Friday, April 4, 2025
Homeರಾಷ್ಟ್ರೀಯ | Nationalಶ್ರೀರಂಗನ ದರ್ಶನ ಪಡೆದ ಮೋದಿ

ಶ್ರೀರಂಗನ ದರ್ಶನ ಪಡೆದ ಮೋದಿ

ತಿರುಚಿರಾಪಳ್ಳಿ, ಜ. 20 (ಪಿಟಿಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಇಲ್ಲಿನ ಶ್ರೀರಂಗಂನಲ್ಲಿರುವ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇಗುಲದಲ್ಲೂ ಪೂಜೆ ಸಲ್ಲಿಸಿದ ನಂತರ ಅವರು ಶ್ರೀರಂಗಂನಲ್ಲಿ ವಿವಿಧ ವಿದ್ವಾಂಸರ ಕಂಬ ರಾಮಾಯಣದ ಪದ್ಯಗಳನ್ನು ಮೋದಿ ಆಲಿಸಿದರು.

ನಂತರ, ಅವರು ರಾಮೇಶ್ವರಂ ತಲುಪಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ ಮತ್ತು ದೇಗುಲದಲ್ಲಿ ಭಕ್ತಿಗೀತೆಗಳ ಪಠಣದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀರಂಗಂ ದೇವಸ್ಥಾನವನ್ನು ಭೂಲೋಕದ ವೈಕುಂಠ ಅಥವಾ ಭೂಮಿಯ ಮೇಲಿನ ವೈಕುಂಠಂ ಎಂದೂ ಕರೆಯಲಾಗುತ್ತದೆ. ವೈಕುಂಟಂ ವಿಷ್ಣುವಿನ ಶಾಶ್ವತ ನಿವಾಸವಾಗಿದೆ.

RELATED ARTICLES

Latest News