Friday, October 18, 2024
Homeಕ್ರೀಡಾ ಸುದ್ದಿ | Sportsಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‍ಷಿಪ್‍ : ರಾಜಸ್ಥಾನ್ ಮಹಿಳಾ ತಂಡಕ್ಕೆ ಚಿನ್ನ

ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‍ಷಿಪ್‍ : ರಾಜಸ್ಥಾನ್ ಮಹಿಳಾ ತಂಡಕ್ಕೆ ಚಿನ್ನ

ಬೆಂಗಳೂರು, ಫೆ.3- ಕೋರಮಂಗಲದ ಕೆಎಸ್‍ಆರ್‍ಪಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್‍ಷಿಪ್‍ನಲ್ಲಿ ರಿಕರ್ವ್ ತಂಡದ ಪುರುಷ ವಿಭಾಗದಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಕ್ರೀಡಾಪಟುಗಳಾದ ತುಷಾರ್ ಪ್ರಭಾಕರ್ ಶೆಲ್ಕೆ, ನೀರಜ್ ಚೌಹಾಣ್, ಮುಖೇಶ್ ಬೋರೊ, ಜಿತೇಂದರ್ ಸಿಂಗ್ 6 ಪಾಯಿಂಟ್ ಗಳಿಸಿದ್ದಾರೆ.

ಸಿಆರ್‍ಪಿಎಫ್ ತಂಡದ ಬಸಂತ್ ಕುಮಾರ್, ಕಮಲ್ ಸಾಗರ್, ಹೈದಬ್ ತಿರಿಯಾ, ವಿನಾಯಕ್ ವರ್ಮ ಅವರು 2 ಪಾಯಿಂಟ್‍ಗಳನ್ನು ಗಳಿಸಿರುತ್ತಾರೆ. ಈ ಹಂತದಲ್ಲಿ ಐಟಿ ಬಿಪಿ ತಂಡವು ಸಿಆರ್‍ಪಿಎಫ್ ತಂಡವನ್ನು ನಾಲ್ಕು ಸೆಟ್ ಪಾಯಿಂಟ್‍ಗಳನ್ನು ಅಂತರದಲ್ಲಿ ಮಣಿಸಿ, ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.

ಅದೇ ರೀತಿ ರಿಕರ್ವ್ ತಂಡದ ಮಹಿಳಾ ವಿಭಾಗದಲ್ಲಿ ರಾಜಸ್ಥಾನ್ ರಾಜ್ಯದ ಪರವಾಗಿ ಅಮನ್ ದೀಪ್ ಕೌರ್, ಮೀನಾಕುಮಾರಿ ಚತುರ್ವೇದಿ, ನೀರಜ್ ಶರ್ಮ ಅವರು 5 ಸೆಟ್ ಪಾಯಿಂಟ್‍ಗಳನ್ನು ಪಡೆದಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಪರವಾಗಿ ಸುಮನ್ ಚೌದರಿ ಜೀನತ್ ಆರ್ಯ, ಅನಿತ ಪೌದವಾಲ್, ಶಿಲ್ಪಿ ರವರು ಒಂದು ಸೆಟ್ ಪಾಯಿಂಟ್‍ಗಳನ್ನು ಪಡೆದಿರುತ್ತಾರೆ. ಈ ಹಂತದಲ್ಲಿ ರಾಜಸ್ಥಾನ್ ತಂಡವು 4 ಸೆಟ್ ಪಾಯಿಂಟ್‍ಗಳ ಅಂತರದಲ್ಲಿ ಮಣಿಸಿ ಚಿನ್ನದ ಪದಕವನ್ನು ಗೆದ್ದಿರುತ್ತಾರೆ.

ಪೂನಂ ಪಾಂಡೆ ಸತ್ತಿಲ್ಲ, ಸಾವಿನ ಸುದ್ದಿಗೆ ಹೊಸ ಟ್ವಿಸ್ಟ್..!

ರಜತ್ ಚೌಹಾಣ್ ಅವರು ಮತ್ತೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ನಿನ್ನೆ ನಡೆದ ಇಂಡಿಯನ್ ವಿಭಾಗದ ವೈಯಕ್ತಿಕ ಒಲಂಪಿಕ್ ಪಂದ್ಯಾವಳಿಯ ಪುರುಷ ವಿಭಾಗದಲ್ಲಿ ಹೆರೋಬಾ ಸಿಂಗ್-ಚಿನ್ನ, ವಿಕಾಸ್ ಹರಿದಾಸ್ ಮೋರೆ- ಬೆಳ್ಳಿ ಮತ್ತು ಗೌರವ್ ಸಂಜಯ್ ರಾವ್ ಚಂಡ್ನೆ- ಕಂಚು ಗೆದ್ದರೇ, ಇದೇ ವಿಭಾಗದ ಮಹಿಳಾ ಪಂದ್ಯಾವಳಿಯಲ್ಲಿ ಬೇಬಿ ದೇವಿ – ಚಿನ್ನ ಮತ್ತು ಪಲ್ಲವಿ ಬೋರೊ- ಕಂಚಿನ ಪದಕ ಗೆದ್ದಿರುತ್ತಾರೆ. ಪದಕ ವಿಜೇತರಿಗೆ ಕರ್ನಾಟಕ ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರು ಪದಕಗಳನ್ನು ಪ್ರದಾನ ಮಾಡಿ ಎಲ್ಲಾ ಕ್ರೀಡಾ ಪಟುಗಳಿಗೆ ಶುಭ ಕೋರಿದ್ದಾರೆ.

RELATED ARTICLES

Latest News