Thursday, May 2, 2024
Homeರಾಷ್ಟ್ರೀಯದೆಹಲಿ ಸಿಸಿಬಿ ಪೊಲೀಸರಿಂದ ಕೇಜ್ರಿಗೆ ನೋಟಿಸ್

ದೆಹಲಿ ಸಿಸಿಬಿ ಪೊಲೀಸರಿಂದ ಕೇಜ್ರಿಗೆ ನೋಟಿಸ್

ನವದೆಹಲಿ, ಫೆ.3- ನಮ್ಮ ಸರ್ಕಾರವನ್ನು ಅಸ್ಥಿರಗೊಳಿ ಸಲು ಸಂಚು ರೂಪಿಸಿರುವ ಬಿಜೆಪಿ ಆಮ್ ಆದ್ಮಿ ಪಕ್ಷದ ಏಳು ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಇವರಿಗೆ ತಲಾ 25 ಕೋಟಿ ರೂ. ಆಫರ್ ನೀಡಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಅಪರಾಧ ವಿಭಾಗದ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಚಿವೆ ಅತಿಶಿ, ಬಿಜೆಪಿ ತನ್ನ ಏಳು ಶಾಸಕರಿಗೆ ಪಕ್ಷ ತೊರೆಯಲು ತಲಾ 25 ಕೋಟಿ ರೂ.ಗಳನ್ನು ನೀಡುವುದಾಗಿ ಆಫರ್ ಮಾಡಿದ್ದು, ಕೇಜ್ರಿವಾಲ್ ಸರ್ಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದರು. ಪಕ್ಷದ ಶಾಸಕರೊಬ್ಬರನ್ನು ಸಂಪರ್ಕಿಸಿದ ವ್ಯಕ್ತಿಯ ವಾಯ್ಸ ರೆಕಾರ್ಡ್ ಲಭ್ಯವಿದ್ದು, ಅದನ್ನು ನಂತರ ತೋರಿಸಲಾಗುವುದು ಎಂದು ಆರೋಪಿಸಿದ್ದರು.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಕೇಜ್ರಿವಾಲ, ತಮ್ಮ ಪಕ್ಷದ ಏಳು ಶಾಸಕರನ್ನು ಅವರು ಅಥವಾ ಬಿಜೆಪಿಯವರು ಸಂಪರ್ಕಿಸಿದ್ದಾರೆ. ಶೀಘ್ರದಲ್ಲೇ ನನ್ನನ್ನು ಬಂಧಿಸಬಹುದು ಎಂದಿದ್ದಾರೆ. ದೆಹಲಿ ಸರ್ಕಾರ ಪತನಗೊಂಡ ನಂತರ ಚುನಾವಣೆಯಲ್ಲಿ ಸ್ರ್ಪಧಿಸಲು ಶಾಸಕರಿಗೆ ತಲಾ 25 ಕೋಟಿ ಮತ್ತು ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಎಎಪಿ ನಾಯಕ ಆರೋಪಿಸಿದ್ದಾರೆ. ಎಲ್ಲಾ ಏಳು ಎಎಪಿ ಶಾಸಕರು ಪಕ್ಷ ತೊರೆಯಲು ನಿರಾಕರಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.

ಕೇಂದ್ರದ ವಿರುದ್ಧ ರಾತ್ರಿಯಿಡೀ ಪ್ರತಿಭಟನೆ ನಡೆಸಿದ ದೀದಿ

ಇಂದು ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ ದೆಹಲಿ ಪೆÇಲೀಸರ ಕ್ರೈಂ ಬ್ರ್ಯಾಂಚ್ ತಂಡ ನೋಟಿಸ್ ಜಾರಿ ಮಾಡಿದೆ. ಕೇಜ್ರಿವಾಲ್ ಆರೋಪದ ವಿರುದ್ಧ ದೆಹಲಿ ಬಿಜೆಪಿ ನಿಯೋಗವು ಅಪರಾಧ ವಿಭಾಗಕ್ಕೆ ದೂರು ನೀಡಿತ್ತು. ಅಲ್ಲದೇ ವಿಶೇಷ ತನಿಖಾ ತಂಡದಿಂದ (ಎಸ್‍ಐಟಿ) ತನಿಖೆ ನಡೆಸುವಂತೆ ಬಿಜೆಪಿ ನಿಯೋಗ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕ್ರೈಂ ಬ್ರ್ಯಾಂಚ್ ತಂಡವು ಇಂದು ಕೇಜ್ರಿವಾಲ್ ಅವರ ನಿವಾದಕ್ಕೆ ಭೇಟಿ ನೀಡಿ ನೋಟಿಸ್ ನೀಡಿದೆ.

ಕೇಜ್ರಿವಾಲ್ ಆರೋಪ ಏನು: ರಾಷ್ಟ್ರ ರಾಜಧಾನಿಯಲ್ಲಿ ಆಪ್ ಸರ್ಕಾರವನ್ನು ಕೆಡವಲು ಸಂಚು ರೂಪಿಸಿರುವ ಬಿಜೆಪಿ ಆಮ್ ಆದ್ಮಿ ಪಕ್ಷದ ಏಳು ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. 7 ಶಾಸಕರಿಗೆ ಬಿಜೆಪಿ ತಲಾ 25 ಕೋಟಿ ರೂ. ಆಫರ್ ನೀಡಿದೆ. ಬಿಜೆಪಿ ಆಪ್ ಶಾಸಕರೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಆಪ್ ಸರ್ಕಾರವನ್ನು ಸಂಪೂರ್ಣವಾಗಿ ಮುಗಿಸಲು ಸಂಚು ಆದ್ದರಿಂದ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎನ್ನುವುದು ಆಪ್ ಆರೋಪವಾಗಿದೆ.

ದೆಹಲಿಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಬಿಜೆಪಿ ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಉರುಳಿಸಲು ಕೊಳಕು ಪಿತೂರಿ ನಡೆಸುತ್ತಿದೆ ಎಂದು ದೆಹಲಿಯ ಆಡಳಿತ ಪಕ್ಷ ಆರೋಪಿಸಿದೆ. ಕೇಜ್ರಿವಾಲ್ ಅವರು ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಕೇಂದ್ರ ಸಂಸ್ಥೆಯಾದ ಜಾರಿ ನಿರ್ದೇಶನಾಲಯದ ಬಿಸಿಯನ್ನು ಎದುರಿಸುತ್ತಿದ್ದಾರೆ.

ಆದಾಗ್ಯೂ, ದೆಹಲಿ ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಆಫರ್‍ನೊಂದಿಗೆ ತಮ್ಮನ್ನು ಸಂಪರ್ಕಿಸಿದ ಶಾಸಕರು ಮತ್ತು ಜನರನ್ನು ಹೆಸರಿಸುವಂತೆ ಎಎಪಿಗೆ ಸವಾಲು ಹಾಕಿರುವ ಬಿಜೆಪಿ ಕಾರ್ಯದರ್ಶಿ ಹರೀಶ್ ಖುರಾನಾ ಅವರು ಅತಿಶಿ ಅವರನ್ನು ಸಂಪರ್ಕಿಸಿದ ಶಾಸಕರು ಮತ್ತು ಆಫರ್‍ನೊಂದಿಗೆ ತಮ್ಮನ್ನು ತಲುಪಿದವರ ಹೆಸರನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES

Latest News