Sunday, April 28, 2024
Homeರಾಜ್ಯಮೋದಿ ದೇಶದ ಜನರನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ: ರಾಮಲಿಂಗಾರೆಡ್ಡಿ

ಮೋದಿ ದೇಶದ ಜನರನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ: ರಾಮಲಿಂಗಾರೆಡ್ಡಿ

ಬೆಂಗಳೂರು,ಫೆ.3- ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಲ ಮಾಡಿ ತುಪ್ಪ ತಿನ್ನು ಎನ್ನುವಂತೆ ದೇಶದ ಜನರನ್ನು ಸಾಲದ ಸುಳಿವಿಗೆ ಸಿಲುಕಿಸುವುದನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1947ರಿಂದ 2017 ರವರೆಗೆ 67 ವರ್ಷಗಳ ಕಾಲ ದೇಶದ ಒಟ್ಟು ಸಾಲ 52 ಲಕ್ಷ ಕೋಟಿ ರೂ. ಮಾತ್ರ. ಅಂದಿನಿಂದ ಈವರೆಗೆ ಕೇವಲ ಹತ್ತು ವರ್ಷದಲ್ಲಿ ನರೇಂದ್ರಮೋದಿಯವರು ಸಾಲದ ಪ್ರಮಾಣವನ್ನು 150 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. 11 ಲಕ್ಷ ಕೋಟಿ ರೂ. ಬಡ್ಡಿಯನ್ನೇ ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು. ಪ್ರತಿಯೊಂದಕ್ಕೂ ಮೋದಿಯವರನ್ನು ವೈಭವೀಕರಿಸಿದವರಿಗೆ ಸಾಲ ಮಾಡಿ ತುಪ್ಪ ತಿನ್ನುತ್ತಿರುವುದು ಕಂಡುಬಂದಿಲ್ಲ. ದೇಶದ ಜನರನ್ನು ಸಾಲದ ಸುಳಿಗೆ ಸಿಲುಕಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಾಕ್ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದ ಹಿಂದೂಗಳು

ದೇವಸ್ಥಾನಗಳಲ್ಲಿ ತಾರತಮ್ಯ ಸಲ್ಲ:
ಚಿತ್ರದುರ್ಗದ ಬಾಗೂರಿನ ದೇವಸ್ಥಾನದಲ್ಲಿ ಕನಕಪೀಠದ ಈಶ್ವರಾನಂದ ಪುರಿ ಸ್ವಾಮೀಜಿಯವರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ಕೊಡದೆ ತಾರತಮ್ಯ ಮಾಡಿರುವ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಕೆಲವು ದೇವಸ್ಥಾನಗಳಲ್ಲಿ ಭಕ್ತರನ್ನು ಗರ್ಭಗುಡಿಯೊಳಗೂ ಬಿಟ್ಟು ದೇವರ ಮೂರ್ತಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ತಾವು ಇತ್ತೀಚೆಗೆ ಶ್ರೀಶೈಲಕ್ಕೆ ಭೇಟಿ ನೀಡಿದಾಗ ಗರ್ಭಗುಡಿಗೆ ಕರೆದುಕೊಂಡು ಹೋಗಿದ್ದರು. ದೇವರ ಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಬಹಳಷ್ಟು ದೇವಸ್ಥಾನಗಳಲ್ಲಿ ಗರ್ಭಗುಡಿಯೊಳಗೆ ಬಿಡುವುದಿಲ್ಲ ಎಂದು ನಮ್ಮ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಬಾಗೂರು ದೇವಸ್ಥಾನದ ಪಟ್ಟಣದಲ್ಲಿ ಸ್ವಾಮೀಜಿ ಹೋದ ಬಳಿಕ ದೇವಾಲಯ ಸ್ವಚ್ಛಗೊಳಿಸಿರುವುದು ಸರಿಯಲ್ಲ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ದೇವಸ್ಥಾನಗಳಿಗಾಗಿ ಅನುದಾನ :
ರಾಜ್ಯದಲ್ಲಿ ರಾಮಮಂದಿರ, ಹನುಮಮಂದಿರ, ದುರ್ಗಾ ದೇವಸ್ಥಾನಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಬಜೆಟ್ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಬಿಜೆಪಿಯ ರಾಜಕಾರಣಕ್ಕೆ ತಿರುಗೇಟು ಎಂದು ಭಾವಿಸುವ ಅಗತ್ಯವಿಲ್ಲ. ಆಯಾ ಇಲಾಖೆಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ಪ್ರತಿ ವರ್ಷವೂ ನಿಭಾಯಿಸುತ್ತವೆ.

ತಾಜ್‍ಮಹಲ್‍ನಲ್ಲಿ ಉರುಸ್ ಆಚರಣೆ ಪ್ರಶ್ನಿಸಿದ ಹಿಂದೂ ಮಹಾಸಭಾ

ನಾವು ಅದೇ ರೀತಿಯ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ತಾವು ಯಾವ್ಯಾವ ದೇವಸ್ಥಾನಗಳಿಗೆ ಎಷ್ಟು ಅನುದಾನ ನೀಡುತ್ತೇವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದರು. ರಾಮಮಂದಿರ ಹಾಗೂ ರಾಮನ ಭಕ್ತಿ ಬಿಜೆಪಿಗೆ ಹೊಸದು ಎನ್ನಿಸುತ್ತದೆ. ಆದರೆ ದೇಶದ ಜನರಿಗೆ ಇದು ಹಳೆಯದು. ಅದರಲ್ಲೂ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿದ್ದ ರಾಜೀವ್‍ಗಾಂಧಿಯವರು 1980 ರಲ್ಲಿ ರಾಮಮಂದಿರದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಟ್ಟರು.

ಆದರೆ ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಂಡು ಮತ ಪಡೆಯಲು ಹುನ್ನಾರ ನಡೆಸಿದರು. ಆದರೆ ನಾವು ಧರ್ಮವನ್ನು ರಾಜಕೀಯಕ್ಕೆ ಬಳಸುವುದಿಲ್ಲ. ರಾಮನವಮಿಯಲ್ಲಿ ಮಜ್ಜಿಗೆ, ಪಾನಕ ಹಂಚಿ ನಮ್ಮ ಆಚರಣೆಗಳನ್ನು ನಾವು ಮಾಡಿಕೊಳ್ಳುತ್ತೇವೆ ಎಂದರು.

RELATED ARTICLES

Latest News