Friday, November 22, 2024
Homeರಾಷ್ಟ್ರೀಯ | Nationalದೀಪಾವಳಿಯಲ್ಲಿ ಸ್ಥಳೀಯ ಉತ್ಪನ್ನ ಖರೀದಿಸಿ ಸೆಲ್ಫಿ ಕಳುಹಿಸಿ : ಮೋದಿ

ದೀಪಾವಳಿಯಲ್ಲಿ ಸ್ಥಳೀಯ ಉತ್ಪನ್ನ ಖರೀದಿಸಿ ಸೆಲ್ಫಿ ಕಳುಹಿಸಿ : ಮೋದಿ

ನವದೆಹಲಿ, ನ.9- ಈ ದೀಪಾವಳಿಯಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ನಂತರ ಆ ಉತ್ಪನ್ನ ಅಥವಾ ಅದರ ತಯಾರಕರೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿ, ನಮೋ ಆ್ಯಪ್‍ನಲ್ಲಿ ಪೋಸ್ಟ್ ಮಾಡಿ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಸಂದೇಶವನ್ನು ಪ್ರಧಾನಿ ಪ್ರಕಟಿಸಿದ್ದಾರೆ. ಈ ದೀಪಾವಳಿಯಲ್ಲಿ ನಮೋ ಅಪ್ಲಿಕೇಷನ್‍ನಲ್ಲಿ #VocalForLocal ಥ್ರೆಡ್‍ಗಳೊಂದಿಗೆ ನಿಮ್ಮ ಸೆಲ್ಫಿಯನ್ನು ಪೋಸ್ಟ್ ಮಾಡಿ. ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವ ಹಬ್ಬದ ಸಂದರ್ಭದಲ್ಲಿ ಎತ್ತಿ ಹಿಡಿಯೋಣ ಎಂದು ಮೋದಿ ಹೇಳಿದ್ದಾರೆ.

ಈ ಅಭಿಯಾನ ಗಟ್ಟಿಗೊಳಿಸಲು, ಸಕಾರಾತ್ಮಕ ಮನೋಭಾವವನ್ನು ಹರಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ ಎಂದೂ ಕರೆ ನೀಡಿದ್ದಾರೆ. ಸ್ಥಳೀಯ ಪ್ರತಿಭೆಗಳನ್ನು ಬೆಂಬಲಿಸಲು ಡಿಜಿಟಲ್ ಮಾಧ್ಯಮದ ಶಕ್ತಿಯನ್ನು ಬಳಸೋಣ. ನಮ್ಮ ಜತೆಗಿನ ಭಾರತೀಯರ ಸೃಜನಶೀಲತೆಯನ್ನು ಪ್ರೋತ್ಸಾಹಿಸೋಣ ಮತ್ತು ನಮ್ಮ ಸಂಪ್ರದಾಯಗಳನ್ನು ಪ್ರವರ್ಧಮಾನಕ್ಕೆ ತರೋಣ ಎಂದು ಅವರು ಸಲಹೆ ನೀಡಿದ್ದಾರೆ.

ಅಕ್ಟೋಬರ್‍ನ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಸ್ವದೇಶಿ ಉತ್ಪನ್ನಗಳನ್ನು ಮೋದಿ ಬೆಂಬಲಿಸಿದ್ದರು. ಸ್ಥಳೀಯರಿಗೆ ಧ್ವನಿಯಾಗಲು ಅವರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ ವೋಕಲ್ ಫಾರ್ ಲೋಕಲï ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದ್ದರು.

ನೀವು ಪ್ರವಾಸ ಅಥವಾ ತೀರ್ಥಯಾತ್ರೆಗೆ ಹೋದಲ್ಲಾ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಎಂದು ನಾನು ನನ್ನ ವಿನಂತಿಯನ್ನು ಪುನರುಚ್ಚರಿಸಲು ಬಯಸುತ್ತೇನೆ ಎಂದಿದ್ದರು.
ವಹಿವಾಟಿನ ಸಮಯದಲ್ಲಿ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸುವಂತೆ ನಾಗರಿಕರನ್ನು ಪ್ರಧಾನಿ ಒತ್ತಾಯಿಸಿದ್ದಾರೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಕುಶಲಕರ್ಮಿಗಳಿಗೆ ಮುಂಬರುವ ದೀಪಾವಳಿ ಹಬ್ಬದ ಹೊಳಪು ಹರಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News