Tuesday, February 27, 2024
Homeರಾಜ್ಯಚರ್ಚೆಗೆ ಗ್ರಾಸವಾದ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿಕೆ

ಚರ್ಚೆಗೆ ಗ್ರಾಸವಾದ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿಕೆ

ಬೆಂಗಳೂರು,ಫೆ.3- ಮುಜರಾಯಿ ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡದೆ ಅಸ್ಪೃಶ್ಯತೆ ಹಾಗೂ ತಾರತಮ್ಯ ಮಾಡಲಾಯಿತು ಎಂದು ಚಿತ್ರದುರ್ಗದ ಕನಕಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶ್ರೀಗಳು ನಿನ್ನೆ ನೀಡಿದ ಹೇಳಿಕೆಗೆ ದೇವಸ್ಥಾನದ ಅರ್ಚಕರು ಸ್ಪಷ್ಟನೆ ನೀಡಿ ನಮ್ಮಲ್ಲಿ ಆ ರೀತಿ ಯಾವುದೇ ತಾರತಮ್ಯವಿಲ್ಲ. ಪ್ರತಿ ವರ್ಷ ವೈಕುಂಠ ಏಕಾದಶಿ ದರ್ಶನಕ್ಕೆ ನಾವೇ ಶ್ರೀಗಳನ್ನು ಆಹ್ವಾನ ಮಾಡುತ್ತೇವೆ. ದೇವಸ್ಥಾನದಿಂದ ಸಕಲ ಗೌರವ, ಸನ್ಮಾನಗಳನ್ನು ಮಾಡಿ ವಿನಯಪೂರಕವಾಗಿ ಕಳುಹಿಸಿಕೊಡುತ್ತೇವೆ. ಆದರೂ ಸ್ವಾಮೀಜಿ ಯಾವ ಕಾರಣಕ್ಕೆ ವಿವಾದಿತ ಹೇಳಿಕೆ ನೀಡಿದರು ಎಂದಿದ್ದಾರೆ.

ಅದರ ನಂತರ ಮತ್ತೆ ಇಂದು ಬೆಳಿಗ್ಗೆ ಈಶ್ವರಾನಂದ ಪುರಿ ಸ್ವಾಮೀಜಿಗಳು ತಮ್ಮ ಹೇಳಿಕೆಯನ್ನು ಪುನರ್ ಉಚ್ಛರಿಸಿದ್ದಾರೆ. ದೇವಸ್ಥಾನದಲ್ಲಿ ಅಸ್ಪೃಶ್ಯತೆ, ತಾರತಮ್ಯ ನಡೆದಿದ್ದು ನಿಜ. ಕೆಲ ವರ್ಷಗಳ ಹಿಂದೆ ಕುರುಬ ಸಮುದಾಯದ ಸ್ವಾಮೀಜಿಯೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿ ಗರ್ಭಗುಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನೇ ಸ್ವಚ್ಚಗೊಳಿಸಲಾಗಿತ್ತು ಎಂಬ ಮಾಹಿತಿ ತಿಳಿದು ತಮ್ಮ ಮನಸಿಗೆ ನೋವಾಯಿತು. ತಮಗೂ ಈ ಕಹಿ ಅನುಭವ ಆಗಿದೆ ಎಂದಿದ್ದಾರೆ.

ಮುಂದಿನ ವಾರದಿಂದ 29 ರೂ.ಗೆ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ

ಅರ್ಚಕರ ಕುಟುಂಬದ ಮಹಿಳೆಯರನ್ನು ಗರ್ಭಗುಡಿಗೆ ಬಿಡಲಾಗಿದ್ದು, ಮಠಾೀಧಿಶರಾದ ನಮ್ಮನ್ನು ಗರ್ಭಗುಡಿಯ ಹೊರಗಿನ ಪ್ರಾಗಂಣ ದಲ್ಲಿ ನಿಲ್ಲಿಸಲಾಗಿತ್ತು. 21 ನೇ ಶತಮಾನದಲ್ಲಿ ಆಧುನಿಕ, ವೈಜ್ಞಾನಿಕ ಯುಗದಲ್ಲಿ ಇರುವ ನಮ್ಮ ನಡುವೆ ಇಂತಹ ಆಚರಣೆಗಳು ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತವೆ ಎಂದಿದ್ದಾರೆ. ಇದು ನನ್ನೊಬ್ಬನ ಅನುಭವ ಮಾತ್ರವಲ್ಲ. ಬಹಳಷ್ಟು ಮಂದಿ ಮಠಾೀಧಿಶರಿಗೂ ಆಗಿದೆ. ಆದರೆ ಯಾರೂ ಬಾಯಿಬಿಟ್ಟು ಮಾತನಾಡುತ್ತಿಲ್ಲ. ಮಾಧ್ಯಮಗಳ ಮುಂದೆ ವಿಚಾರ ಪ್ರಸ್ತಾಪ ಮಾಡುವುದಿಲ್ಲ. ನಾನು ಒಂದು ಹೆಜ್ಜೆ ಮುಂದೆ ಹೋಗಿ ಹೇಳಿದ್ದೇನೆ ಎಂದಿದ್ದಾರೆ.

ಮುಜರಾಯಿ ಅಷ್ಟೇ ಅಲ್ಲ ಯಾವುದೇ ದೇವಸ್ಥಾನಗಳಲ್ಲಿ ಜಾತಿ, ಅಸ್ಪೃಶ್ಯತೆ, ಅಸಮಾನತೆ ಆಚರಣೆಯಾಗಬಾರದು. ಬಸವಣ್ಣ, ಕನಕದಾಸರ ಆಶಯದಂತೆ ಸಹಬಾಳ್ವೆಯ ಪರಿಪಾಠ ಇರಬೇಕು ಎಂದು ಹೇಳಿದರು. ಶ್ರೀಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿವೆ. ಎಲ್ಲಿಯೂ ಅಸ್ಪೃಶ್ಯತೆ ಆಚರಣೆಯಾಗುತ್ತಿಲ್ಲ. ಇತ್ತೀಚೆಗೆ ಈ ಪ್ರಕರಣ ವರದಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲಾಖೆಯ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ದೆಹಲಿ ಸಿಸಿಬಿ ಪೊಲೀಸರಿಂದ ಕೇಜ್ರಿಗೆ ನೋಟಿಸ್

ಜೊತೆಗೆ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ಆಚರಣೆ ಮಾಡಬಾರದು ಎಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ನಾಮಫಲಕಗಳನ್ನು ಮತ್ತಷ್ಟು ಗೋಚರ ಸ್ಥಿತಿಯಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು. ಧಾರ್ಮಿಕ ಕೇಂದ್ರಗಳಲ್ಲಿ ತಾರತಮ್ಯವನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ.

RELATED ARTICLES

Latest News