ಗುಲಾಬ್‌ ಬಾಗ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಪ್ರಧಾನ ಮಂತ್ರಿಗಳ ಭೇಟಿಯ ಸಿದ್ಧತೆಗಳ ಕುರಿತು ಚರ್ಚಿಸಲು ನಡೆಯಿತು.ಕಿಸಾನ್‌ ಸಮೇಳನವನ್ನು ಉದ್ದೇಶಿಸಿ ಮಾತನಾಡಿದ ನಂತರ, ಪ್ರಧಾನಿ ಮೋದಿ ಅವರು ಬಾಬಾ ಕಾಶಿ ವಿಶ್ವನಾಥ್‌ಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪಟೇಲ್‌ ಹೇಳಿದರು.

RELATED ARTICLES

Latest News