Monday, January 13, 2025
Homeರಾಷ್ಟ್ರೀಯ | Nationalಹಿಮಕರಡಿಯ ಮಾತೃ ಹೃದಯಕ್ಕೆ ಫಿದಾ ಆದ ಜನ

ಹಿಮಕರಡಿಯ ಮಾತೃ ಹೃದಯಕ್ಕೆ ಫಿದಾ ಆದ ಜನ

ನವದೆಹಲಿ,ಮಾ.3- ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಮನುಷ್ಯರಿರಲಿ ಪ್ರಾಣಿಗಳೇ ಆಗಿರಲಿ ತಾಯಿ ಪ್ರೀತಿ ಮಾತ್ರ ಕಡಿಮೆಯಾಗಲ್ಲ ಎನ್ನುವುದಕ್ಕೆ ಹಿಮಕರಡಿಯೊಂದು ತನ್ನ ಮರಿಯನ್ನು ನೀರಿನಿಂದ ರಕ್ಷಿಸಲು ಹರಸಾಹಸ ಪಡುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ನದಿಯಲ್ಲಿ ಮುಳುಗಿ ಹೋಗುತ್ತಿದ್ದ ತನ್ನ ಮರಿಯನ್ನು ರಕ್ಷಿಸಲು ಹಿಮ ಕರಡಿ ನೀರಿನಲ್ಲಿ ಮುಳುಗಿ ತನ್ನ ಮರಿಯನ್ನು ಹರಸಾಹಸಪಟ್ಟು ದಡ ಸೇರಿಸಿರುವ ಹಿಮ ಕರಡಿಯ ಸಾಹಸಮಯ ದೃಶ್ಯವನ್ನು ಗೇಬ್ರಿಯೆಲ್ ಕಾರ್ನೊ ಎನ್ನುವವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

13 ಸೆಕೆಂಡುಗಳ ಈ ಚಿಕ್ಕ ಕ್ಲಿಪ್ ಮೈಕ್ರೋಬ್ಲಾಗಿಂಗ್ ಪ್ಲಾಟ್‍ಫಾರ್ಮ್‍ನಲ್ಲಿ 1.15 ಲಕ್ಷ ವೀಕ್ಷಣೆ ಪಡೆದಿದ್ದು, ಸೋಷಿಯಲ್ ಮಿಡಿಯಾದಲ್ಲಿ ಹಲವಾರು ಮಂದಿ ತಾಯಿ ಹಿಮಕರಡಿಯ ಸಾಹಸಕ್ಕೆ ಬೆರಗಾಗಿದ್ದಾರೆ. ಅದು ಪ್ರಾಣಿಯಾಗಿರಲಿ ಅಥವಾ ಮನುಷ್ಯನಾಗಿರಲಿ, ತಾಯಿಯ ಪ್ರೀತಿ ಯಾವಾಗಲೂ ಬೇಷರತ್ತಾಗಿರುತ್ತದೆ ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

ತಾಯಂದಿರು ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ಮಾಡುತ್ತಾರೆ ಎಂದು ಎರಡನೇ ವ್ಯಕ್ತಿ ಹೇಳಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಮಾಮ್ ಆನ್ ಡ್ಯೂಟಿ! ಎಂದು ಬರೆದುಕೊಂಡಿದ್ದಾರೆ. ಅನೇಕ ಬಳಕೆದಾರರು ಕಾಮೆಂಟ್‍ಗಳ ವಿಭಾಗದಲ್ಲಿ ಹೃದಯದ ಎಮೋಜಿಗಳನ್ನು ಸಹ ಹರಿಬಿಟ್ಟಿದ್ದಾರೆ.

RELATED ARTICLES

Latest News